Friday, 13th December 2024

ಸರಕಾರಿ ಶಾಲೆಗಳೂ ಪ್ರತಿಷ್ಠಿತ ಶಾಲೆಗಳಾಗುವುದು ಯಾವಾಗ?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

ಶಿಕ್ಷಕರು ಇರುವ ಸೌಲಭ್ಯಗಳಲ್ಲಿಯೇ ಯಾರನ್ನೂ ದೂರದೇ ಕೆಲಸ ಮಾಡುವುದೊಳಿತು. ಮುಖ್ಯವಾಗಿ ಖಾಸಗಿ ಶಾಲೆಯವರಿಗಿಂತ ಸರಕಾರಿ ಶಾಲೆಯ ಶಿಕ್ಷಕರ ಬೋಧನೆ ಹೇಗೆ ಭಿನ್ನವೆಂಬುದು ಮಕ್ಕಳ ಕಲಿಕೆಯಲ್ಲಿ ವ್ಯಕ್ತವಾದರೆ, ಮಕ್ಕಳ ದಾಖಲಾತಿಗೆ ಸಹಕಾರಿಯಾಗುತ್ತದೆ.

ಒಂದು ದೇಶದ ಭವಿಷ್ಯವು ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ.ದಿನದಲ್ಲಿ ಬರೀ ಎಂಟು ಗಂಟೆ ಮಾತ್ರ ಮಗು ಶಾಲೆಯಲ್ಲಿ ಇರುತ್ತದೆಯಾದರೂ ಶಾಲೆಯ ಪ್ರಭಾವವು ಮಾತ್ರ ಮಗುವಿನ ಸರ್ವಾಂಗೀಣ ವಿಕಾಸಕ್ಕೆೆ ಸಹಾಯವಾಗುತ್ತದೆ. ಶಿಕ್ಷಕರದ್ದಂತೂ ಇದರಲ್ಲಿ ಅಗ್ರಗಣ್ಯ ಸ್ಥಾಾನ. ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ‘ರೈಲ್ವೇ ಮಾಸ್ಟರ್‌ಗೆ ನಿದ್ದೆ ಇಲ್ಲ. ಕನ್ನಡ

ಶಾಲೆ ಮಾಸ್ತರಿಗೆ ಬುದ್ಧಿಿ ಇಲ್ಲ’ ಎಂಬ ಮಾತನ್ನು ಕೆಲವರು ಹೇಳುತ್ತಿಿದ್ದರು. ರೈಲ್ವೇ ಮಾಸ್ಟರ್‌ಗೆ ರೈಲು ಬರುವುದನ್ನು ಕಾಯುವ ಸ್ಥಿಿತಿ ಇರುವುದರಿಂದ ನಿದ್ದೆ ಕಡಿಮೆಯಾಗುವ ಸಂಭವವಿದೆ ಎಂಬುದನ್ನು ಒಪ್ಪಿಿಕೊಳ್ಳಬಹುದು. ಆದರೆ ಇಂದಿನ ಶಾಲಾ ಮಾಸ್ತರರ ಬಗ್ಗೆೆ ಇರುವ ಮಾತನ್ನು ಒಪ್ಪಿಿಕೊಳ್ಳಲು ಸಾಧ್ಯವೇ ಇಲ್ಲ. ಇಂದು ಸರಕಾರಿ ಶಾಲಾ ಶಿಕ್ಷಕರ ಆಯ್ಕೆೆ ಪ್ರಕ್ರಿಿಯೆಗಳು ತುಂಬಾ ಕ್ಲಿಿಷ್ಟವಾಗಿವೆ. ಒಂದು ಸಾಲದೆಂಬಂತೆ ಎರಡೆರಡು ಪರೀಕ್ಷೆಗಳು. ಅದರಲ್ಲೂ ಇಂತಿಷ್ಟೇ ಅಂಕ ತೆಗೆಯಬೇಕೆಂಬ ನಿಯಮಗಳಿರುವುದರಿಂದ ಆ ಹುದ್ದೆಗಳಿಗೆ ಸಮರ್ಥರೇ ಆಯ್ಕೆೆಯಾಗಲು ಕಾರಣವಾಗಿವೆ. ಆದರೆ ವಿಪರ್ಯಾಸವೆಂದರೆ, ಅಂತಹ ಬುದ್ಧಿಿವಂತರೇ ಆಯ್ಕೆೆಯಾಗಿರುವ ಶಾಲೆಗಳಿಗೆ ಪೋಷಕರು ಸೇರಿಸದಿರುವುದು ಪರಮಾಶ್ಚರ್ಯದ ಸಂಗತಿಯಾಗಿದೆ.

ಮೊದಲನೆಯದಾಗಿ, ಶಿಕ್ಷಕರು ಕೆಲಸಕ್ಕೆೆ ನೇಮಕವಾಗುವ ಪೂರ್ವದಲ್ಲಿ ಅವರಿಗಿದ್ದ ಓದುವ ಹಂಬಲ ಕೆಲಸ ಸಿಕ್ಕ ನಂತರ ಅದೇ ಹಂಬಲ ಇರುವುದಿಲ್ಲ. ಕೆಲವರಿಗೆ ಪುಸ್ತಕ ಓದುವ ಹವ್ಯಾಾಸ ಮುಂದುವರಿಸಿರುತ್ತಾಾರದರೂ, ಅಂಥವರ ಸಂಖ್ಯೆೆ ಕಡಿಮೆ! ‘ಲೈಫ್ ಸೆಟ್‌ಲ್‌ ಆಯ್ತು’ ಎಂಬ ಉದಾಸೀನ ಮನೋಭಾವವೋ, ಆರ್ಥಿಕ ಅಭಿವೃದ್ಧಿಿಯತ್ತ ಗಮನಹರಿಸಿದ್ದೋ, ಕೌಟುಂಬಿಕ ಪರಿಸರವೋ ಅವರು ಓದಿನಿಂದ ವಿಮುಖರಾಗಿದ್ದಕ್ಕೆೆ ಕಾರಣವಾಗಿರಬಹುದು. ಮಕ್ಕಳು ಶಿಕ್ಷಕರು ಹೇಳಿದಂತೆ ಮಾಡುವುದಿಲ್ಲ. ಬದಲಾಗಿ ಅವರು ಮಾಡಿದಂತೆ ಮಾಡುತ್ತಾಾರೆ! *ಟಟ್ಟ ಛ್ಚಿಛ್ಟಿಿ ಅ್ಝಡಿ ಇಟಞ್ಝಜ್ಞಿಿ. ಶಿಕ್ಷಕರು ಇರುವ ಸೌಲಭ್ಯಗಳಲ್ಲಿಯೇ ಯಾರನ್ನೂ ದೂರದೇ ಕೆಲಸ ಮಾಡುವುದೊಳಿತು. ಮುಖ್ಯವಾಗಿ ಖಾಸಗಿ ಶಾಲೆಯವರಿಗಿಂತ ಸರಕಾರಿ ಶಾಲೆಯ ಶಿಕ್ಷಕರ ಬೋಧನೆ ಹೇಗೆ ಭಿನ್ನವೆಂಬುದು ಮಕ್ಕಳ ಕಲಿಕೆಯಲ್ಲಿ ವ್ಯಕ್ತವಾದರೆ, ಮಕ್ಕಳ ದಾಖಲಾತಿಗೆ ಸಹಕಾರಿಯಾಗುತ್ತದೆ.

ಎರಡನೆಯದಾಗಿ ಶಿಕ್ಷಕರಿಗೆ ಬೋಧನೆಯ ಜತೆಗೆ ಇತರೆ ಕೆಲಸಗಳನ್ನು ವಹಿಸಿ ಮೂಗಿಗಿಂತ ಮೂಗುತಿ ಭಾರ ಎಂಬಂತಾಗಬಾರದು. ಅವರಿಗೆ ಕಲಿಸುವ ಕೆಲಸಕ್ಕೆೆ ಹೆಚ್ಚಿಿನ ಆದ್ಯತೆ ಕೊಡುವ ವಾತಾವರಣ ಸೃಷ್ಟಿಿಸಿ, ಅದನ್ನು ವಸ್ತುನಿಷ್ಟವಾಗಿ ಒರೆಗೆ ಹಚ್ಚುವ ಕೆಲಸವಾಗಬೇಕು. ಮಕ್ಕಳು ಕಡ್ಡಾಾಯವಾಗಿ ಸುಲಲಿತವಾಗಿ ಓದುವ, ತಪ್ಪಿಿಲ್ಲದೇ ಬರೆಯುವ, ಲೆಕ್ಕ ಮಾಡುವ ಸಾಮರ್ಥ್ಯವನ್ನು ಗಳಿಸಿರಬೇಕು. ಪ್ರಮುಖವಾಗಿ ಇಂಗ್ಲಿಿಷ್ ಕಲಿಕೆಗೆ ಹೆಚ್ಚಿಿನ ಆದ್ಯತೆ ಕೊಡಬೇಕು. ಯಾರು ಏನೇ ಹೇಳಿದರೂ ಇಂಗ್ಲಿಿಷ್ ಕಲಿಕೆಗೆ ಪೋಷಕರು ಒತ್ತಾಾಸೆ ತೋರುತ್ತಿಿದ್ದಾರೆಂಬುದು ಸೂರ್ಯನಷ್ಟೇ ಸತ್ಯ! ಮಾರ್ಕೆಟಿಂಗ್ ತಂತ್ರದಂತೆ ಗ್ರಾಾಹಕರ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲಿ ಗ್ರಾಾಹಕರೆಂದರೆ ಪೋಷಕರೇ.

ಮೂರನೆಯದಾಗಿ, ಪ್ರತಿಭಾವಂತ ಶಿಕ್ಷಕರನ್ನು ಶಿಕ್ಷಣ ಇಲಾಖೆಯಲ್ಲಿ ಉಳಿಸಿಕೊಳ್ಳುವ ಶಿಕ್ಷಕಸ್ನೇಹಿ ವಾತಾವರಣವು ಸೃಷ್ಟಿಿಯಾಗಬೇಕು. ಇಂದು ಏನಾಗುತ್ತಿಿದೆ ಎಂದರೆ, ಯಾವುದೇ ಬಡ್ತಿಿ ಇಲ್ಲದೇ ನಿವೃತ್ತಿಿಯಾಗುವವರೆಗೂ,

ಅದೇ ಹುದ್ದೆಯಲ್ಲೇ ಮುಂದುವರಿಯುವ ಸ್ಥಿಿತಿ ಶಾಲಾ ಶಿಕ್ಷಕರಿಗೆ ಇರುವುದರಿಂದ ಕೆಲವರು ಬೇರೆ ಹುದ್ದೆಗಳಿಗೆ ಹೋಗುತ್ತಿಿದ್ದಾರೆ! ಆದರೆ ಇತರೆ ಇಲಾಖೆಗಳಲ್ಲಿ ಈ ಪರಿಸ್ಥಿಿತಿ ಇರುವುದಿಲ್ಲ. ಇನ್ನು ಪ್ರತಿಭಾವಂತರೆನಿಸಿಕೊಂಡವರು ಇಂಜಿನಿಯರ್, ವೈದ್ಯರಾಗಲು ಬಯಸಿದಂತೆ ಶಿಕ್ಷಕರಾಗಲು ಹಿಂದೇಟು ಹಾಕುತ್ತಿಿದ್ದಾರೆ.ಪೋಷಕರೂ ಸಹ ತಮ್ಮ ಮಕ್ಕಳನ್ನು ಶಿಕ್ಷಕ ವೃತ್ತಿಿಗೆ ಇಷ್ಟ ಪಟ್ಟು ಕಳಿಸುತ್ತಿಿಲ್ಲ. ಉದ್ಯೋೋಗ ಭೀತಿಯೂ ಇದಕ್ಕೆೆ ಕಾರಣವಾಗಿರಬಹುದು. ಕೆಲವರು ವರ್ಗಾವಣೆಯಲ್ಲಿರುವ ಕಠಿಣ ನಿಯಮಗಳಿಂದ ಬೇಸತ್ತು ಬೇರೆ ಇಲಾಖೆಗೆ ಹೋದ ಉದಾಹರಣೆಗಳಿವೆ. ಇವನ್ನು ನಿವಾರಿಸಬೇಕು.

ಶಾಲೆಗಳ ಭೌತಿಕ ನಿರ್ವಹಣೆಗೆ ಹೆಚ್ಚೆೆಚ್ಚು ಹಣಕಾಸಿನ ನೆರವು ನೀಡಬೇಕು. ಪೋಷಕರು ಇಂದು ಖಾಸಗಿ ಶಾಲೆಗಳ ಮೂಲಸೌಲಭ್ಯಗಳಿಗೆ ಬೆರಗಾಗಿ ತಮ್ಮ ಮಕ್ಕಳನ್ನು ಅಲ್ಲಿ ಸೇರಿಸುತ್ತಿಿದ್ದಾರೆ. ಇಂಥ ಅತ್ಯಾಾಧುನಿಕ ಸೌಲಭ್ಯಗಳನ್ನು ಸರಕಾರಿ ಶಾಲೆಗಳಿಗೆ ಒದಗಿಸಬೇಕು. ಇನ್ನು ಶಾಲೆಗಳ ರಿಪೇರಿಗಾಗಿ ತಕ್ಷಣಕ್ಕೆೆ ಬಿಡುಗಡೆಗೆ ಅನುವಾಗಲು ಸರಕಾರದಿಂದಲೇ ತಾಲೂಕಿನ ಶಿಕ್ಷಣಾಧಿಕಾರಿಗಳ ಇಲಾಖಾ ಖಾತೆಗೆ ತಾಲೂಕಿನ ಶಾಲೆಗಳ ದುರಸ್ತಿಿಗಾಗಿ ಮುಂಜಾಗ್ರತಾ ಕ್ರಮವಾಗಿ ಇಂತಿಷ್ಟು ಅನುದಾನವನ್ನು ಮೊದಲೇ ಮೀಸಲಿಟ್ಟಿಿರಬೇಕು.ಇದರಿಂದ ಹಾನಿಯಾದ ಕಟ್ಟಡಗಳ ತ್ವರಿತವಾಗಿ ಮರುನಿರ್ಮಾಣಕ್ಕೆೆ ಸಹಕಾರಿಯಾಗುತ್ತದೆ. ಹೀಗೆ ಶಾಲೆಯ ಮಾನವ ಸಂಪನ್ಮೂಲದ ಜತೆಗೆ ಭೌತಿಕ ಸಂಪನ್ಮೂಲವನ್ನು ಅಭಿವೃದ್ಧಿಿಪಡಿಸಿದರೆ ಸರಕಾರಿ ಶಾಲೆಗಳೂ ಪ್ರತಿಷ್ಠಿಿತ ಶಾಲೆಗಳಾಗಿ ಮಾರ್ಪಾಡುವುದರಲ್ಲಿ ಯಾವ ಸಂದೇಹವೂ ಇಲ್ಲ.