ಚರ್ಚಾವೇದಿಕೆ
ಅರ್ಜುನ್ ಶೆಣೈ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗಿದ್ದರೂ, ನಾವಿನ್ನೂ ಮೀಸಲಾತಿಯೆಂಬ ಜಡಮರಕ್ಕೆ ಜೋತುಬಿದ್ದಿದ್ದೇವೆ. ಅದರ ಹಿನ್ನೆಲೆ ಬೇಕಿಲ್ಲ, ಕಡಿಮೆ ಶ್ರಮದಲ್ಲಿ ಹೆಚ್ಚು ಸಿಗುವಂತಾಗಬೇಕು. ಅದೇ ನಮ್ಮ ಪರಮೋದ್ದೇಶ. ಅದಕ್ಕೇ, ಬಿಟ್ಟಿಭಾಗ್ಯಗಳೆಂದರೆ ನಮಗೆ ಅಚ್ಚುಮೆಚ್ಚು. ಇಂದಿನ ಕಾಲಘಟ್ಟದಲ್ಲೂ ಈ ವ್ಯವಸ್ಥೆ ಬೇಕೇ? ಎಂಬುದಿಲ್ಲಿ ಪ್ರಶ್ನೆ.
ಆರ್ಥಿಕ ದುರ್ಬಲ ವರ್ಗಕ್ಕೆ ಕೇಂದ್ರ ಸರಕಾರವು ಘೋಷಿಸಿದ್ದ ಮೀಸಲಾತಿಯ ಬಗ್ಗೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾ ಲಯವು, ಈ ಮೀಸಲಾತಿಯು ಕಾನೂನು ಸಮ್ಮತವಾಗಿರುವುದರಿಂದ ಇದನ್ನು ತಡೆಹಿಡಿಯುವ ಅಗತ್ಯವಿಲ್ಲ ಎಂದು ಪುನರು ಚ್ಚರಿಸಿ ತೀರ್ಪು ನೀಡಿತು. ಈ ವಿಚಾರವಾಗಿ ದೇಶಾದ್ಯಂತ ಒಂದಷ್ಟು ವಾದ-ಪ್ರತಿವಾದಗಳು ಹುಟ್ಟಿಕೊಂಡಿವೆ.
ಮೇಲ್ವರ್ಗಕ್ಕೆ ಮೀಸಲಾತಿಯ ಅಗತ್ಯವಿಲ್ಲ ಎಂಬುದು ಒಂದು ಕಡೆಯವರ ವಾದವಾದರೆ, ಮೀಸಲಾತಿ ವ್ಯವಸ್ಥೆ ಈಗಾಗಲೇ ಸಾಕಷ್ಟು ಬದಲಾವಣೆಯನ್ನು ತಂದಿದೆ, ಇನ್ನೂ ಕಾದಿಟ್ಟರೆ ವ್ಯವಸ್ಥೆಗೆ ಅದು ಗಂಡಾಂತರ ತರಬಲ್ಲದು ಎಂಬುದು ಮತ್ತೊಂದು ಕಡೆಯವರ ವಾದ. ಮೀಸಲಾತಿ ಎಂಬುದು ನಮ್ಮ ದೇಶದಲ್ಲಿ ಇಂದಿಗೂ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಬಾರದ ಅಥವಾ ಚರ್ಚಿಸಲು ಭಯಪಡುವ ವಿಷಯವೇ ಎಂಬಂತಾಗಿದೆ.
ಏಕೆಂದರೆ, ಮೇಲ್ವರ್ಗದವರು ಈ ಬಗ್ಗೆ ಆಕ್ಷೇಪವೆತ್ತಿದರೆ ಅದು ದಲಿತರ ಸ್ವಾತಂತ್ರ್ಯಹರಣ ಎಂದಾಗುತ್ತದೆ ಮತ್ತು ಪ್ರಾಯಶಃ ಈ ಇಡಿಯ ವಿಚಾರವೇ ವಿವಾದಾಸ್ಪದವಾಗುತ್ತದೆ. ಅದೇ ಇತರ ವರ್ಗದವರು ಈ ಬಗ್ಗೆ ಪ್ರಶ್ನಿಸಿದರೆ ಅದು ಹಕ್ಕಾಗಿ ಮಾರ್ಪಡುತ್ತದೆ. ಹೀಗಾಗಿ ಸತ್ಯ ಅಲ್ಲಲ್ಲಿ ಅವಿತುಕೊಂಡು ಬಹಿರಂಗವಾಗಲು ಹೆದರುತ್ತಿದೆಯೇ ಹೊರತು, ಹೊರಬಂದು ವಾಸ್ತವದ ಚಿತ್ರಣವನ್ನು ನೀಡುತ್ತಿಲ್ಲ.
ಸ್ವಾತಂತ್ರ್ಯಪೂರ್ವದಲ್ಲೂ ಇದ್ದ ಈ ಮೀಸಲಾತಿ ವ್ಯವಸ್ಥೆ, ಸ್ವಾತಂತ್ರ್ಯಾನಂತರದಲ್ಲಿ ಇನ್ನಷ್ಟು ಬಲಿಷ್ಠವಾಗತೊಡಗಿತು. ಸರಕಾರಗಳು ಇದನ್ನು ಪ್ರಶ್ನಿಸುವ ಗೋಜಿಗೇ ಹೋಗಲಿಲ್ಲ. ಹೀಗಾಗಿ ಮೀಸಲಾತಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಲೇ ಸಾಗಿತು. ಆದರೆ ಕಾಲ ಕಳೆಯುತ್ತ ನಾವು ವಿಜ್ಞಾನ-ತಂತ್ರಜ್ಞಾನದೊಂದಿಗೆ ಹೊಸ ಸಮಾಜವನ್ನೂ ಕಟ್ಟಿಕೊಂಡಾಗಲೂ, ಯಾರೊಬ್ಬರೂ ಇದರ ಪುನರ್‌ವಿಮರ್ಶೆಗೆ ದಾವೆ ಹೂಡಲಿಲ್ಲ.
ಅಸಮಾನತೆಯ ನಿರ್ಮೂಲನಕ್ಕೆ ಶುರುವಾದ ವ್ಯವಸ್ಥೆ ಕಾಲಕ್ರಮೇಣ ನ್ಯಾಯಾಧಾರಿತ ವ್ಯವಸ್ಥೆಯನ್ನೇ ನುಂಗಿತು. ಯಾವುದೋ
ಶತಮಾನದಲ್ಲಿ, ನಿರ್ದಿಷ್ಟ ಜಾತಿ-ಪಂಗಡಗಳಲ್ಲಿ ಹುಟ್ಟಿದವರನ್ನು ಮೇಲ್ಜಾತಿಯವರು ಶೋಷಿಸಿದರು, ಹಾಗಾಗಿ ಅವರಿಗೆಲ್ಲ ನ್ಯಾಯ ಒದಗಿಸಲೆಂದು ಬಂದ ಮೀಸಲಾತಿ ಮೇಲ್ವರ್ಗದ ಅರ್ಹರನ್ನೂ ಸಮಾಜದಿಂದ ದೂರವಿಟ್ಟಿತು. ಕಾಲಕಳೆದಂತೆ ಒಂದೊಂದೇ ಜಾತಿಯ ತಥಾಕಥಿತ ಸ್ವಾಮೀಜಿಗಳು, ಬ್ಯುಸಿನೆಸ್ ಕ್ಲಾಸ್‌ನ ಮಹಾರಥಿಗಳು ತಂತಮ್ಮ ಜಾತಿ ಸಮಾವೇಶಗಳಲ್ಲಿ ತಮ್ಮ ಜಾತಿಗೂ ಮೀಸಲಾತಿ ಬೇಕೆಂಬ ಆಗ್ರಹವನ್ನು ಶುರುಮಾಡಿಕೊಂಡರು. ಮನಸ್ಸು ಮಾಡಿದ್ದರೆ ಅವರವರ ಜಾತಿಯನ್ನು ಅವರವರೇ ಮೇಲಕ್ಕೆ ತರಬಹುದಿತ್ತು; ಆದರೆ ಅದು ಸರಕಾರದ ಕಡೆಯಿಂದಲೇ ಬಿಟ್ಟಿಯಾಗಿ ನಡೆಯಲೆಂಬ ಒತ್ತಾಸೆ ಅವರದ್ದಾ ಯಿತು. ಇಂದು ನಮಗೇ ತಿಳಿಯದ ಹಾಗೆ ಮೀಸಲಾತಿಯು ‘ಹಕ್ಕಾಗಿ’ ಮಾರ್ಪಟ್ಟಿರುವುದು ದುರಂತ!
ಜಾತಿ ಆಧರಿತ ಮೀಸಲಾತಿ ವ್ಯವಸ್ಥೆಯು ಒಳಿತೋ ಕೆಡುಕೋ ಎಂಬುದಕ್ಕೆ ಸಂವಿಧಾನದ ಪೀಠಿಕಾಭಾಗ, ವಿಧಿಗಳನ್ನು ಉರು ಹೊಡೆಯುತ್ತ ಕೂರಬೇಕಿಲ್ಲ. ಎಂಜಿನಿಯರಿಂಗ್, ಮೆಡಿಕಲ್ ಅಥವಾ ಸರಕಾರಿ ನೌಕರಿಗೋಸ್ಕರ ಲಿಖಿತ ಪರೀಕ್ಷೆ ಬರೆಯುವ ಅಥವಾ ಬರೆದ ಯುವಕ-ಯುವತಿಯರನ್ನು ಒಮ್ಮೆ ಅವಲೋಕಿಸಿದರೆ ಸಾಕು. ಅಷ್ಟೇಕೆ, ಸ್ಪಷ್ಟ ಮತ್ತು ತಾಜಾ ಉದಾಹರಣೆ ಯನ್ನೇ ನೋಡೋಣ.
ಈ ಬಾರಿಯ ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಪಟ್ಟಿಯ ಮೇಲೊಮ್ಮೆ ಕಣ್ಣುಹಾಯಿಸೋಣ. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಪಿಯುಸಿಯ ೨ ವರ್ಷವೂ ರಾತ್ರಿ ನಿದ್ರೆಬಿಟ್ಟು ಕಷ್ಟಪಟ್ಟು ಓದಿದ ವಿದ್ಯಾರ್ಥಿಯ ಪರಿಶ್ರಮವು ಕೊನೆಗೊಳ್ಳುವುದು ಇದೇ ಸೀಟ್‌ಮ್ಯಾಟ್ರಿಕ್ಸ್ ಎಂಬ ಒಂದು ಪಿಡಿಎ- -ಲ್ ನಲ್ಲಿ!
ಇದೇ ವರ್ಷದ ಅಂಕಿ-ಅಂಶ ನೋಡಿ. ಅಂದಾಜು 2.2 ಲಕ್ಷ ವಿದ್ಯಾರ್ಥಿಗಳು ಬರೆದ ಸಿಇಟಿ ಪರೀಕ್ಷೆಯಲ್ಲಿ ಜನರಲ್ ಮೆರಿಟ್‌ನ ವಿದ್ಯಾರ್ಥಿಯೊಬ್ಬನಿಗೆ ಗಣಕಯಂತ್ರ ವಿಭಾಗದಲ್ಲಿ ಓದಲು ಕಟ್‌ಆಫ್ ರ‍್ಯಾಂಕ್ 807. ಅದೇ ಸೀಟಿಗೆ ಪರಿಶಿಷ್ಟ ಪಂಗಡಕ್ಕೆ 4346 ಮತ್ತು ಪರಿಶಿಷ್ಟ ಜಾತಿಗೆ 10079 ರ‍್ಯಾಂಕು ಕಟ್‌ಆಫ್ ಎಂದು ನಮೂದಿಸಲಾಗಿದೆ.
ಚೆನ್ನಾಗಿದೆ ಅಲ್ಲವೇ?! ಪಿಯುಸಿಯಲ್ಲಿ ಒಂದೇ ತರಗತಿಯಲ್ಲಿ ಓದಿದ ದಿನೇಶ ಟಾಪರ್ ಆಗಿದ್ದು, ಸುರೇಶ ಪಾಪರ್ ಆಗಿದ್ದರೂ, ಕೊನೆಗೆ ಅವರಿಬ್ಬರೂ ಓದುವುದು ಒಂದೇ ಕಾಲೇಜಿನಲ್ಲಿ! ದಿನೇಶ 807 ರ‍್ಯಾಂಕು, ಸುರೇಶ 10079 ರ‍್ಯಾಂಕು. ಇದಕ್ಕೆ ಕಾರಣ ಅವ ರಿಬ್ಬರ ಜಾತಿ! ಈ ಕಥೆ ಇಲ್ಲಿಗೇ ಮುಗಿದಿದ್ದರೆ ಚೆನ್ನಾಗಿತ್ತು, ಆದರೆ ಈ ಅನ್ಯಾಯದ ವ್ಯಾಪ್ತಿ ಉದ್ಯೋಗ ಕ್ಷೇತ್ರವನ್ನೂ ತಿಂದು ಹಾಕಿದೆ. ಉದಾಹರಣೆಗೆ, 2020ರಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಲರಿಕಲ್ ಹುದ್ದೆಯ ಕಟ್‌ಆಫ್ ನೋಡಿ.
ಉತ್ತರ ಪ್ರದೇಶದಲ್ಲಿ ಜನರಲ್ ಮೆರಿಟ್‌ನ ಕಟ್ ಆಫ್ 90.25 (ನೆನಪಿರಲಿ, ಇದು 100ರಲ್ಲಿ). ಅದೇ ಪರಿಶಿಷ್ಟ ವರ್ಗ ಮತ್ತು ಪಂಗಡ ಕ್ಕಾದರೆ ಕ್ರಮವಾಗಿ 64.25 ಮತ್ತು 60. ಅಂದರೆ, ದಿನೇಶ 90.00 ತೆಗೆದರೂ ಅವನು ಔಟ್! ಸುರೇಶ 60.00 ತೆಗೆದರೆ ಅವನು ಇನ್! ಇಬ್ಬರೂ ಉತ್ತರಿಸಿದ್ದು ಒಂದೇ ಪ್ರಶ್ನೆಪತ್ರಿಕೆಗೆ. ಒಂದಂತೂ ಸ್ಪಷ್ಟ, ದಿನೇಶ 90 ಅಂಕ ತೆಗೆಯಲು ಪಟ್ಟಿರುವಷ್ಟು ಶ್ರಮದ ಅರ್ಧ ದಷ್ಟನ್ನು ಸುರೇಶ ಮಾಡಿದ್ದರೂ, ಸಿಹಿಯುಂಡೆ ಬಿದ್ದಿದ್ದು ಸುರೇಶನ ಬಾಯಿಗೆ!
ಅರ್ಥಾತ್, ನಮ್ಮ ಜಾತಿ ಆಧರಿತ ಮೀಸಲಾತಿ ಏನು ಹೇಳುತ್ತಿದೆಯೆಂದರೆ, ‘ನೀನು ಪರಿಶ್ರಮ ಪಡುವುದಕ್ಕಿಂತ ಹೆಚ್ಚಾಗಿ ಮೀಸ ಲಾತಿಯೊಳಗೆ ನೀನು ಬರುತ್ತೀಯೋ ಇಲ್ಲವೋ ಎಂಬುದು ನಿನ್ನ ಭವಿಷ್ಯತ್ತನ್ನು ನಿರ್ಧರಿಸುತ್ತದೆ’ ಅಂತ! ಕೊನೆಗೆ ಬೇಸತ್ತ ದಿನೇಶ, ಅಷ್ಟಕ್ಕೂ ಮೀಸಲಾತಿ ಯಾಕೆ ಬಂತೆಂದು ಇಂಟರ್‌ನೆಟ್ ನಲ್ಲಿಯೋ, ಹಳೆಯ ಕಾನೂನು ಇತಿಹಾಸದ ಪುಸ್ತಕದಲ್ಲಿಯೋ ತೆಗೆದು ನೋಡುತ್ತಾನೆ. ಅವನಿಗೆ ಉತ್ತರ ಸಿಗುತ್ತದೆ- ‘ನಿನ್ನ ಮುತ್ತಾತಂದಿರು, ಸುರೇಶನ ಮುತ್ತಾ ತಂದಿರನ್ನು ಅಸ್ಪೃಶ್ಯರೆಂದು ಕಂಡಿದ್ದರು’ ಅಂತ!
ದಿನೇಶನಿಗೆ ಈ ಲಾಜಿಕ್ಕೇ ಅರ್ಥವಾಗುವುದಿಲ್ಲ, ಏಕೆಂದರೆ ಪಿಯುಸಿಯಲ್ಲಿ ಅವರಿಬ್ಬರೂ ಅದೆಷ್ಟೋ ಸಲ ಒಂದೇ ಟಿಫಿನ್
ಬಾಕ್ಸ್‌ನ ತಿಂಡಿಯನ್ನು ಹಂಚಿಕೊಂಡು ತಿಂದಿರುತ್ತಾರೆ! ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗಿದ್ದರೂ, ನಾವಿನ್ನೂ ಮೀಸಲಾತಿ ಯೆಂಬ ಜಡಮರಕ್ಕೆ ಜೋತು ಬಿದ್ದಿದ್ದೇವೆ. ಅದರ ಹಿನ್ನೆಲೆ ಬೇಕಿಲ್ಲ, ಕಡಿಮೆ ಶ್ರಮದಲ್ಲಿ ಹೆಚ್ಚು ಸಿಗುವಂತಾಗಬೇಕು. ಅದೇ ನಮ್ಮ ಪರಮೋದ್ದೇಶ. ಅದಕ್ಕೇ ಅಲ್ಲವೇ, ನಮಗೆ ಬಿಟ್ಟಿಭಾಗ್ಯಗಳೆಂದರೆ ಅಚ್ಚುಮೆಚ್ಚು? ಇಂದಿನ ಕಾಲಘಟ್ಟದಲ್ಲೂ ಈ ವ್ಯವಸ್ಥೆ ಬೇಕೇ? ಎಂಬುದಿಲ್ಲಿ ಪ್ರಶ್ನೆ.
ಏಕೆಂದರೆ, ಇಂದು ಬ್ರಾಹ್ಮಣ ಮನೆಯಲ್ಲಿ ಗೌಡಸೊಸೆ ಇದ್ದಾಳೆ, ಗೌಡರ ಮನೆಯಲ್ಲಿ ಪರಿಶಿಷ್ಟ ಜಾತಿಯವರಿದ್ದಾರೆ. ಒಂದು ಪ್ಲೇಟಿನ ಪಾನಿಪೂರಿಯಲ್ಲಿ ಎಲ್ಲ ಜಾತಿಯ ದೋಸ್ತುಗಳೂ ಕೈಹಾಕಿ ತಿನ್ನುವ ಪ್ರಸ್ತುತ ಸಮಾಜದಲ್ಲಿ ಶಿಲಾಯುಗದ ಕಥೆಯಿಟ್ಟು ಕೊಂಡು ರಾಜಕಾರಣ ಮಾಡುವುದು ತರವೇ? ೯೦ ಅಂಕ ಪಡೆದೂ ನಿರರ್ಥಕವಾದ ದಿನೇಶನ ಶ್ರಮಕ್ಕೆ ಬೆಲೆ ಕಟ್ಟುವುದ್ಯಾರು?
ಈ ವಿಚಿತ್ರಕ್ಕೆ ನೇರಕಾರಣ ನಮ್ಮ ರಾಜಕಾರಣಿಗಳು.
ಅನ್ಯಾಯವಾಗುತ್ತಿದೆಯೆಂದು ಗೊತ್ತಿದ್ದರೂ ಅವರದ್ದು ಜಾಣಕುರುಡು. ಅದು ಭುಸುಗುಡುವ ನಾಗರ ಎಂದು ಗೊತ್ತಿರುವ ಕಾರಣದಿಂದಲೇ ಒಬ್ಬರ ಮೇಲೊಬ್ಬರು ಬಿದ್ದು ಓಲೈಕೆಯ ರಾಜಕಾರಣದಲ್ಲಿ ತೊಡಗಿದರು. ‘ಅಜ್ಜನ ಆಲದಮರವನ್ನಂತೂ ಉರುಳಿಸಲಾಗದು, ಕನಿಷ್ಠ ಇಲ್ಲಿ ಮೇಲ್ವರ್ಗದವರಿಗೆ ನೆರಳಾದರೂ ಕೊಡೋಣ’ ಎಂದು ತೀರ್ಮಾನಿಸಿದ ಪ್ರಧಾನಿ ಮೋದಿ, ಮೇಲ್ವರ್ಗದವರಿಗೆ ಅಸಮಾನತೆಯ ಬಗೆಗಿದ್ದ ಅಸಮಾಧಾನವನ್ನು ಹೋಗಲಾಡಿಸಲು 2019ರಲ್ಲಿ, ಆರ್ಥಿಕವಾಗಿ ದುರ್ಬಲ ರಾಗಿರುವ ಮೇಲ್ವರ್ಗದವರಿಗೆ ಶೇ. 10ರ ಮೀಸಲಾತಿ ನೀಡಲು ಸಂಕಲ್ಪಿಸಿ ಇದಕ್ಕೊಂದು ತಾತ್ಕಾಲಿಕ ಅಂತ್ಯಹಾಡಲು ಯತ್ನಿಸಿ ದರು.
ಆದರೆ ಮೋದಿ ಸೀನಿದರೂ ಪ್ರದೂಷಣೆ ಎಂದು ಬೊಬ್ಬಿಡುವವರಿಗೆ ಇದೇ ಸಾಕಿತ್ತು! ಮೋದಿ ಇದನ್ನು ಮೇಲ್ವರ್ಗದವರ ಓಲೈಕೆಗೇ ಮಾಡಿದರು ಅಂದುಕೊಳ್ಳೋಣ; ಆದರೆ ಈ ಶೇ. 10ನ್ನು ಅವರು ಅನ್ಯರ ತಟ್ಟೆಯಿಂದ ಎತ್ತಿಕೊಡಲಿಲ್ಲ. ಆದರೂ ರಾಜಕೀಯ ಕಾರಣಗಳಿಗಾಗಿ ಇದನ್ನು ವಿರೋಧಿಸಲಾಯಿತು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಗಳೂ ಹೋದವು.
ವಿಚಾರಣೆ ನಡೆಸಿದ ನ್ಯಾಯಾಲಯ ಇದನ್ನು ಕಾನೂನಾತ್ಮಕ ಎಂದು ಘೋಷಿಸಿದ ಬಳಿಕವೂ ತಮಿಳುನಾಡಿನ ಸ್ಟಾಲಿನ್, ‘ಯಾವುದೇ ಕಾರಣಕ್ಕೂ ತಮಿಳುನಾಡಿನಲ್ಲಿ ಈ ಮೀಸಲಾತಿಯನ್ನು ಲಾಗೂ ಮಾಡುವುದಿಲ್ಲ’ ಎಂದಿದ್ದಾರೆ. ಬಹುಶಃ ಸದ್ಯ ದಲ್ಲಿಯೇ ಪಿಣರಾಯಿ, ಮಮತಾ ಕೂಡ ಹೀಗೇ ಘೋಷಿಸಿಯಾರು. ಏಕೆಂದರೆ ಇವರೆಲ್ಲ ಹಿಂದೂಗಳನ್ನು ವಿಭಜಿಸಿಯೇ
ರಾಜಕೀಯ ಮಾಡಿಕೊಂಡು ಬಂದವರು! ಮಿಕ್ಕಂತೆ ಈಗಾಗಲೇ ಅನೇಕರು ಮತ್ತೆ ದುಂಬಾಲು ಬಿದ್ದಿದ್ದಾರೆ. ‘ಶತಶತಮಾನದ ನೋವು’ಗಳಿಗೆ ಪರಿಹಾರ ಸಿಕ್ಕಿಲ್ಲ, ಹೀಗಿರುವಾಗ ಮೇಲ್ವರ್ಗಕ್ಕೆ ಮೀಸಲಾತಿ ಕೊಟ್ಟಿರುವುದು ತಪ್ಪು ಎಂಬುದು ಅವರ ಅಂಬೋಣ.
ಮೀಸಲಾತಿಯಿಲ್ಲದ ಪಂಗಡಗಳು ತಮಗೂ ಮೀಸಲಾತಿ ಬೇಕೆಂಬ ಬೇಡಿಕೆ ಇಟ್ಟಿಲ್ಲ. ಇರುವ ಮೀಸಲಾತಿ ವ್ಯವಸ್ಥೆಯನ್ನು ದಯವಿಟ್ಟು ಕೊನೆಗಾಣಿಸಿ, ಮೆರಿಟ್ ಆಧರಿತ ವ್ಯವಸ್ಥೆಯನ್ನು ಜಾರಿಗೊಳಿಸಿ ದೇಶವನ್ನು ಮತ್ತಷ್ಟು ಮಜಬೂತು ಮಾಡ ಬೇಕೆಂಬುದು ಅವುಗಳ ನಿವೇದನೆಯಷ್ಟೇ. ಬಿಟ್ಟಿ ಸಿಗುವಾಗ ನನಗೊಂದು, ಮುಂದೆ ಹುಟ್ಟುವ ಮೊಮ್ಮಗನಿಗೊಂದು ಎನ್ನುವ ನಾವು ಮೀಸಲಾತಿ ಪದ್ಧತಿಯನ್ನು ರಾತ್ರಿ ಬಿದ್ದ ಕನಸೆಂದೇ ಪರಿಗಣಿಸಬೇಕು.
ಜಾಲತಾಣವೊಂದರಲ್ಲಿ ಕಂಡುಬಂದ ’’How can a country progress when more than half of its citizens are fighting to be called as backward’’ ಎಂಬ ಸಂದೇಶ ಇಲ್ಲಿ ಅಪ್ರಯತ್ನವಾಗಿ ನೆನಪಾಗುತ್ತಿದೆ!