Saturday, 14th December 2024

ಫೋಬಿಯಾ: ಬಾಳೆಹಣ್ಣು ಕಂಡರೂ ಭಯ !

ವೈದ್ಯ ವೈವಿಧ್ಯ

drhsmohan@gmail.com

ಒಬ್ಬ ವ್ಯಕ್ತಿ ಋಣಾತ್ಮಕ ಅನುಭವವನ್ನು ತಾನೇ ಅನುಭವಿಸಿರಬೇಕು ಎಂದೇನಿಲ್ಲ. ಬೇರೆಯವರಿಗೆ ಆದ ಕೆಟ್ಟ ಅನುಭವಗಳು ಅಥವಾ ಆಗಾಗ ಟಿ ವಿ ಅಥವಾ ಮಾಧ್ಯಮದಲ್ಲಿ ಕಾಣ ಸಿಗುವ ದೃಶ್ಯಗಳು, ಉದಾಹರಣೆಗೆ ತಂದೆ ಅಥವಾ ತಾಯಿ ಮಗುವಿಗೆ ಸಮುದ್ರದ ಬಗ್ಗೆ ಪದೇ ಪದೇ ಎಚ್ಚರಿಕೆ ಕೊಟ್ಟಾಗ ಭವಿಷ್ಯದಲ್ಲಿ ಅಂತಹ ವ್ಯಕ್ತಿ ಜಾಸ್ ಅಥವಾ ಟೈಟಾನಿಕ್ ತರಹದ ಸಿನಿಮಾ ನೋಡಿದಾಗ ಆತನ ಮನಸ್ಸಿನಲ್ಲಿ ದೊಡ್ಡ ನೀರಿನ ಹರಿವಿನ ಬಗ್ಗೆ ಹೆದರಿಕೆ ಮೂಡುತ್ತದೆ.

ಜಿರಲೆ, ಹಲ್ಲಿ ಇತ್ಯಾದಿಗಳನ್ನು ನೋಡಿ ಒಮ್ಮೆಲೇ ಬೆಚ್ಚಿ ಬೀಳುವ, ಭಯಪಡುವ ವ್ಯಕ್ತಿಗಳನ್ನು ನೀವು ನೋಡಿರ ಪೂರ್ವಕ ಅಂತಹ ವಸ್ತುವಿನ ಮುಖಾಮುಖಿಯಾದರೆ ಒಮ್ಮೆಲೇ ತೀವ್ರ ರೀತಿಯ ಭಯ, ತಿಗೆ ಒಳಗಾಗುತ್ತಾರೆ. ಅವರಿಗೆ ಪ್ಯಾನಿಕ್ ಅಟ್ಯಾಕ್ ಆಗಬಹುದು. ಜನರಿಗೆ ಹೆಚ್ಚು ಗೊತ್ತಿಲ್ಲದ, ಅಪರೂಪದ ಕೆಲವು ಫೋಬಿಯಾಗಳ ಬಗ್ಗೆ ಗಮನಹರಿಸೋಣ.

ಗ್ಲೋಬೋಫೋಬಿಯ – ಬಲೂನ್‌ಗಳ ಬಗ್ಗೆ ಭಯ: ಈ ರೀತಿಯ ವ್ಯಕ್ತಿಗಳು ಬಲೂನ್‌ಗಳನ್ನು ನೋಡಿದರೆ, ಮುಟ್ಟಿದರೆ ಅಥವಾ ಅದರ ವಾಸನೆಯಿಂದಲೂ ಭಯಭೀತರಾಗಬಹುದು. ಇದರಲ್ಲಿ ಹೆಚ್ಚಿನವರಿಗೆ ಅದರಿಂದ ಉಂಟಾಗುವ ಶಬ್ದ ಮತ್ತಷ್ಟು ಹೆದರಿಕೆ ಹುಟ್ಟಿಸುತ್ತದೆ. ಈ ಬಗ್ಗೆ ೨೦೧೩ ರಲ್ಲಿ ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ವಿವರ ಲೇಖನ ಪ್ರಕಟವಾಗಿದೆ.

ಬಾಳೆಹಣ್ಣಿಗೆ ಭಯ: ಮೊದಲು ತಿಳಿಸಿದಂತೆ ಹೆಚ್ಚಿನ ಜನರು ಇಷ್ಟಪಟ್ಟು ತಿನ್ನುವ ಬಾಳೆ ಹಣ್ಣಿನ ಬಗ್ಗೆ ಕೆಲವರು ಭಯಭೀತರಾಗುತ್ತಾರೆ. ಒಬ್ಬ ಮಹಿಳೆಗೆ ಜೀವಮಾನವಿಡೀ ಬಾಳೆಹಣ್ಣಿನ ಬಗ್ಗೆ  ಪರೀತ ಹೆದರಿಕೆ ಆವರಿಸಿತ್ತು. ಅದೆಷ್ಟು ಅದರ ಮೇಲಿನ ಭೀತಿ ಎಂದರೆ ಬಾಳೆಹಣ್ಣು ಇರುವ ಕೊಠಡಿಯಲ್ಲಿದ್ದರೂ ಆಕೆಗೆ ವಾಕರಿಕೆ ಬರುತ್ತಿತ್ತು, ಕೆಲವೊಮ್ಮೆ ವಾಂತಿ ಮಾಡಿಕೊಂಡದ್ದೂ ಇದೆ. ಮಾನಸಿಕ ತಜ್ಞರಲ್ಲಿ ಆಕೆಗೆ ಚಿಕಿತ್ಸೆ ಕೊಡಿಸಿದ ನಂತರ ಆಕೆಯ ಸಮಸ್ಯೆ ಇಲ್ಲವಾಯಿತು.

ಬಟ್ಟೆಗಳಿಗೆ ಭಯ ಬೀಳುವುದು: ವೆಸ್ಟಿ-ಬಿಯ ಎನ್ನುವ ಈ ಸಮಸ್ಯೆ ಇರುವವರು ಯಾವುದೋ ಒಂದು ನಿರ್ದಿಷ್ಟ ರೀತಿಯ ಬಟ್ಟೆ ಅಥವಾ ಬಿಗಿಯಾದ ಉಡುಪುಗಳ ಬಗ್ಗೆ ವಿಚಿತ್ರ ರೀತಿಯ ಭೀತಿ ಹೊಂದಿರುತ್ತಾರೆ. ಬಹಳ ಗಂಭೀರ ಹೆದರಿಕೆ ಇರುವವರು ಸಮಾಜದ ಇತರರಿಂದಲೇ ದೂರ ಇರುವ ಮನಃಸ್ಥಿತಿ ಬೆಳೆಸಿಕೊಳ್ಳುತ್ತಾರೆ. ಏಕೆಂದರೆ ಅವರುಗಳಿಗೆ ಬೇರೆ ಬೇರೆ ರೀತಿಯ ಬಟ್ಟೆ ಧರಿಸಿದ ಜನರನ್ನು ನೋಡಿದರೆ ಭಯ ಬೀಳುವ ಪರಿಸ್ಥಿತಿ ಉಂಟಾಗುತ್ತದೆ. ಈ ಬಗೆಗೆ ಚೀನಾದ ಮಿಲಿಟರಿ ತರಬೇತಿ ನೀಡುತ್ತಿದ್ದ ಒಬ್ಬ ಯುವಕನ ಬಗ್ಗೆ ವರದಿಯಾಗಿದೆ.

ಈತನಿಗೆ ಯಾವುದೇ ರೀತಿಯ ಮಾನಸಿಕ ಸಮಸ್ಯೆ ಇರಲಿಲ್ಲ. ಹಾಗೂ ಅದಕ್ಕಿಂತ ಮೊದಲು ಈತ ಯಾವುದೇ ಮಿಲಿಟರಿ ಚಟುವಟಿಕೆಯಲ್ಲಿ ಭಾಗವಹಿಸಿರಲಿಲ್ಲ. ಆತನ ಮಿಲಿಟರಿ ಟ್ರೈನಿಂಗ್ ಆರಂಭವಾದ ನಂತರ ಆತನಿಗೆ ವಿಪರೀತ ಹೃದಯದ ಬಡಿತ, ಎದೆಯಲ್ಲಿ ಬಿಗಿ ಹಿಡಿದ ಅನುಭವ ಹಾಗೂ ಎದೆ ಹಿಂಡುವಿಕೆ – ಈ ರೀತಿಯ ಅನುಭವವಾಗತೊಡಗಿತು. ಮಿಲಿಟರಿ ಯೂನಿಫಾರಂನ ಒಂದು ನಿರ್ದಿಷ್ಟ ಬಟ್ಟೆ ಧರಿಸಿದ ನಂತರ ತನಗೆ ಈ ರೀತಿಯ ಅನುಭವವಾಗತೊಡಗಿತು ಎಂದು ಆತನೇ ಕಂಡುಕೊಂಡ.

ಟ್ರೈಪೋಫೋಬಿಯಾ – ಗೋಲಗಳ ಬಗ್ಗೆ ಭಯ: ಇದೊಂದು ವಿಚಿತ್ರ ರೀತಿಯ ಫೊಬಿಯ. ಈ ರೀತಿಯ ವ್ಯಕ್ತಿಗಳು ಜೇನುಗೂಡು, ಗುಳ್ಳೆಗಳು,
ಕೆಲವು ರೀತಿಯ ಬೀಜಗಳು – ಇವುಗಳಿಗೆ ವಿಪರೀತ ಭಯ ಬೀಳುತ್ತಾರೆ. ೧೨ ವರ್ಷದ ಹುಡುಗಿ ಬೀಜಗಳಿಂದಾವೃತವಾದ ಬ್ರೆಡ್, ವರ್ತುಲಗಳ
ಪ್ರಿಂಟ್ ಅಥವಾ ಪ್ರಾಣಿಗಳ ಚಿತ್ರವಿರುವ ಬಟ್ಟೆಗಳನ್ನು ನೋಡಿದರೆ ಭಯ ಭೀತಳಾಗುತ್ತಾಳೆ. ಹಾಗೆಂದು ಆಕೆಗೆ ಯಾವುದೇ ಮನೋವಿಕಾರದ,
ಮಾನಸಿಕ ಕಾಯಿಲೆಯ ಬಗೆಗೆ ವರದಿಗಳಿರಲಿಲ್ಲ. ಹಾಗೆಯೇ ಶಾಲೆಯಲ್ಲಿ ತುಂಬಾ ಬುದ್ಧಿವಂತಳಾಗಿದ್ದಳು.

ಕಿಂಡಿ ಕಿಂಡಿಗಳ ಚಿತ್ರವಿರುವ ಗೋಡೆ ಇರುವ ಬಾತ್ ರೂಮಿಗೆ ಹೋಗುವುದನ್ನು ಆಕೆ ತಪ್ಪಿಸುವ ಬಗ್ಗೆ ಆಕೆಯ ತಾಯಿ ವರದಿ ಮಾಡಿದ್ದಳು.

ಅರಚಿಬುಟೈರೋಫೋಬಿಯ – ಬಾಯಿಯ ಮೇಲ್ಭಾಗದಲ್ಲಿ ಬಟಾಣಿ ಕಾಳಿನ ಬೆಣ್ಣೆ ಅಂಟಿರುವ ಬಗ್ಗೆ ಭೀತಿ: ಈ ತರಹದ ಭೀತಿ ಇರುವವರು ಬಟಾಣಿ ಕಾಳಿನ ಬೆಣ್ಣೆಯ ಬಗ್ಗೆ ಭೀತಿ ಹೊಂದಿರುವುದಿಲ್ಲ. ಆದರೆ ಅದು ಬಾಯಿಗೆ ಅಂಟಿಕೊಂಡಿರುವ ಬಗ್ಗೆ ಇರುವ ಭಯ, ಭೀತಿ. ಹಾಗಾಗಿ ಇಂತಹವರು ಅಂಟಿನ ರೀತಿ ಇರುವ ಯಾವುದೇ ಆಹಾರ ಪದಾರ್ಥದ ಬಗ್ಗೆ ವಿಚಿತ್ರವಾದ ಭಯ ಬೆಳೆಸಿಕೊಂಡಿರುತ್ತಾರೆ.

ದೀರ್ಘ ಶಬ್ದದ ಬಗ್ಗೆ ಫೋಬಿಯ: ಇದನ್ನು ಇಂಗ್ಲಿಷ್‌ನಲ್ಲಿ ಬರೆದರೆ ಐPPuPuSuIuಘೆಖSuಖಉಖಕಿಖಿಐPPಉಈಅಔಐuPಏuಆಐಅ. ಈ ಶಬ್ದವನ್ನು ನೋಡಿದರೆ ನಮಗೆ ಜೋಕ್‌ನಂತೆ ಕಾಣಿಸಬಹುದು. ಈ ಶಬ್ದದ ಸರಿಯಾದ ಅರ್ಥ- ಒಂದೂವರೆ ಅಡಿಗೆ ಇರುವ ಭಯ. ಮತ್ತೊಂದು ಅರ್ಥದಲ್ಲಿ ದೀರ್ಘ ಶಬ್ದಗಳ ಬಗ್ಗೆ ಇರುವ ಭೀತಿ. ಬಾಲ್ಯದಲ್ಲಿ ಉದ್ದ ಶಬ್ದಗಳನ್ನು ಉಚ್ಚರಿಸುವಾಗ ತಪ್ಪಾದರೆ ಅದರ ಬಗೆಗೆ ಬೇರೆ ಯಾರಾದರೂ ಟೀಕಿಸಿದರೆ ಅಂತಹ ಹುಡುಗ / ಹುಡುಗಿಗೆ ಒಂದು ರೀತಿಯ ನಾಚಿಕೆ, ಮುಜುಗರ ಉಳಿದಿರುತ್ತದೆ.

ಓಂ-ಲೋಫೋಬಿಯಾ – ಹೊಕ್ಕುಳ ಪ್ರದೇಶದ ಬಗ್ಗೆ ಭಯ: ಈ ರೀತಿ ಭೀತಿ ಇರುವವರು ಬೇರೆಯವರ ಹೊಟ್ಟೆಯ ಮಧ್ಯದ ಹೊಕ್ಕುಳ ಭಾಗ ನೋಡಲು ಇಚ್ಛಿಸುವುದಿಲ್ಲ. ಆಕಸ್ಮಾತ್ ಕಂಡರೆ ಭಯಭೀತರಾಗುತ್ತಾರೆ. ಅಂತಹವರಿಗೆ ಆರೋಗ್ಯದಲ್ಲಿ ತಕ್ಷಣ ಏರುಪೇರಾಗುತ್ತದೆ. ಒಬ್ಬ ವೈದ್ಯಕೀಯ ವಿದ್ಯಾರ್ಥನಿಗೆ ಈ ಬಗೆಗೆ ಭಯವಿರುವುದು ವರದಿಯಾಗಿದೆ. ತನ್ನ ವೈದ್ಯಕೀಯ ಪದವಿ ಪೂರೈಸಲು ಆಕೆ ಕಾಗ್ನಿಟಿವ್ ಬಿಹೇವಿಯರಲ್ ಚಿಕಿತ್ಸೆ ತೆಗೆದುಕೊಳ್ಳಬೇಕಾಯಿತು.

ಫೋಬಿಯಾ – ಫೋಬಿಯಾದ ಬಗ್ಗೆಯೇ ಭೀತಿ: ಇದೊಂದು ಮಾನಸಿಕ ಆತಂಕದ ಸ್ಥಿತಿ ಎಂದು ಸಂಶೋಧಕರು ಬಣ್ಣಿಸಿದ್ದಾರೆ. ಯಾವುದೇ ಭಯ
ಉಂಟಾದಾಗ ಆಗುವ ನಾನಾ ದೈಹಿಕ ಸಂವೇದನೆಗಳ ಬಗ್ಗೆ ಉದಾಹರಣೆಗೆ ಉಸಿರು ಕಟ್ಟುವುದು, ಎದೆ ಹೊಡೆದುಕೊಳ್ಳುವುದು – ಇಂತಹವರಿಗೆ ಹೆದರಿಕೆ ಉಂಟು ಮಾಡುತ್ತವೆ. ಇಂತಹ ಲಕ್ಷಣಗಳು ತಮ್ಮ ಜಿ ತೆಗೆಯಬಹುದು ಅಥವಾ ದೈಹಿಕವಾಗಿ ಶಾಶ್ವತ ಊನ ಉಂಟುಮಾಡಬಹುದು
ಎಂದು ಅನಗತ್ಯವಾಗಿ ಭಯ ಬೀಳುತ್ತಾರೆ.

ಹಾಗೆಯೇ ತಮಗೆ ಯಾವುದೋ ಒಂದು ನಿರ್ದಿಷ್ಟ ವಸ್ತುವಿನ ಬಗ್ಗೆ ಹೆದರಿಕೆ ಉಂಟಾಗಬಹುದೇನೋ ಎಂಬ ಂ ಂi ದಿ ಂ z ಭಯಪಡುತ್ತಾರೆ. ಇದನ್ನು ಆತಂಕದ ಮನಸ್ಥಿತಿಯ ಜೊತೆಗೆ ಕಾಯಿಲೆ ಪತ್ತೆ ಹಚ್ಚಬೇಕಾಗುತ್ತದೆ ಎಂದು ವಿಜ್ಞಾನಿಗಳ ಅಭಿಮತ.

ಚಿಯಟೋಫೋಬಿಯ – ಕೂದಲಿನ ಬಗ್ಗೆ ಭಯ : ಈ ರೀತಿಯ ಭಯವಿರುವ ವ್ಯಕ್ತಿಗಳು ತಮ್ಮ ಕೂದಲನ್ನು ತೊಳೆಯಲು, ಕೂದಲನ್ನು ಕತ್ತರಿಸಿ ಕೊಳ್ಳಲು ಹೆದರುತ್ತಾರೆ. ಮೈ ಮೇಲೆ ಕೂದಲು ಜಾಸ್ತಿ ಇರುವ ಯಾವುದೇ ಪ್ರಾಣಿಯ ಸಮೀಪ ಬರಲು ಇಷ್ಟಪಡುವುದಿಲ್ಲ. ಅದರ ಬಗ್ಗೆ
ಹೆದರಿಕೆಯೂ ಇದೆ.

ಟಾಯ್ಲೆಟ್ ಫೋಬಿಯಾ – ಶೌಚಾಲಯದ ಬಗೆಗೆ ಭೀತಿ: ಈ ರೀತಿ ಹೆದರಿಕೆ ಇರುವವರು ಶೌಚಾಲಯದಿಂದ ತುಂಬಾ ದೂರ ಇರುವ ಬಗ್ಗೆ ಹೆದರುತ್ತಾರೆ. ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ಬಗ್ಗೆ ಭೀತಿ ಹೊಂದಿರುತ್ತಾರೆ. ತಾವು ಶೌಚಾಲಯದಲ್ಲಿದ್ದಾಗ ಬೇರೆಯವರು ನೋಡುತ್ತಿರಬಹುದು ಎಂದು ಅಥವಾ ಮತ್ಯಾರೋ ಶೌಚಾಲಯದ ಶಬ್ದ ಕೇಳುತ್ತಿರಬಹುದು ಎಂದು ಹೆದರುತ್ತಾರೆ. ಇಂತಹವರು ಅತಿರೇಕದ ವರ್ತನೆ ಯಾಗಿ ಕೆಲವೊಮ್ಮೆ ಮೂತ್ರ ವಿಸರ್ಜನೆ ಮಾಡುವುದನ್ನೇ ತಪ್ಪಿಸಲು ಪ್ರಯತ್ನಿಸುತ್ತಾ. ಅಂತಹ ಒಂದು ಅತಿರೇಕದ ಉದಾ: ಇಂಗ್ಲೆಂಡಿನ ಹಫಿಂಗ್ ಟನ್ ಪೋಸ್ಟ್ ಯುಕೆ ಇಂದ ವರದಿಯಾಗಿದೆ.

೧೬ ವರ್ಷದ ಈ ಯುವತಿ ಟಾಯ್ಲೆಟ್‌ಗೆ ಹೋಗುವುದನ್ನು ಎರಡು ತಿಂಗಳ ಕಾಲ ತಪ್ಪಿಸಿ, ಪರಿಣಾಮವಾಗಿ ಆಕೆ ಮರಣಕ್ಕೆ ತುತ್ತಾದ ದುರ್ಘಟನೆಯ ಬಗ್ಗೆ ಮೇಲಿನ ಜರ್ನಲ್ ವರದಿ ಮಾಡಿದೆ.

ಫೋಬಿಯಾ ಏಕೆ ಹುಟ್ಟುತ್ತದೆ?
ಈ ಬಗ್ಗೆ ಸ್ವಲ್ಪ ಪರಿಶೀಲಿಸೋಣ. ಯಾವುದೋ ಒಂದು ನಿರ್ದಿಷ್ಟ ವಸ್ತು ಅಥವಾ ಸಂದರ್ಭದ ಬಗ್ಗೆ ವಾಸ್ತವಿಕಕ್ಕಿಂತಲೂ ಮೀರಿದ ಅತಿಶಯವಾದ
ಭಯವನ್ನು ಫೋಬಿಯಾ ಎಂದು ಹೇಳಬಹುದು. ಅಲ್ಲದೆ ಈ ವರ್ತನೆ ವ್ಯಕ್ತಿಯ ದೈನಂದಿನ ಜೀವನದಲ್ಲಿ ತೊಂದರೆ ಉಂಟು ಮಾಡುವಂತಹದು – ಹೀಗೆಂದು ಆಸ್ಟ್ರೇಲಿಯಾದ ಮಕ್ವೈರಿ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಪ್ರೊಫೆಸರ್‌ ರಾನ್ ರಾಪಿ ಅಭಿಪ್ರಾಯ ಪಡುತ್ತಾರೆ. ಇದರ
ಗುಣಗಳಿಂದೆರೆ – ಭಯ ಉಂಟು ಮಾಡುವ ವಸ್ತು ಅಥವಾ ಸಂದರ್ಭಗಳನ್ನು ತಪ್ಪಿಸಿಕೊಳ್ಳುವುದು, ಯಾವಾಗಲೂ ಚಿಂತೆಗೆ ಒಳಗಾಗುವುದು
ಹಾಗೂ ಋಣಾತ್ಮಕ ಯೋಚನೆಗಳು (ಘೆಛಿಜZಠಿಜಿqಛಿ Seಜ್ಞಿhಜ್ಞಿಜ) ಹುಟ್ಟಿಕೊಳ್ಳುವುದು.

ತೀರಾ ಹೆದರಿಕೆ ಉಂಟಾದಾಗ ಹೃದಯದ ಬಡಿತ ಜಾಸ್ತಿ ಆಗುವುದು, ಕಣ್ಣಿನ ಪಾಪೆ ಅಗಲವಾಗುವುದು, ಉಸಿರಾಟದ ಕ್ರಿಯೆ ವಿಪರೀತವಾಗಿ ಹೆಚ್ಚಳವಾಗುವುದು – ಈ ರೀತಿಯ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿಯ ಸಾಮಾನ್ಯ ಮಟ್ಟದ ಎಚ್ಚರಿಕೆ, ಹೆದರಿಕೆಯು ಕೆಲವರಲ್ಲಿ ಮಾತ್ರ
ಫೋಬಿಯಾ ಹಂತಕ್ಕೆ ಏಕೆ ತಲುಪುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ವಿಜ್ಞಾನಿಗಳ ಅಭಿಮತ. ಈ ಫೋಬಿಯಾಗಳು ವ್ಯಕ್ತಿಯ
ಬಾಲ್ಯದಲ್ಲಿ ಕೆಲವು ಮುಖ್ಯ ಬೆಳವಣಿಗೆಯ ಹಂತಗಳಲ್ಲಿ ಕಲಿತವುಗಳು ಎಂಬುದು ಒಂದು ಸಾಮಾನ್ಯವಾದ ಥಿಯರಿ. ಕೆಲವೊಮ್ಮೆ ಬಾಲ್ಯದಲ್ಲಿ
ಆದ ಕೆಟ್ಟ ಅನುಭವಗಳಿಂದ ಇವು ಪ್ರೇರಿತವಾಗಿರಬಹುದು.

ಆದರೆ ಹೆಚ್ಚಿನವರಲ್ಲಿ ಈ ತರಹದ ಅನುಭವವಿರಲಿಲ್ಲ ಎಂಬುದೂ ವಸ್ತು ಸ್ಥಿತಿ. ಒಬ್ಬ ವ್ಯಕ್ತಿ ಋಣಾತ್ಮಕ ಅನುಭವವನ್ನು ತಾನೇ ಅನುಭವಿಸಿರಬೇಕು ಎಂದೇನಿಲ್ಲ. ಬೇರೆಯವರಿಗೆ ಆದ ಕೆಟ್ಟ ಅನುಭವಗಳು ಅಥವಾ ಆಗಾಗ ಟಿ ವಿ ಅಥವಾ ಮಾಧ್ಯಮದಲ್ಲಿ ಕಾಣ ಸಿಗುವ ದೃಶ್ಯಗಳು, ಉದಾಹರಣೆಗೆ ತಂದೆ ಅಥವಾ ತಾಯಿ ಮಗುವಿಗೆ ಸಮುದ್ರದ ಬಗ್ಗೆ ಪದೇ ಪದೇ ಎಚ್ಚರಿಕೆ ಕೊಟ್ಟಾಗ ಭವಿಷ್ಯದಲ್ಲಿ ಅಂತಹ ವ್ಯಕ್ತಿ ಜಾಸ್ ಅಥವಾ ಟೈಟಾನಿಕ್ ತರಹದ ಸಿನಿಮಾ ನೋಡಿದಾಗ ಆತನ ಮನಸ್ಸಿನಲ್ಲಿ ದೊಡ್ಡ ನೀರಿನ ಹರಿವಿನ ಬಗ್ಗೆ ಹೆದರಿಕೆ ಮೂಡುತ್ತದೆ. ಅದೇ ಮುಂದೆ ಭವಿಷ್ಯದಲ್ಲಿ ಥಲಸ್ಸೋ-ಬಿಯಾ – ದೊಡ್ಡ ನೀರಿನ ಜಲಾಶಯಕ್ಕೆ ಭಯ – ಎಂಬುದಾಗಿ ಮಾರ್ಪಡಬಹುದು.

ಜತೆಗೆ ಕೆಲವರಲ್ಲಿ ಕುಟುಂಬದ ಅಥವಾ ಜೆನೆಟಿಕ್ ಹಿನ್ನೆಲೆ ಸಹಿತಾ ಇರಬಹುದು. ಫೋಬಿಯವನ್ನು ಸರಿಪಡಿಸಿಕೊಳ್ಳಲು ಹೆದರಿಕೆ ಉಂಟು ಮಾಡುವ ವಸ್ತು ಮತ್ತು ಸಂದರ್ಭಕ್ಕೆ ಪದೇ ಪದೇ ಮುಖಾಮುಖಿಯಾಗಬೇಕು. ಅಂದರೆ ಇದಕ್ಕೆ ಎಕ್ಸ್‌ಪೋಶರ್ ಥೆರಪಿ ಎನ್ನುತ್ತಾರೆ. ಹೆದರಿಕೆ ಉಂಟುಮಾಡುವ ವಸ್ತುವಿನ ಮತ್ತು ಸಂದರ್ಭದ ಬಗ್ಗೆ ಆ ವ್ಯಕ್ತಿಗೆ ಮತ್ತೆ ಮತ್ತೆ ಅನುಭವಕ್ಕೆ ಬರುವ ಹಾಗೆ ಮಾಡಿ, ಭಯ ಅದರಿಂದ ಉಂಟಾಗುವುದಿಲ್ಲ ಎಂದು
ವ್ಯವಸ್ಥಿತವಾಗಿ ತೋರಿಸಿಕೊಡಬೇಕು ಎಂದು ತಜ್ಞರ ಸಲಹೆ. ತಮಗೆ ಅಂತಹ ಪರಿಸ್ಥಿತಿ ಅಥವಾ ವಸ್ತು ಏನೂ ಮಾಡುವುದಿಲ್ಲ ಎಂದು ಮನದಟ್ಟಾ ದಾಗ ಫೋಬಿಯ ತನ್ನಿಂದ ತಾನೇ ಇಲ್ಲವಾಗುತ್ತದೆ