ತುಂಟರಗಾಳಿ
ಸಿನಿಗನ್ನಡ
ಇದೊಂದು ಹಳೇ ಕತೆ, ಸೌತ್ ಇಂಡಿಯನ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಬರುತ್ತಾರೆ ಅಂತ ಬಹಳಷ್ಟು ಬಾರಿ ಸುದ್ದಿ ಆಗಿತ್ತು. ಹಲವು ಜನ ಕನ್ನಡ ಚಿತ್ರರಂಗದ ಮಂದಿ, ಅಯ್ಯೋ, ಅವರು ಕನ್ನಡದವರಾದ್ರೇನು, ಈಗ ಪರಭಾಷೆಯಲ್ಲಿ ದೊಡ್ಡ ಸ್ಟಾರ್ ಆಗಿದ್ದಾರೆ. ಈಗೆ ಅವರಿಗೆ ಕನ್ನಡ ಯಾಕೆ ಬೇಕು ಹೇಳಿ ಅಂತ ಕೊಂಕು ಮಾತನ್ನೂ ಆಡಿದರು. ಆದರೆ ಬಹಳ ಹಿಂದೆ ಒಂದು ಚಿತ್ರಕ್ಕೆ ಅವರು ನಾಯಕಿಯಾಗಿ ಪಕ್ಕಾ ಆಗುವುದು ತಪ್ಪಿ ಹೋದ ಕಥೆ ಇದು.
ಆದರೆ ಅದಕ್ಕೆ ಕಾರಣ ಮಾತ್ರ ಇಂಟರೆಸ್ಟಿಂಗ್ ಮತ್ತು ಅಭಿನಂದನಾರ್ಹವಾದದ್ದು. ಕನ್ನಡದ ದೊಡ್ಡ ನಟನೊಬ್ಬನ ಅಭಿನಯದ ಚಿತ್ರಕ್ಕೆ ಅನುಷ್ಕಾ ಅವರನ್ನು ನಾಯಕಿಯಾಗಿಸಬೇಕು ಅನ್ನೋದು ಪ್ಲ್ಯಾನ್ ಆಗಿತ್ತು. ಚಿತ್ರದ ನಿರ್ದೇಶಕ ಅನುಷ್ಕಾ ಅವರಿಗೆ ಕ್ಲೋಸ್ ಆಗಿರುವ ಒಬ್ಬ ವ್ಯಕ್ತಿ ಬಳಿ ದಯ ವಿಟ್ಟು ಹೇಗಾದರೂ ಮಾಡಿ ಈ ಸಿನಿಮಾದಲ್ಲಿ ಅಭಿನಯಿಸೋಕೆ ಆಕೆಯನ್ನು ಒಪ್ಸು’ ಅಂತ ದುಂಬಾಲು ಬಿದ್ದರಂತೆ.
ಆ ವ್ಯಕ್ತಿ ಅನುಷ್ಕಾಗೆ ಇಷ್ಟ ಇದ್ರೆ ಮಾಡ್ಲಿ ಅಂದುಕೊಂಡು ಆಕೆಯನ್ನು ಕೇಳಿದರಂತೆ. ಆದರೆ ಆಫರ್ ಹೇಳಿದ ಮರುಕ್ಷಣವೇ ಆಚಿತ್ರದಲ್ಲಿ ನಾನು ನಟಿಸೋದಿಲ್ಲ ಅಂದ್ರಂತೆ ಅನುಷ್ಕಾ. ಈ ಮಾತು ಕೇಳಿ, ಅವರಿಗೆ ಸಿನಿಮಾ ಕಥೆ ಇಷ್ಟ ಆಗಲಿಲ್ಲವಾ? ಅಥವಾ ಕನ್ನಡ ಸಿನಿಮಾ ಮಾಡೋಕೆ ಇಷ್ಟ ಇರಲಿಲ್ಲವಾ? ಅಂತೆಲ್ಲ ಪ್ರಶ್ನೆಗಳು ಏಳಬಹುದು. ಆದರೆ ಯಾಕೆ? ಅಂತ ಕೇಳಿದಾಗ ಅನುಷ್ಕಾ ಖಡಕ್ ಆಗಿ ಹೇಳಿದ ಮಾತಿದು ‘ವೈಯಕ್ತಿಕ ಜೀವನದಲ್ಲಿ ಹೆಂಡತಿಯ ಜೊತೆ ಅಷ್ಟು ಕೆಟ್ಟದಾಗಿ ನಡೆದುಕೊಳ್ಳೋ ವ್ಯಕ್ತಿಯ ಜೊತೆ ನಾನುಅಭಿನಯಿಸೋದಿಲ್ಲ’. ಒಟ್ಟಿನಲ್ಲಿ ಏಯ್ ಬುಲ್ ಬುಲ್, ಕನ್ನಡ ಸಿನ್ಮಾದಲ್ಲಿ ಆಕ್ಟ್ ಮಾಡಕಿಲ್ವಾ?’ ಅಂತ ಕೇಳ್ತಾ ಇದ್ದವರಿಗೆ ಅನುಷ್ಕಾ ಶೆಟ್ಟಿ ಅಂದು ಒಂದು ಸ್ಟ್ರಾಂಗ್ ಮೆಸೇಜ್ ಕೊಟ್ಟಿದ್ದಂತೂ ನಿಜ.
ಲೂಸ್ ಟಾಕ್: ನಿರ್ಮಲಾ ಸೀತಾರಾಮನ್
ಏನ್ ಮೇಡಂ, ಬಜೆಟ್ ದು ಟ್ರೈಲರ್ ಬಿಟ್ಟಿದ್ದೀರಲ್ಲ, ನಿಮ್ ಪ್ರಕಾರ ಇದು ಎಂಥಾ ಬಜೆಟ್?
ಅಂಥದು, ಇಂಥದ್ದು ಅಂತ ಏನಿಲ್ಲ, ಇದು ನಾರ್ಮಲ್ ನಿರ್ಮಲಾ ಬಜೆಟ್ ಅಷ್ಟೇ. ಟ್ರೈಲರ್ ನಾನ್ ಬಿಟ್ಟೆ, ಟೀಸರ್’ ಕೆಲ್ಸನ ವಿರೋಧ ಪಕ್ಷಗಳು ಮಾಡ್ತಾ
ಇವೆ.
ಹೋಗ್ಲಿ, ನಿಮ್ ಬಜೆಟ್ ಸರಿ ಇಲ್ಲ ಅಂತ ವಿರೋಧ ಪಕ್ಷದವರು ಯಾಕೆ ಟೀಕೆ ಮಾಡ್ತಾ ಇದ್ದಾರೆ?
ಅದು ಹಂಗೆ ಕಣ್ರೀ, ಅರ್ಥ ಸಚಿವರ ಬಜೆಟ್ ಉಳಿದವರಿಗೆ ಅರ್ಥ ಆಗೋದು ಕಷ್ಟ.
ಅದ್ಯಾಕೋ ನಿಮ್ಮ ಹೆಸರು ಕೇಳ್ತಿದ್ದ ಹಾಗೆ ನಿರ್ಮಲ ಶೌಚಾಲಯನೇ ಜ್ಞಾಪಕ ಬರುತ್ತಲ್ಲ ಮೇಡಂ?
ಅದರ ನಾನು ಕ್ಲೀನ್ ಹ್ಯಾಂಡೆಡ್ ಪೊಲಿಟಿಶಿಯನ್ ಅಂತ ಗೊತ್ತಾಗಲ್ವಾ..?
ಸರಿ, ನಿಮ್ ಯಜಮಾನ್ರು ಯಾಕೋ ಇತ್ತೀಚೆಗೆ ನಿಮ್ಮ ಪಕ್ಷದ ಬಗ್ಗೆ ಬರೀ ಉಲ್ಟಾ ಮಾತಾಡ್ತಾ ಇದ್ದಾರಲ್ಲ?
ಪರ್ಸನಲ್ ವಿಷ್ಯ ಬೇಡ. ನಾನು ಪರ್ಸ್ನಲ್ ಎಷ್ಟಿದೆ ಅಂತ ನೋಡ್ಕೊಂಡು ಲೆಕ್ಕ ಹಾಕಿ ಬಜೆಟ್ ಮಾಡೋ ಫೈನಾನ್ಸ್ ಮಿನಿಸ್ಟರ್ …ನಾನ್ ಸೆನ್ಸ್
ಅಯ್ಯೋ, ಅದಕ್ಕೆ ಸಿಟ್ಟಾಗ್ತೀರ, ಹೋಗ್ಲಿ, ನಿಮ್ಮೀ’ ಬಜೆಟ್ ನಲ್ಲಿ ಇನ್ಕಮ್ ಟ್ಯಾಕ್ಸ್ ಬಗ್ಗೆ ಏನೂ ಜಾಸ್ತಿ ಹೇಳೇ ಇಲ್ಲವಲ್ಲ?
ಅಯ್ಯೋ, ಮೊದ್ಲು ಕೆಲಸನೇ ಸಿಗದೇ ಇರೋ ನಮ್ ಜನಕ್ಕೆ ಇನ್ಕಮ್ ಸಿಗ್ಲಿ, ಆಮೇಲೆ ಟ್ಯಾಕ್ಸ್ ವಿಷ್ಯ ನೋಡೋಣಂತೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಮೊಬೈಲ್ ನೆಟ್ವರ್ಕ್ ಕಂಪನಿಯ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ನಿಂದ ನಮ್ಮ ಖೇಮುಗೆ ಒಂದು ಕಾಲ್ ಬಂತು. ಆ ಕಡೆಯಿಂದ ಒಂದು ಯಂಗ್ ಹುಡುಗಿ ಮಾತಾಡಿತು. ‘ಹಲೋ ಸರ್, ನಾನು ಸುಡೋಕು ಮೊಬೈಲ್ ನೆಟ್ವರ್ಕ್ ಕಂಪನಿ ಕಡೆ ಯಿಂದ ಕಾಲ್ ಮಾಡ್ತಾ ಇದೀನಿ. ನಿಮಗೋಸ್ಕರ ನಮ್ಮತ್ರ ಒಂದಷ್ಟು ಆಫರ್ಸ್ ಇದೆ ಸರ್’ ‘ಅಲ್ಲರೀ, ನನ್ನ ಸಾಯಂಕಾಲ ತಾನೇ ಕಾಲ್ ಮಾಡಿದ್ರಿ. ನಾನು ಬೇಡಾ ಅಂತ ಹೇಳಿದ್ದಲ್ಲ’ ನಿಜ ಸರ್, ಅದ್ರೆ ಈಗ ನೀವು ಮನಸ್ಸು ಬದಲಾಯಿಸಿರಬಹುದಲ್ಲ. ಅದಕ್ಕೆ ಮಾಡ್ಡೆ ಸರ್.
‘ನೋಡಿ, ಒಂದ್ ಮಾತು. ನಿಮ್ಮ ಆಫರ್ ವಿಷಯಬಿಡಿ. ನನಗೆ ನಿಮ್ ವಾಯ್ಸು ತುಂಬಾ ಇಷ್ಟ ಆಗಿದೆ ಕಣ್ರೀ, ನೀವು ನನ್ನ ಮದುವೆ ಆಗ್ತಿರಾ?’ ‘ವಾಟ್? ಸರ್, ಎನ್ ಮಾತಾಡ್ತಿ ದೀರಾ? ಸಾರಿ, ನಂಗ್ ಇಷ್ಟ ಇಲ್ಲ’ ‘ರೀ, ನಂಗೆ, ತಿಂಗಳಿಗೆ ಒಂದು ಲಕ್ಷ ಸಂಬಳ ಬರುತ್ತೆ ರೀ. ರಾಣಿ ಥರಾ ನೋಡ್ಕೊತೀನಿ ನಿಮ್ಮನ್ನ…’ ‘ಇಷ್ಟ ಇಲ್ಲ ಅಂತ ಹೇಳಿದ್ದಲ್ಲ’ ಪ್ಯಾರಿಸ್, ಸ್ವಿಜರ್ಲೆಂಡ್ಗೆ ಕರಕೊಂಡ್ ಹೋಗ್ತೀನ್ರೀ… ‘ರೀ ಮಿಸ್ಟರ್ ತಲೆತಿನ್ಬೇಡ್ರಿ, ನಂಗೆ ಇಷ್ಟ ಇಲ್ಲ’
ನೀವು ಕೇಳಿದಷ್ಟು ಬಂಗಾರ, ವಜ್ರದ ಒಡವೆ ಮಾಡಿಸಿ ಕೊಡ್ತೀನಿ, ಅಪ್ಪ್ ಅಮ್ಮಂಗೆ ಒಬ್ಬನೇ ಮಗ ಕಣ್ರೀ, ಮೈದುನ, ನಾದಿನಿ ಅಂತೆ ಕಿರಿಕಿರಿ ಇರಲ್ಲ’
ರೀ, ಆವಾಗಿಂದ ಇಷ್ಟ ಇಲ್ಲ ಬೇಡ ಅಂತ ಹೇಳ್ತಾ ಇಲ್ವಾ ನಾನು, ನಿಮಗೇನ್ ಬುದ್ಧಿ ಇದೆಯಾ. ಯಾಕ್ ಕಿರಿಕಿರಿ ಮಾಡ್ತೀರಾ?’ ಕಿರಿಕಿರಿ ಆಗುತ್ತೆ ತಾನೇ? ನಾನ್ ಎ ಸಲ ನಿಮ್ ಆಫರ್ ಬೇಡಾ ಅಂತ ಹೇಳಿದ್ರೂ ಮತ್ತೆ ಮತ್ತೆ ಆಫರ್ ಇದೆ ಅಂತ ನೀವು ಫೋನ್ ಮಾಡಿದ್ರೆ. ನಮಗೂ ಕಿರಿಕಿರಿ ಆಗುತ್ತೆ . ಯಾವುದಕ್ಕೂ ನಾಳೆ ಒಂದ್ಬಲ ನಾನೇ ಕಾಲ್ ಮಾಡ್ತೀನಿ. ಯಾರಿಗೊತ್ತು, ನೀವು ಮನಸ್ಸು ಬದಲಾಯಿಸಿರಬಹುದು. ಬಾಬಾ, ಹ್ಯಾವ್ ಎ ಗುಡ್ ಡೇ’
ಲೈನ್ ಮ್ಯಾನ್
ನಮ್ಮ ಪ್ರಧಾನಿ ನರೇಂದ್ರ ಮೋದಿ ಒಂದ್ ಸ್ಕೂಲ್ ವಿಸಿಟ್ಗೆ ಹೋಗಿದ್ರು. ಅಲ್ಲಿ ಮಕ್ಕಳ ಜೊತೆ ಮಾತಾಡಿದ ಮೇಲೆ ಪ್ರಿನ್ಸಿಪಾಲ್ ಅವರು ಮೋದಿ ಅವರ ಪರ್ಮಿಷನ್ ಕೇಳದೇನೇ ‘ಮಕ್ಕಳೇ ಏನಾದ್ರೂ ಪ್ರಶ್ನೆ ಕೇಳೋದಿದ್ರೆ ಕೇಳಿ’ ಅಂದ್ಬಿಟ್ರು. ಮೋದಿ ಅವರು ಮುಖ ಸಿಂಡರಿಸಿ ಕೊಂಡು ನೋಡ್ತಾ ಇದ್ದ ಹಾಗೆ, ಪಪ್ಪು ಎದ್ದು ನಿಂತು ಸರ್ ನಂಗೆ ೩ ಪ್ರಶ್ನೆ ಕೇಳೋದಿದೆ ಅಂತ ಶುರು ಮಾಡಿದ.’
೧ ಕಪ್ಪು ಹಣ ಯಾವಾಗ ವಾಪಸ್ ತರ್ತೀರಾ?
೨ ನೀವು ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ರೇಟ್ ಯಾಕೆ ಜಾಸ್ತಿ ಆಯ್ತು, ರುಪಾಯಿ ಬೆಲೆ ಯಾಕೆ ಕಮ್ಮಿ ಆಯ್ತು?
೩ ಧರ್ಮದ ಹೆಸರಲ್ಲಿ ರಾಜಕೀಯ ಮಾಡೋದು ಸರಿನಾ?
ಅಷ್ಟರ ಬ್ರೇಕ್ ಟೈಮ್ ಬೆಲ್ ಆಯ್ತು. ಎಲ್ಲಾ ಮಕ್ಕಳೂ ಹೊರಗೆಹೋಗಿ ೧೦ ನಿಮಿಷ ಆದಮೇಲೆ ವಾಪಸ್ ಬಂದರು. ಈ ಪ್ರಶ್ನೆ ಕೇಳೋಕೆ ಅಂತ ಅಪ್ಪು ಎದ್ದು ನಿಂತ ಸರ್ ನನಗೆ ೫ ಪ್ರಶ್ನೆ ಕೇಳೋದಿದೆ.
ಮೊದಲ ೩ ಪ್ರಶ್ನೆಗಳನ್ನ ಪಪ್ಪು ಕೇಳಿದಾನೆ. ಇನ್ನೆರಡು ಪ್ರಶ್ನೆ ಹೀಗಿವೆ.
೪ ಇವತ್ತು ಬ್ರೇಕ್ ಬೆಲ್ ಯಾಕೆ ೧೫ ನಿಮಿಷ ಮುಂಚೆನೇ ಹೊಡೆದ್ರು?
೫. ಪಪ್ಪು ಎಲ್ಲಿ ಕಾಣಿಸ್ತಾ ಇಲ್ಲ?
ಒಂದು ಆಸ್ಪತ್ರೆಯ ಸಿಬ್ಬಂದಿ ಇನ್ನೊಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು, ಅಲ್ಲಿ ಅವರಿಗೆ ಆತ್ಮೀಯ ವಾದ ‘ಟ್ರೀಟ್ ಮೆಂಟ್’ ಸಿಕ್ಕರೆ
– ಗುಡ್ ‘ಹಾಸ್ಪಿಟಾಲಿಟಿ’
ಕೆಲವು ಹೊಟೇಲ್ ಚಿಕನ್ ಡಿಶ್ ಗಳಲ್ಲಿ ನಾರಿನ ಪೀಸ್ಗಳೇ ಜಾಸ್ತಿ ಇರುತ್ತೆ.
– ‘ಮಾಂಸದ ಜೊತೆ ನಾರೂ ಹೊಟ್ಟೆ ಸೇರಿತು’ ಅನ್ನೋ ಥರ
ಮಂಜು ಹೆಚ್ಚಾಗಿ ಆಗಿರುವ ಅನಾಹುತಗಳಿಗೆ ಕಾರಣ
– ಸ್ನೋ ಪಾಯಿಸನ್
ಮಾಡರ್ನ್ ಗಾದೆ
– ಸೈಕಲ್ ಶಾಪಲ್ಲಿ ಟ್ಯೂಬ್ಗೆ ಗಾಳಿ
ಹೊಡೆಯೋ ಕೆಲಸ ಮಾಡೋ
ಹುಡುಗನ್ನ ವಾಯುಪುತ್ರ
ಅನ್ನೋಕಾ ಗ್ತದ?
ಹಾಲಿವುಡ್ಗಿಂತ ಸ್ಯಾಂಡಲ್ ವುಡ್ನ ಹೈ ಬಜೆಟ್ನ ಸಿನಿಮಾ ಬರೋದು, ಹೇಗೆ?
– ಅವರು ‘ಐರನ್’ಮ್ಯಾನ್ ಸಿನಿಮಾ ಮಾಡ್ತಾರೆ. ನಾವು ’ಬಂಗಾರ’ದ ಮನುಷ್ಯ ಮಾಡ್ತೀವಿ.
– ‘ಅತಿ ಶೀಘ್ರದ ಬಿಡುಗಡೆ’ ಎಂಬ ಜಾಹೀರಾತು ಅತಿ ಚೆನ್ನಾಗಿ ಒಪ್ಪುವ ಚಿತ್ರ
– ಖೈದಿ
ಎರಡು ವಿಧದ ಪ್ರಶಸ್ತಿಗಳು
೧.ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದವು ಅನ್ನುವಂಥ ಪ್ರಶಸ್ತಿ
೨. ಇವರೇ ಅವರಿವರನ್ನು ಹುಡುಕಿ ಕೊಂಡು ಹೋಗಿ ಪಡೆದುಕೊಂಡ ಪ್ರಶಸ್ತಿ
ಗ್ರಹಚಾರ ತೀರಾ ಕೆಟ್ಟಿದೆ ಅಂತ ಗೊತ್ತಾಗೋದು ಯಾವಾಗ?
– ಮೊಬೈಲ್ ಫೋನ್ನ ಪವರ್ ಬ್ಯಾಂಕ್ಗೆ ಕನೆಕ್ಟ್ ಮಾಡಿದಾಗ, ಮೊಬೈಲ್ನಿಂದ ಪವರ್ ಬ್ಯಾಂಕೇ ಚಾರ್ಜ್ ಆಗೋಕೆ ಶುರು ಮಾಡಿದಾಗ.