Saturday, 14th December 2024

ರೈಲ್ವೆ ಅಭಿವೃದ್ದಿಯಲ್ಲಿ ಆತ್ಮನಿರ್ಭರತೆ

ಅಭಿವೃದ್ದಿ

ಪ್ರಕಾಶ್ ಶೇಷರಾಘವಾಚಾರ್‌

ಭಾರತೀಯ ರೈಲು ಅಂದರೆ ಕಣ್ಣಿನ ಮುಂದೆ ಬರುತ್ತಿದ್ದ ಚಿತ್ರಣ-ಅವ್ಯವಸ್ಥೆಯ ಆಗರದ ರೈಲು ನಿಲ್ದಾಣ, ದುರ್ನಾತದ ಫ್ಲಾಟ್
ಫಾರಂಗಳು, ಬದಲಾವಣೆಯೇ ಕಾಣದ ರೈಲು ಬೋಗಿಗಳು ಮತ್ತು ಅನೇಕ ಸಮಸ್ಯೆಗಳ ಸರಮಾಲೆ. ಈ ಚಿತ್ರಣ ಬದಲಾಗಲು ಸಾಧ್ಯವಾ? ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಆದರೆ, ೨೦೧೪ರ ತರುವಾಯ ಭಾರತೀಯ ರೈಲ್ವೆಯ ಚಿತ್ರಣ ಬದಲಾವಣೆಯತ್ತ ಸಾಗಿದೆ.

ಸ್ವಚ್ಛತೆ ಅಗ್ರಸ್ಥಾನ ಪಡೆದುಕೊಳ್ಳುತ್ತಿದೆ. ಹೊಸ ಪೀಳಿಗೆಯ ಆಶಯ ಬಿಂಬಿಸುವ ರೈಲು ಗಳು ಆರಂಭವಾಗುತ್ತಿವೆ. ಎಲ್ಲಕ್ಕಿಂತ ಮಿಗಿಲಾಗಿ ರೈಲು ನಿಲ್ದಾಣಗಳನ್ನೂ ವಿಮಾನ ನಿಲ್ದಾಣದ ಹಾಗೆ ಅಭಿವೃದ್ಧಿಪಡಿಸಬಹುದು ಎಂದು ತೋರಿಸಿ ಕೊಡಲಾಗುತ್ತಿದೆ.
ಭಾರತೀಯ ರೈಲ್ವೆ ೧೫ ಲಕ್ಷ ಸಿಬ್ಬಂದಿಯನ್ನು ಹೊಂದಿರುವ ವಿಶ್ವದಲ್ಲೇ ಎರಡನೆ ಅತಿ ದೊಡ್ಡ ಸಂಸ್ಥೆ. ಇದರಲ್ಲಿ ದಿನನಿತ್ಯ ೧೩,೧೬೯ ಪ್ಯಾಸೆಂಜರ್ ರೈಲುಗಳು ವರ್ಷಕ್ಕೆ ೮೦೦ ಕೋಟಿ ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದೆ. ೧.೨೩ ಬಿಲಿಯನ್ ಮೆಟ್ರಿಕ್ ಟನ್ ಸರಕನ್ನು ೮,೪೭೯ ಗೂಡ್ಸ್ ರೈಲುಗಳು ಸಾಗಿಸುತ್ತಿವೆ.

ಇದಕ ಮೋದಿ ಸರಕಾರ ಕಳೆದ ಎಂಟು ವರ್ಷದಲ್ಲಿ ೩,೬೮೧ಕಿಮಿ ಹೊಸ ರೈಲು ಮಾರ್ಗ, ೪,೮೭೧ ಕಿ.ಮಿ. ಗೇಜ್ ಪರಿವರ್ತನೆ ಮತ್ತು ೯,೧೬೮ ಕಿ.ಮಿ. ಬ್ರಾಡ್ ಗೇಜ್ ಡಬ್ಬಲ್ ಲೈನ್ ಅಳವಡಿಸಿದೆ. ಒಟ್ಟಾರೆ ೧೭,೭೨೦ಕಿ.ಮಿ. ಉದ್ದದ ರೈಲು ಮಾರ್ಗವು ಎಂಟು ವರ್ಷ ದಲ್ಲಿ ನಿರ್ಮಾಣವಾಗಿದೆ. ಈ ಅಂಕಿ ಅಂಶವನ್ನು ೨೦೦೯-೧೪ಕ್ಕೆ ಹೋಲಿಕೆ ಮಾಡಿದರೆ ಶೇ.೬೭ರಷ್ಟು ಹೆಚ್ಚು ಈ ವಿಭಾಗದಲ್ಲಿ ಸಾಧನೆಯಾಗಿದೆ.

೨೦೦೯ -೧೪ ರ ಯುಪಿಎ ಸರಕಾರದಲ್ಲಿ ಗೇಜ್ ಪರಿವರ್ತನೆಗೆ, ಹೊಸ ಮಾರ್ಗ ಮತ್ತು ಡಬ್ಬಲ್ ಲೈನ್ ನಿರ್ಮಾಣಕ್ಕೆ ಕಾದಿರಿಸಿದ್ದ ಮೊತ್ತ ಕೇವಲ ?೧೧,೫೨೭ ಕೋಟಿ ಯಾಗಿತ್ತು.೨೦೧೪-೧೯ ರಲ್ಲಿ ? ೨೬,೦೨೬ ಕೋಟಿ ಅಂದರೆ ಶೇ.೧೨೬ ರಷ್ಟು ಅಽಕ ಹಣವನ್ನು ನೀಡಲಾಗಿದೆ. ೨೦೨೧-೨೨ ರ ಕೇಂದ್ರ ಮುಂಗಡ ಪತ್ರದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ನೀಡಿದ ಹಣವು ?೫೨,೪೯೮ ಕೋಟಿಗಳು ೨೦೦೯-೧೪ ರ ಹೋಲಿಕೆಯಲ್ಲಿ ಇದು ಶೇ.೩೫೫ ಹೆಚ್ಚುವರಿಯಾಗಿದೆ.

ಮೇಕ್ ಇನ್ ಇಂಡಿಯಾದಡಿಯಲ್ಲಿ ಭಾರತೀಯ ೭೯,೨೬೯ ರೈಲು ಕೋಚ್‌ಗಳಿಗೆ ೨,೫೮,೯೦೬ ಬಯೋ ಟಾಯ್ಲೆಟ್ ಅಳವಡಿಕೆ ಯಾಗಿದೆ. ಕಳೆದ ಎಂಟು ವರ್ಷದಲ್ಲಿ ಎಲ್ಲ ರೈಲು ಕೋಚ್‌ಗಳು ಬಯೋ ಟಾಯ್ಲೆಟ್‌ಗೆ ಬದಲಾಗಿವೆ. ಇದರಿಂದ ಮಲ-ಮೂತ್ರ ಕಂಬಿಯ ಮೇಲೆ ಬೀಳುವುದು ತಪ್ಪಿದೆ. ರೈಲ್ವೆ ಸಂಪರ್ಕಾಧಿಕಾರಿ ರಾಜೀವ್ ಜೈನ್ ಪ್ರಕಾರ ೨,೭೪,೦೦೦ ಲೀಟರ್ ಮಲ-ಮೂತ್ರವು ಟ್ರ್ಯಾಕ್ ಮೇಲೆ ಬೀಳದೆ ಟ್ರ್ಯಾಕ್‌ಗಳ ನಿರ್ವಹಣೆಯಲ್ಲಿ ವಾರ್ಷಿಕ ?೪೦೦ ಕೋಟಿ ಉಳಿತಾಯವಾಗುತ್ತಿದೆ ಎನ್ನುತ್ತಾರೆ.

ಪ್ರಯಾಣಿಕರ ಸುರಕ್ಷತೆಗೆ LHB ಕೋಚ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಜರ್ಮನ್ ತಂತ್ರಜ್ಞಾನದ LHB ಕೋಚ್ ಗಳು ಹಗುರ ಮತ್ತು ಹೆಚ್ಚು ವೇಗವಾಗಿ ಚಲಿಸಲು ಸಮರ್ಥ. ಅಪಘಾತ ಸಂಭವಿಸಿದಾಗ ಒಂದು ಬೋಗಿಯ ಮೇಲೆ ಮತ್ತೊಂದು ಹತ್ತದ ಹಾಗೆ ಸುರಕ್ಷತಾ ಕವಚವಿರುವ ಕಾರಣ ಸಾವು ನೋವು ಕಡಿಮೆಯಾಗುತ್ತದೆ. ಈಗಾಗಲೇ ೯೦೦೦ಕ್ಕೂ ಹೆಚ್ಚು LHB ಕೋಚ್‌ಗಳು ಬಳಕೆ ಯಲ್ಲಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಪಘಾತ ನಿರೋಧಕ ಕವಚ ತಂತ್ರಜ್ಞಾನವು ರೈಲುಗಳು  ಖಾಮುಖಿಯಾಗಿ ಅಪಘಾತ ಸಂಭವಿಸುವುದನ್ನು ತಪ್ಪಿಸುತ್ತದೆ.

೨೦೧೬ರಿಂದ ಇದನ್ನು ಪ್ರಯೋಗಾತ್ಮಕವಾಗಿ ಬಳಸಿದ ತರುವಾಯ ಆಯ್ದ ರೈಲುಗಳಲ್ಲಿ ಅಳವಡಿಕೆ ಮಾಡಲಾಗುತ್ತಿದೆ.
ಶೇ.೧೦೦ ರಷ್ಟು ರೈಲು ಮಾರ್ಗವನ್ನು ೨೦೨೩ರೊಳಗೆ ವಿದ್ಯುದ್ದೀಕರಣ ಯೋಜನೆಯು ಅನುಷ್ಠಾನವಾಗುತ್ತಿದೆ. ದೇಶದ ೬೫,೧೪೧ ಕಿ.ಮಿ. ಬ್ರಾಡ್‌ಗೇಜ್ ಮಾರ್ಗದಲ್ಲಿ ೫೩,೪೭೦ಕಿ.ಮಿ. ಅಂದರೆ ಶೇ.೮೨ರಷ್ಟು ಮಾರ್ಗವು ಈಗಾಗಲೇ ವಿದ್ಯುದ್ದೀಕರಣವಾಗಿದೆ. ವಿದ್ಯುದ್ದೀಕರಣದ ಫಲವಾಗಿ ರೈಲ್ವೆಗೆ ೧೦,೦೦೦ ಕೋಟಿ ರು. ಇಂಧನದಲ್ಲಿ ಉಳಿತಾಯವಾಗಿದೆ.

ಯೋಜನೆಯು ಪೂರ್ಣಗೊಂಡ ತರುವಾಯ ?೧೩,೦೦೦ ಕೋಟಿ ಉಳಿತಾಯವಾಗುವ ಅಂದಾಜು ಮಾಡಲಾಗಿದೆ. ಈಗಾಗಲೇ ೧,೨೦೦ ರೈಲು ನಿಲ್ದಾಣಗಳ ಚಾವಣಿ ಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎಲ್ಲ ೭,೦೦೦ ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಲು ಯೋಜಿಸಿಸಿದೆ. ಎಂದರಲ್ಲಿ ಕಸ, ಪಾನ್ ಜಗಿದು ಉಗಿದಿರುವುದು ಮತ್ತು ಟ್ರ್ಯಾಕ್ ನಡುವಿ ನಿಂದ ಬರುತ್ತಿದ್ದ ದುರ್ವಾಸನೆಯಿಂದ ಫ್ಲಾಟ್ ಫಾರಂ ಮೇಲೆ ಮೂಗು ಮುಚ್ಚಿಕೊಂಡು ನಿಲ್ಲುವುದು ಅನಿವಾರ್ಯ ವಾಗಿತ್ತು. ಆದರೆ, ಸ್ವಚ್ಛ ಭಾರತ್ ಅಭಿಯಾನದ ನಂತರ ರೈಲು ನಿಲ್ದಾಣಗಳ ಚಹರೆ ಬದಲಾಗುತ್ತಿದೆ.

ರೈಲು ನಿಲ್ದಾಣಗಳು ಇಂದು ಸ್ವಚ್ಛವಾಗಿ ಸುಂದರವಾಗುತ್ತಿದೆ. ಕೊಳೆಯಿಂದ ಕಸದಿಂದ ಮುಕ್ತಿ ಪಡೆಯುತ್ತಿದೆ. ಬಯೋ ಟಾಯ್ಲೆಟ್
ಅಳವಡಿಕೆಯಿಂದ ಟ್ರ್ಯಾಕ್ ನಡುವಿನ ದುರ್ಗಂಧ ಬಹುತೇಕ ಕಡಿಮೆಯಾಗಿದೆ. ಜನದಟ್ಟಣೆಯ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ
ಕಾಪಾಡುವುದು ಅಸಾಧ್ಯವೆಂದು ನಿರ್ಧರಿಸಲಾಗಿತ್ತು. ಆದರೆ ಬದಲಾದ ಆಡಳಿತವು ಇದು ಸಾಧ್ಯವೆಂದು ಮಾಡಿ ತೋರಿಸಿದೆ.
ಬಿಳಿಯಾನೆಗಳಾಗಿದ್ದ ಯುಪಿಎ ಕಾಲದ ? ೬.೭೫ಲಕ್ಷ ಕೋಟಿ ಮೊತ್ತದ ೪೯೮ ಯೋಜನೆಗಳನ್ನು ಶೀಥಕ ಡಬ್ಬಿಗೆ ಸೇರಿಸಿ ಸಾವಿ ರಾರು ಕೋಟಿ ತೆರಿಗೆದಾರರ ಹಣ ಉಳಿತಾಯವಾಗಿದೆ. ಈಶಾನ್ಯ ರಾಜ್ಯಗಳು ಅನೇಕ ದಶಕಗಳಿಂದ ಉತ್ತಮ ರೈಲು ಸಂಪರ್ಕದಿಂದ ವಂಚಿತವಾಗಿದ್ದವು.

ಕಳೆದ ಎಂಟು ವರ್ಷದಲ್ಲಿ ಮೋದಿ ಸರಕಾರವು ಈಶಾನ್ಯ ರಾಜ್ಯಗಳಲ್ಲಿ ರೈಲು ಸಂಪರ್ಕ ಕಲ್ಪಿಸಲು ?೩೯,೦೦೦ ಕೋಟಿ ವೆಚ್ಚ ಮಾಡಿದೆ. ಮೂರು ಈಶಾನ್ಯ ರಾಜ್ಯಗಳು ಈಗಾಗಲೇ ರೈಲು ಸಂಪರ್ಕ ಪಡೆದಿವೆ. ಉಳಿದ ೫ ರಾಜ್ಯಗಳ ರಾಜಧಾನಿಗೆ ಸಂಪರ್ಕ ಕಲ್ಪಿ
ಸಲು ?೪೫,೦೧೬ ಕೋಟಿ ಕಾಮಗಾರಿಗಳು ಪ್ರಗತಿಯಲ್ಲಿದೆ. ೩,೩೪೮ ಕಿಮಿ ಉದ್ದದ ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಮೀಸಲು ಕಾರಿಡಾರ್ ಹಲವಾರು ಗಡವುಗಳನ್ನು ಮೀರಿಯೂ ಶೇಕಡಾ ೫೬ ಮಾರ್ಗವು ಪೂರ್ಣಗೊಂಡಿದೆ. ಈ ಯೋಜನೆಯು ೨೦೨೪ ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇರುವುದು.

ರೈಲುಗಳ ವೇಗ ಹೆಚ್ಚಿಸಲು ಕಳೆದ ಎಂಟು ವರ್ಷದಲ್ಲಿ ಮಾಡಿದ ಪ್ರಯತ್ನಗಳ ಫಲವಾಗಿ ದಶಕ ಕಳೆದರು ಅರವತ್ತು ದಾಟಿರದಿದ್ದ ವೇಗವು ರೈಲು ಹಳಿಗಳ ಉತ್ತಮ ನಿರ್ವಹಣೆಯಿಂದ ರೈಲಿನ ವೇಗವು ೮೦ ರಿಂದ ೧೩೦ ತಲುಪಿದೆ. ವಿಮಾನಯಾನಕ್ಕೆ ಸಡ್ಡು ಹೊಡೆಯಲು ಪ್ರೀಮಿಯಂ ರೈಲು ಸೇವೆ ಒದಗಿಸಲು ತೇಜಸ್, ಗತಿಮಾನ್ ಎಕ್ಸಪ್ರೆಸ್ ರೈಲುಸೇವೆ ಆರಂಭವಾಗಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಸೆಮಿ ಹೈಸ್ಪೀಡ್ ‘ವಂದೇ ಭಾರತ’ ರೈಲು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ.

೨೦೨೩-೨೪ರೊಳಗೆ ದೇಶವ್ಯಾಪಿ ೪೦೦ ವಂದೇ ಭಾರತ ರೈಲು ಓಡಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳು ಸಾಗಿದೆ. ಆಧುನಿ ಕತೆ ಮತ್ತು ಆತ್ಮನಿರ್ಭರ ಭಾರತದ ಚಿಹ್ನೆಯಾಗಿ ವಂದೇ ಭಾರತ ರೈಲು ನವ ಭಾರತದ ಹೆಮ್ಮೆಯ ಸಂಕೇತವಾಗಿದೆ. ಅಹಮದಾ ಬಾದ್ ಮತ್ತು ಮುಂಬಯಿ ನಡುವೆ ದೇಶದ ಅತಿ ಮಹತ್ವಪೂರ್ಣ ಬುಲೆಟ್ ಟ್ರೈನ್ ಯೋಜನೆಯು ಒಂದು ಲಕ್ಷ ಕೋಟಿ ರು. ವೆಚ್ಚದಲ್ಲಿ ಜಪಾನ್ ಸಹಯೋಗ ದಿಂದ ಜಾರಿಯಾಗುತ್ತಿದೆ. ಈಗಾಗಲೇ ಗುಜರಾತಿನ ಭಾಗದಲ್ಲಿ ಸಾಕಷ್ಟು ಕೆಲಸ ನಡೆದಿದೆ. ಮಹಾರಾಷ್ಟ್ರದಲ್ಲಿ ಹಿಂದೆ ಇದ್ದ ಉದ್ಧವ್ ಠಾಕ್ರೆ ಸರಕಾರವು ಭೂ ಸ್ವಾಧೀನಕ್ಕೆ ಸಹಕರಿಸದ ಕಾರಣ ಯೋಜನೆಗೆ ಹಿನ್ನಡೆ ಯಾಗಿತ್ತು.

ಸರಕಾರ ಬದಲಾದ ತರುವಾಯ ಈಗ ಮಹಾರಾಷ್ಟ್ರದಲ್ಲಿಯು ಬುಲೆಟ್ ಟ್ರೈನ್ ಕಾಮಗಾರಿಯು ವೇಗ ಪಡೆದುಕೊಂಡಿದೆ. ವಾಸ್ತವವಾಗಿ ಬುಲೆಟ್ ಟ್ರೈನ್ ವಿರೋಧಿಸಿ ಅಪಹಾಸ್ಯ ಮಾಡುವ ಕಾಂಗ್ರೆಸ್ ನಾಯಕರಿಗೆ ತಿಳಿಯದ ಸಂಗತಿಯೆಂದರೆ ಮನಮೋಹನ ಸಿಂಗ್ ಅವರು ೨೦೧೨ರಲ್ಲಿ ರೈಲ್ವೆ ಆಧುನೀಕರಣಕ್ಕೆ ರಚಿಸಿದ್ದ ಸ್ಯಾಂ ಪಿಟ್ರೋಡ ನೇತೃತ್ವದ ಸಮಿತಿಯು ಅಹಮ
ದಾಬಾದ್ ಮತ್ತು ಮುಂಬಯಿ ನಡುವೆ ೩೦೦ಕಿ.ಮಿ. ವೇಗದ ರೈಲು ಆರಂಭಿಸಲು ಶಿಫಾರಸು ಮಾಡಿತ್ತು.

?೧೦ಸಾವಿರ ಕೋಟಿ ವೆಚ್ಚದಲ್ಲಿ ದೆಹಲಿ ಮುಂಬಯಿ ಮತ್ತು ಅಹಮದಾಬಾದ್ ರೈಲು ನಿಲ್ದಾಣಗಳ ನವೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಯಶವಂತಪುರ ಮತ್ತು ಕಂಟೊನ್ಮೆಂಟ್ ನಿಲ್ದಾಣಗಳನ್ನು ?೩೮೦ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ನಿಲ್ದಾಣಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಬೈಯಪ್ಪನ ಹಳ್ಳಿಯಲ್ಲಿ ದೇಶದ ಮೊದಲ ಬಾರಿಗೆ ಬೆಂಗಳೂರು ವಿಮಾನ ನಿಲ್ದಾಣದ ಪ್ರತಿರೂಪವಾಗಿ ವಿನ್ಯಾಸಗೂಳಿಸಿರುವ ಹವಾ ನಿಯಂತ್ರಿತ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಬೆಂಗಳೂರಿನ ಬೈಯಪ್ಪನ ಹಳ್ಳಿ ಮೂರನೆ ರೈಲು ನಿಲ್ದಾಣವು ಬದಲಾ ಗುತ್ತಿರುವ ಭಾರತವನ್ನು ಪ್ರತಿಬಿಂಬಿಸುತ್ತಿದೆ.

ದೇಶದ ಇನ್ನೂರು ರೈಲ್ವೆ ನಿಲ್ದಾಣಗಳ ನವೀಕರಣ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿದೆ. ಇದರ ಜತೆಯೇ ಅಮೃತ ಭಾರತ ಸ್ಟೇಷನ್ ಯೋಜನೆಯಡಿಯಲ್ಲಿ ದೇಶದ ಒಂದು ಸಾವಿರ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ತೀರ್ಮಾನಿಸಿದೆ. ಮುಂಬರುವ ದಿನಗಳಲ್ಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದ ಸೌಲಭ್ಯ ಭರಿತ ಸುಸಜ್ಜಿತ ರೈಲು ನಿಲ್ದಾಣಗಳನ್ನು ದೇಶದೆಡೆ ಕಾಣಬಹುದಾಗಿದೆ.

Read E-Paper click here