Thursday, 3rd October 2024

ಪೋಲಿಸರೇ, ಯಾರ ಮುಲಾಜಿಗೂ ಒಳಗಾಗಬೇಡಿ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ದುಷ್ಟರನ್ನು ಕಂಡರೆ ದೂರವಿರಲು ಅನೇಕರು ಪ್ರಯತ್ನಿಸುತ್ತಾರೆ. ಹಾಗೆ ಪ್ರಯತ್ನಿಸುವವರು ತಾವೆಷ್ಟು ಒಳ್ಳೆಯವರು? ವಾಸ್ತವವಾಗಿ ಪ್ರತಿಯೊಬ್ಬ ಮನುಷ್ಯ ಸಂಪೂರ್ಣವಾಗಿ ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ. ಎರಡೂ ಗುಣಗಳು ಆತನಲ್ಲಿರುತ್ತವೆ. ಹಾಗಾಗಿ ಮತ್ತೊಬ್ಬರ ಒಳ್ಳೆಯ ಗುಣಗಳ ಬಗ್ಗೆಯೇ ನಾವು ಹೆಚ್ಚಿನ ಗಮನ ಹರಿಸಬೇಕು.

ದೇವರು, ಪ್ರತಿಯೊಬ್ಬ ಮನುಷ್ಯನಿಗೂ ಒಂದು ಅದ್ಭುತವಾದ ಆಲೋಚನಾ ಶಕ್ತಿಯನ್ನು ಕೊಟ್ಟಿರುತ್ತಾನೆ. ಆ ಮೂಲಕ ಆತ ತನ್ನ ಬದುಕಿನಲ್ಲಿ ಅಂದುಕೊಂಡ ಸಾಧನಾ ಪಥದಲ್ಲಿ ಹೆಜ್ಜೆಹಾಕಿ ಯಶಸ್ಸನ್ನು ಕಂಡುಕೊಳ್ಳಲು ನಿರಂತರ ಪ್ರಯತ್ನದ ಮೂಲಕ ಹಂಬಲಿಸುತ್ತಾನೆ. ಹೀಗೆ ಬದುಕಿನ ಸಹಜ ಆಸೆ-ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಾನಲ್ಲಾ, ಅವೇ ಆತನ ಕೈಹಿಡಿದು ನಡೆಸುವ ಕನಸುಗಳು. ಹೀಗೆ ಆ ಕನಸುಗಳನ್ನು ಯಶಸ್ಸಿನತ್ತ ಕೊಂಡೊಯ್ಯುವ ಪ್ರತಿಯೊಬ್ಬ ಮನುಷ್ಯನಿಗೆ ಹಲವು ರೀತಿಯ ತೊಂದರೆ ಗಳು, ಸಾಕಷ್ಟು ಅಡ್ಡಿ ಆತಂಕಗಳು ಬರುತ್ತಲಿರುತ್ತವೆ.

ಹಾಗೆ ಎದುರಾಗುವ ಎಲ್ಲಾ ರೀತಿಯ ತೊಡಕುಗಳನ್ನೂ ತನ್ನ ಪರಿಶ್ರಮ, ಕೌಶಲ ಹಾಗೂ ಚಾಣಾಕ್ಷತನದಿಂದ ನಿವಾರಣೆ ಮಾಡಿಕೊಂಡು ಆತ ಸಫಲತೆಯ ದಿಕ್ಕಿನತ್ತ ಪಯಣವನ್ನು ಮುಂದುವರಿಸಿದಾಗ ಮಾತ್ರ ಸಾಧನೆ ಯನ್ನು ಮಾಡಲು ಸಾಧ್ಯವಾಗುತ್ತದೆ. ಆಗ, ಈ ಸಮಾಜಕ್ಕೂ ಆತನ ಬಗ್ಗೆ ವಿಶ್ವಾಸ ಬರುತ್ತದೆ ಮತ್ತು ಅದು ಆತನನ್ನು ಗೌರವಿಸುತ್ತದೆ. ಗುರಿ ಸಾಧನೆಗಾಗಿ ಕಠಿಣ ಪರಿಶ್ರಮದಲ್ಲಿ ತೊಡಗಿದ ಸಂದರ್ಭದಲ್ಲಿ ದೈಹಿಕ ಶಕ್ತಿ, ಆತ್ಮಬಲ ಮತ್ತು ಬುದ್ಧಿಶಕ್ತಿ ಹೆಚ್ಚುತ್ತದೆ. ಕಷ್ಟಗಳನ್ನು ಎದುರಿಸುವಾಗ ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿರಬೇಕು. ನಕಾರಾತ್ಮಕವಾದಂಥ ಯೋಚನೆಗಳು ನಮ್ಮನ್ನು ಮತ್ತಷ್ಟು ದುರ್ಬಲರನ್ನಾಗಿ ಮಾಡುತ್ತವೆ. ಬದುಕಿನಲ್ಲಿ ಯಾರು ಎಷ್ಟೇ ಬುದ್ದಿವಂತ ರಾಗಿದ್ದರು ಕೂಡ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ.

ಪ್ರತಿನಿತ್ಯದ ಜೀವನದುದ್ದಕ್ಕೂ ಮನುಷ್ಯ ಹೊಸತನ್ನು ಕಲಿಯುತ್ತಲೇ ಇರುತ್ತಾನೆ. ಭಗವಂತನ ಈ ಸೃಷ್ಟಿಯಲ್ಲಿ ಎಲ್ಲಾ ಜೀವಿಗಳಿಗಿಂತಲೂ ಮನುಷ್ಯ ಅತ್ಯಂತ ಶ್ರೇಷ್ಠ ಜೀವಿ. ಎಲ್ಲಾ ಜೀವಿಗಳ ಬೆನ್ನೆಲುಬು ನೆಲಕ್ಕೆ ಸಮಾನವಾಗಿ ಬಾಗಿರುತ್ತದೆ. ಆದರೆ ಮನುಷ್ಯನ ಬೆನ್ನೆಲುಬು ಮಾತ್ರ ಲಂಬವಾಗಿರುತ್ತದೆ. ಕಾರಣ, ಮನುಷ್ಯನ ವಿಕಾಸ ಆಗ ಬೇಕಿರುವುದು ಮೇಲ್ಮುಖವಾಗಿ. ಆಕಾಶದೆತ್ತರಕ್ಕೆ ಅವನ ಆಲೋಚನೆಗಳು ಹರಡಬೇಕು. ಆತನ ಸರ್ವಾಂಗೀಣ ವಿಕಾಸವು ಶರೀರದ ವಿಕಾಸ ದಿಂದಲೇ ಆಗಬೇಕು. ಯಾಕೆಂದರೆ ಶರೀರದ ವಿಕಾಸ ಆಗದೇ ಮನಸ್ಸಿನ ವಿಕಾಸ ಆಗಲ್ಲ, ಮನಸ್ಸಿನ ವಿಕಾಸ ಆಗದೆ ಬುದ್ದಿಯ ವಿಕಾಸ ವಾಗುವುದಿಲ್ಲ, ಬುದ್ದಿಯ ವಿಕಾಸವಾಗದಿದ್ದರೆ ಆತ್ಮದ ವಿಕಾಸ ಸಾಧ್ಯವಿಲ್ಲ. ಹಾಗಾಗಿ ಮನುಷ್ಯನ ಎಲ್ಲಾ ವಿಕಾಸವು ಕ್ರಮೇಣವಾಗಿ ಆಗುವಂಥದು.

ಸಾಧಕರೆನಿಸಿಕೊಂಡವರು ಅಥವಾ ಸಾಧನೆಯ ಪಥ ದಲ್ಲಿ ಹೆಜ್ಜೆಹಾಕುವವರು ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಸ್ವಾಭಿಮಾನವು ಆತ್ಮಬಲ ಹಾಗೂ ಮನೋಬಲ ವನ್ನು ಹೆಚ್ಚಿಸುವುದರ ಜತೆಗೆ ಕೈಗೊಂಡ ಕಾರ್ಯಕ್ಕೆ ಸ್ಫೂರ್ತಿ ನೀಡುತ್ತದೆ. ಸ್ವಾಭಿಮಾನವುಳ್ಳ ವ್ಯಕ್ತಿಗಳು ಎಂಥದೇ ಕಷ್ಟದ ಪರಿಸ್ಥಿತಿಗಳು ಎದುರಾದರೂ ಎದೆ ಗುಂದುವುದಿಲ್ಲ. ಆತ್ಮಸ್ಥೈರ್ಯವೇ ಸ್ವಾಭಿಮಾನದ ಪ್ರತೀಕ. ಹಾಗಾಗಿ ಯಶಸ್ಸಿನ ದಾರಿಯಲ್ಲಿ ಸ್ವಾಭಿಮಾನವು, ಸಹನೆ ಮತ್ತು ಚೈತನ್ಯ ಶೀಲತೆಗೆ ಅನುವು ಮಾಡಿಕೊಡುತ್ತದೆ. ಸ್ವಾಭಿಮಾನ ಉತ್ತಮ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ. ಅದರಿಂದ ನಮ್ಮ ಮುಖದಲ್ಲಿ ಮೂಡುವ ಮಂದಹಾಸ, ಲವಲವಿಕೆಗಳು ಅನೇಕರ ಮೇಲೆ ಪಾಸಿಟಿವ್ ಪ್ರಭಾವ ಬೀರುತ್ತವೆ. ಸಾಧಿಸುವವನಲ್ಲಿ ಇತರ ಏಳಿಗೆಯನ್ನು ಸಹಿಸಿಕೊಳ್ಳುವ ಮನಸ್ಥಿತಿ ಇರಬೇಕು.

ಇತರರ ಅಭಿವೃದ್ಧಿಯನ್ನು ಕಂಡು ಆತ ಸಂಭ್ರಮಿಸಬೇಕು, ಸಂತಸ ಪಡಬೇಕು, ಅವರನ್ನು ಮತ್ತಷ್ಟು ಹುರಿದುಂಬಿಸಬೇಕು, ಅವರು ದುಃಖದಲ್ಲಿದ್ದಾಗ ಅವರಿಗೆ ಸಾಂತ್ವನ ಹೇಳಿ ಮತ್ತಷ್ಟು ಉತ್ತೇಜಿಸುವ ಮನಸ್ಥಿತಿ ಸಾಧಕನಲ್ಲಿ ಇರಬೇಕಾದ್ದು ಅತ್ಯಂತ ಮುಖ್ಯ. ‘ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ ಎಂಬ ಉದಾತ್ತ
ಚಿಂತನೆಯು ಸಾಧನಾ ಪಥದಲ್ಲಿರುವವರ ಜೀವಾಳ ವಾಗಬೇಕು, ಉಸಿರಾಗಬೇಕು, ಅನುದಿನದ ಧ್ಯೇಯ ವಾಗಬೇಕು. ಸ್ವಾರ್ಥದ ಲವಲೇಶವೂ ಇಲ್ಲದ ಈ
ಅಂಶವನ್ನು ಗಮನದಲ್ಲಿಟ್ಟುಕೊಂಡೇ ಜೀವನದಲ್ಲಿ ಹೆಜ್ಜೆ ಹಾಕಬೇಕು. ಯಾಕಂದರೆ, ನಾವು ಹುಟ್ಟುವಾಗ ಏನನ್ನೂ ಹೊತ್ತು ತರುವುದಿಲ್ಲ, ದಿನಗಳೆದಂತೆ ಈ ಸಮಾಜ ಮತ್ತು ಪ್ರಕೃತಿಯಿಂದ ನಾವು ಎಲ್ಲವನ್ನೂ ಸ್ವೀಕರಿಸುತ್ತೇವೆ.

ಹಾಗಾಗಿ ನಾವು ಕೂಡ ಸಮಾಜಕ್ಕೆ ಏನಾದರೂ ಉತ್ತಮ ವಾದ ಕೊಡುಗೆ ಅಥವಾ ಕಾಣಿಕೆಯನ್ನು ನೀಡಲೇಬೇಕು. ಮನುಷ್ಯ ಸಾಯುವಾಗಲೂ ಏನನ್ನು ಕೊಂಡೊಯ್ಯುವುದಿಲ್ಲ. ಅಷ್ಟೇಕೆ, ಅಷ್ಟು ದಿನ ಅವನ ಚೈತನ್ಯಕ್ಕೆ ಮನೆಯಾಗಿದ್ದ ದೇಹವೇ ಅವನ ಜತೆಯಲ್ಲಿ ಬರುವುದಿಲ್ಲ. ಹಾಗಾಗಿ ಈ ಪ್ರಕೃತಿಯಲ್ಲಿ ಮನುಷ್ಯ ಕೇವಲ ಅತಿಥಿ ಮಾತ್ರ. ಆದರೆ ಈ ಸಾರ್ವಕಾಲಿಕ ಸತ್ಯವನ್ನು ಮರೆತ ಮನುಷ್ಯ ಹೇಳುತ್ತಾನೆ, ‘ನಾನು ನೂರಾರು ಎಕರೆ ಭೂಮಿ ಯನ್ನು ಕೊಂಡುಕೊಂಡಿದ್ದೇನೆ’ ಅಂತ. ಎಂಥಾ ಹುಚ್ಚು ಮಾತಿದು! ಏಕೆಂದರೆ, ವಾಸ್ತವವಾಗಿ ಮನುಷ್ಯ ಈ ಪ್ರಕೃತಿ ಯನ್ನು ಖರೀದಿಸಲು ಸಾಧ್ಯವೇ ಇಲ್ಲ.

ಆತ ಎಷ್ಟೇ ಸೊಕ್ಕಿನಿಂದ, ಠೇಂಕಾರದಿಂದ, ಅಹಂಕಾರದಂದ, ತಿರಸ್ಕಾರದಿಂದ ವರ್ತಿಸಿದರೂ ಕೊನೆಗೊಮ್ಮೆ ಅದೇ ಪ್ರಕೃತಿ ಆತನನ್ನು ನನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತದೆ, ತನ್ನಲ್ಲಿ ಅವನನ್ನೂ ಒಂದು ಭಾಗವಾಗಿಸಿಕೊಳ್ಲುತ್ತದೆ. ಹಾಗಾಗಿ ಬದುಕಿರುವಷ್ಟೂ ದಿನ ಮನುಷ್ಯ, ಅದರಲ್ಲೂ ನಿರ್ದಿಷ್ಟವಾಗಿ ಸಾಧನಾ ಪಥದಲ್ಲಿರುವಾತ ಸ್ವಾರ್ಥರ ಹಿತವಾದ ಬದುಕನ್ನು ನಡೆಸಬೇಕು. ಹಸಿದವರಿಗೆ ಅನ್ನ, ಉಡಲು ಬಟ್ಟೆ, ಇರಲೊಂದು ಮನೆ, ಅರಿವಿಗಾಗಿ ಶಿಕ್ಷಣ ಮತ್ತು ಸ್ವಸ್ಥ ಬದುಕಿಗಾಗಿ ಆರೋಗ್ಯ ಇವೆಲ್ಲವೂ ಈ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಯಥೋಚಿತವಾಗಿ ಸಿಗಬೇಕೆಂಬುದು ಪ್ರಕೃತಿಯ ಮೂಲ ಆಶಯ. ಆದರೆ, ರುಚಿಗೆ ತಕ್ಕಷ್ಟು ಉಪ್ಪು ಹೇಗೋ, ಹಾಗೇ ಮನುಷ್ಯ ತನ್ನ ಅವಶ್ಯಕತೆಗಿಂತ ಹೆಚ್ಚಾದುದನ್ನು ಕೂಡಿಡಬಾರದು.

ಕಿತ್ತುಕೊಂಡು ತಿನ್ನುವ ವರ ಹೊಟ್ಟೆ ಎಂದಿಗೂ ತುಂಬುವುದಿಲ್ಲ, ಯಾರೆಲ್ಲ ಇದ್ದುದ್ದರಲ್ಲಿ ಹಂಚಿಕೊಂಡು ತಿನ್ನುತ್ತಾರೋ ಅಂಥವರು ಎಂದಿಗೂ ಉಪವಾಸ ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ದಾನಕಾರ್ಯ ಬಹಳ ಮುಖ್ಯ. ದಾನವು ಉಸಿರಾಟದಷ್ಟೇ ಶ್ರೇಷ್ಠವಾದದ್ದು. ದಾನ ಕೊಡುವ ಸಂದರ್ಭದಲ್ಲಿ ಸ್ವಚ್ಛ ಮನಸ್ಸಿನಿಂದ ಕೊಡಬೇಕು, ನಂತರ ಅದನ್ನು ಮರೆತುಬಿಡಬೇಕು. ಪರಿಶುದ್ಧವಾದ ಮನಸ್ಸಿನಿಂದ ನಮ್ಮಲ್ಲಿರುವ ಶ್ರೇಷ್ಠವಾದುದನ್ನೇ ದಾನ ನೀಡಬೇಕೇ ವಿನಾ, ಬಳಕೆಗೆ ಯೋಗ್ಯವಲ್ಲದ ಅಥವಾ ತಿರಸ್ಕೃತವಾದ ವಸ್ತುಗಳನ್ನು ದಾನವಾಗಿ ನೀಡಬಾರದು ಎನ್ನುತ್ತಾರೆ ಬಲ್ಲವರು.

ದುಷ್ಟರನ್ನು ಕಂಡರೆ ದೂರವಿರಲು ಅನೇಕರು ಪ್ರಯತ್ನಿಸುತ್ತಾರೆ. ಹಾಗೆ ಪ್ರಯತ್ನಿಸುವವರು ತಾವೆಷ್ಟು ಒಳ್ಳೆಯವರು? ವಾಸ್ತವವಾಗಿ ಒಬ್ಬ ವ್ಯಕ್ತಿ ಪೂರ್ಣವಾಗಿ
ಕೆಟ್ಟವನೆ? ಪ್ರತಿಯೊಬ್ಬ ಮನುಷ್ಯ ಸಂಪೂರ್ಣವಾಗಿ ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ. ಎರಡೂ ಗುಣಗಳು ಆತನಲ್ಲಿರುತ್ತವೆ. ಹಾಗಾಗಿ ದೇವರ ಸೃಷ್ಟಿಯಲ್ಲಿ
ಮನುಷ್ಯನು ಪ್ರತಿಬಿಂಬದಂತಿರುತ್ತಾನೆ. ಮನುಷ್ಯ ನಲ್ಲಿರುವ ಒಳ್ಳೆಯ ಗುಣಗಳ ಬಗ್ಗೆಯೇ ನಾವು ಹೆಚ್ಚಿನ ಗಮನ ಹರಿಸಬೇಕು. ತಮ್ಮಲ್ಲಿ ಸದ್ಗುಣಗಳಿರುವವರು
ಮಾತ್ರ ಬೇರೆಯವರಲ್ಲಿನ ಒಳ್ಳೆಯತನವನ್ನಷ್ಟೇ ಕಾಣು ತ್ತಾರೆ, ಆಲಿಸುತ್ತಾರೆ. ಸ್ವಾಮಿ ವಿವೇಕಾನಂದರು ಕೂಡ ‘ನೀವು ಏನನ್ನು ಯೋಚಿಸುತ್ತೀರೋ ಅದೇ ಆಗುತ್ತೀರಿ’ ಎಂದು ಹೇಳಿದ್ದಾರೆ. ಆ ತರಹದ ಆಲೋಚನೆಗಳಿಂದ ಮನಸ್ಸು ಯಾವಾಗಲೂ ಪಾಸಿಟಿವ್ ಆಗಿ ಯೋಚಿಸುತ್ತದೆ.

ಅದರಿಂದಾಗಿ ಈ ಸಮಾಜ, ದೇಶ, ಮನುಷ್ಯರು ಎಲ್ಲರೂ ಒಳ್ಳೆಯವರಾಗಿ ಕಾಣುತ್ತಾರೆ, ಎಲ್ಲವೂ ಒಳ್ಳೆಯದಾಗಿಯೇ ಗೋಚರಿಸುತ್ತವೆ. ಅನೇಕ ಕ್ಷೇತ್ರಗಳಲ್ಲಿ ಎಲ್ಲರಿಗೂ ವಿರೋಧಿಗಳು ಇದ್ದೇ ಇರುತ್ತಾರೆ. ಹಾಗೆ ಇರುವ ವಿರೋಽಗಳೇ ನಮ್ಮ ಗುರುಗಳು. ಕೆಲವೊಮ್ಮೆ ನಮ್ಮ ಆಪ್ತ ಸ್ನೇಹಿತರು ಕಲಿಸಲಾರದಂಥ ಪಾಠಗಳನ್ನು ವಿರೋಧಿಗಳು ಕಲಿಸುತ್ತಾರೆ. ನಮ್ಮ ಬಗ್ಗೆ ಎಷ್ಟೇ ಟೀಕೆ, ಕಾಲೆಳೆಯುವ ಪ್ರಯತ್ನಗಳನ್ನು ಮಾಡಿದರೂ ಅವರು ನಮಗೆ ಒಳ್ಳೆಯದನ್ನೇ ಮಾಡಿರುತ್ತಾರೆ. ಶತ್ರುವಿನ ನಡೆಯಿಂದ ಕೋಪಗೊಳ್ಳದೆ, ಅವರ ಮೇಲೆ ದ್ವೇಷ ಸಾಧಿಸದೆ ಅವರ ಬಗ್ಗೆ ಉದಾಸೀನದಿಂದ ಇರಬೇಕು. ಕಾಲಕ್ರಮೇಣ
ಅವರೇ ನಮ್ಮ ಪರಮಾತ್ಮರಾಗಲೂಬಹುದು. ಬದಲಿಗೆ ಅವರನ್ನು ದ್ವೇಷಿಸುವುದರಿಂದ ದ್ವೇಷಾಸೂಯೆಯ ಮನೋಭಾವ ಮತ್ತಷ್ಟು ಹೆಚ್ಚಾಗಿ ಮನಸ್ಸಿನ ನೆಮ್ಮದಿ
ಹಾಳಾಗುತ್ತದೆ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಮತ್ತು ಮನುಷ್ಯನೇನೂ ಸಾಮಾನ್ಯ ಜೀವಿಯಲ್ಲ.

ಬದುಕು ಯಾವಾಗಲೂ ದೊಡ್ಡದು, ಆದ್ದರಿಂದ ಅಹಂಕಾರ, ದ್ವೇಷಕ್ಕೆ ಅವಕಾಶ ಕೊಡಬಾರದು. ಸರಳತೆ ಮತ್ತು ದೈನ್ಯತೆಯನ್ನು ರೂಢಿಸಿಕೊಳ್ಳಬೇಕು. ದೈನ್ಯತೆ
ನಮ್ಮನ್ನು ಸಮಾಜದೊಂದಿಗೆ ಸಕಾರಾತ್ಮಕವಾಗಿ ವರ್ತಿಸುವಂತೆ ಮಾಡುತ್ತದೆ ಮತ್ತು ಯಾವಾಗಲೂ ನಮ್ಮ ಮನೋಭಾವನೆಯನ್ನು ಸ್ಥಿರವಾಗಿರಿಸುತ್ತದೆ. ನಮ್ಮ
ಆಚಾರ ವಿಚಾರದಲ್ಲಿ, ಆಚರಣೆಯಲ್ಲಿ ಸರಳತೆಯನ್ನು ಕಾಯ್ದುಕೊಂಡಾಗ, ನಮಗೆ ಎಂಥ ಸಂದಿಗ್ಧ ಪರಿಸ್ಥಿತಿಗಳು ಎದುರಾದರೂ ಅವನ್ನು ಎದುರಿಸುವ ಧೈರ್ಯ ನಮಗೆ ಪ್ರಾಪ್ತವಾಗುತ್ತದೆ ಮತ್ತು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಪ್ರೇರಣೆ ಸಿಗುತ್ತದೆ. ಇದು ನಮ್ಮ ಹಿಂದಿನವರು ಕಂಡುಕೊಂಡ ಯಶಸಿನ ಸೂತ್ರ.