Saturday, 23rd November 2024

ಚಿನ್ನದ ರಸ್ತೆಯ ರೂವಾರಿ ಪ್ರತಾಪ್ ಸಿಂಹ

ವೀಕೆಂಡ್ ವಿತ್ ಮೋಹನ್

camohanbn@gmail.com

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಸೋದರಮಾವ ಇದ್ದೇ ಇರುತ್ತಾನೆ. ತನ್ನ ಅಕ್ಕ ಅಥವಾ ತಂಗಿಯ ಮಗ ಮದುವೆ ವಯಸ್ಸಿಗೆ ಬಂದ ಕೂಡಲೇ ಆತನಿಗೆ ಮೊದಲು ಮದುವೆ ಮಾಡಬೇಕೆಂದು ಹೇಳುತ್ತಾನೆ. ನಂತರ ಆ ಹುಡುಗನಿಗೆಹೆಣ್ಣು ನೋಡಲು ಓಡಾಡುವುದು ಹುಡುಗನ ಹೆತ್ತವರು. ಮದುವೆಗೆ ಬೇಕಿರುವ ಒಡವೆಗಳನ್ನು ಖರೀದಿ ಮಾಡುವುದು ಹುಡುಗನ ಅಪ್ಪ-ಅಮ್ಮ.

ಮದುವೆಯ ಊಟದ ತಯಾರಿ ಮಾಡಿಕೊಳ್ಳುವುದೂ ಅವರೇ. ಮದುವೆಗೆ ಬೇಕಿರುವ ಹೂವಿನ ಅಲಂಕಾರದ ತಯಾರಿ, ಚಪ್ಪರದ ಕೆಲಸ… ಹೀಗೆ ಎಲ್ಲ ಕೆಲಸಗಳ ಉಸ್ತುವಾರಿ ನೋಟಡಿಕೊಳ್ಳುವ ಹೊಣೆ ಅವರ ಹೆಗಲೇರಿ ರುತ್ತದೆ. ಆದರೆ ಮದುವೆಯ ದಿನ ಅಥವಾ ಹಿಂದಿನ ದಿನ ಸೋದರಮಾವ ಪ್ರತ್ಯಕ್ಷನಾಗುತ್ತಾನೆ. ಸಫಾರಿ ಪ್ಯಾಂಟು ಧರಿಸಿಕೊಂಡು ಮದುವೆ ಮನೆಯಲ್ಲ  ಓಡಾಡಲು ಶುರುಮಾಡುತ್ತಾನೆ. ಅಡುಗೆ ಮನೆಗೆ ಹೋಗಿ ಅಡುಗೆ ಭಟ್ಟರಿಗೆ ಅವಾಜ್ ಹಾಕುತ್ತಾನೆ, ಹೂವಿನ ಅಲಂಕಾರದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ, ಮದುವೆ ಮಾಡಿಸುವ ಭಟ್ಟರಿಗೂ ಉಪದೇಶ ಮಾಡುತ್ತಾನೆ.

ಮದುವೆಗೆ ಬಂದ ಜನ ಈತನ ಡ್ರಾಮಾ ನೋಡಿ ಈತನೇ ನಿಂತು ಸಂಪೂರ್ಣ ಮದುವೆ ಮಾಡಿಸುತ್ತಿದ್ದಾನೆಂದು ಕೊಳ್ಳುತ್ತಾರೆ.  ನಮ್ಮ ರಾಜ್ಯದಲ್ಲೂ ಕಾಂಗ್ರೆಸ್‌ನ ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಕಾ ಇಂಥಾ ಸೋದರಮಾವನೇ! ನರೇಂದ್ರ ಮೋದಿಯವರು ಫೆಬ್ರವರಿ 2018ರಂದು ಬೆಂಗಳೂರು ಮೈಸೂರು ದಶಪಥ ಹೆzರಿ ಘೋಷಣೆ ಮಾಡಿದಾಗ ಮಾತನಾಡ ಲಿಲ್ಲ. ಘೋಷಣೆಯಾದ ಒಂದು ವಾರದಲ್ಲಿ ಕೇಂದ್ರ ಆರ್ಥಿಕ ಸಮಿತಿ ಸಭೆಯಲ್ಲಿ ದಶಪಥ ಹೆದ್ದಾರಿಗೆ ಬೇಕಿರುವ ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಾಗ ಸಿದ್ದರಾಮಯ್ಯನೆಂಬ ಸೋದರಮಾವ ಬಾಯಿ ಬಿಚ್ಚಲಿಲ್ಲ.

ಮಾರ್ಚ್ ೨೦೧೮ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ದಶಪಥ ಹೆದ್ದಾರಿಯ ಗುದ್ದಲಿ ಪೂಜೆಗೆ ಆಗಮಿಸಿದಾಗ ಸಿದ್ದರಾಮಯ್ಯನ ಬಾಯಿಗೆ ಬೀಗ ಬಿದ್ದಿತ್ತು. ನಂತರ ಹೆದ್ದಾರಿಗೆ ಬೇಕಿರುವ ಜಾಗದ ಸ್ವಾಧೀನ ಪ್ರಕ್ರಿಯೆ ಶುರುವಾದಾಗಲೂ ಈ ಸೋದರಮಾವ ಸೊಲ್ಲೆತ್ತಲಿಲ್ಲ. ಸ್ವಾಧೀನ ಪ್ರಕ್ರಿಯೆಯ ಸಂದರ್ಭದಲ್ಲಿ ಕೇಳಿಬಂದ ವ್ಯಾಜ್ಯಗಳ ವಿರುದ್ಧ ಧ್ವನಿ ಎತ್ತಲಿಲ್ಲ. ಆದರೆ, ಕಳೆದ ವರ್ಷ ಸುರಿದ ಬಾರಿ ಮಳೆಗೆ ಹೆದ್ದಾರಿಯಲ್ಲಿ ಕೆಲವೆಡೆ ನೀರು ತುಂಬಿ ಕೊಂಡು ಕೃತಕ ಪ್ರವಾಹ ಸೃಷ್ಟಿಯಾದಾಗ ಇದ್ದಕ್ಕಿದ್ದಂತೆ ಬೆಳಗೆದ್ದು ಹಲ್ಲುಜ್ಜುವ ಮುನ್ನವೇ ಅವೈಜ್ಞಾನಿಕ ಕಾಮಗಾರಿಯೆಂದು ಬೊಬ್ಬೆಹೊಡೆಯಲು ಶುರುಮಾಡಿದರು. ಸಮಸ್ಯೆಗಳು ಬಗೆಹರಿದು ಜನರು ದಶಪಥ ಹೆದ್ದಾರಿ ಬಳಸಲು ಶುರುಮಾಡಿದ ನಂತರ ಸಿದ್ದರಾಮಯ್ಯನೆಂಬ ಸೋದರಮಾವ ಮುನ್ನೆಲೆಗೆ ಬಂದು ‘ಮದುವೆ’ ಮಾಡಿಸಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ.

ಬೆಂಗಳೂರು ಮತ್ತು ಮೈಸೂರಿನ ನಡುವಣ ದಶಪಥ ಹೆದ್ದಾರಿ ಲೋಕಾರ್ಪಣೆಗೆ ಸಿದ್ಧಗೊಳ್ಳುವ ಸಂದರ್ಭದಲ್ಲಿ, ಬಿಳೀ ಪಂಚೆ ಧರಿಸಿ ಹೆzರಿ ವೀಕ್ಷಣೆಗೆ ಯೋಜಿಸಿದ್ದರು.ಸಮಸ್ಯೆಗಳಿದ್ದಾಗ ತಲೆಕೆಡಿಸಿಕೊಳ್ಳದೆ ಸಂಪೂರ್ಣವಾಗಿ ಹೆದ್ದಾರಿ ನಿರ್ಮಾಣವಾದ ನಂತರ ತಾವೇ ಮಾಡಿದ್ದೆಂಬಂತೆ ಈ ಸೋದರಮಾವ ಕುಣಿದಾಡುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ದಶಪಥ ಹೆದ್ದಾರಿ ನಿರ್ಮಾಣವಾದರೆ ಅದರ ಸಂಪೂರ್ಣ ಯಶಸ್ಸು ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ,
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಕರೆಸಲು ಸಾಧ್ಯವಾಗುವುದಿಲ್ಲವೆಂಬ ಕ್ಷುಲ್ಲಕ ಕಾರಣದಿಂದ ಕೇವಲ ಡಿಪಿಆರ್ ಮಾಡಿಸಿ ಕುಳಿತಿಕೊಂಡದ್ದು ಸಿದ್ದರಾಮಯ್ಯನವರ ಸಾಧನೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಬಂದಂತಹ ಅನುದಾನವನ್ನು ಬಳಸಿಕೊಂಡು
ಅಭಿವೃದ್ಧಿ ಕಾರ್ಯ ನಿರ್ವಹಿಸಿದರೆ ಕೇಂದ್ರಕ್ಕೆ ಅದರ ಶ್ರೇಯ ಸಲ್ಲಬೇಕಾಗುತ್ತದೆಯೆಂಬ ಒಂದೇ ಒಂದು ಕಾರಣಕ್ಕೆ ಆ ಹಣವನ್ನು ತಮ್ಮ ಅಧಿ ಕಾರಾವಧಿಯಲ್ಲಿ ಬಳಸಿಕೊಳ್ಳಲಿಲ್ಲ.

ಸಿದ್ದರಾಮಯ್ಯ (ಸುಳ್ಳು) ಹೇಳುವ ಹಾಗೆ ಅವರ ಅವಧಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಸಹಕಾರ ಕೊಟ್ಟಿದ್ದೇ ಹೌದಾದರೆ ದಶಪಥ ಹಾದುಹೋಗುವ ಮಾರ್ಗದಲ್ಲಿ ಸಿಗುವ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರದರೂ ಸಿದ್ದರಾಮಯ್ಯ ಯಾಕೆ ಚುನಾವಣೆಗೆ ಸ್ಪರ್ಧಿಸಬಾರದು? ಟಿ. ನರಸೀಪುರದಿಂದ ಸೋತ ಕಾಂಗ್ರೆಸಿನ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಯಾಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿಲ್ಲ? ಮೈಸೂರು ಪ್ರಾಂತ್ಯವೇ ಬೇಡವೆಂದು
ಕರ್ನಾಟಕದ ಹಲವೆಡೆ ಸಿದ್ದರಾಮಯ್ಯ ಯಾಕೆ ಕ್ಷೇತ್ರ ಹುಡುಕಬೇಕು?

ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಅಡ್ಡ ಬಂದ ಪ್ರತಿಯೊಂದು ಸವಾಲನ್ನು ಮೆಟ್ಟಿ ನಿಂತದ್ದು ಸಂಸದ ಪ್ರತಾಪ್ ಸಿಂಹ. ಹೆದ್ದಾರಿಗೆ ಬೇಕಿದ್ದ ಭೂಸ್ವಾಧೀನ ಪ್ರಕ್ರಿಯೆಯಲ್ಲುಂಟಾದಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನರು ಪ್ರತಾಪ್ ಸಿಂಹರ ಬಳಿ ಬಂದದ್ದು. ಮಳೆ ನೀರು ನಿಂತಾಗ
ಜನರು ತಮ್ಮ ಅವಾಹಲುಗಳನ್ನು ಸಲ್ಲಿಸಿದ್ದು ಪ್ರತಾಪ್ ಸಿಂಹರಿಗೆ. ಭೂಸ್ವಾಧೀನ ಪ್ರಕ್ರಿಯೆ ನಂತರದ ಪರಿಹಾರಕ್ಕೂ ತಲೆ ಕೊಟ್ಟಿದ್ದು ಅವರೇ. ಸಣ್ಣ ಪುಟ್ಟ ಸಿವಿಲ್ ಸಮಸ್ಯೆಗಳನ್ನು ಬಗೆಹರಿಸಲು ಹಗಲು ರಾತ್ರಿಯೆನ್ನದೆ ಎಂಜಿನಿಯರ್‌ಗಳ ಮನೆ ಬಾಗಿಲು ತಟ್ಟಿದ್ದೂ ಮೈಸೂರಿನ ಸಂಸದರೇ. ದಶಪಥ
ಹೆzರಿಗೆ ಬೇಕಿದ್ದಂತಹ ಜಲ್ಲಿಕಲ್ಲುಗಳು ಅಕ್ಕಪಕ್ಕದ ಕ್ವಾರಿಗಳಿಂದ ಸಿಗದಂತೆ ಮಾಡಲಾಯಿತು, ಆಗಳು ನಿಂತು ಸಮಸ್ಯೆ ಬಗೆಹರಿಸಿದರು.

ಸಿದ್ದರಾಮಯ್ಯನೆಂಬ ಸೋದರಮಾವ ನಿದ್ದೆಯಲ್ಲಿರುವ ಸಂದರ್ಭದಲ್ಲಿ ಬೆಳಗ್ಗೆ ಆರು ಗಂಟೆಗೆ ಎದ್ದು ಕಡತಗಳನ್ನು ಮಂತ್ರಿಗಳು ಮತ್ತು ಅಽಕಾರಿಗಳ
ಕಚೇರಿಂದ ಕಚೇರಿಗೆ ಕೊಂಡೊಯ್ದು ಹೆದ್ದಾರಿ ನಿರ್ಮಾಣಕ್ಕೆ ಇದ್ದಂತಹ ತೊಡಕುಗಳನ್ನು ನಿರ್ವಹಿಸಿ ಹೆದ್ದಾರಿ ಕೆಲಸ ಸುಗಮವಾಗುವಂತೆ ಮಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ ಕಾಮಗಾರಿಯ ಪ್ರಗತಿಯನ್ನು ಚಾಚೂ ತಪ್ಪದೆ ಜನರಿಗೆ ಆಗಾಗ ಹೇಳುತ್ತಲೇ ಬಂದಿದ್ದಾರೆ.

ಮತ್ತೊಬ್ಬರು ಮಾಡುವ ಕೆಲಸಕ್ಕೆ ತಾನೇ ಮಾಡಿದ್ದೆಂದು ಸುಳ್ಳುಹೇಳಿಕೊಂಡು ತಿರುಗುವ ಸಿದ್ದರಾಮಯ್ಯನವರ ಚಾಳಿ ಹೊಸತೇನಲ್ಲ. ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಕರ್ನಾಟಕದ ಜನರಿಗೆ ಉಚಿತ ಪಡಿತರ ನೀಡುತ್ತಿದ್ದ ಸಂದರ್ಭದಲ್ಲಿ ಒಂದು ೨೯ ರುಪಾಯಿಗೆ ಕೆ.ಜಿ ಅಕ್ಕಿ ಕೊಟ್ಟಿದ್ದು ಕೇಂದ್ರ ಸರಕಾರ. ಕೇವಲ ೩ ರುಪಾಯಿ ಕೊಟ್ಟಿದ್ದು ಸಿದ್ದು ನೇತೃತ್ವದ ರಾಜ್ಯ ಸರಕಾರ. ಶೇ.೯೦ ಹಣ ಕೊಟ್ಟಂತಹ ನರೇಂದ್ರ ಮೋದಿಯವರ ಫೋಟೋ ಅಕ್ಕಿ ಚೀಲದ ಮೇಲಿಲ್ಲ. ಮೂರು ರುಪಾಯಿ ಕೊಟ್ಟಂತಹ ಸಿದ್ದರಾಮಯ್ಯನ ಫೋಟೋ ಅಕ್ಕಿ ಚೀಲದ ಮೇಲೆ ರಾರಾಜಿಸುತ್ತಿತ್ತು.

ಮಾತುಮಾತಿಗೂ ‘ನಾನು ಅಕ್ಕಿ ಕೊಟ್ಟೆ’ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುತ್ತಾರೆ. ತಾವು ಮಾಡದಿರುವ ಕೆಲಸದ ಬಗ್ಗೆ ಈ ಮಟ್ಟದ ಪ್ರಚಾರ ಗಿಟ್ಟಿಸುವ ಸಿದ್ದರಾಮಯ್ಯನಿಂದ ಮತ್ತೇ ನನ್ನು ನಿರೀಕ್ಷಿಸಲು ಸಾಧ್ಯ? ಮತ್ತೊಂದು ಸುತ್ತಿನ ಸುಳ್ಳಿನ ಮೂಲಕ ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿಯ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವ ಸಿದ್ದರಾಮಯ್ಯ, ಮೈಸೂರು ಮಹಾರಾಜರ ನೂರಾರು ಎಕರೆ ಆಸ್ತಿಯ ಮೇಲೆ ತಾನು ಉಪಮುಖ್ಯ ಮಂತ್ರಿಯಾಗಿದ್ದಾಗ ಕಣ್ಣು ಹಾಕಿದನ್ನು ಮರೆತಂತಿದೆ. ಮೈಸೂರು ಮಹಾರಾಜರನ್ನು ಏಕವಚನದಲ್ಲಿ ಸಂಭೋದಿಸಿ ತನ್ನನ್ನು ತಾನು ಶ್ರೇಷ್ಠರಲ್ಲಿ ಅತಿ ಶ್ರೇಷ್ಠನೆಂದು ತನ್ನ ಕಾರ್ಯಕರ್ತರ ಮುಂದೆ ಹೇಳಿಕೊಂಡದ್ದರು. ಅಭಿವೃದ್ಧಿಯ ಹರಿಕಾರರಾದಂತಹ ಮೈಸೂರು ಒಡೆಯರ್‌ರ ಹಾದಿಯಲ್ಲಿ ಬೆಂಗಳೂರು ಮತ್ತು ಮೈಸೂರಿನ ನಡುವೆ ದಶಪಥ ಹೆದ್ದಾರಿ ಲೋಕಾರ್ಪಣೆಗೊಳ್ಳುತ್ತಿದೆ.

ಡಿಪಿಆರ್ ಯಾರು ಬೇಕಾದರೂ ಮಾಡಬಹುದು. ಆದರೆ ನಂತರ ಅದಕ್ಕೆ ಸಹಿ ಹಾಕಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿ ಕೇಂದ್ರ ಸರಕಾರ ದಿಂದ ಹಣ ಬಿಡುಗಡೆ ಮಾಡಿಸಿ ಉತ್ತಮ ಗುತ್ತಿಗೆದಾರರನ್ನು ಗುರುತಿಸಿ, ಅವರಿಂದ ಕೆಲಸ ಮಾಡಿಸುವುದು ನಿಜವಾದ ಅಭಿವೃದ್ಧಿ. ಪ್ರತಾಪ್ ಸಿಂಹ ದಶಪಥ ಹೆzರಿ ಘೋಷಣೆಯಾದ ಮೊದಲ ದಿನದಿಂದಲೇ ತನ್ನ ಕಾಲಿಗೆ ಚಕ್ರ ಕಟ್ಟಿಕೊಂಡು ಕಚೇರಿಗಳಿಗೆ ಅಲೆದಾಡಿ ಹಗಲೂ ರಾತ್ರಿಯೆನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಕಳೆದ ವರ್ಷ ಹೆದ್ದಾರಿಯ ಮೇಲೆ ಮಳೆ ನೀರು ನಿಂತಾಗ ಪ್ರತಾಪ್ ಸಿಂಹರ ಮೇಲೆ ಸಂಸದ ಡಿ.ಕೆ.ಸುರೇಶ್ ಮುಗಿಬಿದ್ದಿದ್ದರು. ತಮ್ಮ ತಟ್ಟೆಯಲ್ಲಿ ಹೆಗ್ಗಣ್ಣ ಬಿದ್ದಿದ್ದರೂ ಇತ್ತ ಇವರ ತಟ್ಟೆಯಲ್ಲಿ ನೊಣ ಹುಡುಕಿದ್ದರು.

ತಮ್ಮ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರು ಮತ್ತು ಕನಕಪುರಕ್ಕೆ ೪೦ ಕಿಲೋಮೀಟರು ಉದ್ದದ ಚತುಷ್ಪಥ ರಸ್ತೆ ನಿರ್ಮಾಣ  ಸಂಪೂರ್ಣ ಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ. ಮೂರು ಬಾರಿ ಸಚಿವರಾಗಿದ್ದಂತಹ ಡಿ.ಕೆ.ಶಿವಕುಮಾರ್‌ಗೆ ಕನಿಷ್ಠ ತನ್ನ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಲಿಲ್ಲ. ೨೦೧೩ ರಿಂದ ೨೦೧೮ ರ ನಡುವೆ ಐದು ವರ್ಷಗಳ ಅವರದ್ದೇ ಪಕ್ಷದ ಆಡಳಿತವಿತ್ತು, ನಂತರ ಕುಮಾರ ಸ್ವಾಮಿಯವರ ಜತೆಗೂಡಿ ೧೪ ತಿಂಗಳು ಅಧಿಕಾರ ಮಾಡಿದರು. ಆಗಲೂ ಮಾಡಲಾಗಲಿಲ್ಲ, ಮಾಡಬೇಕೆಂಬ ಇಚ್ಛಾಶಕ್ತಿ ಇದ್ದಿದ್ದರೆ ಕನಕಪುರ ರಸ್ತೆ ಎಂದೋ ಸಂಪೂರ್ಣವಾಗುತ್ತಿತ್ತು. ಪ್ರತಾಪ್ ಸಿಂಹರ ಇಚ್ಛಾಶಕ್ತಿ ಮತ್ತು ಶ್ರದ್ಧೆಯ ಫಲವಾಗಿ ಗುದ್ದಲಿಪೂಜೆಯಾದ ಐದೇ ವರ್ಷಗಳಲ್ಲಿ ಬೆಂಗಳೂರು ಮೈಸೂರು ನಡುವಣ ೧೧೭ ಕಿಲೋಮೀಟರ್ ಉದ್ದದ ದಶಪಥ ರಸ್ತೆ ಲೋಕಾರ್ಪಣೆಯಾಗುತ್ತಿದೆ.

ಜಾತ್ಯತೀತ ಜನತಾದಳದ್ದು ಮತ್ತೊಂದು ರೀತಿಯ ನಾಟಕ, ದೇವೇಗೌಡರು 1996ರಲ್ಲಿ ಪ್ರಧಾನಮಂತ್ರಿಯಾಗಿದ್ದಾಗ ಗುದ್ದಲಿಪೂಜೆ ಮಾಡಿದ್ದ ‘ಬೋಗಿ ಬಿಲ್’ ಸೇತುವೆಯನ್ನು ಸಂಪೂರ್ಣಗೊಳಿಸಲು ಮೋದಿ ಸರಕಾರವೇ ಬರಬೇಕಾಯಿತು. ಗುದ್ದಲಿಪೂಜೆ ಮಾಡಿದ್ದನ್ನೇ ಅಭಿವೃದ್ದಿಯೆಂದುಕೊಳ್ಳುವ ಜಾತ್ಯತೀತ ಹೆಸರಿನ ಪಕ್ಷವಿದು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಚಿನ್ನದ ರಸ್ತೆಗಳೇ ಕಾಣಿಸುತ್ತಿಲ್ಲವೆಂದು ಟೀಕಿಸುತ್ತಿದ್ದವರಿಗೆ ಕಪಾಳ ಮೋಕ್ಷ
ಮಾಡಿದಂತಿದೆ ಮೈಸೂರು ಬೆಂಗಳೂರು ದಶಪಥ ರಸ್ತೆ.

ಭಾರತದಾದ್ಯಂತ ಪ್ರತಿನಿತ್ಯ ಸುಮಾರು ೬೮ ಕಿಲೋಮೀಟರಿನಷ್ಟು ರಸ್ತೆಗಳು ಸಿದ್ಧವಾಗುತ್ತಿವೆ. ಅಮೆರಿಕದಲ್ಲಿ ಒಂದು ಮಾತಿದೆ ’’Americans are rich because American Roads are Rich’, ಒಂದು ದೇಶದ ಪ್ರಗತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆಗಳು, ರೈಲುಗಳು ಮತ್ತು ವಿಮಾನ ನಿಲ್ದಾಣಗಳು ಹೆಚ್ಚೆಚ್ಚು ಅಭಿವೃದ್ಧಿಯಾದಲ್ಲಿ ಮಾತ್ರ ದೇಶದ ಆರ್ಥಿಕತೆ ಮುಂದುವರೆಯಲು ಸಾಧ್ಯ. ಪ್ರತಾಪ್ ಸಿಂಹ ಸಂಸದರಾದ ನಂತರ ಬೆಂಗಳೂರಿಗೆ ಬರುತ್ತಿದ್ದಂತಹ ಬಹುತೇಕ ರೈಲುಗಳನ್ನು ಮೈಸೂರಿನವರೆಗೂ ವಿಸ್ತರಿಸಿ ಪ್ರತಿನಿತ್ಯ ಮೈಸೂರು ಮತ್ತು ಬೆಂಗಳೂರಿಗೆ ಓಡಾಡುವ ಕೆಲಸಗಾರರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣವನ್ನು ಉನ್ನತ ದರ್ಜೆಗೇರಿಸಲು ದೊಡ್ಡ ಯೋಜನೆಯನ್ನೇ ಸಿದ್ಧಪಡಿಸಿದ್ದಾರೆ. ವಿಮಾನ ನಿಲ್ದಾಣದ ರನ್ ವೇವಿಸ್ತರಿಸಲು ಈಗಾಗಲೇ ಸರಕಾರದ ಹಿಂದೆ ಬಿದ್ದಿರುವ ಪ್ರತಾಪ್ ಸಿಂಹ, ಬೇಕಿರುವ ಅನುಮೋದನೆಯನ್ನೂ ಪಡೆದಿದ್ದಾರೆ. ಮೈಸೂರು ಭಾಗದಿಂದ ಬಂದಿರುವ ಸಿದ್ದರಾಮಮಯ್ಯನೆಂಬ ಸೋದರಮಾವ ಒಂದು ದಿನವೂ ಮೈಸೂರನ್ನು ಅಭಿವೃದ್ಧಿಪಡಿಸಲು ಈ ಮಟ್ಟದ ಶ್ರಮ ಪಟ್ಟಿರುವುದನ್ನು ರಾಜ್ಯದ ಜನ ನೋಡಿಲ್ಲ. ಕೇವಲ ಘೋಷಣೆಗಳನ್ನೇ ಅಭಿವೃದ್ಧಿಯೆಂದುಕೊಂಡು ಅನುಷ್ಠಾನಗೊಂಡ ಬಳಿಕ ತಮಟೆ ಬಾರಿಸಲು ಬರುತ್ತಿರುವುದನ್ನು ರಾಜ್ಯದ ಜನ ಗಮನಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಹೇಳಿದ ಹಾಗೆ ಸಿದ್ದರಾಮಯ್ಯ ತಮ್ಮ ಕುಟುಂಬದವರ ಜತೆ ಜಾಲಿ ರೈಡ್ ಮಾಡಲಷ್ಟೇ ಬೆಂಗಳೂರು ಮತ್ತು ಮೈಸೂರು ದಶಪಥ
ರಸ್ತೆಗಿಳಿಯಬೇಕು.