Friday, 13th December 2024

ಆಲೋಚನೆ, ಅವುಗಳಿಗೊಂದು ಬ್ರೇಕ್

ರಾವ್ ಭಾಜಿ

jounocate@gmail.com

ಭದ್ರತಾ ಸಲಹೆಗಾರ ಅಜಿತ್ ದೋವಲ್‌ರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಿಎಫ್ಐಯನ್ನು ಬಹಿಷ್ಕರಿಸಬೇಕೆಂಬ ಬೇಡಿಕೆ ಯನ್ನು ಸೂಫಿ ಸಂತರು ಮುಂದಿಟ್ಟಿದ್ದಾರೆ. ಹಿಂದೂ ನಾಗರಿಕತೆಯನ್ನು ಮೂಲೋತ್ಪಾಟನೆ ಮಾಡುವ ಉದ್ದೇಶದಿಂದ ಪಿಎಫ್ಐಯೊಂದಿಗೆ ಅಪವಿತ್ರ ಮೈತ್ರಿ ಹೊಂದಿರುವ ಸಿಪಿಎಂ ಕಡಿಮೆ ಅಪಾಯಕಾರಿಯಲ್ಲ. ಈ ಮೈತ್ರಿಕೂಟದ ವ್ಯಾಪ್ತಿ ಬೆಚ್ಚೆಬ್ಬಿಸುವಷ್ಟು ಗಾಢವಾಗಿದೆ.

ಇತ್ತೀಚೆಗೆ, ಮೀಟಿಂಗ್ ಮುಗಿಸಿ ಮನೆಗೆ ಹಿಂತಿರುಗುವುದು ತಡವಾಗಿತ್ತು. ಸ್ನೇಹಿತರ ಕಾರ್ ನಲ್ಲಿz. ಧುತ್ತನೆ ಸಂಚಾರ ವಿಭಾಗದ ಪೊಲೀಸರು ಕಂಡರು. ಪಾನಮತ್ತ ಚಾಲನೆಗಾಗಿ ತಪಾಸಣೆ ನಡೆಸುತ್ತಿದ್ದರು. ಗಾಡಿಯನ್ನು ನಿಧಾನಿಸಿದ್ದ ಸ್ನೇಹಿತರು ಬಲಗೈ ಏರಿಸಿ ಪೊಲೀಸರೊಬ್ಬರಿಗೆ ಸನ್ನೆ ಮಾಡಿದರು.

ತಪಾಸಣೆಯಿಂದ ವಿನಾಯಿತಿ ದೊರಕಿತು. ಅವರ ಸೌಮ್ಯ ಲಕ್ಷಣವೇ ನಮ್ಮ ದಾರಿಯನ್ನು ಸುಗಮಗೊಳಿಸಿತ್ತು. (ನಾನು ಗಾಡಿ ಓಡಿಸುತ್ತಿದ್ದರೆ ವಿನಾಯಿತಿ ಸಿಗುತ್ತಿದ್ದುದು ಡೌಟೇ!) ಪೊಲೀಸಪ್ಪ ಕಾರಿನ ಕಿಟಕಿಯ ಮೂಲಕ ತಲೆ ತೂರಿಸಿ ಮುಖದ ಹತ್ತಿರ ಬರುವ ಪ್ರಮೇಯದಿಂದ ತಪ್ಪಿಸಿಕೊಂಡದ್ದಕ್ಕೆ ಸ್ನೇಹಿತರು ಹರ್ಷಚಿತ್ತರಾದರು.

ಕುಡಿದವರಿಗಷ್ಟೆ ಪೊಲೀಸರನ್ನು ಕಂಡೇಟಿಗೆ ದಿಗಿಲು. ಗಾಬರಿಯಲ್ಲಿ ತಲೆಯೇ ಓಡುವುದಿಲ್ಲ. ಪೊಲೀಸರೊಂದು ತಪ್ಪು ಮಾಡುತ್ತಾರೆ. ಮದ್ಯದ ಘಮಲು ಮೂಗಿಗೆ ಬಡಿದರೆ ಸಾಕು, ಕುಡಿದು ಚಾಲನೆ ನಡೆಸಿ ದ್ದಕ್ಕೆ ಚಾಲಕರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ನಿಯಮದ ಪರಿಮಿತಿಯೊಳಗೆ ಕುಡಿದವರನ್ನೂ ಬಿಡುವುದು ಕಡಿಮೆ. ಕಂಠಪೂರ್ತಿ ಕುಡಿದವರ ಮತ್ತು ನಿಯಮಿತವಾಗಿ ಮದ್ಯ ಸೇವಿಸಿದವರ ನಡುವೆ ತಾರತಮ್ಯ ಮಾಡುವುದಿಲ್ಲ.

ಸ್ಥಿಮಿತವಾಗಿ ಕುಡಿದವರ ಬುದ್ಧಿ ಸ್ಥಿಮಿತದಲ್ಲಿರುತ್ತದೆ. ನಾಲಗೆ ತೊದಲುವುದಿಲ್ಲ. ನೆಟ್ಟಗೆ ಹೆಜ್ಜೆ ಇಡುತ್ತಾರೆ. ಕುಡಿಯದೇ
ಡ್ರೈವ್ ಮಾಡುವಾಗ ವಹಿಸುವ ಎಚ್ಚರಕ್ಕಿಂತಲೂ ಹೆಚ್ಚು ನಿಗಾ ವಹಿಸುತ್ತಾರೆ. ಹಾಗಾಗಿ, ಅವರೂ ಕ್ಷೇಮ, ರಸ್ತೆಯಲ್ಲಿನ ಉಳಿದವರೂ ಕ್ಷೇಮ. ಆ ಹೊತ್ತಿನಲ್ಲಿ, ಅವರ ಗಮನವೆಲ್ಲವೂ ರಸ್ತೆಯ ಮೇಲಿರುತ್ತದೆ. ಯಾವ ಎಂಜಿನಿಯರಿಂಗ್ ಪರೀಕ್ಷಾ
ಭ್ಯರ್ಥಿಯೂ ಆ ಏಕಾಗ್ರತೆಯನ್ನು ಮೀರಿಸಲಾರ. ಮೈಯೆಲ್ಲ ಕಣ್ಣಾಗಿಸಿಕೊಂಡ ಗಡಿಕಾಯುವ ಯೋಧನ ಏಕಾಗ್ರತೆಯದು.
ಬೇರೆಲ್ಲ ಆಲೋಚನೆಗಳೂ ಬಂದ್.

ಅಪ್ರತಿಮ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಯವರನ್ನು, ಅವರ ಉಪನ್ಯಾಸದ ನಡುವೆ, ಸಭಿಕನೊಬ್ಬ ಆಲೋಚನೆಗಳಿಂದ ಮನಸ್ಸನ್ನು ಮುಕ್ತವಾಗಿಸುವುದು ಹೇಗೆ (How to achieve thoughtlessness) ಎಂದು ಪ್ರಶ್ನಿಸುತ್ತಾನೆ. ನೀನಾಗಲೇ ಆ ಸ್ಥಿತಿಯನ್ನು ಮುಟ್ಟಿದ್ದೀಯೆ, ಎಂದು ಉತ್ತರಿಸುತ್ತಾರೆ. ಸಭೆಯಲ್ಲಿ ನಗೆಯ ಅಲೆ ಹಾದುಹೋಗುತ್ತದೆ. ಈ ಪ್ರಸಂಗದ ಧ್ವನಿ ಮುದ್ರಣವನ್ನಷ್ಟೆ ಹಿಂದೊಮ್ಮೆ ಕೇಳಿz. ಪ್ರಶ್ನಿಸಿ ದವನನ್ನು ಹಾಸ್ಯ ಮಾಡುವ ಉದ್ದೇಶದಿಂದ ಜೆ.ಕೆ. ಹಾಗೆ ಹೇಳಿದರೆಂದು ನನಗನಿಸಲಿಲ್ಲ.

ಇಸ್ಲಾಮನ್ನು ಜಾಗತೀಕರಣಗೊಳಿಸುವ ಗುರಿಯನ್ನು ಹೊಂದಿರುವ ಮುಸ್ಲಿಮರಲ್ಲೂ ಏಕಚಿತ್ತತೆ ಇದೆ. (ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ಅಮೆರಿಕನ್ನರ ಸಂಖ್ಯೆ 25000.) ಉದ್ದೇಶದ ಖಚಿತತೆ ಇದೆ. ಆ ಮನೋವೃತ್ತಿಗೆ ಮದರಾಸ ಶಿಕ್ಷಣಕ್ರಮದ ಗಟ್ಟಿ ತಳಹದಿ ಇದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಹೊರ-ಒಳಗಿನ ಬೆಂಬಲ ವಿದೆ. ಹಿಂದೂಗಳಂತೆ ಅವರು ಪ್ರಜ್ಞೆ ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇಲ್ಲವೆನ್ನುವಷ್ಟು ಕಡಿಮೆ.

ಪ್ರಜ್ಞೆ ಪ್ರವಾಹಕ್ಕೆ ಹಿಂದೂಗಳು ಸಿಲುಕುವುದೆಂದರೆ ತಮ್ಮದೇ ಆಲೋಚನಾ ಧಾರೆಯ ಪ್ರಹಾರಕ್ಕೆ ಒಳಗಾಗುವುದೆಂದಲ್ಲ. ತಟವಿಲ್ಲದ ಕೋಡಿ ಸಹ-ಹಿಂದೂಗಳದ್ದೂ ಇರಬಹುದು. ಸಂಘ ಪರಿವಾರ, ವೈದಿಕ ಪರಂಪರೆ, ಪ್ರಮೋದ್ ಮುತಾಲಿಕ್, ಎಸ್. ಎಲ. ಭೈರಪ್ಪ, ಜೀವಪರತೆ … ವಗೈರೆಗಳ ಒಂದು ಹುಚ್ಚು ಹೊಳೆಯನ್ನು ಮೊನ್ನೆ ಯಾರೋ ಲೇಖನ ರೂಪದಲ್ಲಿ ಹರಿಸಿದ್ದರು. ಭಾರತೀಯ ಜನತಾ ಪಕ್ಷದ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಗೆ ಇವೆಲ್ಲವೂ/ಇವರೆಲ್ಲರೂ ಕಾರಣ ಎಂಬಂಥ ವಾದಸರಣಿ.

ಪ್ರವೀಣ್ ಹಂತಕರು ಕೇರಳದ ಮೂಲದವರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಕೇರಳದ ಕೊಚ್ಚಿಯಲ್ಲಿ ಅಭಿಮನ್ಯುವೆಂಬ 20 ವರ್ಷದ ಯುವಕನನ್ನು ಜಿಹಾದಿಗಳು ಕೊಚ್ಚಿಹಾಕಿದರು. ಕ್ರೌರ್ಯವನ್ನೇ ಮೈಗೂಡಿಸಿಕೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ವಿದ್ಯಾರ್ಥಿ ಘಟಕವಾದ ಕ್ಯಾಂಪಸ್ ಫ್ರಂಟ್ ಆಫ್
ಇಂಡಿಯಾದ ಹರಯದ ಸದಸ್ಯರು ಅಭಿಮನ್ಯುವನ್ನು ಕೊಂದದ್ದು. ರಾಜಕೀಯ ವಿಶ್ಲೇಷಕ ಎನ್.ಎಂ. ಪಿಯರ್ಸನ್ ಪತ್ರಿಕೆ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೊಲೆಮಾಡುವ ಮನಃಸ್ಥಿತಿಯನ್ನು ರೂಡಿಸಿಕೊಳ್ಳಲೆಂದೇ ತರಬೇತಿ ಪಡೆದವ ರಿಂದ ಇಂತಹ ಹತ್ಯೆ ಸಾಧ್ಯ ಎಂದು ಹೇಳಿದ್ದಲ್ಲದೆ ಕ್ಯಾಂಪಸ್ ಫ್ರಂಟ್‌ನ ಅನೇಕ ಸದಸ್ಯರಿಗೆ ಅಂತಹ ಮನಃಸ್ಥಿತಿ ಇದೆ ಎಂದು ಅಭಿಪ್ರಾಯಪಟ್ಟಿದ್ದರು.

ಭೈರಪ್ಪನವರೇನಾದರೂ ಅವರಿಗೆ ಗೋಪ್ಯವಾಗಿ ತರಬೇತಿ ನೀಡಿದ್ದರಾ ಅಂತ. ತನ್ನದೇ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್ ಐ (ಸ್ಟೂಡೆಂಟ್ಸ್ ಫೆಡೆರೇಷನ್ ಆಫ್ ಇಂಡಿಯಾ)ನ ಸದಸ್ಯನಾಗಿದ್ದ ಅಭಿಮನ್ಯು ಹತ್ಯೆಯನ್ನು ಸ್ವಯಂ ಸಿಪಿಎಂ ಗಂಭೀರವಾಗಿ ಪರಿಗಣಿಸಲಿಲ್ಲ. ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಬ್ಬರಾದ ಎಲ್. ಕೆ. ಆಡ್ವಾಣಿ ಅವರ ಭೇಟಿಯ ಸಂದರ್ಭದಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್ ಸೋಟ ಪ್ರಕರಣದ (1998) ಮುಖ್ಯ ಆರೋಪಿ ಅಬ್ದುಲ್ ನಸರ್ ಮದಾನಿ ನೇತೃತ್ವದಲ್ಲಿ ನಡೆದ ಮುಸ್ಲಿಂ ಮೂಲಭೂತವಾದಿಗಳ ಸಭೆಯಲ್ಲಿ (2006) ಕಮ್ಯುನಿಷ್ಟರು ಉತ್ಸುಕರಾಗಿ ಪಾಲ್ಗೊಂಡಿದ್ದರು.

ಅದೇ ವರ್ಷದ ಕೊನೆಯಲ್ಲಿ ಪಿಎಫ್ಐ ಅಸ್ತಿತ್ವಕ್ಕೆ ಬಂದಿತು. ತಾಲಿಬಾನಿ ಮಾದರಿ ಕೃತ್ಯಗಳು ಮರುಕಳಿಸಿದವು. ಮೊನ್ನೆ ಭಾನುವಾರ ನವದೆಹಲಿಯಲ್ಲಿ, ಭದ್ರತಾ ಸಲಹೆಗಾರ ಅಜಿತ್ ದೋವಲ್‌ರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಿಎ-ಐಯನ್ನು ಬಹಿಷ್ಕರಿಸಬೇಕೆಂಬ ಬೇಡಿಕೆಯನ್ನು ಸೂಫಿ ಸಂತರು ಮುಂದಿಟ್ಟಿzರೆ. ಹಿಂದೂ ನಾಗರಿಕತೆಯನ್ನು ಮೂಲೋತ್ಪಾಟನೆ ಮಾಡುವ ಉದ್ದೇಶದಿಂದ ಪಿಎಫ್ ಐಯೊಂದಿಗೆ ಅಪವಿತ್ರ ಮೈತ್ರಿ ಹೊಂದಿರುವ ಸಿಪಿಎಂ ಕಡಿಮೆ ಅಪಾಯಕಾರಿಯಲ್ಲ. ಈ ಮೈತ್ರಿಕೂಟದ ವ್ಯಾಪ್ತಿ ಬೆಚ್ಚೆಬ್ಬಿಸುವಷ್ಟು ಗಾಢವಾಗಿದೆ. ಅಪವಿತ್ರತೆಗೆ ಸಿದ್ಧಾಂತದ ಮಡಿಮೈಲಿಗೆಗಳಿಲ್ಲ. ಅದರಲ್ಲಿ ತಮಿಳು ಪ್ರತ್ಯೇಕತಾವಾದಿಗಳೂ ತೂರಿಕೊಳ್ಳುತ್ತಾರೆ, ಚರ್ಚೂ ಬೆಸೆದುಕೊಳ್ಳುತ್ತದೆ.

ತನ್ನದೇ ಕಮ್ಯುನಿಸ್ಟ್ ಸಿದ್ಧಾಂತದ ಪರಿಪಾಲಕನಾದ ಅಭಿಮನ್ಯುವಿನ ಹತ್ಯೆಯ ನಂತರ ಪಿಎಫ್ಐಯನ್ನು ಬಹಿಷ್ಕರಿಸಬೇಕೆಂಬ ಕೂಗು ಕೇರಳದಲ್ಲಿ ಎದ್ದಾಗ ಮುಖ್ಯಮಂತ್ರಿ ಪಿಣ ರಾಯ್ ವಿಜಯನ್ ಆರ್‌ಎಸ್‌ಎಸ್ ಅನ್ನು ಬಹಿಷ್ಕರಿ ಸಬೇಕೆಂದರು. ಅತ್ಯಾಚಾರ ಕ್ಕೊಳಗಾದ ಹೆಣ್ಣಿನ ದಿರಿಸೇ ಅವಳಿಗೆ ಮುಳುವಾಯಿತೆಂಬ ವ್ಯಾಖ್ಯೆಯಂತೆ. ಮೂರು ವರ್ಷಗಳ ಹಿಂದೆ, ನ್ಯೂಝಿಲ್ಯಾಂಡ್‌ನ ಮಸೀದಿಗಳ ಮೇಲೆ ಶಸ್ತ್ರಧಾರಿ ಕಿರಿಸ್ತಾನನೊಬ್ಬ ದಾಳಿ ನಡೆಸಿ 51 ಮುಸ್ಲಿಮರ ಮೇಲೆ ಗುಂಡಿನ ಮಳೆಗರೆದ. ವಿಶ್ವಕ್ಕೆ ವಿಶ್ವವೇ ಇದನ್ನು ಖಂಡಿಸಿತು. (ದುಷ್ಕೃತ್ಯದಲ್ಲಿ ಎಸ್ ಎಲ್ ಭೈರಪ್ಪನವರ ಪಾತ್ರವಿದ್ದಂತೆ ಕಂಡು ಬರಲಿಲ್ಲ.) ಎರಡು ತಿಂಗಳ ಕೆಳಗೆ, ನೈಜೀರಿಯಾದ ಚರ್ಚ್ ಒಂದರಲ್ಲಿ ಮುಸ್ಲಿಂ ಭಯೋತ್ಪಾದಕರು ಐವತ್ತಕ್ಕೂ ಹೆಚ್ಚು ಕಿರಿಸ್ತಾನರನ್ನು ಹೊಸಕಿಹಾಕಿದರು.

ಈ ಸುದ್ದಿಯನ್ನು ಎದರೂ ಓದಿದ/ನೋಡಿದ ನೆನಪಿರುವವರು ದಯವಿಟ್ಟು ಕೈ ಎತ್ತಿ. ಎಂದಿನಂತೆ, ಅಸೋಸಿಯೇಟೆಡ್ ಪ್ರೆಸ್
ಎಂಬ ನರಸತ್ತ ಸುದ್ದಿ ಸಂಸ್ಥೆ ಭಯೋತ್ಪಾದಕರು ಮುಸ್ಲಿಮರೆಂದು ಹೆಸರಿಸಲಿಲ್ಲ. (ಪ್ರವೀಣ್ ನೆಟ್ಟಾರ್ ಹತ್ಯೆಯ ಸುದ್ದಿಯನ್ನು
ಕನ್ನಡ ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಒಳೊಳಗೇ -ಆರನೇ ಪುಟದಲ್ಲಿ – ಪ್ರಕಟಿಸಿತು.) ನೈಜೀರಿಯಾದ ಘಟನೆ ಇತ್ತೀಚಿನ ಬೆಳವಣಿಗೆಯಲ್ಲ.

ಹದಿಮೂರು ವರ್ಷಗಳ ಹಿಂದೆ ಆರಂಭವಾದ ಜಿಹಾದಿ ಆರ್ಭಟ ಇದುವರೆಗೂ 60000 ಕಿರಿಸ್ತಾನರನ್ನು ಬಲಿ ತೆಗೆದುಕೊಂಡಿದೆ. (ಅದಕ್ಕೂ ಮುನ್ನ ಕಿರಿಸ್ತಾನ್ ಮತ ಅವರ ಮೂಲಧರ್ಮದ ಮೇಲೆ ದಾಳಿ ನಡೆಸಿದ್ದು ಪ್ರತ್ಯೇಕ ವಿಷಯ!)
ಪೊಲಿಟಿಕಲ್ ಇಸ್ಲಾಮಿನ ವರಸೆಯೇ ಅದು. ಅದಕ್ಕೆ ಮಾರ್ಕ್ಸ್ ವಾದಿಗಳ ಸಾಥ್ ಇದೆ. ಟರ್ಕಿ ದೇಶದ ಸೆಕ್ಯುಲರ್ ನಿಲುವಿನ ಕಮಲ್ ಪಾಷಾ ಹಾಗೂ ಅವನ ಇಸ್ಲಾಮೀ ಪ್ರತಿಸ್ಪರ್ಧಿ ಅನ್ವರ್ ಪಾಷಾ ನಡುವೆ ಸೋವಿಯತ್ ರಷ್ಯಾದ ವಾಮಪಂಥೀಯ ನಾಯಕ ವ್ಲಾಡಿಮಿರ್ ಲೆನಿನ್ ಆಯ್ದುಕೊಳ್ಳುವುದು ಅನ್ವರ್‌ನನ್ನು.

ಇಸ್ಲಾಮಿಗರನ್ನೂ, ನಾಸ್ತಿಕತೆಯ ಪ್ರತಿಪಾದಕರಾದ ಮಾರ್ಕ್ಸಿಸ್ಟರನ್ನೂ ಬೆಸೆಯುವುದಕ್ಕೆ ಇಬ್ಬರಿಗೂ ಆಗಿಬರದ ಪ್ರಜಾ ಪ್ರಭುತ್ವದ ಪರಿಕಲ್ಪನೆ ಸಾಕು. ಯಾವಾಗ ಅನ್ವರ್, ರಷ್ಯಾದ ಮುಸ್ಲಿಮರ ಪ್ರತ್ಯೇಕತೆಯ ಬಗ್ಗೆ ದನಿ ಎತ್ತುತ್ತಾನೆ, ಆಗ ಲೆನಿನ್ ಅವನನ್ನು ಕಡೆಗಣಿಸುತ್ತಾನೆ. ಬಂಡವಾಳಶಾಹಿಯೆಂಬ ಹೊಲಸಿನಿಂದ ವಿಶ್ವವನ್ನು ಮುಕ್ತಗೊಳಿಸುವೆನೆಂಬ ಲೆನಿನ್ನಿನ ಧ್ಯೇಯೋ ದ್ದೇಶಕ್ಕೆ ಪೂರಕವಾಗಿ ಎರ್ನ್ವ ತನ್ನ ಆಲೋಚನೆಯನ್ನು ಮುಂದಿಡುತ್ತಾನೆ.

ತುರುಕರ ಪ್ರಾಬಲ್ಯವುಳ್ಳ ಚೀನಾದ ಟರ್ಕ್ಸ್ಥಾನದಲ್ಲಿ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸುವುದಾದರೆ ತಾನು ಅಲ್ಲಿ ಜಿಹಾದೀ
ದಳವೊಂದನ್ನು ರಚಿಸಿ ಭಾರತದ ಮೇಲೆ ದಾಳಿ ನಡೆಸಿ ಅದನ್ನು ವಿಮುಕ್ತಿಗೊಳಿಸುತ್ತೇನೆಂಬ ಪ್ರಸ್ತಾಪನೆಯದು. ಆ ಪ್ರಸ್ತಾಪನೆ ಯನ್ನು ಅನುಮೋದಿಸದ ಮನಬೇಂದ್ರ ನಾಥ್ ರಾಯ್ ಬಾಹ್ಯ ಜಿಹಾದಿಗಳ ಬದಲು ಭಾರತದೊಳಗಿನ ಮುಸ್ಲಿಮರನ್ನೇ ಎತ್ತಿಕಟ್ಟುವ ಐಡಿಯಾ ಕೊಟ್ಟು ಲೆನಿನ್‌ನ ಮನಸ್ಸನ್ನು ಗೆಲ್ಲುತ್ತಾರೆ.

ಭಾರತದ ಭದ್ರತೆಗೆ ಮುಳುವಾಗಿರುವ ಕಮ್ಯುನಿಷ್ಟರ ಮತ್ತು ಇಸ್ಲಾಮಿಗರ ಬಾಂಧವ್ಯದ ಆಳ, ಅಗಲಗಳನ್ನು ಅಂಕಣದ ಇತಿಮಿತಿಯಲ್ಲಿ ವಿವರಿಸುವುದು ದುಸ್ಸಾಧ್ಯ. ಗ್ರಂಥ ರಚನೆಯ ತೊಡಗಬೇಕು. ಬರೆಯಲು ಕುಳಿತರೆ ಪ್ರಜ್ಞೆ ಪ್ರವಾಹವವೇ ಹರಿಯುತ್ತದೆ. ಪ್ರಜ್ಞಾಪ್ರವಾಹಕ್ಕೆ ತಡೆಯೊಡ್ಡಿ ಅಣೆಕಟ್ಟು ನಿರ್ಮಿಸಬೇಕು, ತಡೆಹಿಡಿದ ನೀರನ್ನು ನಿಯಂತ್ರಿತವಾಗಿ ಪುಸ್ತಕಕ್ಕೆ ಹರಿಯಬಿಡಬೇಕು. ಅವಿದ್ಯೆಯಿಂದಲೂ ಪ್ರವಾಹವನ್ನು ಹತ್ತಿಕ್ಕಬಹುದು. ಮೂಲದ ನದಿ ಬತ್ತಿದರೆ ಪ್ರವಾಹವೆಲ್ಲಿ ಉಕ್ಕೀತು? ಹಾಗೆ ವಿವರಿಸಲು ಪ್ರಯತ್ನಿಸಿದರೆ ದೇವನೂರು ಮಹಾದೇವರ ಪುಸ್ತಿಕೆಯಂತಾಗುತ್ತದೆ.

ಎಂ. ಎನ್. ರಾಯ್ ಅವರ ಮೂಲ ಹೆಸರು ನರೇಂದ್ರ ನಾಥ್ ಭಟ್ಟಾಚಾರ್ಯ. ಖುದಿರಾಮ್ ಬೋಸ್ ಎಂಬ ಕ್ರಾಂತಿಕಾರಿ ಯನ್ನು ಬಂಧಿಸಿದಕ್ಕಾಗಿ ಬ್ರಿಟಿಷ್ ಆಳ್ವಿಕೆಯಲ್ಲಿನ ಪೊಲೀಸ್ ಅಧಿಕಾರಿ ನಂದಲಾಲ್ ಬ್ಯಾನರ್ಜಿಯನ್ನು ರಾಯ್ ಗುಂಡಿಕ್ಕಿ ಕೊಲ್ಲುತ್ತಾರೆ. ಹದಿನೆಂಟು ವರ್ಷ ವಯಸ್ಸಿನ ಬೋಸರನ್ನು ಕೊಲ್ಕೊತಾದ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಒಬ್ಬನನ್ನ ಕೊಲೆಮಾಡಿದ್ದ ಕ್ಕಾಗಿ ನೇಣುಗಂಬಕ್ಕೇರಿಸುತ್ತಾರೆ. ತಂದೆಯಿಂದ ಸಂಸ್ಕೃತಾಧ್ಯಯನ ಮಾಡಿದ ರಾಯ್ ಎಳೆಯದರ ಕ್ರಾಂತಿಕಾರಿಯಾಗಿ ಬೆಳೆದದ್ದು ವಿಪರ್ಯಾಸವೇ. ಬ್ರಿಟಿಷರನ್ನು ಓಡಿಸಲು ಶಸಾಸ ಪಡೆಯುವುದಕ್ಕಾಗಿ ಜರ್ಮನರ ಸಹಾಯದಿಂದ ರಾಯ್ ಇಂಡೊನೇಷ್ಯಾಗೆ ಹೋಗುತ್ತಾರೆ.

ಅಲ್ಲಿಂದ ಅಮೆರಿಕಕ್ಕೆ ಹೋಗುತ್ತಾರೆ. ಅವರು ಸ್ಯಾನ್ ಫ್ರಾನ್ಸಿಸ್ಕೋ ತಲಪಿದ ದಿನವೇ ಸ್ಥಳೀಯ ಪತ್ರಿಕೆಯೊಂದರಲ್ಲಿ ಅಮೆರಿಕಕ್ಕೆ ಬಂದಿಳಿದಿರುವ ವಿಕ್ಷಿಪ್ತ ಹಿನ್ನೆಲೆಯ ವ್ಯಕ್ತಿ ಬ್ರಾಹ್ಮಣ ಕ್ರಾಂತಿಕಾರಿಯೋ, ಜರ್ಮನರ ಬೇಹುಗಾರನೋ ಎಂಬ ವರದಿ ಪ್ರಕಟ ವಾಗುತ್ತದೆ. ಬ್ರಿಟಿಷರು ರಾಯ್ ಮೇಲೆ ಆ ಮಟ್ಟಿನ ನಿಗಾ ಇಟ್ಟಿದ್ದರು. ತನ್ನ ಗುರುತನ್ನು ಮರೆಮಾಚಲು ಭಟ್ಟಾಚಾರ್ಯ ಎಂ. ಎನ್. ರಾಯ್ ಆಗುತ್ತಾರೆ. ನಂತರ ಬಂಧನಕ್ಕೊಳಗಾಗುವ ರಾಯ್ ಜಾಮೀನನ್ನು ಉಲ್ಲಂಸಿ ಮೆಕ್ಸಿಕೋಗೆ ಪಲಾಯನ ಗೈಯ್ಯುತ್ತಾರೆ. ಅಲ್ಲಿ ಕಮ್ಯುನಿಷ್ಟ್ ಪಕ್ಷವನ್ನು ಮೊದಲು ಸಂಸ್ಥಾಪಿಸಿ ಕೆಲವೇ ವರ್ಷಗಳಲ್ಲಿ ಭಾರತದಲ್ಲೂ ಭಾರತೀಯ ಕಮ್ಯುನಿಷ್ಟ್ ಪಕ್ಷವನ್ನು ಹುಟ್ಟಿಹಾಕುತ್ತಾರೆ.

ಗಂಟೆ ಬಾರಿಸುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಜಿಹಾದಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಿಸಲು ಸ್ಕೆಚ್ ಹಾಕಿದ್ದ ನರೇಂದ್ರನಾಥ್ ಭಟ್ಟಾಚಾರ್ಯ ಅಲಿಯಾಸ್ (alias) ಎಂ.ಎನ್. ರಾಯ್ ಆಮದು ಮಾಡಿತಂದ ರಾಜಕೀಯ ವಿಚಾರಧಾರೆಯನ್ನು ದೇವನೂರರು ಒಪ್ಪಿ, ಅಪ್ಪಿ ಜಿಹಾದಿಗಳ ಜತೆ ಗೆಳೆತನ ಬಯಸುವ ಬದಲು ಸಂವಿಧಾನತಜ್ಞ ಬಿ.ಆರ್. ಅಂಬೇಡ್ಕರರು ಬಾರಿಸಿದ ಎಚ್ಚರಿಕೆಯ ಗಂಟೆಯನ್ನು ಆಲಿಸಿ ಮುಸ್ಲಿಮರ ಸಖ್ಯವನ್ನು ತೊರೆದಿದ್ದರೆ ಇಂದು ಪ್ರವೀಣ ನೆಟ್ಟಾರ್ ಜೀವಂತವಾಗಿರುತ್ತಿದ್ದರೇನೋ! (ಅದು ಆಗದ ಮಾತು.)

ಮೊನ್ನೆ ಮೊನ್ನೆ ಜಿಹಾದಿಗಳು ಹರ್ಷನನ್ನು ವಽಸಿದ ನಂತರ ಹಲಾಲ್ ಮಾಂಸವನ್ನು ಭುಜಿಸಲು ಹಾತೊರೆದ ದೇವನೂರರ
ಆಯ್ಕೆ ಆಕಸ್ಮಿಕವಲ್ಲ. ಸೆಕ್ಯುಲರಿಸಂ ಸುರೆಯನ್ನು ಕಂಠಪೂರ್ತಿ ಕುಡಿದವರು ಧರ್ಮದ ಅಫೀಮನ್ನು ನಿತ್ಯ ಸೇವಿಸುವವರ
ಮೈತ್ರಿಯನ್ನು ಬಯಸುವುದಕ್ಕೆ ದಶಕಗಳ ಇತಿಹಾಸವಿದೆ. ನಶಾ ಬಾಜಿಯ ಆ ಮೈತ್ರಿ ಮುಂದುವರಿದಿದೆ. ಸುಮಾರು
ಕೊಲೆಗಡುಕರು ಹತ್ಯೆಗೆ ಮುಂಚೆ ಬಾರಿಗೆ ಭೇಟಿ ನೀಡುವುದು ವಿವೇಚನೆಯನ್ನು ಕಳೆದುಕೊಳ್ಳಲಿಕ್ಕೆ – to become
thoughtless.

ಜಿಹಾದಿಗಳು ಸದಾ ಆ ಸ್ಥಿತಿಯಲ್ಲಿರುತ್ತಾರೆ. ಅವರಿಗೆ ದುಷ್ಟ ಯೋಚನೆಗಳನ್ನು ಅವರ ಹಳೆಯ ಗೆಳೆಯರಾದ ಕಮ್ಯುನಿಷ್ಟರು
ಒದಗಿಸುತ್ತಾರೆ. ಹಂತಕರೊಡಗೂಡಿದ ಅವರಿಗೆ ಚಿಂತಕರ ಪಟ್ಟವೂ ಪುಕ್ಕಟೆಯಾಗಿ ದೊರೆಯುತ್ತದೆ. ಅಂಥವರಿಂದ ಪ್ರವೀಣ್ ನೆಟ್ಟಾರ್ ಆತ್ಮಕ್ಕೆ ಶಾಂತಿಯ ಕೋರಿಕೆ ನಿರೀಕ್ಷಿಸಲಾದೀತೇ? ಅದು ಸಿಗಲಿಲ್ಲವೆಂದು ನಾವು ಹತಾಶರಾಗಿ ಸಿದ್ಧರಾಮಯ್ಯ ನವರ ಹುಟ್ಟಿದಹಬ್ಬಕ್ಕೆ ಶುಭ ಕೋರದಿದ್ದರೆ ಕರ್ತವ್ಯಲೋಪವಾದೀತು.

ಅಂದ ಹಾಗೆ, ಜಿಹಾದಿಗಳು ಅಭಿಮನ್ಯುವನ್ನೂ ಮುಗಿಸದೆ ಬಿಡಲಿಲ್ಲ. ಹಾಗಂತ, ಪಿಣರಾಯಿ ವಿಜಯನ್ ಅಳುತ್ತ ಕೂಡಲಿಲ್ಲ. ದಿನಾ ಸಾಯೋರಿಗೆ ಅಳುತ್ತ ಕೂರಲಾದೀತೇ? ಕರ್ನಾಟಕ ಬಿಜೆಪಿ ಸರಕಾರಕ್ಕೆ ಈ ನೆನಪು ಹಿತವಾಗಬಹುದು.