Monday, 4th November 2024

ನಿತ್ಯ ಲವಣಗಳ ಸೇವನೆ ದೇಹಕ್ಕೆ ಅತ್ಯಗತ್ಯ

ಸ್ವಾಸ್ಥ್ಯ ಸಂಪದ

Yoganna55@gmail.com

ಆಹಾರ ಪದಾರ್ಥಗಳನ್ನು ರಾಸಾಯನಿಕವಾಗಿ ಕಾರ್ಬನ್‌ಯುಕ್ತ (ಆರ್ಗ್ಯಾನಿಕ್) ಮತ್ತು ಕಾರ್ಬನ್ ರಹಿತ ಆಹಾರ ಪದಾರ್ಥಗಳೆಂದು ವಿಂಗಡಿಸ ಲಾಗಿದ್ದು, ಲವಣಗಳು ಕಾರ್ಬನ್‌ರಹಿತ ಆಹಾರ ಪದಾರ್ಥಗಳಾಗಿವೆ. ಇನ್ನಿತರ ಆಹಾರ ಪದಾರ್ಥಗಳಾದ ಕಾರ್ಬೋಹೈಡ್ರೇಟ್‌ಗಳು, ಜಿಡ್ಡುಗಳು, ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳು ಕಾರ್ಬನ್‌ಯುಕ್ತ ಆಹಾರ ಪದಾರ್ಥಗಳಾಗಿವೆ. ಲವಣಗಳನ್ನು ದೇಹಕ್ಕೆ ಅವು ಅವಶ್ಯಕತೆ ಇರುವ ಪ್ರಮಾಣ ಮತ್ತು ದೇಹದಲ್ಲಿರುವ ಅವುಗಳ ಪ್ರಮಾಣವನ್ನು ಆಧರಿಸಿ ಹೆಚ್ಚು ಪ್ರಮಾಣದ ಲವಣಗಳು( ಮೇಜರ್ ಮಿನರಲ್ಸ್) ಮತ್ತು ಅಲ್ಪ ಪ್ರಮಾಣದ ಲವಣಗಳು( ಟ್ರೇಸ್ ಮಿನರಲ್ಸ್) ಎಂದು ವರ್ಗೀಕರಿಸಲಾಗಿದೆ.

ಹೆಚ್ಚು ಪ್ರಮಾಣದ ಲವಣಗಳು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಪ್ರತಿನಿತ್ಯ ಸೇವಿಸಬೇಕಾದ ಅವುಗಳ ಪ್ರಮಾಣವೂ ಸಹ ತುಸು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕ್ಯಾಲ್ಷಿಯಂ, ಪಾಸ್ಪರಸ್, ಸೋಡಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಲೋರಿನ್ ಮತ್ತು ಸಲ್ಪರ್ ಇವು ಹೆಚ್ಚು ಪ್ರಮಾಣ ದಲ್ಲಿ ಅವಶ್ಯಕವಿರುವ ಲವಣಗಳು. ಕಬ್ಬಿಣ, ಜಿಂಕ್, ಮೋಲಿಬ್ಡಿನಂ, ಸೆಲಿನಿಯಂ, -ರಿನ್, ಕಾಪರ್, ಮ್ಯಾಂಗನೀಸ್, ಅಯೋಡಿನ್, ಕೊಬಾಲ್ಟ್ ಮತ್ತು ಕ್ರೋಮಿಯಂ ಇವು ಅಲ್ಪ ಪ್ರಮಾಣದಲ್ಲಿ ಅವಶ್ಯಕವಿರುವ ಲವಣಳಾಗಿವೆ. ಪ್ರತಿಯೊಂದು ಲವಣಕ್ಕೂ ತನ್ನದೇ ಆದ ವಿಶಿಷ್ಟ ಕಾರ್ಯವಿದೆ. ಒಟ್ಟಾರೆ ಅವು ದೇಹದ ಆಮ್ಲ-ಕ್ಷಾರಗಳ ಸಮತೋಲನ ಕಾಪಾಡುವಿಕೆ, ನೀರಿನ ಸಮತೋಲನ ಕಾಪಾಡುವಿಕೆ, ಸ್ನಾಯುಗಳ ಸಂಕುಚಿತ ಮತ್ತು ಸಡಿಲಿಕೆ, ನರಗಳ ಪ್ರತಿಕ್ರಿಯೆ, ರಕ್ತ ಹೆಪ್ಪುಗಟ್ಟಿಕೆ, ರಕ್ತೋತ್ಪತ್ತಿ, ಜೀವಕೋಶಗಳಲ್ಲಿ ಜೈವಿಕ ವಿದ್ಯುತ್ ಉತ್ಪತ್ತಿ ಇತ್ಯಾದಿ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತವೆ.

ದೇಹದ ತೂಕ ಶೇ ೪-೬ರಷ್ಟು ಲವಣಗಳಿಂದಾಗಿದ್ದು, ಅಂದರೆ ೨-೩ ಕೆಜಿ ದೇಹದ ತೂಕ ಇವುಗಳಿಂದಾಗಿದೆ. ಶೇ ೯೦ರಷ್ಟು ಲವಣಗಳು ಕ್ಯಾಲ್ಷಿಯಂ, ಫಾಸ್ಪರಸ್, ಪೊಟ್ಯಾಷಿಯಂ, ಸಲ್ಪರ್, ಸೋಡಿಯಂ, ಕ್ಲೋರೈಡ್ ಮತ್ತು ಮೆಗ್ನೀಷಿಯಂಗಳಿಂದ ಕೂಡಿವೆ. ಇನ್ನುಳಿದ ಶೇ ೧೦ ಅಲ್ಪ ಪ್ರಮಾಣದ ಲವಣಗಳಿಂದ ಕೂಡಿವೆ. ಬಹುಪಾಲು ಲವಣಗಳು ಮೂಳೆಗಳು, ಹಲ್ಲುಗಳು, ನರಗಳು, ಸ್ನಾಯು, ರಕ್ತ ಮತ್ತು ದೇಹದ್ರವಗಳಲ್ಲಿವೆ.

ಕ್ಯಾಲ್ಷಿಯಂ: ಶೇ ೯೯ರಷ್ಟು ಕ್ಯಾಲ್ಷಿಯಂ ಮೂಳೆಗಳಲ್ಲಿದೆ. ಮೂಳೆಗಳಾಗುವಿಕೆ, ಸ್ನಾಯುಗಳ ಸಂಕುಚಿತ, ಹೃದಯದ ಮಿಡಿತ, ಜೀವಕೋಶ ಪದರದ
ಮೂಲಕ ವಸ್ತುಗಳು ಒಳಕ್ಕೆ ಮತ್ತು ಹೊರಕ್ಕೆ ರವಾನೆಯಾಗುವಿಕೆ, ರಕ್ತ ಹೆಪ್ಪುಗಟ್ಟುವಿಕೆ, ಪ್ಯಾಂಕ್ರಿಯಾಸಿನ ಲೈಪೇಸ್ ಕಿಣ್ವವನ್ನು ಕ್ರಿಯಾತ್ಮಕ ಗೊಳಿಸುವಿಕೆ ಮತ್ತು ವಿಟಮಿನ್ ಬಿ೧೨ ಅನ್ನು ಜೀರ್ಣವಾಗಿಸುವಿಕೆ ಕ್ರಿಯೆಗಳಿಗೆ ಕ್ಯಾಲ್ಷಿಯಂ ಅತ್ಯವಶ್ಯಕ. ಕ್ಯಾಲ್ಷಿಯಂ ಪಾಸ್ಪರಸ್ ಜೊತೆಗೂಡಿ ಮೂಳೆಯಾಗುವಿಕೆ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು, ರಾಗಿ, ಹಸಿರೆಲೆಯುಳ್ಳ ತರಕಾರಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾಲ್ಷಿಯಂ ಇರುತ್ತದೆ. ಸಂಬಾರದ ಸೊಪ್ಪು, ದನಿಯಾ ಬೀಜಗಳು, ಹೆಸರು ಕಾಳು, ಪರಂಗಿ ಬೀಜಗಳು, ಮೆಂತ್ಯ, ಮೀನು ಇತ್ಯಾದಿಗಳಲ್ಲೂ ಕ್ಯಾಲ್ಷಿಯಂ ಇರುತ್ತದೆ. ಮೂಳೆಗಳ ತುದಿಗಳಲ್ಲಿ ಕ್ಯಾಲ್ಷಿಯಂ ಮತ್ತು ಫಾಸ್ಪರಸ್ ಶೇಖರಣೆಯಾಗುತ್ತದೆ. ಸೇವಿಸಿದ ಆಹಾರ ಪದಾರ್ಥಗಳಲ್ಲಿರುವ ಶೇ.೧೦ರಿಂದ ೪೦ ಪ್ರಮಾಣದ ಕ್ಯಾಲ್ಷಿಯಂ
ಅವಶ್ಯಕತೆಗನುಗುಣವಾಗಿ ರಕ್ತಕ್ಕೆ ಹೀರಿಕೆಯಾಗುತ್ತದೆ.

ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಹಾಲಿ ನಲ್ಲಿರುವ ಲ್ಯಾಕ್ಟೋಸ್, ಕ್ಯಾಲ್ಷಿಯಂ ಉಪಯೋಗಕ್ಕೆಅತ್ಯವಶ್ಯಕ. ರಕ್ತದಲ್ಲಿ ಸಹಜ ಕ್ಯಾಲ್ಷಿಯಂ ಪ್ರಮಾಣ
೮.೬-೧೦.೩ ಮಿ.ಗ್ರಾಂ/ಡಿ.ಎಲ್. ಇದ್ದು, ಇದರಲ್ಲಿ ವ್ಯತ್ಯಾಸವಾದರೆ ಅನಾರೋಗ್ಯಕರ ತೊಂದರೆಗಳುಂಟಾಗುತ್ತವೆ. ಪ್ಯಾರಾಥಾರ್ಮೋನ್ ಮತ್ತು ಕ್ಯಾಲ್ಷಿಟೋನಿನ್ ಹಾರ್ಮೋನ್‌ಗಳು ರಕ್ತದಲ್ಲಿ ಇದರ ಪ್ರಮಾಣವನ್ನು ನಿಯಂತ್ರಿಸುತ್ತವೆ. ಆಹಾರದಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಯಾದಾಗ ದೈಹಿಕ ಬೆಳವಣಿಗೆ ಮತ್ತು ಗರ್ಭಿಣಿಯರಲ್ಲಿ ಇದರ ಬೇಡಿಕೆ ಹೆಚ್ಚಾದ ಸಂದರ್ಭಗಳಲ್ಲಿ ಈ ಹಾರ್ಮೋನ್‌ಗಳ ಪ್ರಭಾವದಿಂದ ಮೂಳೆಯಲ್ಲಿ ಶೇಖರಣೆ ಯಾಗಿರುವ ಕ್ಯಾಲ್ಷಿಯಂ ರಕ್ತಕ್ಕೆ ಬಿಡುಗಡೆಯಾಗಿ ರಕ್ತದಲ್ಲಿ ಇದರ ಸಹಜ ಪ್ರಮಾಣವನ್ನು ಈ ಹಾರ್ಮೋನ್‌ಗಳು ನಿಯಂತ್ರಿಸುತ್ತವೆ. ಪ್ರತಿನಿತ್ಯ ಸುಮಾರು ೫೦೦ ಮಿ. ಗ್ರಾಂ ಕ್ಯಾಲ್ಷಿಯಂ ಸೇವನೆ ಅತ್ಯವಶ್ಯಕ.

ಇದರ ಕೊರತೆಯುಂಟಾದಲ್ಲಿ ಮೂಳೆಗಳ ಬೆಳವಣಿಗೆ ಕುಂದಿ ಮೂಳೆಗಳು ರಂಧ್ರಯುಕ್ತವಾಗಿ ಅಸ್ಟಿಯೋಪೋರೋಸಿಸ್ ಕಾಯಿಲೆ ಉಂಟಾಗುತ್ತದೆ.
ಮೂಳೆಗಳು ಬಾಗುವಿಕೆ, ಕೀಲುಗಳು ಹಿಗ್ಗುವಿಕೆ, ಹಲ್ಲುಗಳು ದುರ್ಬಲವಾಗುವಿಕೆ, ಬಹುಬೇಗ ಮೂಳೆಗಳು ಮುರಿದುಹೋಗುವಿಕೆ, ಸಕಾದಲ್ಲಿ ರಕ್ತ ಹೆಪ್ಪು
ಗಟ್ಟದೆ ರಕ್ತಸ್ರಾವವಾಗುವಿಕೆ, ಬೆನ್ನುನೋವು, ಕೀಲು ನೋವುಗಳು ಇದರ ಪ್ರಮುಖ ರೋಗತೊಂದರೆಗಳು. ಕೈ ಬೆರಳುಗಳ ಸಂಕುಚಿತ ಉಂಟಾಗಿ ಟೆಟನಿ ಕಾಣಿಸಿ ಕೊಳ್ಳುತ್ತದೆ.

ರಕ್ತದಲ್ಲಿ ಕ್ಯಾಲ್ಷಿಯಂ ಪ್ರಮಾಣ ಹೆಚ್ಚಾಗುವುದರಿಂದಲೂ ಸಹ ಅತಿಯಾದ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ, ಹೊಟ್ಟೆನೋವು, ವಾಂತಿ, ಮೂಳೆನೋವುಗಳು, ಸ್ನಾಯುಗಳ ನಿಶ್ಯಕ್ತಿ, ಸುಸ್ತು ಸಂಕಟ, ಮಾನಸಿಕ ತಳಮಳಗಳು ಉಂಟಾಗುತ್ತವೆ. ಪ್ರಜ್ಞಾಹೀನತೆಯುಂಟಾಗಬಹುದು. ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದಲ್ಲಿ ಮೂತ್ರಾಂಗಗಳಲ್ಲಿ ಕಲ್ಲುಗಳುಂಟಾಗುತ್ತವೆ. ಪ್ಯಾರಾಥೈರಾಯಿಡ್ ಕ್ರಿಯೆ ಏರಿಕ್ಸ್, ವಿಟಮಿನ್ ಡಿ ಕೊರತೆ ಮತ್ತು ಕ್ಯಾನ್ಸರ್‌ಗಳಲ್ಲಿ ರಕ್ತ ಕ್ಯಾಲ್ಷಿಯಂ ಏರಿಕೆ ಯಾಗುತ್ತದೆ. ಇಂತಹವರಲ್ಲಿ ಅತಿ ಕ್ಯಾಲ್ಷಿಯಂ ಉಳ್ಳ ಆಹಾರ ಪದಾರ್ಥಗಳನ್ನು ನಿಷೇಧಿಸಬೇಕು.

ಬೈ-ಸ್ಪೋನೇಟ್‌ಗಳನ್ನು ನೀಡಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಮಾಡಲಾಗುತ್ತದೆ. ಇದಲ್ಲದೆ ಕಾರಣಕಾರಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ಅತ್ಯವಶ್ಯಕ.

ಪಾಸ್ಪರಸ್(ರಂಜಕ): ಮೂಳೆಗಳ ಉತ್ಪತ್ತಿ ಮತ್ತು ಭದ್ರತೆಗೆ ಕ್ಯಾಲ್ಷಿಯಂ ಜತೆಗೆ ಫಾಸ್ಪರಸ್ ಅತ್ಯ ವಶ್ಯಕ. ದೇಹದ ಶೇ ೮೫ರಷ್ಟು ಪಾಸ್ಪರಸ್ ಮೂಳೆಗಳು ಮತ್ತು ಹಲ್ಲುಗಳಲ್ಲಿದ್ದು, ಇನ್ನುಳಿದ ೧೫ರಷ್ಟು ಇನ್ನಿತರ ಸಂಯುಕ್ತ ವಸ್ತುಗಳಲ್ಲಿದೆ. ದೇಹಕ್ಕೆ ಶಕ್ತಿ ಒದಗಿಸುವ ಎಡಿಪಿ ಮತ್ತು ಎಟಿಪಿಗಳ ತಯಾರಿಕೆಗೆ, ಡಿಎನ್‌ಎ ಮತ್ತು ಆರ್‌ಎನ್‌ಎಗಳ ಕಾರ್ಯ ನಿರ್ವಹಣೆಗೆ ಆಮ್ಲ ಮತ್ತು ಕ್ಷಾರತೆಗಳ ಸಮತೋಲನಕ್ಕೆ ಹಾಗೂ ದೇಹದ ಹಲವಾರು ಚಯಾಪಚಯ ಕ್ರಿಯೆಗಳಿಗೆ ಅವಶ್ಯಕ ಕಿಣ್ವಗಳ ತಯಾರಿಕೆಗೆ ಇದು ಅತ್ಯವಶ್ಯಕ. ಕ್ಯಾಲ್ಷಿಯಂ ಯುಕ್ತ ಎಲ್ಲ ಆಹಾರ ಪದಾರ್ಥಗಳಲ್ಲೂ
ಫಾಸ್ಪರಸ್ ಸಾಮಾನ್ಯವಾಗಿ ಜೊತೆಗೂಡಿರುತ್ತದೆ.

ರಕ್ತದಲ್ಲಿ ಇದರ ಸಹಜ ಪ್ರಮಾಣ ೩.೪-೪.೫ ಎಂ.ಇ.ಕ್ಯು/ಡಿ.ಎಲ್. ರಕ್ತದಲ್ಲಿ ಇದರ ಪ್ರಮಾಣ ೨.೫ ಎಂ.ಇ.ಕ್ಯು/ಡಿ.ಎಲ್.ಗಿಂತಲೂ ಕಡಿಮೆ ಯಾದಲ್ಲಿ ಮತ್ತು ೫ ಎಂ.ಇ.ಕ್ಯು/ಡಿ.ಎಲ್.ಗಿಂತಲೂ ಹೆಚ್ಚಾದಲ್ಲಿ ತೊಂದರೆ ಆಗುತ್ತವೆ. ಆಹಾರದಲ್ಲಿ ಇದರ ಕೊರತೆ, ವಿಟಮಿನ್ ಡಿ ಕೊರತೆ ಇದಕ್ಕೆ ಕಾರಣಗಳು. ಹಸಿವು ಕಡಿಮೆಯಾಗುವಿಕೆ, ಮೂಳೆಗಳಲ್ಲಿ ನೋವು, ಅಶಕ್ತ ಮೂಳೆಗಳು, ಉಸಿರಾಟದ ಅವ್ಯವಸ್ಥೆ, ಮಾನಸಿಕ ತಳಮಳ, ಮಕ್ಕಳಲ್ಲಿ ಬೆಳವಣಿಗೆ ಕುಂದುವಿಕೆ, ಹಲ್ಲು ಮತ್ತು ಮೂಳೆಗಳು ಬೆಳವಣಿಗೆಯಾಗದಿರುವಿಕೆ ಫಾಸ್ಪರಸ್ ಕೊರತೆಯಿಂದ ಈ ತೊಂದರೆಗಳುಂಟಾ ಗುತ್ತವೆ. ಮಾಂಸಾಹಾರ ಮತ್ತು ಫಾಸ್ಪರಸ್ ಅನ್ನು ಹೆಚ್ಚುವರಿಯಾಗಿ ಸೇವಿಸುವಿಕೆಯಿಂದ ಕೊರತೆಯನ್ನು ನೀಗಿಸಲಾಗುತ್ತದೆ.

ರಕ್ತದಲ್ಲಿ ಫಾಸ್ಪರಸ್ ಹೆಚ್ಚುವರಿಯಾದಲ್ಲಿ ರಕ್ತದ ಕ್ಯಾಲ್ಷಿಯಂ ಕೂಡ ಹೆಚ್ಚಾಗುತ್ತದೆ. ಮೂಳೆಗಳು ಶಿಥಿಲವಾಗುತ್ತವೆ. ಕ್ಯಾಲ್ಷಿಯಂ ಮತ್ತು ಫಾಸ್ಪರಸ್
ಗಳು, ರಕ್ತನಾಳಗಳು, ಶ್ವಾಸಕೋಶಗಳಲ್ಲಿ ರಂಜಕ ಶೇಖರಣೆಯಾಗಿ ಹೃದಯಾಘಾತ ಮತ್ತು ಸ್ಟ್ರೋಕ್ ಇತ್ಯಾದಿ ತೊಂದರೆಗಳುಂಟಾಗುತ್ತವೆ. ಮೂತ್ರಜನ ಕಾಂಗಗಳ ವಿಫಲತೆಯುಂಟಾಗುತ್ತದೆ. ಮೂತ್ರಜನ ಕಾಂಗಗಳ ಕಾಯಿಲೆಗಳು, ಪ್ಯಾರಾಥೈರಾಯಿಡ್ ಕ್ರಿಯೆ ಇಳಿಕೆ, ಚಯಾಪಚಯ ಮತ್ತು ಉಸಿರಾಟದ ಆಮ್ಲತೆಯೇರಿಕೆ ಇವು ಏರಿಕೆಗೆ ಪ್ರಮುಖ ಕಾರಣ ಗಳು. ಅತಿಯಾಗಿ ವಿಟಮಿನ್ ಡಿ ಸೇವಿಸುವಿಕೆಯೂ ಕಾರಣ ವಾಗಬಹುದು.

ಮೆಗ್ನೀಷಿಯಂ: ಸ್ನಾಯುಗಳ ಕಾರ್ಯ, ನರಗಳ ಕಾರ್ಯ ಮತ್ತು ಹಲವಾರು ಕಿಣ್ವಗಳ ಕಾರ್ಯಗಳಿಗೆ ಮೆಗ್ನೀಷಿಯಂ ಅತ್ಯವಶ್ಯಕ. ಬಹುಪಾಲು ಮೆಗ್ನೀಷಿಯಂ ಮೂಳೆ ಮತ್ತು ಹಲ್ಲುಗಳಲ್ಲಿವೆ. ಬಹುತೇಕ ಹಸಿರು ತರಕಾರಿಗಳಲ್ಲಿ ಇದಿದ್ದು, ಸಾಮಾನ್ಯವಾಗಿ ಇದರ ಕೊರತೆಯುಂಟಾಗುವುದಿಲ್ಲ.
ಕಬ್ಬಿಣ: ರಕ್ತದ ಕೆಂಪುರಕ್ತಕಣಗಳಲ್ಲಿರುವ ಆಮ್ಲಜನಕ ಮತ್ತು ಕಾರ್ಬನ್ ಡೈ ಆಕ್ಸೈಡ್‌ಗಳನ್ನು ರಕ್ತದಲ್ಲಿ ರವಾನೆ ಮಾಡುವ ಹೀಮೋಗ್ಲೋಬಿನ್ ತಯಾರಿಕೆಗೆ ಕಬ್ಬಿಣ ಅತ್ಯಗತ್ಯ. ದೇಹದ ಅಂಗಾಂಶಗಳಲ್ಲಿ ಹಲವಾರು ಕ್ರಿಯೆಗಳನ್ನು ನಿರ್ವಹಿಸಲು ಇದು ಅತ್ಯವಶ್ಯಕ.

ಪ್ರತಿನಿತ್ಯ ೨೮ಮಿ.ಗ್ರಾಂ ಕಬ್ಬಿಣ ಅಗತ್ಯವಿದ್ದು, ಹಸಿರು ಎಲೆಯುಕ್ತ ತರಕಾರಿಗಳು, ಗೋಧಿ, ಅಕ್ಕಿ, ಮೊಟ್ಟೆ, ಈಲಿ ಮತ್ತು ಮಾಂಸ, ಜಾಜರ, ಜೋಳ,
ರಾಗಿ, ಹಣ್ಣುಗಳಲ್ಲಿ ಇದು ಅಧಿಕ ಪ್ರಮಾಣದಲ್ಲಿರುತ್ತದೆ. ಆಹಾರದ ಮೂಲಕ ತೆಗೆದುಕೊಳ್ಳುವ ಒ ಕಬ್ಬಿಣದಲ್ಲಿ ಶೇ ೩ರಿಂದ ೧೦ರಷ್ಟು ಮಾತ್ರ
ರಕ್ತಗತವಾಗುತ್ತದೆ. ಸಣ್ಣ ಕರುಳಿನಲ್ಲಿ ಸೇವಿಸಿದ ಕಬ್ಬಿಣ ರಕ್ತಗತವಾಗಿ ಟ್ರಾನ್ಸ್ ಫಾರಿನ್ ಪ್ರೋಟೀನ್ ನೊಂದಿಗೆ ಸಂಯುಕ್ತಗೊಂಡು ರಕ್ತದಲ್ಲಿ ವಿವಿಧ
ಭಾಗಗಳಿಗೆ ರವಾನೆಯಾಗುತ್ತದೆ. ರಕ್ತದಲ್ಲಿ ಟ್ರಾನ್ ಫಾರಿನ್‌ನ ಪ್ರಮಾಣ ಕಬ್ಬಿಣದ ಪ್ರಮಾಣವನ್ನು ಸೂಚಿಸುತ್ತದೆ. ಕಬ್ಬಿಣದ ಪ್ರಮಾಣ ಕಡಿಮೆಯಾ
ದಂತೆ ಟ್ರಾನ್ಸ್-ರಿನ್ ಪ್ರಮಾಣ ಹೆಚ್ಚಾಗುತ್ತದೆ.

ಕಬ್ಬಿಣದೊಡನೆ ಸಂಯುಕ್ತವಾಗದ ಟ್ರಾನ್ಸ್ ಫಾರಿನ್ ಅನ್ನು ಅಪೋಟ್ರಾನ್ಸ್ ಫಾರಿನ್ ಎನ್ನಲಾಗುತ್ತದೆ. ಕಬ್ಬಿಣ ಮೂಳೆಗಳು, ಈಲಿ, ಸ್ಪ್ಲೀನ್‌ಗಳಲ್ಲಿ ಫಾರಿಟಿನ್ ರೂಪ ದಲ್ಲಿ ಶೇಖರಣೆಯಾಗಿರುತ್ತದೆ. ವಯಸ್ಕರಲ್ಲಿ ೩ ಗ್ರಾಂ ಕಬ್ಬಿಣ ಶೇಖರಣೆ ರೂಪದಲ್ಲಿರುತ್ತದೆ. ಅವಶ್ಯಕ ಬಿದ್ದಾಗ ಇದು ರಕ್ತಕ್ಕೆ ಬಿಡುಗಡೆಯಾಗುತ್ತದೆ. ಕಬ್ಬಿಣದ ಕೊರತೆಯಾದಲ್ಲಿ ಕೆಂಪುರಕ್ತಕಣಗಳ ಉತ್ಪತ್ತಿ ಕುಗ್ಗಿ ಅನಿಮಿಯಾ ಕಾಯಿಲೆ ಉಂಟಾಗುತ್ತದೆ. ಸುಸ್ತು, ಸಂಕಟ, ದಮ್ಮು ಇದರ ಪ್ರಮುಖ ತೊಂದರೆಗಳು. ರಕ್ತದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾದಲ್ಲಿ ಹೀಮೋ ಸಿಡಿರೋಸಿಸ್ ಎಂಬ ಕಾಯಿಲೆ ಉಂಟಾಗುತ್ತದೆ. ಇದರ ಕೊರತೆಯುಂಟಾದಾಗ ಬಾಯಿ ಮೂಲಕ ಅಥವಾ ರಕ್ತಕ್ಕೆ ಕಬ್ಬಿಣಯುಕ್ತ ಔಷಧಗಳನ್ನು ನೀಡಿ ಸರಿದೂಗಿಸಲಾಗುತ್ತದೆ.

ಸೋಡಿಯಂ (ಉಪ್ಪು): ಜೀವಕೋಶಗಳಲ್ಲಿ ಪೊಟ್ಯಾಷಿಯಂ ಜೊತೆಗೂಡಿ ಜೈವಿಕ ವಿದ್ಯುತ್ ಉತ್ಪಾದನೆಗೆ ಇದು ಅತ್ಯವಶ್ಯಕ. ಸ್ನಾಯುಗಳ
ಸಂಕುಚಿತ, ನರ ವ್ಯವಸ್ಥೆಯಲ್ಲಿ ನರಾeಗಳ ರವಾನೆ, ಆಮ್ಲ ಕ್ಷಾರತೆಗಳ ಸಮತೋಲನ ಕಾಪಾಡುವಿಕೆ, ನೀರಿನ ಸಮತೋಲನ ಕಾಪಾಡುವಿಕೆ ಇತ್ಯಾದಿ ಎಲ್ಲ ಕ್ರಿಯೆಗಳಿಗೂ ಇದು ಅತ್ಯವಶ್ಯಕ. ದೇಹದಲ್ಲಿ ೮೫ ಗ್ರಾಂ ಸೋಡಿಯಂ ಇದ್ದು, ದೇಹದ ಎಲ್ಲ ದ್ರವ ಗಳಲ್ಲೂ ಇದು ಹರಡಿಕೊಂಡಿದೆ. ಪ್ರತಿನಿತ್ಯ ೩ಗ್ರಾಂ ಸೋಡಿಯಂ ಅವಶ್ಯಕ. ಉಪ್ಪು ಇದರ ಪ್ರಮುಖ ಮೂಲ. ಮತ್ತಿತರ ಎಲ್ಲ ಆಹಾರ ಪದಾರ್ಥಗಳಲ್ಲೂ ಇದು ಲಭ್ಯ. ರಕ್ತದಲ್ಲಿ ಇದರ ಸಹಜ ಪ್ರಮಾಣ ೧೩೦-೧೪೦ ಎಂ.ಇ.ಕ್ಯು/ಲೀ. ರಕ್ತದಲ್ಲಿ ಅಧಿಕವಾದ ಸೋಡಿಯಂ ಮೂತ್ರದ ಮೂಲಕ ಹೊರಹೋಗುತ್ತದೆ.

ಆಲ್ಡೋಸ್ಟಿರೋನ್ ಹಾರ್ಮೋನ್ ರಕ್ತದಲ್ಲಿ ಇದರ ಪ್ರಮಾಣವನ್ನು ನಿಯಂತ್ರಿಸುತ್ತದೆ. ಕೃತಕ ಆಹಾರಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಇದ್ದು,
ಆಹಾರಕ್ಕೆ ವಿಶಿಷ್ಟ ರುಚಿಯನ್ನೊದಗಿಸುತ್ತದೆ. ಅತಿ ಉಪ್ಪಿನಿಂದ ಏರು ರಕ್ತ ಒತ್ತಡ, ದೇಹದಲ್ಲಿ ನೀರಿನಾಂಶ ಹೆಚ್ಚಳ, ವಯಸ್ಸಾಗುವಿಕೆಯ ಲಕ್ಷಣ
ಗಳು ಇತ್ಯಾದಿ ತೊಂದರೆಗಳುಂಟಾಗುತ್ತವೆ. ಉಪ್ಪಿನ ಪ್ರಮಾಣ ಕಡಿಮೆಯಾದಲ್ಲಿ ಅತಿ ಬಾಯಾರಿಕೆ, ಸುಸ್ತು, ಸಂಕಟ, ನಿಶ್ಯಕ್ತಿ, ತಲೆನೋವು, ವಾಂತಿ, ಮಾನಸಿಕ ತಳಮಳ, ಪ್ರಜ್ಞಾಹೀನತೆ, ಫಿಟ್ಸ್ ಇತ್ಯಾದಿ ತೊಂದರೆಗಳುಂಟಾಗುತ್ತವೆ. ರಕ್ತದಲ್ಲಿ ೧೩೫ ಎಂ.ಇ.ಕ್ಯು/ಲೀಗಿಂತ ಕಡಿಮೆಯಾದಲ್ಲಿ ತೊಂದರೆ ಉಂಟಾಗುತ್ತವೆ. ಅತಿ ಉಪ್ಪಿನ ಸೇವನೆ ಹಿತಕರವಲ್ಲ.

ಪೊಟ್ಯಾಷಿಯಂ: ಪೊಟ್ಯಾಷಿಯಂ ಸೋಡಿಯಂ ಜೊತೆಗೂಡಿ ಸೋಡಿಯಂನ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತದೆ. ರಕ್ತದ ಇದರ ಪ್ರಮಾಣ ೩-೬.೨
ಮಿ.ಮೋಲ್ಸ್/ಲೀಟರ್. ರಕ್ತದಲ್ಲಿ ಇದರ ಹೆಚ್ಚಳ ಮತ್ತು ಕುಂದಿಕೆಗಳೆರಡು ಹೃದಯದ ಕಾರ್ಯದ ಮೇಲೆ ಗಂಭೀರ ಪರಿಣಾಮಗಳನ್ನುಂಟುಮಾಡಿ
ಮಾರಣಾಂತಿಕವಾಗಬಲ್ಲ ಸಾಧ್ಯತೆ ಇರುವುದರಿಂದ ಇನ್ನಿತರ ಎಲ್ಲ ಲವಣಗಳಿಗಿಂತ ಇದರ ಪ್ರಮಾಣ ನಿಯಂತ್ರಿಸುವುದು ಅತ್ಯವಶ್ಯಕ. ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದಲ್ಲಿ ಹೃದಯದ ಬಡಿತದ ವ್ಯತ್ಯಾಸಗಳು, ದಮ್ಮು, ವಾಂತಿ, ಹೃದಯಸ್ಥಂಭನಗಳುಂಟಾಗುತ್ತವೆ.

ರಕ್ತದಲ್ಲಿ ಇದರ ಪ್ರಮಾಣ ಕಡಿಮೆಯಾದಲ್ಲಿ ಸ್ನಾಯುಗಳ ನಿಶ್ಯಕ್ತಿ, ಸ್ನಾಯುಗಳ ಅದುರುವಿಕೆ, ಲಕ್ವ, ಹೃದಯ ಮಿಡಿತದ ಅವ್ಯವಸ್ಥೆಗಳುಂಟಾಗುತ್ತವೆ. ರಕ್ತಕ್ಕೆ ಪೊಟ್ಯಾಷಿಯಂ ನೀಡಿ ಸರಿದೂಗಿಸಲಾಗುತ್ತದೆ. ಹಣ್ಣುಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿರುತ್ತದೆ. ಮಾಂಸ, ಮೀನು, ಮೊಟ್ಟೆ, ಬಾಳೆಹಣ್ಣು,
ಮೋಸಂಬಿ, ನಿಂಬೆ, ಕಿತ್ತಳೆಗಳಲ್ಲಿ ಅಧಿಕ ಪ್ರಮಾಣ ದಲ್ಲಿರುತ್ತದೆ. ಮೂತ್ರಜನಕಾಂಗದ ಕಾಯಿಲೆಗಳಲ್ಲಿ ಇದರ ವ್ಯತ್ಯಾಸಗಳುಂಟಾಗುತ್ತವೆ. ಪ್ರತಿನಿತ್ಯ ೩-೭ ಗ್ರಾಂ ಪೊಟ್ಯಾಷಿಯಂ ಅತ್ಯವಶ್ಯಕ.

ಅಲ್ಪ ಪ್ರಮಾಣದ ಲವಣಗಳು: ಅಯೋಡಿನ್ ಥೈರಾಯಿಡ್ ಗ್ರಂಥಿಯ ಥೈರಾಕ್ಸಿನ್ ಉತ್ಪತ್ತಿಗೆ ಅತ್ಯ ವಶ್ಯಕ. ಇದರ ಕೊರತೆಯಿಂದ ಥೈರಾಯಿಡ್
ಗ್ರಂಥಿಯ ಊತ, ಮಕ್ಕಳಲ್ಲಿ ಬೆಳವಣಿಗೆ ನ್ಯೂನತೆ ಗಳು ಮತ್ತು ಥೈರಾಕ್ಸಿನ್ ಕೊರತೆಯುಂಟಾಗುತ್ತದೆ. ತರಕಾರಿಗಳು, ಸಮುದ್ರದ ಮೀನುಗಳು, ಸಮುದ್ರ ದಿಂದ ತೆಗೆದ ಉಪ್ಪುಗಳಲ್ಲಿ ಇದು ಲಭ್ಯ. ಮಾರು ಕಟ್ಟೆಯಲ್ಲಿ ಲಭ್ಯವಿರುವ ಉಪ್ಪಿಗೆ ಅಯೋಡಿನ್ ಸೇರಿಸುವುದರಿಂದ ಇದರ ಕೊರತೆ ಬಹು ಅಪರೂಪ.

ಕಾಪರ್ ಕಬ್ಬಿಣದ ಜೊತೆಗೂಡಿ ಶಕ್ತಿ ಉತ್ಪಾದನೆಯಲ್ಲಿ ಸಹಕಾರಿ. ಜಿಂಕ್ ಜೀವಕೋಶಗಳ ಕಿಣ್ವಗಳ ವ್ಯವಸ್ಥೆಗೆ ಮತ್ತು ಇನ್ಸ್ಯುಲಿನ್ ಉತ್ಪತ್ತಿಗೆ ಹಾಗೂ
ಬಿಳಿ ರಕ್ತಕಣಗಳ ಉತ್ಪತ್ತಿಗೆ ಅವಶ್ಯಕ. ಸೆಲಿನಿಯಂ ದೇಹದೊಳಗೆ ಉತ್ಪತ್ತಿಯಾಗುವ ಮುಕ್ತ ರ‍್ಯಾಡಿಕಲ್ ಮತ್ತಿತರ ವಿಷಮ ವಸ್ತುಗಳನ್ನು ನಾಶ ಮಾಡಿ ಕ್ಯಾನ್ಸರ್ ಮತ್ತಿತರ ಕಾಯಿಲೆಗಳನ್ನು ತಡೆ ಗಟ್ಟುತ್ತದೆ. ಕೋಬಾಲ್ಟ್ ವಿ. ಬಿ೧೨ ಜತೆ ಗೂಡಿ ಕೆಂಪುರಕ್ತಕಣಗಳ ಉತ್ಪತ್ತಿಗೆ ಅವಶ್ಯಕ. ಪ್ರೋರಿನ್ ಮೂಳೆಗಳ ನಾಶ ಮತ್ತು ಹಲ್ಲುಗಳು ಹುಳುಕಾಗು ವುದನ್ನು ತಡೆಯುತ್ತದೆ.

ಮೋಲಿಬ್ಡಿನಂ ಜೀವಕೋಶಗಳ ಹಲವಾರು ಕಿಣ್ವಗಳ ವ್ಯವಸ್ಥೆಯಲ್ಲಿ ಕಾರ‍್ಯ ನಿರ್ವಹಿಸುತ್ತದೆ. ಮ್ಯಾಂಗನೀಸ್ ಜೀವ ಕೋಶಗಳ ಕಿಣ್ವಗಳಿಗೆ ಸಹ
ಕಾರಿ. ಲವಣಗಳು ಇನ್ನಿತರ ಆಹಾರ ಪದಾರ್ಥಗಳಿಗಿಂತ ಪ್ರತಿನಿತ್ಯ ಅಲ್ಪ ಪ್ರಮಾಣದಲ್ಲಿ ಅವಶ್ಯಕವಿದ್ದು, ಇವುಗಳ ಕೊರತೆ ಪ್ರಾರಂಭದಲ್ಲಿ ಗಮನಿಸ ಬಹುದಾದ ತೊಂದರೆ ಉಂಟುಮಾಡದೆ ಗೌಪ್ಯವಾಗಿಯೇ ದೇಹದಲ್ಲಿ ತೊಂದರೆಗಳುಂಟಾಗುತ್ತದೆ.