Thursday, 12th September 2024

ಕಾಸು ಕೊಟ್ಟಿಲ್ಲವೇ? ಅವರಿಗೇನು ಸಂಬಳ ಬರೋಲ್ವೇ?

ಶಿಶಿರ ಕಾಲ

shishirh@gmail.com

ಅರ್ಹತಾ ಪ್ರಜ್ಞೆ, ನಿರೀಕ್ಷೆ ಇವು ಹೆಚ್ಚಿನ ಬೆಲೆ ತೆತ್ತು ಪಡೆಯುವ ಸೌಲಭ್ಯಗಳಲ್ಲಿ ಜಾಸ್ತಿಯಾಗಿರುತ್ತವೆ. ಇಲ್ಲೆಲ್ಲ ನಮ್ಮ ನಡವಳಿಕೆ ವಿಚಿತ್ರವಾಗಿ ಬದಲಾಗಿರುತ್ತದೆ. ಅಲ್ಲಿ ಉಳಿದವರಂತೆ ಸೌಮ್ಯವಾಗಿ, ತೀರಾ ನಾಗರಿಕರಾಗಿ ವರ್ತಿಸುವುದು ಒಂದು ಕಡೆ. ಆದರೆ ಅಂಥ ಕಡೆ ಚಿಕ್ಕ ಪ್ರಮಾದವನ್ನೂ ನಾವು ಸಹಿಸುವುದಿಲ್ಲ. ‘ಕಾಸು ಕೊಟ್ಟಿಲ್ವೇ?’ ಎಂಬ ಪ್ರಶ್ನೆ ಅಲ್ಲಿ ಬರುತ್ತದೆ.

ಭಾರತೀಯರೆಂದರೆ ಹೀಗೆ, ಅಮೆರಿಕನ್ನರೆಂದರೆ ಹಾಗೆ, ಫ್ರೆಂಚರು ಮಹಾ ಸಿಡುಕರು, ಜರ್ಮನ್ನರು ಕೆಟ್ಟ ಒರಟು, ಉತ್ತರ ಭಾರತದವರು ಜೋರು, ದಕ್ಷಿಣ ಭಾರತದವರು ಸೌಮ್ಯ ಒಂಚೂರು, ಆ ಜಾತಿಯವರೆಂದರೆ ಅವರದ್ದು ದುಡಿಮೆಗಿಂತ ಖರ್ಚು ಜಾಸ್ತಿ, ಈ ಜಾತಿಯವರೆಂದರೆ ವ್ಯಾಪಾರ, ಜಿಪುಣತನ. ಹೀಗೆ ಕೆಲವು ಸ್ಥಾನಿಕ ಗುಣಗಳನ್ನು ಒಂದಿಡೀ ಜನಸಮೂಹಕ್ಕೆ ಆರೋಪಿ ಸುವುದು ಸಾಮಾನ್ಯ. ಇದು ತಪ್ಪು ಎನ್ನುವವರಿದ್ದಾರೆ. ಆದರೆ ಅಂಥ ಆರೋಪಗಳನ್ನು ನಮ್ಮ ಅಂತರದೃಷ್ಟಿ ಯಾವುದೇ ಪುರಾವೆಯಿಲ್ಲದೆ ಒಪ್ಪುತ್ತದೆ. ಸಮಾಜವೂ ಅಷ್ಟೆ, ಇಲ್ಲವೆನ್ನುತ್ತ ಹಾಗೆಯೇ ಗುರುತಿಸುತ್ತದೆ.

ನಾನು ಗ್ರಹಿಸಿದ ಅಂಥ ಸಾಮೂಹಿಕ ಗುಣಗಳಲ್ಲಿ ಒಂದು Sense of entitlement. ತಾನು ಇದನ್ನು ಪಡೆಯಲು ಅರ್ಹ, ಹಾಗಾಗಿ ಅದು ದಕ್ಕಲೇಬೇಕು ಎನ್ನುವ ವ್ಯಕ್ತಿಯ ಹಕ್ಕು ಪ್ರತಿಪಾದನೆಯ ಗುಣ. ಇದು ನಮ್ಮವರಲ್ಲಿ ಸ್ವಲ್ಪ ಜಾಸ್ತಿ. ಪರಕೀಯರ ಆಡಳಿತದಲ್ಲಿ ಧ್ವನಿ ಎತ್ತಿದವನಿಗಷ್ಟೇ ಸೌಲಭ್ಯ ಸಿಗುವ ಕಾಲಘಟ್ಟವನ್ನು ಈಗ ತಾನೇ ದಾಟಿ ಬಂದಿದ್ದೇ ವಲ್ಲ. ಸ್ವಾತಂತ್ರ್ಯ ಹೋರಾಟದ ಮೂಲ ಹಿನ್ನೆಲೆಯೇ ನಾವು ಸ್ವಾತಂತ್ರ್ಯಕ್ಕೆ ಅರ್ಹರು- Sense of entitlement of freedom ಎಂಬ ವಿಚಾರವಲ್ಲವೇ? ಸ್ವಾತಂತ್ರ್ಯ ಬಂದ ನಂತರ, ಈಗ ಕೂಡ ಸಿಗಬೇಕಾದದ್ದು ಸಿಗದಿದ್ದಲ್ಲಿ ನಾವು ಭಾರತೀಯರು ಉಳಿದ ದೇಶದವರಿಗಿಂತ ಜಾಸ್ತಿಯೇ ಪ್ರತಿಕ್ರಿಯಿಸುತ್ತೇವೆ.

ಕಾಲ ಕಳೆದಂತೆ ನಮ್ಮೊಳಗಿನ ಅರ್ಹತಾ ಪ್ರಜ್ಞೆ ಕೆಲವು ಮಾರ್ಪಾಡುಗಳನ್ನು ಕಂಡಿದೆ, ಅನ್ಯರೂಪಗಳನ್ನು ಪಡೆದಿದೆ. ನಾವು ಹಣ ಕೊಟ್ಟು ಪಡೆಯುವ ಯಾವುದೇ ಸೇವೆ, ಸೌಲಭ್ಯಗಳಲ್ಲಿ ಸ್ವಲ್ಪವೇ ವ್ಯತ್ಯಯವಾದರೂ ‘ಕಾಸು ಕೊಟ್ಟಿಲ್ಲವೇನು?’ ಎಂದು ಪ್ರಶ್ನಿಸು ತ್ತೇವೆ. ಸರಕಾರ ಏನೇ ಮಾಡಲಿ, ಬಿಡಲಿ, ‘ತೆರಿಗೆ ಕಟ್ಟೋಲ್ವೇ?’ ಎಂದು ಕೇಳುತ್ತೇವೆ. ಮನೆಗೆಲಸದರಿಗೆ ಸಂಬಳ ಕೊಡೋಲ್ವೇ? ಮಾಸ್ತರು, ಗುಮಾಸ್ತರು ಇವರಿಗೆಲ್ಲ ‘ಸರಕಾರ ಸಂಬಳ ಕೊಡೋಲ್ವೇ?’, ಡಾಕ್ಟರು, ನರ್ಸ್, ಆಸ್ಪತ್ರೆಗೆ ‘ಅಷ್ಟೊಂದು ಬಿಲ್ ಕಟ್ಟೋಲ್ವೇ?’, ‘ಉಚಿತ ಭಾಗ್ಯಗಳು, ವೋಟ್ ಹಾಕಿ ಆರಿಸಿಲ್ಲವೇ?’ ಇದೆಲ್ಲವೂ ಈ ವಿಚಾರದ ಬಿಗಡಾಯಿಸಿದ ರೂಪಗಳು! ಹಕ್ಕು, ದಕ್ಕಬೇಕಾದ ಅರ್ಹತೆ ಇತ್ಯಾದಿ ವಿಷಯಗಳಲ್ಲಿ ರಾಜಿಯಾಗುವ ಜಾಯಮಾನ ನಮ್ಮಲ್ಲಿ ಕಡಿಮೆ.
Read E-Paper click here

ಕೆಲವೊಮ್ಮೆ ಇದರಿಂದ ಇನ್ನೊಬ್ಬರ ಹಕ್ಕಿಗೆ, ಸಮಾಜಕ್ಕೆ ಧಕ್ಕೆಯಾದರೂ ನಾವು ತಲೆಕೆಡಿಸಿಕೊಳ್ಳದಷ್ಟು ಅಸಂವೇದಿತ್ವ. ನಮ್ಮಲ್ಲಿ ಖಛ್ಞಿoಛಿ ಟ್ಛ ಛ್ಞಿಠಿಜಿಠ್ಝಿಛಿಞಛ್ಞಿಠಿ ಅತ್ಯಂತ ಜಾಗೃತ ವಾಗುವುದು -ವ್‌ಸ್ಟಾರ್ ಹೋಟೆಲ್ಲಿಗೆ ಹೋದಾಗ, ದುಬಾರಿ ವಸ್ತುಗಳನ್ನು ಕೊಳ್ಳುವಾಗ, ವಿಮಾನ ಪ್ರಯಾಣ ಮಾಡುವಾಗ ಇತ್ಯಾದಿ. ಅರ್ಹತಾ ಪ್ರಜ್ಞೆ, ನಿರೀಕ್ಷೆ ಇವು ಹೆಚ್ಚಿನ ಬೆಲೆ ತೆತ್ತು ಪಡೆಯುವ ಸೌಲಭ್ಯಗಳಲ್ಲಿ ಜಾಸ್ತಿಯಾಗಿರುತ್ತವೆ. ಇಲ್ಲೆಲ್ಲ ನಮ್ಮ ನಡವಳಿಕೆ ವಿಚಿತ್ರವಾಗಿ ಬದಲಾಗಿರುತ್ತದೆ. ಅಲ್ಲಿ ಉಳಿದ ವರಂತೆ ಸೌಮ್ಯ ವಾಗಿ, ತೀರಾ ನಾಗರಿಕರಾಗಿ ವರ್ತಿಸುವುದು ಒಂದು ಕಡೆ. ಆದರೆ ಅಂಥ ಜಾಗಗಳಲ್ಲಿ ಒಂದು ಚಿಕ್ಕ ಪ್ರಮಾದ ವನ್ನೂ ನಾವು ಸಹಿಸುವುದಿಲ್ಲ. ಅಲ್ಲಿ ‘ಕಾಸು ಕೊಟ್ಟಿಲ್ವೇ?’ ಎಂಬ ಪ್ರಶ್ನೆ.

ಸಾಮಾನ್ಯವಾಗಿ ಇಂಥ ಜಾಗಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಗಲಾಟೆಗಳಾದಾಗ ನಾವು ಹೀಗೆ ಹೇಳುವುದನ್ನು ಕೇಳಿರುತ್ತೇವೆ- ‘ಇವರೇನು ಪುಕ್ಸಟ್ಟೆ ಕೊಡುತ್ತಿದ್ದಾರೆಯೇ? ಕಾಸು ಇಸ್ಕೊಂಡ್ ಮೇಲೆ ಕೊಡ್ಬೇಕಪ್ಪ. ಇಲ್ಲದಿದ್ರೆ ಅಷ್ಟೆಲ್ಲ ಹಣ ಏಕೆ ಪಡೆಯ ಬೇಕು?’. ಇಲ್ಲಿ ಕೆಲವರು ತೀರಾ ಅಲ್ಪರಂತೆ ವ್ಯವಹರಿಸುತ್ತಾರೆ. ಹಾಗಂತ ಅವರಿಗೇನು ಹಣದ ಕೊರತೆ, ಬಡತನ ಈ ಯಾವುದೂ ಇರುವುದಿಲ್ಲ. ಅವರಿಗೆ ಅಸಲಿಗೆ ಅದರ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ಪ್ರಶ್ನೆಗೆ ಒಳಗಾಗಿರುವುದು ಅವರ ಹಕ್ಕು ಮತ್ತು ಅರ್ಹತೆ. ಇಂಥ ಸಮಯದಲ್ಲಿ ಬೇರೆಯವರಿಗೆ ಅದೆಷ್ಟೇ ತೊಂದರೆಯಾದರೂ ಅವರಿಗೆ ಅದರ ಪಶ್ಚಾತ್ತಾಪವಿಲ್ಲ. ‘ನನಗೆ ಇದೇ ದೊಡ್ಡದು’ ಎಂಬ ಹುಂಬು.

ಎಂಟಾಣೆ ವಿಷಯಕ್ಕೆ ಸಾವಿರ ರುಪಾಯಿ ಹೋದರು ಸರಿ. ಇವೆಲ್ಲ ಒಣ ಪ್ರತಿಷ್ಠೆಯೆನ್ನಿಸಿದರೂ ಮೂಲದಲ್ಲಿ ಹಕ್ಕಿನ ಹಪಾ ಹಪಿತನ. ವಿಮಾನದಲ್ಲಿ ಪ್ರಯಾಣಿಸುವಾಗ ಇಂಥ ಅದೆಷ್ಟೋ ಘಟನೆಗಳು ಕಣ್ಣ ಮುಂದೆಯೇ ನಡೆದದ್ದಿದೆ. ಒಮ್ಮೆ ಒಬ್ಬ ಪ್ರಯಾಣಿಕ ಚೆಕ್-ಇನ್ ಕೌಂಟರ್‌ನಲ್ಲಿ ಗಲಾಟೆಯೆಬ್ಬಿಸಿದ್ದ. ಆತನ ಬ್ಯಾಗ್ ನ ತೂಕ ಮಿತಿಗಿಂತ ಎರಡು ಕೆಜಿ ಜಾಸ್ತಿ ತೂಗುತ್ತಿತ್ತು. ಆತ ಮನೆಯಲ್ಲಿ ತೂಗಿದಾಗ ಸರಿಯಾಗಿಯೇ ಇತ್ತಂತೆ, ಏರ್ ಪೋರ್ಟ್‌ನಲ್ಲಿ ತೂಗಿದಾಗ ತಕ್ಕಡಿ ಜಾಸ್ತಿ ತೋರಿಸುತ್ತಿತ್ತು. ‘ನನ್ನ ತೂಕ ಸರಿಯಿಲ್ಲದಿರಬಹುದು, ನಾನು ಕಳೆದ ಹತ್ತು ವರ್ಷದಿಂದ ಇದೇ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ, ನಿಮಗೆ ರೆಸ್ಪೆಕ್ಟೇ ಇಲ್ಲ, ಇದೇನಾ ನಿಮ್ಮ ಗ್ರಾಹಕರನ್ನು ನಡೆಸಿ ಕೊಳ್ಳುವ ರೀತಿ’ ಎಂದು ಕೂಗಾಡುತ್ತ ವಾದಿಸುತ್ತಿದ್ದ.

ಅಲ್ಲಿ ಆತನ ಲಗೇಜ್ ತೂಕ ಜಾಸ್ತಿಯಿದೆ, ತಪ್ಪು ಆತನದು. ಆದರೆ ಆತನಿಗೆ ಇಷ್ಟೆಲ್ಲಾ ಹಣ ಕೊಟ್ಟಿದ್ದೇನೆ, ಇಷ್ಟೆಲ್ಲಾ ಬಾರಿ ಪ್ರಯಾಣಿಸಿದ್ದೇನೆ, ನನ್ನನ್ನು ಯಃಕಶ್ಚಿತ್ ಎರಡು ಕೆಜಿ ಹೆಚ್ಚಿಗೆ ತೂಕಕ್ಕೆ ತಡೆಹಿಡಿದು ನಿಲ್ಲಿಸಬಹುದೇ ಎಂದು. ಈ ಗಲಾಟೆ ಆಮೇಲೆ ಜಾಸ್ತಿಯಾಗಿ, ಅಲ್ಲಿಗೆ ಪೊಲೀಸರೆಲ್ಲ ಬಂದು, ನಂತರ ವಿಮಾನ ಹೊರಡುವುದು ಮುಕ್ಕಾಲು ಗಂಟೆ ತಡವಾಗಿಹೋಯ್ತು- ಆತನ ಎರಡು ಕೆಜಿಯ ಹಕ್ಕಿನ ಹೋರಾಟಕ್ಕಾಗಿ. ನಿರೀಕ್ಷೆಗೆ ಮಿತಿಯೆನ್ನುವುದು ಇರುವುದಿಲ್ಲ. ಕೆಲವೊಮ್ಮೆ ನಮ್ಮ ನಿರೀಕ್ಷೆಗಳೇ ತಪ್ಪಾಗಿರುತ್ತವೆ. ಬಯಸಲೇಬಾರದ್ದನ್ನು ಬಯಸುತ್ತಿರುತ್ತೇವೆ. ಅದನ್ನು ಪಡೆಯಲು ಮರ್ಯಾದೆಯ ಎಲ್ಲ ಎಲ್ಲೆಯನ್ನೂ ಮೀರಿ ವ್ಯವಹರಿಸುತ್ತೇವೆ. ಮತ್ತೆ ವಿಮಾನ ಪ್ರಯಾಣದ ಉದಾಹರಣೆಯನ್ನೇ ತೆಗೆದುಕೊಳ್ಳೋಣ.

ವಿಮಾನವೆಂದರೆ ಅಲ್ಲಿ ಗಗನಸಖಿಯರಿರುತ್ತಾರೆ. ಅವರು ನಮ್ಮ ಪ್ರಯಾಣಕ್ಕೆ ಸಹಾಯವಾಗಲು ಇರುವ ಸೇವೆಯ ಭಾಗ. ಆದರೆ ಕೆಲವರ ನಡವಳಿಕೆ ಹಾಗಿರುವುದಿಲ್ಲ. ವಿಮಾನ ವೇರಿ ಆಗಿನ್ನೂ ಎಲ್ಲರೂ ಕುಳಿತಾಗಿರುವುದಿಲ್ಲ. ಫ್ಲೈಟ್ ಅಟೆಂಡೆಂಟ್ ಕರೆಯುವ ಗುಂಡಿಯನ್ನು ಒತ್ತಿರುತ್ತಾರೆ. ಬಹುತೇಕ ಬಾರಿ ಕೆಲವು ತೀರಾ ಚಿಕ್ಕ ವಿಚಾರಕ್ಕೆ ಕರೆದಿರುತ್ತಾರೆ. ಈ ಸೇವೆಯೂ ತಾನು ಕೊಟ್ಟ ಹಣಕ್ಕೆ ತನಗೆ ಸಂದಾಯವಾಗಬೇಕು ಎನ್ನುವ ಅಲ್ಪ ನಡವಳಿಕೆ. ಪ್ರಯಾಣ ಸಮಯದಲ್ಲಿ ಕೂಡ ಅಷ್ಟೆ- ಗಗನಸಖಿಯರನ್ನು ಮನೆಗೆಲಸ ದವರಂತೆ ನಡೆಸಿಕೊಳ್ಳುತ್ತಿರುತ್ತಾರೆ. ಅಂತಾರಾಷ್ಟ್ರೀಯ ಪ್ರಯಾಣಗಳಲ್ಲಿ ಮದ್ಯವನ್ನು ಪ್ರಯಾಣಿಕರಿಗೆ ಕೊಡುವುದರಿಂದ ಅಲ್ಲಿ ‘ಕೇಳಿದಷ್ಟು ಸುರಿಯ ಬೇಕು’ ಎಂದೆಲ್ಲ ಗಲಾಟೆ ಮಾಡುತ್ತಾರೆ.

ಎಲ್ಲೆಲ್ಲಿ ನಾವು ಹಣಕೊಟ್ಟು ಸೇವೆಯನ್ನು ಪಡೆಯುತ್ತೇವೆಯೋ, ಎಲ್ಲೆಲ್ಲಿ ನಾವು ಗ್ರಾಹಕರಾಗಿ ನಮ್ಮಿಂದ ಅನ್ಯರು ಲಾಭ ಪಡೆಯುತ್ತಾರೋ ಅಲ್ಲೆಲ್ಲ ನಮ್ಮ ಈ ಹಕ್ಕಿನ ಹಪಾಹಪಿತನ ತಾರಕಕ್ಕೆ ಮುಟ್ಟಿರುತ್ತದೆ. ಬ್ಯೂಟಿ ಸಲೂನ್‌ಗಳಲ್ಲಿ, ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ ಹೀಗೆ. ಇಲ್ಲಿ ಇರುವವರೆಲ್ಲ ಸೊಬಗರೆನ್ನುತ್ತಿಲ್ಲ. ಕೆಲವೊಮ್ಮೆ ಇಂಥ ಕಡೆಗಳಲ್ಲಿ ಸಲಾಮು ಹೊಡೆಯಬೇಕು ಇಲ್ಲವೇ ಗಲಾಟೆ ಮಾಡಬೇಕು, ಆಗಲೇ ಕೆಲಸವಾಗುವುದು. ಅಂಥಲ್ಲಿ ಅಧಿಕಾರಿಗೆ ತನ್ನ ಅಧಿಕಾರದ ದರ್ಪದ ಹಕ್ಕಿನ ಪ್ರತಿಪಾದನೆ. ಜನರು ಅಂಥ ಸ್ಥಳಗಳಿಗೆ ಹೋಗುವ ಮುಂಚೆಯೇ ಒಂದಿಷ್ಟು ದುರ್ವರ್ತನೆಯನ್ನು ಆಹ್ವಾನಿಸಿ ಕೊಂಡೇ ಒಳಕ್ಕೆ ಹೊಕ್ಕುವುದು. ನೀವು ಯಾವುದೇ ಸರಕಾರಿ ಅಧಿಕಾರಿಗಳನ್ನು ಒಮ್ಮೆ ಕೇಳಿ ನೋಡಿ. ಅವರಿಗೆಲ್ಲ ಪ್ರತಿದಿನ ಈ ರೀತಿ ಗ್ರಾಹಕರ Sense of entitlementನ ಅನುಭವವಾಗಿಯೇ ಇರುತ್ತದೆ. ಇಂಥ ಗ್ರಾಹಕರನ್ನು ಸುಧಾರಿಸುವುದೇ ಇವರೆಲ್ಲರ ನಿತ್ಯದ ಕರ್ಮವಾಗಿರುತ್ತದೆ.

ಅದೆಷ್ಟೋ ಸಂಬಂಧಗಳು ಎಡವಟ್ಟಾಗುವುದೇ ಇಬ್ಬರು ವ್ಯಕ್ತಿಯ ಪೈಕಿ ಒಬ್ಬರಲ್ಲಿ ಈ ಹಕ್ಕಿನ ವಿಚಾರ ತೀವ್ರವಾದಾಗ. ಸಾಮಾನ್ಯ ವಾಗಿ ಗಂಡ ಹೆಂಡತಿಯ ಸಂಬಂಧದಲ್ಲಿ ಅತ್ಯಂತ ಘರ್ಷಣೆಗೊಳಗಾಗುವುದು, ಸಂಘರ್ಷಕ್ಕೆ ಎಡೆಮಾಡಿಕೊಡುವುದು ಇದೇ ವಿಚಾರ. ಗಂಡನಾದವನು ಕೆಲವೊಂದು ಹಕ್ಕುಗಳಿಗೆ ಅರ್ಹ ಎನ್ನುವುದು ಸಾಮಾಜಿಕವಾಗಿ ನಡೆದುಕೊಂಡು ಬಂದದ್ದು. ಅದನ್ನು ಸಮಾಜವೂ ಹಾಗೆಯೇ ಇರಲೆಂದು ಬಯಸುತ್ತದೆ. ಗಂಡ ತಡವಾಗಿ ಕೆಲಸದಿಂದ ಬರುವುದನ್ನು ಪ್ರಶ್ನಿಸುವುದೂ ಹಕ್ಕುಚ್ಯುತಿ ಎಂದುಕೊಳ್ಳುವ ಗಂಡಂದಿರಿದ್ದಾರೆ. ಮನೆ ಕೆಲಸದಲ್ಲಿ ಭಾಗಿಯಾಗದೆ ಇರುವುದು, ಹಾಸಿಗೆಯನ್ನು ಮಡಿಸದೆ ಇರುವುದು, ಹೀಗೆ ಕೆಲವೊಂದು ಕೆಲಸಗಳನ್ನು ಹೆಂಡತಿಯೇ ಮಾಡಬೇಕು, ಅದನ್ನು ಮಾಡದಿ ರುವುದೇ ಗಂಡನ, ಗಂಡಿನ ಹಕ್ಕು ಎಂಬಂತೆ ವ್ಯವಹರಿಸುವುದು. ಇದು ಕೂಡ ಅದೇ ಪ್ರeಯ ಇನ್ನೊಂದು ರೂಪ. ಇದಕ್ಕೆ ಚ್ಯುತಿ ಯಾದಾಗಲೆಲ್ಲ ಗಲಾಟೆಗಳಾಗಿ ಸಂಬಂಧ ಕೆಡುತ್ತದೆ. ಇದು ಕೇವಲ ಗಂಡ ಹೆಂಡತಿಯ ನಡುವೆ, ಗಂಡನದಷ್ಟೇ ನಡತೆ ಎನ್ನುವುದಿಲ್ಲ.

ತಂದೆಯಾದವನು ಮಗ, ಮಗಳಿಗೆ ಮನಸ್ಸಿಗೆ ಬಂದಂತೆ ಜರಿಯುವುದು, ಇನ್ನೊಬ್ಬರೆದುರಿಗೆ ಅವಮಾನಿಸುವುದು ಇವು ಕೂಡ ಆತನ ಹಕ್ಕಿನ ಚಲಾವಣೆ. ಗಂಡು ಸಹಜ ವಾಗಿ ಸಾಮಾಜಿಕವಾಗಿ ಹೆಚ್ಚಿನ ಹಕ್ಕನ್ನು ಪಡೆದಿರುತ್ತಾನೆ. ಸಂಸಾರದೊಳಗೆ ಈ ಹಕ್ಕಿನ ಹಪಾಹಪಿ ಗಂಡಿನದೇ ಜಾಸ್ತಿ. ಇದು ಆತನ ಆಸೆ, ನಿರೀಕ್ಷೆಗಳಿಗೆ ಮಾತ್ರ ಅತ್ಯಂತ ಮಹತ್ವ ಕೊಡುವ, ಅದೇ ಸಮಯದಲ್ಲಿ ಇನ್ನೊಬ್ಬರ ಅವಶ್ಯಕತೆಯನ್ನು ಸಂಪೂರ್ಣ ಅಲಕ್ಷಿಸುವ ಏಕಮುಖ ವ್ಯಕ್ತಿತ್ವ. ಈ ರೀತಿಯ ಹಕ್ಕು, ಪ್ರತಿಷ್ಠೆಗಳು ಮುಂದುವರಿದ ರೂಪ ವಾಗಿ ಅಂಥವರಲ್ಲಿ ಕ್ರಮೇಣ ಅನುಕಂಪ ಮಾಯವಾಗುತ್ತ ಹೋಗುತ್ತದೆ.

‘ಯಾರ್ ಯಾರನ್ನು ಎಲ್ಲೆಲ್ಲಿ ಇಡಬೇಕೋ, ಅಲ್ಲಿಯೇ ಇಡಬೇಕು’ ಎನ್ನುವ ಮಾತನ್ನು ಇಂಥವರು ಆಗೀಗ ಬಳಸುವುದು ಸಾಮಾನ್ಯ. ಅಧಿಕಾರವನ್ನು ಚಲಾಯಿಸುವುದು, ಆ ಮೂಲಕ ಇನ್ನೊಬ್ಬರ ಸಾಮಾಜಿಕ ಸ್ಥಾನವನ್ನು ಕೀಳಾಗಿ ಕಾಣುವುದು ಇವನ್ನೆಲ್ಲ ತನ್ನ ಹಕ್ಕು ಎಂದು ಭಾವಿಸುವುದು ಸಂಸಾರದಾಚೆ ಕೂಡ ನಡೆಯುತ್ತದೆ. ದರ್ಪದ ಪೊಲೀಸ್ ಅಧಿಕಾರಿಯಿರ ಬಹುದು, ಖಾಸಗಿ ಆದರೆ ಸೇವೆಯ ನೌಕರರಿಬಹುದು, ಸರಕಾರಿ ಕಚೇರಿಯ ಅಧಿಕಾರಿಗಳಿರಬಹುದು. ಇಂಥವರಲ್ಲಿ ಮನುಷ್ಯ ಸಹಜ ಅನುಕಂಪಗಳು ಬತ್ತಿಹೋಗಿರು ತ್ತವೆ. ಇದು ಕ್ರಮೇಣ ಸಂಸಾರದೊಳಕ್ಕೆ, ಸಂಬಂಧಗಳೊಳಕ್ಕೆಲ್ಲ ಹರಿದುಬಂದು ಸಂಪೂರ್ಣ ಜೀವನವನ್ನೇ ಹಾಳುಮಾಡಿಬಿಡು ತ್ತದೆ. ಅಲ್ಲದೆ ಇಂಥವರು ಎಂದಿಗೂ ಯಾವುದೇ ರಚನಾತ್ಮಕ ಅಭಿಪ್ರಾಯವನ್ನು ಸ್ವೀಕರಿಸುವುದೇ ಇಲ್ಲ. ಹೊಗಳಿಕೆಯನ್ನೊಂದು ಬಿಟ್ಟು ಉಳಿದ ಯಾವ ಅಭಿಪ್ರಾಯವೂ ಅವರಿಗೆ ಸಹ್ಯವಾಗುವುದೇ ಇಲ್ಲ.

ನೀವು ಏನೇ ಅಭಿಪ್ರಾಯ ಹಂಚಿ ಕೊಂಡರೂ ಅದನ್ನು ತಕ್ಷಣ, ತೀರಾ ಅತಾರ್ಕಿಕವಾಗಿ ಪ್ರತಿರೋಧಿಸುತ್ತಾರೆ. ಇಂಥವರು ತೀರಾ ಚಿಕ್ಕ ವಿಚಾರಕ್ಕೆ ಕೋಪಿಸಿ, ಪ್ರತೀಕಾರಕ್ಕೆ ಮುಂದಾಗುವುದು ಕೂಡ ಸಾಮಾನ್ಯ. ಈ ‘Sense of entitlement’ ಒಂದು ಮಾನಸಿಕ ಸಮಸ್ಯೆ. ಇದು ನಮ್ಮ ನಿಮ್ಮೆಲ್ಲರಲ್ಲಿ ಹಲವಾರು ರೂಪ, ಪ್ರಮಾಣದಲ್ಲಿರಬಹುದು. ಇಂಥ ವ್ಯಕ್ತಿಯು ಕುಟುಂಬ, ಮಕ್ಕಳು, ಸ್ನೇಹಿತರು, ಪ್ರೀತಿಪಾತ್ರರು, ಕೆಲಸದವರು ಇವರಲ್ಲಿ ತೀರಾ ಅತಾರ್ಕಿಕ, ಜೊಳ್ಳು ಬೇಡಿಕೆಗಳನ್ನಿಡುತ್ತಾನೆ. ಅದು ಸಾಧ್ಯವಾಗ ದಿದ್ದಲ್ಲಿ ಅದನ್ನೇ ದೊಡ್ಡ ವಿಷಯವನ್ನಾಗಿಸಿ ಸಿಡುಕುತ್ತಾನೆ, ಎಲ್ಲರೆದುರು ಅವಮಾನಿಸುತ್ತಾನೆ.

ತನ್ನಿಂದ ನಡೆದ ತಪ್ಪಿಗೆ ಸಮಜಾಯಿಷಿ ಕೊಡುವ ಆತ, ಅದೇ ತಪ್ಪು ಬೇರೆಯವರು ಮಾಡಿದಾಗ ಊರಿಗೆಲ್ಲ ಡಂಗುರ ಹೊಡೆಯು
ತ್ತಾನೆ, ಶಿಕ್ಷಿಸಲು ಮುಂದಾಗುತ್ತಾನೆ. ಉಳಿದವರಿಗೆ ಏನೇ ಆಗಲಿ, ತನ್ನ ಸುಖ ಸಂತೋಷಕ್ಕೆ ಯಾವುದೇ ಹಂತವನ್ನು ಬೇಕಾದರೂ ತಲುಪಬಲ್ಲ ಪರಮ ಸ್ವಾರ್ಥ ಮನಸ್ಥಿತಿ ಕೂಡ ಇದರ ಪರಿವ್ಯಾಪ್ತಿ. ಉಳಿದವರಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ತೊಂದರೆ ಕೊಡುವುದು, ಉಳಿದವರ ಬಗ್ಗೆ ಕೆಟ್ಟ ದ್ದನ್ನು, ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹಬ್ಬಿಸುವುದು, ಕೂಗಾಡುವುದು, ಅನವಶ್ಯಕ ಜಗಳಕ್ಕೆ ನಿಲ್ಲುವುದು, ಸುತ್ತಲಿನ ಉಳಿದವರನ್ನು ಯಾವತ್ತೂ ತನ್ನ ಸ್ಪರ್ಧಿಗಳೆಂದೇ ನೋಡುವುದು ಇತ್ಯಾದಿ. ಸಾಮಾನ್ಯವಾಗಿ ಇಂಥವರು ಸಂಬಂಧ, ಸ್ನೇಹದಲ್ಲಿ ಕೊಡುವುದಕ್ಕಿಂತ ತೆಗೆದುಕೊಳ್ಳುವುದೇ ಜಾಸ್ತಿ. ಸ್ನೇಹಿತರಿಂದ, ಕುಟುಂಬದವರಿಂದ  ಪಡೆಯುವುದೇ ನನ್ನ ಹಕ್ಕು ಎಂದು ಪರಿಗಣಿಸುವ ವ್ಯಕ್ತಿತ್ವ. ಇಂಥವರು ಕೆಲವರಿಗೆ ಪರಮ ಸ್ವಾರ್ಥಿಗಳಂತೆ ಕಂಡರೆ ಇನ್ನು ಕೆಲವರಿಗೆ ಕೆಟ್ಟ ಕಿರಿಕಿರಿಯೆನ್ನಿಸುತ್ತಿರುತ್ತಾರೆ. ಅವರು ಕ್ರಮೇಣ ಸಮಾಜದಿಂದ ವಿಮುಖವಾಗಿ ಬದುಕುವ ಸ್ಥಿತಿ ನಿರ್ಮಾಣ ವಾಗಿರುತ್ತದೆ.

ಸಾಮಾನ್ಯವಾಗಿ ಇವರೆಲ್ಲ ಒಳ್ಳೆಯವರೇ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಉದ್ದೇಶಪೂರ್ವಕವಾಗಿ ಎಂದಿಗೂ ಬಯಸುವವರಲ್ಲ. ತನ್ನ ಸುತ್ತಲಿನವರು, ಸಂಬಂಧಗಳು, ಸ್ನೇಹ ಇವೆಲ್ಲ ಚೆನ್ನಾಗಿಯೇ ಇರಬೇಕೆನ್ನುವ ಬಯಕೆಯುಳ್ಳವರೇ ಇವರು. ಆದರೆ ತನ್ನ ತೀರಾ ವೈಯಕ್ತಿಕ ಲಾಭದ ವಿಚಾರ ಬಂದಾಗ ಸಹಾನುಭೂತಿ, ಅನುಕಂಪ, ಸಾಮಾಜಿಕ ಪ್ರe ಇವೆಲ್ಲವನ್ನು ಕಳೆದು ಕೊಂಡುಬಿಡುತ್ತಾರೆ. ಕೆಲ ಒಳ್ಳೆಯವರನ್ನು ಜನರು, ಸಮಾಜ ಇಷ್ಟಪಡದೇ ಇರುವುದಕ್ಕೂ ಇದು ಕಾರಣವಾಗಿರಬಹುದು.

ಸಮಾಜದಲ್ಲಿ, ಸಾಮಾಜಿಕ ಜೀವನದಲ್ಲಿ, ಉದ್ಯೋಗದಲ್ಲಿ,ಕುಟುಂಬದಲ್ಲಿ, ಸ್ನೇಹವರ್ಗದಲ್ಲಿ, ಹೀಗೆ ಮನುಷ್ಯ ಸಂಬಂಧ
ಗಳಲ್ಲಿ ಈ Sense of entitlement ಮಿತಿಯನ್ನು ಮೀರಿದ್ದು ಸಾಮಾನ್ಯವಾಗಿ ನಮ್ಮ ಅರಿವಿಗೆ ಬಂದಿರುವುದಿಲ್ಲ. ಅಲ್ಲದೆ ಇದನ್ನು ಉಳಿದವರು ಕೂಡ ಬಾಯಿಬಿಟ್ಟು ಹೇಳುವುದಿಲ್ಲ. ಅದಕ್ಕೆ ಮೂಲದಲ್ಲಿ ನಾವೇ ಅವಕಾಶ ಕಲ್ಪಿಸಿರುವುದಿಲ್ಲ.
ಆತ್ಮಾವಲೋಕನವನ್ನು ಮಾಡಿಕೊಂಡಾಗ ಮಾತ್ರ ಇದೆಲ್ಲ ನಮ್ಮ ಅರಿವಿಗೆ ಬರುತ್ತದೆ. ನಮ್ಮ ನಡವಳಿಕೆಗಳನ್ನು ದಿನದ ತುದಿ
ಯಲ್ಲಿ ಒಮ್ಮೆ ನೆನಪಿಸಿ ಅವಲೋಕಿಸುವುದು, ನನ್ನಿಂದ ಇನ್ನೊ ಬ್ಬರಿಗೆ ಬೇಸರವಾದಲ್ಲಿ ನಿರ್ಭಿಡೆಯಿಂದ ಕ್ಷಮೆ ಕೋರುವುದು,
ಇನ್ನೊಬ್ಬರ ಬಗ್ಗೆ ಅನುಕಂಪ ಬೆಳೆಸಿಕೊಳ್ಳುವುದು ಇವೆಲ್ಲ ಪ್ರಯತ್ನವಿಲ್ಲದೆ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ.

ಈ ಲೇಖನದಲ್ಲಿ ಇಷ್ಟು ಹೊತ್ತು ಉದಾಹರಿಸಿದ್ದು ಈ ಒಣಪ್ರತಿಷ್ಠೆಯ ಕೆಲವು ಸ್ಯಾಂಪಲ್ಲುಗಳನ್ನು ಮಾತ್ರ. ಇದರಿಂದ ನಾವು ಜೀವನದಲ್ಲಿ ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ. ತನಗೆ ಬೇಕಾದದ್ದನ್ನು ಪಡೆಯುವುದು ನನ್ನ ಹಕ್ಕು, ಅದನ್ನು ಒದಗಿಸುವುದು ಉಳಿದವರ ಕರ್ತವ್ಯ ಎನ್ನುವ ವಿಚಾರ ನಮ್ಮಲ್ಲಿ ಬೆಳೆದಂತೆ ಬದುಕು ಕಷ್ಟವಾಗುತ್ತದೆ. ನಮ್ಮ ನಿರೀಕ್ಷೆಗಳು, ನಂಬಿಕೆಗಳು, ಯೋಚನೆಗಳಂತೆಯೇ ಉಳಿದವರಿದ್ದರೆ, ವ್ಯವಹರಿಸಿ ದರೆ ಒಳ್ಳೆಯದು. ಹಾಗಂತ ಹಾಗಿಲ್ಲವೆಂದು ಅದನ್ನು ಒತ್ತಾಯಕ್ಕೆ ಕಾರ್ಯರೂಪಕ್ಕೆ ತರಲು ಹೋಗಬಾರದು. ಯಾರ ಮೇಲೆ ಯಾರಿಗೂ ಹಕ್ಕು ಇರುವುದಿಲ್ಲ.

Sense of entitlement ಎಲ್ಲ ಸಮಯದಲ್ಲಿ ಮಿತಿಯಲ್ಲಿದ್ದರೇ ಚಂದ.

Leave a Reply

Your email address will not be published. Required fields are marked *