Monday, 11th November 2024

ರೋಗಿಗಳ ಪಾಲಿನ ಸಂಜೀವಿನಿ ದಾದಿಯರು

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ಅವಶ್ಯಕ ದಾದಿಯರನ್ನು ಸಿದ್ಧಗೊಳಿಸುವಲ್ಲಿ ಭಾರತ ಸೇರಿದಂತೆ ಬಹುಪಾಲು ರಾಷ್ಟ್ರಗಳು ವಿಫಲರಾಗಿರುವುದು ದುರ್ದೈವ. ವೈದ್ಯವಿಜ್ಞಾನ ವಿಶೇಷ ಕವಲುಗಳಾಗಿ ವಿಸ್ತಾರವಾದಂತೆ ಶುಶ್ರೂಷಕ ಶಿಕ್ಷಣ ಕ್ಷೇತ್ರದಲ್ಲೂ ವಿಶೇಷ ಪರಿಣ ತಿಯ ದಾದಿಯರ ಅವಶ್ಯಕತೆ ಹೆಚ್ಚಾಗಿರುತ್ತದೆ.

ಆರೋಗ್ಯ ಕ್ಷೇತ್ರದ ಉತ್ಕೃಷ್ಟ ಸೇವೆಯನ್ನು ತರಿಸುವಲ್ಲಿ ವೈದ್ಯರುಗಳು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ, ಶುಚಿತ್ವ ಗೊಳಿಸುವವರು, ತಂತ್ರಜ್ಞರು ಇತ್ಯಾದಿಗಳೆಲ್ಲರೂ ಪ್ರಮುಖ ಪಾತ್ರ ವಹಿಸುತ್ತಾರೆ. ಇವರುಗಳಲ್ಲಿ ರೋಗಿಯೊಡನೆ ಸದಾಕಾಲ ಸಂಪರ್ಕದಲ್ಲಿದ್ದು, ಶುಶ್ರೂಷೆ ಮಾಡುವ ಶುಶ್ರೂಷಕರ ಪಾತ್ರವಂತೂ ಹೇಳತೀರದು.

ವೈದ್ಯರ ಸಲಹೆಗಳನ್ನು ರೋಗಿಗಳಿಗೆ ತಲುಪಿಸಿ, ಮನಮುಟ್ಟಿಸಿ ಆರೋಗ್ಯಸೇವೆಯ ಪಾವಿತ್ರ್ಯವನ್ನು ಕಾಪಾಡಿ ರೋಗಿಯಲ್ಲಿ ಆತ್ಮವಿಶ್ವಾಸ ಹುಟ್ಟಿಸಿ, ದೇಹದಲ್ಲಿ ಸಹಜವಾ ಗಿರುವ ವಾಸಿಯಾಗಿಸುವ ಸಾಮರ್ಥ್ಯವನ್ನು ವೃದ್ಧಿಸುವ ಶಕ್ತಿಯನ್ನು ಹೆಚ್ಚಿಸುವಲ್ಲಿ ಶುಶ್ರೂಷಕಿಯರು/ಶುಶ್ರೂಷಕರುಗಳ ಪಾತ್ರ ಮಹತ್ತರವಾದುದು. ವೈದ್ಯರುಗಳು ಆಗೊಮ್ಮೆ ಈಗೊಮ್ಮೆ ಬಂದು ರೋಗಗತಿ ಯನ್ನು ಪರೀಕ್ಷಿಸಿ ಸಲಹೆಗಳನ್ನು ನೀಡಿ ಹೊರಟು ಬಿಡುತ್ತಾರೆ. ಅವರ ಬಿಡುವಿಲ್ಲದ ಕಾರ್ಯ ಒತ್ತಡಗಳಿಂದಾಗಿ ರೋಗಿಯೊಡನೆ ಮತ್ತು ಅವರ ಸಂಬಂಧಿಕರೊಡನೆ ಸೌಹಾರ್ದ ಸಮಾಲೋಚನೆಗಾಗಿ ಹೆಚ್ಚು ಸಮಯವನ್ನು ಮೀಸಲಿಡಲು ಕೆಲವೊಮ್ಮೆ ವೈದ್ಯರಿಗೆ ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ಸದಾಕಾಲ ರೋಗಿಯ ಸಂಪರ್ಕ ದೊಡನಿರುವ ಶುಶ್ರೂಷಕರು/ ಶುಶ್ರೂಷಕಿ ಯರು ಸಮರ್ಥವಾಗಿ ನಿರ್ವಹಿಸುವುದರಿಂದ ನೀಡಲಾಗುವ ವೈದ್ಯಕೀಯ ಸೇವೆಯ ವಿಶ್ವಾಸಾರ್ಹತೆ ಹೆಚ್ಚಾಗಿ ಚಿಕಿತ್ಸೆ ಫಲಕಾರಿಯಾಗುತ್ತದೆ.

ಸಹಜ ದೌರ್ಬಲ್ಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೂ ಸೂಕ್ತ ಮತ್ತು ಸಕಾಲಿಕ ಚಿಕಿತ್ಸೆ ನೀಡಿರುವ ಬಗ್ಗೆ ರೋಗಿಯ ಬಂಧುಗಳಿಗೆ ಈ ಬಗೆಯ ನಡವಳಿಕೆಗಳಿಂದ ನಂಬಿಕೆ ಹುಟ್ಟಿಸಿದರೆ ಯಾವ ಬಗೆಯ ದುಷ್ಕೃತ್ಯಗಳೂ ಜರುಗುವುದಿಲ್ಲ. ಹೀಗಾಗದೆ ಸೂಕ್ತ ಸಮಂಜಸ ಚಿಕಿತ್ಸೆ ನೀಡಿದರೂ ಈ ಆತ್ಮವಿಶ್ವಾಸ ಹುಟ್ಟಿಸುವ ನಡವಳಿಕೆಗಳು ಇಲ್ಲದಿದ್ದಲ್ಲಿ ಚಿಕಿತ್ಸಾ ಸ್ಥಳದಲ್ಲಿ ರಣರಂಗಗಳೇ ಉಂಟಾಗುತ್ತವೆ. ಇಂದು ವೈದ್ಯ ರೋಗಿಯ ಆತ್ಮವಿಶ್ವಾಸದ ಸಂಬಂಧ ಹದಗೆಟ್ಟು ವೈದ್ಯಕೀಯ ಸೇವಾಕ್ಷೇತ್ರ ಕಳಂಕಭರಿತವಾಗುತ್ತಿದೆ.

ಇದು ಆರೋಗ್ಯ ಸೇವಾ ಕ್ಷೇತ್ರವನ್ನೇ ದುರ್ಬಲಗೊಳಿಸುತ್ತಿದೆ. ಈ ಅವಘಡವನ್ನು ತಡೆದು ವೃತ್ತಿಗೌರವವನ್ನು ಹೆಚ್ಚಿಸುವಲ್ಲಿ ಶುಶ್ರೂಷಕರು/ಶುಶ್ರೂಷಕಿಯರು ಬಹುಮುಖ್ಯ ಪಾತ್ರ ವಸುತ್ತಾರೆ. ಶುಶ್ರೂಷಕಿಯರ ಇಂತಹ ತೆರೆಮರೆಯ ಸೇವೆಯನ್ನು ಸಮಾಜ ಗುರುತಿಸುವುದು ಅತ್ಯವಶ್ಯಕ. ಈ ದೃಷ್ಟಿಯಿಂದ ಪ್ರತಿವರ್ಷ ಮೇ 12ರಂದು ವಿಶ್ವ ಶುಶ್ರೂಷಕರ ದಿನವನ್ನು ಆಚರಿಸಿ ಈ ವೃತ್ತಿ ಯನ್ನು ಮತ್ತು ವೃತ್ತಿಬಾಂಧವರನ್ನು ಗೌರವಿಸುವ ಪರಿಪಾಠ 1974ರಿಂದ ಅಂತಾರಾಷ್ಟ್ರೀಯ ಶುಶ್ರೂಷಕರುಗಳ ಪರಿಷತ್ (ಇಂಟರ್‌ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್- ಐಸಿಎನ್) ವತಿಯಿಂದ ನಡೆದುಕೊಂಡು ಬಂದಿದೆ.

ಸುಮಾರು 130ಕ್ಕೂ ಹೆಚ್ಚು ದೇಶಗಳ ಶುಶ್ರೂಷಕರ ಸಂಘಗಳಿಂದ ರಚಿಸಲಾಗಿರುವ ಅಂತಾರಾಷ್ಟ್ರೀಯ ಶುಶ್ರೂಷಕರ ಪರಿಷತ್
ಸ್ವಿಟ್ಜರ್‌ಲೆಂಡ್‌ನ ಜಿನಿವಾದಲ್ಲಿದೆ. ಮೇ 12 ಆಧುನಿಕ ಸಂಘಟಿತ ಶುಶ್ರೂಷೆಗೆ ಬುನಾದಿ ಹಾಕಿದ ಫಾರೆನ್ಸ್ ನೈಟಿಂಗೇಲ್ ಹುಟ್ಟಿದ
ದಿನ (1820). ಪ್ರಪಂಚಾದ್ಯಂತ ಈ ದಿನದಂದು ಶುಶ್ರೂಷಕ ವೃತ್ತಿಯ ಪಾವಿತ್ರ್ಯಗಳನ್ನು ಸಮುದಾಯಕ್ಕೆ ಮನವರಿಕೆ ಮಾಡಿ ಕೊಡುವುದು, ವೃತ್ತಿಬಾಂಧವರನ್ನು ಗೌರವಿಸಿ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹುಟ್ಟಿಸುವುದು, ಕ್ಷೇತ್ರದಲ್ಲಾಗಿರುವ ಬೆಳವಣಿಗೆ ಗಳ ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಮುಂದಿನ ದಿನಗಳಲ್ಲಿ ರೂಢಿಸಿಕೊಳ್ಳಬೇಕಾದ ಕಾರ್ಯಗಳು ಮತ್ತು ಸಂಶೋ ಧನಾತ್ಮಕ ವಿಚಾರಗಳನ್ನು ಬಿತ್ತುವುದು ಇತ್ಯಾದಿಗಳ ಬಗ್ಗೆ ಅರಿವುಮೂಡಿಸಿ ವರ್ಷವಿಡೀ ಈ ವಿಚಾರಗಳನ್ನು ಜೀವಂತ ವಾಗಿಟ್ಟು ಜನಮಾನಸಕ್ಕೆ ಮತ್ತು ಸರಕಾರಗಳಿಗೆ ಮನದಟ್ಟು ಮಾಡಿಕೊಡಲು ಪ್ರಪಂಚಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ರೂಪಿಸ ಲಾಗುತ್ತದೆ.

ಶುಶ್ರೂಷೆ ಎಂದರೆ ಮಾತೃಪ್ರೇಮದಿಂದ ರೋಗಿಯ ಅಗತ್ಯಗಳನ್ನು ಪೂರೈಸಿ, ಪೋಷಿಸಿ, ಅವನನ್ನು ಭಾವನಾತ್ಮಕವಾಗಿ ಸಂತೈಸಿ ರೋಗಿಯ ಸರ್ವಾಂಗೀಣ ಆರೋಗ್ಯ ಅಭಿವೃದ್ಧಿಯನ್ನುಂಟು ಮಾಡುವುದು ಎಂದರ್ಥ. ತಾಯಿ ಹೇಗೆ ಮಗುವನ್ನು ಯಾವ ಫಲಾಪೇಕ್ಷೆಯೂ ಇಲ್ಲದೆ, ಮಗು ನೀಡುವ ಎಲ್ಲ ತೊಂದರೆಗಳನ್ನು ಸಹಿಸಿಕೊಂಡು ಪ್ರೀತ್ಯಾದರಗಳಿಂದ ಪೋಷಿಸುತ್ತಾಳೋ, ಹಾಗೆ ಶುಶ್ರೂಷಕರು ಸಹ ನೋವಿನಲ್ಲಿರುವ ರೋಗಿಯ ಅಸಹ್ಯ ವರ್ತನೆಗಳನ್ನು ಸಹಿಸಿಕೊಂಡು ಸೇವೆಮಾಡುವುದು ಅತ್ಯವಶ್ಯಕ.

ನೋವನ್ನು ನಿವಾರಿಸಿ, ರೋಗಿಯ ಮುಖದಲ್ಲಿ ನಗುವನ್ನುಂಟುಮಾಡುವ ಪ್ರಮುಖ ಜವಾಬ್ದಾರಿ ಶುಶ್ರೂಷಕರದು. ಇದು ಸುಲಭದ ಮಾತಲ್ಲ, ಶುಶ್ರೂಷೆಯ ವೈದ್ಯಕೀಯ ಪರಿಣಿತ ಜ್ಞಾನದ ಜೊತೆ ಜೊತೆಗೆ ಭಾವಸ್ಪಂದನೆ, ಮಾನವೀಯ ಅಂತಃಕರಣ, ಮೃದುಮಾತು, ಬದ್ಧತೆ, ಮನಗೆಲ್ಲುವ ಕಲೆ, ಆತ್ಮಶ್ವಾಸ ಹುಟ್ಟಿಸುವ ನಡವಳಿಕೆ, ತಾಳ್ಮೆ, ಪ್ರಭಾವಬೀರುವ ಆಕರ್ಷಣೆ ಇತ್ಯಾದಿ ಕಲಾತ್ಮಕ ಗುಣಗಳು ಶುಶ್ರೂಷಕಿಯರಿಗೆ ಅತ್ಯವಶ್ಯಕ. ಈ ಗುಣಗಳಿದ್ದಲ್ಲಿ ಮಾತ್ರ ಒಳ್ಳೆಯ ಶುಶ್ರೂಶಕರಾಗಲು ಸಾಧ್ಯ. ಶುಶ್ರೂಷೆಯ ವೈದ್ಯಜ್ಞಾನವನ್ನು ಮಾತ್ರ ತಿಳಿದು ಅದಕ್ಕನುಗುಣವಾಗಿ ಯಾಂತ್ರಿಕವಾಗಿ ಕಾರ್ಯನಿರ್ವಸುವುದರಿಂದ ಶುಶ್ರೂಷಕ ವೃತ್ತಿಯ
ನೈಜ ಜವಾಬ್ದಾರಿಗಳನ್ನು ನಿರ್ವಸಲು ಸಾಧ್ಯಲ್ಲ.

ಇಂಥ ಪ್ರಾತಿನಿಧಿಕ ಶುಶ್ರೂಶಕಿ. ಫಾರೆನ್ಸ್ ನೈಟಿಂಗೇಲ್ 1820 ಮೇ 12ರಂದು ಇಟಲಿಯಲ್ಲಿ ಹುಟ್ಟಿ ಲಂಡನ್‌ನಲ್ಲಿ ಬೆಳೆದು 1910ರ ಮೇ 17ರಂದು ಮೃತಪಟ್ಟರು. ಅವಿವಾಹಿತೆಯಾಗಿಯೇ ಉಳಿದು ಶುಶ್ರೂಷಕಿಯಾಗಿ ಸಮಾಜದ ಪರಿವರ್ತನೆಯ ಹರಿಕಾರಳಾಗಿ, ಅಂಕಿಅಂಶಗಳ ತಜ್ಞೆಯಾಗಿ ಬ್ರಿಟಿಷ್ ನರ್ಸ್ ಎಂಬ ಖ್ಯಾತಿ ಪಡೆದ ಮೊಟ್ಟಮೊದಲ ವೈಜ್ಞಾನಿಕ ಆಧಾರಿತ ಶುಶ್ರೂಷಕಿ ಆದ ಹೆಮ್ಮೆ ಇವರದು.

ರಷ್ಯಾ ಮತ್ತು ಫ್ರಾನ್ಸ್ ನಡುವೆ ನಡೆದ (1853-1856) ಕ್ರೀಮಿಯಾದ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಬೆಳಕಿನ ದೀಪ ಹಿಡಿದು ಶುಶ್ರೂಷೆ ಮಾಡಿ ‘ದೀಪದೊಂದಿಗಿನ ಹೆಣ್ಣು’ ಎಂಬ ಖ್ಯಾತಿ ಪಡೆದು ಅಮರಳಾದರು. ವೈಜ್ಞಾನಿಕ ಆಧಾರಿತ ನರ್ಸಿಂಗ್ ತರಬೇತಿ ಪಡೆದ ಮೊಟ್ಟ ಮೊದಲ ಶುಶ್ರೂಷಕಿ ಇವರು. ಶುಶ್ರೂಷಕ ಜ್ಞಾನದ ಬಗ್ಗೆ ಸುಮಾರು 150 ಪುಸ್ತಕಗಳನ್ನು ಬರೆದಿರುವ
ಇವರು 1860ರಲ್ಲಿ ಪ್ರಪ್ರಥಮ ಬಾರಿಗೆ ವೈಜ್ಞಾನಿಕ ನರ್ಸಿಂಗ್ ಶಾಲೆಯನ್ನು ಸ್ಥಾಪಿಸಿದ ಖ್ಯಾತಿ ಹೊಂದಿದ್ದಾರೆ.

ಪರಿಸರ, ಗಾಳಿ, ಬೆಳಕು ಮತ್ತು ನೈರ್ಮಲ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಪರಿವರ್ತನೆಯ ಹರಿಕಾರಿಣಿ ಎಂಬ ಖ್ಯಾತಿ ಪಡೆದ ಧೀಮಂತ ನಾಯಕಿ. ಬ್ರಿಟಿಷ್‌ನ ವಿಕ್ಟೋರಿಯಾ ರಾಣಿಯಿಂದ ರೆಡ್ ರಾಯಲ್ ಪ್ರಶಸ್ತಿ(1883) ಮತ್ತು ಪ್ರಖ್ಯಾತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಮೊಟ್ಟ ಮೊದಲಿಗೆ ಪಡೆದ ಮಳೆ ಇವರು. ಕ್ರೀಮಿಯಾದ ಯುದ್ಧ
ಭೂಮಿಯಲ್ಲಿ ಬ್ರೂಸಿಲೋಸಿಸ್ ಮತ್ತು ಸಿಫಿಲಿಸ್ ಸೋಂಕು ರೋಗಗಳಿಗೆ ತುತ್ತಾಗಿ ಮನಕುಂದಿ ಹಲವಾರು ವರ್ಷಗಳ ಕಾಲ ಹಾಸಿಗೆ ಹಿಡಿದು 90 ವರ್ಷಗಳ ಕಾಲ ಬದುಕಿ ದುರಂತ ಅಂತ್ಯ ಕಂಡ ಮಹಿಳೆ ಇವರು.

ಸಾವಿರಾರು ರೋಗಿಗಳಿಗೆ ಶುಶ್ರೂಷೆ ಮಾಡಿ ರೋಗವನ್ನು ವಾಸಿ ಮಾಡಿದ ಕರುಣಾಮಯಿಯಾದ ಈ ದಿಟ್ಟ ಮಹಿಳೆಗೆ ರೋಗ ಗಳಿಂದ ಪಾರಾಗುವ ಅವಕಾಶ ಲಭಿಸದೇ ಇದ್ದದ್ದು ವಿಧಿಯಾಟವೇ ಸರಿ. ಇಂತಹ ಧೀಮಂತ ಶುಶ್ರೂಷಕಿಯ ನೆನಪಿಗಾಗಿ
ವಿಶ್ವಾ ದ್ಯಂತ ಶುಶ್ರೂಷಕರ ದಿನವನ್ನು ಆಚರಿಸಿ ಇವರ ಹೆಸರಿನಲ್ಲಿ ಈ ಕ್ಷೇತ್ರದಲ್ಲಿ ಅನುಪಮ ಸೇವೆ ಮಾಡಿದವರಿಗೆ ಪ್ರತಿ ವರ್ಷ ‘ಫಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ಯನ್ನು ರಾಷ್ಟ್ರಮಟ್ಟದಲ್ಲಿ ಭಾರತವನ್ನೂ ಒಳಗೊಂಡಂತೆ ಇನ್ನಿತರ ಎಲ್ಲ ದೇಶಗಳಲ್ಲೂ ನೀಡಲಾ ಗುತ್ತಿದೆ.

ಪ್ರತಿವರ್ಷ ಶುಶ್ರೂಷಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ದಿನದಂದು ಘೋಷಣಾ ವಾಕ್ಯವೊಂದನ್ನು ಹೊರಡಿಸಿ ತನ್ಮೂಲಕ ಶುಶ್ರೂ ಷಕ ಕ್ಷೇತ್ರದ ವಿಚಾರಗಳ ಬಗ್ಗೆ ಪ್ರಪಂಚಾದ್ಯಂತ ಅರಿವು ಮೂಡಿಸಲಾಗುತ್ತಿದೆ. ಈ ವರ್ಷದ ಘೋಷಣಾ ವಾಕ್ಯ ಶುಶ್ರೂಷಕ
ಕ್ಷೇತ್ರಕ್ಕೆ ತೊಡಗಿಸಿಕೊಂಡು, ಮನ್ನಣೆ ನೀಡಿ ಮುನ್ನಡೆಸಿ ವಿಶ್ವ ಆರೋಗ್ಯ ಕಾಪಾಡುವ ಧ್ವನಿಯನ್ನು ಪ್ರಸರಿಸಿ ಎಂಬುದಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಕಂಕಣತೊಡಬೇಕೆಂಬುದರ ಬಗ್ಗೆ ಅರಿವು ಮೂಡಿಸುವುದಾಗಿದೆ.

ಶುಶ್ರೂಷಕ ವೃತ್ತಿಗೆ ಭಾರತದಲ್ಲಿ ಸುದೀರ್ಘ ಇತಿಹಾಸವಿದ್ದು, ಕ್ರಿ.ಪೂ.250ರಲ್ಲಿ ಚರಕನ ಕಾಲದಲ್ಲಿ ಪುರುಷ ಶುಶ್ರೂಷಕರನ್ನು ತರಬೇತುಗೊಳಿಸಿದ ಮಾಹಿತಿ ಲಭ್ಯವಿದೆ. 17ನೇ ಶತಮಾನದವರೆಗೆ ಶುಶ್ರೂಷಕ ತರಬೇತಿ ವ್ಯವಸ್ಥೆ ಸಂಘಟನೆಯಾಗದಿರುವು ದನ್ನು ಗುರುತಿಸಲಾಗಿದೆ. ಅಲ್ಲಿಯವರೆಗೆ ತರಬೇತಿ ಪಡೆದ ಸ್ತ್ರೀಯರು ಹೆರಿಗೆಗಳನ್ನು ನಿರ್ವಹಿಸುತ್ತಿದ್ದರು. 17ನೇ ಶತಮಾನದಲ್ಲಿ
ಪೋರ್ಚುಗೀಸರು ಆಧುನಿಕ ನರ್ಸಿಂಗ್ ಜಾರಿಗೆ ತಂದರು. 1664ರಲ್ಲಿ ಮದ್ರಾಸಿನಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಸೇನಾಧಿ ಪತಿಗಳಿಗಾಗಿ ಆಧುನಿಕ ಆಸ್ಪತ್ರೆಯನ್ನು ಪ್ರಥಮ ಬಾರಿಗೆ ಸ್ಥಾಪಿಸಿದರು.

ತದನಂತರ ಕೋಲ್ಕತ್ತಾದಲ್ಲಿ (1708) ಹೀಗೆ ಹಲವಾರು ಕಡೆ ಭಾರತದಲ್ಲಿ ಆಧುನಿಕ ಆಸ್ಪತ್ರೆಗಳು ಪ್ರಾರಂಭವಾಗಿ ಕರ್ನಾಟಕ ದಲ್ಲಿ ಬೆಂಗಳೂರಿನಲ್ಲಿ ಆಧುನಿಕ ಬೌರಿಂಗ್ ಆಸ್ಪತ್ರೆ ಆರಂಭವಾಯಿತು(1895). 1861ರಲ್ಲಿ ಭಾರತದಲ್ಲಿ ಫಾರೆನ್ಸ್ ನೈಟಿಂಗೇಲ್ ಆಧಾರಿತ ಆಧುನಿಕ ಶುಶ್ರೂಷಕ ಸೇವೆ ಮಿಲಿಟರಿ ಮತ್ತು ನಾಗರಿಕ ಆಸ್ಪತ್ರೆಗಳಲ್ಲಿ ಪ್ರಾರಂಭವಾಯಿತು. ದೆಹಲಿಯ ಸ್ಟೀವನ್ಸ್ ಆಸ್ಪತ್ರೆ ಆಧುನಿಕ ಶುಶ್ರೂಷಕಿಯರನ್ನು ತರಬೇತುಗೊಳಿಸಿದ ಭಾರತದ ಮೊಟ್ಟ ಮೊದಲ ಆಸ್ಪತ್ರೆಯಾಗಿದ್ದು, ತದನಂತರ 18ರಿಂದ ೧೯ನೇ ಶತಮಾನದಲ್ಲಿ ಬಹುಪಾಲು ಮಿಷನ್ ಆಸ್ಪತ್ರೆಗಳಲ್ಲಿ ನರ್ಸಿಂಗ್ ಶಾಲೆಗಳು ಪ್ರಾರಂಭವಾದವು.

ಮೊದಲ ಬಾರಿಗೆ 4 ವರ್ಷದ ಬಿಎಸ್‌ಸಿ ನರ್ಸಿಂಗ್ ಅನ್ನು ಪ್ರಾರಂಭಿಸಿದ ಹೆಗ್ಗಳಿಕೆ ದೆಹಲಿಯ ಆರ್‌ಎಕೆ ಕಾಲೇಜ್ ಆಫ್ ನರ್ಸಿಂಗ್‌ ನದಾಗಿದ್ದು (1946)ತದನಂತರ ಸಿಎಂಸಿ ವೆಲ್ಲೂರಿನಲ್ಲಿ ಪ್ರಾರಂಭವಾಗಿ, ಇಂದು ದೇಶಾದ್ಯಂತ ವಿವಿಧ ಬಗೆಯ ನರ್ಸಿಂಗ್ ಕೋರ್ಸ್‌ಗಳಿಗೆ ತರಬೇತಿ ನೀಡುವ ಐಎನ್‌ಸಿಯಿಂದ ಮಾನ್ಯತೆ ಪಡೆದ ಸುಮಾರು ಒಟ್ಟು 7000 ನರ್ಸಿಂಗ್  ಕಾಲೇಜು ಗಳಿವೆ.

ಕರ್ನಾಟಕದಲ್ಲಿಯೇ ಸುಮಾರು ಐಎನ್‌ಸಿಯಿಂದ ಮಾನ್ಯತೆ ಪಡೆದ ನಾನಾ ನರ್ಸಿಂಗ್ ಕೋರ್ಸ್‌ಗಳಿಗೆ ತರಬೇತಿ ನೀಡುವ ಒಟ್ಟು 1700 ನರ್ಸಿಂಗ್ ಕಾಲೇಜುಗಳಿವೆ. ನರ್ಸಿಂಗ್‌ನಲ್ಲಿ ಎಎನ್‌ಎಂ, ಜಿಎನ್‌ಎಂ, ಬಿಎಸ್‌ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್, ಪಿಎಚ್
.ಡಿ ನರ್ಸಿಂಗ್, ಡಿಪ್ಲೋಮಾ ನರ್ಸಿಂಗ್ ಪದವಿಗಳಿದ್ದು, ಇವುಗಳಲ್ಲಿರುವ ಪಠ್ಯಕ್ರಮಗಳು ಎಂಬಿಬಿಎಸ್ ವಿದ್ಯಾರ್ಥಿಗಳ ಪಠ್ಯಕ್ರಮ ಗಳಿಗೆ ಹೆಚ್ಚೂ ಕಮ್ಮಿ ತಾಳೆಯಾಗುತ್ತದೆ. ಪರಿಣತಿ ಪಡೆದ ನರ್ಸಿಂಗ್ ಪದವೀಧರರಿಗೆ ಬಹುತೇಕ ವೈದ್ಯರಷ್ಟೇ ಜ್ಞಾನ ವಿರುತ್ತದೆ ಯೆಂಬುದು ಅತಿಶಯೋಕ್ತಿಯೇನಲ್ಲ.

ಭಾರತದ ಶುಶ್ರೂಷಕರ ಪರಿಷತ್(ಇಂಟರ್‌ನ್ಯಾಷನಲ್ ನರ್ಸಿಂಗ್ ಕೌನ್ಸಿಲ್) ಭಾರತ ಸರಕಾರದ ಸಂಸ್ಥೆಯಾಗಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ನರ್ಸಿಂಗ್ ಕಾಲೇಜುಗಳ ಗುಣಮಟ್ಟವನ್ನು ನಿರ್ಧರಿಸಿ ಉತ್ಕೃಷ್ಟ ತರಬೇತಿ ನೀಡುವ ಕಾಲೇಜುಗಳಿಗೆ ಮಾತ್ರ ಮಾನ್ಯತೆ ನೀಡುತ್ತದೆ. ಇಷ್ಟಾದರೂ ಅಲ್ಲಲ್ಲಿ ಲೋಪದೋಷಗಳ ಆರೋಪಗಳಿಂದ ಈ ಸಂಸ್ಥೆ ಹೊರತಾಗಿಲ್ಲದಿರುವುದು ದುರದೃಷ್ಟಕರ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯಸೇವೆಯ ಸಿಬ್ಬಂದಿಯಲ್ಲಿ 3ರಲ್ಲಿ 2ರಷ್ಟು ದಾದಿಯರಾಗಿದ್ದು, ದಾದಿಯರಿಗೆ ಬಹಳ ಬೇಡಿಕೆ ಇದೆ. ಅವಶ್ಯಕ ದಾದಿಯರನ್ನು ಸಿದ್ಧಗೊಳಿಸುವಲ್ಲಿ ಭಾರತ ಸೇರಿದಂತೆ ಬಹುಪಾಲು ರಾಷ್ಟ್ರಗಳು ವಿಫಲರಾಗಿರುವುದು ದುರ್ದೈವ. ವೈದ್ಯವಿಜ್ಞಾನ ವಿಶೇಷ ಕವಲುಗಳಾಗಿ ವಿಸ್ತಾರವಾದಂತೆ ಶುಶ್ರೂಷಕ ಶಿಕ್ಷಣ ಕ್ಷೇತ್ರದಲ್ಲೂ ವಿಶೇಷ ಪರಿಣತಿಯ ದಾದಿಯರ ಅವಶ್ಯಕತೆ ಹೆಚ್ಚಾಗಿರುತ್ತದೆ.

ಸಾಮಾನ್ಯ ದಾದಿಯರ ಜತೆಗೆ, ಶಸ್ತ್ರಕ್ರಿಯಾ ದಾದಿಯರು, ಐಸಿಯು ದಾದಿಯರು, ಹೆರಿಗೆ ದಾದಿಯರು, ನರ ದಾದಿಯರು, ಹೃದಯ ದಾದಿಯರು, ತುರ್ತುಚಿಕಿತ್ಸಾ ದಾದಿಯರು ಹೀಗೆ ವಿಶಿಷ್ಟ ತರಬೇತಿಯ ದಾದಿಯರ ಅವಶ್ಯಕತೆ ಹೆಚ್ಚಾಗುತ್ತಿದ್ದು, ಈ ಕ್ಷೇತ್ರಗಳ  ಪರಿಣತ ದಾದಿಯರ ಕೊರತೆ ಎದ್ದುಕಾಣುತ್ತಿದೆ. ಭಾರತದಲ್ಲಂತೂ ದಾದಿಯರಿಗೆ ಬಹುಬೇಡಿಕೆ ಇದ್ದರೂ ಇದಕ್ಕೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗದಿರುವುದು ಶೋಚನೀಯ. ದಾದಿಯ ವೃತ್ತಿಯ ಬಗ್ಗೆ ನಮ್ಮ ಸಮಾಜದಲ್ಲಿ ಹಿಂದೆ ಇದ್ದ ಕೀಳು ಮನೋ
ಭಾವ ಮತ್ತು ಈ ಕ್ಷೇತ್ರದ ಬೇಡಿಕೆಯ ಅರಿವಿಲ್ಲದಿರುವುದು ಇದಕ್ಕೆ ಬಹುಮುಖ್ಯ ಕಾರಣ.

ಸರಕಾರ ಈ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಈ ವೃತ್ತಿಯ ಸೇವೆ ಗಣ್ಯವಾಗಿದ್ದರೂ ದಾದಿಯರಿಗೆ ನೀಡುವ ಕಡಿಮೆ ಸಂಬಳವೂ ಸಹ ಇದನ್ನು ಹೆಚ್ಚು ಆಕರ್ಷಿಸುವಲ್ಲಿ ವಿಫಲವಾಗಿರಬಹುದು. ಭಾರತದಲ್ಲಿ ಸುಮಾರು 4 ಲಕ್ಷ ನೋಂದಾಯಿತ ದಾದಿಯರಿದ್ದು, ಕರ್ನಾಟಕದಲ್ಲಿ ಸುಮಾರು 45000 ಕಾರ್ಯನಿರ್ವಹಿಸುವ ದಾದಿಯರಿರುವುದು ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಸಾವಿರ ಜನಸಂಖ್ಯೆಗೆ 3 ದಾದಿಯರಿರಬೇಕಾಗಿದ್ದು, ಇಂದು 1.7 ದಾದಿಯರಿದ್ದು, ಅವಶ್ಯಕತೆಗಿಂತ ಶೇ 43೩ರಷ್ಟು ದಾದಿಯರ ಕೊರತೆ ಇದೆ.

ಆರೋಗ್ಯ ಸೇವೆ ವಿತರಣೆ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಬಹಳ ಮುಖ್ಯವಾಗಿದ್ದು, ಇವರು ರೋಗಿ ಮತ್ತು ವೈದ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಸುವುದರಿಂದ ಇವರಿಂದಾಗುವ ಕೊರತೆಗಳು ರೋಗಿಯ ಮೇಲೆ ಗಂಭೀರ ಪ್ರಮಾಣದ ದುಷ್ಪರಿಣಾಮವನ್ನು ಬೀರುತ್ತವೆ, ಹಾಗೆಯೇ ತಾಂತ್ರಿಕ ಕೌಶಲ್ಯತೆಯುಳ್ಳ, ನಗುಮುಖದ ಮಾನವೀಯ ಅಂತಃಕರಣದ ದಾದಿ ಯರು ರೋಗಿಗಳ ಪಾಲಿಗೆ ಸಂಜೀನಿಗಳಾಗುತ್ತಾರೆ. ಇಂತಹ ಸಂಜೀನಿ ದಾದಿಯರನ್ನು ಹೆಚ್ಚು ಸಂಖ್ಯೆಯಲ್ಲಿ ತರಬೇತು ಗೊಳಿಸುವ ದಿಕ್ಕಿನಲ್ಲಿ ಸರಕಾರ ಮತ್ತಷ್ಟು ಕಾರ್ಯೋನ್ಮುಖವಾಗಲಿ ಎಂದು ಆಶಿಸೋಣ.