Saturday, 7th September 2024

ಪ್ಲೇಗ್ ಕರಾಳ ಕಥೆಯ ಮುಂದುವರಿದ ಭಾಗ

ವೈದ್ಯ ವೈವಿಧ್ಯ

ಪ್ಲೇಗ್ ಸಾಂಕ್ರಾಮಿಕವು ೧೮೫೫ರಲ್ಲಿ ಚೀನಾದ ಯುನಾನ್ ಪ್ರಾಂತದಲ್ಲಿ ಆರಂಭವಾಗಿ ಜಗತ್ತಿನೆಲ್ಲೆಡೆ ಹರಡಿತು. ಭಾರತ ಮತ್ತು ಚೀನಾಗಳಲ್ಲಿ ಇದು ೧೨ ಮಿಲಿಯನ್ ಜನರನ್ನು ಕೊಂದಿತು. ಈ ಕಾಯಿಲೆಯ ವಿನ್ಯಾಸವನ್ನು ಗಮನಿಸಿದಾಗ ೨ ಭಿನ್ನ ರೀತಿಯಿಂದ ಇದು ಆರಂಭವಾಗಿದ್ದು ಅರಿವಾಗುತ್ತದೆ.

ಎರಡನೇ ಪ್ಲೇಗ್ ಸಾಂಕ್ರಾಮಿಕ ಇಂಗ್ಲೆಂಡಿನ ಟ್ಯೂಡರ್ ಮತ್ತು ಸ್ಟುವರ್ಟ್‌ನಲ್ಲಿ ಪುನಃ ೧೪೯೮, ೧೫೩೫, ೧೫೪೩, ೧೫೬೩, ೧೫೮೯, ೧೬೦೩, ೧೬೨೫ ಮತ್ತು ೧೬೩೬ರಲ್ಲಿ ಕಾಣಿಸಿ ಕೊಂಡು ೧೬೬೫ರ ‘ಗ್ರೇಟ್ ಪ್ಲೇಗ್ ಆಫ್ ಲಂಡನ್’ ಈ ಸಾಂಕ್ರಾಮಿಕದಲ್ಲಿ ಅಂತ್ಯ ಗೊಂಡಿತು ಎನ್ನಬಹುದು.

೧೪೬೬ರಲ್ಲಿ ಪ್ಯಾರಿಸ್‌ನಲ್ಲಿ ಪ್ಲೇಗ್‌ನಿಂದ ೪೦,೦೦೦ ಜನರು ಸತ್ತರು. ೧೬ ಮತ್ತು ೧೭ನೇ ಶತಮಾನಗಳಲ್ಲಿ ಪ್ಯಾರಿಸ್‌ನಲ್ಲಿ ಪ್ರತಿ ೩ ವರ್ಷಕ್ಕೊಮ್ಮೆ ಪ್ಲೇಗ್ ಕಂಡುಬರುತ್ತಿತ್ತು. ಕಪ್ಪುಮರಣದ ಪ್ಲೇಗ್ ಯುರೋಪಿನಲ್ಲಿ ೩ ವರ್ಷ ಸತತವಾಗಿ ಕಾಡಿ ನಂತರ ರಷ್ಯಾದಲ್ಲಿ ಕಂಡುಬಂದಿತು. ಅಲ್ಲಿ ೧೩೫೦ರಿಂದ ೧೪೯೦ರವರೆಗೆ ಪ್ರತಿ ೫ ಅಥವಾ ೬ ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುತ್ತಿತ್ತು.

ಪ್ಲೇಗ್ ಸಾಂಕ್ರಾಮಿಕವು ಲಂಡನ್ ನಗರದಲ್ಲಿ ೧೫೬೩, ೧೫೯೩, ೧೬೦೩, ೧೬೨೫, ೧೬೩೬, ಮತ್ತು ೧೬೬೫ರಲ್ಲಿ ವಿಪರೀತ ಹಾವಳಿ ನಡೆಸಿ ಜನಸಂಖ್ಯೆಯನ್ನು ಶೇ.೧೦ರಿಂದ ೩೦ರ ವರೆಗೆ ಕಡಿಮೆ ಮಾಡಿತು. ಹಾಲಂಡಿನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಈ ಪ್ಲೇಗು ೧೬೨೩-೧೬೨೫ ಹಾಗೂ ಪುನಃ ೧೬೩೫, ೧೬೩೬, ೧೬೫೫ ಮತ್ತು ೧೬೬೪ರಲ್ಲಿ ಹಾವಳಿ ನಡೆಸಿ ಜನಸಂಖ್ಯೆಯನ್ನು ಶೇ.೧೦ರಷ್ಟು ಕಡಿಮೆಮಾಡಿತು. ೧೩೬೧ ಮತ್ತು ೧೫೨೮ರ ನಡುವೆ ವೆನಿಸ್‌ನಲ್ಲಿ ಈ ಮಹಾಮಾರಿ ೨೨ ಬಾರಿ ಕಾಣಿಸಿಕೊಂಡಿತ್ತು.

೧೫೭೬-೧೫೭೭ರಲ್ಲಿ ಪ್ಲೇಗ್ ವೆನಿಸ್‌ನಲ್ಲಿ ಹಾವಳಿ ನಡೆಸಿ ಅಲ್ಲಿ ಸುಮಾರು ೫೦,೦೦೦ ಜನರ ಮರಣಕ್ಕೆ ಕಾರಣವಾಯಿತು. ಅಂದರೆ
ಜನಸಂಖ್ಯೆಯ ೧/೩ರಷ್ಟು ಜನರು ಮಡಿದರು ಎಂದರೆ ಅಲ್ಲಿನ ಗಂಭೀರತೆ ಗಮನಿಸಿ. ಮಧ್ಯಯುಗದಲ್ಲಿ ಕಾಣಿಸಿಕೊಂಡ ಪ್ಲೇಗ್ ಎಂದರೆ ೧೬೨೯-೧೬೩೧ರ ಇಟಲಿಯ ಪ್ಲೇಗ್ ಮತ್ತು ೧೬೭೯ರ ವಿಯೆನಾದ ಮಹಾಪ್ಲೇಗ್. ಆಗಿನ ಯುದ್ಧಕಾಲದ ಸೈನಿಕರ
ಪ್ರಯಾಣದಿಂದಾಗಿ ಇದು ವೇಗವಾಗಿ ಹರಡಿತು. ಈ ಸರಣಿಯ ಕೊನೆಯ ಪ್ಲೇಗ್ ನಾರ್ವೆ ರಾಜಧಾನಿ ಓಸ್ಲೋದಲ್ಲಿ ೧೬೫೪ರಲ್ಲಿ ಕಾಣಿಸಿಕೊಂಡಿತು.

೧೭ನೇ ಶತಮಾನದ ಆದಿಭಾಗದಲ್ಲಿ ಇಟಲಿಯ ಮಿಲಾನ್ ನಗರದ ಮಹಾಪ್ಲೇಗ್ ೧೭ ಮಿಲಿಯನ್ ಜನರನ್ನು ಆಹುತಿ ತೆಗೆದು ಕೊಂಡಿತು. ಇದು ಅಲ್ಲಿನ ಜನಸಂಖ್ಯೆಯ ಶೇ.೧೪ರಷ್ಟು ಎನ್ನಲಾಗಿದೆ. ೧೬೫೬ ರಲ್ಲಿ ನೇಪಲ್ಸ್‌ನಲ್ಲಿ ೩ ಲಕ್ಷ ಜನರ ಮರಣಕ್ಕೆ ಈ ಮಹಾಮಾರಿ ಕಾರಣವಾಯಿತು. ಸ್ಪೇನ್‌ನಲ್ಲಿ ೧೭ನೇ ಶತಮಾನದಲ್ಲಿ ಕಂಡುಬಂದ ವಿಪರೀತ ಪ್ಲೇಗ್‌ನ ಪರಿಣಾಮ ೧.೨೫ ಮಿಲಿಯನ್‌ಗಿಂತಲೂ ಹೆಚ್ಚು ಜನರು ಮಡಿದರು. ೧೬೪೯ರಲ್ಲಿ ಕಂಡುಬಂದ ಪ್ಲೇಗ್ ಸೆವಿಲ್ಲಿ ನಗರದ ಜನಸಂಖ್ಯೆಯ ಅರ್ಧದಷ್ಟು ಜನರ ಮರಣಕ್ಕೆ ಕಾರಣವಾಯಿತು.

೧೭೦೯-೧೭೧೩ರಲ್ಲಿ ಉತ್ತರ ಯುರೋಪಿನ ಮಹಾಕದನದಲ್ಲಿ (೧೭೦೦- ೧೭೨೧: ಸ್ವೀಡನ್ ಮತ್ತು ಮಿತ್ರದೇಶಗಳು ಮತ್ತು ರಷ್ಯಾ ನಡುವಿನ ಯುದ್ಧ) ಸ್ವೀಡನ್ನಿನ ೧ ಲಕ್ಷ ಹಾಗೂ ಪ್ರಶ್ಯಾದ ೩ ಲಕ್ಷ ಜನರ ಮರಣಕ್ಕೆ ಕಾರಣವಾಯಿತು. ಹೆಲ್ಸಿಂಕಿಯ ೨/೩ರಷ್ಟು ಜನಸಂಖ್ಯೆಯನ್ನು ಇಲ್ಲವಾಗಿಸಿತು. ಹಾಗೆಯೇ ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್‌ನ ೧/೩ರಷ್ಟು ಜನಸಂಖ್ಯೆ ನಾಶವಾಯಿತು. ಇಸ್ಲಾಮಿಕ್ ಜಗತ್ತನ್ನು ಈ ಕಪ್ಪುಮರಣದ ಪ್ಲೇಗ್ ಬಹಳಷ್ಟು ಕಾಡಿತು. ೧೫೦೦ ಮತ್ತು ೧೮೫೦ರ ಮಧ್ಯೆ ಇಸ್ಲಾಮಿಕ್ ಜಗತ್ತಿನ ಒಂದಲ್ಲ ಒಂದು ಭಾಗದಲ್ಲಿ ಈ ಪ್ಲೇಗ್ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿತು.

ಹಾಗೆಯೇ ಉತ್ತರ ಆಫ್ರಿಕಾದ ಹಲವೆಡೆ ಈ ಕಾಯಿಲೆ ಕಾಣಿಸಿಕೊಂಡಿತು. ಆಲ್ಜಿಯರ್ಸ್‌ನಲ್ಲಿ ೧೬೨೦-೧೬೨೧ರಲ್ಲಿ ೩೦ರಿಂದ ೫೦ ಸಾವಿರ ಜನರು ಮಡಿದರು. ಹಾಗೆಯೇ ಅಲ್ಲಿ ೧೬೫೪, ೧೬೫೭,೧೬೬೫, ೧೬೯೧ ಮತ್ತು ೧೭೪೦-೧೭೪೨ರಲ್ಲಿ ಕಾಣಿಸಿಕೊಂಡು ಹಲವು ಸಾವಿರ ಜನರ ಮರಣಕ್ಕೆ ಕಾರಣೀಭೂತ ವಾಯಿತು. ೧೭೦೧ ಮತ್ತು ೧೭೫೦ರ ನಡುವೆ ೩೭ ದೊಡ್ಡ ಮತ್ತು ಸಣ್ಣ ಪ್ರಮಾಣದ ಪ್ಲೇಗ್ ಸಾಂಕ್ರಾಮಿಕ ಕಾನ್‌ಸ್ಟಾಂಟಿನೋಪಲ್ ನಗರದಲ್ಲಿ ಕಂಡು ಬಂದಿತು. ಹಾಗೆಯೇ ೧೭೫೧-೧೮೦೦ರ ನಡುವೆ ೩೧ ಬಾರಿ ಕಾಣಿಸಿತು. ಇರಾನಿನ ಬಾಗ್ದಾದ್‌ನಲ್ಲಿ ತೀವ್ರ ಪ್ರಮಾಣದಲ್ಲಿ ಈ ಅವಧಿಯಲ್ಲಿ ಕಂಡುಬಂದ ಪ್ಲೇಗ್ ಅಲ್ಲಿನ ಸುಮಾರು ೨/೩ರಷ್ಟು ಜನಸಂಖ್ಯೆಯನ್ನು ನಾಶಮಾಡಿತು.

೩ನೇ ಪ್ಲೇಗ್ ಸಾಂಕಾಮಿಕ ಇದು ೧೮೫೫ರಲ್ಲಿ ಚೀನಾದ ಯುನಾನ್ ಪ್ರಾಂತದಲ್ಲಿ ಆರಂಭವಾಗಿ ಜಗತ್ತಿನ ಎಲ್ಲಾ ಖಂಡಗಳಿಗೆ ಹರಡಿತು. ಭಾರತ ಮತ್ತು ಚೀನಾಗಳಲ್ಲಿ ಮಾತ್ರವೇ ಈ ಸಾಂಕ್ರಾಮಿಕ ೧೨ ಮಿಲಿಯನ್ ಜನರನ್ನು ಕೊಂದಿತು. ಈ ಕಾಯಿಲೆಯ ವಿನ್ಯಾಸವನ್ನು ಗಮನಿಸಿದಾಗ ಇದು ೨ ಭಿನ್ನ ರೀತಿಯಿಂದ ಆರಂಭವಾಯಿತು ಎಂದು ಅಂದಾಜಿಸಲಾಗಿದೆ. ಮೊದಲನೆಯದು ಬ್ಯುಬೋ ನಿಕ್ ರೀತಿಯದು; ಇದು ಆಗಿನ ಸಮುದ್ರ ಪ್ರಯಾಣದ ದೆಸೆಯಿಂದ ಸೋಂಕಿತ ಜನರ ಸಾಗಾಟ, ಹಾಗೆಯೇ ಹಡಗು ಗಳಲ್ಲಿ ಇಲಿ-ಚಿಗಟಗಳ ಜತೆಗೂಡುವಿಕೆ ಈ ಕಾರಣಗಳಿಂದ ಪ್ರಪಂಚದಾದ್ಯಂತ ಪಸರಿತು.

೨ನೇ ರೀತಿ ನ್ಯೂಮೋನಿಕ್ ರೀತಿಯದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿ ಭೀಕರವಾಗಿ ಕಂಡುಬಂದಿತು. ಆದರೆ ಇದು ಮುಖ್ಯ ವಾಗಿ ಮಂಚೂರಿಯಾ ಮತ್ತು ಮಂಗೋಲಿಯಾ ದೇಶಗಳಿಗೆ ಸೀಮಿತವಾಗಿತ್ತು. ಈ ೩ನೇ ಸಾಂಕ್ರಾಮಿಕದ ಸಂದರ್ಭದಲ್ಲೇ ಪ್ಲೇಗ್ ಅನ್ನು ಹರಡುವ ಮಧ್ಯವರ್ತಿ ಪ್ರಾಣಿ ಹಾಗೂ ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿಖರವಾಗಿ ಗುರುತಿಸಲಾ ಯಿತು. ಪರಿಣಾಮ, ಕಾಯಿಲೆಗೆ ಸೂಕ್ತ ಚಿಕಿತ್ಸೆ ಕಂಡುಹಿಡಿಯಲು ಯತ್ನಗಳು ಆರಂಭವಾದವು.

ರಷ್ಯಾದಲ್ಲಿ ೧೮೭೭-೧೮೮೯ರ ನಡುವೆ ಗ್ರಾಮೀಣ ಭಾಗಗಳಲ್ಲಿ ಪ್ಲೇಗ್ ಆರಂಭವಾಯಿತು. ಮುಖ್ಯವಾಗಿ ಉರಾಲ್ ಪರ್ವತ ಪ್ರದೇಶ ಮತ್ತು ಕ್ಯಾಸ್ಪಿಯನ್ ಸಮುದ್ರದ ಭಾಗಗಳಲ್ಲಿ ಇದು ಕಂಡು ಬಂದಿತು. ಶುಚಿಯಾದ ಆಹಾರ ಮತ್ತು ಆರೋಗ್ಯ ಕ್ರಮ ಪಾಲಿಸುವಿಕೆ, ರೋಗಿಗಳನ್ನು ಇತರರಿಂದ ದೂರವಿಡುವ ಕ್ರಮಗಳಿಂದ ಕಾಯಿಲೆ ಬಹಳ ಕಡಿಮೆಯಾಯಿತು. ಹೀಗಾಗಿ ಈ ಭಾಗದಲ್ಲಿ ಈ ಪ್ಲೇಗ್ ಕೇವಲ ೪೨೦ ಜನರ ಮರಣಕ್ಕೆ ಕಾರಣವಾಯಿತು. ರಷ್ಯಾದಲ್ಲಿ ಕಂಡುಬಂದ ದೊಡ್ಡ ಪ್ರಮಾಣದ ಸಾಂಕ್ರಾಮಿಕ ಎಂದರೆ ೧೯೧೦ರಲ್ಲಿಸೈಬೀರಿಯಾದಲ್ಲಿ ಕಂಡು ಬಂದ ಪ್ಲೇಗ್.

ಇಲ್ಲಿ ಬಹಳವಾಗಿ ವಾಸಿಸುತ್ತಿದ್ದ ಇಣಚಿಯಂಥ ಪ್ರಾಣಿ ಮಾರ್ಮಾಟ್ ನ ಚರ್ಮಕ್ಕೆ ಬಹಳ ಬೇಡಿಕೆ ಬಂದಿತು. ಈ ಪ್ರಾಣಿ ಪ್ಲೇಗಿನ ಮಧ್ಯಂತರ ವಾಹಕವೂ ಆಗಿತ್ತು. ಹಾಗಾಗಿ ಆಗ ಕಾಯಿಲೆ ಜಾಸ್ತಿಯಾಯಿತು. ಆಗ ಚೀನಾದ ಬಹಳಷ್ಟು ಸಂಖ್ಯೆಯ ಬೇಟೆಗಾರರು ಮಂಚೂರಿಯಾಕ್ಕೆ ಬಂದು ಕಾಯಿಲೆ ಬಂದ ಪ್ರಾಣಿಗಳನ್ನು ಹಿಡಿದು ಅದರ ಕೊಬ್ಬನ್ನು ತಿನ್ನಲಾರಂಭಿಸಿದರು. ಏಕೆಂದರೆ ಅದು ಬಹಳ ಸ್ವಾದಿಷ್ಟ ಖಾದ್ಯ ಎಂದು ಜನಪ್ರಿಯವಾಗಿತ್ತು. ಹೀಗೆ ಬೇಟೆಗಾರರಿಂದ ಈ ಪ್ಲೇಗ್ ಚೀನಾದ ಪೂರ್ವ ಭಾಗದ ರೈಲ್ವೆ ನಿಲ್ದಾಣಗಳಿಗೆ ಹರಡಿತು. ಅಲ್ಲಿಂದ ರೈಲ್ವೆ ಹಳಿಗಳ ಗುಂಟ ೨೭೦೦ ಕಿ.ಮೀ. ಪ್ರಯಾಣಿಸಿತು.

ಹಾಗೆಯೇ ಈ ಪ್ಲೇಗ್ ೭ ತಿಂಗಳು ಕಾಡಿ ಸುಮಾರು ೬೦,೦೦೦ ಜನರನ್ನು ಕೊಂದಿತು. ಈ ಬ್ಯೂಬೋನಿಕ್ ಪ್ಲೇಗ್ ಮುಂದಿನ ೫೦ ವರ್ಷ ಗಳ ಕಾಲ ಜಗತ್ತಿನ ಹೆಚ್ಚಿನ ಎಲ್ಲಾ ಬಂದರುಗಳಿಗೆ ಪ್ರಯಾಣಿಸಿತು. ಅದರಲ್ಲೂ ಮುಖ್ಯವಾಗಿ ಏಷ್ಯಾದ ಈಶಾನ್ಯ ಭಾಗ ದಲ್ಲಿ ಕಂಡುಬಂದಿತು. ೧೮೯೪ರಲ್ಲಿ ಹಾಂಗ್‌ಕಾಂಗ್ ಪ್ಲೇಗ್‌ನಲ್ಲಿ ಶೇ. ೯೦ರಷ್ಟು ಜನರು ಮರಣ ಹೊಂದಿದರು. ೧೮೯೭ರಲ್ಲಿ ಯುರೋಪ್ ಖಂಡದ ವೈದ್ಯಕೀಯ ಅಧಿಕಾರಿಗಳು ವೆನಿಸ್‌ನಲ್ಲಿ ಒಂದು ಸಮ್ಮೇಳನ ಆಯೋಜಿಸಿದರು. ಇದರ ಮುಖ್ಯ ಉದ್ದೇಶ ಪ್ಲೇಗ್ ಅನ್ನು ಯುರೋಪ್‌ನಿಂದ ಹೊರಹಾಕಲು ಉಪಾಯ ಕಂಡುಹಿಡಿಯುವುದು. ೧೮೯೬ರಲ್ಲಿ ಈ ಮಹಾ ಸಾಂಕ್ರಾಮಿಕ ಮುಂಬೈಯಲ್ಲಿ ಕಂಡುಬಂದಿತು.

ನಂತರ ೧೮೯೯ ಡಿಸೆಂಬರ್‌ನಲ್ಲಿ ಹವಾಯಿಯ ಗಡಿಗಳಿಗೆ ಹಬ್ಬಿತು. ಅಲ್ಲಿನ ಆರೋಗ್ಯ ಅಧಿಕಾರಿಗಳು ಹೊನಲುಲುವಿನ ಚೈನಾ ಟೌನ್‌ನ ಕೆಲವು ಮುಖ್ಯ ಕಟ್ಟಡಗಳನ್ನು ಬೆಂಕಿಹಚ್ಚಿ ಸುಡಲಾರಂಭಿಸಿದರು. ಆದರೆ ಈ ಬೆಂಕಿ ಎಲ್ಲಾ ಕಡೆ ಹರಡಿ ಚೈನಾ ಟೌನ್‌ನ ಹೆಚ್ಚಿನ ಭಾಗವನ್ನು ೧೯೦೦ರ ಜನವರಿಯಲ್ಲಿ ಸುಟ್ಟುಹಾಕಿತು. ಅದರ ನಂತರ ಪ್ಲೇಗ್ ಕಾಯಿಲೆ ಅಮೆರಿಕವನ್ನು ತಲುಪಿ ೧೯೦೦-೧೯೦೪ರ ಸ್ಯಾನ್ ಫ್ರಾನ್ಸಿಸ್ಕೋ ಪ್ಲೇಗ್‌ನ ಆರಂಭಕ್ಕೆ ಕಾರಣ ವಾಯಿತು. ಈ ಪ್ಲೇಗ್ ಹವಾಯಿಯ ಹಲವು ದ್ವೀಪ ಗಳಲ್ಲಿ ಆಗಾಗ ಕಂಡುಬರುತ್ತಿತ್ತು. ಅದು ೧೯೬೦ರಲ್ಲಿ ಕಟ್ಟಕಡೆಯದಾಗಿ ಕಂಡುಬಂದಿತು.

ಪ್ಯಾರಿಸ್‌ನ ಪಾಶ್ಚರ್ ಇನ್‌ಸ್ಟಿಟ್ಯೂಟ್ ಮತ್ತು ಜರ್ಮನಿಯ ಗುಟನ್‌ಬರ್ಗ್ ವಿ.ವಿ.ಯ ಜೀವಶಾಸ್ತ್ರಜ್ಞರು ಈ ಸಾಂಕ್ರಾಮಿಕಗಳ ಪ್ಲೇಗ್ ಪಿಟ್‌ಗಳ ಪ್ರೋಟೀನ್ ಮತ್ತು ಡಿಎನ್‌ಎಗಳ ಬಗ್ಗೆ ಸಂಶೋಧನೆ ನಡೆಸಿ ಅದರ ವರದಿಯನ್ನು ೨೦೧೦ರಲ್ಲಿ ಪ್ರಕಟಿಸಿದರು. ಈ ಮೂರೂ ಸಾಂಕ್ರಾಮಿಕಗಳು ಯರ್ಸೀನಿಯಾ ಪೆಸ್ಟಿಸ್‌ನ ಅಲ್ಲಿಯವರೆಗೆ ಗೊತ್ತಿಲ್ಲದ ೨ ಬ್ಯಾಕ್ಟೀರಿಯಾಗಳಿಂದ ಉಂಟಾದವು ಹಾಗೂ ಅವು ಚೀನಾದಿಂದಲೇ ಆರಂಭವಾದವು ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಪೂರಕವಾಗಿ ಐಲೆಂಡಿನ ಕಾರ್ಕ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಜೆನೆಟಿಕ್ಸ್ ಶಾಸ್ತ್ರದ ತಂಡವು ಈ ಮೂರೂ ಸಾಂಕ್ರಾಮಿಕದ ಬ್ಯಾಕ್ಟೀರಿಯಾಗಳನ್ನು ಪುನರ್‌ನಿರ್ಮಾಣ ಮಾಡಿ ವಿವರವಾಗಿ ಅಧ್ಯಯನ ನಡೆಸಿತು.

ಈ ತಂಡದ ನಾಯಕರು ಮಾರ್ಕ್ ಅಚಟ್ ಮನ್ ಎಂಬ ವಿಜ್ಞಾನಿ. ಈ ಎಲ್ಲಾ ಸಾಂಕ್ರಾಮಿಕಗಳು ಚೀನಾ ದಿಂದಲೇ ಆರಂಭ ವಾದವು ಎಂಬುದು ಅವರ ಅಂತಿಮ ತೀರ್ಮಾನವಾಗಿತ್ತು. ೨೦ನೇ ಶತಮಾನದ ಉತ್ತರಾರ್ಧದಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸಂಖ್ಯೆ ಜಗತ್ತಿನಾದ್ಯಂತ ಗಮನಾರ್ಹವಾಗಿ ಕಡಿಮೆಯಾಯಿತು. ಆದರೂ ಕೆಲವು ಅಭಿವೃದ್ಧಿಶೀಲ ದೇಶಗಳ ಕೆಲವೆಡೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ೧೯೫೪ರಿಂದ ೧೯೯೭ರ ಮಧ್ಯೆ ೩೮ ದೇಶಗಳಿಂದ ಪ್ಲೇಗ್ ರೋಗಿಗಳ ಬಗ್ಗೆ ವರದಿಯಾಗಿವೆ. ಹಾಗಾಗಿ ಈ ಕಾಯಿಲೆ ಆಗಾಗ ಕಾಣಿಸಿಕೊಳ್ಳುತ್ತಿದೆ ಎನ್ನಬಹುದು.

೧೯೮೭ರಿಂದ ೨೦೦೧ರ ವರೆಗೆ ೩೬,೮೭೬ ರೋಗಿಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಅದರಲ್ಲಿ ೨೮೪೭ ರೋಗಿಗಳು
ಮರಣ ಹೊಂದಿದರು. ೨೧ನೆಯ ಶತಮಾನದಲ್ಲಿ ಪ್ರತಿವರ್ಷ ೨೦೦ಕ್ಕಿಂತ ಕಡಿಮೆ ರೋಗಿಗಳು ಸರಿಯಾದ ಚಿಕಿತ್ಸೆ ದೊರಕದೆ
ಜಗತ್ತಿನಾದ್ಯಂತ ಮರಣ ಹೊಂದುತ್ತಿದ್ದಾರೆ. ಜಗತ್ತಿನ ೨೬ ದೇಶಗಳಲ್ಲಿ ಈ ಕಾಯಿಲೆಯನ್ನು ಎಂಡಮಿಕ್ ಎಂದು ತಿಳಿಯಲಾಗಿದೆ. ಅದರಲ್ಲೂ ಹೆಚ್ಚಿನ ರೋಗಿ ಗಳು ಆಫ್ರಿಕಾ ಖಂಡದ ದೂರದ ಸಣ್ಣ ಹಳ್ಳಿಗಳಲ್ಲಿ ಇರುವವರು. ಎಂಡಮಿಕ್ ರೋಗಿಗಳು ಜಾಸ್ತಿ
ಇರುವ ದೇಶಗಳೆಂದರೆ ಮಡಗಾಸ್ಕರ್, ಡೆಮೊ ಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಪೆರು. ಈ ಕಾಯಿಲೆ ಮಡಗಾಸ್ಕರ್‌ನಲ್ಲಿ ೨೦೧೪ ಮತ್ತು ೨೦೧೭ ರಲ್ಲಿ, ಭಾರತದಲ್ಲಿ ೧೯೯೪ರಲ್ಲಿ, ಕಾಂಗೋನಲ್ಲಿ ೨೦೦೬ ರಲ್ಲಿ ಸ್ವಲ್ಪ ದೊಡ್ಡ ಮಟ್ಟದಲ್ಲಿ ಕಾಣಿಸಿ ಕೊಂಡು ಡಜನ್‌ಗೂ ಹೆಚ್ಚು ಜನರ ಮರಣಕ್ಕೆ ಕಾರಣ ವಾಯಿತು.

೧೯೯೫ರಲ್ಲಿ ಅಮೆರಿಕದ ಪಶ್ಚಿಮದ ೬ ರಾಜ್ಯಗಳಲ್ಲಿ ಪ್ಲೇಗ್ ಇರುವುದು ದೃಢಗೊಂಡಿತು. ಪ್ರಸ್ತುತ ಆ ಭಾಗಗಳಲ್ಲಿ ಪ್ರತಿವರ್ಷ ೫ರಿಂದ ೧೫ ಜನರಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಈ ಕಾಯಿಲೆಯ ಮಧ್ಯಂತರ ಪ್ರಾಣಿ ಇಲಿ. ಈ ಭಾಗದ ಹೆಚ್ಚಿನ ಕಾಯಿಲೆಗಳು ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯ ದಲ್ಲಿ ಬಂದವು. ಇಲ್ಲಿ ಪೈನ್ ಮತ್ತು ಹಲಸಿನ ಮರಗಳಲ್ಲಿ ಹುಲ್ಲುಗಾವಲು ನಾಯಿ ಮತ್ತು ರಾಕ್ ಅಳಿಲು ಇಂಥ ಪ್ರಾಣಿಗಳು ಹೆಚ್ಚಿವೆ. ಅವುಗಳಲ್ಲಿ ಚಿಗಟಗಳು ಹೆಚ್ಚು ಪ್ರಮಾಣದಲ್ಲಿ ವಾಸಿಸಿ ಪ್ಲೇಗ್ ಹರಡಲು ಕಾರಣ ವಾಗುತ್ತವೆ. ನಂತರ ೨೦೧೫ರಲ್ಲಿ ಪೂರ್ವ ಜಾಂಬಿಯಾದಲ್ಲಿ ಪ್ಲೇಗ್ ಮತ್ತೊಮ್ಮೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಕಾಣಿಸಿ ಕೊಂಡಿತು.

ಸಾಂಕಾಮಿಕದ ಪರಿಣಾಮಗಳು ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದ್ದರಿಂದ ಅವರಿಗೆ ಬೇಡಿಕೆ ಹೆಚ್ಚಿ ಧನಿಕರಾದರು.
ರೈತರಿಗೆ ಸಾಗುವಳಿ ಮಾಡಲು ಜಮೀನು ಸುಲಭ ವಾಗಿ ದೊರಕಿದ್ದರಿಂದ ಅವರೂ ಹೆಚ್ಚು ಸಂತುಷ್ಟರಾದರು.

Leave a Reply

Your email address will not be published. Required fields are marked *

error: Content is protected !!