ಸಂಗತ
ವಿಜಯ್ ದರಡಾ
ಭಾರತದಲ್ಲಿಂದು ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂಬುದನ್ನು ಅಲ್ಲಗಳೆಯ ಲಾಗದು. ಸ್ವಾತಂತ್ರ್ಯಾನಂತರದಲ್ಲಿ ಭಾರತವು ವಿಶ್ವದ ಯಾವುದೇ ಬಣಕ್ಕೆ ಸೇರದಂತೆ ನೆಹರು ನೋಡಿಕೊಂಡರು. ಭಾರತದ ದೃಢತೆಯನ್ನು ಇಂದಿರಾ ಗಾಂಧಿ ಮತ್ತೆ ಎತ್ತಿಹಿಡಿದರು. ಇದೀಗ ಮೋದಿಯವರು ಅದನ್ನು ಇನ್ನಷ್ಟು ಎತ್ತರಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಾರ್ಯಕಾರಣವಿಲ್ಲದೆ ಏನನ್ನೂ ಮಾತನಾಡುವು ದಿಲ್ಲ ಎಂಬುದು ಇಡೀ ಜಗತ್ತಿಗೇ ಗೊತ್ತಿರುವ ಸಂಗತಿ. ಅವರು ಯಾವತ್ತೂ ತಮ್ಮದೇ ನಿಲುವಿಗೆ ಅಂಟಿಕೊಂಡಿರುತ್ತಾರೆ. ಪ್ರತಿಯೊಂದು ಮಾತನ್ನೂ ಅಳೆದು ತೂಗಿ
ಆಡು ವವರು ಪುಟಿನ್. ಹಾಗಿದ್ದಾಗ ಮಾಸ್ಕೋದ ವಾಲಡೈ ಡಿಸ್ಕಷನ್ ಕ್ಲಬ್‌ನಲ್ಲಿ ನರೇಂದ್ರ ಮೋದಿಯವರನ್ನು ಪುಟಿನ್ ಹಾಡಿ ಹೊಗಳುತ್ತಾರೆ ಮತ್ತು ಇಡೀ ವಿಶ್ವದ ಮಾಧ್ಯಮ ಆ ಮಾತುಗಳನ್ನು ಆಲಿಸುತ್ತದೆ, ಭಾಷಾಂತರಿಸುತ್ತದೆ ಮತ್ತು ಎಲ್ಲೆಡೆ ಪ್ರಕಟ ಮಾಡುತ್ತದೆ ಕೂಡ.
ಪುಟಿನ್ ಹೇಳಿದ ಮಾತುಗಳನ್ನೊಮ್ಮೆ ಕೇಳಿ. ಅವರೇ ಹೇಳಿದಂತೆ ನರೇಂದ್ರ ಮೋದಿಯವರು ವಿಶ್ವದಲ್ಲೇ ಅಪರೂಪದ ರಾಜಕಾ ರಣಿ. ಎಲ್ಲ ಒತ್ತಡಗಳ ನಡುವೆ ತಮ್ಮ ದೇಶದ ವಿದೇಶಿ ನೀತಿಯ ಬಗ್ಗೆ ನಿಖರವಾದ ಚಿಂತನೆ ಮತ್ತು ಆಲೋಚನೆ ಹೊಂದಿರುವ ವ್ಯಕ್ತಿ. ಭಾರತ ಮತ್ತು ರಷ್ಯಾ ನಡುವಿನ ಐತಿಹಾಸಿಕ ಸ್ನೇಹ-ಸಂಬಂಧ ಮತ್ತು ವಿಶ್ವಾಸಾರ್ಹತೆ ಕುರಿತಾಗಿ ಮಾತನಾಡಿರುವ ಪುಟಿನ್, ‘ವಿಶ್ವ ಸಮುದಾಯ ಭಾರತದ ಮೇಲೆ ದಿಗ್ಬಂಧನ ಹೇರುವ ಎಲ್ಲ ಸಾಧ್ಯತೆಗಳಿದ್ದಾಗ್ಯೂ, ಅವನ್ನೆಲ್ಲ ಪಕ್ಕಕ್ಕಿಟ್ಟು ರಷ್ಯಾ ಜತೆ ಸ್ನೇಹಹಸ್ತ ಚಾಚಿದ ಮೋದಿ ಒಬ್ಬ ವಿಶ್ವಮಾನ್ಯ ನಾಯಕ.
ಭಾರತದ ಭವಿಷ್ಯ ಉಜ್ವಲವಾಗಿದೆ’ ಎಂದಿದ್ದಾರೆ. ಅದೇ ಪುಟಿನ್ ಹೇಳಿಕೆಯಲ್ಲಿ ಒಂದು ಸಣ್ಣ ಮಾತೂ ನುಸುಳಿದೆ. ‘ಭಾರತವು ರಷ್ಯಾದೊಂದಿಗೆ ಸ್ನೇಹ-ಸಂಬಂಧವನ್ನು ಮುಂದುವರಿಸಬೇಕು, ಅಮೆರಿಕದ ಜತೆ ಕೈಜೋಡಿಸುವುದು ಬೇಡ’ ಎಂಬರ್ಥದ ಮಾತನ್ನೂ ಅವರು ಆಡಿದ್ದಾರೆ. ಆದರೆ ವಾಸ್ತವವೆಂದರೆ ಭಾರತಕ್ಕೆ ರಷ್ಯಾ ಎಷ್ಟು ಆಪ್ತದೇಶವೋ ಅಮೆರಿಕ ಕೂಡ ಅಷ್ಟೇ ಆಪ್ತ.
ಪುಟಿನ್ ಹೇಳಿಕೆಯನ್ನು ನಾನು ಬೇರೆಯದೇ ಆದ ಅರ್ಥದಲ್ಲಿ ವಿಶ್ಲೇಷಣೆ ಮಾಡುತ್ತೇನೆ. ರಾಜಕೀಯವನ್ನು ಹೊರತುಪಡಿಸಿ ಅವರ ಹೇಳಿಕೆಗಳನ್ನು ಗಮನಿಸುವುದಾದರೆ, ಪುಟಿನ್ ಹೇಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ. ಅಮೆರಿಕ ಕೂಡ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನವನ್ನು ಹೇರಿತ್ತು. ಆದರೆ ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಒಪ್ಪಂದವನ್ನು ಮಾಡಿಕೊಂಡಿತು. ಬೇರಾವುದೇ ದೇಶವಾಗಿದ್ದರೆ ಇಂಥದೊಂದು ಗಟ್ಟಿ ನಿರ್ಣಯ ತೆಗೆದುಕೊಳ್ಳುವುದು ಖಂಡಿತ ಸಾಧ್ಯವಿರಲಿಲ್ಲ. ಈ ಕುರಿತಾಗಿ
ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರವೂ ಅಷ್ಟೇ ದಿಟ್ಟತನದಿಂದ ಕೂಡಿತ್ತು.
ಭಾರತವು ಒಂದು ತಿಂಗಳಿಗಾಗುವಷ್ಟು ಇಂಧನವನ್ನು ರಷ್ಯಾದಿಂದ ಖರೀದಿಸಿದರೆ, ಅಷ್ಟನ್ನು ಐರೋಪ್ಯ ರಾಷ್ಟ್ರಗಳು ದಿನ ವೊಂದಕ್ಕೆ ರಷ್ಯಾದಿಂದ ಖರೀದಿ ಮಾಡುತ್ತಿವೆ. ಅಷ್ಟೇ ಅಲ್ಲ ಭಾರತವು ರಷ್ಯಾದಿಂದ ಎಸ್-೪೦೦ ಕ್ಷಿಪಣಿಗಳನ್ನು ನಿರ್ಭಯ ವಾಗಿ ಖರೀದಿಸಿತು. ಭಾರತವು ಅಮೆರಿಕಾ ಬಗೆಗೆ ಎಂದೂ ತಲೆಕೆಡಿಸಿಕೊಂಡಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು. ರಷ್ಯಾದ ಅಸಂತುಷ್ಟಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಭಾರತವು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಜತೆಯಲ್ಲಿ ಚತುರ್ಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿದೆ. ನಿಮಗೆ ನೆನಪಿರಬಹುದು, ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗ ರಷ್ಯಾ ಸೆಕ್ಯುರಿಟಿ ಕೌನ್ಸಿಲ್ಲಿನ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಮತ್ತು ಅಮೆರಿಕದ ಬೇಹುಗಾರಿಕೆ ಏಜೆನ್ಸಿ ಸಿಐಎ ಮುಖ್ಯಸ್ಥ ವಿಲಿಯಮ್ ಬರ್ನ್ಸ್ ದೆಹಲಿಯಲ್ಲಿ ಸೇರಿ ಪರಿಸ್ಥಿತಿಯ ಅವಲೋಕನದ ಕುರಿತಾಗಿ ಚರ್ಚೆ ನಡೆಸಿದ್ದರು.
ಉಕ್ರೇನಿನ ಮೇಲೆ ರಷ್ಯಾ ದಾಳಿ ಮಾಡಿದಾಗಲೂ ಭಾರತದ ನಡೆ ಸ್ಪಷ್ಟವಾಗಿತ್ತು. ಅದು ರಷ್ಯಾವನ್ನು ಕಣ್ಮುಚ್ಚಿ ಬೆಂಬಲಿಸಲೂ ಇಲ್ಲ, ಅಷ್ಟೇ ಸಲೀಸಾಗಿ ಅದು ಯುರೋಪ್ ಮತ್ತು ಅಮೆರಿಕಗಳನ್ನೂ ಸಮರ್ಥಿಸಲೂ ಇಲ್ಲ. ಅಗತ್ಯಬಿದ್ದಾಗ ಮೋದಿಯವರು ಪುಟಿನ್‌ರಲ್ಲಿ ಮಾತನಾಡಿ ಇದು ಯುದ್ಧ ಮಾಡುವ ಕಾಲವಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು ಕೂಡ. ಒಂದು ಕಡೆ ಭಾರತವು ಇಸ್ರೇಲ್ ಮತ್ತು ಇತರೆ ದೇಶಗಳೊಂದಿಗಿನ ತನ್ನ ಬಾಂಧವ್ಯವನ್ನು ವೃದ್ಧಿಸಿದೆ.
ಇನ್ನೊಂದು ಕಡೆ ಅರಬ್ ರಾಷ್ಟ್ರಗಳೊಂದಿಗಿನ ಬಾಂಧವ್ಯವನ್ನೂ ಗಟ್ಟಿಗೊಳಿಸಿಕೊಂಡಿದೆ. ಅರಬ್ ರಾಷ್ಟ್ರಗಳು ಪಾಕಿಸ್ತಾನಕ್ಕೆ ಸೊಪ್ಪುಹಾಕುತ್ತಿಲ್ಲ, ಆದರೆ ಅವು ಭಾರತವನ್ನು ಹೆಚ್ಚು ಇಷ್ಟಪಡುತ್ತವೆ. ವಿಶ್ವಾದ್ಯಂತ ಭಾರತದ ಮೇಲೆ ಗೌರವಾದರ ಹೆಚ್ಚುತ್ತಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಇದಕ್ಕೆ ಬಹುಮುಖ್ಯ ಕಾರಣ ಮೋದಿ ಮತ್ತವರ ತಂಡ. ಭಾರತದ ಘನತೆಯನ್ನು
ಎತ್ತಿಹಿಡಿಯುವಲ್ಲಿ ನರೇಂದ್ರ ಮೋದಿಯವರೊಂದಿಗೆ ಅಷ್ಟೇ ಸಶಕ್ತವಾಗಿ ವಿದೇಶಾಂಗ ಸಚಿವ ಜೈಶಂಕರ್ ಕೆಲಸ ಮಾಡಿದ್ದಾರೆ ಎಂದು ಹೇಳುವುದರಲ್ಲಿ ನನಗೆ ಯಾವುದೇ ಹಿಂಜರಿಕೆ ಇಲ್ಲ.
ಪುಟಿನ್‌ಗೂ ಮುನ್ನ ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಯವರನ್ನು ಹೊಗಳಿದ್ದರು. ಮತ್ತೊಬ್ಬ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೋದಿಯವರ ಕುರಿತಾಗಿ ‘ಟೈಮ್ಸ್’ ಪತ್ರಿಕೆಯಲ್ಲಿ ಒಂದು ಲೇಖನವನ್ನೂ ಬರೆದಿದ್ದರು. ವಿಶ್ವದ ಅತ್ಯಂತ ಪ್ರಭಾವಿ ನಾಯಕ ಎಂದು ಐದು ಬಾರಿ ಟೈಮ್ಸ್ ಮ್ಯಾಗಜಿನ್‌ನಲ್ಲಿ ಮೋದಿಯವರ ಹೆಸರು ಪ್ರಕಟವಾಗಿದೆ. ಜವಾಹರ ಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಜತೆ ಮೋದಿಯವರ ಹೆಸರೂ ಸೇರಿಕೊಂಡಿದೆ. ಇಂದು ಭಾರತದಲ್ಲಿ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂಬುದನ್ನು ಅಲ್ಲಗಳೆಯಲಾಗದು.
ಸ್ವಾತಂತ್ರ್ಯಾನಂತರದಲ್ಲಿ ಭಾರತವು ವಿಶ್ವದ ಯಾವುದೇ ಬಣಕ್ಕೆ ಸೇರದಂತೆ ಜವಾಹರಲಾಲರು ನೋಡಿಕೊಂಡರು. ಭಾರತದ ದೃಢತೆಯನ್ನು ಇಂದಿರಾ ಗಾಂಧಿ ಮತ್ತೆ ಎತ್ತಿ ಹಿಡಿದರು. ಇದೀಗ ಮೋದಿಯವರು ಅದನ್ನು ಇನ್ನಷ್ಟು ಎತ್ತರಿಸಿದ್ದಾರೆ. ನೆಹರು ಕಾಲದಲ್ಲಿ ವಿಶ್ವದ ಎಲ್ಲ ನಾಯಕರೂ ಅವರನ್ನು ಹೊಗಳುತ್ತಿದ್ದರು. ಅವರು ಎಲ್ಲರನ್ನೂ ಅಪ್ಪಿಕೊಂಡು ಹಸ್ತಲಾಘವ ಮಾಡಿ ಎಲ್ಲರ ಹೆಗಲ ಮಲೆ ಕೈಯಿಟ್ಟು ಸ್ನೇಹಹಸ್ತ ಚಾಚುತ್ತಿದ್ದರು. ಆ ಕಾಲಘಟ್ಟದಲ್ಲಿ ನೆಹರು ಮತ್ತು ಜಾನ್ ಎಫ್. ಕೆನಡಿ ಇಬ್ಬರೂ ಸ್ವತಂತ್ರ ಮನೋಧರ್ಮ ಹೊಂದಿದವರಾಗಿದ್ದರು ಮತ್ತು ಅವರು ಬ್ರಿಟನ್ನಿನ ರಾಣಿಯ ಮುಂದೆ ಎಂದೂ ತಲೆಬಾಗಲಿಲ್ಲ.
ನೆಹರು ಕಾಲದಲ್ಲಿ ಭಾರತ ತಾತ್ವಿಕ ಗಟ್ಟಿತನವನ್ನು ತೋರಿತ್ತು. ಇಂದು ಮೋದಿಯವರ ಕಾಲದಲ್ಲಿ ತಾತ್ವಿಕತೆಯೊಂದಿಗೆ ಆರ್ಥಿಕ
ಸ್ವಾವಲಂಬನೆಯೂ ಹೆಚ್ಚಿದೆ. ತನ್ನ ಶಕ್ತಿಯ ಪ್ರದರ್ಶನ ಮಾಡುವಲ್ಲಿ ಮೋದಿ ಸಿದ್ಧಹಸ್ತರು. ಅವರಲ್ಲಿರುವ ರಾಜತಾಂತ್ರಿಕ ಗುಣ ವೂ ವಿಶೇಷವಾದದ್ದು. ಇಂದು ವಿಶ್ವದ ಎಲ್ಲ ನಾಯಕರೂ ಮೋದಿಯವರನ್ನು ಅಪ್ಪಿಕೊಳ್ಳಲುಹಾತೊರೆಯುತ್ತಾರೆ.
ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್, ಷಿ ಜಿನ್‌ಪಿಂಗ್ ಅಥವಾ ಇನ್ನಾರೇ ಇರಲಿ, ಅವರೆಲ್ಲರಿಗೂ ಮೋದಿ ಎಂದರೆ ಅದೇನೋ ವಿಶೇಷ ಅಭಿಮಾನ. ವಿಶ್ವದ ಉನ್ನತ ನಾಯಕರ ಜತೆಗೆ ಮೋದಿ ಅಷ್ಟೇ ಘನತೆಯ ನಡೆಯನ್ನು ತೋರಿದ್ದಾರೆ. ತಮ್ಮಲ್ಲಿರುವ
ಈ ವಿಶೇಷ ಗುಣದಿಂದಾಗಿಯೇ ಅವರು ವಿಶ್ವಮಾನ್ಯರಾಗಿದ್ದಾರೆ. ವಿಶ್ವದ ಎಲ್ಲೆಡೆಯಿಂದ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತವಾಗು ತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ವಿಶ್ವ ನಕಾಶೆಯಲ್ಲಿ ‘ಸೂಪರ್ ಪವರ್’ ಆಗುವತ್ತ ಭಾರತ ಮುನ್ನುಗ್ಗುತ್ತಿದೆ. ಸಾರೇ ಜಹಾನ್ ಸೆ ಅಚ್ಚಾ, ಹಿಂದೂಸ್ತಾನ್ ಹಮಾರಾ…