Friday, 13th December 2024

ಪಂಜರದೊಳಗಿದ್ದೂ ಸರಸ್ವತಿ ಪೂಜೆ ಬಗ್ಗೆ ಪ್ರಶ್ನೆ ?

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಸರಸ್ವತಿ ಪೂಜೆಯಂದು ಸಂವಿಧಾನಕ್ಕೆ ಪೂಜೆ ಮಾಡುವ ಧರ್ಮ ನಮ್ಮದು. ಸಂವಿಧಾನವನ್ನು ರಚಿಸಿರುವ ಬಾಬಾ ಸಾಹೇಬರು ಇಸ್ಲಾಂ
ಧರ್ಮದಲ್ಲಿನ ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದ್ದರು. ಬುರ್ಖಾ ಪದ್ಧತಿಯಿಂದ ಮುಸ್ಲಿಂ ಮಹಿಳೆಯರು ಒಳಮನೆಗೆ ಸೀಮಿತ ರಾಗಿದ್ದಾರೆ.

ರ್ಷಕ್ಕೊಮ್ಮೆ ಪರೀಕ್ಷೆಗಳು ಶುರುವಾಗುವ ವಾರಗಳ ಮುಂಚಿತವಾಗಿ ವಿದ್ಯಾ ದೇವಿ ಸರಸ್ವತಿಯನ್ನು ಪೂಜಿಸಿ ಓದಲು ಕೂರುವ ಸಂಪ್ರ ದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಜಾತಿ- ಮತ ಭೇದಗಳನ್ನು ಮೀರಿ ಸರಸ್ವತಿಯ ಆರಾಧನೆಯನ್ನು
ಶಾಲೆಗಳಲ್ಲಿ ಮಾಡುತ್ತ ಬಂದಿದ್ದೇವೆ. ಹಿಜಾಬ್ ಗಲಾಟೆಯ ನೆಪದಲ್ಲಿ ನೂರಾರು ವರ್ಷಗಳಿಂದ ಶಾಲೆಗಳಲ್ಲಿ ಆಚರಿಸಿಕೊಂಡು ಬಂದಿದ್ದಂತಹ ಸರಸ್ವತಿ ಪೂಜೆಯನ್ನು ಪ್ರಶ್ನಿಸಿ ಮುಸಲ್ಮಾನ್ ಹೆಣ್ಣು ಮಕ್ಕಳು ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಮೊದಲಿನಿಂದಲೂ ಮುಸಲ್ಮಾನ್ ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುತ್ತಿರುವುದು ಕಡಿಮೆ. ಪುರುಷ ಪ್ರಧಾನ ಧರ್ಮದಲ್ಲಿ ಹುಟ್ಟಿರುವ ಮುಸಲ್ಮಾನ್ ಮಹಿಳೆಯರನ್ನು ಹೆಚ್ಚು ವಿದ್ಯಾವಂತರಾಗಿಸುವ ಒತ್ತಾಸೆ ಮುಸ್ಲಿಂ ಧರ್ಮದಲ್ಲಿಲ್ಲ. ಹುಟ್ಟಿನಿಂದ ನೈಸರ್ಗಿಕ ವಾಗಿ ಬರಬೇಕಿರುವ ಹಲವು ಹಕ್ಕು ಗಳನ್ನು ‘ಇಸ್ಲಾಂ’ ಹೆಣ್ಣು ಮಕ್ಕಳಿಂದ ಕಿತ್ತುಕೊಂಡಿದೆ. ಮುಸಲ್ಮಾನ್ ಹೆಣ್ಣು ಮಗಳೊಬ್ಬ ಳಿಗೆ ‘ವಿಚ್ಛೇದನ’ ನೀಡುವ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಅನಾಯಾಸವಾಗಿ ಆಕೆ ಮಸೀದಿಗಳಲ್ಲಿ ಗಂಡಸರ ಜತೆಗೆ ನಮಾಜ್ ಮಾಡುವ ಹಕ್ಕನ್ನು ನೀಡಿಲ್ಲ.

ತನ್ನ ಮುಖವನ್ನು ಸಮಾಜದಲ್ಲಿ ತೋರಿಸುವ ಹಕ್ಕನ್ನು ‘ಬುರ್ಖಾ’ ಮೂಲಕ ಕಿತ್ತು ಕೊಳ್ಳಲಾಗಿದೆ. ಇಸ್ಲಾಂ ಧರ್ಮದಲ್ಲಿ ಹೆಣ್ಣನ್ನು ಕೇವಲ ಒಂದು ಭೋಗದ ವಸ್ತುವನ್ನಾಗಿ ನೋಡಲಾಗುತ್ತಿದೆ. ಹೆಣ್ಣುದೇವರೆಂಬ ಕಲ್ಪನೆಯೇ ಅವರಲ್ಲಿ ಇಲ್ಲ. ಅಹುವೊಬ್ಬನೇ ದೇವರು, ಆತನೊ ಬ್ಬನೇ ಸೃಷ್ಟಿಕರ್ತನೆಂದು ಹೇಳಲಾಗಿದೆ. ಧರ್ಮದ ಹುಟ್ಟಿನಲ್ಲಿಯೇ ಹೆಣ್ಣನ್ನು ಕಡೆಗಣಿಸಿರುವ ಧರ್ಮ ಇಸ್ಲಾಂ. ಧಾರ್ಮಿಕ ವಾಗಿ, ಸಾಮಾ ಜಿಕವಾಗಿ, ಆರ್ಥಿಕವಾಗಿ ಹಲವು ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಧರ್ಮದ ಕಟ್ಟುಪಾಡುಗಳಿಂದ ಹೊರಬರಲಾಗದೆ ಪಡಬಾರದ ಕಷ್ಟ ಪಡುತ್ತಿದ್ದರೂ ಸಹ ‘ಹಿಜಾಬ’ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಲಾಗದೇ ಧರ್ಮದ ಹೆಸರಿನಲ್ಲಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುವತ್ತ ವಾಲುತ್ತಿರುವುದು ದೊಡ್ಡ ದುರಂತ.

ಸನಾತನ ಹಿಂದೂ ಧರ್ಮದಲ್ಲಿ ಹೆಣ್ಣನ್ನು ದೇವರೆಂದು ಪೂಜಿಸಲಾಗುತ್ತದೆ. ವಿದ್ಯೆಯ ಅದಿದೇವತೆ ಸರಸ್ವತಿ, ಐಶ್ವರ್ಯಕ್ಕೆ ಅಧಿದೇವತೆ ಲಕ್ಷ್ಮಿ, ಆಹಾರಕ್ಕೆ ಅಧಿದೇವತೆ ಅನ್ನ ಪೂರ್ಣ, ರಾಕ್ಷಸರ ಸಂಹಾರ ಮಾಡುವವಳು ಕಾಳಿ…. ಶಿವನಷ್ಟೇ ಪ್ರಾಮುಖ್ಯವನ್ನು ಪಾರ್ವತಿ ದೇವಿಗೆ ನೀಡುತ್ತೇವೆ. ನದಿಗಳಿಗೆ ಹೆಚ್ಚಾಗಿ ಹೆಣ್ಣಿನ ಹೆಸರನ್ನೇ ಇಟ್ಟಿರುವ ಸಂಸ್ಕೃತಿ ನಮ್ಮದು. ಗಂಗೆಗೆ ನಿತ್ಯ ಪೂಜೆ ನಡೆಯುತ್ತದೆ. ಕಾವೇರಿಯ ತಟದಲ್ಲಿ ಆರತಿ ಮಾಡುತ್ತೇವೆ. ಹೆಣ್ಣನ್ನು ಸೃಷ್ಟಿಯ ಮೂಲವೆಂದು ಪೂಜಿಸುವ ಧರ್ಮ ನಮ್ಮದು. ಹೆಣ್ಣಿಗೆ ಹಿಂದೂ ಧರ್ಮ ನೀಡಿರುವ ಸ್ಥಾನಮಾನವನ್ನು ಬೇರೆ ಯಾವ ಧರ್ಮವೂ ನೀಡಿಲ್ಲ.

ಇಸ್ಲಾಂ ಧರ್ಮದಲ್ಲಿನ ಹೆಣ್ಣಿನ ಕಡೆಗಣನೆಯನ್ನು ಮನಗೊಂಡ ಮುಸ್ಲಿಂ ಹೆಣ್ಣು ಮಕ್ಕಳು, ಹೆಣ್ಣನ್ನು ವಿದ್ಯಾದೇವತೆಯಂತೆ ಪೂಜಿಸುವ ಸರಸ್ವತಿಯ ಆರಾಧನೆಯನ್ನು ಪ್ರಶ್ನಿಸಬಾರದಿತ್ತು. ಇಸ್ಲಾಂ ಧರ್ಮದಲ್ಲಿ ಹೆಣ್ಣಿಗೆ ಸಿಗದ ಗೌರವವನ್ನು ಹಿಂದೂ ಧರ್ಮ ತನ್ನ ಹುಟ್ಟಿನಲ್ಲಿಯೇ ಹೆಣ್ಣಿಗೆ ನೀಡಿದೆ. ಮಾಜಿ ರಾಷ್ಟ್ರಪತಿಯಾಗಿದ್ದಂತಹ ಅಬ್ದುಲ್ ಕಲಾಂ, ಸರಸ್ವತಿಯ ಆರಾಧಕರಾಗಿದ್ದರು. ಕಲಾಂ ಈ ಹೆಣ್ಣುಮಕ್ಕಳಿಗೆ ಆದರ್ಶಪ್ರಾಯರಾಗಲಿಲ್ಲ. ಸರಸ್ವತಿಯಿಂದ ಪ್ರೇರೇಪಿತರಾಗಿದ್ದಂತಹ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರರ ಮಾತುಗಳನ್ನು ಕೇಳುತ್ತ ಕುಳಿತರೆ ಜೀವನದಲ್ಲಿ ಅದೆಷ್ಟೋ ವಿಷಯಗಳಿಗೆ ಪ್ರೇರಣೆ ಸಿಗುತ್ತದೆ.

ಇಂತಹ ಮಹಾನ್ ವ್ಯಕ್ತಿಯ ನಿಧನ ಹಲವು ಮುಸಲ್ಮಾನರಿಗೆ ನೋವನ್ನು ತರಿಸಲಿಲ್ಲ. ಕಾಶ್ಮೀರದಲ್ಲಿ ಸೈನಿಕರ ಗುಂಡೇಟಿಗೆ ಸಾಯುವ ಭಯೋತ್ಪಾದಕನಿಗೆ ಮಿಡಿಯುವ ಮನ ಇಬ್ರಾಹಿಂ ಸುತಾರರ ಮರಣಕ್ಕೆ ಮಿಡಿಯಲಿಲ್ಲ. ಸುತಾರ್ ರಿಗೆ ವಿದ್ಯಾ ದೇವತೆ ಸರಸ್ವತಿಯ ಆರಾಧನೆ ಅನ್ಯ ಧರ್ಮದ ಪಾಲನೆಯಾಗಿ ಕಾಣಿಸಲೇ ಇಲ್ಲ. ತಬಲಾವಾದನ ಶೈಲಿಯಿಂದ ಜನಮನ ಗೆದ್ದಿರುವ ಖ್ಯಾತ ತಬಲಾ ವಾದಕ
ಜಾಕಿರ್ ಹುಸೇನ್ ಸರಸ್ವತಿಯಿಂದ ಪ್ರೇರಿಪಿತರಾಗಿದ್ದವರು.

ಅವರಿಗೆ ಎಂದೂ ಸರಸ್ವತಿ ಪೂಜೆ ಅನ್ಯ ಧರ್ಮದ ಆರಾಧನೆಯಾಗಿ ಕಾಣಿಸಲೇ ಇಲ್ಲ. ಟಾಟಾ ಚಹಾ ಜಾಹೀರಾತಿನಲ್ಲಿ ತಾಜ್ ಮಹಲಿನ ಮುಂದೆ ಕುಳಿತು ತಬಲಾ ಬಾರಿಸುವ ಮೂಲಕ ಚಹಾ ಸವಿಯುವ ಜಾಕೀರ್ ಹುಸೇನ್ ಈ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಬೇಕಿತ್ತು.
ಹಿಂದೂ ಧರ್ಮದಲ್ಲಿ ಸಂಗೀತ ಕಲೆಯನ್ನು ಸರಸ್ವತಿಗೆ ಹೋಲಿಸಲಾಗುತ್ತದೆ. ಮನದಲ್ಲಿ ಸರಸ್ವತಿಯನ್ನು ನೆನೆಯದೇ ಹಾಡು ಹಾಡುವ ಸಂಗೀತಗಾರರು ಇಲ್ಲವೇ ಇಲ್ಲ. ಕನ್ನಡದ ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗಿದ್ದಂತಹ ಸಂಗೀತದ ರಿಯಾಲಿಟಿ ಕಾರ್ಯಕ್ರಮದಲ್ಲಿ ಹಾಡಿದ ಮುಸ್ಲಿಂ ಹೆಣ್ಣು ಮಗಳು ಸುಹಾನಾ ತನ್ನ ಸಂಗೀತಾಭ್ಯಾಸ ನಡೆಸಿದ್ದು ಸರಸ್ವತಿಯ ಆರಾಧಕರಿಂದ.

ಈಕೆ ಬಹಿರಂಗವಾಗಿ ಶಾಲೆಯಲ್ಲಿ ಹಿಜಾಬ ಮುಖ್ಯವಲ್ಲವೆಂದು ಹೇಳಿದಾಗಲೂ, ಪ್ರತಿಭಟಿಸುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳು ಈಕೆಯ ಮಾತುಗಳನ್ನು ಕೇಳಲಿಲ್ಲ. ತನ್ನದೇ ಧರ್ಮದ ಹಲವು ಮುಸ್ಲಿಂ ನಾಯಕರು ಕಾರ್ಯಕ್ರಮದಲ್ಲಿ ಆಕೆಯ ಹಾಡಿನ ಬಗ್ಗೆ ಚಕಾರವೆತ್ತಿದಾಗ, ಆಕೆಯ ಬೆಂಬಲಕ್ಕೆ ಇಂದು ಹಿಜಾಬನ ಹೆಸರಲ್ಲಿ ಸಂವಿಧಾನದ ಮೂಲಭೂತ ಹಕ್ಕಿನ್ನು ಪ್ರಶ್ನಿಸುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳು ನಿಲ್ಲಲಿಲ್ಲ. ಹಿಜಾಬ್ ಧರಿಸುವುದು ಸಂವಿಧಾನದ ಮೂಲಭೂತ ಹಕ್ಕೆನ್ನುವುದಾದರೆ ಸುಹಾನಾ ಹಾಡುವುದು ಸಹ ಸಂವಿಧಾನದ ಮೂಲಭೂತ
ಹಕ್ಕಲ್ಲವೇ ? ತಮ್ಮ ಅನುಕೂಲಕ್ಕೆ ತಕ್ಕಂತೆ ಒಮ್ಮೆ ಸಂವಿಧಾನ, ಒಮ್ಮೆ ಧರ್ಮವನ್ನು ಎಳೆತರುವ ಹೆಣ್ಣು ಮಕ್ಕಳಿಗೆ ಸರಸ್ವತಿ ಪೂಜೆಯ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ.

ಸರಸ್ವತಿ ಪೂಜೆಯಂದು ಸಂವಿಧಾನಕ್ಕೆ ಪೂಜೆ ಮಾಡುವ ಧರ್ಮ ನಮ್ಮದು. ಸಂವಿಧಾನವನ್ನು ರಚಿಸಿರುವ ಬಾಬಾ ಸಾಹೇಬರು ಇಸ್ಲಾಂ ಧರ್ಮದಲ್ಲಿನ ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದ್ದರು. ಬುರ್ಖಾ ಪದ್ಧತಿಯಿಂದ ಮುಸ್ಲಿಂ ಮಹಿಳೆಯರು ಒಳಮನೆಗೆ ಸೀಮಿತರಾಗಿ ದ್ದಾರೆ. ಸ್ವಂತ ಅಣ್ಣಂದಿರು, ತಂದೆ, ಚಿಕ್ಕಪ್ಪ ಎಲ್ಲರೂ ಸಂಶಯಾಸ್ಪದರೆಂದಿದ್ದರು. ಮುಸ್ಲಿಂ ಮಹಿಳೆ ಬುರ್ಖಾ ಧರಿಸಿ ಭಾರತದ ರಸ್ತೆ
ಗಳಲ್ಲಿ ನಡೆಯುವುದನ್ನು ನೋಡುವುದು ಭೀಕರ ದೃಶ್ಯವೆಂದು ಹೇಳಿದ್ದರು. ಬುರ್ಖಾ ಮಹಿಳೆಯ ದೈಹಿಕ ರಚನೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟು ಮಾಡುತ್ತದೆ.

ರಕ್ತ ಹೀನತೆ, ಕ್ಷಯ, ದುರ್ಗಂಧದ ರೋಗಗಳಿಗೆ ಇವರು ತುತ್ತಾಗುತ್ತಾರೆಂದು ಹೇಳಿದ್ದರು. ಮಿಗಿಲಾಗಿ ಬುರ್ಖಾ ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆಯೆಂದು ಹೇಳಿದ್ದರು. ಮುಸ್ಲಿಂ ಮಹಿಳೆಯರ ಬುರ್ಖಾ ಪದ್ಧತಿಯಿಂದ ಹಿಂದೂ ಮಹಿಳೆಯರ ನಡುವಿನ ಅಮೈತ್ರಿಗೆ ಕಾರಣವಾಗುತ್ತ ದೆಯೆಂದು ಹೇಳಿದ್ದರು. ವಿಜ್ಞಾನ ತನ್ನ ವೈರಿ ಎಂಬ ಇಸ್ಲಾಮಿನ ಭಾವನೆ ಅಚಲವಾಗಿದ್ದು, ಇದು ಹೀಗೆ ಅಚಲವಾಗಿ ಉಳಿದಿರುವುದು ಅಪಾಯಕಾರಿಯೆಂದು ಹೇಳಿದ್ದರು.

ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕುಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವ ಮುಸ್ಲಿಂ ಹೆಣ್ಣು ಮಕ್ಕಳು, ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬರ ಮಾತುಗಳನ್ನೇಕೆ ಕೇಳುತ್ತಿಲ್ಲ? ಸಂವಿಧಾನವನ್ನೇ ಸರಸ್ವತಿಯೆಂದು ಪೂಜಿಸುವಾಗ ಶಾಲೆಯಲ್ಲಿನ ಸರಸ್ವತಿ ಪೂಜೆಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇವರಿಗಿದೆ? ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವವರು ಸಂವಿಧಾನದಲ್ಲಿನ ಕರ್ತವ್ಯಗಳನ್ನು ಪಾಲಿಸಬೇಕು. ಸಂವಿಧಾನದ ಪರಿಚ್ಛೇದ ೫೧(ಅ) ನಲ್ಲಿ ದೇಶದ ಸಂವಿಧಾನದಡಿಯಲ್ಲಿ ಸ್ಥಾಪಿತವಾದಂತಹ ಸಂಸ್ಥೆಗಳಿಗೆ
ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಹೇಳಲಾಗಿದೆ. ಉಚ್ಚ ನ್ಯಾಯಾಲಯ ಸಂವಿಧಾನದಡಿಯಲ್ಲಿ ಸ್ಥಾಪಿತ ವಾಗಿರುವ ಸಂಸ್ಥೆಯಾಗಿದ್ದು ನ್ಯಾಯಾಲಯದ ಆದೇಶವನ್ನು ಗೌರವಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ.

ನ್ಯಾಯಾಲಯದ ಆದೇಶವನ್ನು ಗೌರವಿಸದೇ ರಸ್ತೆ ಗಿಳಿದು ಪ್ರತಿಭಟನೆ ಮಾಡುವುದು ಸಂವಿಧಾನಕ್ಕೆ ತೋರುವ ಅಗೌರವ. ಇದೇ ಪರಿಚ್ಛೇದದಲ್ಲಿ ಮಹಿಳೆಯರ ಘನತೆಗೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕೆಂದು ಹೇಳಿದೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬರು ಇಸ್ಲಾಂ ಧರ್ಮದಲ್ಲಿನ ಮಹಿಳೆಯರ ಮೇಲೆ ಹೇರಲಾಗಿರುವ ಘನತೆಗೆ ಚ್ಯುತಿ ತರುವ ಬುರ್ಖಾ ಪದ್ಧತಿಯ ಬಗ್ಗೆ ಅಷ್ಟು ಸ್ಪಷ್ಟವಾಗಿ ಹೇಳಿರುವಾಗ, ಅವರನ್ನು ವಿರೋಧಿಸುವುದು ಸಂವಿಧಾನಕ್ಕೆ ಮಾಡಿದಂಥ ಮತ್ತೊಂದು ಅವಮಾನ.

ಅಖಂಡ ಭಾರತದ ವಿಭಜನೆಗೂ ಮುಂಚಿನಿಂದಲೂ ಸರಸ್ವತಿ ಪೂಜೆಯನ್ನು ಗುರುಕುಲಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅಖಂಡ ಭಾರತ ವಿಭಜನೆಯಾದ ನಂತರ, ಷರಿಯಾ ಕಾನೂನನ್ನು ಪಾಲಿಸಲಿಚ್ಛಿಸದೆ ಪಾಕಿಸ್ತಾನಕ್ಕೆ ಹೋಗದೇ ಭಾರತದಲ್ಲಿ ನೆಲೆಸಿದ ಮುಸಲ್ಮಾ ನರು ಶತ ಶತಮಾನಗಳಿ0ದ ಆಚರಿಸಿಕೊಂಡು ಬಂದಂತಹ ಸರಸ್ವತಿ ಪೂಜಾ ಸಂಪ್ರದಾಯವನ್ನು ವಿರೋಽಸುವ ಯಾವುದೇ ಅಧಿಕಾರವನ್ನು ಹೊಂದಿಲ್ಲ.

ಭಾರತದಲ್ಲಿ ಕೊಟ್ಟಂತಹ ಆಶ್ರಯವನ್ನು ನೆನೆಯದೇ ಇಲ್ಲಿನ ಸಾವಿರಾರು ವರ್ಷಗಳ ಸಂಪ್ರದಾಯವನ್ನು ಪ್ರಶ್ನಿಸುವ ನೈತಿಕತೆ ಮುಸಲ್ಮಾನರಿಗಿಲ್ಲ. ಹಿಂದೂ ದೇವಸ್ಥಾನಗಳಲ್ಲಿ ಸಂಗ್ರಹವಾದಂತಹ ಹಣವು ಮುಜರಾಯಿ ಇಲಾಖೆಯ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ಅದೇ ಬೊಕ್ಕಸದಿಂದ ಪ್ರತಿವರ್ಷವೂ ಮುಸಲ್ಮಾನರ ಅಭಿವೃದ್ಧಿಗಾಗಿ ಹಣವನ್ನು ವ್ಯಯಿಸಲಾಗುತ್ತದೆ. ಸರಸ್ವತಿ ಹಿಂದೂ ದೇವರಲ್ಲವೇ? ಆಕೆಯ ದೇವಸ್ಥಾನದ ಹಣ ಮುಸಲ್ಮಾನರ ಅಭಿವೃದ್ಧಿಗೆ ಬಳಕೆಯಾಗುವುದನ್ನು ವಿರೋದಿಸುತ್ತಾರೆಯೇ ? ಕನಿಷ್ಠ
ಪಕ್ಷ ಹಿಂದೂ ದೇವಸ್ಥಾನಗಳಿಂದ ಸಂಗ್ರಹವಾದ ಹಣವು ತಮ್ಮ ಅಭಿವೃದ್ಧಿಯಲ್ಲಿ ಬಳಕೆಯಾಗುತ್ತಿದೆಯೆಂಬ ಸಾಮಾನ್ಯ ಜ್ಞಾನ ಈ ಹೆಣ್ಣು ಮಕ್ಕಳಿಗೆ ತಿಳಿದಿದ್ದರೆ, ಆ ನಿಯತ್ತಿನಿಂದಾದರೂ ಸರಸ್ವತಿ ಪೂಜೆಯ ಬಗ್ಗೆ ಹಗುರವಾಗಿ ಮಾತನಾಡ ಬಾರದಿತ್ತು. ಸಂವಿಧಾನದ ಪರಿಚ್ಛೇದ ೨೫ರ ಮೂಲಭೂತ ಹಕ್ಕನ್ನು ಕಂಠಪಾಠ ಮಾಡಿಕೊಂಡು ಬಂದು ಮಾಧ್ಯಮಗಳ ಎದುರು ಮಾತನಾಡಿದಾಕ್ಷಣ ಸಂವಿಧಾನ ಪಂಡಿತರಾಗುವುದಿಲ್ಲ.

ಇವರಿಗಿಷ್ಟ ಬಂದಂತೆ ಸಂವಿಧಾನವನ್ನು ವ್ಯಾಖ್ಯಾನಿಸಲು ಸಂವಿಧಾನವೇನು ದಿನ ಪತ್ರಿಕೆಯಲ್ಲ ಅಥವಾ ಸಾಮಾನ್ಯ ಪುಸ್ತಕವಲ್ಲ. ಬಹುತೇಕ ಮುಸಲ್ಮಾನರಿಗೆ ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಕಾರ್ಯಾಂಗದ ಮೇಲೆ ನಂಬಿಕೆಯಿಲ್ಲ. ನ್ಯಾಯಾಂಗದ ಮೇಲೂ ನಂಬಿಕೆಯಿಲ್ಲ. ಹಿಂದೂಗಳು ಬಾಬರನ ‘ರಾಮ ಮಂದಿರ ಧ್ವಂಸ’ ಪ್ರಕರಣದ ತೀರ್ಪಿಗಾಗಿ ೫೦೦ ವರ್ಷಗಳ ಕಾಲ ಕಾಯ್ದರು. ಆದರೆ, ಹಿಜಾಬಿನ ವಿಚಾರದಲ್ಲಿ ಉಚ್ಚ ನ್ಯಾಯಾಲಯದ ಆದೇಶ ಬಂದು 24 ಘಂಟೆಯೊಳಗೆ ಮುಸಲ್ಮಾನರು ಸರ್ವೋಚ್ಚ ನ್ಯಾಯಾಲಯ ದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ತನ್ನ ಧರ್ಮದ ಹುಟ್ಟಿನಿಂದಲೇ ಹೆಣ್ಣನ್ನು ಗೌರವಿಸದ ಇಸ್ಲಾಂ ಧರ್ಮದ ಪ್ರತಿಪಾದಕರಿಂದ ಹಿಜಾಬ್ ಹೆಸರಿನಲ್ಲಿ ಮುಸಲ್ಮಾನ್ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳ ರಕ್ಷಣೆಯ ಕೂಗು ಕೇಳಿ ಬರುತ್ತಿದೆ. ಹೆಣ್ಣನ್ನು ದೇವತೆಯಂತೆ ಕಾಣುವ ಹಿಂದೂ ಧರ್ಮದಲ್ಲಿ ಭಾರತವನ್ನು ಹೆಣ್ಣಿಗೆ ಹೋಲಿಸಲಾಗಿದೆ. ಸೃಷ್ಟಿಕರ್ತೆ ಜಗನ್ಮಾತೆಯನ್ನು ಪ್ರತಿನಿತ್ಯ ಪೂಜಿಸುವ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳು ದೇವರ ಪೂಜೆ ಮಾಡುವುದನ್ನು ನಿಷೇದಿಸಿಲ್ಲ.

ನವರಾತ್ರಿಯಂದು ನವದುರ್ಗೆಯರ ಪೂಜೆ ಮಾಡಲಾಗುತ್ತದೆ. ವಿದ್ಯಾವಾಹಿನಿ ಸರಸ್ವತಿಯ ಪೂಜೆಯನ್ನು ಮಾಡುವ ಮೂಲಕ ವಿದ್ಯೆಯ
ಅಽದೇವತೆಯನ್ನಾಗಿ ಆಕೆಯನ್ನು ಕಾಣಲಾಗುತ್ತದೆ. ಹೆಣ್ಣೆಂದರೆ ಪೂಜ್ಯ ಮನೋಭಾವದಿಂದ ಕಾಣುವ ಸನಾತನ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಹೆಮ್ಮೆ ಪಡಬೇಕಾದವರು ಶಾಲೆಯಲ್ಲಿನ ದೇವಿಯ ಆರಾಧನೆಯ ಬಗ್ಗೆ ಪ್ರಶ್ನೆ ಮಾಡುತ್ತಿರುವುದನ್ನು ನೋಡಿದರೆ ಇಸ್ಲಾಂ
ಮತಾಂಧತೆಯ ಅಮಲು ಯಾವ ಮಟ್ಟಕ್ಕೇರಿರಬೇಕೆಂಬು ದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಂವಿಧಾನಕ್ಕೆ ಗೌರವ ಕೊಡದವರಿಗೆ ತಿಳಿಹೇಳಿ ಪ್ರಯೋಜನವಿಲ್ಲ, ಬಹುಶಃ ಅಂಬೇಡ್ಕರರು ಇವರ ಈ ವರ್ತನೆಯನ್ನು ಅಂದೇ
ಮನಗೊಂಡು ಹಿಂದೂ ಧರ್ಮದಿಂದ ತಮಗಾದಂತಹ ಅವಮಾನಗಳಿಂದ ಬೇಸತ್ತಿದ್ದರೂ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲಿಲ್ಲ. ಸಂವಿಧಾನ ಹಾಗೂ ರಾಷ್ಟ್ರೀಯತೆಯನ್ನು ಗೌರವಿಸದವರಿಗೆ ಎಷ್ಟು ಪುಂಗಿ ಊದಿದರೂ ಪ್ರಯೋಜನವಿಲ್ಲ. ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನಿಟ್ಟುಕೊಂಡು ಆನೆ ನಡೆದದ್ದೇ ದಾರಿಯೆಂಬಂತೆ ತಮಗಿಷ್ಟ ಬಂದಂತೆ ಸಮಾಜದಲ್ಲಿ ಬದುಕುತ್ತಿದ್ದಂತಹವರ ಮುಖವಾಡ ಗಳು ಒಂದೊಂದೇ ಕಳಚುತ್ತಿವೆ. ಹೇಗೂ ಇಸ್ಲಾಮಿನ ಬಗ್ಗೆ ಚರ್ಚೆಗಳು ಶುರುವಾಗಿದೆ. ಒಮ್ಮೆ ಸಂಪೂರ್ಣವಾಗಿ ಅವರ ಆಚರಣೆಗಳ ಚರ್ಚೆಯೂ ಆಗಿಹೋಗಲಿ.