ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@gmail.com
ಪತ್ರಿಕೆಗಳು ನಡೆಯುವುದೇ ಜಾಹೀರಾತಿನ ಮೇಲೆ. ಪತ್ರಿಕೆ ಮುದ್ರಣಗೊಂಡು ಓದುಗನ ಕೈ ಸೇರುವಷ್ಟರಲ್ಲಿ ಕನಿಷ್ಠ ೧೫ ರು. ವೆಚ್ಚವಾಗಿರುತ್ತದೆ. ಓದುಗರು ಪತ್ರಿಕೆಗೆ ಕೊಡುವುದು ೫-೬ ರು. ಮಾತ್ರ. ಇದರಲ್ಲಿ ಏಜೆಂಟರ ಕಮಿಷನ್ ಕಳೆದು ಪತ್ರಿಕಾ ಮಾಲಿಕರಿಗೆ ಸಿಗುವುದೇ ೩.೫೦ ರು. ಈಗ ಹೇಳಿ, ಪತ್ರಿಕೆಗಳಿಗೆ ಲಾಭವಾಗುತ್ತಿದೆಯೋ ಅಥವಾ ನಷ್ಟವಾಗುತ್ತಿದೆಯೋ ಅಂತ.
ಮೂಕನಾಯಕ್’ ಅಂಬೇಡ್ಕರ್ ಅವರ ಮೊದಲ ಪತ್ರಿಕೆ, 1924ರಲ್ಲಿ ಶುರು ವಾದ ಈ ಪತ್ರಿಕೆಯನ್ನು ಕೊಲ್ಹಾಪುರದ ಶಾಹು ಮಹಾರಾಜರು 2500ರು. ದೇಣಿಗೆಯನ್ನು ಕೊಟ್ಟು ಸಲುಹಿದ್ದರು. ಆದರೆ, ಪತ್ರಿಕೆ ಎರಡೇ ವರ್ಷದಲ್ಲಿ ಬಾಗಿಲು ಹಾ ಕಿಕೊಂಡಿತು. ಯಾಕೆ ಗೊತ್ತಾ? ಆರ್ಥಿಕ ಸಂಕಷ್ಟ. ಸೂಜಿಯಿಂದ ಹಿಡಿದು ವಿಮಾನದವರೆಗೂ ಎಲ್ಲ ರೀತಿಯ ಬಿಜಿನೆಸ್ ಇರುವ ಟಾಟಾದವರದ್ದು ಒಂದು ದಿನಪತ್ರಿಕೆ ಮಾತ್ರ ಯಾಕಿಲ್ಲ ಗೊತ್ತಾ? ಒಂದು ಸಾರಿ ಶುರುಮಾಡಿ ಕೈ ಸುಟ್ಟಿಕೊಂಡಿದ್ದಕ್ಕೆ!
ದೇಶದಲ್ಲಿ, ರಾಜ್ಯದಲ್ಲಿ ಸಾವಿರಾರು ಉದ್ಯಮಿಗಳಿದ್ದಾರೆ, ಅವರದ್ದು ಎಷ್ಟು ದಿನಪತ್ರಿಕೆಗಳಿವೆ? ಈ ಎಲ್ಲರಿಗೂ ಗೊತ್ತು ಪತ್ರಿಕೆ ನಡೆಸುವುದು ಸುಲಭವಲ್ಲ ಅಂತ. ಈ ದಿನಪತ್ರಿಕೆಗಳೆಂದರೇ ಹಾಗೆ, ಅದು ಸೆರಗಿನ ಕೆಂಡವೇ.
ಪ್ರತಿದಿನ ಜನರು ೬ ರು. ಕೊಟ್ಟು ಓದುವುದರ ಹಿಂದೆ ಇರುವ ಪರಿಶ್ರಮದ ಅರಿವು ಜನಕ್ಕೆ ಕಿಂಚಿತ್ತೂ ಇಲ್ಲ ಅನಿಸುತ್ತದೆ. ಯಾವು
ದೇ ಫೀಲ್ಡ್‌ನಲ್ಲೂ ಸಾವಿರಾರು ಕಂಪನಿಗಳು, ಕೋಟ್ಯಂತರ ಖರೀದಿದಾರರೂ ಇರುತ್ತಾರೆ. ನಾವು ಬರೀ ಒಂದು ಪೆನ್ನನ್ನೇ ಉದಾಹರಣೆಯಾಗಿ ನೋಡಿದರೆ ಸಾವಿರಕ್ಕೂ ಅಧಿಕ ಕಂಪನಿಗಳಿದ್ದಾವೆ. ಆದರೆ ದಿನ ಪತ್ರಿಕೆ? ಅದೂ ಕನ್ನಡದ ರಾಜ್ಯ ಮಟ್ಟದ ದಿನ ಪತ್ರಿಕೆ? 9 only 9 ಅಷ್ಟೇ! ಕೆಲ ದಿನಗಳ ಹಿಂದೆ ಬಿಜೆಪಿ ಒಂದು ಜಾಹೀರಾತನ್ನು ಕೊಟ್ಟಿತ್ತು, ಅದು ಥೇಟ್ ಪತ್ರಿಕೆಗಳ ಮುಖಪುಟದ ಥರಾನೇ ಇತ್ತು. (ಡಿಸೈನ್ ಚೆನ್ನಾಗಿರಲಿಲ್ಲ, ಆ ಮಾತು ಬೇರೆ) ಆ ಜಾಹೀರಾತನ್ನು ಕನ್ನಡದ ನಾಲ್ಕು ಪತ್ರಿಗಳಷ್ಟೇ ಪ್ರಕಟಿಸಿದ್ದವು. (ಬೇರೆ ಪತ್ರಿಕೆಗೆ ಸುದ್ದಿ ಹಾಕದೇ ಇರುವಷ್ಟು ಜಾಹೀರಾತು ಇದ್ದಿದ್ದರಿಂದ ಪ್ರಕಟಿಸಿರಲಿಕ್ಕಿಲ್ಲ ಅದು
ಅವರಿಗೆ ಬಿಟ್ಟಿದ್ದು). ಆ ದಿನ ಫೇಸ್‌ಬುಕ್‌ಗಳಲ್ಲಿ ಜನರ ಪೋಸ್ಟ್‌ಗಳು ಶುರುವಾದವು; ಕನ್ನಡ ಪತ್ರಿಕೋದ್ಯಮ ಅಧೋಗತಿಗೆ ಹೋಗಿದೆ, ಪತ್ರಿಕೆಗಳೆಲ್ಲವೂ ಮಾರಾಟವಾಗಿವೆ, ಅದೂ ಒಂದು ಪಕ್ಷಕ್ಕೆ….. ಹಾಗೆ, ಹೀಗೆ ಅಂತ ಮನಸ್ಸಿಗೆ ಬಂದಂತೆ ಬರೆದುಕೊಂಡಿದ್ದರು.
ಆದರೆ, ಅದನ್ನೆಲ್ಲ ಪೋಸ್ಟ್ ಮಾಡುವ ಮುನ್ನ ಆ ಪತ್ರಿಕೆಗಳ ಮುಖಪುಟದ ಜಾಹೀರಾತಿನ ಕೆಳಗಡೆ ಬರೆದ ಒಂದು ಅಂಶವನ್ನು
ಅವರ‍್ಯಾರು ಓದಲೇ ಇಲ್ಲ ಅನಿಸುತ್ತದೆ. ಕೊನೆಯಲ್ಲಿ ಬಿಜೆಪಿ ಅದು ತನ್ನದೇ ಅಂತ ಕ್ಲೈಮು ಮಾಡಿಕೊಂಡಿತ್ತು; ’ಪ್ರಕಟಣೆ-ಭಾರತೀಯ ಜನತಾ ಪಾರ್ಟಿ ಕರ್ನಾಟಕ’ ಅಂತ. ಅದನ್ನಾದರೂ ನೋಡಿದರೇ? ಊಹೂಂ. ಆ ಪೋಸ್ಟ್‌ಗಳನ್ನು ಹಾಕುವವರು ನಿಜವಾಗಲೂ ಪತ್ರಿಕೆಗಳನ್ನು ಖರೀದಿಸುತ್ತಾರೋ ಪ್ರತಿ ದಿನವೂ ಓದುತ್ತಾರೋ? ಅದು ಅವರಿಗೆ ಗೊತ್ತಿರಬೇಕಷ್ಟೇ.
ಸರಿ ಪ್ರಶ್ನೆಗಳನ್ನು ಪತ್ರಿಕೆಗಳಿಗೆ, ಅದರ ಸಂಪಾದಕರ ಮುಂದೆ ಎಸೆದಿದ್ದೀರಲ್ಲ, ಕೊನೇ ಪಕ್ಷ ಒಯಾದರೂ ಆ ಪ್ರಕಟಣೆ ಕೊಟ್ಟ
ಬಿಜೆಪಿಯವರನ್ನು ಎಷ್ಟು ಜನ ಪ್ರಶ್ನಿಸಿದ್ದೀರಿ? ಒಂದು ಮಾತು ಹೇಳಬೇಕೆಂದರೆ, ಪತ್ರಿಕೆಗಳು ನಡೆಯುವುದೇ ಜಾಹೀರಾತಿನ ಮೇಲೆ. ಎಷ್ಟು ಜನಕ್ಕೆ ಗೊತ್ತಿದೆಯೋ, ಇಲ್ಲವೋ. ಒಂದು ಪತ್ರಿಕೆ ಪ್ರಿಂಟಾಗಿ ಓದುಗನ ಕೈಯಲ್ಲಿ ಸೇರುವುದರಲ್ಲೇ ಕನಿಷ್ಠ ೧೫ ರು. ವೆಚ್ಚ ಆಗಿರುತ್ತೆ. ಓದುಗರು ಕೊಡುವುದು ಹೆಚ್ಚೆಂದರೆ ೫-೬ ರು. ಮಾತ್ರ, ಅದರಲ್ಲೂ ಆ ಏಜೆಂಟರ ಕಮಿಷನ್‌ಗೆ ಹೋಗಿ
ಪತ್ರಿಕಾ ಮಾಲಿಕರಿಗೆ ಸಿಗುವುದೇ ೩.೫ರು!
ನೀವೆ ಹೇಳಿ ಇವತ್ತು ಪತ್ರಿಕೆ ಓದುತ್ತಿದ್ದೀರಿ ಅಂದ ಮೇಲೆ ನಿಮ್ಮಂದ ಪತ್ರಿಕೆಗೆ ಲಾಭವಾಗಿಲ್ಲ, ಬದಲಿಗೆ ನಷ್ಟವೇ ಆಗುತ್ತಿರುತ್ತದೆ.
೧೬ನೇ ಶತಮಾನದಲ್ಲಿಯೇ ಹುಟ್ಟಿಕೊಂಡು ಬಂದ ಪತ್ರಿಕೆಗಳು ನಡೆದದ್ದೂ ಜಾಹೀರಾತಿನ ಮೇಲೆಯೇ ಹೊರತು ಮಾರಾಟದಿಂದಲ್ಲ. ಈಗಿನ ಕಾಲದಲ್ಲಿ ಎಲ್ಲವೂ ಉದ್ಯಮವೇ, ಶಾಲೆಯಿಂದ ಹಿಡಿದು ರಾಜಕಾರಣಿದವರೆಗೂ ಇರುವುದು ಉದ್ಯಮವೇ!
ಫೇಸ್‌ಬುಕ್ ಪೋಸ್ಟ್ ಹಾಕುತ್ತಿರುತ್ತೀರಲ್ಲ, ಅಲ್ಲೂ ನಿಮಗೆ ದಿನವೂ ಸಾವಿರಾರು ಜಾಹೀರಾತುಗಳು ಕಂಡೇ ಇರುತ್ತವೆ. ಅದು ಬರಬೇಕು ಕೂಡ. ಅವರ ಉದ್ಯಮ ನಿಂತಿರುವುದೇ ಅದರ ಮೇಲೆ! ನಾವುಗಳೆಲ್ಲ ದಿನವೂ ನೋಡುವ ಯೂಟ್ಯೂಬಿನ ಸಬ್
ಸ್ಕ್ರಿಪ್ಷನ್ (ಚಂದಾದಾರಿಕೆ) ತಗೆದುಕೊಳ್ಳದೆ? ಸ್ಪಾಟಿ-ಗೆ ಚಂದಾದಾರರಾಗದೆ, ಮಧ್ಯದಲ್ಲಿ ಬರುವ ಜಾಹೀರಾತಿಗೆ
ಎಷ್ಟು ಜನ ಹಾಡಿನ ಮಧ್ಯೆ ಕಿವಿ ಕೊಡುತ್ತೀರಿ? ಆ ಜಾಹೀರಾತುಗಳಿಗೆ ಬೈಯುತ್ತೀರಿ? ಅವರು ಆ ಜಾಹೀರಾತಿನ ಮೂಲಕ ಎತ್ತಿದ ಮತ್ತೊಂದು ಪ್ರಶ್ನೆ ಎಂದರೆ, ‘ಪತ್ರಿಕೋದ್ಯಮ ಅಧಃಪತನಕ್ಕೆ ಹೋಗಿದೆ.
ತಮ್ಮನ್ನೇ ತಾವು ಮಾರಿಕೊಂಡಿದ್ದಾರೆ, ಬಂಡವಾಳ ಶಾಹಿಗಳು ಪತ್ರಿಕೆಗಳನ್ನು ನಡೆಸುತ್ತಿದ್ದಾರೆ…’ ಪ್ರತಿಯೊಂದೂ ವ್ಯವಹಾರ ಶುರುಮಾಡುವುದೇ ಬಂಡವಾಳದಿಂದ, ಮತ್ತದನ್ನು ನಡೆಸುವುದೇ ಲಾಭ ಗಳಿಸಲಿಕ್ಕಾಗಿ. ಪ್ರತಿಯೊಂದು ಉದ್ಯಮಕ್ಕೂ ಲಾಭ ಬೇಕೇ ಬೇಕು. ಅದರಿಂದ ಪತ್ರಿಕೆಗಳೂ ಹೊರಗುಳಿದಿಲ್ಲ. ಪತ್ರಿಕೆ ಶುರುವಾದಾಗಿನಿಂದಲೇ ಉದ್ಯಮ. ಪತ್ರಿಕಾ ಕ್ಷೇತ್ರ ಜನಜನಿತವಾಗಿರುವುದೇ ಪತ್ರಿಕೋದ್ಯಮ ಎಂದು!
ಅದು ಹುಟ್ಟಿನಿಂದ ಹಿಡಿದು ಇಲ್ಲಿಯವರೆಗೂ, ಮುಂದೂ ಪತ್ರಿಕೋದ್ಯಮವೇ.. ಪತ್ರಿಕೆಗಳನ್ನು ಮಾಡಿ, ಜನರಿಗೆ ಸುದ್ದಿ ತಲುಪಿಸಿ
ಆದ್ರೆ ಜಾಹೀರಾತನ್ನು ಹಾಕಬೇಡಿ ಅಂತ ಹೇಳುವುದು ಏತಕ್ಕೆ? ಮತ್ತೆ ಹೇಳುತ್ತೇನೆ ಪತ್ರಿಕೆಗಳು ನಡೆಯುತ್ತಿರುವುದು ಓದುಗರು ಕೊಡುವ ಣದಿಂದಲಲ್ಲ, ಅದರಲ್ಲಿ ಪ್ರಕಟವಾಗುವ ಜಾಹೀರಾತಿನ ಮೇಲೆ. ಸರಕಾರದಿಂದ ನಡೆಯುವ ಟಿವಿ ಚಾನೆಲ್‌ಗಳವರೂ ಜಾಹೀರಾತನ್ನು ತಗೆದುಕೊಳ್ಳುತ್ತಾರೆಂದರೆ ಉಳಿದವರು ತೆಗೆದುಕೊಳ್ಳಬೇಕು ತಾನೇ.
ಎಲ್ಲರೂ ತಿಳಿದುಕೊಳ್ಳಬೇಕಾದ ಸಂಗತಿಯೆಂದರೆ, ಪತ್ರಿಕಾ ಧರ್ಮ ಇರುವುದು ಅದು ಕೊಡುವ ಸುದ್ದಿಯ ಮೇಲೇ ಹೊರತು ಜಾಹೀರಾತಿನ ಮೇಲಲ್ಲ. ಅದು ಸರಿ ಪ್ರಪಂಚದ ಯಾವ ಪತ್ರಿಕೆ ಜಾಹೀರಾತು ಇಲ್ಲದೆ ನಡೆಯುತ್ತಿದೆ? ಜಾಹೀರಾತು ಇರದೇ ಪತ್ರಿಕೆ ಮಾಡ್ತೀನಿ ಅಂತ ಹೇಳಿ ‘ಕಪ್ಪು ಬಿಳುಪ’ಲ್ಲಿ ರಾಜಕಾರಣಿಗಳನ್ನು, ಸಿನಿಮಾದವರನ್ನು, ಅಧಿಕಾರಿಗನ್ನು, ಉದ್ಯಮಪತಿ ಗಳನ್ನು ಹೆದರಿಸಿ ಅವರ ವೈಯಕ್ತಿಕ ಜೀವನವನ್ನೇ ಬಂಡವಾಳ ಮಾಡಿಕೊಂಡು, ಅಂಥವರಿಂದ ಸುಲಿಗೆ ಮಾಡಿ ಸಕ್ಕತ್ತಾಗಿ ಆಸ್ತಿ
ಮಾಡಿಟ್ಟು ಹೋದರಲ್ಲ, ಅದೆಲ್ಲ ಅವರ ಕಾಲಕ್ಕೇ ಹೋಯ್ತು!
ಅವರು ಜಾಹೀರಾತನ್ನೇ ಹಾಕಿಲ್ಲ ಎಂದ ಕಾರಣಕ್ಕೆ ಅವರದ್ದು ಪತ್ರಿಕಾಧರ್ಮವೇ? ಮತ್ತೆ ಅವತ್ತು ಬಿಜೆಪಿ ಕೊಟ್ಟ ಜಾಹೀರಾತನ್ನು ಹಾಕಿಕೊಂಡ ಎಲ್ಲ ಪತ್ರಿಕೆಗಳೂ ಕಾಂಗ್ರೆಸಿನ ಪಾದಯಾತ್ರೆಯ ವರದಿಯನ್ನೂ ಮಾಡಿದ್ದವಲ್ಲ? ಅದು ಪತ್ರಿಕಾಧರ್ಮ ಅಲ್ಲವೇ? ಒಂದೊಮ್ಮೆ ಕಾಂಗ್ರೆಸ್ ಬಗೆಗಿನ ವರದಿಗಳನ್ನು ಮಾಡದೇ ಬರೀ ಜಾಹೀರಾತು ಹಾಕಿದ್ದರೆ ಪತ್ರಿಕೆಗಳು ತಮ್ಮನ್ನು ಮಾರಿಕೊಂಡಿವೆ ಅಂತ ಹೇಳಬಹುದಿತ್ತು.
ಎಲ್ಲದಕ್ಕಿಂತ ವಂಡರ್ ಅನಿಸುವುದು, ಯಾರೋ ಕೆಲವೊಂದಿಷ್ಟು ಜನ ಪತ್ರಿಕೆಗಳ ವಿರುದ್ಧ ಕೇಸ್ ಹಾಕ್ತಿನಿ ಅಂತ
ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಅಲ್ಲ ಸ್ವಾಮಿ ಜಾಹೀರಾತು ಹಾಕಿಕೊಂಡಿದ್ದರಲ್ಲಿ ತಪ್ಪೇನಿದೆ ಅಂತ ಕೇಳಿದ್ರೆ, ಅದೇ ಅಬ್ಬೆಬ್ಬೆ ದಬ್ಬೆಬ್ಬೆ. ಬಿಟ್ಟರೆ ಮತ್ತೇನಿಲ್ಲ. ಸ್ವಾಮೀ ಬಿಜೆಪಿಯವರು ಆ ಜಾಗವನ್ನು ಹಣ ಕೊಟ್ಟು ಖರೀದಿಸಿರುತ್ತಾರೆ. ಹಾಗೆ ಖರೀದಿಸಿದ ಜಾಗದಲ್ಲಿ ಅವರು ಕಾರಿಕೊಂಡಿದ್ದಕ್ಕೆಲ್ಲಾ ಪತ್ರಿಕೆ ಹೇಗೆ ಹೊಣೆಯಾದೀತು? ಯಾವುದೋ ಕಂಪನಿಯ ಹೇರ್ ಆಯಿಲ್ ಜಾಹೀರಾತಿನಲ್ಲಿ ಕೂದಲು (ತಲೆ) ಬೆಳೆಯುತ್ತದೆ ಎಂದು ಬರೆದಿರುತ್ತಾರೆ.
ಅದನ್ನೋದಿದ ಓದುಗ ಆ ಹೇರಾಯಿಲ್ ಳಸಿ, ಕೂದಲು ಬೆಳೆಯದಿದ್ದಲ್ಲಿ ಪತ್ರಿಕೆ ಹೇಗೆ ಹೊಣೆಯಾದೀತು? ಹೋಗ್ಲಿ ಆ ಜಾಹೀರಾತಿನಲ್ಲಿ ತಪ್ಪಾದರೂ ಏನಿತ್ತು? ಬೇರೆ ಬೇರೆ ಪತ್ರಿಕೆಗಳು ಮಾಡಿದ ಸುದ್ದಿಯನ್ನೇ ಒಟ್ಟುಗೂಡಿಸಿ ಜಾಹೀರಾತಾಗಿ
ಪ್ರಕಟಿಸಿದೆ, ಅದರಲ್ಲೂ ಆ ಪತ್ರಿಕೆಗಳ ಹೆಸರು ಮತ್ತದರ ದಿನಾಂಕವನ್ನೂ ನಮೂದಿಸಲಾಗಿದೆ. (ಅದನ್ನಾದರೂ ಓದಿದರೋ?) ಸತ್ಯವನ್ನು ಯಾರು ಹೇಳಿದರೂ ಸತ್ಯವೇ.
ಅದು ಸುದ್ದಿಯಾಗಿ ಬಂದಾಗಲೂ ಇರಬಹುದು, ಜಾಹೀರಾತಿನ ರೂಪದಲ್ಲಾದರೂ ಇರಬಹುದು. ಕೆಲವು ಪತ್ರಿಕೆಗಳಲ್ಲಿ ರಮ್ಮಿ, ಕಾಂಡೋಮ್‌ಗಳ ಜಾಹೀರಾತು ಬರ್ತಿತ್ತಾವಲ್ಲ ಅದನ್ನೇನಾದರು ಅವರು ನೋಡಿದರೆ? ಆ ಪತ್ರಿಕೆಗಳ ವಿರುದ್ಧ ಏನಾದರು ಮಾತು? ಇನ್ನು ಕೆಲವು ಜನ ಹಳೇ ಕಾಲದ ಪತ್ರಿಕೆಗಳ ಬಗ್ಗೆ ಹೇಳುತ್ತಾರೆ. ೫೦ ವರ್ಷಗಳ ಹಿಂದಿನಂತೆ ಯಾರ ಜೀವನವೂ ಇಲ್ಲ, ಪತ್ರಿಕೋದ್ಯಮದಲ್ಲೂ ಹಾಗೆಯೇ. ಮೊದಲೆಲ್ಲ ಪತ್ರಿಕೆಗಳಷ್ಟೇ ಸುದ್ದಿಯ ಮೂಲವಾಗಿರುತ್ತಿದ್ದವು.
ಈಗ ಹಾಗಿಲ್ಲ, ವಾಟ್ಸಾಪ್, ಫೇಸ್‌ಬುಕ್, ಟಿವಿಗಳ, ವೆಬ್ ಸೈಟ್ ಹೀಗೆ ಇಂಥ ಕ್ಲಿಷ್ಟಕರ ಸನ್ನಿವೇಶಗಳನ್ನು ಪತ್ರಿಕೆ ದಿನನಿತ್ಯ ಎದುರಿಸಬೇಕು. ಪ್ರತಿನಿತ್ಯ ಪತ್ರಿಕೆಯನ್ನು ನಿಮ್ಮ ಮುಂದೆ ತರಲೇಬೇಕು. ಇರೋ ಒಂದು ಆದಾಯದ ಮೂಲವನ್ನೇ ಪತ್ರಿಕೆಗಳು ಬಿಟ್ಟುಬಿಡ ಬೇಕೆನ್ನುವುದು ಕೆಲವರ ದಾರ್ಷ್ಯತನವೇ. ಎಲ್ಲದರ ಜತೆಗೆ ಪತ್ರಕರ್ತರು, ಸಂಪಾದಕರೂ ಮಾರಿಕೊಂಡಿದ್ದಾರೆ ಎಂದೂ ಹೇಳುವುದು ಯಾವತ್ತಿಗೂ ಸರಿಯಲ್ಲ. ಯಾವ ಪತ್ರಿಕೆಗಳೂ ಯಾವ ಸುದ್ದಿಯನ್ನು ಬಿಡದೇ ಸುದ್ದಿ ಮಾಡುತ್ತವೆ. ಅವರವರ ಧೋರಣೆಗಳು ಬೇರೆಯದ್ದೇ ಇರಬಹುದು. ಆದರೆ ಪತ್ರಿಕೆಗಳು ಪತ್ರಿಕೆಗಳೇ!
ಇಷ್ಟಕ್ಕೂ ‘ಧರ್ಮ’ ಎನ್ನುವುದು ಪತ್ರಿಕೆಗಳಿಗೆ ಮಾತ್ರ ಅನ್ವಯವೇ?