Friday, 20th September 2024

ದುರ್ಬಲರ ಸಬಲೀಕರಣಕ್ಕೆ ಮುಂಚೂಣಿ ಯತ್ನ

ಸಾಧನಾಪಥ

ಅರ್ಜುನ್ ಮುಂಡಾ

ಕಳೆದ ವರ್ಷ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದುರ್ಬಲ ಬುಡಕಟ್ಟು ಗುಂಪುಗಳನ್ನು ಉನ್ನತೀಕರಿಸುವ ಮತ್ತು ಭಾರತದ ಭವಿಷ್ಯವನ್ನು ಮರುರೂಪಿಸುವ ಗುರಿಯನ್ನು ಹೊಂದಿರುವ ಮಹತ್ವದ ಉಪಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ‘ಪಿಎಂ ಜನಮನ್’ ಎಂದು ಕರೆಯಲ್ಪಡುವ ಈ ಉಪಕ್ರಮವು ಕೇವಲ ಒಂದು ಯೋಜನೆಯಷ್ಟೇ ಅಲ್ಲ, ಇದು ದೇಶದ ಬುಡಕಟ್ಟು ಜನಸಂಖ್ಯೆಯ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಭಾವನೆ ಯನ್ನು ಒಳಗೊಂಡಿದೆ.

ಐತಿಹಾಸಿಕವಾಗಿ ಹಿಂದುಳಿದಿರುವ ಭಾರತದ ಬುಡಕಟ್ಟು ಸಮುದಾಯವನ್ನು ನಿರಂತರವಾಗಿ ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳು ಸದಾ ನಿರ್ಲಕ್ಷಿಸಿ ದ್ದವು. ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಪ್ರತ್ಯೇಕ ಬುಡಕಟ್ಟು ಸಚಿವಾಲಯವನ್ನು ಆರಂಭಿಸುವ ಮೂಲಕ ಈ ನಿಟ್ಟಿನ ಪ್ರಯತ್ನಗಳನ್ನು ಚುರುಕುಗೊಳಿಸಲಾಯಿತು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಆ ಪ್ರಯತ್ನಗಳನ್ನು ಸುಸ್ಥಿರವಾಗಿ ಮುಂದುವರಿಸಿದ್ದೇ ಅಲ್ಲದೆ ಅವುಗಳಿಗೆ ಸ್ಪಷ್ಟವೇಗ ನೀಡಲಾಯಿತು. ಬುಡಕಟ್ಟು ಸಮಾಜಗಳಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ರಕ್ಷಣೆ ಖಾತ್ರಿಪಡಿಸು ವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ, ವಿಶೇಷವಾಗಿ ದೇಶದ ದೂರದ ಗುಡ್ಡಗಾಡು ಪ್ರದೇಶದ ಮೂಲೆಗಳಲ್ಲಿ ಇರುವವರಿಗೆ ನ್ಯಾಯ, ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುವ ದೂರದೃಷ್ಟಿಯನ್ನು ಹೊಂದಲಾಗಿದೆ.

೨೦೨೩ರ ನವೆಂಬರ್ ೧೫ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳದಲ್ಲಿ ಜನಜಾತೀಯ ಗೌರವ ದಿನದಂದು ‘ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ’ (ಪಿಎಂ ಜನಮನ್) ಆರಂಭದೊಂದಿಗೆ ಮಹತ್ವದ ಹೆಜ್ಜೆ ಇರಿಸಲಾಗಿದೆ. ಈ ಉಪ್ರಕಮದಡಿ ೧೮ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಕೇಂದ್ರಾಡಳಿತ ಪ್ರದೇಶಗಳ ೨೩,೦೦೦ ಗ್ರಾಮಗಳಲ್ಲಿ ವಿಶೇಷವಾಗಿ ೭೫ ದುರ್ಬಲ ಬುಡಕಟ್ಟು ಸಮುದಾ ಯಗಳ (ಪಿವಿಜಿಟಿ) ಏಳಿಗೆಗೆ ೨೪ ಸಾವಿರ ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.

ದೂರದ ಗುಡ್ಡಗಾಡು ಮತ್ತು ಯಾವುದೇ ಸಂಪರ್ಕವಿಲ್ಲದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಿವಿಜಿಟಿಗಳು ದಶಕಗಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಪಿಎಂ-ಜನಮನ್ ಯೋಜನೆಗೆ ಚಾಲನೆ ನೀಡಿದ ಸಮಯದಲ್ಲಿ ಪ್ರಧಾನಿ ಮೋದಿ ಅವರು, ಸಂಕುಚಿತ ಮನೋಭಾವದಿಂದ ಕಾರ್ಯ ನಿರ್ವಹಿಸುವುದನ್ನು ಬಿಟ್ಟು ಇಡೀ ಸರಕಾರ ವಿಶಾಲ ಮನೋಭಾವದಡಿ ದೂರದೃಷ್ಟಿಯ ಯೋಜನೆಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದ್ದರು. ಬುಡಕಟ್ಟು ಸಮುದಾಯಗಳ ಬಗ್ಗೆ ಪ್ರಧಾನ ಮಂತ್ರಿ ಅವರ ಆಳವಾದ ಸಂವೇದನಾಶೀಲತೆ ಪ್ರದರ್ಶಿಸುವ ಈ ಜನಮನ್ ಯೋಜನೆಯಡಿ ತಳಮಟ್ಟ ದಲ್ಲಿ ವಿವಿಧ ಸರಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಖಾತ್ರಿಪಡಿಸಿಕೊಳ್ಳಲು ೯ ಸಚಿವಾಲಯಗಳಿಂದ ೧೧ ಮಧ್ಯಸ್ಥಿಕೆಗಳನ್ನು ಸಂಯೋ ಜಿಸುವ ಮತ್ತು ಒಗ್ಗೂಡಿಸುವತ್ತ ಗಮನಹರಿಸಲಾಗುತ್ತಿದೆ.

ಪಿಎಂ ಜನಮನ್ ಯಶಸ್ಸನ್ನು ಖಾತ್ರಿಪಡಿಸಲು ನವ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಚಿಂತನ ಮಂಥನ ಶಿಬಿರದಲ್ಲಿ ವಿಸ್ತೃತ ಕ್ರಿಯಾಯೋಜನೆ ಯನ್ನು ಅಂತಿಮಗೊಳಿಸಲಾಗಿದೆ. ೨೦೨೩ರ ಡಿಸೆಂಬರ್ ೨೫ರಂದು ಪಿಎಂ ಜನಮನ್ ಯೋಜನೆಯಡಿಯ ಫಲಾನುಭವಿಗಳ ನೋಂದಣಿ ಶಿಬಿರಗಳಿಗೆ ಮತ್ತು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಈ ಅಭಿಯಾನವು ಪಿವಿಜಿಟಿ ಪ್ರಾಬಲ್ಯದ ಜಿಲ್ಲೆಗಳನ್ನು ಗುರಿಯಾಗಿಸುತ್ತದೆ. ಇದು ಬುಡಕಟ್ಟು ಸಮುದಾಯಗಳ ನಡುವಿನ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿದೆ.

ಈ ಅಭಿಯಾನದ ಮೊದಲ ಮೂರು ವಾರಗಳಲ್ಲಿ, ೧೦೦ ಜಿಲ್ಲೆಗಳಾದ್ಯಂತ ಪಿವಿಟಿಜಿ ಜನವಸತಿಗಳಲ್ಲಿ ೮೦೦೦ಕ್ಕೂ ಅಧಿಕ ಶಿಬಿರಗಳನ್ನು ಆಯೋಜಿಸ ಲಾಗಿತ್ತು. ಇದು ಸೇವೆಗಳನ್ನು ಒದಗಿಸುವುದನ್ನು ಸುಗಮಗೊಳಿಸುತ್ತದೆ ಮತ್ತು ವಂಚಿತ ವ್ಯಕ್ತಿಗಳು ವಿವಿಧ ಯೋಜನೆಗಳನ್ನು ಪಡೆಯಲು ಅನುವು
ಮಾಡಿಕೊಡುತ್ತದೆ. ಇವುಗಳಲ್ಲಿ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಉಜ್ವಲಾ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಆಧಾರ್ ಕಾರ್ಡ್, ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ), ಪಿಎಂ ಜನಧನ್ ಯೋಜನೆ, ಪಿಎಂ ಮಾತೃವಂದನಾ ಯೋಜನೆ, ಸಮುದಾಯ ಪ್ರಮಾಣಪತ್ರ ಮತ್ತು ಮತ್ತಿತರ ಯೋಜನೆಗಳು ಸೇರಿವೆ.

ಎರಡು ತಿಂಗಳ ಅಲ್ಪಾವಧಿಯಲ್ಲಿ ವಿವಿಧ ಸಚಿವಾಲಯಗಳಿಂದ ೪೭೦೦ ಕೋಟಿ ರು. ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ೧ ಲಕ್ಷ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ಮತ್ತು ೪೦೦ಕ್ಕೂ ಅಧಿಕ ಪಿವಿಟಿಜಿ ಪ್ರಾಬಲ್ಯದ ಬುರುಜುಗಳಲ್ಲಿ ೧,೨೦೦ ಕಿ.ಮೀ. ರಸ್ತೆಗಳನ್ನು ಮಂಜೂರು ಮಾಡಿದೆ. ವಿವಿಧ ಸಚಿವಾಲಯಗಳ ಇತರ ಉಪಕ್ರಮಗಳಲ್ಲಿ ವಸತಿ ನಿಲಯಗಳು, ಅಂಗನವಾಡಿಗಳು, ಸಂಚಾರಿ ವೈದ್ಯಕೀಯ ಘಟಕಗಳು, ವಿವಿಧೋದ್ದೇಶ ಕೇಂದ್ರಗಳು, ವನಧನ್ ಕೇಂದ್ರಗಳು ಮತ್ತು ವಿದ್ಯುತ್ ಯೋಜನೆಗಳ ಮಂಜೂರಾತಿ ಸೇರಿವೆ.

ಇದು ಬುಡಕಟ್ಟು ಜನರ ಕಲ್ಯಾಣಕ್ಕಾಗಿ ತ್ವರಿತ ಮತ್ತು ನಿರ್ಣಾಯಕ ವಿಧಾನದೆಡೆಗಿನ ಸರಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಶಿಕ್ಷಣ ಸಚಿವಾಲಯ ದಿಂದ ೧೦೦ ವಿದ್ಯಾರ್ಥಿ ನಿಲಯಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ೯೧೬ ಅಂಗನವಾಡಿಗಳು, ಆರೋಗ್ಯ ಸಚಿವಾಲಯ ದಿಂದ ೧೦೦ ಮೊಬೈಲ್ ವೈದ್ಯಕೀಯ ಘಟಕಗಳು, ೪೫೦ ವಿವಿಧೋದ್ದೇಶ ಕೇಂದ್ರಗಳು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ೪೦೫ ವನಧನ್ ಕೇಂದ್ರಗಳು, ಇಂಧನ ಸಚಿವಾಲಯದಿಂದ ೬೫೦೦ಕ್ಕೂ ಹೆಚ್ಚು ಕುಗ್ರಾಮಗಳಲ್ಲಿ ೭೦,೦೦೦ಕ್ಕೂ ಅಧಿಕ ಮನೆಗಳಿಗೆ ಮೊದಲ ಸುತ್ತಿನಲ್ಲೇ ವಿದ್ಯುತ್ ಯೋಜನೆಗಳನ್ನು ಅನುಮೋದಿಸಲಾಗಿದೆ.

ಜಲಜೀವನ್ ಮಿಷನ್ ಅಡಿಯಲ್ಲಿ, ಪ್ರತಿ ಮನೆಗೂ ಕೊಳಾಯಿ ನೀರು ಪೂರೈಸುವ ಕೆಲಸವೂ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಬುಡಕಟ್ಟು ಸಮುದಾಯಗಳ ಏಳಿಗೆಯ ಗುರಿಯನ್ನು ಹೊಂದಿರುವ ಪರಿವರ್ತಕ ಮೈತ್ರಿಯಲ್ಲಿ, ಟ್ರೈ-ಡ್ ಐಟಿಸಿಯೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲಾಗಿದೆ. ಇದು ಅತಿ ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು (ಎ-ಎಂಜಿಸಿ), ಅಗ್ರಿ ಬಿಸಿನೆಸ್, ಪೇಪರ್ ಬೋರ್ಡ್‌ಗಳು ಮತ್ತು ಪ್ಯಾಕೇಜಿಂಗ್ ಅನ್ನು ವ್ಯಾಪಿಸಿರುವ ಪರಿಣತಿಯನ್ನು ಹೊಂದಿರುವ ಪ್ರಮುಖ ಭಾರತೀಯ ಸಂಘಟನೆಯಾಗಿದೆ. ಈ ಸಹಭಾಗಿತ್ವವು ಬುಡಕಟ್ಟು ಗುಂಪುಗಳ ಆರ್ಥಿಕ
ಏಳಿಗೆಯನ್ನು ವೃದ್ಧಿಸಲು ಮಾತ್ರವಲ್ಲದೆ ಅವರ ಉತ್ಪನ್ನಗಳ ಮಾರುಕಟ್ಟೆ ವ್ಯಾಪ್ತಿಯನ್ನು ದೇಶೀಯವಾಗಿ ಮತ್ತು ಜಾಗತಿಕವಾಗಿ ವಿಸ್ತರಿಸುವ ಭಾರತ ಸರಕಾರದ ಬದ್ಧತೆಯನ್ನು ಸೂಚಿಸುತ್ತದೆ.

ಈ ಜಂಟಿ ಉಪಕ್ರಮದಡಿ ಆಂಧ್ರಪ್ರದೇಶ, ಒಡಿಶಾ, ಮೇಘಾಲಯ ಮತ್ತು ಜಾರ್ಖಂಡ್‌ನಲ್ಲಿ ೬೦ ವನಧನ್ ವಿಕಾಸ ಕೇಂದ್ರಗಳನ್ನು ಗುರಿಯಾಗಿಟ್ಟು ಕೊಂಡು ಪ್ರಾಯೋಗಿಕ ಯೋಜನೆಯನ್ನು ಆರಂಭಿಸಲು ಸಿದ್ಧತೆಗಳಾಗಿವೆ. ಈ ಕೇಂದ್ರಗಳು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು
(ಪಿವಿಟಿಜಿ) ಸೇರಿದಂತೆ ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಅರಿಶಿನದಂಥ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸಲು, ಆ ಮೂಲಕ ಸುಧಾರಿತ ಸಂಭಾವನೆಯನ್ನು ದೊರಕಿಸಿಕೊಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ವನಧನ್ ವಿಕಾಸ ಕೇಂದ್ರಗಳೊಂದಿಗೆ ತನ್ನ ವ್ಯಾಪಕ ಒಳಗೊಳ್ಳುವಿಕೆಯಿಂದಾಗಿ ಟ್ರೈ-ಡ್ ೧೫,೦೦೦ಕ್ಕೂ ಅಧಿಕ ಬುಡಕಟ್ಟು ಜನಾಂಗದವರಿಗೆ ಕಚ್ಚಾ ಸಾವಯವ ಅರಿಶಿನ ಸಂಗ್ರಹಣೆಗೆ ಅನುಕೂಲ ಕಲ್ಪಿಸಲು ಸಜ್ಜಾಗಿದೆ. ಸಾವಯವ ಪ್ರಮಾಣೀಕರಣ ಮತ್ತು ಇ-ಕಾಮರ್ಸ್ ಪ್ರಯತ್ನಗಳಿಗಾಗಿ ಟ್ರೈ-ಡ್ ನಿಽ
ಯನ್ನು ಹೊಂದಿದೆ. ಆದರೆ ಐಟಿಸಿ ಸಾವಯವ ಅರಿಶಿನವನ್ನು ತನ್ನ ಸ್ಥಾಪಿತ ಗ್ರಾಹಕ ಜಾಲದಲ್ಲಿ ಉಪ-ಬ್ರಾಂಡ್ ಆಗಿ ಸಂಯೋಜಿಸಿ ಮಾರಾಟ ಮಾಡು ತ್ತಿದೆ.

ಉತ್ತಮ ಜೀವನೋಪಾಯ ಅವಕಾಶಗಳನ್ನು ಉತ್ತೇಜಿಸುವ ಮತ್ತೊಂದು ಉಪಕ್ರಮದಡಿ, ಟ್ರೈ-ಡ್ ೧೦-೧೫ ಪಿವಿಜಿಟಿ ಉತ್ಪನ್ನಗಳನ್ನು ಹಂಗೇರಿ, ಘಾನಾ, ಹಾಂಕಾಂಗ್, ಸೈಪ್ರಸ್, ಬಾಂಗ್ಲಾದೇಶ, ನೇಪಾಳ, ಆಸ್ಟ್ರಿಯಾ, ವಿಯೆಟ್ನಾಂ, ಮಾರಿಷಸ್, ಪೋಲೆಂಡ್, ಲುಸಾಕ, ಯುಎಇ ಮತ್ತು ಸೆಷೆಲ್ಸ್‌ಗಳ
ಭಾರತೀಯ ರಾಯಭಾರ ಕಚೇರಿಗಳಿಗೆ ರವಾನಿಸಲಾಗುತ್ತಿದೆ. ಈ ಉತ್ಪನ್ನಗಳಿಗೆ ಕ್ಯೂಆರ್ ಕೋಡ್‌ಗಳನ್ನು ನೀಡಲಾಗಿದ್ದು, ಅವನ್ನು ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಲ್ಲಿ ಪ್ರದರ್ಶಿಸಲಾಗುವುದು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ವೇದಿಕೆ ಗಳನ್ನು ಸೃಷ್ಟಿಸಲಾಗುವುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಗ್ರಾಹಕರು ನೇರವಾಗಿ ಟ್ರೈ-ಡ್‌ನ ರಫ್ತು ಪೋರ್ಟಲ್ www.tribesindia.org ನೊಂದಿಗೆ ಸಂಪರ್ಕ ಹೊಂದುತ್ತಾರೆ.

ಈ ಉಪಕ್ರಮ ಪಿವಿಟಿಜಿಗಳ ಕರಕುಶಲ ಕಲೆಯನ್ನು ಉತ್ತೇಜಿಸುವುದಲ್ಲದೆ ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳ ಮೂಲಕ ಉತ್ಪನ್ನಗಳಿಗೆ ಬೇಡಿಕೆ ಸಲ್ಲಿಸುವುದನ್ನು ಪ್ರೋತ್ಸಾಹಿಸುತ್ತದೆ. ಟ್ರೈ-ಡ್‌ನ ಈ ಪ್ರಯತ್ನವು ಕೇವಲ ಆರ್ಥಿಕ ಸಬಲೀಕರಣವನ್ನು ಪೋಷಿಸುವುದೇ ಅಲ್ಲದೆ, ಈ ಆದಿವಾಸಿ ಗಳ ವಿಶಿಷ್ಟ ಕರಕುಶಲ ಉತ್ಪನ್ನಗಳಿಗೆ ಜಾಗತಿಕ ಉಪಸ್ಥಿತಿಯನ್ನು ದೊರಕಿಸಿಕೊಡುತ್ತದೆ. ಫ್ಯಾಷನ್ ಪರಂಪರೆ ಮತ್ತು ನಾವೀನ್ಯವು ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಆಕರ್ಷಿಸುತ್ತವೆ ಮತ್ತು ಆತ್ಮನಿರ್ಭರ ಭಾರತದ ದೂರದೃಷ್ಟಿ ಸಾಕಾರಕ್ಕೆ ವಿಸ್ತೃತ ಕೊಡುಗೆ ನೀಡುತ್ತವೆ.

Sಟm ಟ್ಛ ಊಟ್ಟಞ ಪಿವಿಜಿಟಿಗಳು ನೆಲೆಸಿರುವ ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಸಮರ್ಪಕ ನೀರಿನ ಲಭ್ಯತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ೧೦೦ ಜಿಲ್ಲೆಗಳ ಬುಡಕಟ್ಟು ಪ್ರದೇಶಗಳಲ್ಲಿ ೧೦೦೦ ನೀರಿನ ಬುಗ್ಗೆ(ಜಲಮೂಲ)ಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಜಾಗೃತಿ ಮೂಡಿಸುವುದು, ಪ್ಯಾರಾ-ಹೈಡ್ರಾಲಜಿಸ್ಟ್‌ಗಳಾಗಿ ಬುಡಕಟ್ಟು ಯುವಕರನ್ನು ಕೌಶಲಗೊಳಿಸುವುದು, ಅಸ್ತಿತ್ವದಲ್ಲಿರುವ ಬುಗ್ಗೆಗಳ ಆವಿಷ್ಕಾರ ಗಳನ್ನು ಆ ಪ್ರದೇಶಗಳಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಅದರ ಪಾಲುದಾರರಿಂದ ಕೈಗೊಳ್ಳುವುದು ಇತ್ಯಾದಿ ಚಟುವಟಿಕೆಗಳಿವೆ. ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಸರಕಾರದೊಂದಿಗೆ ಸಂಯೋಜಿಸಿದ ಅತ್ಯಂತ ವಿಶಿಷ್ಟ ಉಪಕ್ರಮ ಇದಾಗಿದೆ.

ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸುವ ಐತಿಹಾಸಿಕ ಕ್ರಮವಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು
೨೦೨೩ರ ಜೂನ್ ೨೩ರಂದು ರಾಷ್ಟ್ರಪತಿ ಭವನದಲ್ಲಿ ೭೫ ಪಿವಿಜಿಟಿ ಸಮುದಾಯಗಳ ಅತಿಥಿಗಳನ್ನು ಸನ್ಮಾನಿಸಿದರು. ಈ ಕಾರ್ಯಕ್ರಮವು ಪಿವಿಜಿಟಿಗಳು ಎದುರಿಸುತ್ತಿರುವ ಅನನ್ಯ ಸವಾಲುಗಳನ್ನು ಗುರುತಿಸಿದ್ದು ಮಾತ್ರವಲ್ಲದೆ ಅವರ ಆತಂಕಗಳನ್ನು ಆಲಿಸುವ ಮತ್ತು ಕಾರ್ಯನಿರ್ವಹಿಸುವ ವೇದಿಕೆ ಯನ್ನು ಸೃಷ್ಟಿಸುವ ಬದ್ಧತೆಯನ್ನು ಪ್ರದರ್ಶಿಸಿತು.

ಪಿಎಂ ಜನಮನ್ ಅಭಿಯಾನ, ಜನಜಾತಿಯ ಗೌರವ ದಿನ ಆಚರಣೆ, ವಿಕಸಿತ ಭಾರತ ಸಂಕಲ್ಪ ಯಾತ್ರೆ, ರಾಷ್ಟ್ರಪತಿ ಭವನದಲ್ಲಿ ೭೫ ಪಿವಿಟಿಜಿ ಸದಸ್ಯರಿಗೆ ರಾಷ್ಟ್ರಪತಿಗಳ ಆಹ್ವಾನ ಮತ್ತು ಅವರೊಂದಿಗೆ ವ್ಯಾಪಕ ಸಂವಾದ ಮತ್ತು ಕೊನೆಯದಾಗಿ ಪಿಎಂ ಜನಮನ್ ಆರಂಭವು ದೇಶದ ಆದಿವಾಸಿ ಮತ್ತು ಇತರ
ಅಂಚಿನಲ್ಲಿರುವ ವರ್ಗಗಳಡೆಗೆ ಸರಕಾರದ ಬದ್ಧತೆ ಮತ್ತು ಸೂಕ್ಷ್ಮತೆಯ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ. ರಾಷ್ಟ್ರವು ಈ ಹೊಸ ಬದಲಾವಣೆ ಯನ್ನು ಸ್ವೀಕರಿಸುತ್ತಿರುವಾಗ, ಪ್ರಧಾನಿ ಮೋದಿ ಅವರು ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. ಅವೆಂದರೆ ‘ನಮ್ಮ ಪ್ರಯಾಣವು ದೀರ್ಘವಾಗಿದೆ,
ಆದರೆ ನಮ್ಮ ಸಂಕಲ್ಪವು ದೃಢವಾಗಿದೆ. ನಾವು ಒಗ್ಗೂಡಿ ಯಾವುದೇ ಸಮುದಾಯವನ್ನು ಹಿಂದುಳಿಯಲು ಬಿಡದೆ ಭವಿಷ್ಯದತ್ತ ಸಾಗುತ್ತಿದ್ದೇವೆ ಮತ್ತು ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಸಮಾನ ಪಾಲುದಾರ ನಾಗಿರುತ್ತಾನೆ’ ಎಂಬುದು.

(ಲೇಖಕರು ಕೇಂದ್ರ ಬುಡಕಟ್ಟು ವ್ಯವಹಾರಗಳು, ಕೃಷಿ
ಮತ್ತು ರೈತರ ಕಲ್ಯಾಣ ಸಚಿವರು)