Saturday, 14th December 2024

ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗರು

ಅಭಿಪ್ರಾಯ

ಗಣೇಶ್ ಭಟ್, ವಾರಣಾಸಿ

೨೦೨೩ ರ ಜನವರಿ ತಿಂಗಳಲ್ಲಿ ಇಂಡಿಯಾ ಟುಡೇ ಸಮೂಹದವರು ಸಿ ವೋಟರ್ ಜತೆಗೆ ಸೇರಿಕೊಂಡು ನಡೆಸಿದ ಮೂಡ್ ಆಫ್ ದ ನೇಷನ್
ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಅನುಮೋದನೆಯ ಪ್ರಮಾಣವು ಶೇ.೬೭ಕ್ಕೆ ಏರಿತ್ತು. ನರೇಂದ್ರ ಮೋದಿ ಪ್ರಧಾನಿ ಪದವಿಗೇರಿ ೯ ವರ್ಷಗಳನ್ನು ಪೂರೈಸಿದ್ದರೂ ಇಂದಿಗೂ ಅದೇ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದ್ದಾರೆ.

ಇದೀಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ಪಕ್ಷವು ೨೮೪ ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ ಸಮೀಕ್ಷೆ. ಶೇ.೭೦ರಷ್ಟು ಮಂದಿ ಮೋದಿಯ ಪ್ರಧಾನಿ ಪದವಿಯ ನಿರ್ವಹಣೆ ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ. ಇಂದಿಗೂ ನರೇಂದ್ರ ಮೋದಿಯವರ ಸಭೆಗೆ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರುತ್ತಾರೆ. ರೋಡ್ ಶೋ ನಡೆಸಿದರೆ ಮೈಲುಗಟ್ಟಲೆ ಉದ್ದದ ಕ್ಯೂವಿನಲ್ಲಿ ಕಾದು ನಿಂತು ಮೋದಿಯನ್ನು ಕಂಡೊಡನೆ ಜಯಕಾರ ಹಾಕುತ್ತಾರೆ. ಮೋದಿಗೆ ವಿರೋಧಿಗಳು ದೊಡ್ಡ ಸಂಖ್ಯೆ ಯಲ್ಲಿದ್ದರೂ, ದ್ವೇಷಿಸುವವರಿಗಿಂತ ಮೂರುಪಟ್ಟು ಹೆಚ್ಚು ಸಂಖ್ಯೆಯಲ್ಲಿ ಪ್ರೀತಿಸುವವರು ಇದ್ದಾರೆ. ೨೦೦೨ ರಲ್ಲಿ ಅವರು ಗುಜರಾತ್‌ನ ಮುಖ್ಯಮಂತ್ರಿ ಪದವಿಯನ್ನು ಏರಿದ ನಂತರ ಅವರ ಜನಪ್ರಿಯತೆಯ ಗ್ರಾಫ್ ಹಂತ ಹಂತವಾಗಿ ಮೇಲೇರುತ್ತಲೇ ಸಾಗಿದೆ.

ವಿದೇಶಿ ಮಾಧ್ಯಮಗಳೆ ನರೇಂದ್ರ ಮೋದಿಯವರನ್ನು ಖಳನಾಯಕನಂತೆ ಚಿತ್ರಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿವೆ. ೨೦೧೯ ರ ಲೋಕಸಭಾ ಚುನಾವಣೆಯ ಸಂದರ್ಭ ದಲ್ಲಿ ಅಮೆರಿಕದ ಟೈಂಸ್ ಮ್ಯಾಗಜಿನ್ ಇಂಡಿಯಾಸ್ ಡಿವೈಡರ್ ಇನ್ ಚೀಫ್(ಭಾರತದ ಮುಖ್ಯ ವಿಭಾಜಕ)
ಎನ್ನುವ ಮುಖಪುಟ ಲೇಖನವನ್ನು ಪ್ರಕಟಿಸಿತ್ತು. ೨೦೨೨ ರ ಅಕ್ಟೋಬರ್ ತಿಂಗಳಲ್ಲಿ ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿ ೨೦ ರಾಷ್ಟ್ರಗಳ ವಿತ್ತ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಅಮೇರಿಕಾಗೆ ಬಂದಿದ್ದಾಗ ವಾಲ್ ಸ್ಟ್ರೀಟ್ ಜರ್ನಲ್ ತನ್ನ ಮುಖಪುಟದಲ್ಲಿ ವಾಂಟೆಡ್:
ಮೋದೀಸ್ ಮ್ಯಾಗ್ನಿಟ್ಸ್ಕಿ ೧೧ (ಮೋದಿ ಸರಕಾರದ ಮಾನವ ಹಕ್ಕುಗಳ ೧೧ ಮಂದಿ ಉಲ್ಲಂಘನೆಕಾರರು ಬೇಕಾಗಿದ್ದಾರೆ) ಎನ್ನುವ ಇಡೀ ಪುಟದ ಜಾಹೀರಾತನ್ನು ಪ್ರಕಟಿಸಿತ್ತು. ಈ ಜಾಹೀರಾತಿನಲ್ಲಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಭಾರತದ ಪ್ರಮುಖ ೧೧ ವ್ಯಕ್ತಿಗಳನ್ನು ಮಾನವ ಹಕ್ಕುಗಳ ಉಲ್ಲಂಘನೆಕಾರರು ಎಂದು ಬಿಂಬಿಸಲಾಗಿತ್ತು.

ಹೂಡಿಕೆದಾರರನ್ನು ನಿರುತ್ತೇಜಿಸುವ ಉದ್ದೇಶ ಈ ಜಾಹೀರಾತಿಗೆ ಇತ್ತು. ಕರೋನಾ ಎರಡನೇ ಅಲೆಯ ಸಂದರ್ಭದಲ್ಲಂತೂ ವಿದೇಶಿ ಪತ್ರಿಕೆಗಳಲ್ಲಿ ಭಾರತದ ಬಗ್ಗೆ ಪ್ರಕಟವಾದ ನಕಾರಾತ್ಮಕ ಲೇಖನ ಹಾಗೂ ವರದಿಗಳಿಗೆ ಲೆಕ್ಕವೇ ಇಲ್ಲ. ಭಾರತದಲ್ಲಿ ಉರಿಯುತ್ತಿರುವ ಚಿತೆಗಳ ಫೊಟೋವನ್ನು
ನ್ಯೂಯಾರ್ಕ್ ಟೈಮ್ಸ್ ಮುಖಪುಟ ಲೇಖನವನ್ನಾಗಿ ಪ್ರಕಟಿಸಿತ್ತು. ವಾಷಿಂಗ್ಟನ್ ಪೋ ಅಂತೂ ಮುಖಪುಟದಲ್ಲಿ ಕರೋನಾಗೆ ಬಂಧುಗಳನ್ನು ಕಳೆದುಕೊಂಡು ಅಳುತ್ತಿರುವವರ ಫೋಟೋವನ್ನು ಪ್ರಕಟಿಸಿ ’ಭಾರತದಲ್ಲಿ ಉಲ್ಬಣವಾದ ಕರೋನಾ ವೈರಸ್, ರಾಷ್ಟ್ರೀಯವಾದಿ ನರೇಂದ್ರ ಮೋದಿಯ ಪಾಲಿಗೆ ನಿರ್ಣಾಯಕ ಕ್ಷಣ’ ಎಂಬ ಶಿರೋನಾಮೆ ನೀಡಿತ್ತು.

ಕರೋನಾ ವಿಚಾರದಲ್ಲೂ ಮೋದಿಯವರ ರಾಷ್ಟ್ರೀಯವಾದದ ಬಗ್ಗೆ ಟೀಕೆ! ರಾಯ್ಟರ್ ಪತ್ರಿಕೆಯು ಪ್ರಕಟಿಸಿದ ಭಾರತದ ಉರಿಯುತ್ತಿರುವ ಚಿತೆಯ ಪಕ್ಕ ಮುಂದಿನ ಸರದಿಗಾಗಿ ಇಡಲಾದ ಶವ, ಆಸ್ಪತ್ರೆಯಲ್ಲಿ ಉಸಿರಾಟಕ್ಕಾಗಿ ಕಷ್ಟಪಡುತ್ತಿರುವ ಮಹಿಳೆ, ಸಾಮೂಹಿಕ ದಹನ ಮೊದಲಾದ ಫೋಟೋಗಳಿಗೆ ಪುಲಿಟ್ಜರ್ ಪ್ರಶಸ್ತಿ ಕೂಡಾ ಸಿಕ್ಕಿದೆ. ಆದರೆ ಸಂಪೂರ್ಣ ಲಸಿಕೀಕರಣದ ಮೂಲಕ ಕರೋನಾದ ಮೇಲೆ ನಿಯಂತ್ರಣ ಸಾಧಿಸಿದ ಭಾರತದ ಯಶೋಗಾಥೆಯು ಈ ಯಾವುದೇ ಪತ್ರಿಕೆಗಳಲ್ಲೂ ಪ್ರಕಟವಾಗಿಲ್ಲ. ಬಿಲಿಯನೇರ್ ಜಾರ್ಜ್ ಸೋರೋಸ್ ನಂತಹ ವ್ಯಕ್ತಿಗಳು ಹಾಗೂ
ಪಾಕಿಸ್ತಾನ, ಚೀನಾ, ಟರ್ಕಿ ಮೊದಲಾದ ದೇಶಗಳು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತ ವಿರೋಧಿ ನಿಲುವುಗಳು ಪ್ರಕಟವಾಗಲು ಸಹಕರಿಸುತ್ತಿವೆ.

ನರೇಂದ್ರ ಮೋದಿಯವರನ್ನು ಹಣಿಯಲು ದೇಶ ವಿದೇಶಗಳಲ್ಲಿ ಮಸಲತ್ತುಗಳನ್ನು ನಡೆಸಲಾಗುತ್ತಿದ್ದರೂ, ನಿರಂತರ ಟೀಕೆಗಳನ್ನು ಮಾಡಲಾಗು ತ್ತಿದ್ದರೂ ಮೋದಿ ಮಾತ್ರ ತನ್ನ ಕರ್ತವ್ಯಪ್ರeಯಿಂದ ಸ್ವಲ್ಪವೂ ವಿಮುಖರಾಗಿಲ್ಲ. ನರೇಂದ್ರ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆ ಯಿಂದಾಗಿ ಅವರ ಸರಕಾರವು ಕೈಗೊಂಡ ಬಹುತೇಕ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ ಹಾಗೂ ಜನಸಾಮಾನ್ಯರಿಗೆ ತಲುಪುತ್ತಿದೆ. ಮೋದಿಯ ನಿಷ್ಕಳಂಕ ವ್ಯಕ್ತಿತ್ವದ ಬಗ್ಗೆ ಅವರ ರಾಜಕೀಯ ವಿರೋಧಿಗಳಿಗೂ ಪ್ರಶ್ನಿಸುವ ಧೈರ್ಯವಿಲ್ಲ.

ರಫೆಲ್ ಯುದ್ಧ ವಿಮಾನದ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪವನ್ನು ಕಾಂಗ್ರೆಸ್ ಮೊದಲಾದ ವಿಪಕ್ಷಗಳು ಹೊರಿಸುವ ಪ್ರಯತ್ನವನ್ನು ಮಾಡಿದ್ದವು. ಆದರೆ ಸುಪ್ರೀಂ ಕೋರ್ಟ್ ರಫರಲ್ ಖರೀದಿಯ ಕುರಿತು ಸಮಗ್ರ ತನಿಖೆ ನಡೆಸಿ ವ್ಯವಹಾರವು ಪಾರದರ್ಶಕವಾಗಿದೆ ಎಂದು ತೀರ್ಪು ನೀಡಿರುವುದರಿಂದ ಮೋದಿಯವರ ವ್ಯಕ್ತಿತ್ವವು ಪುಟವಿಟ್ಟ ಚಿನ್ನದಂತಾಯಿತು. ಮೋದಿಯವರ ನಿಷ್ಕಳಂಕತೆ ಮತ್ತೊಮ್ಮೆ ಜU ಜ್ಜಾ ಹೀರಾಯಿತು. ಚೌಕೀದಾರ್ ಚೋರ್ ಹೈ ಎಂದಿದ್ದ ರಾಹುಲ್ ಗಾಂಧಿ ಕೊನೆಗೆ ತನ್ನ ಹೇಳಿಕೆಯನ್ನು ಹಿಂದೆ ಪಡೆದು ಕೋರ್ಟಿನ ಎದುರು ಕ್ಷಮೆಯನ್ನು ಕೇಳಬೇಕಾಯಿತು.

ನ ಖಾವೂಂಗಾ, ನ ಖಾನೇ ದೂಂಗಾ- ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಇತರರನ್ನು ಭ್ರಷ್ಟಾಚಾರ ಮಾಡಲೂ ಬಿಡುವುದಿಲ್ಲ ಎಂದಿರುವ ಮೋದಿ ಕೇಂದ್ರ ಸರಕಾರದ ಮಟ್ಟದ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಯಶಸ್ವಿ ಯಾಗಿದ್ದಾರೆ. ಪ್ರತಿ ಯೋಜನೆಗಳನ್ನು ಜನರ ಜನಧನ್ ಅಕೌಂಟ್,ಆಧಾರ್ ಹಾಗೂ ಮೊಬೈಲ್ ನಂಬರಿಗೆ (ಜೆಎಎಂ/ಜಾಮ್ ) ಜೋಡಿಸಿ ಕೇಂದ್ರ ಸರಕಾರದ ಸಹಾಯಧನ, ಸಬ್ಸಿಡಿ, ಪಿಂಚಣಿ ಹಾಗೂ ಪರಿಹಾರಗಳು ಸ್ವಲ್ಪವೂ ಸೋರಿಕೆಯಾಗದೆ ಸಂಪೂರ್ಣವಾಗಿ ಫಲಾನುಭವಿಗಳಿಗೆ ಸಿಗುವಂತೆ ಮಾಡಲಾಗಿದೆ. ಪ್ರತಿ ವರ್ಷ ಪ್ರಧಾನ್ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಸುಮಾರು ೧೧.೫ ಕೋಟಿ ರೈತರ ಬ್ಯಾಂಕ್ ಅಕೌಂಟ್ ಗಳಿಗೆ ಮೂರು ಕಂತುಗಳಲ್ಲಿ ತಲಾ ೬೦೦೦ ರುಪಾಯಿಯಂತೆ ಹಣ ಸಂದಾಯವಾಗುತ್ತದೆ.

೨೦೧೯ ರ ನಂತರ ಇದುವರೆಗೆ ೨.೨೪ ಲಕ್ಷ ಕೋಟಿ ರುಪಾಯಿಗಳು ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ತಲುಪಿದೆ. ಕರೋನಾ ಸಂದಿಗ್ಧ ಕಾಲದಲ್ಲಿ ಕೇಂದ್ರ ಸರಕಾರವು ದೇಶದ ೨೦ ಕೋಟಿ ಬಡ ಮಹಿಳೆಯರ ಜನಧನ್ ಅಕೌಂಟ್ ಗಳಿಗೆ ಪ್ರತೀ ತಿಂಗಳು ೫೦೦ ರುಪಾಯಿಗಳ ಆರ್ಥಿಕ ಸಹಾಯವನ್ನು ಕಳುಹಿಸಿತ್ತು. ದೇಶದ ೫೦ ಕೋಟಿ ಮಂದಿಗೆ ಉಚಿತ ಚಿಕಿತ್ಸೆ ನೀಡುವ ಪ್ರಧಾನ್ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ, ಕಡಿಮೆ ಬೆಲೆಗೆ ಔಷಽಯನ್ನು ಒದಗಿಸುವ ಜನೌಷಧ ಯೋಜನೆ, ೧೦ ಕೋಟಿ ಮನೆಗಳಿಗೆ ಉಚಿತ ಶೌಚಾಲಯ ಒದಗಿಸಿರುವುದು, ೨.೫ ಕೋಟಿ ವಿದ್ಯುತ್ ರಹಿತ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಿ ರುವುದು, ೯ ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕೊಟ್ಟಿರುವುದು, ಮನೆಮನೆಗಳಿಗೆ ನಲ್ಲಿಯ ಮೂಲಕ ನೀರಿನ ಶುದ್ಧ ಕುಡಿಯುವ ನೀರಿನ ಸಂಪರ್ಕ ಕೊಡುವ ಜಲ್ ಜೀವನ್ ಯೋಜನೆ , ಕರೋನಾ ಕಾಲದಲ್ಲಿ ದೇಶದ ೮೦ ಕೋಟಿ ಮನೆಗಳಿಗೆ ಉಚಿತ ಆಹಾರ ಧಾನ್ಯ ಪೂರೈಕೆ ಮಾಡಿರುವುದು ಮೊದಲಾದ ಕೆಲಸಗಳು ನರೇಂದ್ರ ಮೋದಿಯ ವಿಶ್ವಾಸಾರ್ಹತೆ ಯನ್ನು ಹೆಚ್ಚಿಸಿವೆ.

ದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಕ್ರಮಬದ್ಧವಾಗಿ ಕಾಲಮಿತಿಯೊಳಗೆ ಜಾರಿಯಾಗುತ್ತಿವೆ. ಕಳೆದ ೯ ವರ್ಷಗಳಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಪ್ರಮಾಣ ದ್ವಿಗುಣಗೊಂಡಿದೆ, ೮ ವರ್ಷಗಳ ಮೊದಲು ೬೦ ರಷ್ಟು ಇದ್ದ ನಾಗರಿಕ ವಿಮಾನ ನಿಲ್ದಾಣಗಳ ಸಂಖ್ಯೆ ಈಗ ೧೪೦ ಕ್ಕೆ ಏರಿದೆ, ರೈಲುಗಳು ಸ್ವಚ್ಛವಾಗಿವೆ, ವಂದೇಭಾರತ್ ರೈಲಿನಂತಹ ವೇಗದ ರೈಲುಗಳ ಓಡಾಟ ಆರಂಭವಾಗಿದೆ, ಆಗಿದೆ, ರೈಲ್ವೆ ನಿಲ್ದಾಣಗಳು ಸ್ವಚ್ಛ, ಸುಂದರ ಹಾಗೂ ಆಧುನೀಕರಣ ಗೊಳಿಸಲ್ಪಟ್ಟಿವೆ, ದೇಶದ ನಗರಗಳಿಗೆ ಮೆಟ್ರೋ ರೈಲುಗಳು ಲಭಿಸಿವೆ.

ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿಯ ಪರ್ವವೇ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದಿದ್ದ ಅತೀ ಜನಸಾಂದ್ರತೆಯ ಉತ್ತರಪ್ರದೇಶವು ಅಭಿವೃದ್ಧಿಯ ಹಳಿಗೆ ಬಂದಿದೆ. ಕೇಂದ್ರದ ಮುದ್ರಾ ಸಾಲ ಯೋಜನೆ ಜನರಲ್ಲಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಕೊಟ್ಟಿದೆ. ಸ್ಟಾರ್ಟ್ ಅಪ್ ಇಂಡಿಯಾವು ಯುವಕರಲ್ಲಿ ಉದ್ಯಮಶೀಲತೆಯನ್ನು ಬೆಳೆಸಿದೆ ಹಾಗೂ ಉದ್ಯೋಗಗಳನ್ನು ಸೃಷ್ಟಿಸಿದೆ. ಮೇಕ್ ಇನ್ ಇಂಡಿಯಾ ಹಾಗೂ ಉತ್ಪಾದನಾ ಧಾರಿತ ಪ್ರೋತ್ಸಾಹಧನ ಯೋಜನೆಗಳು ಭಾರತ ವನ್ನು ಆತ್ಮನಿರ್ಭದ್ದವಾಗಿಸುತ್ತಿವೆ. ಡಿಜಿಟಲ್ ಇಂಡಿಯಾ ಯೋಜನೆಯು ಸರಕಾರವನ್ನು ಜನರಿಗೆ ಹತ್ತಿರವಾಗಿಸಿದೆ. ಕರೋನಾ ತಡೆಗೆ ದೇಶದ ಎಲ್ಲಾ ಜನರಿಗೆ ಉಚಿತವಾಗಿ ಎರಡು ಡೋಸ್ ವ್ಯಾಕ್ಸಿನ್ ಹಾಗೂ ಈಗ ಮೂರನೇ ಬೂಸ್ಟರ್ ಡೋಸ್‌ನ್ನೂ ಕೊಡಲಾಗುತ್ತಿದ್ದು ಸರಕಾರವು ದೇಶದ ಜನತೆಯನ್ನು ಕರೋನಾದ ಮೂರನೇ ಅಲೆಯಿಂದ ರಕ್ಷಿಸಿದೆ.

ಇಂದು ಇಡೀ ಜಗತ್ತು ಆರ್ಥಿಕ ಹಿಂಜರಿಕೆಯ ಭಯದಲ್ಲಿರುವಾಗಲೂ ಭಾರತವು ೨೦೨೩ ಹಾಗೂ ೨೦೨೪ ರಲ್ಲಿ ಜಗತ್ತಿನ ಅತೀ ವೇಗವಾಗಿ ಬೆಳೆಯಬಲ್ಲ ಪ್ರಮುಖ ಆರ್ಥಿಕತೆಯ ರಾಷ್ಟ್ರವಾಗಿ ಮೂಡಿಬರಲಿದೆ ಎಂದು ಐ ಎಮ್ ಎಫ್, ವಿಶ್ವಬ್ಯಾಂಕ್ ಮೊದ ಲಾದ ಸಂಸ್ಥೆಗಳು ಹೇಳಿವೆ. ೨೦೧೪ ರಲ್ಲಿ ಜಾಗತಿಕವಾಗಿ ೧೦ ನೇ ದೊಡ್ಡ ಆರ್ಥಿಕ ದೇಶವಾಗಿದ್ದ ಭಾರತವಿಂದು ೫ ಸ್ಥಾನಕ್ಕೇರಿದೆ. ೫ ಟ್ರಿಲಿಯನ್ (೫ ಲಕ್ಷ ಕೋಟಿ) ಡಾಲರ್ ಗಳ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲಿಡುತ್ತಿರುವ ಭಾರತ ೨೦೩೫ ರ ಒಳಗೆ ೧೦ ಟ್ರಿಲಿಯನ್ ಡಾಲರ್ ಗಳ ಆರ್ಥಿಕತೆಯಾಗಲಿದೆ.

ಹಿಂದೂ ಧರ್ಮದ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದು ದೇವಸ್ಥಾನ, ಮಠ, ಮಂದಿರಗಳಿಗೆ ಭೇಟಿಕೊಡುವ ಮೋದಿ ಹಿಂದೂ ಆಚರಣೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಆಚರಿಸುತ್ತಾರೆ. ವಿದೇಶಗಳಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸುತ್ತಾರೆ. ನರೇಂದ್ರ ಮೋದಿಯವರು ಟ್ವಿಟ್ಟರ್, ಫೇಸ್ಬುಕ್, ನರೇಂದ್ರ ಮೋದಿ ಆಪ್,ಇನ್‌ಸ್ಟಾಗ್ರಾಂಗಳ ಮೂಲಕ ಜನರೊಡನೆ ನೇರ ಸಂಪರ್ಕದಲ್ಲಿದ್ದು ಜನರಿಂದ ತ್ವರಿತ ಪ್ರತಿಕ್ರಿಯೆಗಳನ್ನು ಪಡೆಯುತ್ತಲೇ ಇರುತ್ತಾರೆ. ಈ ಮೂಲಕ ಅವರು ಜನರ ನಾಡಿ ಮಿಡಿತವನ್ನು ಅರ್ಥಮಾಡಿ ಕೊಳ್ಳುತ್ತಿರುತ್ತಾರೆ ಹಾಗೂ ಅವರ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸುತ್ತಾರೆ.

ಇದರಿಂದಾಗಿ ಅವರು ಜನರಿಗೆ ಮತ್ತಷ್ಟು ಹತ್ತಿರವಾದರು ಹಾಗೂ ಜನರ ಆದರಕ್ಕೆ ಪಾತ್ರರಾದರು. ೨೦೧೪ ರ ನಂತರ ಕಾಶ್ಮೀರದ ಗಡಿಯನ್ನು ಮೀರಿ ದೇಶದ ಒಳಗೆ ಎಲ್ಲೂ ಭಯೋತ್ಪಾದನಾ ದಾಳಿಗಳು ನಡೆದಿಲ್ಲ, ನಕ್ಸಲ್ ಹಿಂಸಾಚಾರವನ್ನೂ ಬಹುತೇಕ ನಿಗ್ರಹಿಸಲಾಗಿದೆ. ಒಟ್ಟಿನಲ್ಲಿ ದೇಶವು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ. ಮೋದಿ ಆಡಳಿತದಲ್ಲಿ ತಾವು ಸುರಕ್ಷಿತರು ಎಂಬ ಭಾವನೆ ಜನರಲ್ಲಿ ಮೂಡಿದೆ. ಹೀಗಾಗಿ ವಿರೋಽಗಳು ಏನೇ ಮಾಡಿದರೂ ೨೦೨೪ ರಲ್ಲಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ.
Read E-Paper click here