ದಿಲೀಪ್‌ಕುಮಾರ್ ಸಂಪಡ್ಕ ಶಿಕ್ಷಕರು, ಹವ್ಯಾಸಿ ಬರಹಗಾರರು
ಶಿಕ್ಷಣ ಕ್ಷೇತ್ರದಲ್ಲಿ ಹೂಡುವ ಬಂಡವಾಳವೂ ಯಾವುದೇ ಲಾಭವನ್ನು ಗಳಿಸಿಕೊಡಲು ಸಾಧ್ಯವಿಲ್ಲ ಎಂಬದನ್ನು ಬಲವಾಗಿ ನಂಬಲಾಗಿದೆ. ಅದು ನಿಜ ಕೂಡ. ಆದರೆ, ದೂರದೃಷ್ಟಿಿಯನ್ನು ಇಟ್ಟುಕೊಂಡು ನೋಡುವುದಾದರೆ ಪ್ರತಿ ದೇಶವೂ ಭವಿಷ್ಯತ್ತಿಿನಲ್ಲಿ ಪ್ರಗತಿಪರ ಮತ್ತು ಅಭಿವೃದ್ಧಿಿಯ ಪಥದ ಉತ್ತುಂಗತೆಯನ್ನು ತಲುಪಲು ಖಂಡಿತವಾಗಿಯೂ ಶಿಕ್ಷಣಕ್ಕೆೆ ಭದ್ರ ಅಡಿಪಾಯವನ್ನು ಆರಂಭಿಕ ಹಂತದಲ್ಲಿಯೇ ಹಾಕಬೇಕಾಗುತ್ತದೆ. ನಮ್ಮ ದೇಶದ ಪರಿಸ್ಥಿಿತಿಯನ್ನು ಗಮನಿಸುವುದಾದರೆ, ಪ್ರತಿ ರಾಜ್ಯಗಳು ಏಕರೂಪದಲ್ಲಿ ಶೈಕ್ಷಣಿಕ ಬೆಳವಣಿಗೆಯನ್ನು ಮತ್ತು ಸಾಧನೆಯನ್ನು ತೋರಿಲ್ಲ. ಸರಕಾರವೂ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಿಕೊಂಡಿದ್ದರೂ ಸಹ ನೀರಿಕ್ಷಿತ ಫಲಿತಾಂಶವನ್ನು ತಲುಪಿಲ್ಲ. ಆದುದರಿಂದ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ಮಾಡಿ, ಸಮಸ್ಯೆೆಗಳನ್ನು ಪತ್ತೆೆಹಚ್ಚಿಿ ಅದಕ್ಕೆೆ ಪರಿಹಾರ ಕಂಡು ಕೊಳ್ಳಬೇಕಿದೆ.
ಭಾರತದಲ್ಲಿ ಈ ಎಲ್ಲಾಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಇತ್ತೀಚಿಗೆ ನೀತಿ ಆಯೋಗವು ‘ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ’ *(ಖಉಕಿಐ)ಯ ವರದಿಯನ್ನು ಬಿಡುಗಡೆ ಮಾಡಿದೆ. *ಖಉಕಿಐ ಯನ್ನು ಅಭಿವೃದ್ಧಿಿಪಡಿಸಿರುವ ಮುಖ್ಯ ಉದ್ದೇಶ ಪ್ರತಿ ರಾಜ್ಯ ಮತ್ತು ಕೇಂದ್ರಾಾಡಳಿತ ಪ್ರದೇಶಗಳ ಶಾಲೆಗಳ ಕಾರ್ಯ ನಿರ್ವಹಣೆಯನ್ನು ಮೌಲ್ಯಮಾಪನ ಮಾಡುವುದಾಗಿದೆ. ಈ ರಾಜ್ಯಗಳ ನಾನಾ ಅಂಶಗಳಲ್ಲಿನ ಬಲ ಮತ್ತು ದೌರ್ಬಲ್ಯಗಳನ್ನು ಆಧರಿಸಿ ಸೂಚ್ಯಂಕವನ್ನು ನೀಡಲಾಗುತ್ತದೆ. ಇದು ರಾಜ್ಯಗಳ ಮಧ್ಯ ಸ್ಪೂರ್ತಿ ಮತ್ತು ಸಹಕಾರಿಯ ಸಂಯುಕ್ತ ವ್ಯವಸ್ಥೆೆಯನ್ನು ನಿರ್ಮಾಣ ಮಾಡುತ್ತದೆ. ಅಲ್ಲದೆ, ಒಂದು ರಾಜ್ಯದ ಶೈಕ್ಷಣಿಕ ಪ್ರಗತಿ, ಹೊಸ ಪ್ರಯೋಗಗಳು ಮತ್ತು ಜ್ಞಾಾನವನ್ನು ಇನ್ನೊೊಂದು ರಾಜ್ಯಗಳಿಗೆ ಹಂಚಿಕೆ ಮಾಡಲು ಉಪಯುಕ್ತವಾಗುತ್ತದೆ. ಮುಂದುವರಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೊಸ ನಿಯಮಗಳನ್ನು ರೂಪಿಸುವ, ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಿಸುವುದು ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳುವ, ಮೂಲ ಸೌಕರ್ಯಗಳನ್ನು ಸುಧಾರಿಸುವ, ಆಡಳಿತಾತ್ಮಕ ಪ್ರಕ್ರಿಿಯೆಗಳನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶವನ್ನು ಹೊಂದಿದೆ.
ಇಲ್ಲಿ ಶಾಲೆಗಳ ಗುಣಮಟ್ಟವನ್ನು ಎಂಎಚ್‌ಆರ್‌ಡಿ, ವಿಶ್ವ ಬ್ಯಾಾಂಕ್ ಮತ್ತು ತಜ್ಞರು ಸಿದ್ಧಪಡಿಸಿದ ಸುಮಾರು 30 ಸೂಚ್ಯಂಕಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ಎರಡು ವಿಭಾಗಗಳಲ್ಲಿ ಮೌಲ್ಯಮಾಪನವನ್ನು ವಿಂಗಡಿಸಲಾಗಿದೆ. ಮೊದಲನೆಯ ವಿಭಾಗದಲ್ಲಿ ಕಲಿಕೆಯ ಫಲಿತಾಂಶ, ಪ್ರವೇಶ ಫಲಿತಾಂಶ, ಮೂಲ ಸೌಕರ್ಯಗಳು ಮತ್ತು ಇಕ್ವಿಿಟಿಗಳನ್ನು ಒಳಗೊಂಡಿರುತ್ತದೆ. ಎರಡನೆಯ ವಿಭಾಗದಲ್ಲಿ ವಿದ್ಯಾಾರ್ಥಿ ಮತ್ತು ಶಿಕ್ಷಕ ಹಾಜರಾತಿ, ಶಿಕ್ಷಕರ ಲಭ್ಯತೆ, ಆಡಳಿತಾತ್ಮಕ ಅರ್ಹತೆ, ತರಬೇತಿ, ಹೊಣೆಗಾರಿಕೆ, ಪಾರದರ್ಶಕತೆಯ ಸೂಚ್ಯಂಕಗಳನ್ನು ಹೊಂದಿದೆ. ಈ ಎಲ್ಲಾಾ ಅಂಶಗಳನ್ನು ವಿಮರ್ಶೆ ಮಾಡಿ ರಾಜ್ಯಗಳಿಗೆ ಸೂಚ್ಯಂಕಗಳನ್ನು ನೀಡಲಾಗುತ್ತದೆ.
ಪ್ರಸ್ತುತ ನೀತಿ ಆಯೋಗವು ಬಿಡುಗಡೆ ಮಾಡಿರುವ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕದಲ್ಲಿ *(ಖಉಕಿಐ) ಕರ್ನಾಟಕವು ಮೂರನೇ ಸ್ಥಾಾನ ಪಡೆದಿದೆ. ಈ ಮೌಲ್ಯಮಾಪನವನ್ನು ದೊಡ್ಡ ರಾಜ್ಯಗಳು, ಚಿಕ್ಕ ರಾಜ್ಯಗಳು ಹಾಗೂ ಕೇಂದ್ರಾಾಡಳಿತ ಪ್ರದೇಶಗಳು-ಹೀಗೆ ಮೂರು ವಿಭಾಗಗಳಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಕೇರಳವು ಶೇ.76.6 ರಷ್ಟು ಅಂಕಗಳೊಡನೆ ಮೊದಲ ಸ್ಥಾಾನವನ್ನೂ, ರಾಜಸ್ತಾಾನವು ಶೇ.72 ಎರಡನೇ ಸ್ಥಾಾನವನ್ನೂ ಪಡೆದಿದೆ. ಕರ್ನಾಟಕವು ಶೇ.70 ಅಂಕಗಳೊಡನೆ ಮೂರನೇ ಸ್ಥಾಾನದಲ್ಲಿದೆ. ಸಣ್ಣ ರಾಜ್ಯಗಳ ಪೈಕಿ ಮಣಿಪುರ ಆಗ್ರಸ್ಥಾಾನದಲ್ಲಿದೆ. ಕೇಂದ್ರಾಾಡಳಿತ ಪ್ರದೇಶಗಳಲ್ಲಿ ಚಂಡೀಗಡ ನಂಬರ್ ಒನ್ ಎನಿಸಿದೆ. ನಾನಾ ಅಂಶಗಳಲ್ಲಿ ಬಲ ಮತ್ತು ದೌರ್ಬಲ್ಯ ಕುರಿತ ಅಂಕಿ ಅಂಶಗಳನ್ನು ರಾಜ್ಯಗಳಿಗೆ ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಿಸಲು ನೆರವಾಗುವುದು ಈ ಸೂಚ್ಯಂಕದ ಉದ್ದೇಶ ಎಂದು ನೀತಿ ಆಯೋಗದ ಅಧ್ಯಕ್ಷರಾದ ಅಮಿತಾಭ್ ಕಾಂತ್ ತಿಳಿಸಿದ್ದಾಾರೆ.
ಇನ್ನು ಈ ವರದಿಯಲ್ಲಿ ಕಲಿಕೆಯ ಫಲಿತಾಂಶವನ್ನು 3, 5 ಮತ್ತು 8 ವಿದ್ಯಾಾರ್ಥಿಗಳಿಗೆ ರಾಷ್ಟ್ರ ಮಟ್ಟದ ‘ರಾಷ್ಟೀಯ ಸಾಧನಾ ಸಮೀಕ್ಷೆ’ (ಎನ್‌ಎಎಸ್) ಆಧರಿಸಿ ಅವಲೋಕಿಸಲಾಗಿದೆ. ಇದರಲ್ಲಿ ಹಲವು ರಾಜ್ಯಗಳು ಉತ್ತಮ ಅಂಕಗಳನ್ನು ಗಳಿಸಿವೆ. ಪ್ರೀ-ನರ್ಸರಿ ಶಾಲೆ, ಒಂದನೇ ತರಗತಿ ಮತ್ತು ಎರಡನೆ ತರಗತಿಗಳು ಮೂಲಭೂತ ಕಲಿಕೆಗೆ ಅತೀ ಮುಖ್ಯವಾಗಿದೆ ಎಂದು ತಿಳಿಸಿವೆ. ಮಕ್ಕಳ ಪ್ರವೇಶ ಫಲಿತಾಂಶವೂ ಸರಸಾರಿ ಶೇ.90 ರಷ್ಟು ಸಾಧಿಸಿ ಉತ್ತಮ ರೀತಿಯಲ್ಲಿರುವುದು ಕಂಡು ಬಂದಿದೆ. ಮೂಲ ಸೌಕರ್ಯಗಳ ವಿಚಾರವನ್ನು ನೋಡಿದಾಗ ಒಂದು ಮಟ್ಟದಲ್ಲಿ ಕಂಪ್ಯೂೂಟರ್ ಅಧಾರಿತ ಕಲಿಕೆ, ಲೈಬ್ರರಿ ಮತ್ತು ಕಂಪ್ಯೂೂಟರ್ ಲ್ಯಾಾಬ್‌ಗಳಿಗೆ ಮಾತ್ರ ಹೆಚ್ಚು ಒತ್ತು ನೀಡಿರುವಂತೆ ಬಾಸವಾಗುತ್ತದೆ. ಹಲವು ರಾಜ್ಯಗಳು ಕಡಿಮೆ ಪ್ರಮಾಣದಲ್ಲಿ ಇವುಗಳನ್ನು ಬಳಕೆ ಮಾಡುತ್ತಿವೆ.
ನಾನಾ ಅಂಶಗಳಲ್ಲಿ ಬಲ ಮತ್ತು ದೌರ್ಬಲ್ಯ ಕುರಿತ ಅಂಕಿ ಅಂಶಗಳನ್ನು ರಾಜ್ಯಗಳಿಗೆ ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಿಸಲು ನೆರವಾಗುವುದು ಈ ಸೂಚ್ಯಂಕದ ಉದ್ದೇಶ ಎಂದು ನೀತಿ ಆಯೋಗದ ಅಧ್ಯಕ್ಷರಾದ ಅಮಿತಾಭ್ ಕಾಂತ್ ತಿಳಿಸಿದ್ದಾಾರೆ.
ಹಲವು ರಾಜ್ಯಗಳಲ್ಲಿ ಏಕೋಪಾಧ್ಯಾಾಯ ಶಾಲೆಗಳು ಚಾಲ್ತಿಿಯಲ್ಲಿರುವ ಬಗ್ಗೆೆ ಉಲ್ಲೇಖವಿದೆ. ಆಂಧ್ರ ಪ್ರದೇಶ, ಗೋವಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹೆಚ್ಚು ಏಕೋಪಾಧ್ಯಾಾಯ ಶಾಲೆಗಳಿವೆ. ದೇಶದಲ್ಲಿ ಆರು ರಾಜ್ಯಗಳಲ್ಲಿ ಯಾವುದೇ ಏಕೋಪಾಧ್ಯಾಾಯ ಶಾಲೆಗಳಿಲ್ಲದಿರುವುದು ಬೆಳಕಿಗೆ ಬಂದಿದೆ. ಇನ್ನು ಆರ್‌ಟಿಇ ಕಾಯಿದೆಯ ಪ್ರಕಾರ ಶಿಕ್ಷಕರ ನೇಮಕಾತಿ ಎಲ್ಲಾಾ ರಾಜ್ಯಗಳಲ್ಲಿ ನಡೆಯುತ್ತಿಿದೆ. ಮುಖ್ಯ ಶಿಕ್ಷಕರ ನೇಮಕಾತಿಯೂ ಮೇರಿಟ್ ಆಧಾರದಲ್ಲಿ ಕೆಲವೇ ರಾಜ್ಯಗಳಲ್ಲಿ ನಡೆಯುತ್ತಿಿದೆ. ಶೇ.76.9 ರಿಂದ ಶೇ.90 ರಷ್ಟು ವಿದ್ಯಾಾರ್ಥಿಗಳು ಪ್ರಾಾಥಮಿಕ ಹಂತದಿಂದ ಹಿರಿಯ ಪ್ರಾಾಥಮಿಕ ಶಾಲಾ ಹಂತದ ಶಿಕ್ಷಣವನ್ನು ಮುಂದುವರಿ ವೃತ್ತಿಿಪರ ಶಿಕ್ಷಣಕ್ಕೆೆ ಉತ್ತಮ ಪ್ರತಿಕ್ರಿಿಯೆ ಇದೆ. ಶಿಕ್ಷಕರಿಗೆ ತರಬೇತಿಗಳನ್ನು ಎನ್‌ಸಿಇಆರ್‌ಟಿ ಮತ್ತು ಜಿಲ್ಲಾಾ ಹಂತದ ಡಯಟ್‌ನಲ್ಲಿ ಬಹುತೇಕ ಎಲ್ಲಾಾ ಜಿಲ್ಲೆೆಗಳಲ್ಲಿ ನಡೆಯುತ್ತಿಿದೆ. ಇದು ಈ ಸೂಚ್ಯಂಕದ ಮುಖ್ಯ ಅಂಶಗಳಾಗಿವೆ.
ಒಟ್ಟಾಾರೆಯಾಗಿ ಹಲವು ಅಂಶಗಳನ್ನು ವಿಮರ್ಶಿಸಲಾಗಿದೆ. ಆದರೆ, ಪ್ರಸ್ತುತ ಸನ್ನಿಿವೇಶವನ್ನು ಗಮನಿಸಿದಾಗ ಮೌಲ್ಯಮಾಪನ ಮಾಡುವ ಹಲವು ಮಾನದಂಡಗಳ ಬದಲಾವಣೆಯಾಗಬೇಕಿದೆ. ಇಲ್ಲಿ ಕಲಿಕೆ ಸಾಮರ್ಥ್ಯಗಳನ್ನು ಪರೀಕ್ಷಿಸಲು ಆಯ್ದ ಶಾಲೆಗಳ 3, 5 ಮತ್ತು 8 ತರಗತಿಗಳಿಗೆ ಮಾತ್ರ ಸೀಮಿತವಾಗಿರದೆ, ಪ್ರತಿ ಶಾಲೆಯ ಎಲ್ಲಾಾ ತರಗತಿಗಳ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಬೇಕು. ಬರವಣಿಗೆಯ ಸಾವರ್ಥ್ಯಗಳನ್ನು ಸಹ ಪರೀಕ್ಷೆಗೆ ಆಯ್ದಕೊಳ್ಳಬೇಕು. ವಿಷಯವಾರು ಶಿಕ್ಷಕರ ನೇಮಕಾತಿಯನ್ನು ಕಡ್ಡಾಾಯಗೊಳಿಸಬೇಕು. ಶಿಕ್ಷಕರಿಗೆ ತಾವು ಆಯ್ಕೆೆಯಾದ ವಿಷಯಗಳಿಗೆ ಮಾತ್ರ ತರಬೇತಿಗಳನ್ನು ನೀಡಲು ವ್ಯವಸ್ಥೆೆ ಮಾಡಬೇಕು. ಮೂಲ ಸೌಕರ್ಯಗಳ ಸೂಚ್ಯಂಕಗಳಿಗೆ ಶಾಲೆಯ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆೆ, ಆಟದ ಮೈದಾನ, ವಿದ್ಯಾಾರ್ಥಿಗಳಿಗೆ ಇರುವ ಆಸನದ ವ್ಯವಸ್ಥೆೆ, ವಿಜ್ಞಾಾನ ಪ್ರಾಾಯೋಗಾಲಯಗಳು ಇವುಗಳನ್ನು ಸಹ ಸೇರಿಸಬೇಕು. ಏಕೋಪಾಧ್ಯಾಾಯ ಶಾಲೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು. ಈ ಎಲ್ಲಾಾ ಅಂಶಗಳನ್ನು ಒಳಗೊಂಡ ಶಾಲಾ ಮೌಲ್ಯಮಾಪನ ಮಾಡುವುದು ಹಾಗೇಯೇ ಯಾವ ಶಾಲೆಗಳು ನಿರೀಕ್ಷಿತ ಮಟ್ಟವನ್ನು ತಲುಪದ ಶಾಲೆಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲು ಕ್ರಿಿಯಾ ಯೋಜನೆಯನ್ನು ರೂಪಿಸಬೇಕಿದೆ. ಹಾಗಿದ್ದಲ್ಲಿ ಮಾತ್ರ ನೀತಿ ಆಯೋಗದ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ *(ಖಉಕಿಐ) ಯ ಮುಖ್ಯ ಆಶಯವು ಈಡೇರುತ್ತದೆ.
.