Friday, 13th December 2024

ನಿಮ್ಮನ್ನೂ ಅಪಶಕುನವೆಂದು ನಿಂದಿಸಿದರೆ ಹೇಗೆ ?

ವೀಕೆಂಡ್ ವಿತ್ ಮೋಹನ್

camohanbn@gmail.com

ಸಾಧಕರನ್ನು ಎದುರಿಸಲಾಗದ ವಿರೋಧಿಗಳ ಕೊನೆಯ ಅಸ ‘ಚಾರಿತ್ರ್ಯಹರಣ’. ಗುಜರಾತಿನಲ್ಲಿ ನಡೆಯುತ್ತಿದ್ದ ಚುನಾ ವಣಾ ಸಭೆಯೊಂದರಲ್ಲಿ ಸೋನಿಯಾ ಗಾಂಧಿಯವರು ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. ಹೀಗೆಯೇ ಕಾಂಗ್ರೆಸ್‌ನ ಅನೇಕ ನಾಯಕರು ಮೋದಿಯವರನ್ನು ಜರಿದಿದ್ದಿದೆ.

ನೈತಿಕತೆಯಿಂದ ಕೂಡಿದ ರಾಜಕೀಯ ಟೀಕೆಗಳು ಇತ್ತೀಚೆಗೆ ಕಾಣೆಯಾಗತೊಡಗಿವೆ. ಅಭಿವೃದ್ಧಿ ಸಂಬಂಧಿತ ಚರ್ಚೆಗಳನ್ನು  ಮುನ್ನೆಲೆಗೆ ತಂದು ಮತ ಕೇಳುವ ಬದಲು, ನಾಲಗೆಯ ಮೇಲೆ ಹಿಡಿತವಿಲ್ಲದಂತೆ ವಿರೋಧಿಗಳನ್ನು ಟೀಕಿಸಿ ಕಾರ್ಯಸಾಧಿಸುವ  ಚಾಳಿ ಕಂಡು ಬರುತ್ತಿದೆ. ಎಂಬಿಎ ಮಾಡಿದ ರಾಜಕೀಯ ಸಲಹೆಗಾರರು ಚುನಾವಣಾ ಮಾರ್ಕೆಟಿಂಗ್ ನಿರೂಪಣೆಯ ಕೆಲಸಕ್ಕೆ ಇಳಿದ ಮೇಲೆ, ನಾಲಗೆಯ ಮೇಲೆ ಹಿಡಿತವಿಲ್ಲದ ಮಾತುಗಳು ಹೆಚ್ಚಾಗಿವೆ.

ತಲೆಯಲ್ಲಿ ಮೂರು ಕಾಸಿನ ವಿದ್ಯೆಯಿಲ್ಲದವರು ಆರೋಗ್ಯಕರ ಚರ್ಚೆಗಳ ಮೂಲಕ ರಾಜಕೀಯ ಎದುರಾಳಿಗಳನ್ನು ಎದುರಿಸ ಲಾಗದೆ, ಚುನಾವಣಾ ಮಾರ್ಕೆಟಿಂಗ್ ಸಲಹೆಗಾರರ ಆಜ್ಞೆಯ ಮೇರೆಗೆ ತೀರಾ ಕೆಳಮಟ್ಟದ ರಾಜಕೀಯ ಮಾಡುತ್ತಿರು ವುದು ಭಾರತದ ವಿಪರ್ಯಾಸ. ‘ಕೈಲಾಗದವನು ಮೈ ಪರಚಿಕೊಂಡನಂತೆ’ ಎಂಬ ಮಾತಿನಂತೆ, ಸತತ ಸೋಲುಗಳ ಹತಾಶೆಯಿಂದ ಹೊರಬರಲು ಬಾಯಿಗೆ ಬಂದಂತೆ ಮಾತನಾಡುವ ಚಾಳಿ ಕಾಂಗ್ರೆಸಿಗರಲ್ಲಿ ಹೆಚ್ಚಾಗಿದೆ. ಭಾರತ ಕ್ರಿಕೆಟ್ ತಂಡವು ೨೦೨೩ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನಪ್ಪಿದ ಸಂದರ್ಭದಲ್ಲೂ ರಾಜಕೀಯ ಹುಡುಕಿದ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರು, ‘ನರೇಂದ್ರ ಮೋದಿಯವರು ಅಪಶಕುನ ಇದ್ದ ಹಾಗೆ.

ಅವರು ಅಹಮದಾಬಾದಿನ ಕ್ರೀಡಾಂಗಣಕ್ಕೆ ಬಂದ ಕಾರಣದಿಂದ ಭಾರತ ಸೋತಿತು’ ಎಂಬ ಕೆಳಮಟ್ಟದ ಮಾತುಗಳನ್ನಾಡಿ ದ್ದರು. ಗೆಲುವಿನಲ್ಲಿ ಸಂಭ್ರಮಿಸುವವರ ಜತೆಗಿರುವವನಿಗಿಂತಲೂ, ಸೋಲಲ್ಲಿ ಆಟಗಾರರ ಹೆಗಲಿಗೆ ನಿಲ್ಲುವಾತ ನಿಜವಾದ ನಾಯಕ. ನಾಲಗೆಯ ಮೇಲೆ ಹಿಡಿತವಿಲ್ಲದೆ ಆಡುವ ಮಾತುಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರಿಗೆ ಧಕ್ಕೆಯಾ
ಗುತ್ತದೆಯೆಂಬ ಸಾಮಾನ್ಯ ಜ್ಞಾನವಿಲ್ಲದವರನ್ನು ಪ್ರಧಾನ ಮಂತ್ರಿ ಮಾಡಲು ಹೊರಟಿದೆ ಕಾಂಗ್ರೆಸ್. ಭಾರತದ ಸೋಲನ್ನು ಅಣಕಿಸಿ ರಾಜಕೀಯ ಮಾಡುವ ವ್ಯಕ್ತಿ ಈ ದೇಶದ ಪ್ರಧಾನಮಂತ್ರಿಯಾಗಬೇಕಂತೆ.

ರಾಹುಲರು ಹೇಳಿದ್ದು ನಿಜವಾದರೆ, ೧೯೭೫ರಲ್ಲಿ ಭಾರತ ವಿಶ್ವಕಪ್ ಸೋತಾಗ ಅವರ ಅಜ್ಜಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿ ಯಾಗಿದ್ದರು. ಹೀಗೆಯೇ ಸೋತ ವರ್ಷಗಳಾದ ೧೯೯೨ ಮತ್ತು ೧೯೯೬ರಲ್ಲಿ ಕಾಂಗ್ರೆಸ್‌ನ ಪಿ.ವಿ.ನರಸಿಂಹರಾವ್, ೨೦೦೭ ರಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾಗಿದ್ದರು. ಕಾಂಗ್ರೆಸ್‌ನ ಪ್ರಧಾನಿಗಳ ಅವಧಿಯಲ್ಲಿ ಭಾರತ ಹೆಚ್ಚು ಸಲ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿತ್ತು. ಹಾಗಂತ ‘ಇವರುಗಳೇ ಭಾರತದ ಸೋಲಿನ ಹಿಂದಿನ ಅಪಶಕುನ’ ಅಂತ ಯಾರೂ ಟೀಕಿಸಿರಲಿಲ್ಲ. ರಾಹುಲರು ಹುಟ್ಟಿದ ನಂತರ ಅಜ್ಜಿ ಇಂದಿರಾ ಮತ್ತು ಅಪ್ಪ ರಾಜೀವರು ತೀರಿಹೋದರು; ಹಾಗಂತ ರಾಹುಲರ ಅಪಶಕುನದ ಕಾಲ್ಗುಣದಿಂದ ಅವರು ಸತ್ತರು ಎನ್ನುವುದು ಸರಿಯಲ್ಲ.

ಪ್ರಧಾನ ಮಂತ್ರಿಯಾಗುವ ಆಸೆಯಿಟ್ಟುಕೊಂಡಿರುವ ವ್ಯಕ್ತಿಗೆ ರಾಜಕೀಯ ಪ್ರೌಢಿಮೆ ಇರಬೇಕು. ಆದರೆ ಅದಿಲ್ಲದ ರಾಹುಲರನ್ನು ಪ್ರಧಾನಿಯನ್ನಾಗಿ ಮಾಡಲು ಪುತ್ರವ್ಯಾಮೋಹಿ ಸೋನಿಯಾ ಗಾಂಧಿಯವರು ೨೫ ವರ್ಷಗಳಿಂದ ಯತ್ನಿಸುತ್ತಿದ್ದಾರೆ.  ಮಾರ್ಕೆ ಟಿಂಗ್ ಸಲಹೆಗಾರರ ಮಾತು ಕೇಳಿ ರಾಹುಲರ ವೇಷಭೂಷಣಗಳನ್ನು ಬದಲಾಯಿಸಲಾಯಿತು. ರಾಜೀವರ ವಿದೇಶಿ ಮಿತ್ರ ಸ್ಯಾಮ್ ಪಿತ್ರೋಡಾರ ಮೂಲಕ ವಿದೇಶಗಳಲ್ಲಿ ರಾಹುಲರ ಭಾಷಣಗಳನ್ನು ಆಯೋಜಿಸುವ ಪ್ರಯತ್ನ ನಿರಂತರವಾಗಿ ನಡೆಯು
ತ್ತಿದೆ. ಸಣ್ಣ ಸಣ್ಣ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳನ್ನೂ ಉತ್ತರಿಸಲಾಗದ ರಾಹುಲರು ತಮ್ಮ ಮಾತಿನಿಂದಾಗಿ ನಗೆಪಾಟಲಿಗೆ ಗುರಿಯಾಗಿದ್ದಾರಷ್ಟೇ!

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳೆ ರಾಹುಲರ ಅಕ್ಕ ಪ್ರಿಯಾಂಕಾ ವಾದ್ರಾ ಪ್ರಚಾರ ಮಾಡಿದ ಅಷ್ಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತ್ತು. ಒಂದು ಕಾಲದಲ್ಲಿ ಉತ್ತರ ಪ್ರದೇಶದ -ಲ್‌ಪುರ ಕ್ಷೇತ್ರದಿಂದ ನೆಹರು ೩ ಬಾರಿ ಗೆದ್ದು ಪ್ರಧಾನಮಂತ್ರಿಯಾಗಿದ್ದರು. ಇಂದಿರಾ ಗಾಂಧಿ ರಾಯ್‌ಬರೇಲಿ ಕ್ಷೇತ್ರದಿಂದ ಸತತವಾಗಿ ಗೆದ್ದು ಪ್ರಧಾನಿ ಗದ್ದುಗೆ  ಹಿಡಿದಿದ್ದರು. ರಾಜೀವ್ ಗಾಂಧಿಯವರು ಅಮೇಥಿ ಕ್ಷೇತ್ರದಿಂದ ಗೆದ್ದು ಪ್ರಧಾನಿಯಾಗಿದ್ದರು.

ಆದರೆ ರಾಹುಲರು ಉತ್ತರ ಪ್ರದೇಶಕ್ಕೆ ಕಾಲಿಟ್ಟ ನಂತರ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಬಂದಿಳಿದಿದೆ. ಹಾಗಾದರೆ, ಕಾಂಗ್ರೆಸ್‌ನ ನಿಜವಾದ ಅಪಶಕುನ ಯಾರು? ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾ ವಣೆಯ ಸಂದರ್ಭದಲ್ಲಿ ರಾಹುಲರು ಪ್ರಚಾರಕ್ಕೆ ಬಂದರೆ ಸೋಲುತ್ತೇವೆಂಬ ಭಯ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗಿತ್ತು. ಹಾಗಾಗಿ ಅವರನ್ನು ಚುನಾವಣೆಯಲ್ಲಿ ಹೆಚ್ಚಾಗಿ ಬಳಸಿಕೊಳ್ಳಲೇ ಇಲ್ಲ.

ರಾಹುಲರಿಗೆ ತಮ್ಮ ಅಪಶಕುನದ ಅರಿವೆಷ್ಟಿದೆಯೆಂದರೆ, ತಾವು ನಡೆಸಿದ್ದ ‘ಭಾರತ್ ಜೋಡೋ’ ಯಾತ್ರೆ ಸಾಗುವ ದಾರಿಯಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕರ ಪ್ರಭಾವವಿರುವ ಕ್ಷೇತ್ರಗಳನ್ನು ಮಾತ್ರ ಆರಿಸಿಕೊಂಡಿದ್ದರು. ರಾಹುಲರು ಕಳೆದ ೧೦ ವರ್ಷ ಗಳಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಉತ್ತರ ಭಾರತೀಯರಂತೂ ರಾಹುಲರನ್ನು ಜೋಕರ್ ರೀತಿಯಲ್ಲಿ ನೋಡುತ್ತಾರೆ; ಅವರ ಭಾಷಣಗಳು ಟ್ರೋಲ್‌ಗಷ್ಟೇ ಸೀಮಿತ. ರಾಹುಲರ ಮಾರ್ಗದರ್ಶನ ದಲ್ಲಿ ನಡೆದಿದ್ದ ೪೯ ಚುನಾವಣೆಗಳ ಪೈಕಿ ೩೯ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಒಂದು ಕಾಲದಲ್ಲಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಕಾಂಗ್ರೆಸ್, ರಾಹುಲ್ ಅದರ ಅಧ್ಯಕ್ಷರಾದ ನಂತರ ಸಂಪೂರ್ಣವಾಗಿ ನೆಲಕಚ್ಚಿದೆ. ರಾಹುಲ್ ಅಧ್ಯಕ್ಷರಾಗುವ ಮುನ್ನ ಮತ್ತು ಅಧ್ಯಕ್ಷರಾಗಿ ಕೆಳಗಿಳಿದ ನಂತರ ನಡೆದ ಚುನಾವಣೆಗಳನ್ನು ಸೇರಿಸಿದರೆ, ಅವರ ಮಾರ್ಗದರ್ಶನದಲ್ಲಿ ಪಕ್ಷ ೫೪ ಚುನಾವಣೆಗಳನ್ನು ಸೋತಿದೆ.

ಒಂದು ಕಾಲದಲ್ಲಿ ೪೧೫ ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್, ರಾಹುಲರ ಮಾರ್ಗದರ್ಶನದಲ್ಲಿ ೨೦೧೪ ಮತ್ತು ೨೦೧೯ರಲ್ಲಿ ವಿರೋಧ ಪಕ್ಷದಲ್ಲಿ ಕೂರಲು ಗೆಲ್ಲಬೇಕಾದಂಥ ಕನಿಷ್ಠ ಕ್ಷೇತ್ರಗಳನ್ನು ಗೆಲ್ಲಲಾಗದೆ ಸಂಪೂರ್ಣವಾಗಿ ನೆಲಕಚ್ಚಿದೆ. ರಾಹುಲರ ಅಪಶಕುನದ ಫಲ ಕಾಂಗ್ರೆಸ್ ಅನ್ನು ದೇಶದಲ್ಲಿ ಹೇಳ ಹೆಸರಿಲ್ಲದಂತೆ ಮಾಡಿದೆ. ರಾಹುಲರ ಮಾತುಗಳಲ್ಲಿ ಭಾರತದ ನೈಜಚಿತ್ರಣವೇ ಕಾಣುವುದಿಲ್ಲ.

ಭಾರತವನ್ನು ಎಷ್ಟರಮಟ್ಟಿಗೆ ಅಭಿವೃದ್ಧಿಗೊಳಿಸಲು ತಾವು ಶಕ್ಯರು ಎಂಬುದನ್ನು ಅವರು ಒಂದೇ ಒಂದು ಭಾಷಣದಲ್ಲಿ ಹೇಳಿಲ್ಲ. ತಾವಾಡುವ ಮಾತುಗಳ ಮೇಲೆ ನಿಯಂತ್ರಣ ವಿಲ್ಲದೆ, ಒಂದೇ ವಿಷಯದ ಬಗ್ಗೆ ವಿಭಿನ್ನ ಚುನಾವಣಾ ರ‍್ಯಾಲಿಗಳಲ್ಲಿ ಅವರು ಬೇರೆ ಬೇರೆ ರೀತಿಯಲ್ಲಿ ಹೇಳಿರುವ ಉದಾಹರಣೆ ಗಳಿವೆ. ರಫೆಲ್ ಯುದ್ಧವಿಮಾನದ ವಿಷಯದ ಬಗ್ಗೆ ಮಾತ ನಾಡುವಾಗ, ಉತ್ತರ ಪ್ರದೇಶದಲ್ಲಿ ಒಂದು ಮಾತನಾಡಿದರೆ ಜೈಪುರದಲ್ಲಿ ಇನ್ನೊಂದು ಮಾತನಾಡಿದ್ದರು, ಇತ್ತ ದಕ್ಷಿಣ ಭಾರತಕ್ಕೆ ಬಂದಾಗ ಬೇರೆಯದೇ ರೀತಿಯಲ್ಲಿ ಮಾತನಾಡಿದ್ದರು.

ಸಾಧಕರನ್ನು ಎದುರಿಸಲಾಗದ ವಿರೋಧಿಗಳ ಕೊನೆಯ ಅಸ್ತ್ರ ‘ಚಾರಿತ್ರ್ಯಹರಣ’ ಅಥವಾ ಕೆಟ್ಟ ಪದಗಳ ಬಳಕೆ. ಗುಜರಾತಿನಲ್ಲಿ ನಡೆಯುತ್ತಿದ್ದ ಚುನಾವಣಾ ಸಭೆಯೊಂದರಲ್ಲಿ ಸೋನಿಯಾ ಗಾಂಽಯವರು ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. ಮಲ್ಲಿಕಾರ್ಜುನ ಖರ್ಗೆಯ ವರು ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದ್ದರು. ಹೀಗೆಯೇ ಕಾಂಗ್ರೆಸ್‌ನ ಅನೇಕ ನಾಯಕರು ಮೋದಿಯವರನ್ನು ರಾವಣ, ಹಿಟ್ಲರ್, ದಾವೂದ್ ಇಬ್ರಾಹಿಂ ಅಂತೆಲ್ಲ ಕರೆದಿದ್ದಿದೆ. ಪಂಚರಾಜ್ಯಗಳ ಚುನಾವಣಾ ಪ್ರಚಾರವು ಬಹುತೇಕ ಕಡೆ ಮೋದಿಯವರನ್ನು ಕೆಟ್ಟಪದಗಳಿಂದ ಅವಹೇಳನ ಮಾಡುವುದಕ್ಕೆ ಸೀಮಿತವಾಗಿಬಿಟ್ಟಿದೆ.

ಜವಾಹರಲಾಲ್ ನೆಹರು ಅವರು ಪ್ರಧಾನ ಮಂತ್ರಿಯಾದ ಕೆಲವೇ ದಿನಗಳಲ್ಲಿ ಕಾಶ್ಮೀರದ ಬಹುದೊಡ್ಡ ಭೂಭಾಗ ಪಾಕಿಸ್ತಾನಿಗಳ ಪಾಲಾಯಿತು. ಹಾಗಂತ ನೆಹರುರ ವೈಫಲ್ಯವನ್ನು ಅಪಶಕುನವೆನ್ನಲಾದೀತೇ? ಚೀನಾದ ವಿರುದ್ಧ ನಡೆದ ಯುದ್ಧದಲ್ಲಿ ಭಾರತದ ಮತ್ತೊಂದು ಭೂಭಾಗವಾದ ‘ಅಕ್ಸಾಯ್ ಚಿನ್’ ಚೀನಾದ ಪಾಲಾಗಿತ್ತು; ನೆಹರುರ ಆ ವೈಫಲ್ಯವನ್ನು ಅಪಶಕುನವೆನ್ನಲಾದೀತೇ? ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾದ ನಂತರ ಭಾರತವು ೧೯೯೨ರಲ್ಲಿ ತನ್ನ ಸಂಗ್ರಹದಲ್ಲಿದ್ದಂಥ ಚಿನ್ನವನ್ನು ಲಂಡನ್ನಿನ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ತರುವಂತಾಗಿತ್ತು; ಹಾಗಂತ ಕಾಂಗ್ರೆಸ್‌ನ ದಶಕಗಳ ಕಾಲದ ಆಡಳಿತ ವೈಫಲ್ಯವನ್ನು
ಅಪಶಕುನ ಎನ್ನಲಾದೀತೇ? ಹಿಂದೂ ಧರ್ಮದ ಆಚರಣೆಗಳ ವಿಷಯದಲ್ಲಿ ನಂಬಿಕೆಯೇ ಇಲ್ಲದ ರಾಹುಲರು ಅಪಶಕುನ
ವನ್ನು ನಂಬಿರುವುದು ನಗು ತರಿಸುತ್ತಿದೆ.

೧೯೭೧ರ ಚುನಾವಣಾ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ‘ಗರೀಬಿ ಹಟಾವೋ’ ಎಂಬ ಘೋಷವಾಕ್ಯದ ಮೂಲಕ ಚುನಾವಣೆ ಗೆದ್ದಿದ್ದರು. ಈ ಘೋಷಣೆಯನ್ನೇ ರಾಹುಲರು ೨೦೧೯ರಲ್ಲಿ ಪುನರುಚ್ಚರಿಸಿದ್ದರು. ಹಾಗಾದರೆ ಆಡಳಿತ ನಡೆಸಿದ್ದ ಇಂದಿರಾ, ರಾಜೀವ್, ಪಿ.ವಿ.ನರಸಿಂಹ ರಾವ್ ಮತ್ತು ಮನಮೋಹನ್‌ಸಿಂಗ್‌ರ ವೈಫಲ್ಯ ಮತ್ತು ಅಪಶಕುನದ ಕಾರಣಕ್ಕೆ ಬಡತನ ನಿರ್ಮೂಲನೆಯಾಗದೆ, ರಾಹುಲರು ಮತ್ತೊಮ್ಮೆ ಅದೇ ಘೋಷವಾಕ್ಯವನ್ನು ಹೇಳಬೇಕಾಗಿ ಬಂತೇ? ಹಂಪಿಯಲ್ಲಿರುವ ವಿರೂಪಾಕ್ಷನ ದೇವಸ್ಥಾನಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಯ ಹಿಂದೆ ಬಿದ್ದಿದ್ದ ಕಾಂಗ್ರೆಸ್‌ನ ಹಲವು ಮುಖ್ಯಮಂತ್ರಿಗಳು ಆ ದೇಗುಲಕ್ಕೆ ಭೇಟಿ ನೀಡಿರಲಿಲ್ಲ.

ಹೀಗೆಯೇ, ಚಾಮರಾಜ ನಗರಕ್ಕೆ ಭೇಟಿಯಿತ್ತರೆ ಅಧಿಕಾರ ಹೋಗುತ್ತದೆ ಎಂಬ ಮತ್ತೊಂದು ಮೂಢನಂಬಿಕೆಯಿದ್ದು, ಅಲ್ಲಿಗೆ ಹೋದರೆ ಅಪಶಕುನವೆಂಬಂತೆ ಕಾಂಗ್ರೆಸ್‌ನ ಹಲವು ಮುಖ್ಯಮಂತ್ರಿ ಗಳು ಭೇಟಿ ಕೊಟ್ಟಿರಲಿಲ್ಲ. ನರೇಂದ್ರ ಮೋದಿಯವರು ಅಪಶಕುನವಾಗಿದ್ದಿದ್ದರೆ, ೨೦೧೪ರಲ್ಲಿ ಆರ್ಥಿಕತೆಯಲ್ಲಿ ೧೦ನೇ ಸ್ಥಾನದಲ್ಲಿದ್ದ ಭಾರತ ೨೦೨೨ರಲ್ಲಿ ೫ನೇ ಸ್ಥಾನಕ್ಕೇರುತ್ತಿರಲಿಲ್ಲ, ಲಕ್ಷಾಂತರ ಕೋಟಿ ಯಷ್ಟು ವಿದೇಶಿ ಬಂಡವಾಳ ಭಾರತಕ್ಕೆ ಹರಿದುಬರುತ್ತಿರಲಿಲ್ಲ. ಮೋದಿಯವರ ಸಾಮರ್ಥ್ಯ ನೋಡಿ ಡೊನಾಲ್ಡ್ ಟ್ರಂಪ್ ಅಮೆರಿಕದ ದೊಡ್ಡ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

ಇಸ್ಲಾಂ ಧರ್ಮದಲ್ಲಿದ್ದಂಥ ‘ತ್ರಿವಳಿ ತಲಾಕ್’ ಅನಿಷ್ಟ ಪದ್ಧತಿಯನ್ನು ರದ್ದುಮಾಡಿದ ಮೋದಿಯ ವರು ಮುಸ್ಲಿಂ ಮಹಿಳೆಯರ ಪಾಲಿಗೆ ಶುಭಶಕುನವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗ್ರಾಮೀಣ ಮಹಿಳೆಯರಿಗೆ ಕನಿಷ್ಠ ಶೌಚಾಲಯವನ್ನು ಕಟ್ಟಿಸಿಕೊಡ ಲಾಗಿರ ಲಿಲ್ಲ, ಆದರೆ ಮೋದಿಯವರ ಶ್ರಮ ಈ ಹೆಣ್ಣುಮಕ್ಕಳಿಗೆ ಶುಭಶಕುನವಾಗಿದೆ. ಚುನಾವಣೆಯಲ್ಲಿನ ಹತಾಶೆ ಒಬ್ಬ ವ್ಯಕ್ತಿಯನ್ನು ಎಷ್ಟು ಕೀಳುಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆಯೆಂಬುದಕ್ಕೆ ರಾಹುಲರ ಮಾತುಗಳೇ ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌ನ ಹಿಂಬಾಲಕರು ಬಳಸುವ ಭಾಷೆಯನ್ನು ಗಮನಿಸಿದರೆ ಅಲ್ಲಿನ ಸಂಸ್ಕೃತಿಯ ಅರಿವಾಗುತ್ತದೆ.

ಇವರಿಗೆ ವಿಧಾನ ಸಭೆಯಲ್ಲಾಗಲೀ ಸಂಸತ್ತಿನಲ್ಲಾಗಲೀ ಆರೋಗ್ಯಕರ ಚರ್ಚೆಯನ್ನು ಮಾಡಲು ಧೈರ್ಯವಿರುವುದಿಲ್ಲ. ಚುನಾ ವಣಾ ರ‍್ಯಾಲಿಗಳಲ್ಲಿ, ಮಾಧ್ಯಮಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಮನ ಬಂದಂತೆ ಬರೆಯುವ ಕಾಂಗ್ರೆಸಿಗರ ಚಾಳಿ ಹೊಸದಲ್ಲ. ಚರ್ಚೆಗೆ ಬಂದರೆ ಕೇಳುವ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆಂಬ ಭಯದಿಂದ, ಒಂದೇ ದಿಕ್ಕಿನಲ್ಲಿ ತಮಗಿಷ್ಟ ಬಂದಂತೆ ಇವರು ಮಾತನಾಡುತ್ತಾರೆ. ಕಾಂಗ್ರೆಸ್ ಅಽಕಾರದಲ್ಲಿದ್ದರೆ ಭಯೋತ್ಪಾದಕರಿಗೆ, ರೌಡಿ ಗಳಿಗೆ, ಭ್ರಷ್ಟರಿಗೆ ಶುಭಶಕುನ; ಹಾಗಾಗಿ ಅವರಿಗೆ ‘ವಿಶ್ವಗುರು’ ಭಾರತದ ಪ್ರಧಾನಿ ಮೋದಿ ಅಪಶಕುನವಾಗಿ ಕಾಣುತ್ತಾರೆ.