Thursday, 28th March 2024

ನೋಟು ರದ್ದಿಗೆ ಪಾಕ್ ದಿವಾಳಿ !

ಶಶಿಕುಮಾರ್‌ ಕೆ.

೨೦೧೬ರಲ್ಲಿ ನೋಟು ಅಮಾನ್ಯೀಕರಣ ಮಾಡದೇ ಇದ್ದಿದ್ದರೆ ೨೦೧೭ರ ಆರಂಭದಲ್ಲಿ ಪಂಜಾಬ್, ಉತ್ತರ ಪ್ರದೇಶ ಒಳಗೊಂಡಂತೆ ಐದು ರಾಜ್ಯಗಳ ಚುನಾವಣೆಗಳಿಗೆ ಕಳ್ಳ ನೋಟುಗಳನ್ನು ಪೂರೈಸಲು ಪಾಕಿಸ್ತಾನದ ದಂಧೆಕೋರರು ಸಿದ್ಧವಾಗಿದ್ದರು.

೨೦೦೦ ರುಪಾಯಿಯ ನೋಟುಗಳ ಹಿಂತೆಗೆತ ೨೦೧೬ರಲ್ಲಿ ನಡೆದ ನೋಟು ಅಮಾನ್ಯೀಕರಣಕ್ಕಿಂತ ಭಿನ್ನವಾಗಿದೆ. ಜನಸಾಮಾನ್ಯ, ಈ ಬಾರಿ ಸರಕಾರ ತೆಗೆದುಕೊಂಡ ನಿರ್ಣಯದಿಂದ ಯಾವ ವಿಧದಲ್ಲೂ ತೊಂದರೆ ಅನುಭವಿಸ ಲಿಲ್ಲ. ಕಾರಣ ಇಷ್ಟೆ, ೨೦೧೮-೧೯ರಲ್ಲೇ ಈ ನೋಟುಗಳ ಮುದ್ರಣವನ್ನು ಕೇಂದ್ರ ಸರಕಾರ ನಿಲ್ಲಿಸಿತ್ತು. ಅಲ್ಲದೆ ಈ ಕುರಿತು ಸಂಸತ್ತಿನ ಮಾಹಿತಿ ನೀಡಿತ್ತು. ಒಂದೊಮ್ಮೆ ಈ ನೋಟುಗಳು ಬ್ಯಾಂಕ್‌ಗಳಿಗೆ ಹೋದರೆ ಪುನಃ ಅವು ಜನಸಾಮಾನ್ಯರ ಕೈ ಸೇರುತ್ತಿರಲಿಲ್ಲ.

ಆದ್ದರಿಂದ ಸರಕಾರ ಅತ್ಯಂತ ಯೋಜಿತ ರೀತಿಯಲ್ಲಿ ಈ ನೋಟುಗಳನ್ನು ಹಂತ- ಹಂತವಾಗಿ ಹಿಂದಕ್ಕೆ ತೆಗೆದು ಕೊಂಡಿತು. ಇನ್ನುಳಿದ ನೋಟುಗಳು ಕೆಲವರ ಬಳಿ ಮಾತ್ರ ಇವೆ. ಉದಾಹರಣೆಗೆ ರಾಜಕೀಯ ನಾಯಕರು, ನಕಲಿ ನೋಟು ವ್ಯವಹಾರ ನಡೆಸುವವರು, ಭ್ರಷ್ಟಾಚಾರ ನಡೆಸುವವರು, ಲಿಕ್ಕರ್ ಲಾಭಿ ನಡೆಸುವಂಥವರ ಬಳಿ ಮಾತ್ರ ಈ ನೋಟುಗಳಿವೆ. ಆದ್ದರಿಂದ ಈ ಬಾರಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಕೆಲವರು, ೨೦೦೦ ರು. ಮೌಲ್ಯದ ನೋಟುಗಳನ್ನು ಮುದ್ರಿಸಿ ಪುನಃ ಈಗ ರದ್ದುಗೊಳಿಸಿರುವುದು ಸರಿಯಲ್ಲ ಎನ್ನುತ್ತಿದ್ದಾರೆ.

ಆದರೆ, ಈ ನೋಟುಗಳನ್ನು ಮುದ್ರಿಸಲು ಒಂದು ಬಲವಾದ ಕಾರಣವಿದೆ. ೨೦೧೬ರಲ್ಲಿ ೫೦೦ ಹಾಗೂ ೧೦೦೦ ರುಪಾಯಿ ನೋಟುಗಳ ಅಮಾನ್ಯೀ ಕರಣದ ಪರಿಣಾಮ ದೇಶದ ಆರ್ಥಿಕತೆಯ ಶೇ.೮೪ರಷ್ಟು ಹಣ ಚಲಾವಣೆ ಯಿಲ್ಲದೇ ಹೋಗಿತ್ತು. ಜನರ ಕೈಗೆ ಬಹುಬೇಗ ಹಣತಲುಪಲು ೨,೦೦೦ ರು.ಮೌಲ್ಯದ ನೋಟುಗಳನ್ನು ಮುದ್ರಿಸಬೇಕಾಯಿತು. ಆರ್ಥಿಕತೆ ಪುನಃ ಹಳಿಗೆ ಬಂದಾಗ ಈ ನೋಟುಗಳ ಅತ್ಯವಶ್ಯಕತೆ ಎಂಬುದು ಇರಲಿಲ್ಲ. ಆದರೆ ಇದೇ ನೋಟುಗಳು ಭ್ರಷ್ಟರ ಪಾಲಿಗೆ ಆದಾಯ ತಂದುಕೊಡುವ ಮೂಲ ಗಳಾಗಿದ್ದವು.

೨೦೨೧ರಲ್ಲಿ ಉತ್ತರಪ್ರದೇಶದಲ್ಲಿ ಹಳೆ ಕಾಲದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ಸಾಮಾನ್ಯ ಉದ್ಯಮಿಯ ಮನೆಯ ಮೇಲೆ ಐಟಿ ಇಲಾಖೆ ದಾಳಿ ನಡೆಸಿದಾಗ ೨ ಸಾವಿರ ಮುಖಬೆಲೆಯ ಒಟ್ಟು ೩೦೦ ಕೋಟಿ ರು ಪತ್ತೆಯಾಗಿತ್ತು. ಕಳೆದ ವರ್ಷ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವರ ಮನೆ ಮೇಲೆ ಐಟಿ ಅಽಕಾರಿಗಳು ದಾಳಿ ನಡೆಸಿದಾಗ ಪತ್ತೆಯಾದ ೭೮ ಕೋಟಿ ರು.ಗಳಷ್ಟು ಮೊತ್ತ ೨,೦೦೦ ರು.ಮುಖಬೆಲೆಯ ಕರೆನ್ಸಿ. ಮುಂದಿನ ನವೆಂಬರ್
ನಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ಅಲ್ಲಿನ ರಾಜಕೀಯ ನಾಯಕರುಗಳಿಗೆ, ಇಂತಹ ಭ್ರಷ್ಟರಿಗೆ ಕೇಂದ್ರ ಸರಕಾರದ ಈ ನಿರ್ಣಯ ಮರ್ಮಾಘಾತವನ್ನೇ ಉಂಟು ಮಾಡಿದೆ.

ನೋಟು ಅಮಾನ್ಯೀಕರಣದ ನಂತರ ದೇಶದ ಅರ್ಥ ವ್ಯವಸ್ಥೆಯೇ ಅಲಕಲವಾಗಿದೆ ಎಂದು ಹೇಳುವವರು ಇಂದಿಗೂ ಇzರೆ. ಆದರೆ ನೋಟು ರದ್ದತಿಯ
ಬಳಿಕ ದೇಶದ ಜಿಡಿಪಿ ಹೆಚ್ಚಾಗಿದೆ, ದೇಶದ ವಿದೇಶಿ ವಿನಿಮಯ ಹೆಚ್ಚಾಗಿದೆ, ದೇಶದ ಕ್ರೆಡಿಟ್ ರೇಶ್ಯೂ ಹೆಚ್ಚಾಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಇನ್ನೂ ವಿಶೇಷವೆಂದರೆ, ನೋಟು ರದ್ದತಿಯಿಂದ ದಿವಾಳಿಯಾಗಿದ್ದು ಭಾರತವಲ್ಲ ನೆರೆಯ ಪಾಕಿಸ್ತಾನ. ಭಾರತದಲ್ಲಿ ನೋಟು ರದ್ದತಿಯ ಬಳಿಕ ಪಾಕಿಸ್ತಾನದ ಆರ್ಥಿಕತೆ ಏಕೆ ಹಳ್ಳ ಹಿಡಿಯುತ್ತಿದೆ? ಪಾಕಿಸ್ತಾನದ ಆರ್ಥಿಕತೆ ೨೦೧೪-೧೬ರ ಅವಧಿಯಲ್ಲಿ ಉತ್ತಮವಾಗಿದ್ದು ನಂತರ
ಹಂತ-ಹಂತವಾಗಿ ಪತನವಾಗಿ ಈ ದಿನ ಸಾಲ ಸಿಗದಿರುವಂತಹ ಪರಿಸ್ಥಿತಿಗೆ ಬಂದು ತಲುಪಿದೆ.

ಗೋಧಿ ಹಿಟ್ಟಿಗಾಗಿ ಜನರು ಸರದಿ ಸಾಲಿನಲ್ಲಿ ಬಡಿದಾಡಿಕೊಳ್ಳುವಂತಹ ಪರಿಸ್ಥಿತಿ, ನೌಕರರಿಗೆ ಸಂಬಳ ಕೊಡಲು ಆಗದಿರುವಂತಹ ಪರಿಸ್ಥಿತಿ, ಪ್ರಧಾನ ಮಂತ್ರಿ ಒಳಗೊಂಡಂತೆ ಇಡೀ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಸಾಲಕ್ಕಾಗಿ ಬೇರೆ-ಬೇರೆ ದೇಶಗಳ ಬಳಿ ಭಿಕ್ಷಾಪಾತ್ರೆ ಹಿಡಿದು ಅಲೆದಾಡುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಏಕೆ ಬಂದಿತು? ನಿಜಕ್ಕೂ ಯೋಚಿಸಬೇಕಾದ ವಿಚಾರ. ೨೦೧೬ರಲ್ಲಿ ನಮ್ಮ ನೋಟು ಅಮಾನ್ಯೀಕರಣದ ಬಳಿಕ ಪಾಕಿಸ್ತಾನದ
ಜಾವೇದ್ ಕನಾನಿ ಎಂಬ ನಕಲಿ ನೋಟುಗಳನ್ನು ಮುದ್ರಿಸುವ ವ್ಯಕ್ತಿ ಬಹು ಮಹಡಿ ಕಟ್ಟಡದಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಗಮನಾರ್ಹ.

ಆತನ ಸೋದರ ಅಲ್ತಾಫ್ ಖನಾನಿ ಅಮೆರಿಕಕ್ಕೆ ಹೋಗಿ ತಾನು ದಿವಾಳಿಯಾಗಿರುವುದಾಗಿ ಕೋರ್ಟಿನಲ್ಲಿ ಘೋಷಿಸಿಕೊಂಡಿದ್ದಾನೆ. ಜಾವೇದ್ ಕನಾನಿ
ಜತೆಗೆ ಖಾನಿಯಾ ಇಂಟರ್ನ್ಯಾಷನಲ್ ಕಂಪನಿಯಲ್ಲಿ ಪಾರ್ಟನರ್ ಆಗಿದ್ದಂತಹ ಮುನಾಫ್ ಕಾನಿಯಾನ ಕಂಪನಿ ಸಂಪೂರ್ಣ ಕುಸಿದು ಬಿದ್ದಿತು. ಈ ಕಂಪನಿಯ ಮುಖ್ಯದಂಧೆ ಭಾರತದ ಫೇಕ್ ಕರೆನ್ಸಿ ನೋಟುಗಳ ವ್ಯಾಪಾರ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಭಾರತಕ್ಕೆ ಕರೆನ್ಸಿ ನೋಟುಗಳ ಪೇಪರ್ ಮತ್ತು ಭದ್ರತೆಯ ಇಂಕ್ ಅನ್ನು ಪೂರೈಸುತ್ತಿದ್ದ ಇಂಗ್ಲೆಂಡ್‌ನ ದೇಲಾರು ಕಂಪನಿಯೇ ಪಾಕಿಸ್ತಾನಕ್ಕೂ
ಅವನ್ನು ಪೂರೈಸುತ್ತಿತ್ತು. ಆದ್ದರಿಂದ ಖನಾನಿ ಸಹೋದರರ ಕಂಪನಿಗೆ ಭಾರತದ ನಕಲಿ ನೋಟುಗಳನ್ನು ಮುದ್ರಿಸುವುದು ಅತ್ಯಂತ ಸುಲಭ
ವಾಗಿತ್ತು.

ಈ ನೋಟುಗಳನ್ನು ಕಳ್ಳ ಮಾರ್ಗಗಳ ಮೂಲಕ ಭಾರತಕ್ಕೆ ಪೂರೈಕೆ ಮಾಡಿ, ಭಾರತದ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಪಾಕಿಸ್ತಾನದ
ಸರಕಾರ ಪ್ರಯತ್ನಿಸುತ್ತಿತ್ತು. ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಕಂಪನಿಯನ್ನು ಭಾರತವು ಕಪ್ಪುಪಟ್ಟಿಗೆ ಸೇರಿಸಿತು.
೨೦೧೬ರಲ್ಲಿ ನೋಟು ಅಮಾನ್ಯೀಕರಣ ಮಾಡದೇ ಇದ್ದಿದ್ದರೆ ೨೦೧೭ರ ಆರಂಭದಲ್ಲಿ ಪಂಜಾಬ್, ಉತ್ತರ ಪ್ರದೇಶ ಒಳಗೊಂಡಂತೆ ಐದು ರಾಜ್ಯಗಳ ಚುನಾವಣೆಗಳಿಗೆ ಕಳ್ಳ ನೋಟುಗಳನ್ನು ಪೂರೈಸಲು ಪಾಕಿಸ್ತಾನದ ದಂಧೆಕೋರರು ಸಿದ್ಧವಾಗಿದ್ದರು. ಅದಾಗಲೇ ನೋಟುಗಳನ್ನು ಮುದ್ರಿಸಿ
ಸಿದ್ಧಪಡಿಸಿಟ್ಟುಕೊಂಡಿದ್ದರು. ಆ ನೋಟುಗಳು ಭಾರತದ ಆರ್ಥಿಕತೆ ಪ್ರವೇಶಿಸಿದ್ದರೆ ಭಾರತವು ಭಾರಿ ಗಂಡಾಂತರವನ್ನೇ ಎದುರಿಸಬೇಕಾಗಿತ್ತು. ಅಂದು ನರೇಂದ್ರ ಮೋದಿಯವರು ಕೈಗೊಂಡ ಒಂದು ಗಟ್ಟಿ ನಿರ್ಧಾರ ಇಂದು ಭಾರತದ ಆರ್ಥಿಕತೆ ಜಗತ್ತಿನೆದುರು ಜಗಮಗಿಸುವಂತೆ ಮಾಡಿದೆ.

ರುಪಾಯಿಯನ್ನು ೨೦ ವರ್ಷಗಳಿಗೊಮ್ಮೆ ಬದಲಾಯಿಸ ಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್‌ರವರು ಸಲಹೆ ನೀಡಿದ್ದರು. ಡಾ. ಅಂಬೇಡ್ಕರ್ ಅವರ ವಿಚಾರಗಳು ಭಾರತೀಯ ಹಣಕಾಸು ಪದ್ಧತಿಯ ಮೇಲೆ ಅಗಾಧ ಪ್ರಭಾವ ಬೀರಿವೆ. ರುಪಾಯಿಯ ನಿರಂತರ ಅಪಮೌಲ್ಯ, ಭಾರತದಲ್ಲಿನ ಬ್ರಿಟಿಷ್ ಸರಕಾರಕ್ಕೆ ದೊಡ್ಡ ತಲೆ ನೋವಾಗಿತ್ತು. ಅಂಬೇಡ್ಕರ್ ಅವರು ೧೯೨೩ರಲ್ಲಿ ‘ದಿ ಪ್ರಾಬ್ಲಮ್ ಆಫ್ ರುಪೀ : ಇಟ್ಸ್ ಒರಿಜಿನ್ಸ್ ಅಂಡ್ ಸೆಲ್ಯುಷನ್  (ರುಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ ) ಎಂಬ ಪುಸ್ತಕ ಬರೆದಿದ್ದರು. ಬ್ರಿಟಿಷ್ ಭಾರತದ ಕಾಲದಲ್ಲಿ ರುಪಾಯಿಯ ಪರಿಸ್ಥಿತಿಯ ಬಗ್ಗೆ ಅವರು ಗಾಢವಾದ ಅಧ್ಯಯನ ನಡೆಸಿದ್ದರು. ಈ ಪುಸ್ತಕದ ಸಲಹೆಗಳ ಆಧಾರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್‌ನ ರಚನೆಯಾಗಿತ್ತು.

ಸರಕಾರ ತನ್ನ ಕೊರತೆ ಬಜೆಟ್‌ನ ಮೇಲೆ ನಿಯಂತ್ರಣ ತರಬೇಕು, ನೋಟುಗಳನ್ನು ಮುದ್ರಿಸುತ್ತ ಹೋಗುವುದಲ್ಲ, ಹಣ ನಿರಂತರ ಚಲಾವಣೆಯಾಗು ವಂತೆ ನೋಡಿಕೊಳ್ಳಬೇಕು. ವಿದೇಶಿ ವಿನಿಮಯ ದರವನ್ನು ನಿಯಂತ್ರಿಸುವ ಬದಲು ಬೆಲೆಗಳ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯದ ಭಯ ಇzಗಲೇ ಹಣ ನಿರಂತರ ಚಲಾವಣೆಗೆ ಬರುತ್ತದೆ ಎಂಬುದು ಅವರ ವಿಚಾರಧಾರೆಯಾಗಿತ್ತು.

ಒಟ್ಟಾರೆಯಾಗಿ ಪ್ರಸ್ತುತ ೨,೦೦೦ ರು.ಮುಖಬೆಲೆಯ ನೋಟುಗಳ ಅಪಮೌಲ್ಯದ ಪರಿಣಾಮ ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದ್ದರಿಂದಲೇ ಸಾಮಾನ್ಯ ಜನರು ಯಾವುದೇ ಗಲಾಟೆ-ಗೋಜುಗಳಿಲ್ಲದೆ ತಮ್ಮ ಬಳಿಯಲ್ಲಿರುವ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುತ್ತಿzರೆ. ಆದರೆ ಕಾಳಧನಿಕರು ಮಾತ್ರ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದಾರೆ.

error: Content is protected !!