Tuesday, 10th September 2024

ಪಂಜಾಬ್‌ನಲ್ಲಿರೋ ನಕ್ಸಲ್- ಟರ್ಬನ್ ನಕ್ಸಲ್

ತುಂಟರಗಾಳಿ

ನಮ್ಮ ಕನ್ನಡ ಚಿತ್ರರಂಗದ ಉಗ್ರಂ, ಕೆಜಿಎ- ೧, ೨ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಹೊಸ ಚಿತ್ರ ಸಲಾರ್ ಬಿಡುಗಡೆಗೆ ರೆಡಿ ಆಗಿದೆ. ಈಗ ಸದ್ಯಕ್ಕೆ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಅದನ್ನು ನೋಡಿದವರದ್ದು ಅದೇ ಹಳೇ ಸೇಮ್ ಟು ಸೇಮ್ ಅನುಭವ. ಕೆಜಿಎಫ್ ಪಾರ್ಟ್ ೧, ೨ ಥರ ಇದೂ ಕೂಡಾ ಕತ್ಲೆ ಕತ್ಲೆ ಕತೆ ಅಂತ ಎಲ್ಲ ಮಾತಾಡ್ತಾ ಇದ್ದಾರೆ. ಇನ್ನು ಕೆಲವು ತೀವ್ರ ಕನ್ನಡ ಪ್ರೇಮಿಗಳು ಪ್ರಶಾಂತ್ ನೀಲ್ ಕನ್ನಡ ಸಿನಿಮಾ ಮಾಡಿದ್ದಕ್ಕೆ ನೋಡಿದ್ವಿ. ಈಗ
ತೆಲುಗು ಸಿನಿಮಾ ಮಾಡಿದ್ರೆ ನಾವ್ಯಾಕೆ ನೋಡ್ಬೇಕು. ಪ್ರಶಾಂತ್ ನಮ್ಮವನಾದ್ರೇನು, ಪ್ರಭಾಸ್ ನಮ್ಮವನೇ, ನಾವ್ ಸಲಾರ್ ನೋಡಲ್ಲ ಅಂತ ಕ್ಯಾತೆ ತೆಗೆಯುತ್ತಿದ್ದಾರೆ.

ಆದ್ರೆ ಅದಕ್ಕಿಂತಾ ಜಾಸ್ತಿ ಚರ್ಚೆ ಆಗ್ತಾ ಇರೋ ವಿಷ್ಯ ಅಂದ್ರೆ ಸಲಾರ್ ಚಿತ್ರದ ಕಥೆಯದ್ದು. ಟ್ರೈಲರ್ ನೋಡಿದ ಎಲ್ಲರಿಗೂ ಇದು ಉಗ್ರಂ ಸಿನಿಮಾ ಕಥೆ ಥರನೇ ಇದೆ ಯಲ್ಲ ಅನ್ನಿಸಿದರೆ ತಪ್ಪಿಲ್ಲ. ಹಾಗೆ ನೋಡಿದರೆ ಪ್ರಭಾಸ್ ನಟನೆಯ ಸಲಾರ್ ತೆಲುಗು ಭಾಷೆಯಲ್ಲಿ ಅನೌ ಆಗಿತ್ತು. ಆಗ ಸಲಾರ್ ಹೆಸರಿನಲ್ಲಿ ಉಗ್ರಂ ಅನ್ನೇ ರಿಮೇಕ್ ಮಾಡ್ತಾರೆ ಪ್ರಶಾಂತ್ ನೀಲ್ ಅಂತ ಸುದ್ದಿ ಇತ್ತು. ಈಗ ಟ್ರೈಲರ್ ನೋಡಿದ ಮೇಲೆ ಉಗ್ರಂ ಸಿನಿಮಾವನ್ನ ಯಥಾವತ್ ರಿಮೇಕ್ ಮಾಡದೇ ಇದ್ರೂ,
ಈಗ ತಮ್ಮ ಕೋಟಿಗಟ್ಟಲೆ ಬಂಡವಾಳ ಹಾಕಿಸುವ ನಿರ್ದೇಶಕ ಅನ್ನೋ ಇಮೇಜಿಗೆ ಮ್ಯಾಚ್ ಆಗುವಂತೆ ಅದೇ ಕಥೆಯನ್ನ ಇಟ್ಕೊಂಡು ಸಲಾರ್ ಸಿನಿಮಾ
ಮಾಡಿದ್ದಾರೆ ಅನ್ನಿಸಿದರೆ ತಪ್ಪಿಲ್ಲ.

ಹಾಗಾಗಿ ಸಲಾರ್ ಚಿತ್ರದಲ್ಲಿ ಕೆಜಿಎಫ್, ಉಗ್ರಂ, ಕಬ್ಜ ಎಲ್ಲದರ ಫೀಲ್ ಇರೋದನ್ನ ನೋಡಿ, ಇದು ಸಲಾರ್ ಸಿನಿಮಾನಾ, ಇ ಸಲಾಡ್ ಸಿನಿಮಾನ ಅಂತ ಎಲ್ಲರೂ
ಪ್ರಶ್ನೆ ಮಾಡ್ತಾ ಇರೋದಂತೂ ಸತ್ಯ.

ಲೂಸ್ ಟಾಕ್ – ಕ್ಯಾಮರೂನ್ ಗ್ರೀನ್

ಏನ್ ಗುರೂ, ಆರ್‌ಸಿಬಿಗೆ ಬಂದ್ ಬಿಟ್ಟಿದ್ದೀಯಾ, ನಿನ್ನ ಕಾಲ್ಗುಣದಿಂದಾದ್ರೂ ಆರ್‌ಸಿಬಿ ಕಪ್ ಗೆಲ್ಲುತ್ತಾ?

– ನಾನ್ ಬಂದಿದ್ದೀನಲ್ಲ. ಈಗ ಆರ್ ಸಿಬಿಗೆ ಕಪ್ ಗೆಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೀನಿ

ಓಹೋ, ಕಾನಿಡೆನ್ಸು..ಅದ್ಸರಿ, ನೀನು ಮುಂಬೈ ಟೀಮ್ ಯಾಕೆ ಬಿಟ್ಟೆ?

– ಅಯ್ಯೋ, ಮೊದ್ಲೇ ನಾವು ಆಸ್ಟ್ರೇಲಿಯಾದವ್ರು ಇಂಡಿಯಾನ ಫೈನಲ್‌ನಲ್ಲಿ ಸೋಲಿಸಿ ವರ್ಲ್ಡ್ ಕಪ್ ಗೆದ್ದಿದ್ದೀವಿ. ಇಂಥ ಟೈಮಲ್ಲಿ ರೋಹಿತ್ ಶರ್ಮಾ ಜೊತೆ ಆಡೋ ಕಷ್ಟ ಯಾಕ್ ಬೇಕು ಅಂತ ಬಿಟ್ಟೆ. ಆದ್ರೆ ಮುಂಬೈನವರು ನನ್ನ ತುಂಬಾ ಬೈಕೊತಾ ಇದ್ದಾರೆ.

ಹೌದಾ? ನೀನು ಆರ್‌ಸಿಬಿ ಸೇರಿದ್ದು ಅವರಿಗೆ ಹೊಟ್ಟೆ ಉರಿ ಅನ್ಸುತ್ತೆ.

– ಗೊತ್ತಿಲ್ಲ. ಆದ್ರೆ, ಈ ಮನುಷ್ಯ ಒಂಥರಾ ಊಸರವಳ್ಳಿ ಇದ್ದಂಗೆ. ಆಸ್ಟ್ರೇಲಿಯಾಗೆ ಆಡುವಾಗ ಎಲ್ಲೋ ಜೆರ್ಸಿ. ಇಷ್ಟು ದಿನ ಮುಂಬೈನಲ್ಲಿ ಬ್ಲೂ ಜೆರ್ಸಿ. ಇನ್ಮೇಲೆ
ಆರ್‌ಸಿಬಿಯಲ್ಲಿ ರೆಡ್ ಜೆರ್ಸಿ. ಹೆಸರು ಮಾತ್ರ ಗ್ರೀನ್ ಅಂತ ಆಡಿಕೊಳ್ತಾ ಇದ್ದಾರೆ.

ಆರ್‌ಸಿಬಿ ಸಮಸ್ಯೆ ಅಂದ್ರೆ ಎಷ್ಟೋ ಜನ ಪ್ಲೇಯರ್ಸ್ ಬೇರೆ ಟೀಮಲ್ಲಿ ಚೆನ್ನಾಗೇ ಆಡ್ತಾರೆ. ಆರ್‌ಸಿಬಿಗೆ ಬಂದ ಕೂಡ್ಲೇ ಫಾರ್ಮ್ ಕಳ್ಕೊಂಡ್ ಬಿಡ್ತಾರೆ. ನೀನೂ ಹಂಗೇ ಆಗಲ್ಲ ತಾನೇ? 

– ನೋ, ವೇ ಛಾನ್ಸೇ ಇಲ್ಲ, ನನ್ ಫಾರ್ಮ್ ಯಾವಾಗ್ಲೂ ಎವರ್ ಗ್ರೀನ್ ಆದ್ರೂ, ಹೊಸ ಜಾಗ, ಹೊಸ ಪ್ಲೇಯರ್ಸ್, ನಿಂಗೆ ಪಾಪ ಈ ಹೊಸ.

ವಾತಾವರಣಕ್ಕೆ ಹೊಂದಿಕೊಳ್ಳೋಕೇ ಒಂದ ಟೈಮ್ ಬೇಕಾಗುತ್ತೆ ಅನ್ಸುತ್ತೆ. 
– ಹಂಗೇನಿಲ್ಲ. ನಾನು ಎನ್ವಿರಾನ್ಮೆಂಟಲ್ ಫ್ರೆಂಡ್ಲೀ ಮನುಷ್ಯ. ನನ್ ಹೆಸರೇ ಗ್ರೀನ್ ಅಲ್ವಾ?
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್
ಖೇಮುಗೆ ಮೂರು ದಿನದಿಂದ ಮೋಷನ್ ಆಗ್ತಾ ಇರಲಿಲ್ಲ. ಹೊಟ್ಟೆಯಲ್ಲಿ ಏನೋ ಸಮಸ್ಯೆ ಇದೆ ಅಂತ ಗೊತ್ತಾಗಿ ಖೇಮು ತಲೆ ಕೆಡಿಸಿಕೊಂಡಿದ್ದ. ಮರುದಿನ ಪಕ್ಕದ
ಇದ್ದ ಆಸ್ಪತ್ರೆಗೆ ಹೋದ. ಅಲ್ಲಿ ಡಾಕ್ಟರ್ ಅನ್ನು ಭೇಟಿ ಮಾಡಿ, ಡಾಕ್ಟ್ರೇ ಮೂರು ದಿನದಿಂದ ಮೋಷನ್ ಆಗ್ತಾ ಇಲ್ಲ ಅಂತ ಸಮಸ್ಯೆ ಹೇಳಿಕೊಂಡ. ಸರಿ ಡಾಕ್ಟರ್ ಒಂದಷ್ಟು ಮಾತ್ರೆ ಕೊಟ್ರು. ಮೂರು ದಿನ ಮಾತ್ರೆ ತೆಗೆದುಕೊಂಡ ಖೇಮು. ಏನೂ ಉಪಯೋಗ ಆಗ್ಲಿಲ್ಲ. ಮತ್ತೆ ಡಾಕ್ಟರ್ ಬಳಿ ಹೋದ. ಸರಿ ಹೋಯ್ತಾ ಸಮಸ್ಯೆ? ಅಂತ ಕೇಳಿದ್ರು ಡಾಕ್ಟರ್. ಇ ಡಾಕ್ಟ್ರೇ, ೬ ದಿನ ಆಯ್ತು ಮೋಷನ್ ಆಗಿಲ್ಲ ಅಂದ. ಸರಿ ಈ ಸಲ ಸಿರಪ್ ಬರ್ಕೊಟ್ರು ಡಾಕ್ಟರ್. ಅದನ್ನೂ ಮೂರು ದಿನ ತಗೊಂಡ ಖೇಮು. ಮತ್ತೆ ಡಾಕ್ಟರ್ ಬಳಿ ಹೋದ. ಸರಿ ಹೋಯ್ತಾ ಸಮಸ್ಯೆ? ಅಂದ್ರು ಡಾಕ್ಟರ್ ಇಲ್ಲೇ ಡಾಕ್ಟರ್ ೯ ದಿನ ಆಯ್ತು ಮೋಷನ್ ಆಗಿಲ್ಲ ಅಂದ ಖೇಮು. ಡಾಕ್ಟರ್ ಈ ಸಲ ಸ್ಟ್ರಾಂಗ್ ಮಾತ್ರೆ, ಇಂಜೆಕ್ಷನ್ ಕೊಟ್ಟು ಈ ಸಲ ಸರಿ ಹೋಗುತ್ತೆ ಅಂತ ಹೇಳಿ ಕಳಿಸಿದ್ರು.

ಖೇಮು ಮತ್ತೆ ಮೂರು ದಿನ ಆದಮೇಲೆ ಡಾಕ್ಟರ್ ಹತ್ರ ಹೋದ. ಈಗ ಸಮಸ್ಯೆ ಸರಿ ಹೋಗಿರಬೇಕಲ್ವಾ? ಅಂದ್ರು ಡಾಕ್ಟರ್. ಖೇಮು ಇ ಡಾಕ್ಟರ್ ೧೨ ದಿನ ಆಯ್ತು, ಮೋಷನ್ ಆಗಿಲ್ಲ ಅಂದ. ಡಾಕ್ಟರ್‌ಗೆ ಗಾಬರಿ ಆಯ್ತು. ‘ಇನೋ ಗಂಭೀರ ಸಮಸ್ಯೆ ಇದೆ ಅಂತ ಅನ್ನಿಸಿ, ನೀವು ಎಲ್ಲಿ ಕೆಲ್ಸ ಮಾಡೋದು?’ ಅಂತ ಕೇಳಿದ್ರು. ಅದಕ್ಕೆ ಖೇಮು, ನಾನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಅಂದ. ಅದಕ್ಕೆ ಡಾಕ್ಟ್ರು ಮೊದಲೇ ಹೇಳೋದಲ್ವಾ? ಅಂತ ಜೇಬಿಂದ ೨೦೦ ರುಪಾಯಿ ತೆಗೆದು ಕೊಡ್ತಾ ಹೇಳಿದ್ರು ‘ತಗೋ ಮೊದ್ಲು ಹೊಟ್ಟೆಗೆ ಏನಾದ್ರೂ ತಿನ್ನು, ಆಮೇಲೆ ಮೋಷನ್ ತಾನಾಗೇ ಆಗುತ್ತೆ.

ಲೈನ್ ಮ್ಯಾನ್
ಯಾವುದನ್ನೂ ಉಚಿತವಾಗಿ ನೀಡಬಾರದು- ನಾರಾಯಣಮೂರ್ತಿ
– ಸಲಹೆಗಳನ್ನೂ ಕೂಡ
ಶಾಪಿಂಗ್ ಹೋದಾಗ ಬರೀ ಬಟ್ಟೆಗಳನ್ನೇ ತಗೊಂಡ್ರೆ
– ಸಿಕ್ಕಾ‘ಬಟ್ಟೆ’ ಶಾಪಿಂಗ್
ಇನ್ನಿಂಗ್ಸ್ ಕೊನೆಯ ಓವರ್‌ನಲ್ಲಿ ತಮ್ಮ ಮೊದಲ ಓವರ್ ಬೋಲಿಂಗ್ ಮಾಡಿ ೩೦ ರನ್ ಚಚ್ಚಿಸಿಕೊಂಡ್ ಮ್ಯಾಕ್ಸ್ ವೆಲ್
– ಪಾಪ, ಅದೊಂಥರಾ, ಕಳೆದ ಚುನಾವಣೆಯಲ್ಲಿ ವಿ.ಸೋಮಣ್ಣ, ಆರ್.ಅಶೋಕ್‌ಗೆ ಬಲವಂತವಾಗಿ ಟಿಕೆಟ್ ಕೊಟ್ಟಂಗಿತ್ತು.

ಇಂಡಿಯಾ ಕ್ರಿಕೆಟ್ ಟೀಮಲ್ಲಿರೋ ‘ಸೀಸನಲ್ ಪ್ಲೇಯರ್’ ಯಾರು?
– ‘ಋತು’ರಾಜ್ ಗಾಯಕ್ವಾಡ್

ಕುಡುಕರ ಮಾತು

ಲೋ, ಯಾಕೋ, ಇಷ್ಟೊಂದ್
ಕುಡಿತೀಯಾ?

– ನಾನು ‘೯೦’ಸ್ ಕಿಡ್ ಮಗಾ ಇದಕ್ಕೇ.

ಬೇರೆಯವರು ಎಣ್ಣೆ ಹೊಡೆಯುವಾಗ ಸುಮ್ನೆ ಕೂತು ಬರೀ ಕಟ್ಲೆಬೀಜ, ಚಿ ಖಾಲಿ ಮಾಡೋನು
– ‘ಕುರುಕ್’ ಪಾರ್ಟಿ

ಪಂಜಾಬ್ ನಲ್ಲಿರೋ ನಕ್ಸಲರನ್ನ ಏನಂತಾರೆ?
– ‘ಟರ್ಬನ್’ ನಕ್ಸಲ್ಸ್

ನಾವು ಉಗ್ರಂ ರಿಮೇಕ್ ಥರಾ ಇರೋ ಸಲಾರ್ ಸಿನಿಮಾ ನೋಡಲ್ಲ ಅನ್ನೋ ಉಗ್ರ ಕನ್ನಡ ಪ್ರೇಮಿಗಳು ಅದಕ್ಕೆ ಕೊಡುತ್ತಿರೋ
ಕಾರಣ
– ಪ್ರಶಾಂತ್ ನಮ್ಮವನಾರೇನು, ಪ್ರಭಾಸ್ ನಮ್ಮವನೇ?

ಕಿಚನ್ ಬಾತ್
ಕುಕ್ಕರ್‌ನಲ್ಲಿ ಚಿಕನ್ ಇಟ್ಟು ಸ್ವಲ್ಪ ಹೊತ್ತಾದ ಮೇಲೆ
ಹೆಂಡತಿ : ರೀ ಎಲ್ಲೋ ಸಲ ಕೂಗ್ತು?
ಗಂಡ : ತಗೊಂಡ್ ಬಂದ್ ಕೊಯ್ದು, ಸಾಂಬಾರ್ ಮಾಡೋಕಿಟ್ಟಿದ್ದೀಯ, ಅದೆಂಗೇ ಕೂಗುತ್ತೆ?

ಗಂಡ ಹೆಂಡ್ತಿ ಮ್ಯಾಟ್ರು
ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್ ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ?
ನೀವು ಸರಿಯಾಗಿ ಯೋಚನೆ ಮಾಡ್ತಾ ಇಲ್ಲ ಅನ್ನೋದನ್ನು ಕಣ್ಣು, ಮೂಗು ಪದಗಳನ್ನ ಬಳಸಿ ಹೇಳುವಾಗ ಆಗುವ ವ್ಯತ್ಯಾಸ ನೀವು ವಕ್ರದೃಷ್ಠಿ ಬೀರ್ತಾ ಇದ್ದೀರಿ.
ನೀವು ನಿಮ್ಮ ಮೂಗಿನ ನೇರಕ್ಕೆ ಮಾತಾಡ್ತಾ ಇದ್ದೀರಿ.

Leave a Reply

Your email address will not be published. Required fields are marked *