ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಫೋಬಿಯ ಎಂಬ ಭೀತಿಯು ಅನಾದಿ ಕಾಲದ್ದು. ಧಾರ್ಮಿಕ, ದಾರ್ಶನಿಕ ಹಾಗೂ ವೈದ್ಯಕೀಯ ಕೃತಿಗಳಲ್ಲಿ ಇದರ ಪ್ರಸ್ತಾಪವಿದೆ. ಗ್ರೀಕರು ಫೋಬಿಯದ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿದರೂ ಅದು ಪಾಶ್ಚತ್ಯ ಜಗತ್ತಿನ ವೈದ್ಯವಿಜ್ಞಾನದ ಗಮನಕ್ಕೆ ಬರಲಿಲ್ಲ
ಜಗತ್ತಿನ ವೈದ್ಯಕೀಯ ಪದ್ಧತಿಗಳಲ್ಲಿ ಇಸ್ಲಾಂ ವೈದ್ಯಕೀಯ ಪದ್ಧತಿಯೂ ಮುಖ್ಯವಾದದ್ದು. ಮಧ್ಯಪ್ರಾಚ್ಯದಲ್ಲಿ ೮ನೆಯ ಶತಮಾನದಲ್ಲಿ ಆರಂಭವಾಗಿ 12ನೆಯ ಶತಮಾನದವರೆಗೆ ತನ್ನ ಸುವರ್ಣ ಯುಗವನ್ನು ಕಂಡಿತು. ಇಸ್ಲಾಂ ವೈದ್ಯಕೀಯವು ಜಗತ್ತಿನ ಸಮಕಾಲೀನ ವೈದ್ಯಕೀಯ ಪದ್ಧತಿಗಳ ಎಲ್ಲ ಉತ್ತಮಾಂಶಗಳನ್ನು ಮೈಗೂಡಿಸಿಕೊಂಡಿತು.
ಪ್ರಾಚೀನ ಗ್ರೀಕ್, ರೋಮನ್, ಮೆಸೊಪೊಟೋಮಿಯನ್, ಪರ್ಷಿಯನ್ ಹಾಗೂ ಭಾರತೀಯ ಆಯುರ್ವೇದದ ಗ್ರಂಥಗಳನ್ನು ಅರಾಬಿಕ್ ಭಾಷೆಗೆ ಅನುವಾದವನ್ನು ಮಾಡಿಸಿ ತಮ್ಮ ವೈದ್ಯಕೀಯ ಅರಿವನ್ನು ಹೆಚ್ಚಿಸಿ ಕೊಂಡರು. ಇವರು ಗಳಿಸಿದ ಅರಿವು ಪುನರುತ್ಥಾನದ ಅವಧಿಯಲ್ಲಿ (ರಿನೇಸಾನ್ಸ್) ಯೂರೋಪಿಯನ್ ವೈದ್ಯರ ತಿಳಿವಳಿಕೆಯನ್ನು ಹೆಚ್ಚಿಸಿತು. ಇಸ್ಲಾಂ ವೈದ್ಯಕೀಯದಲ್ಲಿ ಶಾರೀರಿಕ ಆರೋಗ್ಯಕ್ಕೆ ನೀಡಿದ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಿದ್ದು ಅವರ ಹೆಚ್ಚುಗಾರಿಕೆ. ಇಸ್ಲಾಂ ಮನೋವೈದ್ಯರಲ್ಲಿ ಅಲ್-ಕಿಂಡಿ, ಅಬು ಜೈದ್ ಅಲ್-ಬಾಲ್ಖಿ, ಅಲ್-ಫರಾಬಿ, ಇಬ್ನ್ ಸಿನ, ಇಮಾಂ ಘಜ಼ಲಿ ಹಾಗೂ ಅಶ್ರಫ್ ಅಲಿ ತನ್ವಿ ಮುಖ್ಯರಾದವರು. ಇವರಲ್ಲಿ ಅಬು ಜೈದ್ ಅಲ್-ಬಾಲ್ಖಿ ಪ್ರಮುಖನಾದವನು.
ಅಬು ಜೈದ್ ಅಹ್ಮದ್ ಇಬ್ನ್ ಸಾಲ್ ಬಾಲ್ಖಿ (850-934) ಅಂದಿನ ಪರ್ಷಿಯ, ಖೊರಾಸಾನ್ ಪ್ರಾಂತ, ಬಾಲ್ಖ್ ಎನ್ನುವ ಪ್ರದೇಶದಲ್ಲಿದ್ದ ಶಮಿಸಿತಿಯಾನ್ ಎನ್ನುವ ಹಳ್ಳಿಯಲ್ಲಿ ಹುಟ್ಟಿದ. ಇದು ಇಂದಿನ ಆಫ್ಘಾನಿಸ್ತಾನದಲ್ಲಿದೆ. ಈತನು ನಡೆದಾಡುವ ವಿಶ್ವಕೋಶ ಎಂದು ಹೆಸರಾಗಿದ್ದ. ಸಮಕಾಲೀನ ಪ್ರತಿ ಭಾವಂತರಲ್ಲಿ ಅಗ್ರಸ್ಥಾನದಲ್ಲಿದ್ದ. ಇವನು ಹಲವು ಜ್ಞಾನಶಾಖೆಗಳ ಜತೆಯಲ್ಲಿ ವೈದ್ಯಕೀಯ ಮತ್ತು ಮನೋವೈದ್ಯಕೀಯದ ಬಗ್ಗೆ ರಿಣತನಾಗಿದ್ದ. ಇವನು ಬರೆದಿರುವ ಎನ್ನಲಾದ ೬೦ ಪುಸ್ತಕಗಳಲ್ಲಿ ಮಸಲೀಹ್ ಅಲ್-ಅಬ್ದನ್ ವಾ ಅಲ್-ಅನಸ್ (ಶರೀರ ಮತ್ತು ಆತ್ಮದ ಪೋಷಣೆ) ಎನ್ನುವ ಮನೋ ವೈದ್ಯಕೀಯದ ಕೃತಿ ಮುಖ್ಯವಾದದ್ದು.
ಮೂಲಕೃತಿ ಯು ಇಸ್ತಾಂಬುಲ್ ನಗರದ ಅಯಸೋಫಿಯ ಗ್ರಂಥಾಲಯದಲ್ಲಿತ್ತು. ಇದು ಶುದ್ಧ ಅರಾಬಿಕ್ ಭಾಷೆಯಲ್ಲಿ ರಚಿತವಾದ 361 ಪುಟಗಳ ಪುಸ್ತಕ. ಇದರಲ್ಲಿ ಮೊದಲ 268 ಪುಟಗಳು ಶರೀರ ಪೋಷಣೆಯ ಬಗ್ಗೆ ಚರ್ಚಿಸಿದರೆ, ನಂತರದ 73 ಪುಟಗಳು ಆತ್ಮದ (ಸೈಕ್/ಸೋಲ್) ಬಗ್ಗೆ ಚರ್ಚಿಸು ತ್ತದೆ. ಆತ್ಮದ ಪೋಷಣೆಯ ಭಾಗದಲ್ಲಿ ಒಟ್ಟು 8 ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯವು ನ- ಅಥವಾ ಆತ್ಮದ ಆರೋಗ್ಯದ ಬಗ್ಗೆ ಮಾತನಾಡು ತ್ತದೆ. ನಾವು ಯಾವುದನ್ನು ಇವತ್ತು ಮನಸ್ಸು (ಮೈಂಡ್) ಎಂದು ತಿಳಿದಿದ್ದೇವೆಯೋ ಅದನ್ನೇ ನ- ಎಂದು ಕರೆದ. ಆದರೆ ಈ ಶಬ್ದದಲ್ಲಿ ಕುರಾನಿನ ಅಧ್ಯಾತ್ಮ ನೆರಳು ಇರುವುದನ್ನು ನಾವು ಪರಿಗಣಿಸಬೇಕಾಗುತ್ತದೆ.
ಎರಡನೆಯ ಅಧ್ಯಾಯದ ಶೀರ್ಷಿಕೆ ಮಾನಸಿಕ ಆರೋಗ್ಯದ ಪೋಷಣೆ. ಮೂರನೆಯ ಅಧ್ಯಾಯದ ಹೆಸರು ಕಳೆದುಕೊಂಡ ಮಾನಸಿಕ ಸಮತೋಲನ ವನ್ನು ಮರಳಿ ಪಡೆಯುವ ವಿಧಾನಗಳು. ನಾಲ್ಕನೆಯ ಅಧ್ಯಾಯವು ಮಾನಸಿಕ ಅನಾರೋಗ್ಯದ ಲಕ್ಷಣಗಳು ಹಾಗೂ ನಿರ್ದಿಷ್ಟ ಗುಣ ಲಕ್ಷಣಗಳು. ಐದನೆಯ ಅಧ್ಯಾಯವು ಕೋಪವನ್ನು ವಶಪಡಿಸಿಕೊಳ್ಳುವುದು ಹೇಗೆ ಮತ್ತು ಅದರ ನಿವಾರಣೆ ಹೇಗೆ? ಆರನೆಯ ಅಧ್ಯಾಯವು ಭಯವನ್ನು ಶಮನ ಗೊಳಿಸುವುದು ಹೇಗೆ? ಏಳನೆಯ ಅಧ್ಯಾಯವು ದುಃಖ ಮತ್ತು ಖಿನ್ನತೆಯನ್ನು ನಿಭಾಯಿಸುವ ವಿಧಾನಗಳು ಹಾಗೂ ಎಂಟನೆಯ ಅಧ್ಯಾಯವು ಹೃದಯದ ಮರುಕಳಿಸುವ ಪಿಸುಮಾತುಗಳು ಮತ್ತು ಆತ್ಮದ ಒಳ ಗೀಳು ಸಂಭಾಷಣೆ – ನಿವಾರಣಾ ಮಾನಸಿಕ ಉಪಾಯಗಳು. ಈ ಎಂಟು ಅಧ್ಯಾಯಗಳ
ಶೀರ್ಷಿಕೆಗಳನ್ನು ನೋಡಿದರೆ, ಆಧುನಿಕ ಮನೋವೈದ್ಯಕೀ ಯದ ಪಠ್ಯಪುಸ್ತಕವು ನೆನಪಿಗೆ ಬರುತ್ತದೆ.
ಅಲ್-ಬಾಲ್ಖಿಯು ಮಾನಸಿಕ ಆರೋಗ್ಯವನ್ನು ವಿವರಿಸಲು ಕುರಾನಿನಲ್ಲಿ ಹೇಳಿರುವ ನಫ್ಸ್ (ಆತ್ಮ) ಖಲ್ಬ್ (ಹೃದಯ) ಮತ್ತು ಅಕ್ಲ್ (ಮನಸ್ಸು) ಬಳಸಿ ಕೊಂಡ. ಈ ಮೂರು ಅಂಶಗಳ ನಡುವೆ ಸಮತೋಲನವಿದ್ದಾಗ ಮಾತ್ರ ಮಾನಸಿಕ ಆರೋಗ್ಯವು ಲಭಿಸುತ್ತದೆ ಎಂದ. ಇಸ್ಲಾಂ ಸಮಾಜಕ್ಕೆ ಹೊಸದಾದ ಮಾನಸಿಕ ಆರೋಗ್ಯ (ಮೆಂಟಲ್ ಹೆಲ್ತ್) ಮತ್ತು ಮಾನಸಿಕ ಸ್ವಚ್ಛತೆ (ಮೆಂಟಲ್ ಹೈಜೀನ್) ಎಂಬ ಪರಿಕಲ್ಪನೆಗಳನ್ನು ಮೊದಲ ಬಾರಿಗೆ ಮಂಡಿಸಿದ. ಅಲ್-ತಿಬ್ ಎನ್ನುವ ಅಧ್ಯಾತ್ಮಿಕ ಆರೋಗ್ಯವನ್ನು ಹಾಗೂ ಅಲ್-ರುಹಾನಿ ಎನ್ನುವ ಮಾನಸಿಕ ಆರೋಗ್ಯವನ್ನು ಪ್ರಸ್ತಾಪಿಸಿದ.
ಮಾನಸಿಕ ರೋಗಗಳನ್ನು ಗುಣಪಡಿಸಿ, ಮಾನಸಿಕ ಆರೋಗ್ಯವನ್ನು ಮರುಸ್ಥಾಪಿಸುವ ಔಷಧಗಳನ್ನು ತಿಬ್ ಅಲ್-ಖಲ್ಬ್ ಎಂದು ಕರೆದ. ತನ್ನ ಸಮ ಕಾಲೀನ ವೈದ್ಯರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವಾಗ ಕೇವಲ ಶರೀರಕ್ಕೆ ಮಾತ್ರ ಆದ್ಯತೆಯನ್ನು ಕೊಟ್ಟು, ಮನಸ್ಸನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದರ ಬಗ್ಗೆ ಅಸಮಾಧಾನವನ್ನು ತೋರಿದ. ಮನುಷ್ಯನ ದೇಹವನ್ನು ಶರೀರ ಮತ್ತು ಆತ್ಮದಿಂದ ನಿರ್ಮಿಸಲಾಗಿದೆ. ಇವೆರಡು ಒಂದರಲ್ಲಿ ಒಂದು ಹೆಣೆದುಕೊಂಡಿರುತ್ತವೆ. ಶರೀರವು ಅನಾರೋಗ್ಯ ಪೀಡಿತವಾದರೆ, ನಫ್ಸ್ (ಆತ್ಮ) ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಐಹಿಕ ಸುಖಗಳನ್ನು ಅನುಭವಿಸಲಾರದು; ಹಾಗೆಯೇ ನ- ಅನಾರೋಗ್ಯ ಪೀಡಿತವಾದರೆ, ಅದರ ನೇರ ಪರಿಣಾಮ ಶರೀರದ ಮೇಲಾಗಿ, ರೋಗಗಳು ಕಂಡುಬರುತ್ತವೆ ಎಂದ. ಈ ವಿವರಣೆಯು ಆಧುನಿಕ ವೈದ್ಯಕೀಯದ ಮನೋದೈಹಿಕ ಬೇನೆಗಳನ್ನು ನೆನಪಿಗೆ ತರುತ್ತದೆ.
ಅಲ್-ಬಾಲ್ಖಿ ಮೊದಲ ಬಾರಿಗೆ ನರವ್ಯಾಧಿ (ನ್ಯೂರೋಸಿಸ್) ಮತ್ತು ಮನೋವ್ಯಾಧಿ (ಸೈಕೋಸಿಸ್) ಗಳನ್ನು ಪ್ರತ್ಯೇಕವಾಗಿ ಗುರುತಿಸಿದ. ಅವುಗಳ ನಡುವೆ ಇರುವ ವ್ಯತ್ಯಾಸವನ್ನು ತೋರಿಸಿದ. ನರವ್ಯಾಧಿಗಳಲ್ಲಿ ನಾಲ್ಕು ಭಾವನಾತ್ಮಕ ಸಮಸ್ಯೆಗಳಿರುವುದನ್ನು ಗುರುತಿಸಿದ. ಭಯ ಮತ್ತು ಆತಂಕ (ಅಲ್ ಖವಾ- ಅಲ್ -ಝಾ), ಕೋಪ ಮತ್ತು ಆಕ್ರಮಣಶೀಲತೆ (ಅಲ್ ಘದಬ್), ದುಃಖ ಮತ್ತು ಖಿನ್ನತೆ (ಅಲ್ ಹುಂಜ಼್ ವಾ ಅಲ್ ಜ಼ಜಾ) ಹಾಗೂ ಗೀಳು
(ಅಲ್ ವಸ್ವಾಸಹ್ = ಅಬ್ಸೆಶನ್). ಅಲ್-ಬಾಲ್ಖಿ ತನ್ನ ಕಾಲಕ್ಕೆ ಅತ್ಯಂತ ಪ್ರಬುದ್ಧವಾಗಿದ್ದ ಮನೋ-ಅಂಗಕ್ರಿಯಾ ವಿಜ್ಞಾನವನ್ನು, (ಸೈಕೋಫಿಸಿ
ಯಾಲಜಿ) ಹಾಗೂ ಮನೋದೈಹಿಕ ಬೇನೆಗಳನ್ನು ಸ್ಪಷ್ಟವಾಗಿ ಗುರುತಿಸಿದ್ದ. ಬೇನೆಗಳು ಆವರ್ಭವಿಸಲು ಹೇಗೆ ದೇಹ ಮತ್ತು ಮನಸ್ಸು ಎರಡೂ ಕಾರಣ ವಾಗುತ್ತವೆ ಎನ್ನುವುದನ್ನು ವಿವರಿಸಿದ. ಶಾರೀರಿಕ ರೋಗಗಳಿಗೆ ಚಿಕಿತ್ಸೆಯನ್ನು ನೀಡಿ ಗುಣಪಡಿಸುವಂತೆ, ಮನೋರೋಗಗಳಲ್ಲಿ ಮನಸ್ಸಿಗೂ ಚಿಕಿತ್ಸೆ ಯನ್ನು ನೀಡಿ, (ಸೈಕೋಥೆರಪಿ) ಮನಸ್ಸನ್ನು ಸ್ವಸ್ಥಗೊಳಿಸಬಹುದು ಎನ್ನುವುದನ್ನು ತೋರಿಸಿದ.
ಶರೀರವು ರೋಗಗ್ರಸ್ತವಾದಾಗ ಜ್ವರ, ತಲೆನೋವು, ಕೆಮ್ಮು, ನೆಗಡಿ ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮನಸ್ಸು ರೋಗ ಪೀಡಿತವಾದಾಗ ಕೋಪ, ಆತಂಕ, ಬೇಸರ, ದುಃಖ ಇತ್ಯಾದಿ ಲಕ್ಷಣಗಳು ತಲೆದೋರುತ್ತವೆ ಎನ್ನುವುದನ್ನು ಹೇಳಿದ. ಅಲ್-ಬಾಲ್ಖಿ ಕಾಲಕ್ಕೆ ಅತ್ಯಂತ ಕ್ರಾಂತೀಕಾರಕ
ವಿಚಾರವೆಂದರೆ ಆತನು ಅಂತರ್ಜನಿತ ಖಿನ್ನತೆ ಮತ್ತು ಬಾಹ್ಯಾಜನಿತ ಖಿನ್ನತೆಯ ಬಗ್ಗೆ ಸ್ಪಷ್ಟವಾಗಿ ಪ್ರಸ್ತಾಪಿಸಿರುವುದು. ಅಂತರ್ಜನಿತ ಖಿನ್ನತೆಗೆ ಕಾರಣಗಳು ವ್ಯಕ್ತಿಯ ದೇಹದಲ್ಲಿಯೇ ಇರುತ್ತವೆ. ಬಾಹ್ಯಾಜನಿತ ಖಿನ್ನತೆಗೆ ಕಾರಣಗಳು ವ್ಯಕ್ತಿಯ ಶರೀರದಿಂದ ಹೊರಗೆ, ಪರಿಸರದಲ್ಲಿ ಇರುತ್ತದೆ. ಆಧುನಿಕ ಮನೋವೈದ್ಯಕೀಯದಲ್ಲಿ ಈ ಪರಿಕಲ್ಪನೆಯು ೧೦೦೦ ವರ್ಷಗಳ ನಂತರವೇ ಕಂಡುಬಂದಿತು ಎಂದರೆ ಅಲ್-ಬಾಲ್ಖಿಯ ಮಹತ್ವವು ಅರಿವಾಗುತ್ತದೆ.
ಹುನ್ಜ್ ಎಂದರೆ ದುಃಖ ಅಥವಾ ಖಿನ್ನತೆಯಲ್ಲಿ ಎರಡು ವಿಧ. ಮೊದಲನೆಯದಕ್ಕೆ ಕಾರಣವು ಸ್ಪಷ್ಟ. ಉದಾಹರಣೆಗೆ ಪ್ರೀತಿಪಾತ್ರರು ಮರಣಿಸಿರಬಹುದು, ವ್ಯಾಪಾರದಲ್ಲಿ ದಿವಾಳಿಯಾಗಿರಬಹುದು ಅಥವ ಮೌಲ್ಯಯುತವಾದದ್ದನ್ನು ಕಳೆದುಕೊಂಡಿರಬಹುದು. ಇನ್ನೊಂದು ನಮೂನೆಯಲ್ಲಿ ಯಾವುದೇ
ಕಾರಣವಿರುವುದಿಲ್ಲ. ಇದ್ದಕ್ಕಿದ್ದ ಹಾಗೆ ದುಃಖ ಮತ್ತು ವ್ಯಾಕುಲತೆಯು ಆವರಿಸುತ್ತದೆ. ಇದುವೇ ಗುಮ್ಮಾಹ್. ಇದು ಯಾವಾಗಲೂ ಇರುತ್ತದೆ. ದೈನಂದಿನ ಕೆಲಸಗಳಲ್ಲಿ ತೊಡಗದಂತೆ ತಡೆಯುತ್ತದೆ. ರುಚಿಯಾದ ಆಹಾರ ಸೇವನೆ ಅಥವಾ ಸಂಭೋಗದಲ್ಲಿ ಆಸಕ್ತಿಯಿರುವುದಿಲ್ಲ. ತಾನು ಕೆಲಸದಲ್ಲಿ ಆಸಕ್ತಿ ಯನ್ನು ತೋರಿಸದಿರುವುದಕ್ಕೆ, ಸದಾ ಯಾತನೆಯಲ್ಲಿ ಮುಳುಗಿರುವುದಕ್ಕೆ ನಿರ್ದಿಷ್ಟ ಕಾರಣವು ತಿಳಿದಿರುವುದಿಲ್ಲ.
ಇಂತಹ ಹುನ್ಜ್ ಕಂಡುಬರಲು ಅವರ ರಕ್ತದಲ್ಲಿರುವ ಕಲ್ಮಶಗಳೇ ಕಾರಣ. ಹಾಗಾಗಿ ಅವರಿಗೆ ರಕ್ತವನ್ನು ಶುದ್ದೀಕರಿಸುವ ಚಿಕಿತ್ಸೆಯನ್ನು ಕೊಡಬೇಕು.
ಅಂತರ್ಜನಿತ ಖಿನ್ನತೆಯನ್ನು ನಿವಾರಿಸಲು ದೇಹಕ್ಕೆ ಚಿಕಿತ್ಸೆಯನ್ನು ನೀಡಬೇಕೆಂದ. ಅದರ ಜೊತೆಯಲ್ಲಿ ರೋಗಿಯ ಜೊತೆಯಲ್ಲಿ ಹಿತವಾದ ಮಾತುಕತೆ ಯನ್ನಾಡುತ್ತಾ ರೋಗಿಯನ್ನು ಸಂತೋಷವಾಗಿಡಲು ಪ್ರಯತ್ನಿಸಬೇಕೆಂದ. ಮನಸ್ಸನ್ನು ಉಲ್ಲಾಸಗೊಳಿಸುವ ಚಟುವಟಿಕೆಗಳಲ್ಲಿ, ಸಂಗೀತ ವಾದ್ಯ ಗಳನ್ನು ನುಡಿಸುವುದು ಇಲ್ಲವೇ ಹಾಡುವುದರಲ್ಲಿ ತೊಡಗಬೇಕೆಂದ.
ಬಾಹ್ಯಾಜನಿತ ಖಿನ್ನತೆಯನ್ನು ಬಾಹ್ಯಾ ಹಾಗೂ ಆಂತರಿಕ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಿಸಬಹುದು. ಬಾಹ್ಯಾ ವಿಧಾನಗಳಲ್ಲಿ ರೋಗಿಯೊಡನೆ ಮಾತನಾಡುವುದು, ರೋಗಿಗೆ ವಿವರಿಸಿ ಹೇಳುವುದು ಅಥವಾ ಅಧ್ಯಾತ್ಮಕ್ಕೆ ಸಂಬಂಧಿಸಿದ ಧಾರ್ಮಿಕ ವಿಚಾರಗಳನ್ನು ಬೋಧಿಸುವುದು ಇತ್ಯಾದಿ ವಿಧಾನ ಗಳಿಂದ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಆಂತರಿಕ ವಿಧಾನಗಳಲ್ಲಿ, ರೋಗಿಯ ಸಮಸ್ಯೆಯ ಬಗ್ಗೆ, ಆತನಿಗೆ ಒಂದು ಒಳ ನೋಟವನ್ನು ನೀಡಲು ಪ್ರಯತ್ನಿಸುವುದು. ಸಮಸ್ಯೆಯನ್ನು ವಿಶ್ಲೇಷಿಸಿ ಮನದಟ್ಟು ಮಾಡುವುದು. ವ್ಯಕ್ತಿಯು ಸ್ವಯಂ ಆಲೋಚಿಸುವಂತೆ ಮಾಡುವುದು ಈ ಆಂತರಿಕ ವಿಧಾನದ ಮೂಲ ಆಶಯವಾಗಿದೆ.
ಫೋಬಿಯ ಎಂಬ ಭೀತಿಯು ಅನಾದಿ ಕಾಲದ್ದು. ಧಾರ್ಮಿಕ, ದಾರ್ಶನಿಕ ಹಾಗೂ ವೈದ್ಯಕೀಯ ಕೃತಿಗಳಲ್ಲಿ ಇದರ ಪ್ರಸ್ತಾಪವಿದೆ. ಗ್ರೀಕರು -ಬಿಯದ ಬಗ್ಗೆ
ಪ್ರತ್ಯೇಕವಾಗಿ ಮಾತನಾಡಿದರೂ ಅದು ಪಾಶ್ಚತ್ಯ ಜಗತ್ತಿನ ವೈದ್ಯವಿಜ್ಞಾನದ ಗಮನಕ್ಕೆ ಬರಲಿಲ್ಲ. ಅದಕ್ಕಾಗಿ 17ನೆಯ ಶತಮಾನದವರೆಗೆ ಕಾಯಬೇಕಾ ಯಿತು. ಒಂಬತ್ತನೆಯ ಶತಮಾನದಲ್ಲಿ ಅಲ್-ಬಾಲ್ಖಿಯು ಅಲ್-ಫಜಿ ಎನ್ನುವ ಫೋಬಿಯದ ಬಗ್ಗೆ ಹಾಗೂ ಅದನ್ನು ನಿಬಾಯಿಸುವ ಬಗ್ಗೆ ವಿವರಿಸಿದ. ಅಲ್-ಇಲಾಜ಼್ ಅಲ್-ದಿದ್ ಎಂಬ ಪರಸ್ಪರ ಪ್ರತಿಬಂಧ ಸಿದ್ಧಾಂತವನ್ನು (ರೆಸಿಪ್ರೋಕಲ್ ಇನ್‌ಹಿಬಿಶನ್) ಮುಂದಿಟ್ಟ. ಇದೊಂದು ವರ್ತನಾ ಚಿಕಿತ್ಸೆ. 1969ರಲ್ಲಿ, ದಕ್ಷಿಣ ಆಫ್ರಿಕದ ಮನೋವೈದ್ಯ ಜೋಸೆ- ವೂಲ್ಪ್ (1915-1997) ಇದೇ ಸಿದ್ಧಾಂತವನ್ನು ಪರಿಷ್ಕರಿಸಿ ಮರುಮಂಡಿಸಿದ.
ವರ್ತನಾ ಚಿಕಿತ್ಸೆಯಲ್ಲಿ, ರೋಗಿಯು ಯಾವ ರೀತಿಯ ಮನೋಲಕ್ಷಣಗಳಿಂದ ನರಳುತ್ತಿರುವನೋ, ಅದಕ್ಕೆ ಸಮಾ ವಿರುದ್ಧವಾದ ಭಾವನೆಗಳು ಜಾಗೃತ ವಾಗುವಂತೆ ಮಾಡುವುದು. ಉದಾಹರಣೆಗೆ ಒಬ್ಬರು ಆತಂಕದಿಂದ ನರಳುತ್ತಿದ್ದರೆ, ಅವರ ಮನಸ್ಸಿನಲ್ಲಿ ಆತಂಕಕ್ಕೆ ತದ್ವಿರುದ್ಧವಾದ ಮನರಂಜಕ, ಉಲ್ಲಾಸಕರ, ಪ್ರಫುಲ್ಲ ಭಾವಗಳು ಮೂಡುವಂತೆ ಪ್ರಯತ್ನಿಸುವುದು. ಇದರಿಂದ ಅವರ ಆತಂಕದ ಭಾವನೆಗಳು ಚೆದುರಬಹುದು. ಜೋಸೆಫ್ ವೂಲ್ ಈ ವರ್ತನಾ ಚಿಕಿತ್ಸೆಯನ್ನು ಜನಪ್ರಿಯಗೊಳಿಸಿದ. ಅಬು ಜ಼ೈದ್ ಅಹ್ಮದ್ ಇಬ್ನ್ ಸಾಲ್ ಬಾಲ್ಖಿಯು ಮಧ್ಯ ಯುಗದ ಇಸ್ಲಾಂ ವೈದ್ಯಕೀಯವು ಕಂಡ ಅತ್ಯಂತ ಪ್ರತಿಭಾವಂತ ವೈದ್ಯನು ಎನ್ನುವುದರಲ್ಲಿ ಅನುಮಾನವಿಲ್ಲ.