Tuesday, 10th September 2024

ಭಾರತಕ್ಕೂ ಎಚ್ಚರಿಕೆಯ ಗಂಟೆ

ಮೀಸಲಾತಿ ನೀತಿಯ ವಿರುದ್ಧದ ಹೋರಾಟವು ತೀವ್ರ ಹಿಂಸಾರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಭಾರತದ ಆಶ್ರಯ ಪಡೆಯುವಂತಾಗಿದೆ. ಪರಿಣಾಮ ಮತಾಂಧರು ಕಾನೂನು ಕೈಗೆತ್ತಿಕೊಂಡು ಹಿಂಸಾಚಾರಕ್ಕೆ ಮುನ್ನುಡಿ ಬರೆದ ಪರಿಣಾಮ ಬಾಂಗ್ಲಾದೇಶ ಅಕ್ಷರಶಃ ತತ್ತರಿಸಿಹೋಗಿದೆ. ಹಿಂಸಾಚಾರ, ಅತ್ಯಾಚಾರ, ಹತ್ಯೆ, ದೊಂಬಿ, ಪುಟ್ಟಮಕ್ಕಳ ಮೇಲೂ ಕ್ರೌರ್ಯ ಮೆರೆದ ಮತಾಂಧರ
ಟಾರ್ಗೆಟ್ ಅಲ್ಲಿನ ಹಿಂದೂಗಳೇ ಆಗಿದ್ದಾರೆ. ಅವರಿಗೆ ರಕ್ಷಣೆ ಇಲ್ಲದಂತಾಗಿರುವುದು ವಿಪರ್ಯಾಸ.

ಐತಿಹಾಸಿಕ ಶ್ರದ್ಧಾಕೇಂದ್ರಗಳ ಕೇಂದ್ರಬಿಂದುವಾಗಿರುವ ಬಾಂಗ್ಲಾದಲ್ಲಿ ದೇವಾಲಯಗಳ ಮೇಲಿನ ಆಕ್ರಮಣ ಮಿತಿ ಮೀರಿತ್ತು. ಮೇಲ್ನೋಟಕ್ಕೆ
ಮೀಸಲಾತಿ ಹೆಸರಿನಲ್ಲಿ ನಡೆದ ಈ ಹೋರಾಟವು ಹಿಂದೂಗಳ ಮೇಲಿನ ಪಾಕ್ ಪ್ರೇರಿತ ದಂಗೆಯೆಂದರೂ ತಪ್ಪಾಗಲಾರದು. ಈಗಾಗಲೇ ಪಾಕಿಸ್ತಾನ
ದಲ್ಲಿ ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ರೀತಿ, ಅವರ ಮೇಲಾಗುತ್ತಿರುವ ದೌರ್ಜನ್ಯಗಳು ಗೊತ್ತಿರುವಂಥದ್ದೇ. ಬಾಂಗ್ಲಾದಲ್ಲಾಗಿರುವ ಈಗಿನ ಬೆಳವಣಿಗೆಯು ಅಲ್ಲಿನ ಮತಾಂಧರ ಭಯೋತ್ಪಾದಕ ಮನಸ್ಥಿತಿಯನ್ನು ಎತ್ತಿತೋರಿಸುತ್ತಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ನುಸುಳುಕೋರರ ತಡೆಗೆ ಕೇಂದ್ರ ಸರಕಾರವು ಈಗಾಗಲೇ ಎನ್‌ಆರ್‌ಸಿ, ಸಿಎಎ ಕಾಯ್ದೆಯ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಬಾಂಗ್ಲಾದ ೨ ಕೋಟಿಗೂ ಅಧಿಕ ಅಕ್ರಮ ನುಸುಳುಕೋರ ರೋಹಿಂಗ್ಯಾಗಳು ಪಶ್ಚಿಮ ಬಂಗಾಳದಲ್ಲಿ ಈ ಮೊದಲೇ ನೆಲೆಯೂರಿ ದ್ದಾರೆ. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವು ವೋಟ್‌ಬ್ಯಾಂಕ್‌ಗಾಗಿ ಇಂಥ ಅಕ್ರಮ ವಲಸೆಗೆ ಮತ್ತು ಭಯೋತ್ಪಾದಕರ ರಕ್ಷಣೆಗೆ ರತ್ನಗಂಬಳಿ ಹಾಸಿರುವುದು ದೇಶದ ಭದ್ರತೆಗೂ ಆತಂಕಕಾರಿ ಸಂಗತಿ.

ಬಾಂಗ್ಲಾದಲ್ಲಿನ ಮತಾಂಧರ ಕ್ರೌರ್ಯ ಮತ್ತು ಅಟ್ಟಹಾಸವನ್ನು ಕಂಡು ತಮ್ಮ ಜೀವ ಉಳಿಸಿಕೊಳ್ಳಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಆರಿಸಿ ಕೊಂಡಿದ್ದು ಮತ್ತು ಆಶ್ರಯಿಸಿದ್ದು ನಮ್ಮ ಭಾರತವನ್ನೇ. ‘ಭಾರತ ಸುರಕ್ಷಿತವಲ್ಲ’ ಎನ್ನುವವರಿಗೆ ಭಾರತವು ಯಾಕೆ ಸುರಕ್ಷಿತ ಎಂಬುದು ಈಗಲಾದರೂ ಅರಿವಿಗೆ ಬಂದಿರಬಹುದು. ಹಿಂದೂ ಮನೆ-ಮಂದಿರ ಗಳು, ವ್ಯಾಪಾರ ಕೇಂದ್ರಗಳ ಮೇಲಿನ ದಾಳಿಯಿಂದಾಗಿ ಈಗಾಗಲೇ ವ್ಯಾಪಕ ನಷ್ಟ ಉಂಟಾಗಿ, ಮನೆ-ಮಠ ಕಳೆದುಕೊಂಡು ಸಾವಿರಾರು ಮಂದಿ ನಿರಾಶ್ರಿತರಾಗಿ ತಮ್ಮ ಮಾನ ಮತ್ತು ಪ್ರಾಣವನ್ನು ಕಾಪಾಡಿಕೊಳ್ಳುವ ಸಲುವಾಗಿ ಭಾರತಕ್ಕೆ ವಲಸೆ ಬರಲು ನಿರ್ಧರಿಸಿದ್ದಾರೆ.

ವಿಶ್ವಸಂಸ್ಥೆಯು ಇನ್ನಾದರೂ ಮಧ್ಯ ಪ್ರವೇಶಿಸಿ ಇಂಥ ದೌರ್ಜನ್ಯಕ್ಕೀಡಾದ ಕುಟುಂಬಗಳಿಗೆ ರಕ್ಷಣೆ ನೀಡಬೇಕಾಗಿದೆ. ಮತಾಂಧ ಮನಸ್ಥಿತಿಯ, ಪಾಕ್-ಪ್ರೇರಿತರಾಗಿ ರುವ ಈ ಬಾಂಗ್ಲಾ ದಾಳಿಕೋರರಿಂದಾಗಿ ಮತ್ತು ಸದ್ಯದ ಅಲ್ಲಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತ ರಾಗುವಂಥ ಪರಿಸ್ಥಿತಿ ಎದುರಾದರೆ, ಅವರ ಪರಿಸ್ಥಿತಿ ಮತ್ತು ಮನಸ್ಥಿತಿ ಯಾವ ಮಟ್ಟಕ್ಕೆ ಬಂದು ತಲುಪಬಹುದು ಎಂಬುದು ಇಲ್ಲಿನ ಕೆಲ ರಾಜಕೀಯ ಪ್ರಭೃತಿಗಳಿಗೆ ಇನ್ನೂ ಅರ್ಥವಾದಂತಿಲ್ಲ. ದೇಶದಲ್ಲಿ ಅರಾಜಕತೆ ಉಂಟಾ ದರೂ ಅಥವಾ ಯಾವುದೇ ವಿಧ್ವಂಸಕ ಕೃತ್ಯಗಳು ನಡೆದರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವನ್ನು ಸಮರ್ಥಿಸುವ ಗುಂಪು ಗಳು ನಮ್ಮ ದೇಶಕ್ಕೆ ಮತ್ತು ವ್ಯವಸ್ಥೆಗೆ ಮಾರಕ.

ಮತಾಂಧತೆ ಮತ್ತು ಉಗ್ರವಾದದ ಚಿತ್ತಸ್ಥಿತಿಗೆ ಒಡ್ಡಿಕೊಂಡಿರುವ ರಾಷ್ಟ್ರಗಳು, ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದ ಮೇಲೆ ಈ ಹಿಂದಿ ನಿಂದಲೂ ಕೆಂಗಣ್ಣು ಬೀರುತ್ತಿವೆ. ಭಾರತವನ್ನು ತಮ್ಮ ತೆಕ್ಕೆಗೆ ಪಡೆಯಲು ಆಂತರಿಕ ಹಾಗೂ ಬಾಹ್ಯ ಸ್ವರೂಪದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಲೇ ಇವೆ. ಭಾರತವು ಸುರಕ್ಷಿತವಾಗಿರಬೇಕೆಂದರೆ ಪಾಕಿಸ್ತಾನ, ಬಾಂಗ್ಲಾ, ಅ-ನಿಸ್ತಾನಗಳಿಂದ ಬಂದಿರುವ ಅಕ್ರಮ ನುಸುಳುಕೋರರನ್ನು ಶಾಶ್ವತ ವಾಗಿ ಹೊರದಬ್ಬಬೇಕು. ಜತೆಗೆ, ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಘಟನೆಗಳಿಗೆ ಅಂಕುಶ ಹಾಕಬೇಕು.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *