ಸಾಧನಾಪಥ
ಪಿಯೂಷ್ ಗೋಯಲ್
ಉತ್ಪಾದನೆಯಲ್ಲಿ ‘ಶೂನ್ಯ ದೋಷ, ಶೂನ್ಯ ಪರಿಣಾಮ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಅನುಗುಣವಾಗಿ ಭಾರತವು ಅತ್ಯುನ್ನತ ಜಾಗತಿಕ ಗುಣಮಟ್ಟಕ್ಕೆ ತಕ್ಕಂತಿರುವ ಅತ್ಯುತ್ತಮ ಉತ್ಪನ್ನಗಳನ್ನು ಪೂರೈಸುವಲ್ಲಿ ವಿಶ್ವ ನಾಯಕನಾಗುವ ಗುರಿ ಹೊಂದಿದೆ.
೨೦೪೭ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಧಾನ ಮಂತ್ರಿ ಅವರ ಉದ್ದೇಶದ ಪ್ರಮುಖ ಭಾಗವೆಂದರೆ ಸ್ಪರ್ಧಾತ್ಮಕ ದರಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಕೆ ಮಾಡುವುದಾಗಿದೆ. ಸರಕಾರವು ‘ಮೇಕ್ ಇನ್ ಇಂಡಿಯಾ’ (ಭಾರತದಲ್ಲೇ ತಯಾರಿಸಿ) ಬ್ರಾಂಡ್, ಭಾರತೀಯ ಮತ್ತು ವಿದೇಶಿ ಗ್ರಾಹಕರನ್ನು ಸಂತುಷ್ಟ ಪಡಿಸುವ ಗುಣಮಟ್ಟದ ಮುದ್ರೆಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ದಿಟ್ಟ ಕ್ರಮ ಗಳನ್ನು ಕೈಗೊಳ್ಳುತ್ತಿದೆ.
ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಗಳಲ್ಲಿ ಸಮತೋಲನ ಕಾಯ್ದುಕೊಂಡಾಗ ಲಾಭ ದಾಯಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಬಹುದು ಎಂದು ಪ್ರಧಾನಿ ಒತ್ತಿಹೇಳಿದ್ದರು. ಈ ಕಾರ್ಯತಂತ್ರದ ಪ್ರಮುಖ ಆದ್ಯತೆ ಗುಣಮಟ್ಟ ನಿಯಂತ್ರಣ ಆದೇಶಗಳು (ಕ್ಯೂಸಿಒಗಳು) ಆಗಿದ್ದು, ಇದು ನಿರ್ದಿಷ್ಟಪಡಿಸಿದ ಉತ್ಪನ್ನಗಳು ಭಾರತೀಯ ಮಾನಕ ಬ್ಯೂರೋದ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ನಿಗದಿತ ಮಾನದಂಡಗಳಿಗೆ ಅನುಗುಣವಾಗಿರ ಬೇಕೆಂದು ನಿರ್ದಿಷ್ಟಪಡಿಸಿದೆ. ಇದು ಗ್ರಾಹಕರಿಗೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆಯಿರುವ ವಿಶ್ವಾಸಾರ್ಹ ಮತ್ತು ಸುರಕ್ಷಿತ ಮತ್ತು ಉತ್ತಮ-ಗುಣಮಟ್ಟದ ಉತ್ಪನ್ನಗಳ ಭರವಸೆ ಹೊಂದಿರುವ ವಿವೇಚನಾಶೀಲ ಗ್ರಾಹಕರೊಂದಿಗೆ ಮಾಡುವ ವ್ಯವಹಾರ ಗಳಿಗೆ ವರದಾನವಾಗಿದೆ.
ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಉಪಕ್ರಮ ಭಾರತದ ೧೪೦ ಕೋಟಿ ಜನರಿಗೆ ವಿಶ್ವದ ಜತೆಗೆ ಸಂಪರ್ಕ ಹೊಂದಲು ಮತ್ತು ಉತ್ತಮ ಉತ್ಪನ್ನಗಳು ಹಾಗೂ ರೂಢಿಗತ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗಿದೆ. ಅಂದರೆ ನಿಯತವಾಗಿ ಉತ್ಪನ್ನಗಳನ್ನು ಖರೀದಿಸುವುದಕ್ಕೂ ಮುನ್ನ ಅವುಗಳ ಸಾಧನೆ, ಬಾಳಿಕೆ ಮತ್ತು ಅವಲಂಬನೆಯನ್ನು ಪರಿಶೀಲಿಸಲಾಗುತ್ತದೆ. ಯಾವ ಉತ್ಪನ್ನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಲಾಗಿದೆಯೋ ಅವುಗಳ ದೋಷಗಳು ಅಥವಾ ನೂನ್ಯತೆಗಳನ್ನು ಸಾರ್ವಜನಿಕವಾಗಿ ತಿಳಿಸಲಾಗುವುದು. ಆದ್ದರಿಂದ ಉತ್ಪನ್ನಗಳ ಗುಣಮಟ್ಟ, ಬೆಲೆ ಮತ್ತು ನಾವೀನ್ಯದ ಮೇಲೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ತುರ್ತು ಅಗತ್ಯ ಮತ್ತು ಸಕಾಲಿಕವಾಗಿದೆ.
ಮೋದಿ ಅವರ ಸರಕಾರವು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಲು ಮತ್ತು ಭಾರತೀಯ ಉತ್ಪನ್ನಗಳ ರ-
ಉತ್ತೇಜಿಸಲು ಉತ್ಕೃಷ್ಟ ಗುಣಮಟ್ಟದ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ೨೦೧೪ಕ್ಕೂ ಮುನ್ನ ೧೦೬ ಉತ್ಪನ್ನ ಗಳಿಗೆ ಕೇವಲ ೧೪ ಕ್ಯೂಸಿಒಗಳು (ಗುಣಮಟ್ಟ ನಿಯಂತ್ರಣ ಕಚೇರಿಗಳು) ಇದ್ದವು. ಇದೀಗ ಆ ಪಟ್ಟಿಯನ್ನು ೬೫೩ ಉತ್ಪನ್ನಗಳಿಗೆ ೧೪೮ ಕ್ಯೂಸಿಒಗಳಿಗೆ ವಿಸ್ತರಿಸಲಾಗಿದೆ. ಇದರಲ್ಲಿ ಹವಾನಿಯಂತ್ರಣ ಯಂತ್ರಗಳಂಥ ಗೃಹೋಪಯೋಗಿ ವಸ್ತುಗಳು, ಆಟಿಕೆಗಳು ಮತ್ತು ಪಾದರಕ್ಷೆ ಕೂಡ ಸೇರಿವೆ.
ರಫ್ತಿನಲ್ಲಿ ಗುಣಮಟ್ಟ ನಿಯಂತ್ರಣ: ಕ್ಯೂಸಿಒಗಳು ‘ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್’ ಧ್ಯೇಯವನ್ನು ವೇಗಗೊಳಿಸಿವೆ. ಕ್ಯೂಸಿಒಗಳ ಅಡಿಯಲ್ಲಿ ಅನೇಕ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಎರಕ ಹೊಯ್ದ ಕಬ್ಬಿಣದ ಉತ್ಪನ್ನಗಳು, ಸೌರ ಡಿಸಿ ಕೇಬಲ್‌ಗಳು, ಬಾಗಿಲುಗಳ ಫಿಟ್ಟಿಂಗ್‌ಗಳು, ಸೀಲಿಂಗ್ ಫ್ಯಾನ್‌ಗಳು, ಹೆಲ್ಮೆಟ್‌ಗಳು, ಸ್ಮಾರ್ಟ್ ಮೀಟರ್‌ಗಳು, ಹಿಂಜ್ ಗಳು, ಏರ್ ಕೂಲರ್‌ಗಳು ಮತ್ತು ಏರ್ ಫಿಲ್ಟರ್ ಗಳು ಗುಣಮಟ್ಟ-ನಿಯಂತ್ರಿತ ಉತ್ಪನ್ನಗಳಾಗಿದ್ದು, ಅವುಗಳನ್ನು ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ.
ಕ್ಯೂಸಿಒಗಳಿಂದ ಅನುಮೋದಿಸಿದ ಎರಕಹೊಯ್ದ ಕಬ್ಬಿಣದ ಉತ್ಪನ್ನಗಳು ಕಳೆದ ವರ್ಷ ೫೩೫ ಮಿಲಿಯನ್ ಡಾಲರ್ ಮೌಲ್ಯದ ರಫ್ತುಗಳನ್ನು ಹೊಂದಿದ್ದವು, ಆದರೆ ಆಮದುಗಳ ಮೌಲ್ಯವು ಕೇವಲ ೬೮ ಮಿಲಿಯನ್ ಡಾಲರ್‌ನಷ್ಟಿತ್ತು. ಸುಮಾರು ೨೫ ಕ್ಯೂಒಸಿಗಳ ರಫ್ತುಗಳು, ಆಮದುಗಳನ್ನು ಮೀರಿದ ಉತ್ಪನ್ನಗಳನ್ನು ಹೊಂದಿವೆ. ಇದು ಕ್ಯೂಸಿಒಗಳು ಭಾರತದಲ್ಲಿ ದೃಢವಾದ ಗುಣಮಟ್ಟದ ಪ್ರಜ್ಞೆಯನ್ನು ಮೂಡಿಸುವಲ್ಲಿ ಹೆಚ್ಚಿನ ಗಮನ ಹರಿಸುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಕಳಪೆ ಗುಣಮಟ್ಟದ ಸರಕುಗಳನ್ನು ದೇಶಕ್ಕೆ ತಂದು ಸುರಿಯುವುದನ್ನು (ಡಂಪ್ ಮಾಡುವು ದನ್ನು) ತಗ್ಗಿಸಲು ಸಹಾಯ ಮಾಡುತ್ತದೆ.
ನಮ್ಮ ಅಮೃತಕಾಲದಲ್ಲಿ ಉತ್ತಮ ಗುಣಮಟ್ಟದ ಸರಕುಗಳ ಲಭ್ಯತೆಯು ಪ್ರತಿಯೊಬ್ಬ ಭಾರತೀಯ ನಾಗರಿಕನ ಹಕ್ಕಾಗಿದೆ. ಕ್ಯೂಸಿಒಗಳು ಜನರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದಲೂ ಅತ್ಯಂತ ನಿರ್ಣಾಯಕವಾಗಿವೆ. ಅಗ್ಗದ ಇಲೆಕ್ಟ್ರಾನಿಕ್ ಉತ್ಪನ್ನಗಳಿಂದ ಉಂಟಾಗುವ ಬೆಂಕಿ, ಆಟಿಕೆಗ ಳಲ್ಲಿನ ವಿಷಕಾರಿ ರಾಸಾಯನಿಕ ಗಳು ಮತ್ತು ವಿದ್ಯುತ್ ಶಾರ್ಟ್-ಸರ್ಕಿಟ್ ಗಳಿಂದಾಗಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವುದು ಮುಂತಾದ ಅಪಾಯಗಳ ಕಾರಣದಿಂದಾಗಿ ಕಡಿಮೆ-ಗುಣಮಟ್ಟದ ಉತ್ಪನ್ನಗಳು ಮನೆಗಳಿಗೆ ಅತ್ಯಂತ ಅಪಾಯ ಉಂಟುಮಾಡಬಹುದು.
ಪ್ರಕಾಶಿಸುತ್ತಿರುವ ನಿದರ್ಶನ: ಗ್ರಾಹಕರು ಮತ್ತು ತಯಾರಕರಿಗೆ ಸಹಕರಿಸಲು ಹೇಗೆ ಗುಣಮಟ್ಟ ನಿಯಂತ್ರಣವು ನಾಟಕೀಯ ವಾಗಿ ಗುಣಮಟ್ಟದ
ಉತ್ಪಾದನೆಯನ್ನು ಮೇಲ್ದ ರ್ಜೆಗೇರಿಸುತ್ತದೆ ಎಂಬುದಕ್ಕೆ ಒಂದು ಉಜ್ವಲ ಉದಾಹರಣೆ ಎಂದರೆ ಆಟಿಕೆಗಳ ಉದ್ಯಮ. ಈ ಕ್ಯೂಸಿಒ ಜಾರಿಗೆ ಮೊದಲು, ಭಾರತೀಯ ಆಟಿಕೆ ಮಾರುಕಟ್ಟೆಯು ಅಗ್ಗದ, ಕಡಿಮೆ-ಗುಣಮಟ್ಟದ ಉತ್ಪನ್ನಗಳಿಂದ ತೊಂದರೆ ಅನುಭವಿಸುತ್ತಿತ್ತು. ೨೦೧೯ರಲ್ಲಿ ಭಾರತೀಯ ಗುಣಮಟ್ಟ ನಿಯಂತ್ರಣ ಮಂಡಳಿ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ- ಕ್ಯೂಸಿಐ) ನಡೆಸಿದ ಸಮೀಕ್ಷೆಯು ಕೇವಲ ಮೂರನೇ ಒಂದು ಭಾಗದಷ್ಟು ಆಟಿಕೆಗಳು ಸಂಬಂಧಿತ ಬಿಐಎಸ್ ಮಾನದಂಡಗಳಿಗೆ ಬದ್ಧವಾಗಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಮಕ್ಕಳಿಗೆ ಅಪಾಯಕಾರಿ ಎಂಬ ಅಂಶವನ್ನು ತಿಳಿಸಿತ್ತು.
ಆದರೆ ೨೦೨೧ರ ಜನವರಿ ೧ರಿಂದ ವಲಯಕ್ಕೆ ಕ್ಯೂಸಿಐನೊಂದಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಮೋದಿ ಸರಕಾರ ಇದು ಸಂಪೂರ್ಣ ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು. ಇದು ಭಾರತದಲ್ಲಿ ಆಟಿಕೆಗಳ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಿದೆ. ಇತ್ತೀಚಿನ ಸಮೀಕ್ಷೆಯೊಂದು ಭಾರತೀಯ ಮಾರು ಕಟ್ಟೆಯಲ್ಲಿ ಶೇ.೮೪ರಷ್ಟು ಆಟಿಕೆಗಳು ಬಿಐಎಸ್ ಮಾನ ದಂಡಗಳಿಗೆ ಬದ್ಧವಾಗಿದೆ ಎಂದು ತೋರಿಸಿದೆ. ಕ್ಯೂಸಿಒ ಭಾರತೀಯ ಮಕ್ಕಳಿಗೆ ಸುರಕ್ಷಿತ,
ಉತ್ತಮ ಗುಣಮಟ್ಟದ ಆಟಿಕೆಗಳನ್ನು ಒದಗಿಸಿದೆ, ಆದರೆ ೨೦೧೮-೧೯ಕ್ಕೆ ಹೋಲಿಸಿದರೆ ೨೦೨೨-೨೩ ರಲ್ಲಿ ಅವುಗಳ ರಫ್ತು ಪ್ರಮಾಣ ಶೇ.೬೦ಕ್ಕೆ ಹೆಚ್ಚಳ ವಾಗಿದೆ.
ಗ್ರಾಹಕರ ಪಾಲಿಗೆ ದೀರ್ಘಕಾಲ ಬಾಳಿಕೆ ಬರುವ ವಸ್ತುಗಳು ಮತ್ತು ಇತರ ಗೃಹೋಪಯೋಗಿ ಉತ್ಪನ್ನಗಳ ಮೇಲೆ ಹಲವು ಗುಣಮಟ್ಟದ ಮಾನದಂಡ ಗಳನ್ನು ಜಾರಿಗೊಳಿಸಲಾಗಿದೆ. ಅವುಗಳಲ್ಲಿ ಸ್ಮಾರ್ಟ್ ಮೀಟರ್‌ಗಳು, ಬೋಲ್ಟ್‌ಗಳು, ನಟ್‌ಗಳು ಮತ್ತು ಫಾಸ್ಟೆನರ್ ಗಳು, ಸೀಲಿಂಗ್ ಫ್ಯಾನ್‌ಗಳು, ಅಗ್ನಿಶಾಮಕ ಸಾಧನಗಳು, ಅಡುಗೆ ಪಾತ್ರೆಗಳು, ನೀರಿನ ಬಾಟಲಿಗಳು, ಪೈಪ್ಡ್ ನ್ಯಾಚುರಲ್ ಗ್ಯಾಸ್ ನೊಂದಿಗೆ ಬಳಸಲು ಗೃಹಬಳಕೆಯ ಗ್ಯಾಸ್ ಸ್ಟವ್
ಗಳು, ಮರ-ಆಧಾರಿತ ಬೋರ್ಡ್‌ಗಳು, ಇನ್ಸುಲೇಟೆಡ್ -ಸ್ಕ್ ಮತ್ತು ಇನ್ಸುಲೇಟೆಡ್ ಕಂಟೈನರ್‌ಗಳು ಸೇರಿವೆ.
ಕ್ಯೂಸಿಒಗಳನ್ನು ಕಾರ್ಯಾಚರಣೆಗೊಳಿಸುವ ಮೊದಲು ಅವರ ಸ್ಪಂದನೆ, ತಾಂತ್ರಿಕ ಮಾಹಿತಿ ಮತ್ತು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಉದ್ಯಮ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಾಲುದಾರರನ್ನೂ ಸರಕಾರವು ಸಂಪರ್ಕಿಸುತ್ತದೆ. ಸೂಕ್ಷ್ಮ ಮತ್ತು ಸಣ್ಣ ಘಟಕಗಳಿಗೆ ದೀರ್ಘ ಪರಿವರ್ತನೆಯ ಅವಧಿಯನ್ನು ನೀಡುವ ಮೂಲಕ ಅವುಗಳ ಹಿತಾಸಕ್ತಿಯನ್ನು ರಕ್ಷಿಸಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ.
ಉದ್ಯಮವು ಹೆಚ್ಚು ಸ್ಪರ್ಧಾತ್ಮಕವಾಗಲು ಸಹಾಯ ಮಾಡಲು ಮತ್ತು ಗುಣಮಟ್ಟವನ್ನು ಸುಧಾರಿಸಲು ಬಯಸುವ ತಯಾರಕರನ್ನು ಬೆಂಬಲಿಸಲು ಸರಕಾರ ಸದಾ ಸಿದ್ಧವಾಗಿದೆ ಗುಣಮಟ್ಟದ ಉತ್ಪನ್ನಗಳು: ಉತ್ಪನ್ನಗಳನ್ನು ಜಾಗತಿಕ ಗುಣಮಟ್ಟಕ್ಕೆ ಮೇಲ್ದ ರ್ಜೆಗೇರಿಸುವ (ಅಪ್‌ಗ್ರೇಡ್) ಪ್ರಕ್ರಿಯೆಯು ೧೪೦ ಕೋಟಿ ಭಾರತೀಯರ ಕುಟುಂಬದ ಜೀವನದ ಗುಣ ಮಟ್ಟವನ್ನು ಸುಧಾರಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಯ ಭಾಗವಾಗಿದೆ. ಮೂಲ
ಭೂತ ಅವಶ್ಯಕತೆಗಳಾದ ಅನ್ನ-ಬಟ್ಟೆ-ವಸತಿಯ ಜತೆಗೆ ಆರೋಗ್ಯ ರಕ್ಷಣೆ ಮತ್ತು ಉನ್ನತ ಮೂಲ ಸೌಕರ್ಯಗಳನ್ನು ಒದಗಿಸುವ ನಿರ್ಣಾಯಕ ದಿಟ್ಟ ನಿರ್ಧಾರಗಳ ಸರಣಿಯೊಂದಿಗೆ ಅವರು ಆಕಾಂಕ್ಷೆಗಳಿಗೆ ಸ್ಪಂದಿಸಿದ್ದಾರೆ.
ಅವರ ಸಹಾನುಭೂತಿ, ಭ್ರಷ್ಟಾಚಾರ ಮುಕ್ತ ಆಡಳಿತವು ದೇಶದ ಬೆಳವಣಿಗೆಯನ್ನು ವೇಗಗೊಳಿಸಿದೆ, ಹಣದುಬ್ಬರವು ತಗ್ಗುವಂತೆ ಮಾಡಿದೆ ಮತ್ತು ಭಾರತ ವನ್ನು ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು ೧೩.೫ ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ.
(ಲೇಖಕರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ,
ಗ್ರಾಹಕ ವ್ಯವಹಾರಗಳ ಖಾತೆಯ ಸಚಿವರು)