ಶ್ವೇತಪತ್ರ
shwethabc@gmail.com
ಸಾಮಾಜಿಕ ಮಾಧ್ಯಮದ ಲೈಕ್ ಶೇರ್ ಕಾಮೆಂಟ್‌ಗಳು ನಮ್ಮಲ್ಲಿ ನಾವೆಲ್ಲರೂ ಒಂದೇ ಎಂಬ ಆತ್ಮೀಯ ಭಾವವನ್ನು ಒಡಮೂಡಿಸುತ್ತವೆ. ಸಾಮಾಜಿಕ ಮಾಧ್ಯಮ ನಮ್ಮದೇ ಆಸಕ್ತಿ ಯುಳ್ಳ ಅನೇಕರೊಂದಿಗೆ ನಮ್ಮನ್ನು ಬೆಸೆಯುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ವರದಿಯ ಪ್ರಕಾರ ಸಾಮಾಜಿಕ ಮಾಧ್ಯಮ ನಮ್ಮಲ್ಲಿನ ಒಂಟಿತನಕ್ಕೆ ಮದ್ದಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಕಾಣ ಸಿಗುವ ಎಲ್ಲದಕ್ಕೂ ನೀವು ಲೈಕ್ ಒತ್ತುತ್ತಾ ಹೋದರೆ ಏನಾಗಬಹುದು? ಇದಕ್ಕೆ ಉತ್ತರವನ್ನು ಸ್ನೇಹಿತರೊಬ್ಬರು
ನೀಡುತ್ತಿದ್ದರು. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕುತ್ತಿದ್ದ ಫೋಟೋ ಹಾಗೂ ಅದರೊಟ್ಟಿಗೆ ಒಂದು ಕತೆಯನ್ನು ಜನ ಇಷ್ಟ ಪಡತೊಡಗಿ ದರಂತೆ.
ಕ್ರಮೇಣ ಅವರನ್ನು ಫಾಲೋ ಮಾಡುವವರ ಸಂಖ್ಯೆ (ಇನ್ಸ್ಟಾಗ್ರಾಮ್ ಖಾತೆಯಲ್ಲಿ) ದಿನಕ್ಕೆ ೩೦ರಂತೆ ಬೆಳೆಯುತ್ತಾ ಹೋಯಿತು. ಅವರನ್ನು ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿತ್ತು, ರಸ್ತೆಯಲ್ಲಿ ಜನ ಅವರನ್ನು ಗುರುತಿಸತೊಡಗಿದರು. ಸ್ನೇಹಿತರಿಂದ ಇನ್ನು ಅನೇಕ ಉತ್ತಮ ವಿಡಿಯೋ ಗಳನ್ನು ಮಾಡಲು ಪ್ರೋತ್ಸಾಹ ಬರುತ್ತಿತ್ತು.
ಈ ಹೊತ್ತು ಎಲ್ಲರಿಗೂ ಏನೋ ಹೊಸತು ಬೇಕು ಎನ್ನುವ ಹಾತೊರೆಯುವಿಕೆ. ಸಾಮಾಜಿಕ ಮಾಧ್ಯಮದಲ್ಲಿ ನಾವು ನೋಡುವ ವಿಡಿಯೋ ರೀಲ್ಸ್, ಶಾಟ್ಸ್
ಗಳಿಗೆ ಲೈಕು, ಕಮೆಂಟ್‌ಗಳ ರೂಪದಲ್ಲಿರುವ ನಮ್ಮ ಪ್ರತಿಕ್ರಿಯೆ ಅಷ್ಟೊಂದು ಮಹತ್ವವೆನಿಸದಿದ್ದರೂ, ಮುಖ್ಯ ಪಾತ್ರವನ್ನಂತೂ ವಹಿಸುತ್ತವೆ. ಸಾಮಾ ಜಿಕ ಮಾಧ್ಯಮದ ಜತೆಗಿನ ನಮ್ಮ ಒಡನಾಟ ಮನುಷ್ಯರಾಗಿ ನಮ್ಮ ಚಟ, ಆಸೆ, ಆತಂಕ ಹಾಗೂ ಖುಷಿಯ ಅಂಶಗಳೇ ಆಗಿರುತ್ತವೆ.
? ಅಷ್ಟಕ್ಕೂ ಸಾಮಾಜಿಕ ಮಾಧ್ಯಮದ ಹಿಂದಿರುವ ಬಯಾಲಜಿ ಏನು
ಸಾಮಾಜಿಕ ಮಾಧ್ಯಮಕ್ಕೆ ನಮ್ಮ ಅಂಟಿಕೊಳ್ಳುವಿಕೆಯ ಹಿಂದಿರುವ ಎರಡು ಮುಖ್ಯ ರಾಸಾಯನಿಕ ಅಂಶಗಳೆಂದರೆ ಡೋಪಮೈನ್ ಮತ್ತು ಆಕ್ಸಿಟೋ
ಸಿನ್. ಇಷ್ಟು ದಿನ ಡೋಪಮೈನ್ ಒಂದು ‘ಪ್ಲೆಶರ್ ಕೆಮಿಕಲ್’ ಎಂದು ನಂಬಿzವು. ಆದರೆ ಈಗ ನಮಗೆ ಗೊತ್ತಾಗಿರುವುದೇನೆಂದರೆ ಡೋಪಮೈನ್ ನಮ್ಮಲ್ಲಿ,
‘ಬೇಕು’ ಎನ್ನುವ ಮನೋಭಾವವನ್ನು ಸೃಜಿಸುವ ಒಂದು ಮುಖ್ಯ ಹಾರ್ಮೋನು. ನಮ್ಮ ಆಸೆ, ಹುಡುಕಾಟ, ಅನ್ವೇಷಣೆ ಎಲ್ಲವಕ್ಕೂ ಇದು ಮುಖ್ಯ ಕಾರಣ. ಡೋಪಮೈನ್ ಪ್ರಭಾವ ಎಷ್ಟಿರುತ್ತದೆಂದರೆ ಜನ ಸಿಗರೇಟ್ ಸೇದುವುದನ್ನು ಬೇಕಾದರೂ ತಡೆ ಹಿಡಿದಾರು ಆದರೆ, ಫೇಸ್‌ಬುಕ್‌ಗೆ ಪ್ರತಿಕ್ರಿಯಿಸುವು
ದನ್ನಲ್ಲ ಎನ್ನುವುದನ್ನು ಅಧ್ಯಯನಗಳೇ ದೃಢಪಡಿಸಿವೆ.
ಇನ್ನೂ ಆಕ್ಸಿಟೋಸಿನ್. ಇದನ್ನು ‘ಕಡಲ್ ಕೆಮಿಕಲ್’ ಎನ್ನಲಾಗುತ್ತದೆ. ಮುದ್ದು ಮಾಡುವ ಕೆಮಿಕಲ್ ಎನ್ನಲೂ ಅಡ್ಡಿಯಿಲ್ಲ ಏಕೆಂದರೆ ನಾವು
ಇನ್ನೊಬ್ಬರನ್ನು ತಬ್ಬಿಕೊಂಡಾಗ, ಮುತ್ತು ಕೊಡವಾಗ ಫೇಸ್ಬುಕ್ ಇನ್‌ಸ್ಟಾಗ್ರಾಮ್‌ಗಳಲ್ಲಿ ರಿಪ್ಲೈ ಮಾಡುವಾಗಲೂ ಇದು ನಮ್ಮಲ್ಲಿ ಬಿಡುಗಡೆ ಗೊಳ್ಳುತ್ತದೆ. ಸಾಮಾಜಿಕ ಮಾಧ್ಯಮದ ಜತೆಗಿನ ನಮ್ಮ ೧೦ ನಿಮಿಷದ ಒಡನಾಟದಲ್ಲಿ ಆಕ್ಸಿಟೋಸಿನ್ ಶೇ.೧೩ ರಷ್ಟು ಹೆಚ್ಚಾಗುತ್ತದೆ. ಇದು ನಾವು ನಮ್ಮ
ಮದುವೆಯ ದಿನ ಅನುಭವಿಸುವ ಉತ್ಸಾಹಕ್ಕೆ ಸಮನಾಗಿರುತ್ತದೆ.
? ನಾವೇಕೆ ಪೋಸ್ಟ್ ಶೇರ್ ಲೈಕ್ ಹಾಗೂ ಕಮೆಂಟ್ ಮಾಡುತ್ತೇವೆ?
ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು, ನಮ್ಮ ಬಗ್ಗೆ ನಾವು ಹೊಗಳಿಕೊಳ್ಳುವುದು ಹೊಸ ಸುದ್ದಿ ಏನಲ್ಲ. ಮನುಷ್ಯರು ತಾವು ಮಾತನಾಡುವ ಶೇ.೩೦ ರಿಂದ ೪೦ರಷ್ಟು ಭಾಗ ತಮ್ಮ ಬಗ್ಗೆಯೇ ಮಾತನಾಡಿರುತ್ತಾರೆ. ಸಾಮಾಜಿಕ ಮಾಧ್ಯಮದ ವಿಷಯಕ್ಕೆ ಬಂದಾಗ ಈ ಸಂಖ್ಯೆ ಶೇ.೮೦ಕ್ಕೆ ಜಿಗಿದುಬಿಡುತ್ತದೆ
ಏಕೆ? ಏಕೆಂದರೆ ಎದುರೆದುರು ಮಾತನಾಡುವಾಗ ನಾವು ಕೊಂಚ ಗೊಂದಲ ಕ್ಕೊಳಗಾಗುತ್ತೇವೆ ಹಾಗೂ ಹೆಚ್ಚು ಭಾವನಾತ್ಮಕವಾಗಿ ಬಿಡುತ್ತೇವೆ. ಏನು ಮಾತನಾಡಬೇಕು? ಹೇಗೆ ಮಾತನಾಡಬೇಕು? ನಮಗೆ ತಯಾವುದೇ ತಯಾರಿ ಇರುವುದಿಲ್ಲ. ಆದರೆ ಆನ್ಲೈನ್‌ನಲ್ಲಿ ನಮಗೆ ಇದಕ್ಕೆ ಸಮಯವಿರುತ್ತದೆ.
ನಮ್ಮ ಬಗ್ಗೆ ನಾವೇ ಸಂಸ್ಕರಿಸಿ ಮಾತನಾಡುತ್ತೊಡಗುತ್ತೇವೆ.
ಇದನ್ನೇ ಮನೋವೈಜ್ಞಾನಿಗಳು ಸೆಲ ಪ್ರೆಸೆಂಟೇಷನ್ ಎನ್ನುತ್ತಾರೆ. ನಮ್ಮನ್ನು ನಮಗೆ ಬೇಕಾದ ಹಾಗೆ ಹೇಗೆ ನೋಡ ಬಯಸುತ್ತೇವೆಯೋ ಹಾಗೆ ಗುರುತಿಸಿ ಕೊಳ್ಳುವುದೇ ಈ ಸೆಲ ಪ್ರಸೆಂಟೇ ಶನ್, ವಾಟ್ಸಪ್ ಸ್ಟೇಟಸ್ ಹಾಕಿ ಫೇಸ್ಬುಕ್‌ನಲ್ಲಿ ಫೋಟೋ ಒಂದನ್ನು ಅಪ್ಡೇಟ್ ಮಾಡಿ ಅದನ್ನು ಮತ್ತೆ ಮತ್ತೆ ನೋಡಿ ಕೊಳ್ಳುವುದು ನಮ್ಮ ಆತ್ಮಾಭಿಮಾನವನ್ನು ಹೆಚ್ಚಿಸುತ್ತದೆ. ನಮ್ಮ ಬಗ್ಗೆ ಇಷ್ಟೊಂದು ಮೆಚ್ಚುಗೆಯನ್ನು ವ್ಯಕ್ತಪಡಿಸುವ ನಾವುಗಳು ಹಾಗಿದ್ದರೆ ಬೇರೆ ಯಾವುದೋ ವಿಷಯವನ್ನೇಕೆ ಹಂಚಿಕೊಳ್ಳುತ್ತೇವೆ?
ವಿಷಯವನ್ನು ಒಬ್ಬರಿಂದ ಇನ್ನೊಬ್ಬರಿಗೆ ತಲುಪಿಸುವುದು ನಮ್ಮ ಮೆದುಳೊಳಗೆ ಮುಂಚೆಯಿಂದಲೂ ಹೆಣೆದಿರುವ ಒಂದು ಮುಖ್ಯ ಪ್ರಕ್ರಿಯೆ. ವಿಷಯ
ವನ್ನು ಹಂಚಿಕೊಳ್ಳುವುದು ನಮ್ಮ ಮೆದುಳಿನ ಪ್ರತಿಫಲದಾಯಕ ಕೇಂದ್ರಗಳನ್ನು ನಮಗೆ ಗೊತ್ತಿಲ್ಲದೆಯೇ ಚುರುಕುಗೊಳಿಸುತ್ತದೆ. ಮಜಾ ಏನು ಗೊತ್ತಾ? ಸಾಮಾಜಿಕ ಮಾಧ್ಯಮದಲ್ಲಿ ನಾವು ಹಾಕುವ ಫೋಟೋಗಳೇ ಇರಲಿ ವಿಷಯಗಳೇ ಇರಲಿ ಅದು ಯಾವುದೋ ಒಂದು ದೊಡ್ಡ ಸಮುದಾಯವನ್ನು ಇಂಪ್ರೆಸ್ ಮಾಡಲು ಅಲ್ಲ.
ಯಾವುದೋ ಒಬ್ಬ ನಿರ್ದಿಷ್ಟ ವ್ಯಕ್ತಿಗೆ ವಿಷಯವನ್ನು ತಲುಪಿಸಬೇಕಾಗಿರುತ್ತದೆ; ಅದಕಷ್ಟೇ. ನಾವು ಪೋಟೋ ಹಾಕುತ್ತೇವೇ( ನಿಜ ಹೇಳಿ ನಿಮಗೂ ಈ
ಅನುಭವ ಆಗಿದೆಯಾ) ಈ ಕ್ಷಣಕ್ಕೆ ನಮಗೆ ಇದು ಮುಖ್ಯವಾಗಿರುತ್ತದೆ. ಫೇಸ್ಬುಕ್ ನ ಒಂದು ತಿಂಗಳಿನ ಸಕ್ರಿಯ ಬಳಕೆದಾರರು ಒಂದು ಶತಕೋಟಿ ಇದಕ್ಕಿಂತ ಮತ್ತೊಂದು ವೇದಿಕೆ ಜನರಿಗೆ ತಮ್ಮ ಲೈಕ್ ಅನ್ನು ವ್ಯಕ್ತಪಡಿಸುವುದಕ್ಕೆ ಬೇಕಿಲ್ಲ ಅಲ್ಲವೇ? ಫೇಸ್ಬುಕ್ ಲೈಕ್ ಬಟನ್ ಅನ್ನು ಪರಿಚಯಿಸಿದ ದಿನದಿಂದ ಇಲ್ಲಿಯವರೆಗೂ ೧.೧೩ ಟ್ರಿಲಿಯನ್ ಅಷ್ಟು ಜನರು ಅದನ್ನು ಬಳಸಿzರೆ ಮತ್ತು ಅದರ ಸಂಖ್ಯೆ ಇನ್ನೂ ಬೆಳೆಯುತ್ತಲೇ ಇದೆ.
ಲೈಕ್ ಏಕೆ ಮಾಡುತ್ತೇವೆಂದರೆ ಸಂಬಂಧಗಳನ್ನು ಸರಿಯಾಗಿ ನಿರ್ವಹಿಸಲು ಇನ್ನೊಬ್ಬರು ಹಾಕಿರುವ ಪೋಸ್ಟ್‌ಗೆ ನಾವು ಹಾಕುವ ಲೈ, ಸಂಬಂಧಕ್ಕೆ ಮೌಲ್ಯವನ್ನು ಆತ್ಮೀಯತೆಯನ್ನು ತುಂಬುತ್ತದೆ.
ಇದರ ಬಗ್ಗೆ ಪ್ರಯೋಗ ಮಾಡಿದ ಸಮಾಜ ವಿಜ್ಞಾನಿ ಒಬ್ಬರು ೬೦೦ ಮಂದಿ ಜನರಿಗೆ ಕ್ರಿಸ್ಮಸ್ ಕಾರ್ಡುಗಳನ್ನು ಯಾರೋ ಗೊತ್ತಿಲ್ಲದ ಅಪರಿಚಿತರಿಗೆ ಕಳುಹಿಸುತ್ತಾರೆ. ಆಶ್ಚರ್ಯವೆಂದರೆ ಅವರಿಗೆ ೨೦೦ ಕ್ರಿಸ್ಮಸ್ ಶುಭಾಶಯಗಳು ಅವೇ ಅಪರಿಚಿತರಿಂದ ಮರಳಿ ಬರುತ್ತವೆ. ಇದು ಪರಸ್ಪರ ಸಂಬಂಧ
ಕ್ಕಿರುವ ಶಕ್ತಿ. ಸಾಮಾಜಿಕ ಮಾಧ್ಯಮಕ್ಕೆ ಅಂಟಿ ಕೊಂಡೇ ಬಯ್ಯುವ ನಾವುಗಳು ಅವುಗಳು ನಮ್ಮ ಬದುಕಲ್ಲಿ ಮೂಡಿಸಿರುವ ಸಕಾರಾತ್ಮಕ ಆಶಯ
ಗಳನ್ನು ಎಲ್ಲೋ ಮರೆತಿದ್ದೇವೆ.
ಸಾಮಾಜಿಕ ಮಾಧ್ಯಮದ ಲೈಕ್ ಶೇರ್ ಕಾಮೆಂಟ್‌ಗಳು ನಮ್ಮಲ್ಲಿ ನಾವೆಲ್ಲರೂ ಒಂದೇ ಎಂಬ ಆತ್ಮೀಯ ಭಾವವನ್ನು ಒಡಮೂಡಿಸುತ್ತವೆ. ಸಾಮಾಜಿಕ ಮಾಧ್ಯಮ ನಮ್ಮದೇ ಆಸಕ್ತಿಯುಳ್ಳ ಅನೇಕರೊಂದಿಗೆ ನಮ್ಮನ್ನು ಬೆಸೆಯುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ವರದಿಯ ಪ್ರಕಾರ ಸಾಮಾಜಿಕ ಮಾಧ್ಯಮ ನಮ್ಮಲ್ಲಿನ ಒಂಟಿತನಕ್ಕೆ ಮದ್ದಾಗುತ್ತದೆ. ಉದಾಹರಣೆಗೆ ನಾವು ಹಾಕುವ ಯಾವುದೇ ಒಂದು ಫೋಟೋಗೆ ಒಂದು ಲೈಕ್ ಒಂದು ಕಮೆಂಟ್
ಬಂದರೆ ಅದು ನಮ್ಮನ್ನು ಅವರೊಂದಿಗೆ ಬೆಸೆಯುವ ಒಂದು ಬಂಧವಾಗಿ ಬಿಡುತ್ತದೆ. ನಮ್ಮ ಸಾಮಾಜಿಕ ಮಾಧ್ಯಮ ನಮ್ಮಲ್ಲಿ ಖುಷಿಯನ್ನು ಒಡಮೂ ಡಿಸುತ್ತದೆ.
ಮಿಸ್ಸೌರಿ ವಿಶ್ವವಿದ್ಯಾಲಯದ ಮನೋ ವಿಜ್ಞಾನಿಗಳು ನಡೆಸಿದ ಪ್ರಯೋಗದಲ್ಲಿ facebook ನಲ್ಲಿ ಕಾಲ ಕಳೆಯುವ ವಿಷಯಗಳಲ್ಲಿ ಸಂತೋಷದ ಹಾರ್ಮೋನುಗಳು ಗಣನೀಯವಾಗಿ ಏರಿಕೆಯಾಗಿ ರುವುದು ಕಂಡುಬಂದಿದೆ. ಮತ್ತೊಂದು ಅಧ್ಯ ಯನದ ಪ್ರಕಾರ ಶೇ. ೪೧ನಷ್ಟು ೧೮ ರಿಂದ ೨೯ ವಯಸ್ಸಿನ ದಂಪತಿಗಳು ತಮ್ಮ ಜಗಳವನ್ನು ವಾಟ್ಸಾಪ್ ಮೆಸೇಜಿನ ಮೂಲಕ ಸರಿಪಡಿಸಿಕೊಳ್ಳುತ್ತಾರಂತೆ. ಜನರನ್ನು ಸಂಬಂಧಗಳನ್ನು ಮತ್ತೆ ಬೆಸೆಯು ವಲ್ಲಿ ಸಾಮಾಜಿಕ ಮಾಧ್ಯಮ ಬಹಳ ಮುಖ್ಯ ಪಾತ್ರ ವಹಿಸಿರುವುದು ಸುಳ್ಳಲ್ಲ.
ಇದಕ್ಕೆ ನಮ್ಮದೇ ಮನೆಯ ಒಂದು ಉದಾಹರಣೆ ಹೇಳಬಯಸುತ್ತೇನೆ. ನನ್ನದು ಫೇಸ್ಬುಕ್ ಅಕೌಂಟ್ ಓಪನ್ ಮಾಡಿಕೊಡು ಅಂತ ಅಮ್ಮ ಯಾವಾಗಲೂ ದುಂಬಾಲು ಬೀಳೋಳು. ಸರಿ ಆಯ್ತು ಫೇಸ್ಬುಕ್ ಅಕೌಂಟು ಓಪನ್ ಮಾಡಿ ಕೊಟ್ಟಾಯಿತು. ಒಂದು ದಿನ ಖುಷಿಯಾಗಿ ಫೋನ್ ಮಾಡಿ ‘ನನ್ನ ಪ್ರೈಮರಿ ಸ್ಕೂಲ್ ಕ್ಲಾಸ್ಮೇಟ್‌ಗಳೆಲ್ಲ ಫೇಸ್ಬುಕ್‌ನಲ್ಲಿ ಸಿಕ್ಕಿದ್ರು ಕಣೆ ಪುಟ್ಟಿ, ಶಫಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿ ರಿಟೈರ್ ಆದ್ನಂತೆ. ಮಂಜುನಾಥ ಬೆಂಗಳೂರಿನ ಹನುಮಂತನಗರದ ಮಗಳ ಮನೆಯಲ್ಲಿ ಇzನಂತೆ. ಅಂಬಿಕಾ ದಾವಣಗೆರೆಯಿಂದ ಬಂದು ಈಗ ತುಮಕೂರಲ್ಲಿ ದಾಳಂತೆ, ಪ್ರಭಾ ರಾಜಣ್ಣ ರಿಟೈರ್ ಆಗಿ ಮೈಸೂರಲ್ಲಿ ಸೆಟಲ್ ಆಗಿzರಂತೆ. ನನಗೆ ಅಂತ ಪ್ರಭ ಮೈಸೂರು ಪೇಂಟಿಂಗ್ ಮಾಡಿ ಕಳುಹಿಸಿದ್ದಳು…’ ಅಂತ ಅಮ್ಮ ಮಾತಾಡ್ತಾನೆ ಇದ್ರು ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಗೆಳೆಯ ಗೆಳತಿಯರನ್ನೆಲ್ಲ ಮತ್ತೆ ಮರು ಭೇಟಿಯಾದ ಅದೇನೋ ಅಲಿಖಿತ ಸಂತೋಷ ಅವರದಾಗಿತ್ತು.
ಇನ್ನೊಂದು ದಿನ ನೋಡಿದ್ರೆ ಅವರ ಜತೆಗಿನ ನಮ್ಮ ಚಿಕ್ಕವಯಸ್ಸಿನ ಫೋಟೋ ಒಂದನ್ನು ಅವರು ಫೇಸ್ಬುಕ್‌ನಲ್ಲಿ ಹಾಕಿದ್ದರು. ಅವರ ಕಸಿನ್ಸ್‌ಗಳೆಲ್ಲ
ಅದಕ್ಕೆ ಲೈಕು ಕಮೆಂಟು ಮಾಡಿದ್ದರು. ನನ್ನ ತಾಯಿಯ ಅಕ್ಕನ ಮಗ ಮಂಜಣ್ಣ ಅಂತ ಅವರು ಡಿಸ್ಟ್ರಿಕ್ಟ್ ಸರ್ಜನ್; ಅವರಂತೂ ಅಮ್ಮನಿಗೆ ಫೇಸ್ ಬುಕ್ ನಲ್ಲಿ ಒಂದು ದೊಡ್ಡ ರೈಟ್ ಅಪ್ ಬರೆದು ಹಾಕಿದ್ರು. ಚಿಕ್ಕ ವಯಸ್ಸಿನಲ್ಲಿ ನೀನು ನಮಗೆಲ್ಲ ಕತೆ ಹೇಳುತ್ತಿದ್ದ ಆಂಟಿ, ನಾವೆಲ್ಲ ಒಟ್ಟಿಗೆ ರಜಕ್ಕೆ ನಿಮ್ಮ
ಮನೆಗೆ ಬರ್ತಾ ಇದ್ವಿ. ಸಮಯ ಸರಿದಿದ್ದಾ ತಿಳೀಲಿಲ್ಲ… ಅಂತೆಲ್ಲ. ಇದನ್ನು ಓದಿದ ಅಮ್ಮನಂತೂ ಅಳುತ್ತಲೇ ಹಳೆಯ ನೆನಪುಗಳಿಗೆ ಜಾರಿದಳು.
ನಮ್ಮನ್ನು ಯಾರೋ ಪ್ರೀತಿಸುವವರು ಇದ್ದಾರೆ ಅನ್ನುವ ಭಾವನೆ ಮೂಡಿಸುವ ಶಕ್ತಿ ಒಂದು ಲೈಕು ಕಮೆಂಟಿಗಿದೆ. ದೂರ ದೂರುಗಳಿಂದಲೇ ನಮ್ಮನ್ನು
ಹತ್ತಿರವಾಗಿಸಿದ್ದು ಒಂದು ಲೈಕು ಶೇರು ಕಾಮೆಂಟು ಗಳಲ್ಲದೇ ಮತ್ತೇನು? ನೀವೇನ್ ಅಂತೀರಿ?