Friday, 13th December 2024

’ಪ್ಯಾಲಿಸ್ತೇನಿ’ನಲ್ಲಿ ’ಜಿಯಾ ಉಲ್ ಹಕ್’ ನಡೆಸಿದ್ದ ನರಮೇಧ

ವೀಕೆಂಡ್ ವಿಥ್ ಮೋಹನ್ 

ಮೋಹನ್ ವಿಶ್ವ

ಕಳೆದ ಎರಡು ವಾರಗಳಿಂದ ಇಸ್ರೇಲಿ ಪಡೆಗಳು ಪ್ಯಾಲೆಸ್ತೇನಿ ಉಗ್ರರ ನೆಲೆಗಳ ಮೇಲೆ ಸತತವಾಗಿ ಅತ್ಯಾಧುನಿಕ ಬಾಂಬುಗಳ ಸುರಿಮಳೆ ಗೈದು ಬೀದಿ ನಾಯಿಗಳಂತೆ ಹೊಡೆದುರುಳಿಸುತ್ತಿರುವ ವಿಷಯ ಎಲ್ಲ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲಿನ ಅತ್ಯಾಧುನಿಕ ಅಸಗಳ ಬಗ್ಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ತನ್ನ ಸುತ್ತಲೂ ಮುಸಲ್ಮಾನ್ ಶತ್ರು ರಾಷ್ಟ್ರಗಳಿಂದಲೇ ಬದುಕ್ಕುತ್ತಿರುವ ಇಸ್ರೇಲ್ ರಾಷ್ಟ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳ ಬೇಕಾದರೆ ಅನಿವಾರ್ಯವಾಗಿ ಆಕ್ರಮಣಕಾರಿ ನೀತಿಯನ್ನು ಅನುಸರಿಸಬೇಕಿದೆ. ತಮ್ಮ ಜಿಹಾದಿ ಸಿದ್ಧಾಂತದಿಂದ ಇಡೀ ಜಗತ್ತಿನಲ್ಲಿ ನೆತ್ತರ ಕೋಡಿ ಹರಿಸುವ ಜಿಹಾದಿಗಳನ್ನು ಮಟ್ಟ ಹಾಕಬೇಕಾದರೆ ಇಸ್ರೇಲ್ ಮಾದರಿಯ ಯುದ್ಧ ಅನಿವಾರ್ಯ ವಾಗಿದೆ.

1948ರಲ್ಲಿ ಸ್ವತಂತ್ರ್ಯಗೊಂಡ ಮರುದಿನದಿಂದಲೇ ಅಕ್ಕ ಪಕ್ಕದ ಮುಸಲ್ಮಾನ್ ರಾಷ್ಟ್ರಗಳ ದಾಳಿಗೆ ಇಸ್ರೇಲ್ ತುತ್ತಾಗ ಬೇಕಾಯಿತು. ಇಸ್ರೇಲ್ ದೇಶವನ್ನು ಜಗತ್ತಿನ ಇತರ ರಾಷ್ಟ್ರಗಳಿಂದ ಪ್ರತ್ಯೇಕಿಸಿ ಯಾರು ಸಹ ಅವರೊಂದಿಗೆ ವ್ಯಾಪಾರ ವಹಿವಾಟು ಮಾಡದಂತೆ ಅರಬ್ಬರು ನೋಡಿಕೊಂಡರು. ಹೊರ ದೇಶಗಳ ಸಂಪರ್ಕವಿಲ್ಲದೆ ತತ್ತರಿಸಿದ್ದ ಇಸ್ರೇಲಿಗೆ ತನಗೆ ಬೇಕಾದಂಥ ವಸ್ತುಗಳನ್ನು ಹೊರಗಡೆಯಿಂದ ತರಿಸಿಕೊಳ್ಳುವುದು ಕಷ್ಟವೆನಿಸಿದಾಗ, ನೂತನ ಆವಿಷ್ಕಾರಗಳು ಇಸ್ರೇಲಿನಲ್ಲಿ ಪ್ರಾಂಭವಾದವು.

ತನಗೆ ಬೇಕಾದಂಥ ವಸ್ತುಗಳನ್ನು ತಾನೇ ತಯಾರಿಸಿಕೊಳ್ಳಲು ಇಸ್ರೇಲ್ ತಂತ್ರಜ್ಞಾನದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿತ್ತು. ಇಸ್ರೇಲ್ ಜಾಗದಲ್ಲಿ ಮತ್ಯಾವುದೋ ದೇಶವಿದ್ದಿದ್ದರೆ ಅರಬ್ಬರಿಗೆ ಶರಣಾಗಿ ಎಂದೋ ಇತಿಹಾಸದ ಪುಟ ಸೇರುತ್ತಿತ್ತು. ಲ್ಯಾಟಿನ್ ಅಮೆರಿಕಾದ ಹಲವಾರು ದೇಶಗಳು ತಮ್ಮ ತಂಟೆಗೆ ಬಂದವರನ್ನು ಎದುರಿಹಾಕಿಕೊಳ್ಳಲಾಗದೆ ಇಂದಿಗೂ ನಶಿಸಿಹೋಗಿವೆ.

ಇಸ್ರೇಲ್ ಅಪ್ಪಟ ರಾಷ್ಟ್ರಭಕ್ತರ ದೇಶ, ಯಹೂದಿಗಳ ವಿಷಯದಲ್ಲಿ ಕಿಂಚಿತ್ತೂ ರಾಜಿಯಾಗದ ದೇಶ. ತನ್ನ ದೇಶಕ್ಕೆ, ತನ್ನ ಪ್ರಜೆಗಳಿಗೆ ಕೊಂಚ ಹಾನಿಯಾದರೂ ಮುಲಾಜಿಲ್ಲದೇ ಶತ್ರುಗಳನ್ನು ಹೊಡೆದುರುಳಿಸುವ ದೇಶ ಇಸ್ರೇಲ್‌. ಇಸ್ರೇಲ್ ದೇಶಕ್ಕೆ ಮಹಾ ಶಕ್ತಿಯಂತೆ ಮೊದಲಿನಿಂದಲೂ ‘ಅಮೆರಿಕ’ ನಿಂತಿದೆ. ಅಮೆರಿಕಾ ಇಸ್ರೇಲ್ ಬೆನ್ನಿಗೆ ನಿಲ್ಲಲು ಕಾರಣ, ಯಹೂದಿಗಳ ಬುದ್ಧಿವಂತಿಕೆ. ಅಮೆರಿಕಾದ ಉನ್ನತ ಮಟ್ಟದ ವಿಜ್ಞಾನಿಗಳು, ಸೈನ್ಯದಲ್ಲಿನ ಅಧಿಕಾರಿಗಳು, ರಾಜಕೀಯ ನಾಯಕರು, ತಂತ್ರಜ್ಞಾನ ಕಂಪನಿಗಳು ಎಲ್ಲವೂ ಯಹೂದಿಗಳಿಂದ ಕೂಡಿದೆ.

ಇಂಥ ಮಾನವ ಜನಾಂಗವನ್ನು ಉಳಿಸಿಕೊಳ್ಳಲು ಅಮೆರಿಕ ಯಾವ ಮಟ್ಟಕ್ಕೆ ಬೇಕಾದರೂ ಹೋಗಿ ಇಸ್ರೇಲಿಗೆ ಸಹಾಯ ಮಾಡುತ್ತದೆ. ಜಗತ್ತಿನ ದೊಡ್ಡ ದೊಡ್ಡ ತಂತ್ರಜ್ಞಾನ ಕಂಪನಿಗಳು ಇಸ್ರೇಲಿನಲ್ಲಿ ತಮ್ಮ ಸಂಶೋಧನಾ ಕೇಂದ್ರಗಳನ್ನು
ಹೊಂದಿವೆ. ಮುಸಲ್ಮಾನರಿಗೆ ಯಹೂದಿಗಳನ್ನು ಕಂಡರಾಗುವುದಿಲ್ಲ, ಅವರ ಇಡೀ ಜನಾಂಗವನ್ನೇ ಸರ್ವನಾಶಮಾಡಬೇಕೆಂಬ ಹಪಹಪಿತನ ಮುಸಲ್ಮಾನರದ್ದು.

ಅರಬ್ಬರು ಇಸ್ರೇಲಿನ ಮೇಲೆ ಸದಾ ಕಾಲ ಒಂದಿಂದು ದಾಳಿಗಳನ್ನು ಮಾಡಿಸುತ್ತಲೇ ಇರುತ್ತಾರೆ. 6 ದಿನಗಳ ಯುದ್ಧದ ಬಗ್ಗೆ ಬಹುತೇಕರಿಗೆ ತಿಳಿದಿದೆ. ಇಸ್ರೇಲ್ ಕೇವಲ 6 ದಿನಗಳಲ್ಲಿ ತನ್ನ ಅತ್ಯಾದುನಿಕ ಯುದ್ಧ ವಿಮಾನಗಳನ್ನು ಬಳಸಿಕೊಂಡು 1967 ರಲ್ಲಿ ಈಜಿಪ್ಟ್, ಸಿರಿಯಾ ಹಾಗೂ ಜೋರ್ಡನ್ ದೇಶಗಳ ಮೇಲೆ ಯುದ್ಧ ಮಾಡಿ ಇಡೀ ಜಗತ್ತಿಗೆ ತನ್ನ ಸೈನ್ಯದ ಶಕ್ತಿ ಪ್ರದರ್ಶನವನ್ನು ತೋರಿಸಿತ್ತು. ಈ ಯುದ್ಧದಲ್ಲಿ ಇಸ್ರೇಲ್ ಪರವಾಗಿ ಅಮೆರಿಕ ಸಂಪೂರ್ಣವಾಗಿ ನಿಂತಿತ್ತು.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಅರಬ್ಬರನ್ನು ಮೀರಿಸಿ ಹೊಸ ಶಕ್ತಿಯಾಗಿ ಹೊರಹೊಮ್ಮಿತ್ತು. ರಷ್ಯಾ ಬೆಂಬಲಿತ ಅರಬ್ ರಾಷ್ಟ್ರಗಳು ಇಸ್ರೇಲಿನ ಮುಂದೆ ಮಂಡಿಯೂರಬೇಕಾಯಿತು. ಅರಬ್ಬರ ದೊಡ್ಡ ದೊಡ್ಡ ನಾಯಕರು ಏನು ಆಗದಂತೆ ಕೈಚೆಲ್ಲಿ ಕುಳಿತಿದ್ದರು. ಇಂಥ ಸಮಯದಲ್ಲಿ ಪ್ಯಾಲಿಸ್ತೇನ್ ಲಿಬರೇಶನ್ ಸಂಘಟನೆ ಹುಟ್ಟಿಕೊಂಡಿತು. 1969ರಲ್ಲಿ ಜೋರ್ಡನ್‌ನಲ್ಲಿದಂಥ ‘ಪ್ಯಾಲಿಸ್ತೇನಿ’ ಗಳು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆಯಿಡುವ ಸಲುಯಾಗಿ ತಮ್ಮ ಸಂಘಟನೆಯ ಮೂಲಕ ಚಳುವಳಿಗಳನ್ನು ಮಾಡಲು ಶುರು ಮಾಡಿದ್ದರು.

ಜೋರ್ಡನ್ ದೇಶದೊಳಗೆ ವಿದ್ವಂಸಕ ಕೃತ್ಯಗಳನ್ನು ನಡೆಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿದ್ದರು. 6 ದಿನಗಳ ಯುದ್ಧದ ಸೋಲಿನಿಂದ ಕೆಂಗೆಟ್ಟಿದಂಥ ಅರಬ್ಬರ ನಾಡಿನಿಂದ ಸಾವಿರಾರು ಯುವಕರು ಈ ಸಂಘಟನೆಗೆ ಬಂದು ಸೇರಿಕೊಂಡರು. ಜಗತ್ತಿನಾದ್ಯಂತ ಹಲವಾರು ಮುಸಲ್ಮಾನರು ಈ ಸಂಘಟನೆಗೆ ಸೇರಿಕೊಂಡರು.

1969ರಲ್ಲಿ ಜೋರ್ಡಾನಿನಲ್ಲಿದ್ದಂಥ ಪ್ಯಾಲೆಸ್ತೇನಿಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದವು. ಜೋರ್ಡಾನಿನ ಸೈನ್ಯದ ಸಹಾಯದಿಂದ ‘ಪ್ಯಾಲೆಸ್ತೇನಿ ಪ್ರತ್ಯೇತಕವಾದಿ ಸಂಘಟನೆ’ ಇಸ್ರೇಲಿ ಸೈನಿಕರ ವಿರುದ್ಧ ಹೋರಾಡಿ ವಿಜಯ ಸಾಧಿಸಿತ್ತು. ಮೊಟ್ಟಮೊದಲ ಬಾರಿಗೆ ಇಸ್ರೇಲ್ ಸೈನ್ಯಕ್ಕೆ ಪ್ಯಾಲೆಸ್ತೇನಿಗಳು ಹಿನ್ನಡೆ ಅನುಭವಿಸುವಂತೆ ಮಾಡಿದ್ದರು, ಈ ದಾಳಿಯ ನೇತೃತ್ವ ವನ್ನು ವಹಿಸಿಕೊಂಡಿದ್ದವನು ಪ್ಯಾಲೆಸ್ತೇನಿ ನಾಯಕ ‘ಯಾಸೀರ್ ಅರಾಫತ್’. ಅರಬ್ಬರು ಮಾಡದ ಕೆಲಸವನ್ನು ಜೋರ್ಡನ್ ಸೈನ್ಯದ ನೆರವಿನಿಂದ ‘ಯಾಸೀರ್ ಅರಾಫತ್’ ಮಾಡಿದ್ದನು.

‘ಯಾಸೀರ್ ಅರಾ-ತ್’ನ ಜನಪ್ರಿಯತೆ ಅರಬ್ಬರಲ್ಲಿ ಹೆಚ್ಚತೊಡಗಿತು. ಅರಾಫತ್’ ಪ್ಯಾಲೆಸ್ತೇನಿ ಸಂಘಟನೆಯ ನೂತನ ನಾಯಕ ನಾಗಿ ಹೊರಹೊಮ್ಮಿದ್ದ. ಅಷ್ಟು ಹೊತ್ತಿಗಾಗಲೇ ಅರಬ್ಬರಲ್ಲಿ ಒಗ್ಗಟ್ಟು ಮುರಿದು ಬಿದ್ದಿತ್ತು. ಸೌದಿ ಅರೇಬಿಯಾ ಹಾಗೂ ಇರಾನ್ ದೇಶಗಳು ಅಮೆರಿಕ ದೇಶದೊಡನೆ ಕೈ ಜೋಡಿಸಿದ್ದವು, ಇತ್ತ ಜೋರ್ಡನ್ ಹಾಗೂ ಈಜಿಪ್ಟ್ ದೇಶಗಳು ನಿಧಾನವಾಗಿ ಅಮೆರಿಕ ದೇಶದೊಡನೆ ಮಾತುಕತೆಯಾಡಲು ಆರಂಭಿಸಿದ್ದವು.

ಜೋರ್ಡನ್ ದೇಶವು ನಿಧಾನವಾಗಿ ಇಸ್ರೇಲ್ ದೇಶದೊಡನೆಯೇ ಮಾತುಕತೆ ಆರಂಭಿಸಿಯಾಗಿತ್ತು.‘ಜೋರ್ಡನ್’ನಲ್ಲಿ ನಿಧಾನ ವಾಗಿ ಮುಸ್ಲಿಂ ದೊರೆ ‘ಹುಸೇನ್’ ಜನಪ್ರಿಯತೆ ಕುಗ್ಗತೊಡಗಿತು. ಜೋರ್ಡನ್ ಸೈನ್ಯವು ಆತನ ಮಾತನ್ನು ಕೇಳಲು ತಯಾರಿರ ಲಿಲ್ಲ, ಆತನ ವಿರುದ್ಧವೇ ಕೆಲಸ ಮಾಡಲು ಶುರುಮಾಡಿದ್ದವು. ಪ್ಯಾಲೆಸ್ತೇನಿ ಸಂಘಟನೆ ಯಾವಾಗ ಬೇಕಾದರೂ ಮಿಂಚಿನ ದಾಳಿಯ ಮೂಲಕ ಕಾರ್ಯಾಚರಣೆ ನಡೆಸಿ ಜೋರ್ಡನ್ ಪ್ರಾಂತ್ಯದಲ್ಲಿ ತಾನು ಕೇಳುತ್ತಿರುವ ಪ್ರತ್ಯೇಕ ಪ್ಯಾಲೆಸ್ತೇನಿ ರಾಷ್ಟ್ರವನ್ನು ಪಡೆದುಬಿಡಬಹುದೆಂಬ ಭಯ ಅವನಿಗಿತ್ತು.

‘ಹುಸೇನ್ ’ನನ್ನು ಕೊಲ್ಲಲು ಪ್ಯಾಲೆಸ್ತೇನಿಗಳು ಹಲವು ಪ್ರಯತ್ನಗಳನ್ನು ಮಾಡಿದರು. ಅದೃಷ್ಟವಷಾತ್ ಆತನಿಗೆ ಏನು ಆಗಲಿಲ್ಲ,
‘ಜೋರ್ಡನ್’ ದೇಶದಲ್ಲಿ ಸಣ್ಣದಾದಂಥ ಭೂಭಾಗವನ್ನು ಪ್ಯಾಲೆಸ್ತೇನಿಗಳು ವಶಪಡಿಸಿಕೊಂಡು ನಿರಂತರವಾಗಿಇಸ್ರೇಲ್ ದೇಶದ ಮೇಲೆ ಸಣ್ಣ ಪುಟ್ಟ ದಾಳಿಗಳನ್ನು ಮಾಡತೊಡಗಿದ್ದರು. ಇದರಿಂದ ‘ಹುಸೇನ್’ ತನ್ನ ದೇಶದಲ್ಲಿ ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದ.

ಸೈನ್ಯದ ಕೆಲವು ಅಧಿಕಾರಿಗಳ ಮೇಲೆ ನಂಬಿಕೆಯನ್ನು, ಕಳೆದುಕೊಂಡಂಥ ‘ಹುಸೇನ್’ ಪ್ಯಾಲೆಸ್ತೇನಿಗಳನ್ನು ಬಗ್ಗು ಬಡೆಯಲು ಪಾಕಿಸ್ತಾನದ ಸಹಾಯ ಕೋರಿದ್ದ. ಸೆಪ್ಟೆಂಬರ್ 1970ರಲ್ಲಿ ಪ್ಯಾಲಿಸ್ತೇನಿಗಳು ‘ಸ್ವಿಸ್ ಏರ್’ ವಿಮಾನವನ್ನು ಅಪಹರಿಸಿ ಈಜಿಪ್ಟಿನ ಕೈರೋನಲ್ಲಿ ಇಳಿಸಿ, ಒಳಗಿದ್ದಂಥ ಪ್ರಯಾಣಿಕರನ್ನು ಕೆಳಗಿಳಿಸಿ ಕ್ಯಾಮೆರಾಗಳ ಮುಂದೆಯೇ ಇಡೀ ವಿಮಾನಕ್ಕೆ ಬೆಂಕಿ ಹಚ್ಚಿದರು. ಇದಾದ ನಂತರಜೋರ್ಡನ್‌ನ ‘ಇಬ್ರಿಡ್’ ಪ್ರಾಂತ್ಯವನ್ನು ಸ್ವತಂತ್ರವೆಂದುಘೋಷಿಸಿ ಪ್ಯಾಲಿಸ್ತೇನಿ ಭೂಭಾಗವೆಂದರು. ಇಷ್ಟಾದ
ಮೇಲು ಸುಮ್ಮನಿರುವುದು ಸರಿಯಿಲ್ಲವೆಂದು ಅರಿತ ‘ಹುಸೇನ್’ ಜೋರ್ಡನ್ ದೇಶದಲ್ಲಿ ‘ಮಾರ್ಷಿಯಲ್ ಕಾನೂನು’ ಘೋಷಿಸಿಬಿಟ್ಟನು.

1970ರ ಸೆಪ್ಟೆಂಬರ್ ತಿಂಗಳಲ್ಲಿ ಜೋರ್ಡನ್ ಸೈನ್ಯ ಹಾಗೂ ಪಾಕಿಸ್ತಾನದಿಂದ ತರಬೇತಿ ನೀಡಲು ಬಂದಿದ್ದಂಥ ಬ್ರಿಗೇಡಿಯರ್ ‘ಜಿಯಾ ಉಲ್ ಹಕ್’ ನೇತೃತ್ವದ ಪಡೆಗಳು ಇರಾನಿ ಸೈನಿಕರೊಂದಿಗೆ ‘ಇಬ್ರಿಡ್’ ನಗರಕ್ಕೆ ಪ್ಯಾಲೆಸ್ತೇನಿ ಗಳನ್ನು ಸದೆಬಡಿಯಲು ನುಗ್ಗಿದವು. ಇಡೀ ಕಾರ್ಯಾಚರಣೆಯು ಪಾಕಿಸ್ತಾನದ ಬ್ರಿಗೇಡಿಯರ್ ‘ಜಿಯಾ ಉಲ್ ಹಕ್’ ನೇತೃತ್ವದಲ್ಲಿ ನಡೆಯಿತು. ‘ಇಬ್ರಿಡ್’
ಪ್ರಾಂತ್ಯದ ಗಲ್ಲಿ ಗಲ್ಲಿಗಳಲ್ಲಿ ನುಗ್ಗಿದ ಪಡೆಗಳು ಪ್ಯಾಲಿಸ್ತೇನಿಗಳನ್ನು ಮನಬಂದಂತೆ ಕೊಂದರು. ಒಂದು ಅಂದಾಜಿನ ಪ್ರಕಾರ ಸುಮಾರು 25000 ಪ್ಯಾಲಿಸ್ತೇನಿ ಮುಸಲ್ಮಾನರನ್ನು ಈ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ.

ಸಿರಿಯಾ ದೇಶವು ಪ್ಯಾಲೆಸ್ತೇನಿಗಳ ಸಹಾಯಕ್ಕೆ ನಿಲ್ಲಲು ಮುಂದೆ ಬಂದಿತು, ಆದರೆ ಇಸ್ರೇಲ್ ಹಾಗೂ ಅಮೆರಿಕ ನೀಡಿದ ಎಚ್ಚರಿಕೆ ಯಿಂದ ಹಿಂದೆಸರಿದು ಪ್ಯಾಲಿಸ್ತೇನಿಗಳಿಗೆ ಸಹಾಯ ಮಾಡಲಿಲ್ಲ. ಪ್ಯಾಲಿಸ್ತೇನಿ ನಾಯಕನಾಗಿದ್ದಂಥ ‘ಅರಾಫತ್’ ಸ್ವತಃ ರೇಡಿಯೋ ಸಂದರ್ಶನದಲ್ಲಿ ಸುಮಾರು 10000 ಪ್ಯಾಲಿಸ್ತೇನಿಗಳು ಮೃತಪಟ್ಟರೆಂದು ಹೇಳಿದ್ದ. ಪಾಕಿಸ್ತಾನದ ಬ್ರಿಗೇಡಿಯರ್ ‘ಜಿಯಾ ಉಲ್ ಹಕ್’ ಮುಸಲ್ಮಾನರ ಮೇಲೆ ನಡೆಸಿದ ಈ ಕಾರ್ಯಾಚರಣೆಯನ್ನು ಮುಸಲ್ಮಾನರ ಮೇಲೆ ನಡೆದ ಪ್ರಪಂಚದ ಬಹುದೊಡ್ಡ ನರಮೇಧವೆಂದು ಹೇಳಲಾಗುತ್ತದೆ. ಈಗ ಇಸ್ರೇಲ್ ಪ್ಯಾಲಿಸ್ತೇನಿಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸುತ್ತಿರುವ ಭಾರತದ ಮುಸಲ್ಮಾನರಿಗೆ ಐದು ದಶಕಗಳ ಹಿಂದೆ ‘ಜಿಯಾ ಉಲ್ ಹಕ್’ಎಂಬ ಮುಸ್ಲಿಂ ನಾಯಕ ಇದೆ ಪ್ಯಾಲೆಸ್ತೇನಿಗಳನ್ನು ಮನಸೋ ಇಚ್ಛೆ ರಸ್ತೆ ರಸ್ತೆಗಳಲ್ಲಿ ಕೊಂದಿದ್ದನೆಂಬ ವಿಷಯ ತಿಳಿದಿರಲಿಕ್ಕಿಲ್ಲ.

ಇಂದು ಅದೇ ಪಾಕಿಸ್ತಾನದ ಮುಸಲ್ಮಾನರು ಪ್ಯಾಲಿಸ್ತೇನಿಗಳ ಪರವಾಗಿ ನಿಂತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನಾನು
ಪ್ಯಾಲಿಸ್ತೇನಿ ಮುಸಲ್ಮಾನರ ಜೊತೆ ನಿಲ್ಲುತ್ತೇನೆಂದು ಹೇಳುವ ಭಾರತದ ಮುಸಲ್ಮಾನರು ಸ್ವಲ್ಪ ಇತಿಹಾಸವನ್ನು ಕೆದಕಿ
ಪ್ಯಾಲೆಸ್ತೇನಿ ಮುಸಲ್ಮಾನರ ಮೇಲಾದಂಥ ಬಹುದೊಡ್ಡ ನರಮೇಧಕ್ಕೆ ನೇರ ಹೊಣೆ ಮತ್ತೊಬ್ಬ ಮುಸಲ್ಮಾನನೆಂಬ ಅಂಶವನ್ನು ಅರಿಯಬೇಕು. ‘ಜಿಯಾ ಉಲ್ ಹಕ್’ನ ನೇತೃತ್ವದ ದಾಳಿಗೆ ತತ್ತರಿಸಿದ ಪ್ಯಾಲಿಸ್ತೇನಿ ಪಡೆಗಳು, ಬೇಧಿಸಿ ಬಂದವರು ಓಡುವಂತೆ ಓಡಿ ಗೂಡು ಸೇರಿಕೊಂಡಿದ್ದರು.

ವಿಧಿಯಿಲ್ಲದೆ ‘ಯಾಸೀರ್ ಅರಾ-ತ್’ ಕದನ ವಿರಾಮ ಘೋಷಿಸಬೇಕಾಯಿತು. ಜೋರ್ಡನ್ ಪಡೆಗಳಿಗೆ ಶರಣಾಗಿ ‘ಇಬ್ರಿಡ್’ ಪ್ರಾಂತ್ಯದಿಂದ ತನ್ನ ಹೋರಾಟಗಾರರನ್ನು ವಾಪಾಸ್ ಕರೆಸಿಕೊಳ್ಳುವ ಪರಿಸ್ಥಿತಿ ಪ್ಯಾಲೆಸ್ತೇನಿಗರಿಗೆ ಎದುರಾಯಿತು. ಸೆಪ್ಟೆಂಬರ್ 1970ರ ಕಾರ್ಯಾಚರಣೆಯು ಪ್ಯಾಲೇಸ್ತೇನಿ ಮುಸಲ್ಮಾನರಲ್ಲಿ ಅದೆಷ್ಟು ಸೇಡಿನ ಮನೋಭಾವನೆಯನ್ನು ಮೂಡಿಸಿತ್ತೆಂದರೆ, ಸೇಡು ತೀರಿಸಿಕೊಳ್ಳಲು ‘ಬ್ಲಾಕ್ ಸೆಪ್ಟೆಂಬರ್’ಎಂಬ ಉಗ್ರ ಸಂಘಟನೆ ಯೊಂದನ್ನೇ ಕಟ್ಟಿದರು. ನಂತರದ ದಿನಗಳಲ್ಲಿ ಜರ್ಮನಿಯ
‘ಮ್ಯುನಿಕ್’ ಒಲಿಂಪಿಕ್‌ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಅಪಹರಣ ಹಾಗೂ ಕೊಲೆಯ ಹೊಣೆಯನ್ನು ಇದೇ ಉಗ್ರ ಸಂಘಟನೆ ಹೊತ್ತಿತ್ತು.

1970ರ ಸೆಪ್ಟೆಂಬರ್ ತಿಂಗಳಲ್ಲಿ ಪ್ಯಾಲಿಸ್ತೇನಿ ಮುಸ್ಲಿಂ ಸಂಘಟನೆಗಳ ಮೇಲೆ ಏಳು ದಿನಗಳ ಕಾಲ ‘ಜಿಯಾ ಉಲ್ ಹಕ್’ ಹಾಗೂ ಜೋರ್ಡನ್ ದೊರೆ ‘ಹುಸೇನ್’ ಮುಸಲ್ಮಾನರ ಮೇಲೆ ನಡೆಸಿದ ನರಮೇಧದಲ್ಲಿ ಸತ್ತವರ ಸಂಖ್ಯೆಯು ಇಪ್ಪತ್ತು ವರ್ಷಗಳಲ್ಲಿ ಇಸ್ರೇಲ್ ದಾಳಿಗೆ ತುತ್ತಾಗಿ ಸತ್ತಂಥ ಪ್ಯಾಲೆಸ್ತೇನಿಗಳಿಗಿಂತಲೂ ಹೆಚ್ಚಿತ್ತೆಂದು ಇಸ್ರೇಲ್ ದೇಶದ ಜನಕರೊಬ್ಬರು ಬಹಿರಂಗವಾಗಿ
ಹೇಳಿದ್ದರು. 1981 ರಲ್ಲಿ ಪ್ಯಾಲಿಸ್ತೇನಿ ಮುಸಲ್ಮಾನರ ಮೇಲಿನ ದಾಳಿಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಂಥ ‘ಜಿಯಾ ಉಲ್ ಹಕ್’, ಪಾಕಿಸ್ತಾನ ಹಾಗೂ ಇಸ್ರೇಲ್ ಎರಡೂ ದೇಶಗಳ ಸಿದ್ಧಾಂತವೊಂದೇ ಆಗಿದೆ. ಹೇಗೆ ‘ಯಹೂದಿ’ಗಳಿಲ್ಲದೆ ಇಸ್ರೇಲ್ ರಾಷ್ಟ್ರ ವಿಲ್ಲವೋ, ಮುಸಲ್ಮಾನರಿಲ್ಲದೇ ಪಾಕಿಸ್ತಾನವಿಲ್ಲ.

ಯಹೂದಿಗಳಿಗಾಗಿ ಇಸ್ರೇಲ್ ಹೇಗೆ ಯಾವ ಮಟ್ಟಕ್ಕಾದರೂ ಹೋಗಿ ತನ್ನವರನ್ನು ಕಾಪಾಡುತ್ತದೆಯೋ, ಮುಸಲ್ಮಾನರಿಗಾಗಿ ಪಾಕಿಸ್ತಾನವು ಯಾವ ಮಟ್ಟಕ್ಕಾದರೂ ಹೋಗಿ ತನ್ನವರನ್ನು ಕಾಪಾಡುತ್ತದೆಯೆಂದು ತನ್ನ ಪ್ರಜೆಗಳ ಮುಂದೆ ಹೇಳಿದ.
ಇಸ್ರೇಲ್ ದೇಶದಿಂದ ‘ಜೂಡಾಯಿಸಂ’ ತೆಗೆದರೆ ಹೇಗೆ ದೇಶವು ತರಗೆಲೆಯಾಗಿ ಉದುರುತ್ತದೆಯೋ, ಪಾಕಿಸ್ತಾನ ದಿಂದ ‘ಇಸ್ಲಾಂ’ ತೆಗೆದು ‘ಜಾತ್ಯತೀತತೆ’ಯನ್ನು ಪ್ರತಿಪಾದಿಸಿದರೆ ಪಾಕಿಸ್ತಾನವು ತರಗೆಲೆಯಂತೆ ಉದುರುವುದು ನಿಶ್ಚಿತವೆಂದು ಹೇಳಿದ್ದನು.

ಪಾಕಿಸ್ತಾನವು ಸ್ವರ್ಗದಂತಿದೆಯೆಂದು ಹೇಳಿದ್ದ ಕಾಂಗ್ರೆಸ್ಸಿನ ಮಾಜಿ ನಾಯಕಿ ‘ರಮ್ಯ ದಿವ್ಯ ಸ್ಪಂದನ’ಳಿಗೆ ‘ಜಿಯಾ ಉಲ್ ಹಕ್’ನ
ಮಾತುಗಳ ಬಗ್ಗೆ ಅರಿವಿರಲಿಕ್ಕಿಲ್ಲ. ಭಾರತದ ‘ಜಾತ್ಯತೀತತೆ’ ಯ ಬಗ್ಗೆ ಪುಂಗಿ ಊದುವ ಕಮ್ಯುನಿಷ್ಟರು, ಕಾಂಗ್ರೆಸ್ಸಿಗರು
ಪಾಕಿಸ್ತಾನದ ‘ಜಿಯಾ ಉಲ್ ಹಕ್’ ಆಡಿದ ಮಾತುಗಳನ್ನೊಮ್ಮೆ ಕೇಳಬೇಕು. ಸರ್ವ ಧರ್ಮವನ್ನೂ ಪ್ರೀತಿಸಿ ಎಲ್ಲರಿಗು ಸಮಾನ ವಾಗಿ ಪ್ರೀತಿಯನ್ನು ಹಂಚುವ ಭಾರತೀಯ ನಾಯಕತ್ವದ ಬಗ್ಗೆ ಮಾತನಾಡುವವರೂ ಸಹ ‘ಜಿಯಾ ಉಲ್ ಹಕ್’ನ ಮಾತುಗಳನ್ನು ಕೇಳಬೇಕು.

‘ಜಾತ್ಯತೀತ’ವೇ ಬೇಡವೆಂದು ಬಹಿರಂಗವಾಗಿ ಹೇಳಿದ ಪಾಕಿಸ್ತಾನದ ನಾಯಕ ‘ಜಿಯಾ ಉಲ್ ಹಕ್’ನ ಮಾತುಗಳ ರೀತಿ, ಯಾವೊಬ್ಬ ಭಾರತೀಯ ನಾಯಕನೂ ಇದುವರೆಗೂ ಹೇಳಿಲ್ಲ. ಲ್ಯಾಂಡ್ ಜಿಹಾದ್ ಮೂಲಕ ಹಿಂದೂ ನೆಲೆಗಳನ್ನೇ ಆಕ್ರಮಿಸಿ ಕೊಂಡಿರುವ ಹಲವು ಭಾರತೀಯ ಮುಸಲ್ಮಾನ್ ನಾಯಕರು ಇಂದು ಭಾರತದಲ್ಲಿನ ‘ಜಾತ್ಯತೀತತೆ’ಯ ಬಗ್ಗೆ ಪುಂಗಿ ಊದುತ್ತಾರೆ. ಈಗ ಪ್ಯಾಲಿಸ್ತೇನಿಗಳ ಪರವಾಗಿ ನಿಂತಿರುವ ಕಮ್ಯುನಿಷ್ಟರು ಹಾಗೂ ಭಾರತೀಯ ಮುಸಲ್ಮಾನರು, ಅಂದು ‘ಜಿಯಾ ಉಲ್ ಹಕ್’ ನಡೆಸಿದ ನರಮೇಧವನ್ನು ಖಂಡಿಸುತ್ತಾರೆಯೇ? ಒಂದಂತೂ ಸ್ಪಷ್ಟ ಅರಬ್ಬಿನಲ್ಲಿರುವ ಮುಸಲ್ಮಾನ್ ರಾಷ್ಟ್ರಗಳು ಪ್ಯಾಲಿಸ್ತೇನಿ ಗಳಿಗೆ ಕೇವಲ ‘ಇಸ್ರೇಲಿನ’ ಮೇಲೆ ದಾಳಿ ಮಾಡಿದರಷ್ಟೇ ಸಹಾಯ ಮಾಡುತ್ತವೆ.

ಅದನ್ನು ಬಿಟ್ಟು ತಮ್ಮ ಮೇಲೆಯೇ ದಾಳಿ ಮಾಡಲು ಮುಂದಾದರೆ ಖಂಡಿತವಾಗಿಯೂ ಸಹಾಯ ಮಾಡುವುದಿಲ್ಲ, ಅವರಲ್ಲಿ ಯೂ ಒಡಕಿದೆ ಅವರೂ ಸಹ ಮುಸಲ್ಮಾನರನ್ನು ಕೊಲ್ಲಲು ಹಿಂಜರೆಯುವುದಿಲ್ಲವೆಂಬುದನ್ನು ‘ಜಿಯಾ ಉಲ್ ಹಕ್’ ನಡೆಸಿದ ಕಾರ್ಯಾಚರಣೆಯು ಸ್ಪಷ್ಟವಾಗಿ ಹೇಳುತ್ತದೆ. ಇಂದಿಗೂ ಅಷ್ಟೇ ‘ಪ್ಯಾಲಿಸ್ತೇನಿ’ಗಳಿಗೆ ಕೇವಲ ಇಸ್ರೇಲ್ ಮೇಲಿನ ದಾಳಿಗಷ್ಟೇ ಅರಬ್ ರಾಷ್ಟ್ರಗಳು ಸಹಾಯ ಮಾಡುತ್ತವೆ. ಮುಸಲ್ಮಾನರ ರಕ್ಷಣೆಗಾಗಿ ಎಂದು ಸಹ ಅವರೂ ನಿಲ್ಲುವುದಿಲ್ಲ, ಇದನ್ನರಿಯದ ಭಾರತದ ಪುಡಪೋಷಿ ಸಾಮಾಜಿಕ ಜಾಲತಾಣದ ಒಂದಷ್ಟು ಹೋರಾಟಗಾರರು ಜಗತ್ತಿನಲ್ಲಿ ತಾವೆಲ್ಲರೂ ಒಂದೇ ಎಂಬುದನ್ನು ಬಿಂಬಿಸಲು ಹೋಗಿ ‘ಪ್ಯಾಲಿಸ್ತೇನಿ’ಗಳಿಗೆ ಬೆಂಬಲವಾಗಿ ನಿಲ್ಲುತ್ತಾರೆ.

‘ಪ್ಯಾಲೆಸ್ತೇನಿ’ನಲ್ಲಿ ನರಮೇಧ ನಡೆಸಿ 25000 ಸಾವಿರ ಮುಸಲ್ಮಾನರ ಸಾವಿಗೆ ಕಾರಣವಾಗಿದ್ದಂಥ ‘ಜಿಯಾ ಉಲ್ ಹಕ್’ನ ಹೆಸರನ್ನು ಪಾಕಿಸ್ತಾನಕ್ಕೆ ವಾಪಸ್ ಬಂದ ನಂತರ ‘ಮಾರ್ಷಿಯಲ್ ನ್ಯಾಯಾಲಯ’ಕ್ಕೆ ಸೂಚಿಸಲಾಯಿತು. ಆದರೆ ಅದನ್ನು ತಲೆಗೆ ಹಾಕಿಕೊಳ್ಳದ ಅಂದಿನ ಪಾಕಿಸ್ತಾನಿ ಆರ್ಮಿ ಜನರಲ, ಆತನ ಹೆಸರನ್ನು ಪಟ್ಟಿಯಿಂದ ಕೈ ಬಿಟ್ಟು ಪಾಕಿಸ್ತಾನಿ ಸೈನ್ಯದಲ್ಲಿ ಮುಂಬಡ್ತಿ ಪಡೆಯಲು ಶಿಫಾರಸ್ಸು ಮಾಡಿದ್ದರು. ಇಂದು ಪ್ಯಾಲಿಸ್ತೇನಿಗಳ ಪರವಾಗಿ ನಿಲ್ಲುವ ಭಾರತದ ಮುಸಲ್ಮಾನರೇ ಒಮ್ಮೆ ಈ ಇತಿಹಾಸವನ್ನು ತಿಳಿಯಿರಿ, ಸಾವಿರಾರು ಮುಸಲ್ಮಾನರನ್ನು ಕೊಂದಂಥವನಿಗೆ ಅಂದಿನ ಪಾಕಿಸ್ತಾನ ಸರಕಾರ ‘ಮುಂಬಡ್ತಿ’ ನೀಡಿ ಗೌರವಿಸಿತ್ತು, ಮುಸಲ್ಮಾನ್ ರಾಷ್ಟ್ರವೊಂದು ಮುಸಲ್ಮಾನರನ್ನು ಕೊಂದಿದಕ್ಕೆ ಬಹುಮಾನ ನೀಡಿದ ಜಗತ್ತಿನ ಏಕೈಕ ಮುಸಲ್ಮಾನ ರಾಷ್ಟ್ರ ಪಾಕಿಸ್ತಾನವೆಂಬುದು ನೆನಪಿರಲಿ.

ಪಾಕಿಸ್ತಾನದ ಅಂದಿನ ಅಧ್ಯಕ್ಷರಾಗಿದ್ದ ‘ಜುಲಿಕರ್ ಅಲಿ ಭುಟ್ಟೋ’ ಸ್ವತಃ ಈ ನಿರ್ಧಾರವನ್ನು ತೆಗೆದುಕೊಂಡು ‘ಜಿಯಾ ಉಲ್ ಹಕ್’ನನ್ನು ಸೈನ್ಯದ ಮುಖ್ಯಸ್ಥನನ್ನಾಗಿ ನೇಮಿಸಿದ್ದರು. 1976ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಪರಮಾಣು’ ತಂತ್ರಜ್ಞಾನದ ಬಗ್ಗೆ ಬಹುದೊಡ್ಡ ಚರ್ಚೆಗಳು ಆರಂಭವಾಗಿದ್ದವು, ಪಾಕಿಸ್ತಾನವು ಸಹ ಪರಮಾಣು ತಂತ್ರಜ್ಞಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ‘ಪರಮಾಣು’ ಬಾಂಬ್ ತಯಾರಿಸುವ ನಿಟ್ಟಿನಲ್ಲಿ ಯೋಜನೆ ಯನ್ನು ಸಿದ್ಧಪಡಿಸುತ್ತಿತ್ತು. ಅಮೆರಿಕ ದೇಶವು ಪಾಕಿಸ್ತಾನದ ಈ ನಡೆಯನ್ನು ಖಂಡಿಸಿ ‘ಇಸ್ಲಾಮಿಕ್ ಬಾಂಬ್’ಎಂದು ಕರೆಯುವ ಮೂಲಕ ಎಚ್ಚರಿಕೆಯನ್ನು ನೀಡಿತ್ತು.

ಆದರೆ ‘ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಮಂಡಳಿ’ಯ ಅನುಮತಿಯನ್ನು ಪಡೆದು ತಾನು ಈ ಕೆಲಸ ಮಾಡುತ್ತಿರುವುದಾಗಿ ಅಂದಿನ ಪಾಕಿಸ್ತಾನದ ಅಧ್ಯಕ್ಷ ‘ಜುಲಿಕರ್ ಅಲಿ ಭುಟ್ಟೋ’ ಹೇಳಿದ್ದರು, ಅವರ ಮಾತುಗಳನ್ನು ಪಾಶ್ಚಿಮಾತ್ಯ ದೇಶಗಳು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದೇ ಸಮಯದಲ್ಲಿ ಪಾಕಿಸ್ತಾನದ ಸೈನ್ಯದ ಮುಖ್ಯಸ್ಥನಾಗಿದ್ದಂಥ ‘ಜನರಲ್ ಟಿಕ್ಕಾ ಖಾನ್’ ನಿವೃತ್ತಿ ಹೊಂದುವವನಿದ್ದ, ಆತನ ಜಾಗಕ್ಕೆ ನೂತನ ಮುಖ್ಯಸ್ಥನನ್ನು ಕೂರಿಸಬೇಕಿತ್ತು.

1947ರ ನಂತರ ಪಾಕಿಸ್ತಾನದ ಇತಿಹಾಸದಲ್ಲಿ ನಡೆದಂಥ ‘ಸೇನಾ ಮುಖ್ಯಸ್ಥರ’ ಕ್ಷಿಪ್ರ ಕಾರ್ಯಾಚರಣೆಯ ಅರಿವಿದ್ದಂಥ ‘ಭುಟ್ಟೋ’ ತಾನು ಹೇಳಿದ ಹಾಗೆ ಕೇಳುವಂಥ ವ್ಯಕ್ತಿಯನ್ನು ಆ ಜಾಗಕ್ಕೆ ಕೂರಿಸಬೇಕಿತ್ತು. ‘ಜನರಲ್ ಟಿಕ್ಕಾ ಖಾನ್’ ಬಳಿ ಮಾತನಾಡಿ ಆತನು ಕಳುಹಿಸಿದ ಶಿಫಾರಸ್ಸು ಪಟ್ಟಿಯಲ್ಲಿ ‘ಜಿಯಾ ಉಲ್  ಹಕ್’ನ ಹೆಸರಿಲ್ಲದಿರುವುದನ್ನು ಕಂಡು ‘ಭುಟ್ಟೋ’ಗೆ ಆಶ್ಚರ್ಯವಾಗಿತ್ತು. ಆರು ಜನರ ಹೆಸರನ್ನು ಶಿಫಾರಸ್ಸು ಮಾಡಿದ ಆತ, ‘ಜಿಯಾ ಉಲ್ ಹಕ್’ನ ಹೆಸರನ್ನು ಶಿಫಾರಸ್ಸು ಮಾಡಿರಲಿಲ್ಲ.

ಆದರೆ 1973ರಲ್ಲಿ ‘ಜುಲಿಕರ್ ಅಲಿ ಭುಟ್ಟೋ’ ಸರಕಾರದ ಮೇಲೆ ಬೇಹುಗಾರಿಕೆ ನಡೆಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆಡಳಿತ ವನ್ನು ಸೈನ್ಯದ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಂಥ ಒಂದು ತಂಡದ ಕಾರ್ಯಾಚರಣೆಯನ್ನು ವಿಫಲಗೊಳಿಸು ವಲ್ಲಿ ‘ಜಿಯಾ ಉಲ್ ಹಕ್’ ಪ್ರಮುಖ ಪಾತ್ರವಹಿಸಿದ್ದರಿಂದ ‘ಭುಟ್ಟೋ’ಗೆ ಆತನ ಮೇಲೆ ಆತ್ಮವಿಶ್ವಾಸ ಹೆಚ್ಚಿತ್ತು. ಹಾಗಾಗಿ ‘ಭುಟ್ಟೋ’ ಜನರಲ್ ಟಿಕ್ಕಾ ಮಾತಿಗೆ ಮಣೆ ಹಾಕದೆ ‘ಜಿಯಾ ಉಲ್ ಹಕ್’ ನನ್ನ ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನಾಗಿ ಘೋಷಿಸಿಬಿಟ್ಟರು.

ನಿಧಾನವಾಗಿ ಸರಿಯಾದ ಸಮಯಕ್ಕೆ ಕಾದು ತನ್ನ ಕಾರ್ಯಾಚರಣೆ ನಡೆಸುವ ‘ನರಿ ಬುದ್ದಿಯ’ ಸೇನಾ ಮುಖ್ಯಸ್ಥ ‘ಜಿಯಾ ಉಲ್ ಹಕ್’ನ ಕಂತ್ರಿ ಬುದ್ದಿಯ ಬಗ್ಗೆ ‘ಭುಟ್ಟೋ’ಗೆ ಅರಿವಿರಲಿಲ್ಲ. ಮುಂದೆ ಊಸರವಳ್ಳಿಯಂತೆ ಸಮಯಕ್ಕೆ ಕಾಯ್ದು ಇದೇ ‘ಜಿಯಾ
ಉಲ್ ಹಕ್’ ಪಾಕಿಸ್ತಾನದ ಆಡಳಿತವನ್ನು ಸೇನಾ ಕಾರ್ಯಾಚರಣೆಯ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡು ’ಜುಲ್ಪಕರ್ ಅಲಿ ಭುಟ್ಟೋ’ನನ್ನು ನೇಣಿಗೇರಿಸಿದ.

ನರಿ ಬುದ್ದಿಯ ಪಾಕಿಸ್ತಾನಿ ಮುಸಲ್ಮಾನನೊಬ್ಬ ಪ್ಯಾಲೆಸ್ತೇನಿ ಮುಸಲ್ಮಾನರನ್ನು ಬೀದಿ ಬೀದಿಗಳಲ್ಲಿ ಕೊಲ್ಲುವುದನ್ನು ಪಾಕಿಸ್ತಾನ ಅಂದು ತಡೆಯಬಹುದಾಗಿತ್ತು. ಆದರೆ ತಡೆಯಲಿಲ್ಲ. ಜೋರ್ಡನ್ ಸೈನ್ಯಕ್ಕೆ ತರಬೇತಿ ನೀಡಲೆಂದು ಹೋಗಿದ್ದಂಥ ತನ್ನ ಸೈನ್ಯಾಧಿಕಾರಿಯನ್ನು ವಾಪಾಸ್ ಕರೆಸಿಕೊಳ್ಳಲಿಲ್ಲ. ಪ್ಯಾಲಿಸ್ತೇನಿ ಮುಸಲ್ಮಾನರ ಮೇಲೆ ಆತನು ನಡೆಸಿದ ನರಮೇಧಕ್ಕೆ ಮೆಚ್ಚಿ ಆತನಿಗೆ ಮುಂಬಡ್ತಿಯನ್ನು ನೀಡಿ, ಮುಂದೆ ಆತನನ್ನು ಪಾಕಿಸ್ತಾನಿ ಸೈನ್ಯದ ‘ಮುಖ್ಯಸ್ಥನನ್ನಾಗಿಯೂ’ ಮಾಡಿದರು.