Thursday, 19th September 2024

ಕೈ ಮುಗಿಯಬೇಕಾ, ಪ್ರಶ್ನಿಸಬೇಕಾ ?

ಶಿಕ್ಷಣ ಸಂಹಿತೆ

ಡಾ.ಸಿ.ಜೆ.ರಾಘವೇಂದ್ರ ವೈಲಾಯ

ಗುರುಹಿರಿಯರಿಗೆ ಕೈ ಮುಗಿಯುವುದು ಈ ನೆಲದ ಮೂಲ ಸಂಸ್ಕೃತಿ. ವಸಾಹತುಶಾಹಿ ಆಂಗ್ಲರ ಮಾನಸಪುತ್ರರಿಂದ ನಮಗೆ ಗುಲಾಮಿತನದ ಪಾಠ ಬೇರೆ ಕೇಡು. ಗುರುಗಳ ಋಣವನ್ನು ತೀರಿಸಲಾದೀತೇ? ಕೈ ಮುಗಿಯುವುದು ಆ ಕೃತಜ್ಞತಾ ಭಾವದ ದ್ಯೋತಕ. ಮೊಸರಿನಲ್ಲಿ ಕಲ್ಲು ಹುಡುಕುವ ವಿಕೃತ ಮಾನಸಿಕತೆಗೆ ಏನೆನ್ನುವುದು?

ಇತ್ತೀಚೆಗೆ ರಾಜ್ಯ ಸರಕಾರವು ಮಾಡಿದ ಎಡವಟ್ಟುಗಳು ಒಂದೇ ಎರಡೇ? ಸುಮ್ಮನಿರಲಾರದೆ ಇರುವೆ ಬಿಟ್ಟು ಕೊಂಡನಂತೆ ಎಂಬ ನಾಣ್ಣುಡಿಯನ್ನು ಹಿರಿಯರು ಇವರಿಗೆಂದೇ ಹೇಳಿದಂತಿದೆ. ಮಾತು ಮತ್ತು ಮುತ್ತು ಉದುರಿದರೆ ಒಡೆದೇಹೋಯ್ತು. ಆಮೇಲೆ ಏನೇ ತಿಪ್ಪೆ ಸಾರಿಸಿದರೂ  ಅಷ್ಟೇ, ತಿಪ್ಪರಲಾಗ ಹಾಕಿದರೂ ಅಷ್ಟೇ. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ಹೆಚ್ಚಿನ ಸರಕಾರಿ ವಸತಿ ಶಾಲೆಗಳಲ್ಲಿ  ‘ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಕುವೆಂಪು ಪ್ರೇರಿತ ಘೋಷವಾಕ್ಯವನ್ನು ಬರೆಯಲಾಗಿತ್ತು. ರಾತ್ರೋರಾತ್ರಿ ಎಂಬಂತೆ ಇದನ್ನು ಬದಲಿಸಿ ‘ಜ್ಞಾನದೇಗುಲವಿದು, ಧೈರ್ಯ
ವಾಗಿ ಪ್ರಶ್ನಿಸಿ’ ಎಂದು ತಿದ್ದಿ ಬರೆಸಲಾಯ್ತು.

ಇದು ಯಾವ ಪುರುಷಾರ್ಥಕ್ಕೆ? ಕೈ ಮುಗಿಯುವುದು ಗುಲಾಮಿತನದ ಮಾನಸಿಕತೆ ಎನ್ನು ವುದು ಇವರ ಗೊಡ್ಡು ವಾದ. ಗುರುಹಿರಿಯರಿಗೆ ಕೈ ಮುಗಿಯು ವುದು ಈ ನೆಲದ ಮೂಲ ಸಂಸ್ಕೃತಿ. ವಸಾಹತುಶಾಹಿ ಆಂಗ್ಲರ ಮಾನಸಪುತ್ರರಿಂದ ನಮಗೆ ಗುಲಾಮಿತನದ ಪಾಠ ಬೇರೆ ಕೇಡು. ಗುರುಗಳ ವಿದ್ಯಾ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಕೈ ಮುಗಿಯುವುದು ಕೇವಲ ಆ ಕೃತಜ್ಞತಾ ಭಾವದ ದ್ಯೋತಕ. ಮೊಸರಿನಲ್ಲಿ ಕಲ್ಲು ಹುಡುಕುವಂತೆ ಅದರಲ್ಲೂ ತಪ್ಪನ್ನು ಕಾಣುವ ವಿಕೃತ ಮಾನಸಿಕತೆಗೆ ಏನೆಂದು ಹೇಳೋಣ? ವಿದ್ಯೆಯನ್ನು ನಿಸ್ವಾರ್ಥವಾಗಿ ಕಲಿಸುವ ಗುರುಗಳಿಗೆ ನಮಿಸುವುದೂ ಗುಲಾಮ
ಗಿರಿಯ ಸಂಕೇತವಾದರೆ, ಸರಕಾರಿ ಅಧಿಕಾರಿಗಳು ರಾಜಕಾರಣಿ ಗಳಿಗೆ ಹೊಡೆಯುವ ಡೊಗ್ಗು ಸಲಾಮಿಗೆ ಏನು ಹೇಳುವಿರಿ? ಶಾಲೆಯೆಂದರೆ ಅದು ಸರಸ್ವತಿಯ ದೇಗುಲವಲ್ಲವೇ? ಆ ಗೌರವ ಪರೋಕ್ಷವಾಗಿ ಸಲ್ಲುವುದು ಗುರುವಿನ ಸ್ಥಾನಕ್ಕೆ.

‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ’ ಎಂದರು ಪುರಂದರದಾಸರು. ‘ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ’ ಎಂದು ಉದ್ಘೋಷಿಸಿದ ಪರಂಪರೆ ನಮ್ಮದು. ಗುರುವಂದನೆ ಈ ನೆಲದ ಪರಂಪರೆಯ ಅವಿಭಾಜ್ಯ ಅಂಗ. ಕುವೆಂಪು ಪ್ರೇರಿತ ಘೋಷವಾಕ್ಯವನ್ನು ತಮಗೆ ತೋಚಿದಂತೆ ಏಕಪಕ್ಷೀಯವಾಗಿ ತಿರುಚಿ ಬರೆಸಲು ಕಾರಣವಾದರೂ ಏನು? ಇಂಥ ಧಾರ್ಷ್ಟ್ಯದ ಮೂಲವೆಲ್ಲಿ? ಗುರುಗಳ ಮಾತೇ ವೇದ ವಾಕ್ಯವೆಂದು ನಂಬುವ ಮುಗ್ಧ ಮಕ್ಕಳಿಗೆ ನಾವು ಕೊಡಬಯಸುವ ಮಾದರಿಯಾದರೂ ಏನು? ಗುರು-ಶಿಷ್ಯರ ಪವಿತ್ರ ಸಂಬಂಧದ ಹಿನ್ನೆಲೆಯಿರುವ ನಮ್ಮ ದೇಶದಲ್ಲಿ ಇಂಥ ವರ್ತನೆ ಮೆರೆಯುವುದು ಆ ಸಂಬಂಧವನ್ನೇ ಹಾಳುಗೆಡಹುವ ಹುನ್ನಾರವಲ್ಲವೇ? ಈಗ ಎಡಪಂಥೀಯರು, ನಗರ ನಕ್ಸಲರು, ದೇಶ ಭಂಜಕ
ರೆಲ್ಲಾ ಸೇರಿಕೊಂಡು ಗಾಂಧಿ, ಅಂಬೇಡ್ಕರ್, ಕುವೆಂಪು, ಬುದ್ಧ, ಬಸವಣ್ಣ ಮೊದಲಾದವರ ವಿಚಾರಗಳನ್ನು ಹೈಜಾಕ್ ಮಾಡಿ ತಾವೇ ಅದರ ಆಜೀವ ಗುತ್ತಿಗೆದಾರರು ಎಂಬಂತೆ ವರ್ತಿಸುತ್ತಿದ್ದಾರೆ.

ಖಛ್ಝಿಛ್ಚಿಠಿಜಿqಛಿ ಜ್ಞಿಠಿಛ್ಟಿmಛಿಠಿZಠಿಜಿಟ್ಞ, ಞಜಿoಛಿmಛಿoಛ್ಞಿಠಿZಠಿಜಿಟ್ಞ, eಛ್ಟ್ಟಿqs mಜ್ಚಿhಜ್ಞಿಜ ಮತ್ತು ತಮ್ಮ ಮೂಗಿನ ನೇರಕ್ಕೆ ಫೇಕ್ ನರೇಟಿವ್ ಹುಟ್ಟು ಹಾಕುವುದರಲ್ಲಿ ಇವರು ಸಿದ್ಧಹಸ್ತರು. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಇವರದ್ದೇ ಕಾರುಬಾರು. ಈ ನಕಲಿ ಏಜೆಂಟರೆಲ್ಲಾ ಒಟ್ಟಾಗಿ ಅಸಲಿ ಹೋರಾಟಗಾರರನ್ನೇ ಈಗ ಮೂಲೆಗುಂಪು ಮಾಡಿಬಿಟ್ಟಿದ್ದಾರೆ. ದಲಿತ ಚಳವಳಿ, ರೈತ ಆಂದೋಲನ, ಮಹಿಳಾ ಪರ ಹೋರಾಟಗಳನ್ನೂ ಪುಢಾರಿಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕೇಡುಗಾಲದಲ್ಲಿ ನಾವಿದ್ದೇವೆ. ನಮ್ಮೆದುರು ಬರಗಾಲ, ಹಣದುಬ್ಬರ, ಅನಾರೋಗ್ಯ, ನಿರುದ್ಯೋಗದಂಥ ಹಲವು ಗಂಭೀರ ಸಮಸ್ಯೆಗಳಿರುವಾಗ ಇಂಥದೊಂದು ಕ್ಷುಲ್ಲಕ ನಿರ್ಧಾರ ಕೈಗೊಂಡಿದ್ದು ಅಕ್ಷಮ್ಯ.

ಐ qsಟ್ಠ Z’ಠಿ ಟ್ಞqಜ್ಞ್ಚಿಛಿ, oಠಿ ಟ್ಞ್ಛ್ಠoಛಿ ಎನ್ನುವುದು ಒಂದು ಪ್ರಸಿದ್ಧ ರಾಜಕೀಯ ತಂತ್ರ. ಇದು ಪ್ರಜಾಪ್ರಭುತ್ವದ ಮೂಲ ಆಶಯವನ್ನೇ ಅಣಕಿಸು ವಂತಿದೆ. ಪ್ರಶ್ನಿಸುವುದೇ ಭಾರತೀಯ ಪರಂಪರೆಯ ಮೂಲತತ್ವ. ಸೂರ್ಯನಿಗೆ ಬೆಳಗುವುದನ್ನು ಇನ್ಯಾರೋ ಕಲಿಸಬೇಕಿಲ್ಲ. ನಮ್ಮಲ್ಲಿ ಪ್ರಶ್ನೋಪನಿಷತ್ ಎಂಬುದೊಂದಿದೆ. ಗುರು-ಶಿಷ್ಯ, ತಂದೆ-ಮಕ್ಕಳ ಸಂವಾದಗಳೇ ಈ ಸಂಸ್ಕೃತಿಯ ಜೀವಾಳ. ಹೊಸ ವಿಚಾರವೊಂದು ಹುಟ್ಟೋದೇ ಹೀಗೆ. ಡಾಂಭಿಕ ಆಚರಣೆಗಳನ್ನು ಪ್ರಶ್ನಿಸಿದ ಬಸವಣ್ಣನವರ ತವರೂರಿದು. ದ್ವೈತ, ಅದ್ವೈತ, ವಿಶಿಷ್ಟಾದ್ವೈತಾದಿ ಮತಗಳೂ, ಎಲ್ಲಾ ಭಾರತೀಯ ದರ್ಶನಗಳೂ ಹುಟ್ಟಿ ಕೊಂಡಿದ್ದೇ ಈ ಜಿಜ್ಞಾಸೆಯಿಂದ. ರಾಮಾಯಣಾದಿ ಅಷ್ಟಾದಶ ಪುರಾಣಗಳು ಗುರು-ಶಿಷ್ಯರ ಸಂವಾದದ ರೂಪದಲ್ಲೇ ಇವೆ.

ಸೆಮೆಟಿಕ್ ಮತಗಳಲ್ಲಿರುವಂತೆ ದೇವದೂತರ ಆದೇಶ ಗಳನ್ನು ಪ್ರಶ್ನೆ ಮಾಡದೇ ಒಪ್ಪುವ ಪರಿಪಾಠ ನಮ್ಮಲ್ಲಿ ಇಲ್ಲ. ಭಾರತವು ಸತ್ಯಶೋಧಕರ ತಾಯ್ನಾಡು. ತನ್ನ ಗುರು ರಾಮಕೃಷ್ಣರನ್ನು ಪ್ರಶ್ನೆ ಮಾಡಿದ ನರೇಂದ್ರನನ್ನು ‘ಸ್ವಾಮಿ ವಿವೇಕಾನಂದ’ರನ್ನಾಗಿ ಬೆಳೆಸಿದ ಪುಣ್ಯಭೂಮಿಯಿದು. ತಂದೆ
ಯನ್ನೇ ಪ್ರಶ್ನಿಸಿದವನು ಪ್ರಹ್ಲಾದ, ಯಮನಿಗೇ ಪ್ರಶ್ನೆ ಕೇಳಿದವನು ನಚಿಕೇತ. ರಾಮರಾಜ್ಯದಲ್ಲಿ ರಾಮನಂಥ ರಾಜನನ್ನೇ ಪ್ರಶ್ನಿಸಿದ ಸಾಮಾನ್ಯ ಪ್ರಜೆಗಳಿದ್ದರು. ಹೆಚ್ಚೇಕೆ, ದೇವರನ್ನೇ ಪ್ರಶ್ನೆ ಮಾಡಿದ ಅರ್ಜುನನ ತವರುನೆಲವಿದು. ಅದರಿಂದಲೇ ಮೂಡಿಬಂದಿದ್ದು ಭಗವದ್ಗೀತೆಯೆಂಬ ಅಮೃತ.
ಮಂಡನಮಿಶ್ರ ಮತ್ತು ಶಂಕರರ ನಡುವಿನ ಸಂವಾದವು ಎಲ್ಲಾ ರೀತಿಯ ತಾತ್ವಿಕ ಚರ್ಚೆಗಳ ಮತ್ತು ಪ್ರಶ್ನೋತ್ತರಗಳ ಪರಮೋಚ್ಚ ಮಾದರಿ ಎಂದರೆ ತಪ್ಪಾಗಲಾರದು. ಹೀಗಿರುವಾಗ, ಪ್ರಶ್ನೆ ಮಾಡಿರೆಂದು ನಮಗೇ ಹೇಳಿಕೊಡುವ ಪ್ರಭೃತಿಗಳು ಅದೆಲ್ಲಿಂದ ಬಂದರೋ ಏನೋ? ನಿಜವಾಗಿಯೂ ಈ ನವ ಘೋಷವಾಕ್ಯ ವನ್ನು ಬರೆಸಬೇಕಾಗಿರುವುದು ಏಕದೇವರನ್ನು ಪ್ರಶ್ನಾತೀತವಾಗಿ ನಂಬುವಂತೆ ಬೋಧಿಸುವ ಶಾಲೆಗಳಲ್ಲಿ.

೨೧ನೇ ಶತಮಾನದಲ್ಲೂ ಭೂಮಿ ಚಪ್ಪಟೆಯಾಗಿದೆ ಎಂದು ನಂಬುವವರಿಗೆ ಹೀಗೆ ಹೇಳುವ ಧೈರ್ಯ ನಿಮಗುಂಟೇ? ದೇವರೇ ಇಲ್ಲವೆಂದ  ಚಾರ್ವಾಕ ನನ್ನೂ ಗುರುವೆಂದು ಗೌರವಿಸಿದ ಸಹಿಷ್ಣುಗಳು ನಾವು. ಯಾರೂ ಆತನಿಗೆ ‘ಸರ್ ತನ್ ಸೇ ಜುದಾ’ ಎನ್ನಲಿಲ್ಲ. ಪ್ರಶ್ನೆ ಮಾಡುವುದೇ ವಿಜ್ಞಾನ ವಿಕಸನದ ಮೂಲ, ಹೌದು. ಆದರೆ ಅಂದು ಹೀಗೆ ಪ್ರಶ್ನೆ ಮಾಡಿದ ಸಾಕ್ರೆಟಿಸನ ಗತಿ ಏನಾಯ್ತು? ಸಲ್ಮಾನ್ ರಶ್ದಿ ಹಾಗೂ ತಸ್ಲೀಮಾ ನಸ್ರೀನ್ ಪುಟ್ಟ ಪಾಡೇನು? ಕೈ ಕಟ್, ಬಾಯ್ ಮುಚ್!

ಈ ಹಿಂದೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥರವರು ಹಿಂದೆಂದೋ ಫಾರ್ವರ್ಡ್ ಮಾಡಿದ್ದರೆನ್ನಲಾದ ಪೋಸ್ಟ್ ಒಂದನ್ನು ನೆಪಮಾತ್ರಕ್ಕೆ ಮುಂದಿಟ್ಟುಕೊಂಡು ಕುವೆಂಪುಗೆ ಅವಮಾನವಾಯಿತೆಂದು ಮಾಧ್ಯಮಗಳ ಮೂಲಕ ವಿವಾದವೆಬ್ಬಿಸಿ ಅವರ ರಾಜೀನಾಮೆ ಯನ್ನು ಕೇಳಿದವರು ಈಗ ಯಾರ ತಲೆದಂಡವನ್ನು ಬಯಸುತ್ತಾರೆ? ಇದು ಕುವೆಂಪುರವರಿಗೆ ಮಾಡಿದ ಅವಮಾನವಲ್ಲವೇ? ಪದೇ ಪದೆ ಸೈದ್ಧಾಂತಿಕ ದ್ವಂದ್ವಗಳನ್ನು ಹುಟ್ಟು ಹಾಕಿ ಆ ಮೂಲಕ ಜನರನ್ನು ವಿಭಜಿಸಿ, ಅವರ ಗಮನವನ್ನು ಬೇರೆಡೆಗೆ ಸೆಳೆದು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಯತ್ನಿಸುವವರ ನಿರ್ಲಜ್ಜ ಪ್ರಯತ್ನವಿದು.

ಒಡೆದು ಆಳುವ ಬ್ರಿಟಿಷರ ಮೂಲ ಸಿದ್ಧಾಂತವನ್ನು ಅವರಿಗಿಂತಲೂ ಚೆನ್ನಾಗಿ ಅಳವಡಿಸಿಕೊಂಡವರು ನಮ್ಮ ರಾಜಕಾರಣಿಗಳು. ಇದು ಕೇವಲ ಕಣ್ತಪ್ಪಿ ನಿಂದಾದ ಅಚಾತುರ್ಯ ಎನಿಸುತ್ತಿಲ್ಲ; ಸನಾತನ ಸಂಸ್ಕೃತಿಯ ಸೊಗಡನ್ನು ಸಾರುವ ಎಲ್ಲಾ ಸಂಕೇತಗಳನ್ನು ಒಂದೊಂದಾಗಿ ಅಳಿಸುವುದೇ ಇವರ ಮೂಲ ಉದ್ದೇಶ ಇದ್ದಂತಿದೆ.

ಧೈರ್ಯವಾಗಿ ಪ್ರಶ್ನಿಸಿ ಎಂದು ನಮ್ಮ ಮಕ್ಕಳಿಗೆ ಹೇಳ ಬಂದವರು ತಾವು ಮಾತ್ರ ಈಗ ಪ್ರಶ್ನೆಗಳಿಗೆ ಅತೀತರಾಗಿ ಬಿಟ್ಟಿದ್ದಾರೆ. ‘ಕೊಂದ ಪಾಪ ತಿಂದು ಪರಿಹಾರ’ ಎಂಬಂತೆ ಈಗ ಸಮಜಾಯಿಷಿ ಬೇರೆ ಕೇಡು. ಇದಕ್ಕಿಂತ ಹೆಚ್ಚಿನ ಆಷಾಢಭೂತಿತನವನ್ನು ಇನ್ನೆಲ್ಲಿ ಕಂಡೇವು? ಇಲ್ಲಿ ಪ್ರಶ್ನಾತೀತರು ಯಾರೂ ಇಲ್ಲ. ನಮ್ಮ ಪ್ರಶ್ನೆ ಇರೋದು ಇಷ್ಟೇ, ಜಿಜ್ಞಾಸೆಯ ಪ್ರಶ್ನೆಗೂ ಮೊಂಡುತನದ ಪ್ರಶ್ನೆಗೂ ವ್ಯತ್ಯಾಸ ಇಲ್ಲವೇ? ನಮ್ಮ ಮಕ್ಕಳು ಎಂಥವರಾಗ ಬೇಕು, ಆಯ್ಕೆ ನಮ್ಮ ಮುಂದಿದೆ. ‘ಯಥಾ ರಾಜ, ತಥಾ ಪ್ರಜಾ’. ಎಂತು ಜನರೋ ಅಂತೆಯೇ ಸರಕಾರ. ಪ್ರಜ್ಞಾವಂತರ ನಾಡೆಂದು ‘ಕವಿರಾಜಮಾರ್ಗ’ದಲ್ಲಿ ಹೊಗಳಿಸಿ ಕೊಂಡ ಕರುನಾಡಿನ ದೌರ್ಭಾಗ್ಯ ನೋಡಿ.

ನಮ್ಮ ಸಂವಾದದ ಸ್ತರ ಈಗ ಎಷ್ಟು ಕುಸಿದಿದೆ ಎನ್ನುವುದಕ್ಕೆ ನಮ್ಮ ಚರ್ಚಾ ವಿಷಯಗಳ ಈ ಆಯ್ಕೆಯೇ ಸಾಕ್ಷಿ. ಸಂವಾದಗಳ ಬದಲು ವಿವಾದಗಳತ್ತಲೇ ಇವರ ಚಿತ್ತ ಇದೆ. ಇನ್ನಾದರೂ ಇಂಥ ಮೂಢಮತಿಗಳನ್ನು ಜವಾಬ್ದಾರಿಯುತ ಸ್ಥಾನಗಳಿಗೆ ನಿಯೋಜಿಸದೇ ಇರುವುದು ಒಳ್ಳೆಯದು. ತಪ್ಪು ಮಾಡುವು ದೇನೂ ತಪ್ಪಲ್ಲ.  ಆದರೆ ಅದನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುವುದಿದೆಯಲ್ಲ, ಅದು ಘೋರ ಅಪರಾಧ. ಇಂಥದೊಂದು ಶುಷ್ಕ ವಿವಾದ ಎದ್ದಿರುವುದೇ ಕರುನಾಡಿನ ದುರಂತ. ಬನ್ನಿ, ಈ ಆಷಾಢಭೂತಿತನವನ್ನು ಕೂಡಾ ಧೈರ್ಯವಾಗಿ ಪ್ರಶ್ನಿಸೋಣ.

ಈಗ ನಮ್ಮ ವಿದ್ಯಾರ್ಥಿಗಳನ್ನು ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ಏನು ಗೊತ್ತೇ? ನಾವು ಮೊದಲು ಕೈ ಮುಗಿಯಬೇಕಾ, ಇಲ್ಲಾ ಪ್ರಶ್ನೆ ಮಾಡಬೇಕಾ? ಅಥವಾ ಕೈ ಮುಗಿದು ಒಳಗೆ ಬಂದ ನಂತರ ಪ್ರಶ್ನೆ ಮಾಡಬೇಕಾ? ಅಂತ. ಲೋಕಸಭಾ ಚುನಾವಣೆ ಇನ್ನೇನು ಬಂದೇಬಿಟ್ಟಿತು. ಪ್ರಶ್ನೆ ನಮ್ಮದು, ಉತ್ತರ ನಿಮ್ಮದು. ಹೋಯ್, ಪ್ರಶ್ನೆ ಕೇಳೋದು ಮಾತ್ರ ಮರೀಬೇಡಿ ಮಾರಾಯ್ರೇ…!

(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)

Leave a Reply

Your email address will not be published. Required fields are marked *