Sunday, 3rd November 2024

ಮನೋಲ್ಲಾಸಕ್ಕಾಗಿ ಆಡು ಆಟ ಆಡು

ಶ್ವೇತಪತ್ರ

ಡಾ.ಶ್ವೇತಾ.ಬಿ.ಸಿ

shwethabc@gmail.com

ಸೋಲಿಗೆ ನಾವು ಹೆದರುತ್ತೇವೆ, ಕಂಗೆಡುತ್ತೇವೆ. ಹಾಗಾಗಿ ಇನ್ನೂ ಹೆಚ್ಚೆಚ್ಚು ಗಂಭೀರರಾಗತೊಡಗುತ್ತೇವೆ. ಹೀಗೆ ಬದುಕಿನ ಕಗ್ಗಂಟು ಗಳಲ್ಲಿ ಕಳೆದು ಹೋಗುವ ನಾವುಗಳು ಬದುಕಿಗೆ ಅವಿರತವಾದ ಸಂತೋಷಗಳನ್ನು ತುಂಬಿದ ಆಟಗಳನ್ನು ಅಪ್ಪುವುದನ್ನು ಮರೆತು ಬಿಡುತ್ತೇವೆ. ಏನದು ಒಳ್ಳೆ ಚಿಕ್ಕ ಮಕ್ಕಳ ತರ ಆಡೊದು ಸಿಲ್ಲಿಯಾಗಿ ಎನ್ನುವ ಕಠೋರ ನಿಯಮಗಳನ್ನು ನಾವು ಒಪ್ಪಿಬಿಟ್ಟಿರುತ್ತೇವೆ.

ಆಟ ಅತ್ಯುನ್ನತವಾದ ಸಂಶೋಧನೆ ಎಂದು ಐನ್ ಸ್ಟೀನ್ ಬಣ್ಣಿಸುತ್ತಾನೆ. ಉಲ್ಲಾಸ, ಉತ್ಸಾಹ, ಖುಷಿ, ಅನ್ವೇಷಣೆ, ಸಕ್ರಿಯತೆ, ಸೃಜನ ಶೀಲತೆ ಹುಡುಕಾಟ ಎಲ್ಲವನ್ನೂ ಒಳಗೊಂಡಿರುವ ಕ್ರಿಯೆ ಪ್ರಕ್ರಿಯೆಯೇ ಆಟ. ಪ್ರತಿಕ್ಷಣವೂ ನಮ್ಮಲ್ಲಿ ಸ್ಪೂರ್ತಿ ತುಂಬುತ್ತ ಕಲ್ಪನೆಯ ಜಗತ್ತಿ ನೊಳಗೆ ಹೊಸ ವಿನ್ಯಾಸಗಳನ್ನು ರಚಿಸುತ್ತಾ ಅಂತ್ಯವಿಲ್ಲದ ಅನೇಕ ಸಾಧ್ಯತೆಗಳು ಸಹಜವಾಗಿ ಅಭಿವ್ಯಕ್ತಗೊಳ್ಳುವುದೆ ಆಟದ ಮೂಲಕ. ಮಿದುಳಿನ ಇಷ್ಟದ ಕಲಿಕೆಯ ವಿಧಾನ ಯಾವುದೆಂದರೆ ಅದು ಆಟ.

ಇವತ್ತಿಗೂ ನಮ್ಮೆಲ್ಲರ ನೆನಪಿನ ಮೆರವಣಿಗೆಯಲ್ಲಿ ಎದ್ದು ಕಾಣುವುದು ನಮ್ಮ ಬಾಲ್ಯ ಮತ್ತು ಬಾಲ್ಯದ ಜತೆಗಿನ ಸಂತೋಷಭರಿತ ಆಟಗಳು. ಆಟಗಳು ನಮ್ಮ ಮನಸ್ಸಿಗೆ ಉಲ್ಲಾಸ ತುಂಬಬಲ್ಲ ಜೀವನದ ಸಂಗತಿಗಳು. ನಾವೆಲ್ಲ ಸದಾ ಯಂಗ್ ಆಗಿ ಇರಬಯಸುವವರು ಹಾಗಿದ್ದರೆ ಜಸ್ಟ್ ಆಡಿ ಆಟ ಆಡಿ ಮಕ್ಕಳ್ಳನ್ನು ಆಡಲು ಬಿಡಿ. ಗ್ರೀಕ್ ತತ್ವಜ್ಞಾನಿ ಪ್ಲೇಟೋನ ಕಲಿಸುವ ವಿಧಾನವೇ ಆಟದ ಮೂಲಕವಾಗಿತ್ತು. ಆತನ ಪ್ರಕಾರ ಮಕ್ಕಳು ತಮ್ಮ ಅತ್ಯುತ್ತಮವಾದದ್ದನ್ನು ಉತ್ಸಾಹಭರಿತರಾಗಿ ಕಲಿಯವುದೇ ಆಟದ ಮೂಲಕ.

ಆಡಿ-ಕಲಿ, ಆಡಿ-ನಲಿ ಶಾಲೆಗಳ ಭಾಗವಾಗಬೇಕು. ಜೀವನ ಕೌಶಲಗಳನ್ನು ಪರಿಚಯಿ ಸುವ ಬದುಕಿನ ಕುರಿತಾದ ಬೆರಗನ್ನು ಹುಟ್ಟಿಸುವ ಆಟಗಳು ಮಕ್ಕಳ ಸ್ವಭಾವವನ್ನು ಮುಟ್ಟಿ ಅವರನ್ನು ವಿಸ್ಮಯಕ್ಕೆ, ಚಿಂತನೆಗೆ, ಉಸಕ್ಕೆ ಒಳಗು ಮಾಡಬಲ್ಲವು ಆ ಮೂಲಕ ಆಟಗಳು ಪ್ಲೇಟೋನ ಮಾತುಗಳಂತೆ ಒಳ್ಳೆಯ ಮತ್ತು ಸತ್ಯವೆಂಬ ಆತ್ಮದ ಕಣ್ಣುಗಳನ್ನು ತೆರೆಸುತ್ತವೆ. ಬೇಸ್‌ಬಾಲ್ ಅಂದರೆ ನನಗಿಷ್ಟ. ಹೀಗೆ ಒಮ್ಮೆ ಸ್ಟೇಡಿಯಂನಲ್ಲಿ ಆಟವನ್ನು ನೋಡುತ್ತಿದ್ದಾಗ ಆಟಗಾರನ ಬ್ಯಾಟಿನಿಂದ ಚಿಮ್ಮಿದ ಬಾಲು ಗಾಳಿಯಲ್ಲಿ ತೇಲುತ್ತಿದುದ್ದನ್ನು ನೋಡುತ್ತಿದ್ದ ಹಾಗೆ ನಾನು ಕಾದಂಬರಿ ಬರೆಯಬ ಅನ್ನಿಸಿತು.

Hear the wind sing ಕಾದಂಬರಿಯನ್ನು ಶುರುಮಾಡಿದ್ದು ಹೀಗೆ ಎಂದು ತಾನು ಲೇಖಕನಾದ ಕ್ಷಣದ ಬಗ್ಗೆ ಹೇಳುತ್ತಾನೆ ಸ್ಪ್ಯಾನಿಶ್ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್. ಮಾಂತ್ರಿಕತೆಯೆ ಹೊಸದನ್ನು ಸೃಷ್ಟಿಸುವ ತತ್ವವಿದೆ ಆಟಗಳಿಗೆ. Infact ಬದುಕಲ್ಲಿ ಆಟ ಗಳು ಯಾಕೆ ಮತ್ತು ಎಷ್ಟು ಮುಖ್ಯವಾದವು ಎಂಬುದನ್ನು ನಮಗೆ ಕಲಿಸುವ ಗುರುಗಳೇ ನಮ್ಮ ಮಕ್ಕಳು.

ಆಟಗಳೇ ಹಾಗೆ ನಮ್ಮ ಮನಸ್ಸಿನ ಆಳಕ್ಕೆ ಇಳಿದು ನಮ್ಮನ್ನು ಪ್ರೇರೇಪಿಸುತ್ತಾ ಮತ್ತಷ್ಟು ಸೃಜನಶೀಲರನ್ನಾಗಿಸುತ್ತವೆ ಯಾವುದೇ ನಿರ್ದಿಷ್ಟ ವಾದ ಫಲಿತಾಂಶಗಳನ್ನು ಅಪೇಕ್ಷಿಸದೆ. ಭಾನುವಾರದ ಬೆಳಗ್ಗೆ ಸೈಕಲ್ ತುಳಿಯುತ್ತಲೋ ನಡೆಯುತ್ತಲೋ ಒಂದಷ್ಟು ದೂರ ಹೋಗಿ ಬನ್ನಿ ನಿಮ್ಮ ದೇಹದ 5ಕೆ.ಜಿ. ಕರಗಲಿಕ್ಕಲ್ಲ ಹಾಗೆ ಸುಮ್ಮನೆ ನಿಮ್ಮ ಮನಸ್ಸಿನ ಖುಷಿಗೆ. ನಮ್ಮೆಲ್ಲರಲ್ಲಿ ತುಂಬಾ ಜನ ಏನನ್ನೇ ಮಾಡಿದರೂ ಅದರ ಫಲಿತಾಂಶದ ನಿರೀಕ್ಷೆಯಲ್ಲಿ ಮಾಡಿರುತ್ತೇವೆ ಇದರಿಂದ ನನಗೇನು ಸಿಗುತ್ತದೆ ಎಂಬ ಅಪೇಕ್ಷೆಯೊಂದಿಗೆ.

ಆಟಗಳಲ್ಲಿ ಎಂದಿಗೂ ಈ ನಿರೀಕ್ಷೆ ಗಳಿರುವುದಿಲ್ಲ ಬರೀ ಉಲ್ಲಾಸಗಳಷ್ಟೇ ತುಂಬಿರುತ್ತವೆ. ನಮ್ಮ ಬದುಕಿನ priorty ಗಳಲ್ಲಿ ಆಟಗಳಿಗೆ ಕೊನೆಯ ಸ್ಥಾನ. ನಾವು ಬದುಕುತ್ತಿರುವ ಪ್ರಪಂಚದಲ್ಲಿ ಆತಂಕದ ದಾರಿಗಳೇ ಹೆಚ್ಚಿವೆ, ಆಟದ ದಾರಿಗಳು ಬಹುತೇಕ ಮುಚ್ಚಿಹೋಗಿವೆ. ಪ್ರತಿದಿನದ ನಮ್ಮ To-do list ನ ಒಳಗೆ ಆಟಗಳು just waste of time ಎನಿಸಿಬಿಟ್ಟಿವೆ.

ನಾವು ಮಾಡಲೇಬೇಕಾದ ಮಾಡಬಹುದಾದ ಕೆಲಸದ ಪಟ್ಟಿಗಳನ್ನು ಬೆಳೆಸುತ್ತಾ ಸುಸ್ತಾಗಿ ಬಿಟ್ಟಿದ್ದೇವೆ. ನಿಜವಾದ ನಮ್ಮ ಇಷ್ಟದ ಆಸಕ್ತಿಗಳಿಗೆ ನಮಗೆ ಸಮಯ ಮತ್ತು ಶಕ್ತಿಯೇ ಇಲ್ಲವಾಗಿಬಿಟ್ಟಿದೆ. ವಯಸ್ಕರ ಜವಾಬ್ದಾರಿ ಬಿಕ್ಕಟ್ಟುಗಳ ನಡುವೆ ಕಳೆದು ಹೋಗಿರುವ ನಮ್ಮನ್ನು ನಾವು ಹಿಂಪಡೆಯುವ ದಾರಿಯೇ ಖುಷಿಯ ಆಟಗಳು. ನಾವು ಬೆಳೆದಂತೆ ನಮ್ಮ ಈಗೋಗಳು ಬೆಳೆಯುತ್ತವೆ ನಾವು ಹೆಚ್ಚು
ಹೆಚ್ಚು ಪ್ರಜ್ಞಾಪೂರಕವಾಗಿ ಬಿಡುತ್ತೇವೆ. ನಮ್ಮೆಲ್ಲರಿಗೂ ದಿನನಿತ್ಯದ ಒತ್ತಡಗಳನ್ನು ನಿರ್ವಹಿಸುವ ಸಂಪೂರ್ಣವಾದ ಯೋಗಕ್ಷೇಮವನ್ನು ಒದಗಿಸಿಕೊಡುವ ಅನೇಕ ಪ್ರಯೋಜನಗಳನ್ನು ಆಟಗಳು ಹೊಂದಿವೆ.

2020ರ ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದ ನಮ್ಮೆಲ್ಲರನ್ನು ಬೆಸದಿದ್ದು ಚೌಕಾಬಾರ, ಹುಲಿಕಟ್ಟು,
ಅಳಿಗುಳಿಮನೆ ಆಟಗಳು. ಮಕ್ಕಳೊಳಗೆ ಮಕ್ಕಳಾಗಿ ಆಡಬೇಕೆನಿಸಿದರೆ ನಮ್ಮ ಒಳದನಿ ಯಾವಾಗಲೂ ನಮ್ಮ ಗಂಭೀರತೆಯನ್ನಷ್ಟೆ ಪೋಷಿಸುತ್ತದೆ ಆ ಮೂಲಕ ನಮ್ಮನ್ನು ಸೋಲಿನಿಂದ ಸಾವರಿಸಿದೆ ಎಂದು ಎಚ್ಚರಿಸುತ್ತದೆ.

ಸೋಲಿಗೆ ನಾವು ಹೆದರುತ್ತೇವೆ, ಕಂಗೆಡುತ್ತೇವೆ ಹಾಗಾಗಿ ಇನ್ನೂ ಹೆಚ್ಚೆಚ್ಚು ಗಂಭೀರರಾಗತೊಡಗುತ್ತೇವೆ. ಹೀಗೆ ಬದುಕಿನ ಕಗ್ಗಂಟುಗಳಲ್ಲಿ ಕಳೆದು ಹೋಗುವ ನಾವುಗಳು ಬದುಕಿಗೆ ಅವಿರತವಾದ ಸಂತೋಷಗಳನ್ನು ತುಂಬಿದ ಆಟಗಳನ್ನು ಅಪ್ಪುವುದನ್ನು ಮರೆತುಬಿಡುತ್ತೇವೆ. ಏನದು ಒಳ್ಳೆ ಚಿಕ್ಕ ಮಕ್ಕಳ ತರ ಆಡೊದು ಸಿಲ್ಲಿಯಾಗಿ ಎನ್ನುವ ಕಠೋರ ನಿಯಮಗಳನ್ನು ನಾವು ಒಪ್ಪಿಬಿಟ್ಟಿರುತ್ತೇವೆ. ಇಂದು ನಾವು
ಅನೇಕ ವಸ್ತು ವಿಷಯಗಳನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ ನಮ್ಮದಾಗಿಸಿಕೊಳ್ಳಬಹುದಾಗಿದೆ ಕೊಳ್ಳುವಿಕೆಯ ಮೂಲಕ.

ಆದರೆ ಕೊಳ್ಳದೆ ಬೆರಗಿನ ಸಂವೇದನೆಯನ್ನು ನಮ್ಮೊಳಗೆ ಮೂಡಿಸಬಲ್ಲದು ಆಟ. ಆಟವೆಂದರೆ ಹೊಸತೇನನ್ನೋ ಮಾಡುವುದಲ್ಲ ನಮ್ಮಲ್ಲಿ ವೈಯಕ್ತಿಕ ಹುರುಪನ್ನೂ ತುಂಬಬಲ್ಲ ನವಿರಾದ ಕ್ರಿಯೆ. ನಮಗೆ ಹೆಚ್ಚು ಹತ್ತಿರವಾದದ್ದು ಯಾವುದೆಂದರೆ ನಮ್ಮೆಲ್ಲರ ಬಾಲ್ಯ.
ಬಾಲ್ಯದ ಬುತ್ತಿಗಳಲ್ಲಿ ಆಟಗಳದ್ದೇ ನೆನಪಿನ ಹೂರಣ ನೆನಪುಗಳ ಕಳೆದುಹೋಗುವುದ್ಯಾಕೆ ಮತ್ತೆ ಜೀವಿಸೋಣ ಮತ್ತೆ ಮಕ್ಕಳಾಗೋಣ ಮತ್ತೆ ಬಂದಿದೆ ಬೇಸಿಗೆ ಆಡೋಣ ಆಡುತ್ತಾ ಹಗುರಾಗೋಣ. ಹಾಗಿದ್ದರೆ ಮಕ್ಕಳಾದ್ದಾಗಿನ ನಿಮ್ಮ ಇಷ್ಟದ ಆಟ ಯಾವುದು ಗುರುತು ಹಾಕಿ? ಮಣ್ಣಲ್ಲಾಡಿದ್ದೆ? ಮರ ಹತ್ತಿದ್ದೇ? ಖುಷಿಗಳನ್ನು ಮರುಕಳಿಸಲು ಬಾಲ್ಯವೇ ಆಗಬೇಕಾಗಿಲ್ಲ ನಾವೆಲ್ಲರೂ ಮನಸ್ಸು ಮಾಡಬೇಕಷ್ಟೇ.

Journal of personality and individual differences ಎಂಬ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿ ಯ ಪ್ರಕಾರ ಮನುಷ್ಯರಲ್ಲಿ ಬೇರೆಯವರು-ನಿರ್ದೇಶಿಸಿದ, ಲಘು ಹೃದಯಿ, ಬುದ್ಧಿವಂತಿಕೆಯ ಮತ್ತು ವಿಚಿತ್ರವಾದ ಎಂಬ ನಾಲ್ಕು ಬಗೆಯ ಆಟದ ವ್ಯಕ್ತಿತ್ವ ಗುಣಗಳಿರುತ್ತವೆ ಅಂದರೆ ವ್ಯಕ್ತಿಗಳಾಗಿ ನಾವು ತೊಡಗಿಕೊಳ್ಳುವ ಆಟಗಳು ನಮ್ಮ ವ್ಯಕ್ತಿತ್ವದ ಕುರಿತಾಗಿಯೂ ಮಾತ ನಾಡುತ್ತವೆ. ಉದಾಹರಣೆಗೆ ಬೇರೆಯವರು ನಿರ್ದೇಶಿಸಿದ ಆಟಗಳಲ್ಲಿ ತೊಡಗುವ ಜನರು ಹೆಚ್ಚು ಹೆಚ್ಚು ಜನರೊಂದಿಗೆ ಬೆರೆತು ಆಡಲು ಇಷ್ಟಪಡುತ್ತಾರೆ. ಜನರೊಂದಿಗೆ ಬೆರೆಯುವ ಸ್ವಭಾವ ಇವರದ್ದಾಗಿರುತ್ತದೆ.

ಟಗಳಲ್ಲಿ ಲಘು ಹೃದಯದಿಂದ ತೊಡಗಿಕೊಳ್ಳುವವರು ಸಾಮಾನ್ಯವಾಗಿ ಬದುಕನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬುದ್ಧಿ ವಂತಿಕೆಯ ಆಟದಲ್ಲಿ ತೊಡಗಿರುವವರಲ್ಲಿ ಆಲೋಚನೆಗಳೇ ಹೆಚ್ಚು ಅವರ ಬದುಕನ್ನು ಆವರಿಸಿರುತ್ತವೆ. ವಿಚಿತ್ರವಾದ ಆಟಗಳಲ್ಲಿ ತೊಡಗಿ ಕೊಳ್ಳುವವರ ಸ್ವಭಾವ ಅವರ ಪ್ರತಿನಿತ್ಯದ ಕೆಲಸಗಳಲ್ಲು ಏನೋ ಅಸಮಾನತೆಯನ್ನು ಮೂಡಿಸಿರುತ್ತದೆ.

ನಿಮಗೆ ಬುದ್ಧಿವಂತಿಕೆಯ ಆಟಗಳು ಹೆಚ್ಚು ಇಷ್ಟವಾದರೆ ಸುಡೊಕು, ಪದಬಂಧ, ಚೆಸ್ ನಿಮ್ಮನ್ನು ಸೆಳೆಯುತ್ತವೆ, ಡ್ಯಾನ್ಸ್ ಪಾರ್ಟಿ ನಿಮಗೆ ರುಚಿಸುವುದಿಲ್ಲ. ಆಟಗಳು ಖುಷಿಗಳನ್ನು ಅಷ್ಟೇ ಅಲ್ಲ ಸಮಸ್ಯೆ ಬಗೆಹರಿಸಿಕೊಳ್ಳುವ, ನಿರ್ಧಾರ ತೆಗೆದುಕೊಳ್ಳುವ, ವಿವೇಕಯುತ ವಾಗಿ ಆಲೋಚಿಸುವ ಸೃಜನಾತ್ಮಕವಾಗಿ ವಿಶ್ಲೇಷಿಸುವ ಸಂಬಂಧಗಳನ್ನು ನಿಭಾಯಿಸುವ ಕೌಶಲಗಳನ್ನು ನಮಗೆ ಕಲಿಸಿಕೊಡುತ್ತವೆ. ಆಟಗಳು ನಮ್ಮ ಸುತ್ತಲೂ ಇರುವ ಗಾಳಿಯ ಹಾಗೆ ಅದನ್ನು ಕಳೆದುಕೊಳ್ಳುವವರೆಗೂ ಗುರುತಿಸಲಾಗದಂತಹುವು.

ನಮ್ಮ ಬದುಕಿನ ಎಲ್ಲ ಖುಷಿಗಳನ್ನು ರೂಪಿಸಬಲ್ಲ ಶಕ್ತಿ ಆಟಗಳಿಗೆ ಇದೆ. ಆಟವೆಂಬುದು ಒಂದು ಕಲೆ ಒಂದು ಪುಸ್ತಕ ಒಂದು ಸಂಗೀತ ಒಂದು ಹಗಲುಗನಸಿನಂತೆ ಸದಾ ನಮ್ಮನ್ನು ಆಶ್ಚರ್ಯಗೊಳಿಸುತ್ತಲೇ ಇರುತ್ತದೆ. ಆಟಗಳಿಗೆ ಮನಸ್ಸಿನ ಗಾಯಗಳನ್ನು ಮಾಗಿಸುವ ಮಾಂತ್ರಿಕತೆಯಿದೆ. ಆಟವೆಂಬುದು ಒಂದು ವಸ್ತುವಲ್ಲ ಬದುಕನ್ನು ಬ್ಯಾಲೆನ್ಸ್ ಮಾಡುತ್ತಾ ಬದುಕಿಗೆ ಭರವಸೆ ತುಂಬುತ್ತ ಆಶ್ಚರ್ಯ ಗಳನ್ನು ಹಿತವನ್ನು ಅರ್ಥಪೂರ್ಣತೆಯನ್ನು ಮಮಕಾರವನ್ನು ಕೌಶಲವನ್ನು ನಮ್ಮೊಳಗೆ ತುಂಬುತ್ತ ದೇಹ-ಮನಸ್ಸು ಆತ್ಮವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯೇ ಆಗಿದೆ.

ಶಿಕ್ಷಣದ ಇರುವಿಕೆಗೆ ಅರ್ಥ ತುಂಬಬಲ್ಲ ಶಕ್ತಿ ಆಟಕ್ಕಿದೆ. ಆಟದ ಪ್ರಯೋಜನಗಳನ್ನು ಪಡೆಯಲು ಪ್ರತಿಕ್ಷಣವೂ ಬೇಕಿಲ್ಲ ಸ್ವಲ್ಪಹೊತ್ತಿನ ಆಟ ನಮ್ಮ ಖುಷಿಯನ್ನು ದ್ವಿಗುಣಗೊಳಿಸಿ ಬಿಡಬಹುದು ಹಾಗಿದ್ದರೆ ನಿಮ್ಮ ಜಂಜಾಟದ ಬದುಕಿಗೆ ಆಟವನ್ನು ಹೇಗೆ add ಮಾಡುತ್ತೀರ?… ಆಟಗಳ ಬಗೆಗಿನ ನಿಮ್ಮ ಆಲೋಚನೆಗಳನ್ನು ಬದಲಾಯಿಸಿ ದಿನದ ಅರ್ಧ ಗಂಟೆಯಾದರೂ ಆಡಲು ಮೀಸಲಿಡಿ. ಆಟಗಳನ್ನು ಮತ್ತೆ ಬದುಕಲ್ಲಿ cecreate ಮಾಡಿಕೊಳ್ಳಿ.

ವಾರಾಂತ್ಯದಲ್ಲಿ ಮಕ್ಕಳ ಜತೆ ಬೆರೆತು ಕ್ಯಾರಂ ಆಡಿ, ಚೀಟಿ ಬರೆದು ರಾಜ ರಾಣಿ ಕಳ್ಳ ಪೊಲೀಸ್ ಆಡಿ, ಗಲ್ಲಿ ಕ್ರಿಕೆಟ್ ಆಡಿ, Street shuttle ಆಡಿ, Pets ಜತೆ ಆಡಿ, ಪಕ್ಕದ ಮನೆಯ ಮಕ್ಕಳ ಜತೆ ಒಡಗೂಡಿ ಆಡಿ. ಮಕ್ಕಳ ಪಠ್ಯವನ್ನು ನಟನೆಯ ಆಟದ ಮೂಲಕ ಅವರಿಗೆ ಅಭಿನಯಿಸಿ ಅರ್ಥ ಮಾಡಿಸಿ. ಆಡಿರಿ ಆಡಿಸಿರಿ ನಗುತ್ತ ನಲಿಯುತ್ತ ನಿಮ್ಮ ಇರುವಿಕೆಗೆ ಸಂತೋಷದ ಅರ್ಥ ಕಂಡುಕೊಳ್ಳಿರಿ.
ಆಟಗಳು ನಮ್ಮ ಖುಷಿಯ ಭಾಷೆಗಳು, ಜೀವನದ ನೋಟಗಳನ್ನು ಎತ್ತರಿಸುವ ಮತ್ತು ಬೆಳಗಿಸುವ ಥೆರಪಿಗಳು.

ನಮ್ಮ ಅಭಿವ್ಯಕ್ತಿಯನ್ನು, ಜ್ಞಾನವನ್ನು, ಸಾಮರ್ಥ್ಯವನ್ನು, ಸ್ವಅರಿವನ್ನು ವಿಸ್ತರಿಸುವ ಸಾಧನಗಳು. ಜೀವನದ ಜಂಜಾಟಗಳನ್ನು ಏಕತಾನತೆಯನ್ನು ಮುರಿಯುತ್ತ ಜನರಿಗೆ ಸಕಾರಾತ್ಮಕವಾಗಿ ಕನೆಕ್ಟ್ ಮಾಡುವ ಹಾದಿಗಳು. ವಿಸ್ಮರಣೆ,ದೀರ್ಘಕಾಲದ ಕಾಯಿಲೆಗಳು, ಚಟಗಳು, ಆಘಾತ ಮತ್ತು ದೈಹಿಕ ಹಿಂಸೆಗಳು ಹೀಗೆ ವ್ಯಕ್ತಪಡಿಸಲಾಗದ ಮಾನಸಿಕ ಬವಣೆಗಳು ನಮ್ಮನ್ನು ಕಾಡಿದಾಗ ನಮ್ಮ ಒಳ ಬೇಗುದಿಗಳಿಗೆ ಥೆರಪಿಗಳಾಗಿ ಹುರುಪು ತುಂಬಬಲ್ಲವು ಆಟಗಳು.

ಆಟಗಳು ಧ್ಯಾನದಂತೆ ಸದಾ busy, preoccupied ಆಗಿರುವ ಮನಸ್ಸನ್ನು ಪುನರುಜ್ಜೀವನಗೊಳಿಸುತ್ತವೆ. ನಿಮ್ಮ ಬದುಕಿನ ಚಿಂತೆ ಸವಾಲು, ಆತಂಕ, negativity ಗಳನ್ನು ಇಲ್ಲವಾಗಿಸಿ ಆಡುವುದಲ್ಲ ಇವೆಲ್ಲವುಗಳನ್ನು balance ಮಾಡುತ್ತಲೇ ಆಟಗಳ ಖುಷಿಯನ್ನು ನಿಮ್ಮದಾಗಿಸಿಕೊಳ್ಳಿ.