ಗಂಟಾಘೋಷ
ಗುರುರಾಜ್ ಗಂಟಿಹೊಳೆ
ನಾಗಾಲೋಟದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ಪ್ರಸ್ತುತ ಮದ್ದು-ಗುಂಡುಗಳಿಗಿಂತ ಹೆಚ್ಚಾಗಿ ಬಳಕೆಯಾಗುತ್ತಿರುವುದು ಆರ್ಥಿಕತೆ ಮತ್ತು ಅಭಿವೃದ್ಧಿ ಎಂಬ ಅಸಗಳು. ಇದರ ಭಾಗವಾಗಿ ಜಗತ್ತಿನ ಹಲವು ದೇಶಗಳು ‘ಟ್ರಿಲಿಯನ್ ಇಕಾನಮಿ’ ಎಂಬ ಮಾಯಾವಿಯ ಹಿಂದೆ ಬಿದ್ದಿದ್ದು, ಒಂದು ದೇಶವು ಇನ್ನೊಂದನ್ನು ಹಣಿಯಬೇಕೆಂದರೆ ಯುದ್ಧಕ್ಕೆ ಹೊರತಾದ ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಇವುಗಳಲ್ಲಿ ನೀರಾವರಿ ಯೋಜನೆಗಳೂ ಸೇರಿವೆ.
ಭಾರತದಲ್ಲೂ ರಾಜ್ಯ ರಾಜ್ಯಗಳ ನಡುವಿನ ಪೈಪೋಟಿಯ ರೀತಿಯಲ್ಲಿ ಜಾರಿಯಾಗುತ್ತಿರುವ ಬೃಹತ್ ಯೋಜನೆಗಳಲ್ಲಿ ತೆಲಂಗಾಣದ ಕಾಲೇಶ್ವರಂ ಏತ ನೀರಾವರಿ ಯೋಜನೆಯೂ ಸೇರಿದೆ. ಈ ಯಾದಿಯಲ್ಲಿ ಸೇರುವ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯೆಂದರೆ, ‘ಒಡಿಶಾದ ಅಂಡರ್‌ಗ್ರೌಂಡ್ ಮಾರ್ವೆಲ್’ ಎಂದೇ ಕರೆಯಲ್ಪಡುವ ಗಂಗಾಧರ ಮೆಹರ್ ಏತ ನೀರಾವರಿ ಯೋಜನೆ. ಸುಮಾರು ೧,೬೬೭ ಕೋಟಿ ರು. ವೆಚ್ಚದ ಈ ಮಹತ್ತರ ಯೋಜನೆ ಯನ್ನು ಸುಮಾರು ೬೦ ಸಾವಿರ ಎಕರೆ ಕೃಷಿಭೂಮಿಗೆ ನೀರು ಒದಗಿಸುವ ಗುರಿಯೊಂದಿಗೆ ಅನುಷ್ಠಾನಕ್ಕೆ ತಂದ ಪರಿ ನಿಜಕ್ಕೂ ರೋಚಕ. ಈ ಪ್ರಯತ್ನದ ಹಿಂದಿರುವ ಶಕ್ತಿಯೇ ಒಡಿಶಾದ ೧೫ನೇ ಮುಖ್ಯಮಂತ್ರಿ ನವೀನ್ ಪಟ್ನಾಯಕ್.
ತಂದೆ ಬಿಜು ಪಟ್ನಾಯಕ್‌ರಂತೆಯೇ ಒಳ್ಳೆಯ ಹೆಸರು ಮಾಡುತ್ತಾ ಬಂದಿರುವ ನವೀನ್, ಜನರಿಗೆ, ರೈತರಿಗೆ ಮತ್ತು ಕೃಷಿಕಾರ್ಯಗಳಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸುಮಾರು ೨ ದಶಕಗಳ ಆಡಳಿತದಲ್ಲಿ ೮೯ಕ್ಕೂ ಹೆಚ್ಚು ನೀರಾವರಿ ಯೋಜನೆಗಳನ್ನು ತಂದು ಕೃಷಿಕಾರ್ಯಕ್ಕೆ ನೆರವಾಗಿದ್ದಾರೆ. ಆದರೂ, ಅಲ್ಲಿ ಉಸುಕುಭರಿತ ಮಣ್ಣು ಒಂದೆಡೆಯಾದರೆ, ಇನ್ನುಳಿದ ಗ್ರಾಮೀಣ ಭಾಗಗಳಲ್ಲಿ ಕಲ್ಲುಬಂಡೆಯಂತೆ ಗಟ್ಟಿಯಾದ ಕೃಷಿಭೂಮಿಯ ಕಾರಣದಿಂದಾಗಿ ಎಷ್ಟೇ ಯೋಜನೆಗಳನ್ನು ತಂದರೂ ಕೆಲ ಕಾಲದಲ್ಲಿ ಅವು ವಿಫಲಗೊಳ್ಳುತ್ತಿದ್ದವು.
ಕಾರಣ, ಒಮ್ಮೆ ಅಕಾಲಿಕ ಮಳೆ, ಮಗದೊಮ್ಮೆ ಬರ ಉಂಟಾದರೆ, ಕೆಲವೊಮ್ಮೆ ತೀವ್ರ ಜಲವೃಷ್ಟಿಯಾಗುತ್ತಿತ್ತು. ಹೀಗಾಗಿ ಊರಿಗೆ ಊರೇ ಪರರಾಜ್ಯಗಳಿಗೆ ಗುಳೆ ಹೋಗುತ್ತಿತ್ತು; ಮನೆಗಳಿಗೆ ಬೀಗ ಜಡಿದುಕೊಂಡಿರುವ ನಿರ್ಜನ ಗ್ರಾಮಗಳ ಸುದ್ದಿಚಿತ್ರವನ್ನು ದೇಶದ ಮಾಧ್ಯಮಗಳು ಕೂಡ ಬಿತ್ತರಿಸಿದ್ದವು. ಹೀಗೆ ಪ್ರಕೃತಿ ವಿಕೋಪದಿಂದಾಗಿ ಉಂಟಾದ ಬೆಳೆನಷ್ಟ ದೊಂದಿಗೆ ಹೋರಾಡುತ್ತಿರುವ ರೈತರಿಗೆ ಬದುಕು ನಿಭಾಯಿಸುವುದು ದುಸ್ತರವಾಗಿ, ಹಲವು ಸಣ್ಣ ನೀರಾವರಿ ಯೋಜನೆಗಳು (Iಜ್ಚ್ಟಿಟ ಐಜಿಜZಠಿಜಿಟ್ಞ Pಟ್ಜಛ್ಚಿಠಿ IಐP) ದಯನೀಯವಾಗಿ ವಿ-ಲಗೊಂಡಿದ್ದರಿಂದ ಜನರು ಮುಂದಿನ ದಿನಗಳ ಭೀಕರತೆ ಯನ್ನು ನೆನೆದು ಭಯಪಡುವಂತಾಗಿತ್ತು. ‘ಎಂಐಪಿ’ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿದ್ದಿದ್ದರೆ, ಬರದ ಪರಿಸ್ಥಿತಿಯನ್ನು ಸಮರ್ಥ ವಾಗಿ ಎದುರಿಸಬಹುದಾಗಿತ್ತು ಎಂದು ರೈತರು ಮಾತಾಡುವಂತಾಯಿತು.
‘ಎಂಐಪಿ’ಗಳ ದುರಸ್ತಿ ಮತ್ತು ನಿರ್ವಹಣೆಗೆಂದು ಲಕ್ಷಗಟ್ಟಲೆ ಹಣ ಖರ್ಚಾಗುತ್ತಿದ್ದುದು ಹಾಗೂ ಅನಿಯತ ಮಳೆಯ ಹಿಂದಿನ ಅನುಭವವನ್ನು ಅಧಿಕಾರಿ ಗಳು ಪರಿಗಣಿಸದಿದ್ದುದು ಕೂಡ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಇದನ್ನು ಮನಗಂಡ ನವೀನ್ ಪಟ್ನಾಯಕ್ ಸರಕಾರವು ಕೈಗೆತ್ತಿಕೊಂಡಿದ್ದೇ ಈ ಗಂಗಾಧರ ಮೆಹರ್ ಏತ ನೀರಾವರಿ ಯೋಜನೆ. ಇದು ಭಾರತದಲ್ಲೇ ಅತಿದೊಡ್ಡ ‘ಎಂಐಪಿ’ ಆಗಿದ್ದು, ಒಡಿಶಾದ ರೈತರ ಪಾಲಿಗೆ
ವರದಾನವಾಗಿದೆ. ಸಹಜವಾಗಿ ಮಳೆಯಾಧಾರಿತ ೨ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು, ಮಳೆ ಅಭಾವದ ಕಾರಣ ಬೆಳೆ ಬೆಳೆಯುವುದಿರಲಿ ಅಕ್ಷರಶಃ ಕಲ್ಲಿನಂತಾಗಿದ್ದ ಜಮೀನನ್ನು ನೋಡುತ್ತ ಕೂರುವಂತಾಯಿತು. ಮಳೆಯಾದರೂ ಪಶುಗಳಿಗೆ ಕುಡಿಯಲು ಕೂಡ ಕೆರೆಗಳಲ್ಲಿ ನೀರು ಸಂಗ್ರಹ ವಾಗುತ್ತಿರ ಲಿಲ್ಲ. ಇಂಥ ಸಂದರ್ಭದಲ್ಲಿ ೧೩೯ ಹಳ್ಳಿಗಳ ಸುಮಾರು ೩೫ ಸಾವಿರ ಕೃಷಿಕರು ವರ್ಷಪೂರ್ತಿ ಬಳಸಲು ಹಾಗೂ ಕುಡಿಯಲು ನೀರನ್ನು ಒದಗಿಸುವ ಬೃಹತ್ ಯೋಜನೆಯಾಗಿ ಗಂಗಾಧರ ಮೆಹರ್ ಯೋಜನೆ ಶುರುವಾಯಿತು.
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಅಕ್ಕಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಕಾಲಘಟ್ಟವಿದು. ದೇಶದಲ್ಲೇ ಅತಿಹೆಚ್ಚು ಭತ್ತ ಬೆಳೆಯುವ ರಾಜ್ಯಗಳಲ್ಲಿ ಪ್ರಮುಖವಾದುದು ಒಡಿಶಾ. ಇಲ್ಲಿನ ಬರಗಡ್ ಜಿಲ್ಲೆಯು ಅತಿಹೆಚ್ಚು ಭತ್ತವನ್ನು ಉತ್ಪಾದಿಸುವ ಮೂಲಕ ‘ಒಡಿಶಾದ ಭತ್ತದ ಕಣಜ’ ಎನಿಸಿಕೊಂಡಿದೆ. ಆದರೆ ಈ ಜಿಲ್ಲೆಯ ಸಮಸ್ತ ರೈತರು ದೇಶದ ಪ್ರತಿಷ್ಠಿತ ಹಿರಾಕುಡ್ ಜಲಾಶಯದ ಪಕ್ಕದಲ್ಲೇ ಇದ್ದರೂ, ನೀರಿನ ಮೂಲಕ್ಕಿಂತ ೩೦-೩೫ ಮೀಟರ್ ನಷ್ಟು ಎತ್ತರದಲ್ಲಿದ್ದುದರಿಂದ ನೀರು ಅಲ್ಲಿಗೆ ತಲುಪಲು ಅಸಾಧ್ಯವಾಗಿತ್ತು; ಹೀಗಾಗಿ ಮಳೆಗಾಲ ಆರಂಭವಾಗುವವರೆಗೆ ಮನೆಗಳಿಗೆ ಬೀಗ ಜಡಿದು, ಅನ್ನ ಹುಡುಕುತ್ತ ಅನ್ಯರಾಜ್ಯಗಳಿಗೆ ಗುಳೆಹೋಗುತ್ತಿದ್ದರು. ಈ ಸಂಕಷ್ಟವನ್ನು ಮನಗಂಡ ಸರಕಾರ, ಹಿರಾಕುಡ್ ಜಲಾಶಯದ ನೀರನ್ನು
ಪೈಪುಗಳ ಮೂಲಕ ಎತ್ತಿ, ಜಿಲ್ಲೆಯ ಕೊನೆಯ ಭಾಗದ ರೈತರಿಗೂ ತಲುಪವಂತೆ ನೋಡಿಕೊಳ್ಳಲು ಈ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿತು.
ಆದರೆ ಹಿರಾಕುಡ್ ಜಲಾಶಯದಿಂದ ೩ ಸಾವಿರ ಕಿ.ಮೀ. ಉದ್ದದ ಪೈಪ್‌ಲೈನ್ ಮೂಲಕ ರೈತರ ಭೂಮಿಗೆ ನೀರನ್ನು ಹರಿಸಬೇಕಾಗಿತ್ತು ಮತ್ತು ಇದಕ್ಕಾಗಿ ಇಡೀ ಪೈಪ್‌ಲೈನ್ ವ್ಯವಸ್ಥೆಯನ್ನು ಭೂಮಿಯ ಅಡಿಯಲ್ಲೇ ತೆಗೆದುಕೊಂಡು ಹೋಗಬೇಕಾಗಿತ್ತು. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆಯು ಅತ್ಯಂತ ಸವಾಲಿನದಾಗಿತ್ತು. ರೈತರು ಮೊದಮೊದಲು ಬಲವಾಗಿ ವಿರೋಧಿಸಿದರೂ, ಜನಹಿತ-ರೈತರ ಹಿತವನ್ನು ಕಾಪಾಡುವುದೇ ಇದರ ಉದ್ದೇಶ ಎಂಬುದನ್ನು ಅರಿತ ನಂತರ, ಭೂಮಿಯಾಳದಲ್ಲಿ ಬೃಹತ್ ಪೈಪುಗಳನ್ನು ಅಳವಡಿಸುವುದಕ್ಕೆ ಸಮ್ಮತಿಸಿದರು. ಸುಮಾರು ೨ ಮೀಟರ್ ಗಳಷ್ಟು ಆಳದಲ್ಲಿ ಪೈಪುಗಳನ್ನು ಅಳವಡಿಸುವುದನ್ನು ಪ್ರಾತ್ಯಕ್ಷಿಕೆಯಲ್ಲಿ ತೋರಿಸಲಾಯಿತು, ಜತೆಗೆ ರೈತರಿಗೆ ಅಗತ್ಯದ ಪರಿಹಾರಧನವನ್ನೂ ನೀಡಲಾಯಿತು. ಆದರೆ, ಅಗತ್ಯವಿದ್ದ ಕಬ್ಬಿಣ ಮತ್ತಿತರ ಸಾಮಗ್ರಿಗಳನ್ನು ಯೋಜನಾಸ್ಥಳಕ್ಕೆ ಸಾಗಿಸಲೂ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಯಿತು.
ನೀಲಿನಕ್ಷೆಯಂತೆ, ಬರಗಡ್‌ನಲ್ಲಿ ಅತಿದೊಡ್ಡ ಕಾಲುವೆ ಒಂದನ್ನು ಆರಂಭಿಸಿ, ಹಿರಾಕುಡ್ ನಿಂದ ಮುಂದಿನ ಹಂತಕ್ಕೆ ನೀರನ್ನು ಕಳುಹಿಸಲು ಒಂದು ಪಂಪಿಂಗ್ ಸ್ಟೇಷನ್ ಅನ್ನು ಆರಂಭಿಸಲಾಯಿತು. ಇಲ್ಲಿಂದ ಸುಮಾರು ೩೨ ಕಿ.ಮೀ. ಅಂತರದಲ್ಲಿ ಮತ್ತೊಂದು ಪಂಪಿಂಗ್ ಸ್ಟೇಷನ್ ಅನ್ನು ನಿರ್ಮಿಸಲಾಯಿತು. ಇಲ್ಲಿಂದ ೨೦ ಕಿ.ಮೀ. ಅಂತರದಲ್ಲಿ ೩ನೇ ಹಂತದ ಪಂಪಿಂಗ್ ಸ್ಟೇಷನ್ ನಿರ್ಮಿಸಿ ಅಲ್ಲಿಗೆ ನೀರನ್ನು ಹಾಯಿಸಲಾಯಿತು. ಹೀಗೆ ೫೦ ಕಿ.ಮೀ.ಗೂ ಹೆಚ್ಚು ದೂರಕ್ಕೆ ಮತ್ತು ಜಲಾಶಯದಿಂದ ಸುಮಾರು ೩೦-೩೫ ಮೀ. ಎತ್ತರದಲ್ಲಿರುವ ಭೂಪ್ರದೇಶಕ್ಕೆ ನೀರನ್ನು ಲಿಫ್ಟ್
ಮಾಡಲಾಯಿತು.
ಇದಕ್ಕಾಗಿ ಸಾಮಾನ್ಯ ಪೈಪುಗಳನ್ನು ಬಳಸುವಂತಿರಲಿಲ್ಲ. ನೀರಿನ ಒತ್ತಡ, ಸುಡುಬೇಸಗೆಯಲ್ಲಿ ಕಬ್ಬಿಣದ ಹಿಗ್ಗುವಿಕೆ ಮುಂತಾದ ಸವಾಲನ್ನು ಎದುರಿಸುವಿಕೆ ಹಾಗೂ ವಾತಾವರಣಕ್ಕೆ ಅದು ಪ್ರತಿಕ್ರಿಯಿಸಿ ತಕ್ಕುಹಿಡಿಯದಂತಿರಲು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳುವಿಕೆ
ಅಗತ್ಯವಾಯಿತು. ಇದಕ್ಕೆಂದೇ ವಿಶೇಷವಾಗಿ ತಾತ್ಕಾಲಿಕ ಕಾರ್ಖಾನೆಯೊಂದನ್ನು ನಿರ್ಮಿಸಿ ೩.೮ ಮೀ. ವ್ಯಾಸವುಳ್ಳ ಪೈಪುಗಳನ್ನು ರೂಪಿಸಲಾಯಿತು. ಗುಣಮಟ್ಟದ ‘ಜಾಯಿಂಟ್ ವೆಲ್ಡಿಂಗ್ ತಂತ್ರಜ್ಞಾನ’ವನ್ನು ಬಳಸಲಾಯಿತು. ಈ ಬೃಹತ್ ಯೋಜನೆಯ ಪೈಪುಗಳ ಜೋಡಣೆಗೆಂದು ೮೬,೫೦೦ ಮೆಟ್ರಿಕ್ ಟನ್ ಕಬ್ಬಿಣವನ್ನು ಬಳಸಲಾಯಿತು.
ಇದು ಫ್ರಾನ್ಸ್‌ನಲ್ಲಿನ ಐಫೆಲ್ ಟವರ್‌ಗೆ ಬಳಸಲಾದ ಪ್ರಮಾಣಕ್ಕಿಂತ (೭,೦೦೦ ಮೆಟ್ರಿಕ್ ಟನ್) ಹಲವು ಪಟ್ಟು ಹೆಚ್ಚು ಎಂಬುದನ್ನು ಗಮನಿಸಿದಾಗ, ಈ
ಯೋಜನೆಯ ಗಾತ್ರ ಮತ್ತು ಮಹತ್ವ ಅರಿವಾಗುತ್ತವೆ. ಇದಕ್ಕಾಗಿ ನವೀನ್ ಪಟ್ನಾಯಕ್ ನೇತೃತ್ವದ ತಂಡವು SZomZಛ್ಞ್ಚಿqs, Sಛ್ಚಿeಟ್ಝಟಜqs, SಛಿZಞ ಡಿಟ್ಟh, Sಜಿಞಛಿ Zb SZoಟ್ಟಞZಠಿಜಿಟ್ಞ ಎಂಬ ‘೫-S ಊಟ್ಟಞ್ಠ್ಝZ ವನ್ನು ಅಳವಡಿಸಿಕೊಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಅಂದುಕೊಂಡ ಸಮಯ ಹಾಗೂ ಯೋಜನಾವೆಚ್ಚವನ್ನು ಕೊಂಚವೂ ಹಿಗ್ಗಿಸುವಂತಿಲ್ಲ ಎಂಬ ಕಠಿಣ ನಿಯಮವನ್ನು ಸ್ವತಃ ಹೇರಿಕೊಂಡು ಈ ಯೋಜನೆಯನ್ನು ಪೂರ್ಣ ಗೊಳಿಸಲಾಯಿತು. ಹಾಗಂತ ಕೆಲಸ ಸುಸೂತ್ರವಾಗೇನೂ ಇರಲಿಲ್ಲ; ೮೬ಕ್ಕೂ ಹೆಚ್ಚು ಅತಿಕಠಿಣಅಡೆತಡೆಗಳು ನಿರ್ಮಾಣ ತಂಡಕ್ಕೆ ಎದುರಾದವು.
ಒಂದು ಪ್ರಮುಖ ರೈಲ್ವೇ ಟ್ರ್ಯಾಕ್, ೨೮ಕ್ಕೂ ಹೆಚ್ಚು ನದಿಗಳು, ಕಾಲುವೆಗಳು ಮತ್ತು ದೊಡ್ಡ ಡ್ರೈನೇಜ್ ಸೇರಿದಂತೆ ಸುಮಾರು ೫೩ ಪ್ರಮುಖ ರಸ್ತೆಗಳನ್ನು ದಾಟಿಹೋಗಬೇಕಿತ್ತು. ‘ಶುಭಕಾರ್ಯಗಳಿಗೆ ನೂರೆಂಟು ವಿಘ್ನ’ ಎಂಬಂತೆ, ವಿಶ್ವವನ್ನೇ ನಡುಗಿಸಿದ ಕೋವಿಡ್ ಪಿಡುಗು ಈ ಯೋಜನೆಯನ್ನೂ ಕಾಡಿತು. ಹೀಗಿದ್ದರೂ, ಕೇವಲ ೩ ವರ್ಷಗಳ ದಾಖಲೆ ಅವಧಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಈ ವರ್ಷದ ಫೆಬ್ರವರಿ ೨೦ರಂದು ಲೋಕಾರ್ಪಣೆ ಮಾಡಲಾಯಿತು. ತೆಲಂಗಾಣದ ಕಾಲೇಶ್ವರಂ ಯೋಜನೆಯಲ್ಲಿ ಬಳಸಲಾಗಿರುವ ಖಇಅಈಅ ಎಂಬ ಸ್ವಯಂಚಾಲಿತ ತಂತ್ರಜ್ಞಾನವನ್ನೂ ಈ ಏತ
ನೀರಾವರಿ ಯೋಜನೆಯಲ್ಲೂ ಬಳಸಲಾಗಿದ್ದು, ಇದಕ್ಕಾಗಿ ಬೃಹತ್ ವಿದ್ಯುತ್ ಸರಬರಾಜು ಕೇಂದ್ರಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಮೂಲಕ, ಬರಗಡ್ ಪ್ರದೇಶಕ್ಕೆ ವರ್ಷಪೂರ್ತಿ ಯಾವ ಅಡೆತಡೆಯಿಲ್ಲದೆ ವಿದ್ಯುತ್ ಮತ್ತು ನೀರು ಸಿಗುತ್ತಿದೆ.
ಈ ಮಹತ್ತರ ಯೋಜನೆಯನ್ನು ಸಾಕಾರಗೊಳಿಸಿದ್ದಕ್ಕಾಗಿ ಬರಗಡ್ ಜಿಲ್ಲೆಯ ಜನರು ಸಿಎಂ ನವೀನ್ ಪಟ್ನಾಯಕ್‌ರನ್ನು ಹೃದಯಪೂರ್ವಕವಾಗಿ ನೆನೆಯುತ್ತಾರೆ. ಇದಲ್ಲವೇ ಜನತೆ ಮತ್ತು ಆಡಳಿತ ಯಂತ್ರ ಪರಸ್ಪರ ಕೈಜೋಡಿಸಿ ಹೆಜ್ಜೆಹಾಕಬೇಕಾದ ಪರಿ?! ಈ ಯೋಜನೆಗೆ ಭ್ರಷ್ಟತೆಯ ಯಾವ ಕಳಂಕವೂ ಮೆತ್ತಿಕೊಳ್ಳಲಿಲ್ಲ, ಕಳಪೆ ಕಾಮಗಾರಿ ಇದರ ಹತ್ತಿರವೂ ಸುಳಿಯಲಿಲ್ಲ. ಉತ್ಕೃಷ್ಟ ಯಂತ್ರಗಳನ್ನು ಬಳಸುವಲ್ಲಿ ಯಾವ ಗೋಲ್‌ಮಾಲ್,
ಕಮಿಷನ್ ದಂಧೆ ನಡೆಯಲಿಲ್ಲ ಎಂಬುದು ಇಂದಿನ ಕಾಲದ ಅಚ್ಚರಿಗಳಲ್ಲೊಂದು!
ಉಪ್ಪಿನ ಸಮುದ್ರ ಮತ್ತು ಶತ್ರುದೇಶಗಳು ತನ್ನನ್ನು ಸುತ್ತುವರಿದಿದ್ದರೂ, ನೀರನ್ನು ಬಂಗಾರದಂತೆ ಸಮರ್ಥವಾಗಿ ಬಳಸುವ ಇಸ್ರೇಲ್‌ನಂಥ ದುರವಸ್ಥೆ ನಮ್ಮ ರಾಜ್ಯಕ್ಕಿಲ್ಲ. ತನ್ನ ಜನರಿಗಾಗಿ ಎಂಥದ್ದೇ ಯೋಜನೆಗಳನ್ನು ರೂಪಿಸಬಲ್ಲೆ ಎಂದು ಹೊರಡುವ ಚೀನಾಕ್ಕೆ ಎದುರಾಗುವ ಬಗೆಹರಿಯದ ಸಮಸ್ಯೆ ಗಳು ಕರ್ನಾಟಕದ ನೀರಾವರಿ ಯೋಜನೆಗಳಿಗಿಲ್ಲ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಸುನಾಮಿ, ಚಂಡಮಾರುತ ದಂಥ ಅನಾಹುತಗಳಾಗುವ ಒಡಿಶಾ ದಂತಿಲ್ಲ ಕರ್ನಾಟಕ. ಆದರೆ ನಮ್ಮಲ್ಲಿ ಹಮ್ಮಿಕೊಂಡ ನೀರಾವರಿ ಯೋಜನೆಗಳು ದಶಕಗಳು ಕಳೆದರೂ ಸರಕಾರಿ ಕಚೇರಿಗಳಲ್ಲೇ ಒಣಗುತ್ತಿವೆ!
ಇಂಥ ದುಸ್ಥಿತಿಯಿಂದ ಹೊರಬರಲು, ನಮ್ಮ ಜನರೇ ಬುದ್ಧಿವಂತಿಕೆಯಿಂದ ‘ಕಳೆ’ಯನ್ನು ಕಿತ್ತೆಸೆಯಬೇಕು. ಇಲ್ಲವಾದಲ್ಲಿ ಈ ತುಕ್ಕುಹಿಡಿದಿರುವ ವ್ಯವಸ್ಥೆ ಎಂದೂ ಬದಲಾಗದು ಎಂಬುದನ್ನು ಜನಸಾಮಾನ್ಯರೂ ಅರಿಯಬೇಕು.