ಅಭಿಮತ
ಸಂಗೀತ ಕಾವ್ಳೆ ರಾಧಾಕೃಷ್ಣ
2019ರ ಆಗ 5 ರಂದು ಕೇಂದ್ರ ಗೃಹ ಸಚಿವರು ಸಂಸತ್ತಿನಲ್ಲಿ ಅನುಚ್ಛೇದ 370ರ ರದ್ದತಿಯನ್ನು ಘೋಷಿಸಿದಾಗ, ದೇಶದ ಬಹುತೇಕ ಜನರಿಗೆ ಅದು ಅತಿ ದೊಡ್ಡ ಸಮಾಧಾನಕರ ಪರಿಹಾರವಾಯಿತು. ವಿವಾದಿತ ಅನುಚ್ಛೇದವು ಸಮಾಜದ ಹಲವಾರು ಅವಕಾಶವಂಚಿತ ಮತ್ತು ದುರ್ಬಲ ವರ್ಗಗಳಿಗೆ ಭದ್ರ ಬುನಾದಿಯನ್ನು ಹಾಕಿದೆ ಎಂಬ ವಾಸ್ತವಾಂಶದಿಂದ ಈ ಭಾವನೆಯೂ ಹೊರ ಹೊಮ್ಮಿದೆ. ಭಾರತ ಸಂವಿಧಾನದ ಅನುಚ್ಛೇದ 370ರ ರದ್ದತಿಯ ನಂತರ ಕಂಡುಬಂದ ಜಮ್ಮು, ಕಾಶ್ಮೀರದ ಈ ಸಮಾಧಾನಕರ ಪರಿಹಾರ ಭಾವನೆಗೆ ಉಂಟಾಗಲು ಕೆಲವು ಕಾರಣಗಳಿವೆ.
ರಾಜಕೀಯ ಅಽಪತ್ಯವನ್ನು ತೆಗೆದು ಹಾಕುವುದು: ಅನುಚ್ಛೇದ 370 ರಾಜ್ಯದಲ್ಲಿನ ಜನರ ರಾಜಕೀಯ ಮಹತ್ವಾಕಾಂಕ್ಷೆಯ ಮೇಲೆ ಕಠಿಣವಾದ ನಿರ್ಬಂಧಗಳನ್ನು ವಿಧಿಸಿದೆ ಎಂಬುದು ತಿಳಿದಿರುವ ಅಂಶವಾಗಿದೆ. ಅನುಚ್ಛೇದ 370 ಕೆಲವು ರಾಜಕೀಯ ಸಂಸ್ಥೆಗಳ ರಾಜಕೀಯ ಪ್ರಾಬಲ್ಯಕ್ಕಾಗಿ ಎಡೆ ಮಾಡಿಕೊಟ್ಟಿದೆ. ಅದೇ ಸಮಯದಲ್ಲಿ ಹಲವಾರು ಯುವ ಮತ್ತು ಕ್ರಿಯಾಶೀಲ ನಾಯಕರ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ನಿರ್ಬಂಧಿಸಿದೆ. ಆದ್ದರಿಂದ, ರಾಜ್ಯದಲ್ಲಿನ ರಾಜಕೀಯ ಪಕ್ಷಗಳ ಮುಖಾಂತರ ಯಾವೊಬ್ಬ ಪ್ರಮುಖ ಯುವ ನಾಯಕನೂ ಬೆಳೆಯಲು ಸಾಧ್ಯವಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.
ಪ್ರಜಾಪ್ರಭುತ್ವದ ತಳಮಟ್ಟವನ್ನು ಬಲಪಡಿಸುವುದು: ಅನುಚ್ಛೇದ 370 ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರಗಳ ವಹಿಸುವಿಕೆಯ ಪ್ರಕ್ರಿಯೆಯನ್ನು ನಿರ್ಬಂಧಿಸಿದೆ. ಅನುಚ್ಛೇದ 370ರ ರದ್ದತಿಗೂ ಮುಂಚೆ ಹಲವಾರು ಕಾರ್ಯ ನೀತಿಗಳನ್ನು ರೂಪಿಸಿ, ಮನವಿಗಳನ್ನು ಸಲ್ಲಿಸಿದರೂ ಕೂಡ, ಸ್ಥಳೀಯ ಸಂಸ್ಥೆಗಳಿಗೆ ಕನಿಷ್ಠ ನಿಧಿ ಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿತ್ತು ಮತ್ತು ಗರಿಷ್ಠ ಪ್ರಮಾಣವನ್ನು ಪ್ರಾಧಿಕಾರಗಳು ತಾವೇ ಸ್ವತಃ ಖರ್ಚು ಮಾಡು ತ್ತಿದ್ದವು. ಆದರೆ, ಅನುಚ್ಛೇದ 370 ರದ್ದತಿಯ ನಂತರ, ಕೇಂದ್ರ ಗೃಹ ಸಚಿವರ ನಿರ್ದೇಶನಗಳನ್ವಯ, ಅಧಿಕಾರಗಳ ವಹಿಸುವಿಕೆಯ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಗಿದೆ.
ಪಂಚಾಯತ್‌ಗಳ ಕಾರ್ಯನಿರ್ವಹಣೆಗಾಗಿ ಇತ್ತೀಚೆಗೆ ಪರಿಚಯಿಸಿದ ನಿಯಮಾವಳಿಗಳ ಪ್ರಕಾರ, ಗ್ರಾಮ ಮುಖಂಡನು ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಮುಖಂಡರೊಂದಿಗೆ (ಸರ್ ಪಂಚ್) ಗ್ರಾಮ ಮಟ್ಟದ ಜೀವ ವೈವಿಧ್ಯತಾ ಸಮಿತಿಯನ್ನು ಮುನ್ನಡೆಸುತ್ತಾನೆ. ಹೀಗಾಗಿ, ಅವರ ಗ್ರಾಮಗಳ ವ್ಯಾಪ್ತಿಗೆ ಬರುವ ರಾಜ್ಯ
ಅರಣ್ಯ ಭೂಮಿಗಳ ಸಂಬಂಧದಲ್ಲಿ ಸರ್ಪಂಚರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಈ ಹಿಂದೆ ಎಂದಿಗೂ ಇರದ ರೀತಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆ ಗಳ ಕಾರ್ಯ ಸ್ವರೂಪಕ್ಕಾಗಿ ಪರಿಣಾಮಕಾರಿ ಬದಲಾವಣೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಇಲಾಖೆಗಳು ಮತ್ತು ಅಧಿಕಾರಿಗಳು ಈಗ ಪಂಚಾಯತಿಗಳಿಗೆ ಉತ್ತರದಾಯಿಗಳಾಗಿzರೆ. ಈಗ ಸರ್‌ಪಂಚರು (ಮುಖಂಡರು) ಪಂಚಾಯತ್‌ನಲ್ಲಿ ಕೆಲಸ
ಮಾಡುತ್ತಿರುವ ಸಿಬ್ಬಂದಿ ಮತ್ತು ಕೆಲಸಗಾರರ ವೇತನಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಿಡುಗಡೆ ಮಾಡುತ್ತಿದ್ದು, ಅದು ಸಿಬ್ಬಂದಿಗಳು ಅವರಿಗೆ ಹೆಚ್ಚು ಉತ್ತರದಾಯಿ ಯಾಗಿರುವಂತೆ ಮಾಡುತ್ತಿದೆ. ಇದು ಈ ಹಿಂದೆಂದೂ ಇರಲಿಲ್ಲ.
ದುರ್ಬಲ ವರ್ಗಗಳ ದಾಸ್ಯದ ಅಂತ್ಯ: ಭಾರತ ಸಂವಿಧಾನದ ಅನುಚ್ಛೇದ 360ರ ರದ್ದತಿಯ ಕುರಿತಾದ ಭಾರತ ಸರಕಾರದ ಘೋಷಣೆಯು ಪಶ್ಚಿಮ ಪಾಕಿಸ್ತಾನ ದಿಂದ ಬಂದ ನಿರಾಶ್ರಿತರಿಗೆ ಭರವಸೆಯ ಹೊಸ ಹಾದಿಯನ್ನು ತೋರಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೌರತ್ವವನ್ನು ನೀಡಬೇಕೆಂಬ ಅವರ ದೀರ್ಘಾವಧಿ ಬೇಡಿಕೆಯೂ ಅಂತಿಮವಾಗಿ ಅನುಚ್ಛೇದ 370ರ ರದ್ದತಿಯಿಂದ ಈಡೇರಿದೆ. ಅಲ್ಲದೆ, ಪೂರ್ವ ಪಾಕಿಸ್ತಾನದ ನಿರಾಶ್ರಿತರ ವಿರುದ್ಧ ಉದ್ಯೋಗ, ಶಿಕ್ಷಣ,
ಸರಕಾರದ ಯೋಜನೆಗಳಲ್ಲಿ ಮಾಡಲಾಗುತ್ತಿದ್ದ ತೀವ್ರತರವಾದ ತಾರತಮ್ಯ ಧೋರಣೆಯು ಅನುಚ್ಛೇದ 370ರ ರದ್ದತಿಯ ನಂತರ ಭೂತಕಾಲಕ್ಕೆ ಸಂದುಹೋದ ವಿಷಯವಾಗಿದೆ.
ಈ ವಿವಾದಿತ ಅನುಚ್ಛೇದದ ರದ್ದತಿಯ ನಂತರ, ಈವರೆಗೂ ಈ ಜನರು ಯಾವ ಅವಕಾಶದಿಂದ ವಂಚಿತರಾಗಿದ್ದರೋ ಅಂಥ ಅನುಸೂಚಿತ ಮತ್ತು ಇತರ
ಹಿಂದುಳಿದ ಜಾತಿಗಳಿಗೆ ಮೀಸಲಾದ ಮೀಸಲಾತಿಯನ್ನು ಈಗ ಅವರು ಪಡೆಯಬಹುದಾಗಿದೆ. ಇದೇ ಬಗೆಯ ಮತ್ತೊಂದು ಪ್ರಕರಣದಲ್ಲಿ, 370ನೇ ಅನುಚ್ಛೇದವು ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಾಲ್ಮೀಕಿ ಸಮುದಾಯದ ಜನರು ರಾಜ್ಯದ ಪ್ರಜೆಗಳಾಗಿರುವುದನ್ನು ತಡೆದಿತ್ತು. ಅವರಿಗೆ ಖಾಯಂ ನಿವಾಸಿ
ಪ್ರಮಾಣಪತ್ರವನ್ನು (ಪಿಆರ್‌ಸಿ) ನಿರಾಕರಿಸಿದ್ದರಿಂದ, ಅವರು ರಾಜ್ಯದ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವಲ್ಲಿ ಹಾಗೂ ರಾಜ್ಯವು ನಡೆಸುವ ಸಂಸ್ಥೆಗಳಲ್ಲಿ ತಮ್ಮ ಮಕ್ಕಳ ಪ್ರವೇಶಾತಿಯನ್ನು ಪಡೆಯುವಲ್ಲಿ ತೀವ್ರತರ ತಾರತಮ್ಯಕ್ಕೆ ಒಳಗಾಗಿದ್ದರು.
ಪ್ರಾಂತ್ಯದ ಸಂಪೂರ್ಣ ಏಕೀಕರಣ: 370ನೇ ಅನುಚ್ಛೇದವನ್ನು ರದ್ದುಗೊಳಿಸಿದ ತರುವಾಯ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಂದ್ರದ ಕಾನೂನುಗಳನ್ನು ಅನುಷ್ಠಾನಕ್ಕೆ ತರಲು ಅವಕಾಶ ದೊರೆಯಿತು. ಈ ಪ್ರದೇಶದಲ್ಲಿ ಈಗ ಶಿಕ್ಷಣದ ಹಕ್ಕು (ಆರ್‌ಟಿಇ) ಅನ್ವಯವಾಗುತ್ತಿದೆ. ಹೀಗಾಗಿ, ಈಗ ಸಮಾಜದ ಅವಕಾಶ ವಂಚಿತರಾದ ಜನರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ಪಡೆಯಬಹುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈಗ ರಾಜ್ಯದ ಬ್ಯಾಂಕುಗಳ ಹಣಕಾಸು ನಿಯಮಾವಳಿಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಮಟ್ಟದ ಪಾರದರ್ಶಕತೆ ಮತ್ತು ಹಣಕಾಸು ಹೊಣೆಗಾರಿಕೆಗೆ ಅವಕಾಶ ಕಲ್ಪಿಸಿದೆ. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ರವರ ಅಧಿಕಾರ ವ್ಯಾಪ್ತಿಯು ಈಗ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೂ ವಿಸ್ತರಿಸಿರುವುದರಿಂದ, ಇದು ಉತ್ತರದಾಯಿತ್ವ ಪರಿಣಾಮ ವುಳ್ಳದ್ದಾಗಿದೆ.
ಜತೆಗೆ, ಭಾರತದ ಸಂಸತ್ತು ಹಲವಾರು ವರ್ಷಗಳ ಹಿಂದೆಯೇ ಜಾರಿಗೊಳಿಸಿದ ಡಜನ್ ಗಟ್ಟಲೆ ಉದಾರ ರೂಪದ ಕಾನೂನುಗಳನ್ನು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅ U ಳಿ ಲ ಸಾಧ್ಯವಾಗಿದೆ. ಇದರಿಂದ, ಭಾರತದ ಉಳಿದ ಭಾಗದೊಂದಿಗೆ ಈ ಪ್ರಾಂತ್ಯವು ವ್ಯಾಪಕ ರೀತಿಯಲ್ಲಿ ಏಕೀಕರಣಗೊಳ್ಳುವುದಕ್ಕೆ
ಅವಕಾಶ ಕಲ್ಪಿಸಿದೆ.
ಮಹಿಳಾ ಸಬಲೀಕರಣ: ವಿವಾದಿತ 370ನೇ ಅನುಚ್ಛೇದವನ್ನು ರದ್ದುಗೊಳಿಸಿರುವುದರಿಂದ ಮಹಿಳೆಯರು ಜಮ್ಮು ಮತ್ತು ಕಾಶ್ಮೀರದ ನಿವಾಸಿ ಅಲ್ಲದವರೊಂದಿಗೆ ವಿವಾಹವಾದರೂ ಸಹ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿನ ತಮ್ಮ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. 370ನೇ ಅನುಚ್ಛೇದದಿಂದ ಹೊರ ಹೊಮ್ಮಿರುವ 35(ಎ) ಅನುಚ್ಛೇದವೂ ಸಹ ಅವರು ಹೊರಗಿನವರನ್ನು ವಿವಾಹವಾದರೆ, ಅವರು ಆಸ್ತಿಯ ಮಾಲೀಕರಾಗಿರುವುದನ್ನು ನಿರ್ಬಂಧಿಸುತ್ತದೆ.
35ಎ) ಅನುಚ್ಛೇದವು, ಜಮ್ಮು ಮತ್ತು ಕಾಶ್ಮೀರದ ಖಾಯಂ ನಿವಾಸಿ’ ಯಾರೆಂಬುದನ್ನು ನಿರ್ಣಯಿಸಲು ಸರಕಾರಕ್ಕೆ ಹೆಚ್ಚಿನ ಅಽಕಾರವನ್ನೂ ಸಹ ನೀಡಿತ್ತು. ಕೇವಲ ಖಾಯಂ ನಿವಾಸಿಗಳು ಮಾತ್ರವೇ ರಾಜ್ಯದಲ್ಲಿ ಭೂಮಿಯನ್ನು ಆರ್ಜಿ ಸುವ, ಸರಕಾರಿ ಉದ್ಯೋಗವನ್ನು ಪಡೆಯುವ ಮತ್ತು ನಿವಾಸಿಯಾಗಬಹುದಾದ ಇತ್ಯಾದಿ ಅವಕಾಶಗಳನ್ನು ಹೊಂದಿರಬಹುದಾಗಿತ್ತು. 370ನೇ ಅನುಚ್ಛೇದದ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಹಿಳೆಯರು ಅಲ್ಲಿನ ನಿವಾಸಿಯಲ್ಲ ದವರನ್ನು ವಿವಾಹವಾದರೂ ಸಹ ರಿಯಲ್ ಎಸ್ಟೇಟ್ ಅನ್ನು ಖರೀದಿಸಬಹುದಾಗಿದೆ ಮತ್ತು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸಬಹುದಾಗಿದೆ. 370ನೇ ಅನುಚ್ಛೇದ ರದ್ಧತಿಯೊಂದಿಗೆ 35(ಎ) ಅನುಚ್ಛೇದವೂ ಸಹ ತಾನಾಗಿಯೇ ರzಗುತ್ತದೆ.
ಆರ್ಥಿಕ ಅಭಿವೃದ್ಧಿ: ಹೆಚ್ಚಿನ ನಿರ್ಬಂಧಕ ಕ್ರಮಗಳು ಮತ್ತು ಕಾನೂನುಗಳು ಭಾರತದಾದ್ಯಂತ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಿಗೆ ಬರುತ್ತಿದ್ದ ಹೂಡಿಕೆಗಳ ಹರಿವಿನ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿದ್ದವು. ಆದುದರಿಂದ, ಈ ಪ್ರದೇಶವು ಭಾರತದ ಅಭಿವೃದ್ಧಿಗಾಥೆಯ ಭಾಗವಾಗಬೇಕಾದ ಒಂದು ಅವಕಾಶವನ್ನು ಕಳೆದುಕೊಂಡಿತು. 370ನೇ ಅನುಚ್ಛೇದದ ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಕಾನೂನಿನ ಅನುಷ್ಠಾನ ದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಹೆಚ್ಚು ಉಪಯುಕ್ತವಾದ ಪರಿಸ್ಥಿತಿಗಳನ್ನು ರೂಪಿಸಲಾಗಿದೆ. ಈ ಮೊದಲು ಕಣಿವೆಯ ಹೊರಭಾಗದ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಿರಲಿಲ್ಲ. ಆದರೆ ಈಗ 370ನೇ ಅನುಚ್ಛೇದದ ರದ್ದತಿಯ ನಂತರ ಅವರು ರಾಜ್ಯದಲ್ಲಿ ಉದ್ದಿಮೆ ಗಳನ್ನು ಸ್ಥಾಪಿಸುವುದಕ್ಕಾಗಿ ಭೂಮಿಯನ್ನು ಖರೀದಿಸಲು ಪ್ರಾರಂಭಿಸಿದ್ದಾರೆ.