Wednesday, 11th December 2024

ಸತ್ಪ್ರೇರಣೆಯ ಅನಂತ ಛಾಯೆ ಪಸರಿಸಲಿ

ಸ್ಮರಣೆ

ಜೆ.ಪಿ.ನಡ್ಡಾ, ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಜನತಾ ಪಕ್ಷ

ಶ್ರೀ ಅನಂತಕುಮಾರ್ ಅವರ ಅರವತ್ತನೇ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಮಾರಂಭದಲ್ಲಿ ನಾನೂ ಪಾಲ್ಗೊಳ್ಳಲು ಸಾಧ್ಯ ವಾಗುವುದಾದರೆ ತುಂಬ ಸಂತೋಷವಾಗುತ್ತದೆಯೆಂದು ಶ್ರೀಮತಿ ತೇಜಸ್ವಿನಿಯವರು ನನಗೆ ಹೇಳಿದ್ದರು. ಆಗ ನನಗೆ ಸಾಧ್ಯವಾಗುವುದಾದರೆ ಎಂಬ ಮಾತನ್ನು ಹೇಳಬೇಕಾಗಿಯೇ ಇಲ್ಲ, ನಾನು ಬಂದೇ ಬರುತ್ತೇನೆ, ಈ ಕಾರ್ಯಕ್ರಮದಲ್ಲಿ ಅವಶ್ಯವಾಗಿ ಪಾಲ್ಗೊಳ್ಳುತ್ತೇನೆ ಎಂದು ಅವರಿಗೆ ಹೇಳಿದೆ.

ಇದಕ್ಕೆ ವಿಶೇಷ ಕಾರಣವೇನೆಂದರೆ, ಅನಂತಕುಮಾರ್ ನನಗಿಂತ ವಯಸ್ಸಿನಲ್ಲಿ ದೊಡ್ಡವರು, ಆದರೆ ನನ್ನನ್ನು ಎಂದೂ ತಮಗಿಂತ ಕಿರಿಯನಂತೆ ಕಾಣಲಿಲ್ಲ, ನನ್ನನ್ನು ತಮ್ಮ ಸ್ನೇಹಿತನಂತೆಯೇ ಕಾಣುತ್ತಿದ್ದರು. 1980ರಲ್ಲಿ ನಾವು ವಿದ್ಯಾರ್ಥಿ ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾಗ ಶುರುವಾದ ಗೆಳೆತನ ನಮ್ಮದು. ನಾನು ವಿದ್ಯಾರ್ಥಿ ಪರಿಷತ್ತಿನ ಕೆಲಸದಲ್ಲಿ ಭಾಗವಹಿಸುವ ಕಾಲಕ್ಕೆ ಅನಂತಕುಮಾರ್ ಕರ್ನಾಟಕದಲ್ಲಿ ಪರಿಷತ್ತಿನ ಸಂಘಟನಾ ಕಾರ್ಯದಲ್ಲಿ ತೊಡಗಿ ಕೊಂಡಿದ್ದರು. ಆಗಾಗ ರಾಷ್ಟ್ರೀಯ ಸಮಿತಿಯ ಬೈಠಕ್‌ನಲ್ಲೂ ರಾಷ್ಟ್ರೀಯ ಪರಿಷತ್ತಿನ ಸಭೆಗಳಲ್ಲೂ ನಾವು ಪರಸ್ಪರ ಭೇಟಿಮಾಡುವ ಅವಕಾಶ ಸಿಗುತ್ತಿತ್ತು. ಅವರಲ್ಲಿ ಪರಿಷತ್ತಿನ ಸಂಘ ಟನೆಗಾಗಿ ಕೆಲಸ ಮಾಡುವ ಉತ್ಸಾಹ ತುಂಬಿ ತುಳುಕುತ್ತಿತ್ತು, ಸಮಾಜದಲ್ಲಿ ಪರಿವರ್ತನೆ ಉಂಟು ಮಾಡುವ ಹಂಬಲದ ಹೊಳಹು ಗಳು ಕಾಣುತ್ತಿದ್ದವು.

ಅಲ್ಲದೆ ದೇಶದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಗೆ ಕೆಲಸ ಮಾಡಬೇಕೆನ್ನುವುದಕ್ಕೆ ಅವರ ಕೆಲಸ ನಮಗೆ ಪ್ರೇರಣೆ ನೀಡುವಂತಹುದಾಗಿತ್ತು. ಅನಂತ ಕುಮಾರ್ ನಮಗೆ ಪ್ರೇರಣೆ ನೀಡುತ್ತಿದ್ದುದು ಮಾತ್ರವಲ್ಲ, ಅವರ ಸಹಚರರಾಗಿ ಅವರ ಜತೆಗೆ ಕೆಲಸಮಾಡುವ ಸೌಭಾಗ್ಯವೂ ನನಗೆ ದಕ್ಕಿತು. ಎಲ್ಲೋ ಕೆಲವು ದಿನಗಳೆಂದಲ್ಲ, 1980 ರಿಂದ 2018ರವರೆಗೂ ದೀರ್ಘಕಾಲ ಈ ಸೌಭಾಗ್ಯ ನನಗೆ ಪ್ರಾಪ್ತವಾಯಿತು. ಪರಿಷತ್ತಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ನಾವಿಬ್ಬರೂ ಏಕಕಾಲಕ್ಕೆ ಪೂರ್ಣಾವಧಿ ಕಾರ್ಯಕರ್ತರಾಗಿ ಹೊರಟೆವು, ನಾನು ಯುವ ಮೋರ್ಚಾದ ಕರ್ತವ್ಯದಲ್ಲಿದ್ದಾಗ ಅನಂತಕುಮಾರ್ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ಅವರು ಕೇಂದ್ರ ಸರಕಾರದ ಮಂತ್ರಿಗಳಾಗಿದ್ದಾಗ ನಾನು ಹಿಮಾಚಲ ಪ್ರದೇಶದಲ್ಲಿ ಅವರಿಗೆ ಜತೆಯಾಗಿದ್ದೆ, ೨೦೧೦ರಿಂದ ಮುಂದೆ ೨೦೧೮ರವರೆಗೂ ಪಕ್ಷದ ಕೇಂದ್ರ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕೇಂದ್ರ ಸರಕಾರದಲ್ಲಿ ಅವರ ಸಹೋದ್ಯೋಗಿ ಯಾಗಿಯೂ ಅವರೊಡನೆ ಕೆಲಸ ಮಾಡುವ ಸದವಕಾಶ ನನಗೆ ಲಭಿಸಿತು.

He had the humility. His humbleness is always remembered. His humane attitude was always present, his humour was always present. His homely attitude was always omni present. His hard working is one we cannot forget. His honesty we should admire. And the political sense which he had it should be remembered for he had that political knack. As a strategist in the organisation, we
always admired him.

ಅನಂತಕುಮಾರ್ ಅವರ ವಿನೀತ ಭಾವದ ಬಗೆಗೆ ಹೇಳುವುದಾದರೆ ಅವರು ಯಾರೋ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಎಂದು ನಮಗೆ ಅನ್ನಿಸುತ್ತಲೇ ಇರಲಿಲ್ಲ. ಆತ ನಮ್ಮೊಳಗೇ ಒಬ್ಬ ಎನ್ನುವ ರೀತಿಯಲ್ಲೇ ಅವರು ಯಾವಾಗಲೂ ನಡೆದು ಕೊಳ್ಳುತ್ತಿದ್ದರು. ಮಾನವೀಯ ದೃಷ್ಟಿಕೋನದಿಂದ ನೋಡುವುದಾದರೆ ಅನಂತ ಕುಮಾರ್ ಅವರ ದೃಷ್ಟಿ ಪಕ್ಷದಲ್ಲಾಗಲಿ ಸಮಾಜದಲ್ಲಾಗಲಿ ಎಲ್ಲರಿ ಗಿಂತ ಕೊನೆಗೆ ನಿಂತಿರುವವರ, ಹಿಂದುಳಿದವರ ಕಡೆಗೇ ಇರುತ್ತಿತ್ತು. ಇನ್ನು ಅವರ ಬಂಧುತ್ವ, ಆತ್ಮೀಯತೆ ಮರೆಯಲಾರದ ಗುಣ.

ಸಭೆ ಎಲ್ಲಿ ಸೇರಬೇಕೆಂಬ ಪ್ರಶ್ನೆ ಬಂದಾಗ ನನ್ನ ಉತ್ತರ ಸಿದ್ಧವಾಗಿರುತ್ತಿತ್ತು: ಅನಂತಕುಮಾರ್‌ರ ಮನೆಯಲ್ಲಿ. ಅವರ ಮನೆಯಲ್ಲಿ ಸತ್ಕಾರ ಸರ್ವದಾ ಸಿದ್ಧ ವಾಗಿರುತ್ತಿತ್ತು. ರಾತ್ರಿ ಹತ್ತು ಗಂಟೆಯಾಗಲಿ, ಹನ್ನೆರಡಾದರೂ ಸರಿಯೇ. ಊಟಕ್ಕೆ ಬರುವುದೋ ತಿಂಡಿಗೋ ಎಂದು ಅನಂತಕುಮಾರ್‌ರನ್ನು ಕೇಳುವ ಅಗತ್ಯವೇ ಇರಲಿಲ್ಲ. ಮಧ್ಯಾಹ್ನ ಹನ್ನೆರಡಕ್ಕೆ ಬರಲು ಹೇಳಿದ್ದಾರೆಂದರೆ ಊಟದ ವ್ಯವಸ್ಥೆಯಾಗಿರುತ್ತದೆ ಎಂದು ನಿಶ್ಚಿತ, ಸಂಜೆಯಾದರೆ ಒಳ್ಳೆಯ ಉಪಾಹಾರ, ರಾತ್ರಿ ಯಾದರೆ ಭೋಜನ ಮುಗಿಸಿಯೇ ನಾವು ಮರಳುವುದು.

ನಾವು ಎಂದರೆ ಎಲ್ಲೋ ಕೆಲವರಲ್ಲ, ನಮ್ಮ ಪರಿವಾರದವರು ಯಾರಿರುತ್ತಾರೋ ಅವರಿಗೆಲ್ಲ ಅದೇ ಸತ್ಕಾರ. ಇದು ಅನಂತಕುಮಾರ್‌ರ ಆತ್ಮೀಯ ಬಂಧುತ್ವದ
ರೀತಿ. ಅವರು ಅನಂತ ಮಾತ್ರವಲ್ಲ, ಅನ್ನದಾತರೂ ಆಗಿದ್ದವರು. ಅನಂತಕುಮಾರ್ ಒಬ್ಬ ಅಪೂರ್ವ ದುಡಿಮೆಗಾರ. ಸಮಯದ ಪರಿವೆಯೇ ಇಲ್ಲದೆ ಸದಾ ಕಾರ್ಯ ತತ್ಪರರಾಗಿರುತ್ತಿದ್ದವರು. ಪಕ್ಷದ ಸಭೆಗಳು ದಿನವಿಡೀ ನಡೆದ ನಂತರ ಅಲ್ಲಿನ ನಿರ್ಣಯಗಳನ್ನು ಬರೆದಿಡುವ ಮುಖ್ಯ ಕೆಲಸವಾಗಬೇಕಲ್ಲ, ದಿನದ ಪರಿಶ್ರಮದಿಂದ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ನಿದ್ರೆ ತುಂಬಿ ಕಣ್ಣು ಜೋಲುವ ಹೊತ್ತಿಗೆ ಅನಂತಕುಮಾರ್ ಹಾಜರು. ನಮ್ಮನ್ನೂ ಸುಮ್ಮನೆ ಬಿಡುವವರಲ್ಲ. ನಡ್ಡಾರವರೇ, ಈ ನಿರ್ಣಯಗಳನ್ನು ಬರೆದಿಡುವ ಕೆಲಸ ಈ ಹೊತ್ತೇ ಆಗಬೇಕು.

ನಾಳೆ ಬೆಳಗ್ಗೆ ಇವನ್ನು ತಲುಪಿಸಲೇ ಬೇಕು ಎನ್ನುತ್ತಾ ಬರೆಯಲು ಕುಳಿತರೆ ರಾತ್ರಿ ಒಂದಾದರೂ ಸರಿಯೇ. ಎರಡಾದರೂ ಸರಿಯೇ. ಬರೆದು, ಬರೆದುದನ್ನು ಪರಿಶೀಲಿಸಿ ಮತ್ತೆ ಬರೆದು ಎಲ್ಲ ಸಮಂಜಸವಾಗಿದೆ ಎಂದು ದೃಢಪಟ್ಟ ಮೇಲೆಯೇ ವಿಶ್ರಾಂತಿಯ ಯೋಚನೆ. ಕೆಲಸದಲ್ಲೂ ಅಷ್ಟೇ. ಇಂಥ ಸಮಯವೆಂಬುದೇ ಇಲ್ಲ.ಎಷ್ಟು ಹೊತ್ತಾದರೂ ಸರಿಯೇ, ಮಾಡಹೊರಟ ಕೆಲಸವನ್ನು ಮುಗಿಸಿಯೇ ಸಿದ್ಧ. ಕೇಂದ್ರ ಸರಕಾರದ ಒಬ್ಬ ಮಂತ್ರಿಯಾಗಿ ಅನಂತಕುಮಾರ್ ರ ಸಾಧನೆ, ಕೊಡುಗೆ ಅಪಾರವಾಗಿದೆ.

He was innovative, he was risktaking, He used to take new challenges. ಅವರ ಆಲೋಚನೆಗಳು ನವನವೀನ ವಾಗಿರುತ್ತಿದ್ದುವು. ತಮ್ಮ ಆಲೋಚನೆಗಳನ್ನು ಕಾರ್ಯಗತ ಗೊಳಿಸುವುದಕ್ಕಾಗಿ ಅವರು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧರಾಗಿರುತ್ತಿದ್ದರು,
ಕಾರ್ಯಸಿದ್ಧತೆಯಲ್ಲಿ ಒದಗ ಬಹುದಾದ ಅಡ್ಡಿ ಆತಂಕಗಳನ್ನು ಅವರು ಯಶಸ್ವಿಯಾಗಿ ನಿವಾರಿಸಬಲ್ಲವರಾಗಿದ್ದರು. ಅವರು ನಾಗರಿಕ ವಿಮಾನಯಾನ ಖಾತೆಯ ಸಚಿವರಾಗಿದ್ದ ಸಂದರ್ಭ. ಆ ಕಾಲಕ್ಕೆ ಸಾರ್ವಜನಿಕ ಕಾಮಗಾರಿಗಳಿಗೆ ಖಾಸಗಿ ಭಾಗಿತ್ವವನ್ನುಆಹ್ವಾನಿಸುವುದೆಂದರೆ ಒಂದು ಹಿನ್ನಡೆಯ ಹೆಜ್ಜೆಯೆಂದೇ ಭಾವಿಸ ಲಾಗುತ್ತಿತ್ತು.

ಸರಕಾರ ಆಪತ್ತನ್ನು ಮೈಮೇಲೆ ಎಳೆದುಕೊಂಡಂತೆಯೇ ಲೆಕ್ಕ. ಖಾಸಗೀಕರಣದ ಮಾತೆತ್ತುವುದೇ ಮಹಾಪಾಪವೆಂದು ಪರಿಗಣಿಸಲಾಗುತ್ತಿದ್ದ ಕಾಲದಲ್ಲಿ ಅನಂತ ಕುಮಾರ್ ವಿಮಾನಯಾನದಲ್ಲಿ ಮಾತ್ರವಲ್ಲ, ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲೂ ಸರಕಾರದೊಡನೆ ಖಾಸಗಿ ಸಹಭಾಗಿತ್ವವನ್ನು ಆಹ್ವಾನಿಸಲು ಮುಂದಾ ದರು. ಅನಂತಕುಮಾರ್ ರೂಪಿಸಿದ ಈ ಪ್ರಯೋಗವನ್ನು ವಾಜಪೇಯಿ ಸರಕಾರ ಯಶಸ್ವಿಯಾಗಿ ಜಾರಿಗೊಳಿಸಿತು.

ಕೋಟ್ಯಂತರ ಭಾರತೀಯರ ಆರೋಗ್ಯಕ್ಕೆ ನೆರವಾಗುವ ಮಹತ್ವ ಪೂರ್ಣ ಕೊಡುಗೆ ಕೊಟ್ಟವರು ಅನಂತಕುಮಾರ್. ನಾನು ಸ್ವಾಸ್ಥ್ಯ ಖಾತೆಯ ಜವಾಬ್ದಾರಿಯನ್ನು
ನಿರ್ವಹಿಸುತ್ತಿದ್ದೆ. ಅವರು ಔಷಧ ಖಾತೆಯನ್ನು ನೋಡಿಕೊಳ್ಳುತ್ತಿದ್ದರು. ಔಷಧ ತಯಾರಿಕೆ ನಮ್ಮ ಹೊಣೆಯಾದರೆ ಅವುಗಳಿಗೆ ಬೆಲೆನಿಗದಿ ಪಡಿಸುವ ಕೆಲಸ
ಔಷಧ ಮಂತ್ರಾಲಯಕ್ಕೆ ಸಂಬಂಧಿಸಿದ್ದು. ಅನಂತಕುಮಾರರೊಡನೆ ಕೆಲಸ ಮಾಡುವುದೆಂದರೆ ಅದೊಂದು ಆನಂದದಾಯಕ ಅನುಭವ. ಸಾವಿರಾರು ರು.
ಬೆಲೆಬಾಳುವ ಜೀವರಕ್ಷಕ ಔಷಧಗಳನ್ನು ಜನೌಷಧಿಯ ಹೆಸರಿನಲ್ಲಿ ಅವರು ನೂರಿನ್ನೂರು ರು.ಗಳಿಗೆ ಲಭ್ಯವಾಗುವಂತೆ ಮಾಡಿದರು. ಅತ್ಯಗತ್ಯ ಔಷಧಗಳನ್ನು
ಯಾವುದೇ ಯೋಚನೆಯಿಲ್ಲದೆ ರಾಷ್ಟ್ರೀಯ ಪಟ್ಟಿಯಲ್ಲಿ ಸೇರಿಸುವಂತೆ ನನಗೆ ಸಲಹೆ ಮಾಡುತ್ತಿದ್ದ ಅನಂತಕುಮಾರ್ ಅವುಗಳು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡುವುದು ತನ್ನ ಜವಾಬ್ದಾರಿ ಎನ್ನುತ್ತಿದ್ದರು.

ಹೀಗಾಗಿ ಹೃದ್ರೋಗಿಗಳು ಎರಡು ಲಕ್ಷ ರು. ತೆರಬೇಕಾಗಿದ್ದ ಸ್ಟೆಂಟ್ ಇಪ್ಪತ್ತು ಮೂವತ್ತು ಸಾವಿರ ರು.ಗಳಲ್ಲಿ ದೊರಕುವಂತಾಯಿತು. ಮಂಡಿಕೀಲಿನ ಶಸ್ತ್ರ ಚಿಕಿತ್ಸೆಯೂ ಸುಲಭ ಬೆಲೆಯಲ್ಲಿ ಸಾಧ್ಯವಾಗುವಂತಾಯಿತು. ನನಗೆ ಅತಿದುಃಖವಾಗುವ ವಿಷಯವೇನೆಂದರೆ, ನಾನು ಆರೋಗ್ಯ ಖಾತೆಯ ಮಂತ್ರಿಯಾಗಿದ್ದರೂ ಅನಂತಕುಮಾರರ ಅನಾರೋಗ್ಯದ ಸುಳಿವೂ ನನಗೆ ಗೊತ್ತಾಗದೆ ಹೋದುದು. ಅತಿಗಂಭೀರವಾದ ಕಾಯಿಲೆಗೆ ತುತ್ತಾಗಿ ಅವರು ನಮ್ಮನ್ನು ಅಗಲಿ ಹೋದರು. ನಾನು ಅವರ ಆರೋಗ್ಯದ ಬಗೆಗೆ ಹಲವಾರು ಬಾರಿ ವಿಚಾರಿಸುತ್ತಿದ್ದೆ.

ಆಗೆಲ್ಲ ಅವರು ಏನಿಲ್ಲ, ನಾನು ಚೆನ್ನಾಗಿಯೇ ಇದ್ದೇನೆ. No problem brother. I am fighting fit ಎಂದು ಬಿಡುತ್ತಿದ್ದರು. ನಮ್ಮಿಂದ ತಮ್ಮ ನೋವನ್ನು ಅಡಗಿಸಿಟ್ಟು ಅವರು ದೂರವಾಗಿ ಬಿಟ್ಟರು. ಆದರೆ ಅವರ ನೆನಪು ನಮ್ಮಲ್ಲಿ ಸದಾ ಹಸಿರಾಗಿರುತ್ತದೆ.. An ideal worker, an ideal leader and an organiser par excellence, and a strategist. This was Ananthkumar. He was philosophical also. ಅವರ ಕಾರ್ಯಕ್ಕೆ ಒದಗುತ್ತಿದ್ದ ಪ್ರೇರಣೆ ತತ್ತ್ವಜ್ಞಾನ ಪೂರ್ವಕವಾಗಿರುತ್ತಿತ್ತು. This does not come so long if you do not have a philosophical incline. It comes only when you have a philosophical incline. ಎಲ್ಲರನ್ನೂ ಜತೆ ಜತೆಗೇ ಮುಂದುವರಿಸಬೇಕು. ಇದು ಅನಂತ ಕುಮಾರರ ಧ್ಯೇಯ.

ಆಗಿಂದಾಗ್ಗೆ ಸಭಾಕಲಾಪಗಳು ಜರುಗುತ್ತಿದ್ದವು. ಸಭೆಯ ನಿರ್ಣಯಗಳಿಂದ ಎಲ್ಲರಿಗೂ ಸಂತೋಷ ವಾಗುವುದು ಸಾಧ್ಯವಂತೂ ಇಲ್ಲ. ಕೆಲವರು ಸಂತುಷ್ಟರಾದರೆ
ಬೇಸರಗೊಳ್ಳುವವರು ಹಲವರು. ಸಂತೃಪ್ತರಾದವರನ್ನು ಅಷ್ಟಕ್ಕೆ ಬಿಟ್ಟು ಅನಂತಕುಮಾರ್ ಬೇಸರದಲ್ಲಿರುವವರನ್ನು ಸಂತೈಸಲು ಮುಂದಾಗುತ್ತಿದ್ದರು. He had a healing touch. ಯಾವುದೇ ಅಶಾಂತ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿ ಅವರಲ್ಲಿತ್ತು. ನಮಗ್ಯಾರಿಗೂ ಅನಂತಕುಮಾರ್ ನಮ್ಮನ್ನು ಇಷ್ಟು ಬೇಗ ತೊರೆದು ಹೋಗುತ್ತಾರೆಂಬುದರ ಕಲ್ಪನೆಯೂ ಇರಲಿಲ್ಲ.

ಆದರೆ ಅವರಿಂದ ನಮಗೆ ಸದಾ ಪ್ರೇರಣೆ ಯೊದಗುತ್ತಿರುವುದರಲ್ಲಿ ಸಂಶಯವಿಲ್ಲ. You should not speak, your work should speak. ಅನಂತ ಕುಮಾರರಿಂದಷ್ಟೇ ಅಲ್ಲ, ಪೂಜನೀಯರಾದ ಅತ್ತಿಗೆ ತೇಜಸ್ವಿನಿ ಅನಂತಕುಮಾರರಿಂದಲೂ ನಮಗೆ ಸತ್ಪ್ರೇರಣೆ ದೊರಕುತ್ತದೆ. ಅವರು ಒಂದು ಆದರ್ಶ
ಕುಟುಂಬದ ನಿದರ್ಶನವನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ರಾಜನೀತಿಯಂತೆಯೇ ಸಮಾಜ ಸೇವೆಯೂ ಅದೂ ಸುದೀರ್ಘವಾಗಿ ಹೇಗೆ ಸಾಧ್ಯವಾಗುವು ದೆಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಅನಂತಕುಮಾರ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಪ್ರೇರಣೆ ನಮಗೆ ಸದಾ ಲಭ್ಯವಾಗಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆ ಮರೆಯುವಂತಹುದಲ್ಲ. ಪಕ್ಷದ ಕಾರ್ಯಕರ್ತರಾಗಿ, ಚುನಾವಣಾ ಸಮಿತಿಯ ಸದಸ್ಯರಾಗಿ, ಪಾರ್ಲಿಮೆಂಟರಿ ಸಮಿತಿಯ ಸದಸ್ಯರಾಗಿ.
ಕಾರ್ಯದರ್ಶಿಯಾಗಿ, ಅತ್ಯುಚ್ಚ ನಿರ್ಣಾಯಕ ಸಮಿತಿಯ ಕಾರ್ಯದರ್ಶಿಯಾಗಿ ಅನಂತಕುಮಾರ್ ಸಲ್ಲಿಸಿದ ಸೇವೆ ಸ್ಮರಣಾರ್ಹ. ಇದೇ ಸಂದರ್ಭದಲ್ಲಿ ನಾನು ಅತ್ತಿಗೆ ಶ್ರೀಮತಿ ತೇಜಸ್ವಿನಿ ಅನಂತಕುಮಾರರನ್ನೂ ಅಭಿನಂದಿಸಬಯಸುತ್ತೇನೆ.

ತಮಗೆ ಅನಂತಕುಮಾರರು ನೀಡಿದ ಪ್ರೇರಣೆಯ ಮೂಲಕ ಯಾವ ದಾರಿಯಲ್ಲಿ ತೇಜಸ್ವಿನಿಯವರು ಮುನ್ನಡೆಯುತ್ತಿರುವರೋ ಅವರ ಮುಂದಿನ ಯೋಜನೆಯಲ್ಲಿ ನಾವೂ, ನಮ್ಮ ಪಕ್ಷವೂ ಸದಾ ಸಹಯೋಗ ನೀಡಲು ಸಿದ್ಧರಾಗಿರುತ್ತೇವೆಂದು ಈ ಮೂಲಕ ಭರವಸೆ ನೀಡಲಿಚ್ಛಿಸುತ್ತೇನೆ. ಅನಂತಕುಮಾರ್ ಪ್ರತಿಷ್ಠಾನದ ಮೂಲಕ ಅನಂತಕುಮಾರರ ಕನಸುಗಳನ್ನು ಸಾಕಾರಗೊಳಿಸುವ ಅವರ ಯೋಜನೆಯಲ್ಲಿ ನಾವೆಲ್ಲರೂ ಜತೆ ಗೂಡೋಣ.. ಅ A personality is known by the long shadow he leaves. And this trust is a trust and an indication of how long Ananthkumar’s shadow lives with us.

ಪ್ರತಿಷ್ಠಾನದ ಕೆಲಸದ ಮೂಲಕ ಅನಂತಕುಮಾರರ ಛಾಯೆ ವಿಶಾಲವಾಗಿ ಪಸರಿಸುವಂತಾಗಲಿ ಎಂದು ಆಶಿಸುತ್ತೇನೆ.