Wednesday, 11th December 2024

ಯಾವುದು ಧರ್ಮ? ಪಂಥ? ದರ್ಶನ ?

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ನನ್ನನ್ನು ನಂಬದವರನ್ನು ಕೊಲ್ಲು ಎಂದು ಒಬ್ಬ ದೇವದೂತ ಹೇಳಿದರೆ ಅವನ ಮತಾನುಯಾಯಿಗಳು ಏನು ಮಾಡಿಯಾರು? ಅಂಥ ಧರ್ಮಗ್ರಂಥಗಳು ಇವೆಯೆಂದರೆ ಅಚ್ಚರಿಯಾಗುವುದಿಲ್ಲವೆ? ಭಯವೂ ಆಗುವುದಿಲ್ಲವೆ?

ನಾವು ಭಾರತೀಯರು ಎಲ್ಲವನ್ನೂ ಕಣ್ಮುಚ್ಚಿ ನಂಬುವ, ಒಪ್ಪುವ, ಮೆಚ್ಚುವ, ವಿಶಾಲ ಮನೋಭಾವವುಳ್ಳ ಉದಾರ ಹೃದಯಿಗಳು. ಇದರಲ್ಲೇ ನಮ್ಮ ಉಳಿವು, ಗೌರವ, ವ್ಯಾವಹಾರಿಕ ಬದುಕು, ಮರ್ಯಾದೆ, ವಿವೇಕ, ಪರಂಪರೆಯಲ್ಲಿ ನಂಬಿಕೆ, ಮೌಲ್ಯಗಳಲ್ಲಿ ನಿಷ್ಠೆ ಅಡಗಿರುವುದರಿಂದ ಕೆಲವು ಸೂಕ್ಷ್ಮಗಳನ್ನು ಅರಿಯಬೇಕಿದೆ.

ಸಿಕ್ಕ ಸಿಕ್ಕ ಪ್ರಣಾಲಿಗಳೆಲ್ಲವೂ ಧರ್ಮವೆನಿಸುವುದಿಲ್ಲ. ಧಾರಣಾತ್ ಧರ್ಮ ಎಂದರು. ಯಾವುದು ತನ್ನಲ್ಲಿ ಎಲ್ಲವನ್ನೂ ಧರಿಸುತ್ತದೋ ಅದು ಧರ್ಮವೆನಿಸುತ್ತದೆ. ಈ ಧರಿಸುವುದು ಎಂದರೇನು? ಯಾವುದು ಜಡಜಡಾತ್ಮಕ ಜಗತ್ತಿಗೆಲ್ಲ ಆಧಾರವೋ, ಯಾವುದು ಮನುಷ್ಯನ ಕಲ್ಪನೆಯನ್ನು ಅವಲಂಬಿಸದ ನಿತ್ಯಸತ್ಯವೋ, ಯಾವುದು ತರ್ಕ, ಪರೀಕ್ಷೆ, ಪ್ರಯೋಗಾದಿ ಪ್ರಮಾಣಗಳಿಗೆ ವಿರುದ್ಧವಲ್ಲವೋ, ಅವು ಗಳಿಂದಲೂ ಸಮರ್ಥನೀಯವೋ ಅದು ಮಾತ್ರ ಧರ್ಮ. ವುದು ನಿತ್ಯಜೀವನದಲ್ಲೂ ಕಣ್ಣಿಗೆಗೇ ಕಾಣುತ್ತದೆಯೋ, ಯಾವುದು ಇಲ್ಲದಿದ್ದರೆ ಜೀವನ ನಡೆಯುವುದಿಲ್ಲವೋ, ಪೂರ್ವ ಪಶ್ಚಿಮಾದಿ ಗೋಳಭೇದವೂ, ಜನಾಂಗ ಜಾತಿ ಕೋಮು ಲಿಂಗಭೇದವೂ ಒಳಗೊಂಡಂತೆ ಯಾವುದು ವಿಶ್ವಮಾನ್ಯ ಸತ್ಯವೋ ಅದು ಧರ್ಮ.

ಯಾವುದು ಎಲ್ಲರ ಅನುಭವದಲ್ಲೂ ನಿತ್ಯಸತ್ಯವೋ ಅದು ಮಾತ್ರ ಧರ್ಮ. ಧರ್ಮ ಇದ್ದಲ್ಲಿ ಜಗಳ ಇರುವುದಿಲ್ಲ. ಧರ್ಮ ಇಲ್ಲದಾಗಲೇ ಅಜ್ಞಾನ, ಹಿಂಸೆ, ಜಗಳ, ದಬ್ಬಾಳಿಕೆ, ಕ್ರೌರ್ಯ, ಶೋಷಣೆ ಇಂಥ ಅನಿಷ್ಠಗಳಿರುತ್ತವೆ. ಏಕಂ ಸತ್ ವಿಪ್ರಾ ಬಹುಧಾ ವದಂತಿ, ದೇವನೊಬ್ಬ ನಾಮ ಹಲವು ಎಂಬ ಮಾತುಗಳೂ ಸಾರ್ವ ಕಾಲಿಕ ಸತ್ಯವೇ ಆಗಿದೆ. ಮತವನ್ನು ಧರ್ಮವೆಂದೇ ಗ್ರಹಿಸಿ ಹೇಳುವ ಅಭ್ಯಾಸ ನಮ್ಮಲ್ಲಿ ಬೆಳೆದು ಬಂದಿದೆ.

ಮತ ಎಂದರೆ ಅಭಿಪ್ರಾಯ, ಗ್ರಹಿಕೆ, ಬುದ್ಧಿಗೆ ಎಟುಕಿದ್ದು, ಆಯ್ಕೆ-ಎಂಬೆಲ್ಲ ಅರ್ಥಗಳಿವೆ. ಚುನಾವಣೆಯ ಸ್ಪರ್ಧೆಯಲ್ಲಿ ಹತ್ತು ಜನರಲ್ಲಿ ಒಬ್ಬನನ್ನು ಆಯ್ಕೆ ಮಾಡುವುದು ಓಟಿನ ಮೂಲಕ. ಅದು ಮತ. ಅದು ವೈಯಕ್ತಿಕ ಆಯ್ಕೆ. ಜಗತ್ತು ಮಾಯೆ, ಬ್ರಹ್ಮ ಒಂದೇ ಸತ್ಯ- ವಿಶಾಲವಾದ ವೇದದ ಧರ್ಮಕ್ಕೆ ಶಂಕರಾಚಾರ್ಯರ ವ್ಯಾಖ್ಯೆಯಿದು. ಇದು ಶಂಕರರ ಮತ. ಇದನ್ನು ಒಪ್ಪಲೇಬೇಕೆಂತೇನೂ ಇಲ್ಲ. ಹಾಗಂತ ವಿರೋಧಿಸುತ್ತ ಅದರ ವಿರುದ್ಧ, ಅವರ ವಿರುದ್ಧ ಯುದ್ಧ ಮಾಡಬೇಕೆಂತೇನೂ ಇಲ್ಲ.

ಶಂಕರರ ಅಭಿಪ್ರಾಯ, ಗ್ರಹಿಕೆ, ತರ್ಕ, ವಿವರಣೆಗಳಿಗೆ ಅವರಲ್ಲಿ ಆಧಾರವಿದೆ. ಅನುಭವದ ಸ್ಪರ್ಶವಿದೆ. ಹಾಗೆಯೇ ನಮ್ಮ ನಮ್ಮ ಮತದ ಆಚೆಗೂ ಈಚೆಗೂ ಇರುವ ಸತ್ಯ, ಧರ್ಮವೇ ಆಗಿದೆ. ಈ ಮಾತು ಮಧ್ವ, ರಾಮಾನುಜ, ವಲ್ಲಭ, ಚೈತನ್ಯ, ರಾಮಾನಂದ ಮೊದಲಾ ದವರಿಗೂ ಅನ್ವಯಿಸುತ್ತದೆ. ಧರ್ಮ ವಿಶಾಲ, ಮತ ವೈಯಕ್ತಿಕ. ಆದರೆ ಎರಡೂ ಬೇಕು. ಒಂದು ಸಮೂಹ ಜೀವನಕ್ಕೆ ಆಧಾರ, ಇನ್ನೊಂದು ವೈಯಕ್ತಿಕ ಜೀವನಕ್ಕೆ ಮಾರ್ಗದರ್ಶಕ. ಮತಭೇದದಿಂದ ರಾಷ್ಟ್ರೀಯತೆ, ಸಾಮುದಾಯಿಕ ನಿಷ್ಠೆ, ಸೋದರ ಪ್ರೇಮ,
ಸಮಾಜ ಸಮಾನತೆ ಸಾಯುವುದಿಲ್ಲ. ಸಾಯಬಾರದು.

ನೆನಪಿಡಬೇಕಾದುದು ಏನೆಂದರೆ, ಯಾವುದೂ ಅತಿರೇಕವಾದಾಗ ಸಮಾಜವೇ ಅದನ್ನು ತಿದ್ದುತ್ತದೆ. ಹಳಿತಪ್ಪಿದ ಸಮಾಜ ಸುಧಾರಣೆಗೆ ಸುಧಾರಕರು ಹುಟ್ಟಿ ಬಂದಿದ್ದಾರೆ. ಹುಟ್ಟಿ ಬರುತ್ತಾರೆ. ಮತ ಧರ್ಮದಲ್ಲಿ ಅಡಗುತ್ತದೆ. ಆಧರಿಸಿರುತ್ತದೆ. ಉಸಿರು ಹಿಡಿದು ಬದುಕುತ್ತಿರುತ್ತದೆ. ಈ ಸಮೀಕರಣದಲ್ಲೇ ಭಾರತೀಯ ಸಮಾಜ ಬದುಕುತ್ತಿದೆ. ಅದಕ್ಕಾಗಿ ಈ ದೇಶ ಹೀಗಿದೆ. ಹೀಗೆಯೇ ಇರುತ್ತದೆ. ಇನ್ನೊಂದು ಅರ್ಥದಲ್ಲಿ ಮತ ಎಂದರೆ ಅನಿವಾಸಿ ಭಾರತೀಯ ಮೂಲದ್ದು.

ಅನ್ಯದೇಶೀಯದ್ದು. ಅನ್ಯಮೂಲದ್ದು. ಸೆಮೆಂಟಿಕ್ ಬುಡಕಟ್ಟಿನ ನಂಬಿಕೆಗಳಿಗೆ ಸೀಮಿತವಾದದ್ದು. ಇದುವೇ ಈಗ ರಾಷ್ಟ್ರೀಯತೆಗೆ ಸವಾಲಾ ಗಿರುವಂಥದ್ದು! ಭೂಮಿ ಚಪ್ಪಟೆಯಾಗಿದೆ ಎಂದವ ವಿಜ್ಞಾನಿಯಲ್ಲದ ತತ್ತ್ವಜ್ಞಾನಿಯೆಂದು ಕರೆಯಲ್ಪಟ್ಟ ಅರಿಸ್ಟಾಟಲ್. ಅವನ ಮತವನ್ನೇ ಈಸಾಯಿ ಮತದ ಆದ್ಯಪ್ರವರ್ತಕರು ಎರವಲು ಪಡೆದು ವಿಶ್ವಕಲ್ಪನೆಗೆ ಆಧಾರ ಮಾಡಿಕೊಂಡರು. ಇಲ್ಲಿ ಭೂಮಿಯ ಅಸ್ಮಿತೆಯ ಕುರಿತಾಗಿ ಯಾರಿಗೂ ಪ್ರಶ್ನೆ ಹುಟ್ಟಲೇ ಇಲ್ಲ. ಪ್ರಶ್ನೆ ಮಾಡಿದವರನ್ನು ಕೊಲ್ಲುವ ಮಟ್ಟಿಗೆ ಈ ಮತ ಬೆಳೆಯಿತು.

ಪುರುಷರಿಗಿಂತ ಸೀಗೆ ಕಡಿಮೆ ಹಲ್ಲುಗಳಿವೆ; ಏಕೆಂದರೆ ಹುಟ್ಟುವಾಗಲೇ ಸ್ತ್ರೀ ಪುರುಷರಿಗಿಂತ ಕೀಳು, ಅಧಮಳು ಎಂದು ಹೇಳಿದ ಅವನ ಮಾತೇ ಇವರಿಗೆ ಭೂತದಂತೆ ಮಾನ್ಯವಾಯಿತು. ಪೆಡಂಭೂತವಾಗಿ ಬೆಳೆಯಿತು. ಇವನ ಮಾತಿಗೆ ಪ್ರತಿಯಾಗಿ ಬಟ್ರಾಂಡ್ ರಸೆಲ್ ಬರೆದ: ಅರಿಸ್ಟಾಟಲನಿಗೆ ಇಬ್ಬರು ಹೆಂಡಂದಿರು. ಯಾರೊಬ್ಬರ ಬಾಯಿಯನ್ನು ತೆರೆದು ನೋಡಿದರೂ ಅವನಿಗೆ ಸತ್ಯ ಗೊತ್ತಾಗುತ್ತಿತ್ತು. ಆ ತೊಂದರೆಯನ್ನು ಅವನು ತೆಗೆದುಕೊಳ್ಳಲಿಲ್ಲ ಎಂದು! ಇಂಥ ಮತಗಳು ಜನರ ಕಣ್ಣಲ್ಲಿ ಹಾಸ್ಯಕ್ಕೆ ಗುರಿಯಾಗುತ್ತದೆ.

ನನ್ನನ್ನು ನಂಬದವರನ್ನು ಕೊಲ್ಲು ಎಂದು ಒಬ್ಬ ದೇವದೂತ ಹೇಳಿದರೆ ಅವನ ಮತಾನುಯಾಯಿಗಳು ಏನು ಮಾಡಿಯಾರು? ಅಂಥ ಧರ್ಮಗ್ರಂಥಗಳು ಇವೆಯೆಂದರೆ ಅಚ್ಚರಿಯಾಗುವುದಿಲ್ಲವೆ? ಭಯವೂ ಆಗುವುದಿಲ್ಲವೆ? ಯಾಕೆಂದರೆ, ಅಂಥ ನಂಬಿಕೆಯನ್ನು ಅನುಸರಿಸಿ
ಬದುಕುವವರ ನಾವೂ ಬದುಕಬೇಕಲ್ಲ! ಜೀವವನ್ನು ಕೈಯಲ್ಲಿಟ್ಟುಕೊಂಡೇ ಬದುಕಬೇಕು. ಕೊಲ್ಲು ಎಂಬುವುದು ಧರ್ಮವಾಗುತ್ತದೆಯೇ? ಹಾಗಂತ ಇದನ್ನು ಮತ ಎಂದು ನಂಬುವುದಾದರೂ ಹೇಗೆ ಸಾಧ್ಯವಾದೀತು? ಯಾವ ತರ್ಕ, ಪ್ರಮಾಣ, ಸತ್ಯವೂ ಇಲ್ಲದೆ ಇವು ಬೆಳೆಯು ತ್ತಲೇ ಇದೆ.

ವಿಶ್ವವನ್ನು ಬಂಧಿಸಿರುವ ಈ ಭೂತ ಮಹಾಭೂತವಾಗಿ ಜಗತ್ತನ್ನು ಆವರಿಸುತ್ತಲೇ ಇದೆ. ಹಿಂಸೆಗೆ ದೂಡುತ್ತಲೇ ಇದೆ. ಮತ್ತೊಂದು ಅರ್ಥದಲ್ಲಿ ಮತ ಎಂದರೆ ಒಡಂಬಡಿಕೆ. ಆದರೆ, ಇದು ಕೂಡ ಮತ ಎನಿಸುವುದಿಲ್ಲ. ಇದೊಂದು ನಂಬಿಕೆ, ಅಪ್ಪಣೆ ಆಧಾರಿತ ಸೂತ್ರಗುಚ್ಛ ವಷ್ಟೆ. ಲೆನಿನ್, ಸ್ಟಾಲಿನ್‌ರ ಎಪ್ಪತ್ತು ವರ್ಷಗಳ ಆಡಳಿತದಲ್ಲಿ ಅವರ ಆಜ್ಞೆಯ ಆಧಾರದ ಮೇಲೆ ಒಂದು ಪದ್ಧತಿಯಿತ್ತಂತೆ! ಇದೊಂದು
ಥರದ ಊZಜಿಠಿe ಇದ್ದಂತೆ. ಆದರೆ ಶ್ರದ್ಧೆಯಲ್ಲ. ಶ್ರದ್ಧೆಗೆ ಧರ್ಮದ ಆಧಾರವಿರುತ್ತದೆ. ನೀನು ಸಾಯಬೇಕು, ನಾನು ಬದುಕಬೇಕು ಎಂಬುದು ಶ್ರದ್ಧೆಯಾದೀತೆ? ಕೃಷ್ಣ ಬೋಧಿಸಿದ್ದು ಅಂಥ ಅಮಾನವೀಯತೆಯಲ್ಲ! ಹಿಂಸೆಯಲ್ಲ!

ಮೂರ್ಖರಿಗೆ ಭಗವದ್ಗೀತೆ ಅರ್ಥವಾಗುವುದಿಲ್ಲ. ಅರ್ಥವಾದರೂ ಸ್ವಭಾವ, ಬುದ್ಧಿ ಬದಲಾಗುವುದಿಲ್ಲ.  ಮಾಂಸ ತಿಂದುಕೊಂಡು ದೇವಸ್ಥಾನಕ್ಕೆ ಹೋಗುತ್ತೇನೆ ಎಂಬ ಮೂರ್ಖನನ್ನು ಹೇಗೆ ಸಹಿಸುತ್ತೀರಿ? ಪಂಥವೆಂಬುದೊಂದಿದೆ. ಅದು ಧರ್ಮವನ್ನು ಆಧರಿಸಿ
ಬಂದ ಜೀವನಕ್ರಮವಾಗಿದೆ. ಕಂಡುಕಂಡದ್ದೆಲ್ಲ ಪಂಥ ಆಗಲಾರದು. ನಾನಕ್ ಪಂಥ, ಕಬೀರ ಪಂಥ, ನಾಥಪಂಥ, ಶಾಕ್ತಪಂಥ, ನಾರಾಯಣ ಗುರು ಪಂಥ-ಎಂಬುದೆಲ್ಲ ಭಾರತೀಯ ಧರ್ಮದ ಹರಿವಿನಲ್ಲೇ ಬರುತ್ತದೆ. ಶೈವ, ವೈಷ್ಣವ ಪಂಥಗಳು ಇವಕ್ಕೆಲ್ಲ ವಿಚಾರ ಸರಣಿ ಒಂದೇ.

ಭಾರತೀಯರು ಅನಾದಿಯಿಂದಲೂ ಆಧರಿಸಿ ಆವರಿಸಿದ ಧರ್ಮ. ಸನಾತನ ಎಂದು ನಾವು ಕರೆಯುವ ಧರ್ಮ. ದರ್ಶನ ಎಂಬು ದೊಂದಿದೆ. ಯೋಗಿಗಳಿಗೆ ಹೃದಯವೇದ್ಯವಾದುದು. ಕೇವಲ ಶಂಕರ, ಮಧ್ವ, ರಾಮಾನುಜರು ಮಾತ್ರವಲ್ಲ, ನಿರೀಶ್ವರ ಸಾಂಖ್ಯ, ವೈಶೇಷಿಕ, ಚಾರ್ವಾಕರೂ ಈ ದರ್ಶನ ಗೌರವಕ್ಕೆ ಪಾತ್ರರಾದವರೇ ಆಗಿದ್ದಾರೆ. ದೇವರನ್ನು ಒಪ್ಪದವರೂ ಸಮಷ್ಟಿಯ ಹಿತವನ್ನು ಬಯಸಿದರು ಎಂಬ ಅರ್ಥದಲ್ಲಿ ಉದಾರ ಭಾರತೀಯ ದೃಷ್ಟಿಗೆ ಚಾರ್ವಾಕ, ನಿರೀಶ್ವರ ವಾದಿಗಳಂಥವರು ಗೌರವಕ್ಕೆ ಅರ್ಹರಾದರು. ಭಾರತೀಯರ ಹೃದಯ ವೈಶಾಲ್ಯದ ವ್ಯಾಪ್ತಿ, ವಿಸ್ತಾರ ಮತ್ತು ಹರಹಿಗೆ ಜಗತ್ತಿನ ಯಾವ ಮತಧರ್ಮಗಳು ಸಾಟಿಯಾಗಿ ನಿಲ್ಲಬಲ್ಲವು? ಧರ್ಮ ಎಂದರೆ ನಮ್ಮ ಅಸ್ತಿತ್ವವನ್ನು ಎತ್ತಿಹಿಡಿಯುವ ತತ್ತ್ವ. ವೇದ ಎಂದರೆ, ತಿಳಿ ಎಂದರ್ಥ.

ಯಾವುದು ತಿಳಿದಿದೆಯೋ ಅದರಿಂದ ಯಾವುದು ತಿಳಿಯಲಿಲ್ಲ ಎಂಬುದನ್ನು ತಿಳಿದುಕೊಂಡು ತಿಳಿಯಬೇಕಾದುದನ್ನು ತಿಳಿಯುವುದು.