Tuesday, 10th December 2024

Ravi Hunz Column: ಜಾಗತಿಕ ಲಿಂಗಾಹತದ ಜಾಗತಿಕ ಸತ್ಯ!

ಬಸವ ಮಂಟಪ

ರವಿ ಹಂಜ್

ಇದೇ ರೀತಿ ಕಲಬುರ್ಗಿಯವರು ಚೆನ್ನಬಸವಣ್ಣನ ಹುಟ್ಟಿನ ಕುರಿತಾದ ತಮ್ಮ ಸಂಕಥನಕ್ಕೆ ಡೋಹರ ಕಕ್ಕಯ್ಯನಿಗೆ ಮಲ್ಲಿದೇವಿ ಎಂಬ ಮಡದಿಯಿದ್ದಳು ಎಂಬುದು ತಾಳೆಯಾಗದ ಕಾರಣ ಮಲ್ಲಿದೇವಿ ಎನ್ನುವ ಸುಧಾರಿಸಿದ ಹೆಸರನ್ನು ನಂಬುವುದು ಕಷ್ಟ ಎಂದು ವಾದಿಸಿದ್ದರು. ಮಲ್ಲಿನಾಥ, ಮಲ್ಲಿಕಾರ್ಜುನ, ಮಲ್ಲಯ್ಯ, ದೇವಿ ಎಂಬ ಮಾಯಿದೇವಿ ಹೆಸರು ಗಳನ್ನು ವಚನಕಾರರೇ ಬಳಸಿರುವಾಗ ಮತ್ತು ‘ಮಲ್ಲಿನಾಥ ಪುರಾಣ’ವನ್ನು ಸ್ವತಃ ತಾವೇ ಸಂಪಾದಿಸಿರುವಾಗ ಮಲ್ಲಿದೇವಿ ಎಂಬುದು ಹೇಗೆ ಸುಧಾರಿತ ಎನಿಸುತ್ತದೆ ಎಂಬ ವಿವರಣೆಯನ್ನು ಎಲ್ಲಿಯೂ
ಕೊಟ್ಟಿಲ್ಲ. ಈ ಕುರಿತಾಗಿ “ಕಲಬುರ್ಗಿಯವರಿಗೆ ತಿಳಿಹೇಳಿದ ಮೇಲೂ ತಿದ್ದಿಕೊಳ್ಳದಿರುವುದು ಅಪರಾಧವಾಗುವುದು” ಎಂದು ಎಲ.ಬಸವ
ರಾಜುರವರು ಹೇಳಿzರೆ ಎಂಬಲ್ಲಿಗೆ ಕನ್ನಡ ನಾಮೋತ್ಪತ್ತಿ ವಾದ ರದ್ದಾಗುತ್ತದೆ.

ಇನ್ನು ಸಂಶೋಧನಾ ನೆಲೆಯಲ್ಲಿ ಏನೇ ತಿಪ್ಪರಲಾಗ ಹಾಕಿದರೂ ೧೨ನೇ ಶತಮಾನದ ಶರಣರ ಚರ್ಚೆಯ ದಾಖಲೆಯ ಯಾವುದೇ
ವಚನಗಳ ದಾಖಲಾತಿಯ ಒಂದೇ ಒಂದು ಮೂಲ ಓಲೆಗರಿ ಈವರೆಗೆ ಸಿಕ್ಕಿಲ್ಲ. ಸಿಕ್ಕಿರುವ ವಚನಗಳ ಓಲೆಗರಿಯ ಪ್ರತಿಗಳೆಲ್ಲವೂ ೧೫ನೇ ಶತಮಾನದ ಅಂತ್ಯ (ಕ್ರಿ.ಶ. ೧೪೮೦) ದಿಂದೀಚಿಗೆ ಬರೆದವುಗಳೇ ಹೊರತು ಅದಕ್ಕಿಂತ ಹಳೆಯವಲ್ಲ. ಕೇವಲ ಪೌರಾಣಿಕ, ಸೃಜನಶೀಲ ಸಂಕಥನಗಳ ಆಧಾರದ ಮೇಲೆ ಇಂಥ ವ್ಯಕ್ತಿಗಳಿದ್ದರು ಎಂದುಕೊಂಡರೂ ಅವರ ಚರ್ಚೆಯ ವಾಚ್ಯ ಸೂಚಕಗಳನ್ನು ವಚನಗಳೆಂದು ಕರೆದ ದಾಖಲೆ ೧೫ನೇ ಶತಮಾನಕ್ಕೂ ಮುನ್ನ ಇಲ್ಲ. ಇರುವ ದಾಖಲೆಗಳೆಲ್ಲವೂ ಕಾಳಾಮುಖ ವೀರ ಶೈವ ಮಾತ್ರ. ಹಾಗಾಗಿ ಸಂಶೋಧನಾ ಪಿತಾಮಹರು ಏನೇ ತಿರುತಿರುಚಿ ವಾದ ಮಂಡಿಸಿದರೂ ಲಿಂಗಾಯತ ಪ್ರತ್ಯೇಕಧರ್ಮ ಎಂಬುದು ಮರುಮರುಗಿ ರದ್ದಾಗುತ್ತದೆ.

ಅಂದ ಹಾಗೆ “ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ” ಎನ್ನುವುದು ಕಲಬುರ್ಗಿಯವರ ಉದ್ಘೋಷ!
ಅದನ್ನು ನಾನು ಮಾತ್ರ ನಿಷ್ಠವಾಗಿ ಪಾಲಿಸುತ್ತಿರುವೆನೆಂದು ‘ಲಿಂಗಾಂಗಸಾಮರಸ್ಯಾರೂಢ’ನಾಗಿ ಪ್ರಾಮಾಣಿಸುತ್ತೇನೆ. ಥಾಯ್ಲೆಂಡಿನಲ್ಲಿ ಬಸವಣ್ಣ!: ಲಿಂಗಾಯತ ಧರ್ಮದ ಅಽಕೃತ ಅಂತರ್ಜಾಲ ತಾಣದಲ್ಲಿ ಮೊದಲ ಸಾಲಿನ ಸಂಸ್ಕೃತಿ ಚಿಂತಕರಾದ ಪ್ರೊ.ಕಲಬುರ್ಗಿ, ಡಾ.ಎಸ್.ಎಂ. ಜಾಮದಾರ, ರಂಜಾನ್ ದರ್ಗಾ ನಂತರದ ಸಾಲಿನ ಶರಣ ಜಿ.ಬಿ. ಪಾಟೀಲ್ (ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ) ಎನ್ನುವವರ ಅನುಭಾವದ ಸಂಕಥನ ವೊಂದನ್ನು ಹೀಗೆ ಪ್ರಕಟಿಸಲಾಗಿದೆ: “ಸಂಗಮವರಿ (IZಚ್ಝಿಛಿ) ಕಲ್ಲಿನಲ್ಲಿ ಕೆತ್ತಿದ ಅಷ್ಟೇನೂ ಆಕರ್ಷಣೆ ಇಲ್ಲದ ೨ ಮೂರ್ತಿ ಗಳನ್ನು ಒಂದು ಚಿಕ್ಕ ದೇವಸ್ಥಾನ ದಲ್ಲಿ ಕಂಡೆ. ಒಂದು ಮೂರ್ತಿಯು ಅಂಗೈಯಲ್ಲಿ ಲಿಂಗ ಹಿಡಿದು ಪೂಜಿಸುವದು, ಎರಡನೆಯ ಮೂರ್ತಿಯ ಎದುರಿನಲ್ಲಿ ಸ್ಥಾವರಲಿಂಗ. ವೀರಭದ್ರನ ಮೂರ್ತಿಯ ಆಕಾರದ ಚಿಕ್ಕ ಚಿಕ್ಕ ಮೂರ್ತಿಗಳು. ನಾನು ಒಂದು ಕ್ಷಣ ದಂಗಾದೆ. ತಲೆಯಲ್ಲಿ ಸಾವಿರ ಬಲ್ಬ್ ಒಮ್ಮೆಲೇ ಹೊತ್ತಿಕೊಂಡಂತೆ.

ನಾನು ನೋಡುತ್ತಿರುವುದು ಇಷ್ಟಲಿಂಗ ಪೂಜಾ ಧಾರಿಯ ಶರಣನದು. ಅದು ಬಸವಣ್ಣನವರದೂ ಆಗಿರಬಹುದು ಅಥವಾ ಯಾವುದೋ ಶರಣರದಿರ ಬಹುದು. ಇಂದಿನವರೆಗೂ ನಾವು ಬಸವಣ್ಣನವರ ವ್ಯಾಪ್ತಿಯು (ಪ್ರಚಾರವು) ಅಫ್ಘಾನಿಸ್ತಾನದವರೆಗೆ ಹರಡಿತ್ತೆಂದುಕೊಂಡಿzವು. ದೂರದ ಕಾಶ್ಮೀರ ದೊರೆಯು ವಚನಕಾರನಾಗಿದ್ದನ್ನು ಕಂಡಿದ್ದೇವೆ, ಆದರೆ ದೂರದ ಥಾಯ್ಲೆಂಡಿನಲ್ಲಿ ಬಸವಣ್ಣ !

ಅದ್ಬುತ, ಅಚ್ಚರಿ! ನಡೆಯುವವ ನಿಧಿಯನ್ನು ಎಡವಿದಂತೆ. ಕೈಲಿರುವ ಮೊಬೈಲ್‌ನಲ್ಲಿ ಫೋಟೋ ತೆಗೆದೆ. ಸುತ್ತಲೂ ಕಣ್ಣಾಡಿಸಿ ಹೆಚ್ಚಿನ
ಕುರುಹುಗಳನ್ನು ಹುಡುಕಲು ಪ್ರಾರಂಭಿಸಿದೆ. ನನ್ನ ದೃಷ್ಟಿ ರಸ್ತೆಯ ಅಚೆ ಬದಿಯಲ್ಲಿ ಹರಿಯಿತು. ಅಂದು ರೆಸಾರ್ಟ್. ಅದರ ಹೆಸರು ‘ಬಸಯಾ’, ಬಸವನ ವಿರೂಪಗೊಂಡ ಹೆಸರು, ಮತ್ತೊಂದು ನಿಧಿ! ಥಾಯ್ಲೆಂಡಿನಲ್ಲಿ ಬಸವ…” ಹೀಗೆ ಪಾಟೀಲರ ಉದ್ವೇಗದ ಲೇಖನ ಸಾಗುತ್ತದೆ.
ಇರಲಿ, ಪದ್ಮಾಸನ ಹಾಕಿ ಬುದ್ಧನ ಧ್ಯಾನಸ್ಥ ರೂಪದಂತೆ ಬಲಹಸ್ತದ ಮೇಲೆ ಎಡಹಸ್ತವನ್ನು ಇಟ್ಟುಕೊಂಡ ಮೂರ್ತಿಯೊಂದರ ಸೊಂಟದ
ಪಟ್ಟಿಯ ಕಟ್ಟು (ಆhಛಿ) ಕೈಮೇಲಿನ ಲಿಂಗ ದಂತೆ ಗೋಚರಿಸುತ್ತಿರುವುದನ್ನು ಕಂಡ ಪಾಟೀಲರು ‘ಥಾಯ್ಲೆಂಡಿನಲ್ಲಿ ಬಸವ’ ಎಂದು ಆನಂದದ
ಭಾವೋದ್ವೇಗದ ಕಡಲಲ್ಲಿ ತೇಲಾಡಿ ಸಂಶೋಧನಾ ಲೇಖನವನ್ನು ಬರೆದಿದ್ದಾರೆ.

ಅಲ್ಲಿನ ಬಸಾಯಾ (ಆZoZqsZ) ಎನ್ನುವ ರೆಸಾರ್ಟಿನ ಬೋರ್ಡು ನೋಡಿ ಇದು ಜಗತ್ತಿನ ೮ನೇ ಅದ್ಭುತದ ಥಾಯ್ ಬಸವಭಕ್ತ ಮಾಲೀಕತ್ವದ ರೆಸಾರ್ಟ್ ಇರಲೇಬೇಕು ಎಂದುಕೊಂಡು ತಮ್ಮ ಅಪಧಮನಿಗಳಲ್ಲಿ ಉಕ್ಕಿದ ಬಸಾಯಭಕ್ತಿಯ ರಕ್ತವ ನ್ನು ನಿಯಂತ್ರಿಸಿಕೊಂಡು ತ್ವರಿತವಾಗಿ ಲೇಖನವೊಂದನ್ನು ಬರೆದುಕೊಂಡು ಸಮಯಾಭಾವದ ಕಾರಣ ಸ್ವದೇಶಕ್ಕೆ ವಾಪಸಾಗಿದ್ದಾರೆ.

ಅಂದ ಹಾಗೆ ಬಸಾಯಾ ಎಂದರೆ ವಾಸ್ತವ್ಯ. ಬಸಾಯಾ ಎಂಬುದು ಸಂಸ್ಕೃತ ಪದ ಮತ್ತು ಥಾಯ್ಲೆಂಡ್ ಹಿಂದೂ ದೇಶ! ಬಸಾಯಾ ಎಂದರೆ
ವಿಜಯ, ಗಿಡಮೂಲಿಕೆಯ ಔಷಽ ಕೊಡುವ ಬೌದ್ಧ ಸನ್ಯಾಸಿ ಎಂಬೆ ಅರ್ಥವಿದ್ದರೂ ಈ ರೆಸಾರ್ಟಿಗೆ ವಾಸ್ತವದಲ್ಲಿ ‘ವಾಸ್ತವ್ಯ’ ಎಂಬರ್ಥವೇ
ಸೂಕ್ತ ಎಂದಿಡಲಾಗಿದೆ. ಅಂದ ಹಾಗೆ ಅವರು ಹಾಕಿ ರುವ ಚಿತ್ರದಲ್ಲಿರುವ ಗಡ್ಡಧಾರಿ ಸನ್ಯಾಸಿಯ ಹೆಸರು ಜೀವಕ. ಥಾಯ್ ಜನರು ಇವನು ಬುದ್ಧನ ಖಾಸಗಿ ವೈದ್ಯ ಎನ್ನುವುದಲ್ಲದೆ (ಥಾಯ) ಮಸಾಜನ್ನು ಕಂಡುಹಿಡಿದ ಪಿತಾಮಹ ಎನ್ನುತ್ತಾರೆ. ಈ ರೆಸಾರ್ಟ್ ಜಗತ್ತಿನ ೮ನೇ ಅದ್ಭುತ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಖಂಡಿತವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಕೂಗಿಗರ ೮ನೇ ಅದ್ಭುತ!

ಹೀಗೆ ಅದ್ಭುತ ಸಂಕಥನಗಳನ್ನು ಕಟ್ಟಿ ಜನರನ್ನು ಹುಚ್ಚೆಬ್ಬಿಸಿ ಭಕ್ತಿಪಥಕ್ಕೆ ಹಚ್ಚುವುದು ಇಂದಿನ ಅನೇಕ ಚರ್ಚುಗಳ ತಂತ್ರ. ಅವತಾರ, ಪವಾಡ ಒಂದಾನೊಂದು ಕಾಲದ ತಂತ್ರ! ಆಲೇಲೂಯ, ಬಸಾಯಾ! ಮುಖ್ಯವಾಗಿ ಚೆನ್ನಬಸವ ಪುರಾಣದ ಕವಿಯು ಸಂಬೋಽಸಿರುವ ಗೌರವಾನ್ವಿತ ದೇವ, ದೇವರು, ದೇವರಾಜ, ನಾಥ ಎಂಬ ಸುಸ್ಪಷ್ಟ ಗೌರವಸೂಚಕಗಳಲ್ಲಿ ನಾಥ ಎಂದು ಬಳಸಿರು ವುದನ್ನು ಹಿಡಿದು ಕಲಬುರ್ಗಿಯವರು “ನಾಥ
ಪಂಥದ ಕೇಂದ್ರವಾಗಿ ಸುಮುಕ್ತಿನಾಥರು ಇದರ ಪ್ರವರ್ತಕರೆಂದು ಚೆನ್ನ ಬಸವ ಪುರಾಣವು ಹೇಳುತ್ತದೆ” ಎಂದು ‘ಷರಾ’ ಬರೆದ ಸಂಶೋಧನಾ
ಚಾತುರ್ಯದ ಮಟ್ಟವನ್ನು ಪಾಟೀಲರು ಈ ಬಸಾಯಾ ಚಿಂತನೆಯ ಮಟ್ಟಿಗೆ ಉನ್ನತೀಕರಿಸಿದ್ದಾರೆ.

ಅಂದಹಾಗೆ, ಈ ಶರಣರು ಥಾಯ್ಲೆಂಡಿಗೆ ಏಕೆ ಹೋಗಿರಬಹುದು ಎಂಬ ಆಲೋಚನೆ ನಿಮ್ಮಲ್ಲಿ ಒಂದು ಲಂಪಟನಗೆಯನ್ನು ಉಕ್ಕಿಸಿದರೆ
ಅದು ನಿಮ್ಮ ಮನದ ಮುಂದಣ ಆಶೆ ಮಾತ್ರ! “ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವೆತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀ ಮಕುಟ, ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು
ಚುಳುಕಾದಿರಯ್ಯಾ” ಎನ್ನುವಂಥ ಅಗಾಧ ಪರಂಪರೆಯ ವೀರಶೈವದ ನಿರಾಕಾರ ನಿರಾಮಯ ಶೂನ್ಯ ಸಿದ್ಧಾಂತವನ್ನು ಅತ್ಯಂತ ಶಿಥಿಲ ನಗೆಪಾಟಲ ಲೌಕಿಕ ‘ಶಕ್ತಿ’ ಸ್ಥಾವರವಾಗಿ ಪರಿವರ್ತನೆಗೊಳಿಸಿ ಅನಾತ್ಮಲಿಂಗವ ಕರಸ್ಥಲದಲ್ಲಿ ಸಂಕುಚಿತವಾಗಿ ಹಿಡಿದಿಟ್ಟುಕೊಂಡು ರಾಜಕೀಯ ಶಕ್ತಿಕೇಂದ್ರವಾಗು ವತ್ತತ್ತಲತ್ತ… ಬಸವಶೋಷಣೆಯ ಬಸವರಾಜಕಾ ರಣದ ಜಾಗತಿಕ ‘ಲಿಂಗಾಹತ’ದ ಜಾಗತಿಕ ಸತ್ಯ!

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: Ravi Hunz Column: ಸಂಶೋಧಕನ ಅಹಂನಿಂದ ಸಂಶೋಧನೆಗೆ ಪೆಟ್ಟು