Thursday, 19th September 2024

ರಾಹುಲ್ ಪ್ರಬುದ್ಧರಾಗುತ್ತಿದ್ದಾರೆ ?

ಪ್ರಸ್ತುತ

ಶ್ರೀಧರ್‌ ಡಿ.ರಾಮಚಂದ್ರಪ್ಪ

ಈ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರವರ ವಂಶದ ಕುಡಿ ರಾಹುಲ್ ಗಾಂಧಿ ರಾಜಕಾರಣದ ಅಕಾಡಕ್ಕಿಳಿದು ಸರಿಯಾಗಿ ದಶಕ ಕಳೆದಿದೆ. ಈ ಸಂದರ್ಭದಲ್ಲಿ ರಾಹುಲ್ ರ ಸಾಧನೆಯನ್ನು ಗಮನಿಸಿದರೆ ನಿಜವಾಗಿಯೂ ನಮಗೆ ಬೇಸರವಾಗುತ್ತದೆ. ಏಕೆಂದರೆ ದೇಶದ ಅಗರ್ಭ ಸಿರಿವಂತ ಕುಟುಂಬ ಎಂಬುವುದರ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಪಾತ್ರ ನಿರ್ವಹಿಸಿದ್ದ ಕಾರಣಕ್ಕೆ ನೆಹರೂ ಅವರಿಗೆ ಸ್ವಾತಂತ್ರ್ಯದ ನಂತರ ಈ
ದೇಶದ ಪ್ರಥಮ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುತ್ತಾರೆ.

ಹೀಗಿರುವಾಗ ನೆಹರೂ ನೇತೃತ್ವದ ಕಾಂಗ್ರೆಸ್ ಸರಕಾರದ ಕೊಡುಗೆ ನಮ್ಮ ದೇಶಕ್ಕೆ ಅಪಾರ-ಅನನ್ಯ-ಶ್ಲಾಘನೀಯ. ಹಾಗೆಯೇ ನೆಹರೂ ನಂತರ ಬಂದ ಮಗಳು ಇಂದಿರಾ ಗಾಂಧಿ ಅವರು ದೇಶದ ರಾಜಕೀಯ ರಂಗದಲ್ಲಿ ತಮ್ಮ ವಿಭಿನ್ನ-ವಿಚಿತ್ರ, ನಡೆ-ನುಡಿ, ಧೋರಣೆಯಿಂದ ದೇಶದ ಇತಿಹಾಸದಲ್ಲಿ ಗುರುತಿಸಿಕೊಂಡವರು. ಅವರ ಅವಧಿಯಲ್ಲಿ ಗರೀಬಿ ಹಠಾವೋ ಮತ್ತು ಇಪ್ಪತ್ತು ಅಂಶಗಳ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿ
ಉಳಿಯುವಂತಹದ್ದು.

ಇಂತಹ ಸನ್ನಿವೇಶದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಹೋರಾಟಗಾರರು, ರಾಜಕೀಯ ನಾಯಕರು ಸೇರಿದಂತೆ ಮಾಧ್ಯಮಗಳ ಮೇಲೆ ತಮ್ಮ ಹಿಡಿತವನ್ನು ಹರಿಬಿಟ್ಟು ಎಲ್ಲರ ದೃಷ್ಟಿಯಲಿ ವಿಲನ್ ಎನಿಸಿಕೊಂಡ ಇಂದಿರಾ ಅವರ ಸರ್ವಾಧಿಕಾರಿ ಧೋರಣೆ ನಡೆ ಎಲ್ಲರ ಅಸಮಾಧಾನ, ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ತುರ್ತು ಪರಿಸ್ಥಿತಿ ನಂತರ ನಡೆದ ದೇಶದ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮನೆ ಸೇರುತ್ತಾರೆ. ಇದೇ ಹಾದಿಯಲ್ಲಿ ತಾಯಿಯ ಹಠಾತ್ ಸಾವಿನ ನಂತರ ರಾಜಕೀಯ ಪ್ರವೇಶಿಸಿದ ಹಿರಿಯ ಪುತ್ರ ರಾಜೀವ್ ಗಾಂಧಿ ಅವರದು ದೇಶದ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ವ್ಯವಸ್ಥೆಯ ಅಽಕಾರ ವಿಕೇಂದ್ರೀಕರಣ, ವಿeನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಇಂದಿನ ಅಂದರೆ ಪ್ರಸ್ತುತ ಪೀಳಿಗೆಯು ಅನುಭವಿಸುತ್ತಿರುವ ಅನುಕೂಲಗಳು ರಾಜೀವ್ ಗಾಂಧಿ ದೇಶದ ಪ್ರಧಾನಿಯಾದಾಗ ತಂದ, ಅನುಸರಿಸಿದ ಕ್ರಮಗಳ ಹಲವು.

ಹಾಗಾಗಿ, ಅದೇ ವಂಶದ ಕುಡಿಯಾಗಿ ಬಹಳ ತಡವಾಗಿ ರಾಜಕೀಯ ರಂಗ ಪ್ರವೇಶಿಸಿದ ಇಂದಿರಾ ಪ್ರಿಯದರ್ಶಿನಿ ಮೊಮ್ಮಗ, ರಾಜೀವ್ ಗಾಂಧಿ ಪುತ್ರ ರಾಹುಲ್ ವಿದೇಶದಲ್ಲಿ ವ್ಯಾಸಂಗ ಮಾಡಿ ಉತ್ತಮ ಜ್ಞಾನ ಪಡೆದಿರುವ, ತನ್ನ ದೀರ್ಘ ಇತಿಹಾಸವಿರುವ ಭವ್ಯ ಪರಂಪರೆ, ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದ ರಾಹುಲ್, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಅಂದರೆ, ಕಾಂಗ್ರೆಸ್ ಪಕ್ಷದಲ್ಲಿ ದಶಕದ ಹಾದಿಯಲ್ಲಿ ಸಾಗಿದ್ದಾರೆ. ಆದರೆ ಇದರಲ್ಲಿ ಅವರ ಸಾಧನೆಯನ್ನು ನಾವು ವಿಮರ್ಶೆಗೆ ಒಡ್ಡಿದಾಗ ತುಂಬಾ ಬೇಸರವಾಗುತ್ತದೆ.

ತಂದೆಯ ರೂಪವನ್ನು ಪಡೆದಿರುವ ರಾಹುಲ್, ಉತ್ತಮ ರಾಜಕೀಯ ಪಟು ಎನ್ನಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮ ಅಪ್ರಬುದ್ಧ ಮಾತು, ನಡುವಳಿಕೆಗಳಿಂದ ವಿರೋಧಿ ಪಕ್ಷ ಬಿಜೆಪಿಗೆ ಹಾಗೂ ಅದರ ಕಾರ್ಯಕರ್ತರ ಮುಂದೆ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ತಂಗಿ ಪ್ರಿಯಾಂಕಾ ವಾದ್ರಾ ಗಾಂಧಿ ರೂಪದಲ್ಲಿ ಅಜ್ಜಿಯನ್ನು ಹೋಲುತ್ತಿದ್ದು, ತಮ್ಮ ಹಿತ-ಮಿತ ಮಾತು, ನಡುವಳಿಕೆಗಳಿಂದ ಇಷ್ಟವಾಗುತ್ತಾರೆ. ಆದರೆ ರಾಹುಲ್ ಇನ್ನು
ಪಕ್ವವಾಗಬೇಕು ಎನ್ನುವುದು ಅವರ ಮಾತು, ಕೃತಿಯಿಂದ ತಿಳಿದು ಬರುತ್ತದೆ. ಪ್ರಸ್ತುತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಹೊಂದಿದ್ದ ವರ್ಚಸ್ಸು ಈಗ ಇಲ್ಲ. ಅದನ್ನೇ ಬಳಸಿಕೊಂಡು ರಾಹುಲ್ ಈ ಬಾರಿಯಾದರೂ ಪಕ್ಷವನ್ನು ಅಧಿಕಾರಕ್ಕೆ ತಂದು ಈ ದೇಶದ ಪ್ರಧಾನಿಯಾಗಿ ಹೊರ ಹೊಮ್ಮಬೇಕಿತ್ತು. ಆದರೆ ಅದು ಸಾಧ್ಯವಾಗದೆ, ವಿಪಕ್ಷ ನಾಯಕನಿಗೆ ಸಾಕಾಗಬೇಕಾಯಿತು.

ಇತ್ತೀಚಿನ ಲೋಕಸಭೆ ಚುನಾವಣೆ ಪೂರ್ವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ. ದೇಶದ ಈಶಾನ್ಯ ರಾಜ್ಯಗಳಿಂದ ಗುಜರಾತ್‌ವರೆಗೆ ನಡೆದ ‘ಭಾರತ್ ಜೋಡೋ ಯಾತ್ರೆ’ ಇಡೀ ದೇಶದ ಜನರ ಗಮನ ಸೆಳೆದಿದ್ದು ಸುಳ್ಳಲ್ಲ! ಆದಕಾರಣ ರಾಹುಲ್ ದೇಶದ ಒಂದು ಪಕ್ಷದ ಬಹುಸಂಖ್ಯಾತ ಜನರ ಕಣ್ಮಣಿ. ಹೀಗಿರುವಾಗ ಅವರ ಆಶಯ, ಕನಸುಗಳಿಗೆ ಜೀವ ತುಂಬುವಂತಹ ವ್ಯಕ್ತಿತ್ವದ ಜತೆ ಕೆಲಸವನ್ನು ನಿರ್ವಹಿಸಬೇಕಿದೆ. ಮೊನ್ನೆ ನಡೆದ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಧೋರಣೆ ಕುರಿತು ತುಂಬಾ ಸೊಗಸಾಗಿ, ಪ್ರಬುದ್ಧರಾಗಿ ಆಡಳಿತ ಪಕ್ಷ ಹಾಗೂ ಅದರ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಮೂಲಕ ತಾನು ಪ್ರಬುದ್ಧನಾಗಿದ್ದೇನೆ ಎಂದು ತೋರಿಸಿಕೊಟ್ಟಿzರೆ. ಇದು ರಾಹುಲ್‌ಗೆ ಭವಿಷ್ಯದ
ಭಾರತದಲ್ಲಿ ಒಳ್ಳೆಯ ದಿನಗಳಿವೆ ಎಂಬುದನ್ನು ಜಗತ್ತಿಗೆ ಖಾತ್ರಿಪಡಿಸಿದೆ.

(ಲೇಖಕರು: ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *