Friday, 13th December 2024

ಧರ್ಮಕ್ಕಾಗಿ ಪ್ರೀತಿಯನ್ನು ಸಾಯಿಸಬೇಡಿ

ಸಂಗತ

ವಿಜಯ್‌ ದರ್‌ಡ

‘ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕೆಂದಿದ್ದರೆ, ದುಷ್ಟತನವನ್ನು ತೊಡೆದುಹಾಕಬೇಕೆಂದಿದ್ದರೆ, ಸಮಾಜದಲ್ಲಿ ಸೌಹಾರ್ದ ನೆಲೆನಿಲ್ಲುವಂತೆ ಮಾಡಬೇಕೆಂದಾದರೆ ನಾವು ಪ್ರೇಮ ವಿವಾಹಗಳಿಗೆ ಉತ್ತೇಜನ ಕೊಡಬೇಕು’ ಎಂದು ಡಾ||ಬಾಬಾಸಾಹೇಬ್ ಅಂಬೇಡ್ಕರರು ಹೇಳಿದ್ದರು. ಪ್ರೀತಿ-ಪ್ರೇಮ ಎಂಬುದು ಸಹಜವಾದ ಪ್ರಕ್ರಿಯೆ ಎಂಬು ದನ್ನು ವಿಜ್ಞಾನ ಕೂಡ ರುಜುವಾತು ಮಾಡಿದೆ.

ನಾನು ಎರಡು ಘಟನೆಗಳನ್ನು ಕೇಳಿ ತುಂಬಾ ತಬ್ಬಿಬ್ಬಾಗಿದ್ದೇನೆ. ಮೊದಲನೆಯದು ಹೈದರಾಬಾದಿನದು. ನಾಗರಾಜು ಎಂಬ ಹಿಂದೂ ಹುಡುಗ ತನ್ನ ಮೆಚ್ಚಿನ ಸ್ನೇಹಿತೆ ಸುಲ್ತಾನಾಳನ್ನು ಮದುವೆಯಾಗಿದ್ದಾನೆ. ಹುಡುಗಿಯ ಕುಟುಂಬದವರಿಗೆ ಮತ್ತು ಆಕೆಯ ಧರ್ಮದವರಿಗೆ ಇದನ್ನು ಸಹಿಸಲಾಗಲಿಲ್ಲ ಮತ್ತು ಅವರುಗಳು ಸೇರಿ ನಾಗರಾಜನನ್ನು ಕೊಲೆ ಮಾಡಿದ್ದಾರೆ. ಎರಡನೆಯ ಘಟನೆ ನಡೆದಿದ್ದು ಅಲ್ಲಿಂದ ಸುಮಾರು ಸಾವಿರ ಕಿಲೋಮೀಟರ್ ದೂರದ ಗುಜರಾತಿನಲ್ಲಿ.

ಅಂದು ಕುಟುಂಬ ಧ್ವನಿ ವರ್ಧಕ ಬಳಸಿ ಪೂಜಾಕಾರ್ಯದಲ್ಲಿ ತೊಡಗಿತ್ತು. ಪಕ್ಕದ ಮನೆಯವನಾಗಿದ್ದ ಇನ್ನೊಬ್ಬ ಹಿಂದೂ ಧರ್ಮೀಯನಿಗೆ ಧ್ವನಿವರ್ಧಕದ ಅಬ್ಬರ ಕೇಳಲಾಗಲಿಲ್ಲ. ಪಕ್ಕದ ಮನೆಯಾತ ಧಾರ್ಮಿಕ ಕಾರ್ಯದಲ್ಲಿ ತೊಡಗಿದ್ದಾಗಲೇ ಕೆರಳಿ ಕೆಂಡವಾಗಿ ಆತನ ಮೇಲೆ ಹಲ್ಲೆ ಮಾಡುತ್ತಾನೆ.

ಮೊದಲನೆಯ ಘಟನೆಗೆ ಸಹಜವಾಗಿಯೇ ಧರ್ಮದ ಬಣ್ಣ ಬಳಿಯಲಾಗಿದೆ. ಇಂತಹದು ಇದೇ ಮೊದಲನೆಯ ಘಟನೆಯೂ ಅಲ್ಲ. ಇದಕ್ಕೂ ಮುನ್ನ ಇಂತಹ ಹಲವಾರು ಕೃತ್ಯಗಳು ಹಲವೆಡೆಗಳಲ್ಲಿ ನಡೆದಿವೆ. ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಅಥವಾ ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾದರೆ, ಎರಡೂ ಧರ್ಮದವರು ಅಸಹಿಷ್ಣು ಗಳಾಗಿ ಪರಸ್ಪರ ಕಿತ್ತಾಡುತ್ತಾರೆ, ಕೊನೆಗದು ಹೇಯವಾದ ಹತ್ಯೆಗೂ ಕಾರಣವಾಗುತ್ತದೆ. ಆದರೆ, ಮೇಲೆ ಹೇಳಿರುವ ಎರಡನೇ ಪ್ರಕರಣದಲ್ಲಿ ಹಿಂದೂ ಧರ್ಮದ ವ್ಯಕ್ತಿಯ ಮೇಲೆ ಇನ್ನೊಬ್ಬ ಹಿಂದೂ ಧರ್ಮೀಯನೇ ಹಲ್ಲೆ ಮಾಡಿದ್ದಾನೆ.

ಅದೂ ಕೂಡ ಹಿಂದೂ ಧರ್ಮದ ಪೂಜಾಕಾರ್ಯದ ವೇಳೆ ಹಾಕಿದ್ದ ಧ್ವನಿವರ್ಧಕದ ಸದ್ದು ಅತಿಯಾಯಿತೆಂಬ ಕಾರಣಕ್ಕೆ. ಈ ಎರಡೂ ಪ್ರಕರಣಗಳ ಹಿಂದಿನ ಕಾರಣ ಹುಡುಕುತ್ತ ಹೋದರೆ ಸಿಗುವ ಉತ್ತರ ಒಂದೇ. ಅದು ಅಸಹಿಷ್ಣುತೆ. ನನಗೆ ಗಾಬರಿಯಾಗು ತ್ತಿರುವುದು ಇದೇ ಕಾರಣಕ್ಕೆ. ನಮ್ಮ ದೇಶದ ಮೂಲಭೂತ ತತ್ವವೇ ಸಹಿಷ್ಣುತೆ. ಸರ್ವೇಜನಾಃ ಸುಖಿನೋಭವಂತು ಎಂದ ನಮ್ಮ ಸಂಸ್ಕೃತಿ, ವಸುಧೈವ ಕುಟುಂಬಕಮ್ ಎಂದ ನಮ್ಮ ಪರಂಪರೆ, ಇಲ್ಲಿ ಎಲ್ಲ ಜಾತಿ ಜನಾಂಗಗಳಿಗೆ ಅವಕಾಶ ಕೊಟ್ಟಿದೆ.

ಆರ್ಯರು, ಶಕರು, ಹೂಣರೂ ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಶ್ರೀರಾಮನಿಂದ ಬುದ್ಧನ ತನಕ, ಮಹಾವೀರ, ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ, ಎಲ್ಲರೂ ಇಲ್ಲಿ ಸಹಿಷ್ಣುತೆಯ ಸಂದೇಶವನ್ನೇ ಸಾರಿದ್ದಾರೆ. ಹಾಗಿದ್ದಾಗ ಇಷ್ಟೊಂದು ಅಸಹಿಷ್ಣುತೆ
ಎಲ್ಲಿಂದ ಬಂತು? ಶಿವಪರಮಾತ್ಮ ಈ ಭೂಮಂಡಲವನ್ನು ಉಳಿಸಿಕೊಳ್ಳಬೇಕೆಂಬ ಏಕೈಕ ಉದ್ದೇಶದಿಂದ ವಿಷವನ್ನೂ ಕುಡಿದ ನೆಂಬ ನಂಬಿಕೆ ಪ್ರಧಾನವಾಗಿರುವ ಈ ದೇಶದಲ್ಲಿ ಇಷ್ಟೊಂದು ಕ್ರೌರ್ಯ ಎಲ್ಲಿಂದ ಬಂತು? ಗೀತೆ, ಕುರಾನ್, ಗುರುಗ್ರಂಥ ಸಾಹಿಬ್ ಅಥವಾ ಬೈಬಲ್ ಯಾವುದು ಕೂಡ ಅಸಹಿಷ್ಣುತೆಯನ್ನು ಪ್ರತಿಪಾದಿಸುವುದಿಲ್ಲ.

ಹಾಗಿದ್ದಾಗ ಈಗ ಪರಿಸ್ಥಿತಿ ಇಷ್ಟೊಂದು ವಿಷಮವಾಗುವುದಕ್ಕೆ ಏನು ಕಾರಣ? ಧರ್ಮವನ್ನು ತಮ್ಮ ಸ್ವಹಿತ ಸಾಧನೆಗೆ ದುರುಪ ಯೋಗಪಡಿಸಿಕೊಳ್ಳುವ ಯಾರೋ ಕೆಲವರು ಇಂತಹದೊಂದು ವಿಷವರ್ತುಲವನ್ನು ಸೃಷ್ಟಿಸಿ ನಾಗರಿಕ ಸಂಸ್ಕೃತಿ ಯನ್ನು ಬಲಿಪಶು ಮಾಡುತ್ತಿದೆ. ಬದುಕಿಗಿಂತ ಧರ್ಮವೇ ದೊಡ್ಡದಾದಾಗ ಧರ್ಮದ ಹೆಸರಿನಲ್ಲಿ ಇಂತಹ ಹತ್ಯೆಗಳು ಸಾಮಾನ್ಯ ವಾಗಿ ಬಿಡುತ್ತವೆ ಎಂಬುದೇ ವಿಪರ್ಯಾಸ.

‘ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಬೇಕೆಂದಿದ್ದರೆ, ದುಷ್ಟತನವನ್ನು ತೊಡೆದುಹಾಕಬೇಕೆಂದಿದ್ದರೆ, ಸಮಾಜದಲ್ಲಿ ಸೌಹಾರ್ದ ನೆಲೆನಿಲ್ಲುವಂತೆ ಮಾಡಬೇಕೆಂದಾದರೆ ನಾವು ಪ್ರೇಮ ವಿವಾಹಗಳಿಗೆ ಉತ್ತೇಜನ ಕೊಡಬೇಕು’ ಎಂದು ಡಾ||ಬಾಬಾ ಸಾಹೇಬ್ ಅಂಬೇಡ್ಕರರು ಹೇಳಿದ್ದರು. ಪ್ರೀತಿ-ಪ್ರೇಮ ಎಂಬುದು ಸಹಜವಾದ ಪ್ರಕ್ರಿಯೆ ಎಂಬುದನ್ನು ವಿಜ್ಞಾನ ಕೂಡ ರುಜುವಾತು ಮಾಡಿದೆ. ನಮ್ಮನ್ನು ಸೃಷ್ಟಿ ಮಾಡಿದಾತ ಅದನ್ನೂ ಸೃಷ್ಟಿ ಮಾಡಿದ್ದಾನೆ.

ನಮ್ಮ ದೇಹದಲ್ಲಿ ಉತ್ಪನ್ನವಾಗುವ ಡೋಪಮೈನ್ ಮತ್ತು ಇತರ ಹಾರ್ಮೋನುಗಳು ಪ್ರೇಮಭಾವವನ್ನು ಉಕ್ಕಿಸುತ್ತವೆ. ಪರಸ್ಪರ  ಪ್ರೀತಿಸುತ್ತಿದ್ದ ಇಬ್ಬರು ಯುವಜೋಡಿಗಳು ಮದುವೆಯಾಗಿ ಬರ್ಬರ ಹತ್ಯೆಗೆ ಒಳಗಾಗುವಂತಾಯಿತು ಎಂಬುದು ನಾವೆಲ್ಲ ವಿಷಾ
ದಪಡಬೇಕಾದ ಸಂಗತಿ. ಪ್ರೀತಿ ಅಪರಾಧವೇ? ಧರ್ಮವನ್ನು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಬಳಸುವವರಿಗೆ ಇಂತಹ ಹೇಯ ಕೃತ್ಯ ನಡೆಸಲು ಅಧಿಕಾರ ಕೊಟ್ಟವರಾರು? ನಾನು ವಿವಿಧ ಧರ್ಮ ಮತ್ತು ನಂಬಿಕೆಗಳ ಯುವಕ-ಯುವತಿಯರನ್ನು ಆಗಿಂದಾಗ್ಗೆ ಭೇಟಿಮಾಡಿ ಅವರೊಂದಿಗೆ ಸಂವಾದ ಮಾಡಿದ್ದೇನೆ. ಇಂತಹ ವಿಚಾರಗಳಿಗೆ ಅವರು ಎಂದೂ ಧರ್ಮದ ಬಣ್ಣ ಬಳಿಯುವುದಿಲ್ಲ, ಆದರೆ ಅವರನ್ನು ಪ್ರಚೋದನೆಗೆ ಒಳಪಡಿಸಲಾಗುತ್ತದೆ.

ಧರ್ಮದ ಸಂರಕ್ಷಕರೆಂದು ಹೇಳುವವರ ಬಗ್ಗೆ ಪಿಕೆ ಸಿನೆಮಾದಲ್ಲಿ ಆಮೀರ್ ಖಾನ್ ಹೇಳಿದ್ದು ಸರಿಯೆನಿಸುತ್ತಿದೆ. ಈ ಬ್ರಹ್ಮಾಂಡದ ಒಂದು ಪುಟ್ಟ ಭಾಗವಾಗಿರುವ ಈ ಭೂಮಿಯಲ್ಲಿ ಒಬ್ಬ ಸಣ್ಣ ವ್ಯಕ್ತಿ ಹೇಗೆ ದೇವರನ್ನು ರಕ್ಷಿಸಬಲ್ಲ ಎಂಬುದು ಅಲ್ಲಿ ಪ್ರತಿಬಿಂಬಿತ ವಾಗಿದೆ. ಅಂತಹ ಮನೋಧರ್ಮ ಇಲ್ಲದೇ ಇದ್ದಲ್ಲಿ ಒಂದು ದಿನ ಈ ಭೂಮಿಯಲ್ಲಿ ಯಾರೂ ಇರಲಾರರು. ಅಂತೆಯೇ ಧ್ವನಿ ವರ್ಧಕಗಳ ಬಳಕೆ ಎಂದಾದರೂ ವಿವಾದಕ್ಕೆ ಕಾರಣವಾಗಿತ್ತೇ? ಈ ದೇಶದಲ್ಲಿ ಬಡತನ ನಿರ್ಮೂಲನೆ, ಆಹಾರ ಭದ್ರತೆ, ಮನೆ ಮತ್ತು ಮೂಲಭೂತ ಸೌಕರ್ಯಗಳ ಒದಗಣೆ, ಆರೋಗ್ಯ ಸುರಕ್ಷೆ, ಪ್ರತಿಯೊಬ್ಬನಿಗೂ ಉದ್ಯೋಗಾವಕಾಶಗಳ ಲಭ್ಯತೆ ಇವೆಲ್ಲವೂ ಚರ್ಚೆಯ ವಿಷಯವಾಗಬೇಕಿತ್ತು.

ಆದರೆ ಅದಾವುದೂ ಮುನ್ನೆಲೆಗೆ ಬರುತ್ತಿಲ್ಲ, ಧ್ವನಿವರ್ಧಕ ಬಳಕೆಯಿಂದಾಗುವ ಸಮಸ್ಯೆ, ಅದು ಸಮಸ್ಯೆಯೇ ಅಲ್ಲ. ಬಡವರ, ಶೋಷಿತರ, ರೈತರ, ದಮನಿತರ ದನಿ ಧ್ವನಿವರ್ಧಕದಲ್ಲಿ ಮಾರ್ದನಿಸಬೇಕು. ಅದೆಲ್ಲವನ್ನೂ ನೀವ್ಯಾಕೆ ಧರ್ಮದ ಹೆಸರಿನಲ್ಲಿ ಮುಳುಗಿಸುತ್ತೀರಿ. ನಿಮ್ಮ ಧ್ವನಿವರ್ಧಕಕ್ಕಿಂತ ನಮ್ಮದೆಷ್ಟು  ಜೋರಾಗಿರಬೇಕೆಂಬ ಪೈಪೋಟಿಯನ್ನು ಬಿಟ್ಟು ಬಿಡಿ. ಅದು ದೇಶವನ್ನು ತಪ್ಪು ಹಾದಿಯಲ್ಲಿ ಒಯ್ಯುವುದರಲ್ಲಿ ಅನುಮಾನವೇ ಇಲ್ಲ. ನನಗೆ ನನ್ನ ಬಾಲ್ಯದ ನೆನಪಾಗುತ್ತಿದೆ.

ಆಜಾನ್ ಮುಂಜಾನೆಯೇ ಶುರುವಾಗುತ್ತಿತ್ತು. ಅದನ್ನಾಲಿಸಿದ ಗ್ರಾಮವಾಸಿಗಳು ಬಹುಬೇಗ ಎದ್ದು ತಮ್ಮ ಕೆಲಸಗಳಲ್ಲಿ
ನಿರತ ರಾಗುತ್ತಿದ್ದರು. ಆ ಕಾಲದಲ್ಲಿ ಆಜಾನ್‌ನಿಂದ ಯಾರಿಗೂ ತೊಂದರೆ ಎನಿಸಿರಲಿಲ್ಲ. ನಮ್ಮ ಗ್ರಾಮದಗ 10-20 ಮುಸ್ಲಿಮ್ ಕುಟುಂಬಗಳಿದ್ದವು, ಬೇರೆಡೆ ಅವರ ಸಂಖ್ಯೆ ನೂರಿದ್ದಿರಬಹುದು. ಈದ್ ಅಥವಾ ದೀಪಾವಳಿಯನ್ನು ಎರಡೂ ಧರ್ಮೀಯರು ಸಂಭ್ರಮದಿಂದ ಆಚರಿಸುತ್ತಿದ್ದರು. ಎಲ್ಲ ಹಬ್ಬಗಳನ್ನು ಎಮ್ಮ ಧರ್ಮಗಳ ಜನರು ಒಗ್ಗೂಡಿ ಆಚರಿಸುವ ಪದ್ಧತಿ ಆಗ ಇತ್ತು.
ಆದರೆ ಬದಲಾದ ಸಂದರ್ಭದಲ್ಲಿ ಈಗ ಏನಾಗಿದೆ.

ಮತಾಂಧರಿಗೆ ಧರ್ಮವೆಂಬ ಆಫೀಮು ರಕ್ತ ಚೆಲ್ಲುವುದಕ್ಕೆ ಕಾರಣವಾಗುತ್ತಿದೆ. ಈಗ ಪರಿಸ್ಥಿತಿ ಕೆಟ್ಟದ್ದಕ್ಕಿಂತ ಅತಿ ಕೆಟ್ಟದ್ದಾಗಿ
ಪರಿವರ್ತಿತವಾಗಿದೆ. ದೇಶದೆಡೆ ಮತಾಂಧತೆಯ ಅಲೆ ಬೆಂಕಿಯುಗುಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಮಾತನಾಡುತ್ತಿಲ್ಲವೆಂದು ಹೇಳುವವರಿಗೆ ನಾನು ಹೇಳಬಯಸುತ್ತೇನೆ- ಪ್ರಧಾನಮಂತ್ರಿಗಳಿಗೆ ಅದೊಂದೇ ಕೆಲಸವೇ, ಅದು ಬಿಟ್ಟು ಬೇರೇನೂ ಕೆಲಸವಿಲ್ಲವೇ? ಅವರು ಧರ್ಮಕಾರಣ ಮಾಡಬೇಕೇ ಅಥವಾ ದೇಶವನ್ನು ಪ್ರಗತಿಯ ಪಥದಲ್ಲಿ ಒಯ್ಯಬೇಕೇ? ಯಾವ ಸಂಸ್ಥೆ ಎಲ್ಲಿ ಸಮಸ್ಯೆ ಒಡ್ಡುವುದಕ್ಕೆ ಕಾರಣವಾಗುತ್ತದೋ ಬಲ್ಲವರಾರು? ಮನೆಯ ಯಜಮಾನನಾದವನು ಮನೆಯನ್ನು ಹಾಳು ಗೆಡಹುವುದಕ್ಕೆ ಬಯಸುತ್ತಾನೆಯೇ? ಮೋದಿಯವರ ಕಾಲಘಟ್ಟದಲ್ಲಿ ಮುಸಲ್ಮಾನ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯ ನಿಜವಾಗಿಯೂ ವೃದ್ಧಿಸಿದೆ.

ಎಷ್ಟೋ ಮುಸ್ಲಿಂ ರಾಷ್ಟಗಳಲ್ಲಿ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಯಾವುದೇ ಧಾರ್ಮಿಕ ಸಮುದಾಯ ವನ್ನು ಗುರಿಮಾಡುವ ಕುರಿತಾದ ಚರ್ಚೆಗಳನ್ನು ನನ್ನ ಬಳಿ ಕೆಲವರು ಮಾಡುತ್ತಾರೆ. ಆಗೆಲ್ಲ ನಾನು ನಮ್ಮ ದೇಶದಿಂದ ಯಾರನ್ನಾದರೂ ಉಚ್ಚಾಟಿಸಿ ಹೊರಹಾಕುವುದಕ್ಕೆ ಆಗುತ್ತದೆಯೇ ಎಂದು ಕೇಳುತ್ತೇನೆ. ಇಲ್ಲ, ಅದು ನಮ್ಮಿಂದಾಗದ ಸಂಗತಿ. ಹಾಗಿದ್ದಾಗ ನಾವ್ಯಾಕೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬದುಕುವುದು ಸಾಧ್ಯವಾಗುತ್ತಿಲ್ಲ. ಒಂದು ಜನಸಮುದಾಯವನ್ನು ಗುರಿಮಾಡುವುದೇ ಆದರೆ, ಆ ಸಮುದಾಯದಿಂದ ಬಂದಿರುವ ವಿeನಿಗಳು, ವಕೀಲರು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಜ್ಞಾನವಂತರ ಗತಿಯೇನು? ಯಾವುದೇ ಸಮುದಾಯದ ಬಗ್ಗೆ ಉಗ್ರವಾದಿತ್ವದ ಬಗ್ಗೆ ಅನುಮಾನಗಳನ್ನು ಇಟ್ಟುಕೊಳ್ಳುವುದು ಒಳಿತಲ್ಲ. ಗಮನವಿಡಿ, ದೊಡ್ಡಣ್ಣನಿಗೆ ಹೆಚ್ಚಿನ ಜವಾಬ್ದಾರಿಯಿದೆ.

ನೀವು ಧರ್ಮದ ಕಾರಣಕ್ಕಾಗಿ ವ್ಯಯಿಸುತ್ತಿರುವ ಶಕ್ತಿ ಸಾಮರ್ಥ್ಯಗಳನ್ನು ದುಷ್ಟಸಂಗತಿಗಳನ್ನು ತೊಡೆಯುವತ್ತ ವಿನಿಯೋಗಿಸ ಬೇಕಿದೆ. ಈ ದೇಶದಲ್ಲಿ ಇನ್ನೂ ಮೂಢನಂಬಿಕೆಗಳಿವೆ. ತಂತ್ರದ ಹೆಸರಿನಲ್ಲಿ ಮಕ್ಕಳನ್ನು ಬಲಿಕೊಡುವ ದುಷ್ಟ ಪದ್ಧತಿ ಇನ್ನೂ
ನಮ್ಮಲ್ಲಿದೆ, ಹೆಣ್ಮಕ್ಕಳನ್ನು ಮಾಟಗಾತಿಯರನ್ನಾಗಿಸುವ ಪದ್ಧತಿಯೂ ಇದೆ. ಇವೆಲ್ಲವನ್ನೂ ಮೊದಲು ತೊಡೆದು ಹಾಕೋಣ.