Wednesday, 11th December 2024

ಸುಂದರಿಯ ಸಮರಕ್ಕೆ ಬೆವರುತ್ತಿರುವ ಪುಟಿನ್‌

ಡಾ.ಜಗದೀಶ್ ಮಾನೆ

ಇಡೀ ಯುರೋಪ್ ಖಂಡದಲ್ಲಿಯೇ ಅದು ಅತ್ಯಂತ ಸುಂದರ ದೇಶ. ಅದನ್ನು ಭೂಲೋಕದ ಸ್ವರ್ಗ ಅಂತಲೂ ಕರೆಯುತ್ತಾರೆ. ಅಲ್ಲಿನ ಜನರು ಯಾರೊಬ್ಬರಿಗೂ ಕೆಟ್ಟದ್ದನ್ನು ಬಯಸುವವರಲ್ಲ, ತುಂಬಾ ಸೌಮ್ಯ ಸ್ವಭಾವದವರು. ಅವರು ಎಲ್ಲರೊಂದಿಗೆ
ಪ್ರೇಂಡ್ಲಿ ಆಗಿ ಇರುತ್ತಾರೆ. ಬೇರೆಯವರಿಗೆ ಬಹಳಷ್ಟು ಸಹಾಯ ಮಾಡಬಲ್ಲ ಮನಸ್ಥಿತಿ ಅವರದ್ದು.

ಅದೇ ಕಾರಣಕ್ಕೆ ಬೇರೆ ಬೇರೆ ದೇಶದ ಪ್ರವಾಸಿಗರು ಅಲ್ಲಿಗೆ ಬಂದಾಗ ಅವರಲ್ಲಿ, ನಾವು ಬೇರೊಂದು ದೇಶಕ್ಕೆ ಬಂದಿದ್ದೇವೆ ಅನ್ನೋ ಭಾವನೆಯ ಬದಲಾಗಿ ನಮ್ಮ ದೇಶದಲ್ಲಿಯೇ ಇದ್ದೇವೆ ಅಂತ ಅನಿಸುತ್ತದೆ. ಅಷ್ಟೊಂದು ಹೃದಯ ಶ್ರೀಮಂತಿಕೆ ಉಕ್ರೇನಿಗರದ್ದು. ಅಲ್ಲಿನ ಹುಡುಗ, ಹುಡುಗಿಯರಂತೂ ಬಲು ಸುಂದರ, ಮತ್ತು ತುಂಬಾ ಲಾಯಲ್ ಮನಃಸ್ಥಿತಿ ಹೊಂದಿದವರು. ಯಾರನ್ನಾದರೂ ಪ್ರೀತಿಸಿದರೆ, ಏನೇ ಆದರೂ ಅವರಿಗೆ ಮೊಸ ಮಾಡುವುದಿಲ್ಲ.

ಇನ್ನು ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಎಷ್ಟೊಂದು ಮಹತ್ವ ಇದೆಯೋ, ಅಲ್ಲಿಯೂ ಅವರು ಮದುವೆಗೆ ಅಷ್ಟೇ ಪ್ರಾಧಾನ್ಯ ಕೊಟ್ಟಿದ್ದಾರೆ. ಮದುವೆ ಅನ್ನುವುದು ಅತ್ಯಂತ ಪವಿತ್ರ ಸಂಬಂಧ ಎಂದು ಭಾವಿಸಿದ್ದಾರೆ. ಹಾಗಾಗಿ ಅವರನ್ನು
ಚಿನ್ನದ ಹೃದಯದವರು ಅಂತ ಕರೆಯುತ್ತಾರೆ. ಇಡೀ ಯುರೋಪಿಯನ್ ಖಂಡದ ಲ್ಲಿಯೇ, ಪ್ರಾನ್ಸ್ ಹೊರತು ಪಡಿಸಿದರೆ, ನಂತರದ ದೊಡ್ಡ ದೇಶ ಉಕ್ರೇನ್. ನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದ ಉಕ್ರೇನ್ 1991ರಲ್ಲಿ ಸೋವಿ
ಯತ್ ಯೂನಿಯನ್‌ನಿಂದ ಸ್ವತಂತ್ರವಾಗಿ ಹೊರ ಬಂದು ತನ್ನ ಸೈನ್ಯವನ್ನು ಬಲಿಷ್ಠ ವಾಗಿ ನಿರ್ಮಿಸಿಕೊಂಡಿದೆ.

ಅಲ್ಲಿನ ಮಕ್ಕಳಿಗೆ ಶಾಲೆಯ ದಿನಗಳಿಂದಲೇ ಸೇನಾ ತರಬೇತಿಯನ್ನು ಕೊಡಲಾಗುತ್ತದೆ. ದೇಶದಲ್ಲಿ ಕೃಷಿಗೆ ಹೆಚ್ಚು ಮಹತ್ವ ನೀಡಲಾಗಿದೆ, ಅಲ್ಲಿನ ಜನರು ಅದೆಷ್ಟೇ ವಿದ್ಯಾಭ್ಯಾಸ ಕಲಿತು, ಎಂತಹದ್ದೇ ದೊಡ್ಡ ಕೆಲಸದಲ್ಲಿ ತೊಡಗಿದ್ದರೂ ಕೃಷಿಯಲ್ಲಿ ಅಲ್ಪ ಸ್ವಲ್ಪ ಮಟ್ಟಿಗಾದರೂ ನಿರತರಾಗಿರುತ್ತಾರೆ. ಹಾಗಾಗಿ ಉಕ್ರೇನಿನಲ್ಲಿ ರೈತರಿಗಿರುವ ಗೌರವ ಹೆಚ್ಚು. ಅವರನ್ನು ಅತ್ಯಂತ ಪ್ರೀತಿ ಯಿಂದ ಕಾಣುತ್ತಾರೆ.

ಉಕ್ರೇನ್ ‘ಬ್ರೆಡ್ ಬಾಸ್ಕೆಟ್’ ಎಂದೇ ಹೆಸರುವಾಸಿ. ಅಲ್ಲಿ ತಯಾರಿಸುವ ಬ್ರೆಡ್ ಕ್ವಾಲಿಟಿಯು ತುಂಬಾ ಚೆನ್ನಾಗಿದೆ. ಹಾಗಾಗಿ
ಉಕ್ರೇನ್ ನಲ್ಲಿ ತಯಾರಾದ ಬ್ರೆಡ್ ಬೇರೆ ಬೇರೆ ದೇಶಗಳಿಗೆ ರಪ್ತು ಆಗುತ್ತದೆ, ಆದ್ದರಿಂದ ಅದು ಇಡೀ ಯೂರೋಪ್ ಖಂಡದಲ್ಲಿ ತುಂಬಾ ಪ್ರಸಿದ್ದವಾಗಿದೆ. ಉಕ್ರೇನಿಗರಿಗೂ ಬ್ರೆಡ್ ಅಂದರೆ ಪಂಚ ಪ್ರಾಣ. ಅಲ್ಲಿನ ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರವಾಸಿ ತಾಣ
ಗಳಲ್ಲಿ ಹಾಗೂ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ‘McDonald’s’ ಎಂಬ ಉಪಹಾರದ ಹೊಟೇಲ್‌ಗಳಿವೆ. ಅಲ್ಲಿನ ಬಹುತೇಕ ಜನರು
ಮನೆಗಳಲ್ಲಿ ಊಟ ಮಾಡುವುದಿಲ್ಲ, ಬದಲಿಗೆ ‘McDonald burger’ ಗಳಲ್ಲಿಯೇ ತಮ್ಮ ನಿತ್ಯದ ಊಟ ತಿಂಡಿಗಳನ್ನು ಮುಗಿಸು ತ್ತಾರೆ. ಪ್ರತಿಯೊಂದು ಗಲ್ಲಿಗಳಲ್ಲಿಯೂ ಈ ಅಂಗಡಿಗಳಿವೆ, ಆದರೂ ಆ ಎಲ್ಲ ಅಂಗಡಿಗಳು ವೀಕೆಂಡ್‌ಗಳಲ್ಲಿ ಜನಸಾಗರದಿಂದ ತುಂಬಿರುತ್ತವೆ. ಜಗತ್ತಿನಲ್ಲಿ ಅತ್ಯಂತ ಪಾಪುಲರ್ ಚಿಕನ್ ಡಿಶ್ ಗಳಲ್ಲಿ ಒಂದಾದ ‘ಚಿಕನ್ ಕೀವ್’ ಉಕ್ರೇನ್ ದೇಶದ್ದಾಗಿದೆ.

ಈ ದೇಶವನ್ನು ಕ್ಯಾಪಿಟಲ್ ಆಫ್ ಕೆಫೆ ಅಂತಲೂ ಕರೆಯುತ್ತಾರೆ. ಉಕ್ರೇನಿನ ಕೀವ್ ನಗರದ ಪ್ರತಿ ನೂರು ಮೀಟರ್ ಅಂತರದಲ್ಲಿ ಒಂದೊಂದು ಕೆಫೆ ಸಿಗುತ್ತದೆ. ಹಾಗಾಗಿ ಉಕ್ರೇನ್ ರಾಜಧಾನಿ ಕಿವ್, ಜಗತ್ತಿನಲ್ಲಿಯೇ ಅತಿ ಹೆಚ್ಚು ಕೆಫೆ ಇರುವ ನಗರ ಎನ್ನುವ ಕೀರ್ತಿಗೆ ಭಾಜನವಾಗಿದೆ. ವಿಶೇಷವಾಗಿ ಅಲ್ಲಿನ ಜನರಿಗೆ ಶರಾಬು ಅಂದ್ರೆ ಬಹಳ ಇಷ್ಟ. ವಿಶ್ವದಲ್ಲಿ ಅತಿ ಹೆಚ್ಚಾಗಿ ಶರಾಬು ಕುಡಿ ಯುವ ದೇಶಗಳ ಪಟ್ಟಿಯಲ್ಲಿ ಉಕ್ರೇನ್ ಆರನೇ ಸ್ಥಾನ ಪಡೆದಿದೆ.

ರಾಜಧಾನಿ ಕೀವ್ ನಗರವನ್ನು ಹೀರೋ ಸಿಟಿ ಅಂತಲೂ ಕರೆಯುತ್ತಾರೆ, ಕೀವ್ ಉಕ್ರೇನಿನ ಜೀವನಾಡಿ. ಜಗತ್ತಿನ ಅತ್ಯಂತ ದೊಡ್ಡ ವಿಮಾನ ತಯಾರಿಕೆ ಹಾಗೂ ನೆಲದಿಂದ ನೂರು ಮೀಟರ್ ಆಳದಲ್ಲಿ ರೈಲು ನಿಲ್ದಾಣವನ್ನು ನಿರ್ಮಿಸಿದ ಕೀರ್ತಿ ಉಕ್ರೇನದ್ದು.
ಇಡೀ ಯುರೋಪ್ ಖಂಡದಲ್ಲಿ ಅತಿ ಹೆಚ್ಚಾಗಿ ಶಿಕ್ಷಣ, ವಾಣಿಜ್ಯಕ್ಕೆ ಪ್ರಸಿದ್ಧ ಕೇಂದ್ರವಾಗಿದೆ. ಅಲ್ಲಿ ಹೈಟೆಕ್ ಇಂಡಸ್ಟ್ರಿಗಳು, ಉನ್ನತ
ವಿಶ್ವವಿದ್ಯಾಲಯಗಳಿವೆ. ಉಕ್ರೇನ್‌ನಲ್ಲಿ ಸಾಕಷ್ಟು ಅದ್ಭುತಗಳು ಇರುವುದು ಕಂಡುಬರುತ್ತದೆ. ಪ್ರಾಕೃತಿಕವಾಗಿ ಬಲು ಸುಂದರ ವಾದ ಉಕ್ರೇನಿನ ಉತ್ತರದ ಭಾಗವಂತೂ ಕಪ್ಪು ಸಮುದ್ರದಿಂದ ಆವರಿಸಿದೆ. ಅಲ್ಲಿನ ಜನರಿಗೆ ಕಪ್ಪುಸಮುದ್ರ ಬಲು ಇಷ್ಟ. ವೀಕೆಂಡ್ ಸಮಯದಲ್ಲಿ ಅಲ್ಲಿನ ಬೀಚ್ ಗಳಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಾರೆ. ಅಲ್ಲಿನ ಐತಿಹಾಸಿಕ ಸುಪ್ರಸಿದ್ಧ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಅಲ್ಲಿ ಹತ್ತಾರು ಐತಿಹಾಸಿಕ ಕಟ್ಟಡಗಳಿವೆ, ಹಾಗಾಗಿ ಇದನ್ನು ಹಾರ್ಟ್ ಆಫ್ ಯುರೋಪ್ ಅಂತಲೂ ಕರೆಯುತ್ತಾರೆ. ‘ಟನಲ್
ಆ- ಲವ್’ ಅನ್ನುವ, ಹಚ್ಚು ಹಸುರಿನಿಂದ ಅತ್ಯಂತ ಸುಂದರವಾಗಿ ಕಂಗೊಳಿಸುವ ಸ್ಥಳ ಅಲ್ಲಿದೆ, ಅದರ ಸುತ್ತ ಮೂತ್ತಲೂ ಹಲವಾರು ಸುಪ್ರಸಿದ್ಧ ಆರ್ಕಿಟೆಕ್ಚರ್‌ಗಳಿವೆ. ಅಲ್ಲಿನ ಆರ್ಕಿಟೆಕ್ಚರ್ ನೋಡುವುದೆಂದರೆ ಅದು ಕಣ್ಣಿಗೆ ಒಂತರ ಹಬ್ಬ. ದಕ್ಷಿಣ ಭಾಗದ ವಿಶಾಲ ಪ್ರದೇಶವೊಂದರಲ್ಲಿ ಬೃಹತ್ ಪ್ರಮಾಣದ, ಹಳದಿಮಯವಾದ ಸನ್ ಪ್ಲವರ್ ಫೀಲ್ಡ್ ಇದೆ. ಕಣ್ಣಿನ ದೃಷ್ಟಿ ಎಲ್ಲಿಯವರೆಗೆ ಹೊಗುತ್ತದೆಯೋ ಅಲ್ಲಿಯವರೆಗೂ ಹಳದಿಮಯವಾಗಿ ಕಾಣುತ್ತದೆ. ಉಕ್ರೇನ್ ಎಷ್ಟೊಂದು ಸುಂದರ ವಾಗಿದೆಯೊ ಅಷ್ಟೇ ಸ್ವಚ್ಛತೆಯಿಂದ ಕೂಡಿದ ದೇಶವಾಗಿದೆ.

ಅಲ್ಲಿನ ಪ್ರಕೃತಿ ಸೌಂದರ್ಯ, ಐತಿಹಾಸಿಕ ಹಿನ್ನೆಲೆ, ಸುಸಂಸ್ಕೃತ ಜೀವನಶೈಲಿಯ ಮೂಲಕವೇ ಉಕ್ರೇನ್ ಜಗತ್ತಿನ ಗಮನ ಸೆಳೆದಿದೆ.
ಅಲ್ಲಿನ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಶಿಕ್ಷಣ ಪಡೆದ ದೇಶಗಳ ಪಟ್ಟಿಯಲ್ಲಿ ಉಕ್ರೇನ್ ಮೂರನೇ
ಸ್ಥಾನದಲ್ಲಿದೆ. ಅಲ್ಲಿನ ಶೈಕ್ಷಣಿಕ ಮಟ್ಟ ಯಾವ ಮಟ್ಟಿಗೆ ಇದೆ ಅಂದ್ರೆ ಶೇಕಡಾ 99 ರಷ್ಟು ಜನರಿಗೆ ಓದಲು ಬರೆಯಲು ಬರುತ್ತದೆ.
ಎಂಬತ್ತರಷ್ಟು ಜನ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.

ಹಾಗಾಗಿ ಶಿಕ್ಷಣ ಪಡೆದಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ, ಆ ಆತ್ಮ ವಿಶ್ವಾಸದ ತಾಕತ್ತು ಹೆಚ್ಚಿರುವುದರಿಂದಲೆ ಇಂದು ರಷ್ಯಾ ಸೇನೆ ಅದೆಷ್ಟೋ ಬಲಿಷ್ಠ ಆಗಿದ್ದರೂ ಕೂಡ ಉಕ್ರೇನ್ ಬಗ್ಗುತ್ತಿಲ್ಲ. ಉಕ್ರೇನ್ ಅಧ್ಯಕ್ಷರು ಹೇಳುತ್ತಾರೆ, ‘ಶರಣಾಗತಿ ಅನ್ನುವ ಪ್ರಶ್ನೇ ಇಲ್ಲವೇ ಇಲ್ಲ, ಉಕ್ರೇನಿನ ಕೊನೆಯ ಪ್ರಜೆಯ ಜೀವ ಇರುವ ವರೆಗೂ ನಾವು ಹೋರಾಡುತ್ತೇವೆ’ ಅನ್ನುವ ಅಚಲವಾದ ಮನಸ್ಥಿತಿ ಅವರಲ್ಲಿ ಇದ್ದುದ್ದರಿಂದ ಉಕ್ರೇನ್ ಬಲಿಷ್ಠ ರಷ್ಯಾಗೆ ಬಗ್ಗುತ್ತಿಲ್ಲ…. ಉಕ್ರೇನ್ ಅನ್ನುವ ಆ ಸುಂದರಿಯ ಸಮರಕ್ಕೆ ಪುಟಿನ್ ಬೆವರಿ ಹೊಗಿzರೆ….!