Friday, 13th December 2024

ವೈಸ್‌ರಾಯ್ ಮೇಲೆ ಬಾಂಬ್ ಎಸೆದ ಬೋಸ್

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗಿ 75 ವರ್ಷಗಳಾಗುತ್ತಿವೆ. ಈ ಸಂದರ್ಭದಲ್ಲಿ, ಬ್ರಿಟಿಷರ ಕಲೋನಿಯಲ್ ಆಡಳಿತವನ್ನು ಅಂತ್ಯಗೊಳಿಸಲು ನಮ್ಮ ಹೋರಾಟ ಗಾರರು ನಡೆಸಿದ ಹಲವು ಪ್ರಯತ್ನಗಳು ನೆನಪಾಗುತ್ತವೆ. ಬ್ರಿಟಿಷರ ದುರಾಡಳಿತವನ್ನು ದೂರಮಾಡಲು ನಡೆದ ಮೊದಲ ಬೃಹತ್ ಹೋರಾಟವು 1857ರಲ್ಲಿ ನಡೆಯಿತು; ಅದನ್ನು ದಮನಿಸಿದ ಬ್ರಿಟಿಷರು, ನಂತರ ಸುಮಾರು 40 ವರ್ಷ, ಹೆಚ್ಚಿನ ಪ್ರತಿರೋಧವಿಲ್ಲದೇ, ತಮ್ಮ ಶಕ್ತಿಯನ್ನು ಕುದುರಿಸಿ ಕೊಳ್ಳುತ್ತಾ, 1857ರಲ್ಲಿ ತಮ್ಮ ವಿರುದ್ಧ ಸಿಡಿದೆದ್ದವರನ್ನು ಬಗ್ಗುಬಡಿಯುತ್ತಾ, ಇನ್ನಷ್ಟು ಪ್ರಬಲರಾದದ್ದು ಸುಳ್ಳಲ್ಲ.

ಜತೆಗೆ ಈಸ್ಟ್ ಇಂಡಿಯಾ ಕಂಪನಿಯ ಕೈಯಲ್ಲಿದ್ದ ಆಡಳಿತವನ್ನು ಬ್ರಿಟನ್ ರಾಣಿಯ ಕೈಗೆ ಹಸ್ತಾಂತರಿಸಲಾಯಿತೆಂಬ ನಾಟಕವನ್ನೂ ಮಾಡಲಾಯಿತು! ಇನ್ನು ಮುಂದೆ, ಭಾರತವು ನೇರವಾಗಿ ಬ್ರಿಟಿಷ್ ಸರಕಾರದ ಅಡಿಯಾಳಾಗಿರುವುದರಿಂದ, ಕಂಪನಿ ಆಡಳಿತದ ಕಾಲದಲ್ಲಿ ನಡೆದ ತಪ್ಪುಗಳನ್ನು ಸರಿಪಡಿಸಲಾಗುವು ದೆಂದು ಘೋಷಣೆಯನ್ನು ಮಾಡಿ, ಭಾರತವನ್ನು ಉದ್ಧಾರ ಮಡಲು ಬ್ರಿಟಿಷ್ ಆಡಳಿತವೇ ಅತ್ಯಗತ್ಯ ಎಂಬ ಸಂದೇಶವನ್ನು ಸಾರಿ, ದೇಶದವರನ್ನು ನಂಬಿಸುವಲ್ಲೂ ಯಶಸ್ವಿಯಾದರು.

೧೯೧೨ರ ತನಕ ಕೊಲ್ಕೊತ್ತಾ ದೇಶದ ರಾಜಧಾನಿ. ದೇಶದ ಎಲ್ಲೆಡೆ ಮತ್ತು ಮುಖ್ಯವಾಗಿ ಬಂಗಾಳ ಪ್ರಾಂತ್ಯ ದಲ್ಲಿನ ಸ್ಥಿತಿವಂತರು ಇಂಗ್ಲಿಷ್ ಕಲಿಯುವ ಮೂಲಕ, ಬ್ರಿಟಿಷ್ ಸಂಸ್ಕೃತಿಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ ದರು. ಅಂದು ಅದು ಬುದ್ಧಿಜೀವಿಗಳ, ವಿದ್ಯಾವಂತರ ನಾಡು. ಅಂದಿನ ಜನರ ಒಂದು ಗುರಿ ಎಂದರೆ, ಇಂಗ್ಲೆಂಡಿಗೆ ತಮ್ಮ ಮಕ್ಕಳನ್ನುಕಳುಹಿಸಿ, ಉನ್ನತ ವಿದ್ಯಾಭ್ಯಾಸ ಕೊಡಿಸುವುದು. ಇಂಗ್ಲಿಷ್ ಶಿಕ್ಷಣ ಪಡೆದರೆ ಮಾತ್ರ, ಬ್ರಿಟಿಷ್ ಸರಕಾರದ ಸವಲತ್ತುಗಳನ್ನು ಪಡೆಯಬಹುದು ಮತ್ತು ಸಾಹಿತ್ಯ ಸಂಸ್ಕೃತಿಯ ವಲಯಗಳಲ್ಲೂ ಗುರುತಿಸಿಕೊಳ್ಳಬಹುದು ಎಂಬ ತಿಳಿವಳಿಕೆ ಅಂದಿನ ಜನಮಾನಸದಲ್ಲಿತ್ತು.

೧೮೫೭-೧೯೦೦ರ ಅವಽಯಲ್ಲಿ ಸ್ಥಾಪನೆಗೊಂಡ ಕಾಂಗ್ರೆಸ್‌ನ ಒಂದು ಉದ್ದೇಶವೂ ಇದೇ ತಾನೆ! ನಮ್ಮ ದೇಶದ ಜನರಿಗೆ ಇಂಗ್ಲಿಷ್ ವಿದ್ಯಾಭ್ಯಾಸ ಕೊಡಿಸಿ, ಜನರನ್ನು ವಿದ್ಯಾವಂತರನ್ನಾಗಿ ಮಾಡಿ, ಬ್ರಿಟಿಷ್ ಸರಕಾರದ ಆಡಳಿತವನ್ನು ಅನುಮೋದಿಸುವ ಅಕ್ಷರವಂತರನ್ನು ತಯಾರಿಸುವುದು ಸಹ ಆ ಪಕ್ಷ ಸ್ಥಾಪಿಸಿದವರ ಉದ್ದೇಶ ಎನಿಸಿತ್ತು. ೧೮೮೫ರಲ್ಲಿ ಸ್ಥಾಪನೆಗೊಂಡ ಕಾಂಗ್ರೆಸ್‌ನ ಐಡಿಯಾಲಜಿಯನ್ನು ಹುಟ್ಟುಹಾಕಿದವರು ಅಲೆನ್ ಒಕ್ಟೇವಿಯನ್ ಹ್ಯೂಮ್ ಎಂಬ ಬ್ರಿಟಿಷ್ ಅಽಕಾರಿ (ಇಂದಿನ ಐಎಎಸ್‌ಗೆ ಸಮ) ಮತ್ತು ಪಕ್ಷಿಶಾಸ್ತ್ರಜ್ಞ. ಭಾರತೀಯ ಆಸಕ್ತಿ (ಇಂಡಿಯನ್ ಇಂಟರೆಸ್ಟ್) ಹೊಂದಿರುವ ತನ್ನ ಪಕ್ಷವನ್ನು ಸ್ಥಾಪಿಸುವ ಮೊದಲು, ಅದನ್ನು ಸೇರಲೆಂದು, ಕೊಲ್ಕೊತ್ತಾ ವಿಶ್ವವಿದ್ಯಾಲಯದ ಪದವೀಧರರಿಗೆ ಆಹ್ವಾನ ಪತ್ರಗಳನ್ನು ೧೮೮೩ರಲ್ಲೇ ಅತ ಕಳಿಸಿದ್ದ.

ಬಂಗಾಳವು ಅಂದು ಚಿಂತಕರ, ಬುದ್ಧಿಜೀವಿಗಳ, ವಿದ್ಯಾವಂತರ ನಾಡು; ಬ್ರಿಟಿಷ್ ಭಾರತದ ರಾಜಧಾನಿಯೂ ಅಲ್ಲೇ ಇತ್ತು. ಮುಂಬಯಿಯಲ್ಲಿ ೧೮೮೫ರಲ್ಲಿ ಆರಂಭಗೊಂಡ ಕಾಂಗ್ರೆಸ್‌ಗೆ ಅಂದಿನ ವೈಸ್‌ರಾಯ್ ಲಾರ್ಡ್ ಡು-ರಿನ್‌ನ ಪೂರ್ಣ ಸಹಮತವಿತ್ತು. ಇದರಲ್ಲೊಂದು ಗೂಢ ಉದ್ದೇಶವಿತ್ತು; ೧೮೫೭ರ
ಸಶಸ ಹೋರಾಟದ ನೆನಪುಗಳು ದಟ್ಟವಾಗಿದ್ದ ಕಾಲವದು. ಬ್ರಿಟಿಷರ ವಿರುದ್ಧ ಹೋರಾಟ ಮನೋಭಾವ ರೂಪಿಸಿಕೊಳ್ಳುವ ವಿದ್ಯಾವಂತರ ಆಕ್ರೋಶಗಳಿಗೆ ‘ಸುರಕ್ಷಿತ ಹೊರದಾರಿ’ (ಸೇಫ್ಟಿ ವಾಲ್ವ್ ಎಂದು ಕರೆಯಲಾಗಿತ್ತು) ತೋರಿಸಲೆಂದೇ ಕಾಂಗ್ರೆಸ್ ನ್ನು ಎ. ಒ . ಹ್ಯೂಮ್ ಹುಟ್ಟುಹಾಕಿದ್ದ.

ಬ್ರಿಟಿಷ್ ಸರಕಾರದ ಪೂರ್ಣ ಸಹಮತದೊಂದಿಗೆ ಆರಂಭಗೊಂಡ ಆ ಪಕ್ಷದಲ್ಲಿ ಬ್ರಿಟಿಷ್ ಅಽಕಾರಿಗಳ ಜತೆ, ಇಂಗ್ಲಿಷ್ ಕಲಿತ ಪ್ರಮುಖ, ಶ್ರೀಮಂತ ಭಾರತೀಯ ರನ್ನೂ ಅವಶ್ಯವಾಗಿ ಸೇರಿಸಿಕೊಳ್ಳಲಾಗಿತ್ತು. ಯುರೋಪಿಯನ್ ಜನರಿಗೆ ಬೇರೆಯೇ ಸಂಘಟನೆ, ಕ್ಲಬ್‌ಗಳಿದ್ದುದರಿಂದ,  ಕಾಂಗ್ರೆಸ್‌ನ ಸ್ಥಾಪನೆಯು ಸ್ಥಳೀಯರ ಒಳಗೊಳ್ಳುವಿಕೆಗೆಂದೇ ಸ್ಥಾಪನೆಗೊಂಡದ್ದು ಸ್ಪಷ್ಟ. ಆ ಬ್ರಿಟಿಷ್ ಅಽಕಾರಿ ಸ್ಥಾಪಿಸಿದ ಪಕ್ಷದ ಮೊದಲ ಅಧ್ಯಕ್ಷ ಉಮೇಶ ಚಂದ್ರ ಬ್ಯಾನರ್ಜಿ ಎಂಬುವವರು ಬಂಗಾಳಿಗರಾಗಿದ್ದು ಆಕಸ್ಮಿಕದಂತೆ ಕಂಡರೂ, ಅದು ಆಕಸ್ಮಿಕರವಾಗಿರಲಿಲ್ಲ.

ಬಂಗಾಳದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅದು ಒಂದು ಅಗತ್ಯ ಎನಿಸಿದ್ದ ಅಂದಿನ ರಾಜಕೀಯ ನಡೆ. ನಂತರದ ವರ್ಷಗಳಲ್ಲಿ ಬ್ರಿಟಿಷರ ವಿರುದ್ಧ, ಅವರ
ಕಲೋನಿಯಲ್ ಆಡಳಿತದ ವಿರುದ್ಧ ತೀವ್ರ ಎನಿಸುವ ಹೋರಾಟ ಆರಂಭಗೊಂಡದ್ದೇ ಪ್ರಮುಖವಾಗಿ ಬಂಗಾಳದಲ್ಲಿ. ಬ್ರಿಟಿಷರನ್ನು ಭಾರತದಿಂದ ಓಡಿಸಲು
ಸಶಸ ಹೋರಾಟ ನಡೆಸಿದ ಬಂಗಾಲದ ಕ್ರಾಂತಿಕಾರಿಗಳು ಸಾಕಷ್ಟು ಪ್ರಸಿದ್ಧರು. ೧೯೦೦ರ ಸಮಯದಲ್ಲೇ ಅವರ ಬೇಡಿಕೆ ಎಂದರೆ, ಸಂಪೂರ್ಣ ಸ್ವರಾಜ್ಯ, ಸಂಪೂರ್ಣ ದಾಸ್ಯ ವಿಮೋಚನೆ. ೧೯೨೦ರ ದಶಕದ ತನಕವೂ ಕಾಂಗ್ರೆಸ್ ಪಕ್ಷವು ಸಂಪೂರ್ಣ ಸ್ವರಾಜ್ಯವನ್ನು ಕೇಳಿರಲಿಲ್ಲ.

ಈಗಿನ ದಿನಗಳಲ್ಲಿ,ಅದೇಕೋ ‘ಕ್ರಾಂತಿಕಾರಿಗಳು’ ಎಂಬ ಎರಡು ಪದಗಳ ಮೂಲಕ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರ ಪ್ರಮುಖ ಹೋರಾಟವನ್ನು
ಸಾರಾಸಗಟಾಗಿ ಗುರುತಿಸಿ, ಬದಿಗೆ ಸರಿಸುವ ಚಾಳಿ ಹುಟ್ಟಿಕೊಂಡಿದೆ. ಅಕ್ಷರಶಃ ಸಾವಿರಾರು ಸಂಖ್ಯೆಯಲ್ಲಿದ್ದ ಕ್ರಾಂತಿಕಾರಿಗಳ ಪ್ರಾಮುಖ್ಯತೆ, ಅವರು ನಡೆಸಿದ
ಬ್ರಿಟಿಷ್ ಅಽಕಾರಿಗಳ ಕೊಲೆ, ಬ್ರಿಟಿಷರನ್ನು ಭಾರತದಿಂದ ಓಡಿಸಬೇಕೆಂಬ ಅವರ ಉದ್ದೇಶದ ಸ್ಪಷ್ಟತೆ, ೧೯೧೦ರ ದಶಕದಲ್ಲೇ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ಅವರ ಬಾಂಬ್ ಮತ್ತು ಪಿಸ್ತೂಲುಗಳು, ಅವರು ನಡೆಸಿದ ಭೂಗತ ಹೋರಾಟ, ಇವೆಲ್ಲವನ್ನೂ ನಂತರದ ವರ್ಷಗಳಲ್ಲಿ ಮರೆಯಾಗಿಸಲು ಪ್ರಯತ್ನ ನಡೆದದ್ದು ಸ್ಪಷ್ಟ. ಒಬ್ಬೊಬ್ಬರೇ ಬ್ರಿಟಿಷ್ ಅಽಕಾರಿಗಳನ್ನು ಕೊಲ್ಲುತ್ತಾ, ವೈಸ್‌ರಾಯ್ ಮೇಲೆಯೇ ಬಾಂಬ್ ಎಸೆಯುತ್ತಾ, ಸರಕಾರಕ್ಕೆ ಸವಾಲೆಸೆದಿದ್ದ ಅವರ ಪ್ರಯತ್ನವನ್ನು, ನಂತರ
ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ ತೀವ್ರವಾಗಿ ವಿರೋಽಸಿದ್ದು ಸ್ಪಷ್ಟವಾಗಿ ಇತಿಹಾಸದಲ್ಲಿ ದಾಖಲಾಗಿದೆ.

ಎ.ಒ.ಹ್ಯೂಮ್ ಉದ್ದೇಶವೂ ಅದೇ ಇತ್ತು. ೧೯೨೦ರ ದಶಕದಲ್ಲಿ ಕಾಂಗ್ರೆಸ್‌ನ ಪ್ರಮುಖ ಶಕ್ತಿ ಎನಿಸಿದ, ಮಾಸ್ ಲೀಡರ್ ಆಗಿ ಹೊರಹೊಮ್ಮಿದ ಮಹಾತ್ಮ ಗಾಂಽಯವರಂತೂ, ‘ಬ್ರಿಟಿಷ್ ಅಽಕಾರಿಗಳನ್ನು ಸಾಯಿಸಬೇಡಿ, ಅವರ ಮೇಲೆ ಬಾಂಬ್ ಎಸೆಯಬೇಡಿ, ಪೊಲೀಸ್‌ರನ್ನು ಕೊಲ್ಲಬೇಡಿ, ಆ ರೀತಿ ಬ್ರಿಟಿಷರನ್ನು ಸಾಯಿಸಿದ ಕ್ರಾಂತಿಕಾರಿಗಳು ತಪ್ಪು ಹಾದಿ ಹಿಡಿದಿದ್ದಾರೆ, ಬ್ರಿಟಿಷರನ್ನು ಅಹಿಂಸೆ, ಶಾಂತಿ ಮತ್ತು ಸತ್ಯಾಗ್ರಹದಿಂದ ಎದುರಿಸಬೇಕು’ ಎಂದು ಹಲವು ಕಡೆ, ಹಲವು ಬಾರಿ ಒತ್ತಿ ಹೇಳಿದ್ದರು. ಆದ್ದರಿಂದಲೇ, ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಗಳು ಜಾರಿಯಲ್ಲಿಟ್ಟಿದ್ದ ಹೋರಾಟವು ಸರಿಯಲ್ಲ ಎಂದು ನಮ್ಮ ದೇಶದ ಜನಸಾಮಾನ್ಯರು, ಶಾಲಾ ಶಿಕ್ಷಣ ಪಡೆದ ವಿದ್ಯಾವಂತರು ನಂಬುವಂತಾಯಿತು.

ಜತೆಗೆ, ಗಾಂಽಜಿಯವರು ಬೋಽಸಿದ ಅಹಿಂಸೆ ಮತ್ತು ಶಾಂತಿಯ ಸಂದೇಶಗಳು ಅವರಿಗೆ ಸಂತನ ರೀತಿಯ ಸ್ಥಾನವನ್ನು ಕಲ್ಪಿಸಿ, ಅವರ ಅಹಿಂಸಾತ್ಮಕ ಹೋರಾಟಕ್ಕೆ ಅಭೂತಪೂರ್ವ ಮಾನ್ಯತೆ ದೊರಕಿದ್ದರಿಂದಾಗಿ, ಕ್ರಾಂತಿಕಾರಿಗಳ ಹೋರಾಟವು ಮೂಲೆಗುಂಪಾಯಿತು ಮತ್ತು ಇದರಿಂದಾಗಿ ಅದೆಷ್ಟೋ ಬ್ರಿಟಿಷ್ ಅಽಕಾರಿಗಳ ಪ್ರಾಣ ಉಳಿಯಿತು ಮತ್ತು ಅವರು ೧೯೪೭ರ ತನಕ ನಮ್ಮನ್ನು ಆಳಿದರು.

ಹಾಗಿದ್ದರೆ ಬಂಗಾಳದ ಕ್ರಾಂತಿಕಾರಿಗಳ ಮತ್ತು ಅವರ ಜತೆ ಕೈಜೋಡಿಸಿದ್ದ ಪಂಜಾಬಿನ ಗದರ್ ಪಕ್ಷದ ಸದಸ್ಯರ ಹೋರಾಟವು ಯಾವ ಹಾದಿಯಲ್ಲಿ
ಸಾಗಿತ್ತು? ಗಾಂಽಜಿಯವರು ಹೇಳಿದಂತೆ, ಅದು ಸರಿಯಾದ ಹೋರಾಟದ ಕ್ರಮ ಆಗಿರಲಿಲ್ಲವೆ? ಒಂದು ವೇಳೆ ಕ್ರಾಂತಿಕಾರಿಗಳ ಹೋರಾಟಕ್ಕೆ ಯಶಸ್ಸು
ದೊರಕಿದ್ದರೆ, ೧೯೪೭ಕ್ಕೂ ಮುಂಚೆ ನಮ್ಮ ದೇಶ ಸ್ವಾತಂತ್ರ್ಯ ಪಡೆಯುತ್ತಿತ್ತೆ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವು ಸಂಕೀರ್ಣ ಮತ್ತು ಸಂಭಾವ್ಯ ಮಾತ್ರ ಎಂದು ಹೇಳಬಹುದಾದರೂ, ಆ ಒಂದು ಸಾಧ್ಯತೆಯನ್ನು  ಷ್ಪಕ್ಷಪಾತವಾಗಿ ನೋಡಲು, ಇದು, ಅಂದರೆ ಸ್ವಾತಂತ್ರ್ಯ ದೊರಕಿ ೭೫ ವರ್ಷವಾಗುತ್ತಿರುವ ಸಂದರ್ಭವು ಸಕಾಲ ಎನ್ನಬಹುದು.

ನಮ್ಮ ದೇಶವು ಸ್ವತಂತ್ರಗೊಳ್ಳುವ ಅವಕಾಶವಿದ್ದ ಸ್ಪಷ್ಟ ಸಂದರ್ಭಗಳೆಂದರೆ, ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳು ನಡೆದ ಕಾಲ. ಆಗ
ಬ್ರಿಟಿಷ್ ಸೇನೆಯು ಯುರೋಪಿನಲ್ಲಿ ಯುದ್ಧ ಮಾಡುತ್ತಿದ್ದುದರಿಂದ, ಅದೇ ಸಮಯದಲ್ಲಿ ನಮ್ಮ ದೇಶದಲ್ಲಿದ್ದ ಬ್ರಿಟಿಷರನ್ನು ಓಡಿಸುವ ಅವಕಾಶ ಇತ್ತು.
ಇದರ ಜತೆ ಇತರ ಕೆಲವು ಸಂದರ್ಭಗಳಲ್ಲಿ ಸಹ ಬ್ರಿಟಿಷರನ್ನು ಓಡಿಸುವ ಅವಕಾಶವಿದ್ದರೂ, ನಮ್ಮಲ್ಲಿ  ನಡೆದ ಹೋರಾಟವು ಮುಖ್ಯವಾಗಿ ಅಹಿಂಸೆಯ ತತ್ವಕ್ಕೆ
ಅಂಟಿಕೊಂಡಿದ್ದರಿಂದಾಗಿ, ಆ ಅವಕಾಶಗಳು ತಪ್ಪಿಹೋದವು ಎಂದು ಕೆಲವು ಇತಿಹಾಸಕಾರರು ಗುರುತಿಸಿದ್ದಾರೆ. ಮೊದಲನೆಯ ಮಹಾಯುದ್ಧ ೧೯೧೪ರಲ್ಲಿ ಆರಂಭಗೊಂಡನಂತರ, ೧೯೧೫ರಲ್ಲಿ ಬ್ರಿಟಿಷರನ್ನು ಶಸ್ತ್ರಸಹಿತ ಹೋರಾಟದ ಮೂಲಕ ಒದ್ದೋಡಿಸುವ ಒಂದು ಗಂಭೀರ ಪ್ರಯತ್ನ ನಡೆದಿದ್ದು, ಆ ಹೋರಾಟ ವನ್ನು ರೂಪಿಸಿದ ಒಬ್ಬ ಬಂಗಾಳಿ ಹೋರಾಟಗಾರನ ಪ್ರಯತ್ನವನ್ನು ನಮ್ಮ ದೇಶದವರು ಬಹುಮಟ್ಟಿಗೆ ಮರೆತೇ ಬಿಟ್ಟಿದ್ದಾರೆ.

ಅವರೇ ರಾಸ್ ಬಿಹಾರಿ ಬೋಸ್. (೧೮೮೬-೧೯೪೫). ಬಂಗಾಳದಲ್ಲಿ ಜನಿಸಿದ ಇವರು ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ನಡೆಸಿ, ನಂತರ ಅವರಿಂದ
ತಪ್ಪಿಸಿಕೊಳ್ಳಲು ತಾಯ್ನಾಡನ್ನೇ ತೊರೆದು, ಜಪಾನ್‌ನಲ್ಲಿ ನೆಲೆಸಬೇಕಾಯಿತು.ಇವರ ಹೋರಾಟವನ್ನು ಮಣಿಸಲು ಬ್ರಿಟಿಷರು ಸಾಕಷ್ಟು ಯತ್ನ ನಡೆಸಿದರು ಮತ್ತು ಜತೆ ಜತೆಯಲ್ಲೇ ಕಾಂಗ್ರೆಸ್ ಪಕ್ಷ ಸಹ ಇವರ ಮತ್ತು ಇವರ ಸಂಗಾತಿಗಳ ಸಶಸ ಹೋರಾಟವನ್ನು ವಿರೋಽಸಿತ್ತು. ಆದರೂ, ಇವರು ಎಂತಹ ಗಟ್ಟಿ ಹೋರಾಟ ಗಾರರೆಂದರೆ, ಜಪಾನ್‌ನಲ್ಲಿದ್ದುಕೊಂಡೇ, ೧೯೪೦ರ ದಶಕದ ತನಕ ತಮ್ಮ ಹೋರಾಟವನ್ನು ಮುಂದುವರಿಸಿದ್ದರು!

ಬಂಗಾಳದ ಹಳ್ಳಿಯೊಂದರಲ್ಲಿ ಜನಿಸಿದ ಇವರು, ಕೊಲ್ಕೊತ್ತಾದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಕಲಿತು, -ನ್ಸ್ ಮತ್ತು ಜರ್ಮನಿಗಳಲ್ಲಿ ಇಂಜನಿಯರಿಂಗ್ ಮತ್ತು
ವೈದ್ಯಕೀಯ ಶಿಕ್ಷಣ ಪಡೆದಿದ್ದರು. ೧೯೦೮ರಲ್ಲಿ ನಡೆದ ಅಲಿಪುರ ಬಾಂಬಿಂಗ್ ಘಟನೆಯ ನಂತರ, (ಇದೇ ಪ್ರಕರಣದಲ್ಲಿ ೧೮ ವರ್ಷ ವಯಸ್ಸಿನ ಖುದಿರಾಮ್
ಬೋಸ್‌ಗೆ ಗಲ್ಲುಶಿಕ್ಷೆಯಾಯಿತು) ಬಿಗಿಗೊಂಡ ಬ್ರಿಟಿಷರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ದೂರದ ಡೆಹರಾಡೂನ್‌ಗೆ ಹೋದರು. ಕ್ರಾಂತಿಕಾರಿಗಳ ಸಂಪರ್ಕ ಇಟ್ಟುಕೊಂಡು, ಬಾಂಬ್ ತಯಾರಿಸುವ ತಂತ್ರವನ್ನು ಕಲಿತು, ಸಂಘಟನೆಗೆ ತೊಡಗಿಕೊಂಡಿದ್ದರು.

೧೯೦೦ರ ದಶಕದಲ್ಲಿ ಬಂಗಾಳದಲ್ಲಿ ತಮ್ಮ ಆಡಳಿತದ ವಿರುದ್ಧ ನಡೆದ ತೀವ್ರ ಪ್ರತಿಭಟನೆ ಮತ್ತು ಹೋರಾಟವನ್ನು ಮಣಿಸಲು, ಬ್ರಿಟಿಷರು ಎರಡು ಕೆಲಸ ಮಾಡಿದರು. ೧೯೦೫ರಲ್ಲಿ ಬಂಗಾಳವನ್ನು ವಿಭಜಿಸಿ, ಹೋರಾಟಗಾರರ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಆದರೆ, ವಿಭಜಿಸಿದ ಬಂಗಾಳ ವನ್ನು ಮತ್ತೆ ಒಂದುಗೂಡಿಸುವಲ್ಲಿ ಬಂಗಾಳದ ಹೋರಾಟಗಾರರು ಯಶಸ್ವಿಯಾದ್ದರಿಂದ, ಬ್ರಿಟಿಷರಿಗೆ ತೀವ್ರ ಮುಖಭಂಗವಾಯಿತು. ಇದರಿಂದ ಕುಪಿತಗೊಂಡ ಸರಕಾರವು, ದೇಶದ ರಾಜಧಾನಿಯನ್ನೇ ಕೊಲ್ಕೊತ್ತಾ ದಿಂದ ದೂರದ ದೆಹಲಿಗೆ ೧೯೧೨ರಲ್ಲಿ ವರ್ಗಾಯಿಸಿತು. ಈ ಕುಟಿಲ ತಂತ್ರವನ್ನು ಪ್ರತಿಭಟಿಸಲು ರಾಶ್‌ಬಿಹಾರಿ ಬೋಸ್ ಆರಿಸಿಕೊಂಡ ಮಾರ್ಗವೆಂದರೆ, ವೈಸ್‌ರಾಯ್ ಯನ್ನೇ ಕೊಲೆ ಮಾಡುವುದು!

ಹೊಸ ರಾಜಧಾನಿ ದೆಹಲಿಯ ಪುರಪ್ರವೇಶವನ್ನು ಬ್ರಿಟಿಷರು ವೈಭವದಿಂದ ಆಯೋಜಿಸಿದ್ದರು. ಪೊಲೀಸ್ ಮತ್ತು ಸೇನೆಯ ಕವಾಯತು, ಕುದುರೆ ಸವಾರರ
ಸಾಲುಗಳ ಜತೆಯಲ್ಲೇ, ವೈಸ್‌ರಾಯ್ ಹಾಸ್ಂಜ್ ಆನೆಯ ಮೇಲೆ ಕುಳಿತು ಭವ್ಯ ಮೆರವಣಿಗೆಯ ಮೇಲೆ ದೆಹಲಿಯನ್ನು ಪ್ರವೇಶಿಸುತ್ತಿದ್ದ. ಆನೆಯ ಮೇಲಿನ
ಹೌದಾ ಅಥವಾ ಅಂಬಾರಿಯಲ್ಲಿ ವೈಸ್ ರಾಯ್ ಮತ್ತು ಆತನ ಹೆಂಡತಿ ಇದ್ದರು. ಅಲಂಕೃತ ಹೌದಾ ಮೇಲೆ ಕುಳಿತ ಆತ ಮತ್ತು ಆತನ ಹೆಂಡತಿ ಜನರತ್ತ ಕೈಬೀಸಿ
ಮೆರವಣಿಗೆಯಲ್ಲಿ ಸಾಗುತ್ತಿದ್ದಾಗಲೇ, ಬಂಗಾಳದ ಕ್ರಾಂತಿಕಾರಿಗಳು ಅವನ ಮೇಲೆ ಬಾಂಬ್ ಎಸೆದರು.

ಆನೆಯ ಮೇಲೆ ಕುಳಿತಿದ್ದ ಅವನಿಗೆ ಛತ್ರಿ ಹಿಡಿದಿದ್ದ ಭಾರತೀಯ ಅಂಗರಕ್ಷಕ ತಕ್ಷಣ ಸತ್ತು ಹೋದ. ಆತನಿಗೆ ಸಾಕಷ್ಟು ಗಾಯಗಳಾದವು. ತಕ್ಷಣ ಕೆಳಗಿಳಿದು, ಚಿಕಿತ್ಸೆ ಪಡೆದುಕೊಂಡು, ಬಚಾವಾದ. ಆದರೆ, ಆತ ಬದುಕುಳಿದರೂ, ವೈಸ್‌ರಾಯ್ ಮೇಲೆ ಬಾಂಬ್ ಎಸೆಯುವುದು ಎಂದರೆ,ಬ್ರಿಟಿಷ್ ಸಾಮ್ರಾಜ್ಯ ದ
ಮೇಲೆಯೇ ನಡೆದ ದಾಳಿ ತಾನೆ! ಬ್ರಿಟಿಷರು ತಣ್ಣಗೆ ಬೆವರಿದರು. ಕ್ರಾಂತಿಕಾರಿಗಳ ಬೇಟೆಯನ್ನು ಇನ್ನಷ್ಟು ಚುರುಕುಗೊಳಿಸಿದರು.

ವೈಸ್‌ರಾಯ್ ಮೇಲೆ ಬಾಂಬ್ ಎಸೆದ ಯೋಚನೆ, ಯೋಜನೆ ಎಲ್ಲವೂ ರಾಸ್ ಬಿಹಾರಿ ಬೋಸ್ ಅವರದ್ದು. ಬಾಂಬ್ ಎಸೆದ ನಂತರ, ತಕ್ಷಣ ಅವರು ಡೆಹರಾಡೂನ್ ಗೆ ರಹಸ್ಯವಾಗಿ ಪಯಣಿಸಿದರು. (ತಾನೇ ಬಾಂಬ್ ಎಸೆದದ್ದು ಎಂದು ೧೯೪೦ರ ದಶಕದಲ್ಲಿ ಅವರು ಹೇಳಿ ಕೊಂಡಿದ್ದಾರೆ). ಅವರ ಸಹವರ್ತಿಗಳು ತಪ್ಪಿಸಿಕೊಂಡರು. ಈ ಪ್ರಕರಣದ ನಂತರ ಲಾಹೋರ್‌ನಲ್ಲಿ ಬ್ರಿಟಿಷ್ ಅಽಕಾರಿಗಳ ಮೇಲೆ ಬಾಂಬ್ ಎಸೆಯುವ ಪ್ರಯತ್ನದಲ್ಲಿದ್ದ ಅಜಯ್ ಕುಮಾರ್ ಬೋಸ್ ಎಂಬ ಕ್ರಾಂತಿಕಾರಿ ಯ ಸುಳಿವು ಸಿಕ್ಕಿತು. ಅವನನ್ನು ಬಿಡಿದ ಬ್ರಿಟಿಷರು, ಆತನನ್ನು ಮತ್ತು ಇತರ ಮೂವರನ್ನು ಗಲ್ಲಿಗೇರಿಸಿದರು.

ವೈಸ್‌ರಾಯ್ ಮೇಲೆ ಬಾಂಬ್ ಎಸೆದಿದ್ದ ರಾಶ್‌ಬಿಹಾರಿ ಬೋಸ್ ರಹಸ್ಯವಾಗಿಯೇ ಇದ್ದುಕೊಂಡು, ಗದ್ದರ್ ಪಕ್ಷದ ಹೋರಾಟಗಾರರೊಂದಿಗೆ ಕೈಜೋಡಿಸಿ,
೧೯೧೫ರಲ್ಲಿ, ಮೊದಲನೆಯ ಮಹಾಯುದ್ಧ ದ ಸಮಯ ದಲ್ಲಿ ಬ್ರಿಟಿಷರ ವಿರುದ್ಧ ಮತ್ತೊಂದು ಹೋರಾಟವನ್ನು ಯೋಚಿಸಿ, ಯೋಜಿಸಿದರು. ಅದೂ ಸಹ ವಿ-ಲಗೊಂಡ ನಂತರ, ಅನಿವಾರ್ಯವಾಗಿ, ದೂರದ ಜಪಾನ್‌ಗೆ ಪಯಣಿಸಿ, ಅಲ್ಲಿನ ಮಹಿಳೆಯನ್ನೇ ಮದುವೆಯಾಗಿ, ತಮ್ಮ ಹೋರಾಟವನ್ನು ಮುಂದುವರಿಸಿದರು. ಅಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ಸ್ಥಾಪಿಸಿ, ಅದಕ್ಕೆಂದು ಬಾವುಟ ತಯಾರಿಸಿ, ಆ ಬಾವುಟವನ್ನು ಸುಭಾಷ್ ಚಂದ್ರ ಬೋಸ್‌ರಿಗೆ ಹಸ್ತಾಂತರಿಸಿದರು.

ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ನೆನಪಿಸಿಕೊಳ್ಳುವಾಗ, ಬ್ರಿಟಿಷ್ ಅಽಕಾರಿಗಳನ್ನು ಸಾಯಿಸುತ್ತಾ, ಹೋರಾಟ ನಡೆಸಿದ ಕ್ರಾಂತಿಕಾರಿಗಳನ್ನೂ
ನೆನಪಿಸಿಕೊಳ್ಳಲೇಬೇಕು ಅಲ್ಲವೆ!