Wednesday, 11th December 2024

ಪಾರ್ಲಿಮೆಂಟ್- ವಾಕ್‌ ಔಟ್‌, ಕ್ಲಬ್ ಹೌಸ್‌-ಲೀವ್‌ ಕ್ವಯಟ್ಲೀ

ತುಂಟರಗಾಳಿ

ಹರಿ ಪರಾಕ್‌

ಸಿನಿಗನ್ನಡ
ಲೂಸಿಯಾ ಪವನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಸೇರಿ ದ್ವಿತ್ವ ಅನ್ನೋ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೆಸರು ಹೇಳೋಕೆ ಸ್ವಲ್ಪ ಕಷ್ಟ
ಎನಿಸುವಂಥದ್ದೇ. ರಾಜ್ಯೋತ್ಸವವನ್ನೇ ಉಸ್ತವ ಅನ್ನೋರು ಬೇಕಾದಷ್ಟು ಜನ ಇರುವಾಗ ದ್ವಿತ್ವ ಅನ್ನೋ ಹೆಸರನ್ನು ಉಚ್ಚರಣೆ ಮಾಡೋದು ಸುಲಭ ಅಲ್ಲ. ಹಾಗಾಗಿ, ಈ ಸಿನಿಮಾಗೆ ಮೌತ್ ಪಬ್ಲಿಸಿಟಿ ಆಗೋದಂತೂ ಡೌಟು.

ಯಾಕಂದ್ರೆ ಎಷ್ಟು ಜನರ ಬಾಯಲ್ಲಿ ಈ ಟೈಟಲ್ ಕರೆಕ್ಟಾಗಿ ಹೇಳೋಕ್ ಆಗುತ್ತೋ ಗೊತ್ತಿಲ್ಲ. ಆದರೆ, ಈಗ ಎಲ್ಲ ಕಡೆ ಮಾತು ಕತೆ ನಡೆಯುತ್ತಿರೋದು ಈ
ಟೈಟಲ್ ಉಚ್ಚರಣೆಯದ್ದಲ್ಲ, ಬದಲಾಗಿ ಪೋಸ್ಟರ್ ಅನುಕರಣೆಯದ್ದು. ಹೌದು ದ್ವಿತ್ವ ಚಿತ್ರದ ಪೋಸ್ಟರ್ ಡಿಸೈನ್ ಕದ್ದಿದ್ದು ಅನ್ನೋ ಮಾತು ಎಲ್ಲ ಕಡೆ ಕೇಳಿಬಂದ ಮೇಲೆ ಆ ಪೋಸ್ಟರ್ ಡಿಸೈನರ್ ಈಗಾಗಲೇ, ಅದು ಕದ್ದಿದ್ದಲ್ಲ, ನಾನು ಇಂಟರ್ ನೆಟ್‌ನಲ್ಲಿ ಕಂಡುಕೊಂಡಿದ್ದು ಮತ್ತು ಇಷ್ಟ ಆಗಿದ್ದಕ್ಕೆ ಕೊಂಡುಕೊಂಡಿದ್ದು ಎಂದಿzರೆ. ಒಟ್ಟಿನಲ್ಲಿ ಅದು ಒರಿಜಿನಲ್ ಅಲ್ಲ ಅನ್ನೋದನ್ನ ಇನ್ ಡೈರೆಕ್ಟ್ ಆಗಿ ಹೇಳಿದ್ದಾರೆ.

ಆದರೆ ಈ ವಿಷಯಕ್ಕಾಗಿ ಇಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯ ಏನಿದೆ? ಪವನ್ ಕುಮಾರ್ ನಿರ್ದೇಶನದ ಸಿನಿಮಾಗಳನ್ನ ನೋಡಿದ ಮೇಲೆಯೇ ಕನಿಷ್ಠ ಪಕ್ಷ
ಒಂದು ಅರ್ಧ ಡಜನ್ ಸಿನಿಮಾಗಳೇ ನೆನಪಾಗ್ತವಂತೆ, ಅಂಥದ್ರಲ್ಲಿ ಯಕಶ್ಚಿತ್ ಒಂದು ಪೋಸ್ಟರ್ ಕಾಪಿ ಮಾಡಿದ್ದಕ್ಕೆ ಇಷ್ಟೊಂದು ಹಂಗಾಮಾ ಏಕೆ ಎಂದು ಪವನ್ ಅವರನ್ನು ಚೆನ್ನಾಗಿ ಬಲ್ಲ ಗಾಂಧಿನಗರದ ಸಿನಿಕ ಹೇಳುತ್ತಿzನೆ ಅನ್ನೋದು ಕುಹಕ.

ನೆಟ್ ಪಿಕ್ಸ್
ಇಡೀ ನೇಶನ್ ಕರೋನಾಗೆ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳೋ ಧಾವಂತದಲ್ಲಿ ಇರುವಾಗ ಯಾವನೋ ಒಬ್ಬಹುಚ್ಚ ಎಲ್ಲರಿಗೂ ಏಯ್ಡ್ಸ್ ಕಾಯಿಲೆ ಹರಡಿಸಿಬಿಡ್ತೀನಿ ಎನ್ನುವ ಕೆಟ್ಟಬುದ್ಧಿಗೆ ಇಳಿದಿದ್ದ. ಏಯ್ಡ್ಸ್ ರಕ್ತ ಇರೋ ಬ್ಲಡ್ ಅನ್ನು ಸಿರಿಂಜ್‌ನಲ್ಲಿ ಹಾಕಿಕೊಂಡು ರಸ್ತೆಯಲ್ಲಿ ಹೋಗೋ ಬರೋವವ್ರಿಗೆ, ಇದು ಎಚ್‌ಐವಿ ಪಾಸಿಟಿವ್ ಇರೋ ಬ್ಲಡ್ಡು, ಚುಚ್ಚಿ ಬಿಡ್ತೀನಿ, ಚುಚ್ಚಿಬಿಡ್ತೀನಿ ಅಂತ ಹೆದರಿಸ್ತಾ ಇದ್ದ. ಅವನನ್ನು ನೋಡಿ ಎಲ್ಲರೂ ದೂರ ಓಡಿ ಹೋಗುತ್ತಿದ್ದರು.

ಅಷ್ಟರಲ್ಲಿ ಸೋಮು ಬಂದು, ಅಲ್ಲಿ ಯಾವನೋ ಹುಚ್ಚ ತಿರುಗಾಡ್ತಾ ಇದ್ದಾನೆ. ಏಯ್ಡ್ಸ್ ಇರೋ ಬ್ಲಡ್‌ನ ಇಂಜೆಕ್ಷನ್ ಸಿರಿಂಜ್‌ಗೆ ಹಾಕ್ಕೊಂಡು, ಎಲ್ಲರಿಗೂ ಚುಚ್ಚಿ ಬಿಡ್ತೀನಿ, ಚುಚ್ಚಿಬಿಡ್ತೀನಿ ಅಂತ ಹೆದರಿಸ್ತಾ ಇದ್ದಾನೆ. ನೀನು ಮಾತ್ರ ಆ ಕಡೆ ಹೋಗ್ಬೇಡ ಅಂತ ಖೇಮುಗೆ ಹೇಳಿದ. ಅದಕ್ಕೆ ಖೇಮು, ಅಯ್ಯೋ ಅಂಥವರಿಗೆ ನಾನು ತಲೆಕೆಡಿಸಿಕೊಳ್ಳಲ್ಲ, ನಾನ್ ನೋಡ್ಕೊತೀನಿ ಬಿಡು ಅಂತ ಆ ಹುಚ್ಚ ಓಡಾಡ್ತಾ ಇದ್ದ ರೋಡಿಗೇ ಹೋದ. ಹುಚ್ಚ ಖೇಮು ಹತ್ರ ಬಂದು ಚುಚ್ಚಿ ಬಿಡ್ತೀನಿ, ಚುಚ್ಚಿ ಬಿಡ್ತೀನಿ ಅಂತ ಹೆದರಿಸಿದ. ಅದಕ್ಕೆ ಖೇಮು ಕೂಲಾಗಿ, ಆಯ್ತು ಚುಚ್ಕೋ ಅಂದ. ಹುಚ್ಚನಿಗೆ ಕೊಂಚ ಗಾಬರಿ ಆಯ್ತು. ಲೋ, ಇದು ಏಯ್ಡ್ಸ್ ಇರೋ ರಕ್ತ, ಚುಚ್ಚಿದ್ರೆ ನಿಂಗೂ ಏಯ್ಡ್ಸ್ ಬರುತ್ತೆ ಸತ್ತೋಗ್ತೀಯ ಅಂದ. ಅದಕ್ಕೆ ಖೇಮು ಇನ್ನೂ ಕೂಲಾಗಿ ಹೇಳಿದ ಅಯ್ಯೋ, ಚುಚ್ಕೊಳ್ಳೊಲೇ, ನಾನ್ ಕಾಂಡೋಮ್ ಹಾಕ್ಕೊಂಡಿದೀನಿ.

ಲೂಸ್ ಟಾಕ್
ಕಾಮನ್ ಮ್ಯಾನ್(ಕಾಲ್ಪನಿಕ ಸಂದರ್ಶನ)
ಹೆಂಗಿದೆ ಸಾರ್, ಲಾಕ್ ಡೌನ್ ಮುಗಿದ ಮೇಲಿನ ಲೈಫ್ ?
ಏನೋ ಲೈಫ್ ಏನೋ, ಮೊದ್ಲೇ ಪರವಾಗಿರಲಿಲ್ಲ, ಯಾರಾದ್ರೂ ಬಂದು ಫ್ರೀ ರೇಷನ್ ಕೊಟ್ಟು ಹೋಗೋರು, ಈಗ ಅದೂ ಇಲ್ಲ.

ಸರಿ, ಕೆಲವು ಸಂಘ ಸಂಸ್ಥೆಗಳು ಕೊಡ್ತಾ ಇದ್ದ ರೇಷನ್ ನಿಮಗೆ ಸರಿಯಾಗಿ ಸಿಗ್ತಾ ಇತ್ತಾ?
ಅಯ್ಯೋ ಪಾಪ, ಅವರು ತಾನೇ ಎಷ್ಟೂಂತ ಹುಡುಕಿಕೊಂಡು ಹೋಗ್ತಾರೆ. ಯಾರ್ ಸಿಗ್ತಾರೋ ಅವರಿಗೆ ಕೊಡ್ತಾ ಇದ್ರು. ಅದಕ್ಕೇ, ನಮ್ ಮೋದಿಜಿಗೆ ಹೇಳಿ, ಒನ್ ನೇಶನ್ ಒನ್ ರೇಷನ್ ಅಂತ ಕಾನೂನು ತರ್ಬೇಕು ನೋಡಿ.

ಮೋದಿಜಿ ಸದ್ಯಕ್ಕೆ ಒನ್ ನೇಶನ್ ಒನ್ ವ್ಯಾಕ್ಸಿನೇಶನ್ ಮಾಡೋಕೇ ಕಷ್ಟ ಪಡ್ತಾ ಇದ್ದಾರೆ, ಅದರಲ್ಲಿ ಇದೊಂದಾ?
ಹೌದು ಸಾರ್, ಬಿಜೆಪಿಯೋರು ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಇಂಡಿಯಾ ಈಸ್ ಶೈನಿಂಗ್ ಅಂತ ನಮ್ಮ ದೇಶವನ್ನ ರೋಷನ್ ಮಾಡೋದ್ರ
ಬಗ್ಗೆ ಮಾತಾಡ್ತಾ ಇದ್ರು.  ಈಗ ಪಾಪ ರೇಶನ್ ಬಗ್ಗೆ ಅವರನ್ನ ಹೆಂಗೆ ಕೇಳೋದು.

ಅದ್ಸರಿ, ಈ ಬೆಲೆ ಏರಿಕೆ ಬಗ್ಗೆ ನಿಮ್ಮ ಅಭಿಪ್ರಾಯ?
ಅಯ್ಯೋ, ನೀವ್ ಬಿಡಿ, ಅವರು ಹಿಂದಿ ಹೇರಿಕೆನೂ ಮಾಡಂಗಿಲ್ಲ, ಪೆಟ್ರೋಲ್ ಬೆಲೆ ಏರಿಕೆನೂ ಮಾಡಂಗಿಲ್ಲ. ಎಲ್ಲದಕ್ಕೂ ಟ್ರೋಲ್ ಮಾಡ್ತಾನೇ ಇರ್ತೀರಾ. ನಾವು ಸಿಂಹ ಸಾಕಿದೀವಿ ಕಣ್ರೀ.

ಸಿಂಹ ಸಾಕೋಕೆ ಸಬ್ಸಿಡಿ ಏನಾದ್ರೂ ಕೊಡ್ಸಿ ಮತ್ತೆ. ನಿಮ್ಮ ಮಾತು ಕೇಳ್ತಾ ಇದ್ರೆ, ನೀವು ಮತ್ತೆ ಬಿಜೆಪಿ ಸರಕಾರಕ್ಕೆ ಓಟ್ ಹಾಕೋಕೆ ತುದಿಗಾಲಲ್ಲಿ ನಿಂತಿರೋ ಹಾಗೆ ಕಾಣುತ್ತೆ.
ಹೌದು ಮತ್ತೆ, ಗಾಡಿಗೆ ಪೆಟ್ರೋಲ್ ಹಾಕಿಸೋಕಂತೂ ಆಗಲ್ಲ, ಹಾಗಾಗಿ ನಡ್ಕೊಂಡ್ ಹೋಗಿ ಓಟಾಕೋಕೆ ತುದಿಗಾಲ ನಿಂತಿದ್ದೀನಿ.

ಲೈನ್ ಮ್ಯಾನ್
ಇಬ್ಬರು ಸಮಾನ ದುಃಖಿಗಳು ಅನುಭವಿಸೋ ನೋವು
ಜಾಯಿಂಟ್ ಪೆಯ್ನ್

ಸೋಮು- ‘LPG ರೇಟ್ ಮತ್ತೆ ಜಾಸ್ತಿ ಆಗಿದೆಯಂತೆ’
ಖೇಮು- ‘ಹೋಗ್ಲಿ, ಬಿಡೋ.. ಅದು ಹುಡುಗೀರ್ ಪ್ರಾಬ್ಲಮ. ನಾವ್ಯಾಕ್ ತಲೆ ಕೆಡಿಸ್ಕೊಬೇಕು?’

ಸೋಮು- ‘ಲೋ, ಗ್ಯಾಸ್ ರೇಟ್ ಬರೀ ಹುಡುಗೀರ್ ಪ್ರಾಬ್ಲಮ್ ಹೆಂಗೋ ಆಗುತ್ತೆ?’
ಖೇಮು- ‘ಓಹ್, ಗ್ಯಾಸ್ ರೇಟಾ? ನಾನೆಲ್ಲೋ Ladies PG ಬಗ್ಗೆ ಹೇಳ್ತಿದೀಯಾ ಅಂದ್ಕೊಂಡೆ’ ಆಪರೇಶನ್ ಥಿಯೇಟರ್ ಬಿಟ್ಟು ಸಿನಿಮಾ ಥಿಯೇಟರ್‌ನಲ್ಲಿ ಸಿಗೋ ಡಾಕ್ಟರ್‌ಗಳ ಫೇಮಸ್ ಡೈಲಾಗ್ಸ್
-ನಮ್ ಕೈಲಾದಷ್ಟು ಪ್ರಯತ್ನ ಪಟ್ಟಿದ್ದೀವಿ. ಉಳಿದಿದ್ದು ದೇವರಿಗೆ ಬಿಟ್ಟಿದ್ದು
-ವಾತಾವರಣ ಚೇಂಜ್ ಆದ್ರೆ ಅವರು ಸುಧಾರಿಸಿಕೊಳ್ಳಬಹುದು. ಅವರನ್ನ ಎದ್ರೂ ಬೇರೆ
ಊರಿಗೆ ಕರ್ಕೊಂಡ್ ಹೋಗಿ
-ಯಾವ್ ಮೆಡಿಸಿನ್ನೂ ವರ್ಕ್ ಆಗ್ತಿಲ್ಲ. ಇನ್ನೇನಿದ್ರೂ ನಿಮ್ಮ ಪ್ರೀತಿ ಮಾತ್ರ ಅವರ ಪ್ರಾಣ ಉಳಿಸೋಕೆ ಸಾಧ್ಯ
-ಅವರ ಮನಸ್ಸಿಗೆ ಆಘಾತ ಆಗುವಂಥ ಯಾವ ವಿಷಯಗಳನ್ನೂ ಅವರಿಗೆ ಹೇಳಬೇಡಿ
-ಹೆಚ್ಚು ಅಂದ್ರೆ ಇನ್ನು 6 ತಿಂಗಳು ಬದುಕಬಹುದು, ಅವರ ಆಸೆ ಏನಿದೆಯೋ ಅದನ್ನ ಈಡೇರಿಸಿ
-ನಾನು ಡಾಕ್ಟರ್, ದೇವರಲ್ಲ
-ಇದರಲ್ಲಿ ನಮ್ಮದೇನೂ ಇಲ್ಲ, ಅವರ ಜೀವ ಉಳಿಸಿದ ಕ್ರೆಡಿಟ್, ಹಗಲೂ ರಾತ್ರಿ ಅವರ ಜೊತೆ ಇದ್ದು ನೋಡಿಕೊಂಡ ಆಕೆಯ ಗಂಡನಿಗೆ ಹೋಗಬೇಕು
-ಐ ಯಾಮ್ ವೇರಿ ಸಾರಿ

ಕ್ಲಬ್ ಹೌಸ್ ಮತ್ತು ಪಾರ್ಲಿಮೆಂಟ್‌ಗೆ ಇರೋ ವ್ಯತ್ಯಾಸ ಮತ್ತು ಹೋಲಿಕೆ
-ಎರಡೂ ಕಡೆ ಸ್ಪೀಕರ್ ಇರ್ತಾರೆ
-ಎರಡೂ ಕಡೆ ಮೇಲ್ಮನೆ, ಕೆಳಮನೆ ಇರುತ್ತೆ.
-ಕ್ಲಬ್ ಹೌಸ್ ಕೆಳಗಿರೋರನ್ನ ಮೇಲೆ ತರುವ ಸದುದ್ದೇಶ ಹೊಂದಿರೋ ಆಪ್.
-ಪಾರ್ಲಿಮೆಂಟ್‌ನಲ್ಲಿ ಸ್ಪೀಕರ್ ಎಲ್ಲರಿಗೂ ಮಾತಾಡೋಕೆ ಅವಕಾಶ ಕೊಟ್ರೆ, ಕ್ಲಬ್ ಹೌಸಲ್ಲಿ ಸ್ಪೀಕರ್‌ಗೆ ಮಾಡರೇಟರ್ ಮಾತಾಡೋಕೆ ಅವಕಾಶ ಕೊಡ್ತಾರೆ.
– ಎರಡೂ ಕಡೆ ಕೇಳಿಸ್ಕೊಳ್ಳೋರಿಗಿಂತ ಮಾತಾಡೋಕೆ ಹಾತೊರೆಯೋರೇ ಜಾಸ್ತಿ
– ಹೆಸರು ಕ್ಲಬ್ ಹೌಸ್ ಆದ್ರೂ, ಕುರ್ಚಿಯಲ್ಲಿ ಕೂತು ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸೋ ವ್ಯವಸ್ಥೆ ಇಲ್ಲ.
– ಪಾರ್ಲಿಮೆಂಟ್‌ನಲ್ಲಿ ವಾಕ್ ಔಟ್, ಕ್ಲಬ್ ಹೌಸಲ್ಲಿ ಲೀವ್ ಕ್ವಯಟ್ಲೀ.

ಹೊಸ ತಂತ್ರಜ್ಞಾನ ಬಂದಾಗ ಅದರ ಸಂಪೂರ್ಣ ಉಪಯೋಗ ಪಡೆದುಕೊಳ್ಳೋ ಜಾಣರನ್ನ ಏನಂತಾರೆ?
ವಿಶ್ವೇಶ್ವರ ಭಟ್