ತನ್ನಿಮಿತ್ತ
ಡಾ.ಕರವೀರಪ್ರಭು ಕ್ಯಾಲಕೊಂಡ
ಶುದ್ಧ ಕುಡಿಯುವ ನೀರು ಎ ಜೀವಿಗಳ ಹಕ್ಕು. ಅಂದರೆ ಮಾತು ಬಾರದ ಮೂಕ ಪಶು, ಪಕ್ಷಿ, ಪ್ರಾಣಿಗಳಿಂದ ಹಿಡಿದು ಗಿಡ ಮರ ಬಳ್ಳಿಗಳ ವರೆಗೆ ಎಲ್ಲರಿಗೂ ಸಮಾನವಾದ ಹಕ್ಕು ಈ ಭೂಮಿಯ ಜಲ ಮೂಲಗಳ ಮೇಲಿದೆ! ಹಾಗಾಗಿ ನಾವು ಮನುಷ್ಯರು ಮಾತ್ರವಲ್ಲ, ಈ ಭೂಮಿಯ ಮೇಲಿನ ಜೀವರಾಶಿಯೂ ಶುದ್ಧ ಕುಡಿಯುವ ನೀರಿನ ಮೇಲೆ ಹಕ್ಕು ಹೊಂದಿದೆ.
ರಿಯೊ ಡಿ ಜನೈರೊದಲ್ಲಿ 1992ರ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳ ನದ ಕಾರ್ಯಸೂಚಿ 21 ರಲ್ಲಿ ಈ ದಿನ ವನ್ನು ಮೊದಲು ಔಪಚಾರಿಕವಾಗಿ ಪ್ರಸ್ತಾಪಿಸ ಲಾಯಿತು.
ಡಿಸೆಂಬರ್ 1992ರಲ್ಲಿ ಯುನೈಟೆಡ್ ನೇಷ ಜನರಲ್ ಅಸೆಂಬ್ಲಿ ನಿರ್ಣಯವನ್ನು ಅಂಗೀ ಕರಿಸಿತು. ಆಮೂಲಕ ಪ್ರತಿವರ್ಷ ಮಾರ್ಚ್ 22ನ್ನು ವಿಶ್ವ ಜಲ ದಿನವೆಂದು ಘೋಷಿಸ ಲಾಯಿತು. 1993ರಲ್ಲಿ ಮೊದಲ ‘ವಿಶ್ವ ಜಲ ದಿನ’ವನ್ನು ಆಚರಿಸಲಾಯಿತು. ಹನಿ ಹನಿ ನೀರನ್ನು ಪೋಲು ಮಾಡದೇ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿಶ್ವ ಜಲ ದಿನವನ್ನಾಗಿ ಆಚರಿಸ ಲಾಗುತ್ತದೆ.
ನೀರಿಲ್ಲದೆ ಪ್ರಕೃತಿಯಿಲ್ಲ. ಜಗತ್ತಿಲ್ಲ ಜೀವವಿಲ್ಲ ಎಂಬ ಪುರಾತನ ನಾಣ್ಣುಡಿ ಈಗಲೂ ಅರ್ಥಪೂರ್ಣ. ನೀರು ಪ್ರಕೃತಿಯ ಅವಿ ಭಾಜ್ಯ ಅಂಗವಾಗಿದ್ದು ಪ್ರತಿ ಜೀವ ಸಂಕುಲಕ್ಕೂ ಸಂಜೀವಿನಿ. ಈಜಿಪ್ಟ್, ಸಿಂಧೂ, ಹರಪ್ಪ, ಮಹೆಂಜೊದಾರೊನಂತಹ ನಾಗರಿ ಕತೆಗಳು ಹುಟ್ಟಿದ್ದು ನದಿಯ ಪಾತ್ರಗಳ. ನೀರಿನ ಮೂಲಗಳಿಲ್ಲದಿದ್ದರೆ ನಾಗರಿಕತೆಗಳೇ ಇಲ್ಲ. ಭೂಮಿಯ ಮುಕ್ಕಾಲು ಭಾಗವನ್ನು ನೀರು ಆಕ್ರಮಿಸಿದೆ.
ಮನುಷ್ಯನ ದೇಹ ಶೇ.80ರಷ್ಟು ನೀರಿನಿಂದ ತುಂಬಿರುವುದು. ಹೀಗಾಗಿ ನೀರು ಮನುಷ್ಯನ ಅವಿಭಾಜ್ಯ ಅಂಗ. ಜೀವಕ್ಕೆ ಅವಶ್ಯ ವಿರುವ ನೀರು ಅನೇಕ ರೋಗಗಳಿಗೆ ಮೂಲವೂ ಹೌದು. ಶುದ್ಧವಾದ ಕುಡಿಯುವ ನೀರನ್ನು ಪೂರೈಸುವುದರಿಂದ ಮನುಷ್ಯರಿಗೆ
ಬರುವ ಅರ್ಧದಷ್ಟು ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದು ವೈದ್ಯ ವಿಜ್ಞಾನಿಗಳು ಹೇಳಿರುವ ಮಾತು ಸತ್ಯ. ಔಷಧ ಶಾಸಜ್ಞರಾದ ಭಾವ ಮಿಶ್ರರು ತಮ್ಮ ಭಾವ ಪ್ರಕಾಶ ಗ್ರಂಥದಲ್ಲಿ ‘ನೀರು ಜೀವಿಗಳ ಜೀವಾಳ.
ಜೀವನಂ ಜೀವಿನಾಂ ಜೀವೋ ಜಗತ್ಸರ್ವತು ತನ್ಮಯಮ್’ ಎಂದು ಅರ್ಥಪೂರ್ಣವಾಗಿ ಹೇಳಿದ್ದಾರೆ. ನೀರು ಅಮೃತಕ್ಕೆ ಸಮಾನ. ನೀರಿಲ್ಲದೆ ಬದುಕಿಲ್ಲ ಎಂಬುದನ್ನು ಹಾರೀತ ಮುನಿಗಳು ತೃಷಿತೋ ಮೋಹ ಮಾಯಾತಿ ಮೋತ್ ಪ್ರಾಣಾನ್ ವಿಮುಚತಿ ಎಂದು ಬೇರೆ ವಿಧವಾಗಿ ಹೇಳಿದ್ದಾರೆ. ಇಂಥ ಅಮೃತವು ನೈರ್ಮಲ್ಯದ ನಿರ್ಲಕ್ಷದಿಂದ ವಿರೂಪ ತಾಳುವುದು. ರೋಗಾಣುಗಳ ನೆಲೆ ಯಾಗುವುದು. ಅನೇಕ ಸಾಂಕ್ರಾಮಿಕ ರೋಗಗಳು ಹರಡಲು ಸಹಾಯ, ಸಹಕಾರ ನೀಡುವುದು. ನೀರು ನಂಜಿನ ಪಂಜಾಗುವುದು.
ಅತಿಸಾರ, ಆಮಶಂಕೆ, ರಕ್ತಭೇದಿ, ಟೈಫಾಯಿಡ್, ಪ್ಯಾರಾಟೈಫಾಯಿಡ್, ಕಾಮಾಲೆ, ಕಾಲರಾ, ಹೆಪಟೈಟಿಸ್, ಜಂತುಹುಳುಗಳ ಹರಡುವಿಕೆಗೆ ಹಾದಿ ಮಾಡುವುದು. ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಸಾಮಾನ್ಯತೆಯನ್ನು ಅರಿಯದಿದ್ದರೆ ಭವಿಷ್ಯದಲ್ಲಿ ಇಡೀ ಬದುಕೇ ನಾಶವಾಗುವ ಸ್ಥಿತಿ ಎದುರಾಗಬಹುದು !
ಜಗತ್ಯಿನಾದ್ಯಂತ ನೀರಿನ ಸಮಸ್ಯೆ ಉದ್ಭವವಾಗಲು ಮುಖ್ಯ ಕಾರಣ ಮನುಷ್ಯನ ಅತಿಯಾದ ದುರಾಸೆ, ತೀವ್ರಗತಿಯ ಅರಣ್ಯ ನಾಶ, ಮಿತಿ ಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ ಮತ್ತು ಪರಿಸರದ ಮೇಲೆ ತೋರುತ್ತಿರುವ ಕ್ರೌರ್ಯ. ಇದರಿಂದ ಕ್ಷಣ ಕ್ಷಣಕ್ಕೂ ಹಸಿರು ಮನೆಯ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತದೆ.
ನೀರನ್ನು ಮೌಲ್ಯಮಾಪನ ಮಾಡುವುದು ಮತ್ತು ಈ ಪ್ರಮುಖ ಸಂಪನ್ಮೂಲವನ್ನು ನಾವು ಹೇಗೆ ಉತ್ತಮವಾಗಿ ರಕ್ಷಿಸಬಹುದು. ನೀರಿನ ಮೌಲ್ಯವು ಅದರ ಬೆಲೆಗಿಂತ ಹೆಚ್ಚಿನದಾಗಿದೆ. ಈ ಸಾರ್ವತ್ರಿಕ ದ್ರಾವಕವು ನಮ್ಮ ಮನೆ ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಅರ್ಥಶಾಸ್ತ್ರ ಮತ್ತು ನಮ್ಮ ನೈಸರ್ಗಿಕ ಪರಿಸರದ ಸಮಗ್ರತೆಗೆ ಅಗಾಧ ಮತ್ತು ಸಂಕೀರ್ಣ ಮೌಲ್ಯವನ್ನು ಹೊಂದಿದೆ. ಈ ಯಾವುದೇ ಮೌಲ್ಯಗಳನ್ನು ನಾವು ಕಡೆಗಣಿಸಿದರೆ ಈ ಸೀಮಿತ, ಭರಿಸಲಾಗದ ಸಂಪನ್ಮೂಲವನ್ನು ನಾವು ತಪ್ಪಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಾವು ಈ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕುಡಿಯಲು ಯೋಗ್ಯವಾದ ನೀರು
ರೋಗಾಣುಗಳಿಂದ ಮುಕ್ತವಾಗಿರಬೇಕು.
ಬಣ್ಣ, ರುಚಿ, ವಾಸನೆ ಹೀತಕರವಾಗಿರಬೇಕು. ಹಾನಿಕಾರಕ ರಾಸಾಯನಿಕ, ವಿಕಿರಣ ಬೆರೆತಿರಬಾರದು ಮತ್ತು ಸುರಕ್ಷಿತವಾಗಿರ ಬೇಕು. ನೀರನ್ನು ಬಹಳ ವರ್ಷಗಳ ಕಾಲ ಉಪಯೋಗಿಸಿದರೂ ಯಾವುದೇ ರೀತಿಯ ಅಪಾಯವನ್ನುಂಟು ಮಾಡಬಾರದು. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.18 ರಷ್ಟು ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಶೇ.4. ಇದನ್ನು ನಾವು ಅರಿತುಕೊಳ್ಳಬೇಕು. ಹೀಗಾಗಿ ನೀರಿನ ಪ್ರತಿ ಹನಿಯೂ ಎಷ್ಟು ಮುಖ್ಯ ಎಂಬುದರ ಅರಿವು ಆಗಬೇಕು. ಭಾರತದ ಬಹು ಭಾಗಗಳಲ್ಲಿ 2040 ರೊಳಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.
ಶುದ್ಧ ಕುಡಿಯುವ ನೀರು ಎಲ್ಲಾ ಜೀವಿಗಳ ಹಕ್ಕು. ಅಂದರೆ ಮಾತು ಬಾರದ ಮೂಕ ಪಶು, ಪಕ್ಷಿ, ಪ್ರಾಣಿಗಳಿಂದ ಹಿಡಿದು ಗಿಡ ಮರ ಬಳ್ಳಿಗಳವರೆಗೆ ಎಲ್ಲರಿಗೂ ಸಮಾನವಾದ ಹಕ್ಕು ಈ ಭೂಮಿಯ ಜಲಮೂಲಗಳ ಮೇಲಿದೆ! ಹಾಗಾಗಿ ನಾವು ಮನುಷ್ಯರು
ಮಾತ್ರವಲ್ಲ, ಈ ಭೂಮಿಯ ಮೇಲಿನ ಜೀವರಾಶಿಯೂ ಶುದ್ಧ ಕುಡಿಯುವ ನೀರಿನ ಮೇಲೆ ಹಕ್ಕು ಹೊಂದಿದೆ.
ಜಲ ರಕ್ಷತಿ ರಕ್ಷತಿ: ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು’ ಎಂದು ನಮ್ಮ ಹಿರಿಯರು ದಿನವೂ ಸ್ನಾನ ಮಾಡುವಾಗ ಪ್ರಾರ್ಥಿಸುತ್ತಿದ್ದರು. ಇಂದು ನಾವು ಸ್ನಾನ ಮಾಡುವಾಗ ಆ ನದಿಗಳ ಸ್ಮರಣೆ ಮಾಡಲೂ ಹೆದರುತ್ತೇವೆ. ಏಕಂದರೆ ಅವುಗಳ ನೀರು ಅಷ್ಟೊಂದು ಕಲುಷಿತಗೊಂಡಿದೆ. ನಮಗೆ ಬೇಡದ ಕೊಳೆ ಕಲ್ಮಶ ಗಳೆಲ್ಲ ಕೊನೆಗೆ ಶವಗಳೂ ಕೂಡಾ ನದಿಗಳ ಒಡಲು ಸೇರಿವೆ.
ಜಲಮಾಲಿನ್ಯ ಕಡಿಮೆ ಮಾಡಲು ನಗರದ ಒಳಚರಂಡಿಗಳ ಹೊಲಸು ನೀರನ್ನು ನದಿಗೆ ಬಿಡುವುದರ ಬದಲಿಗೆ ಅದನ್ನು ಸಂಸ್ಕರಿಸಿ ಹಲವಾರು ಕೆಲಸಗಳಿಗೆ ಬಳಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಳೆ ಇಲ್ಲದ ರೈತರು ಯಾವಾಗಲೂ ಆಕಾಶದತ್ತಲೇ ಮುಖಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಗಳ ನಲ್ಲಿಗಳಲ್ಲಿ ನೀರು ಮಾಯವಾಗುತ್ತಿದೆ. ರ್ಬೋ ವೆಲ್ ಗಳು ಬರಿದಾಗು ತ್ತಿವೆ.
ಮಳೆಗಾಲದಲ್ಲೂ ಸೂರ್ಯ ಪ್ರಖರವಾಗಿದ್ದಾನೆ. ಆಕಾಶ ನೀಲಿಯಾಗಿಯೇ ಇದೆ. ದೇಶದ ಹಲವು ನಗರಗಳು ನೀರಿನ ಸಮಸ್ಯೆ ಎದಿರುಸುತ್ತಿವೆ. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ,ಏರುತ್ತಿರುವ ಜನಸಂಖ್ಯೆ, ಅಪಾರವಾದ ಅರಣ್ಯ ನಾಶ. ಕುಸಿಯುತ್ತಿರುವ ಅಂತರ್ಜಲ, ೨೦೦೦ ಅಡಿ ಕೊಳವೆಬಾವಿ ಕೊರೆದರೂ ಒಂದು ಹನಿ ನೀರು ಸಿಗದೇ ಇರುವ ಸನ್ನಿವೇಶ ಅನೇಕ ಕಡೆ ನಿರ್ಮಾಣ ವಾಗಿದೆ. ಇದಕ್ಕೆ ಕಾರಣ ಭೂಮಿಗೆ ನೀರು ಮರು ಪೂರಣವಾಗುತ್ತಿಲ್ಲ ಎನ್ನುವುದು ಸ್ಪಷ್ಟ.
ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸು, ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬು ಕೆಯ..ಕಿವಿಯೊಳ್ ಲಕ್ಷ್ಮಿಧರಾ ಮಾತ್ಯಾನಾ/ ಲಕ್ಷ್ಮೀಧರನು ಮಗುವಾಗಿದ್ದಾಗ, ಆತನ ತಾಯಿ ಹಾಲುಣಿಸುವಾಗ ಅವನ ಕಿವಿಯಲ್ಲಿ ಉಸುರಿದ ಏಳು ಒಳ್ಳೆಯ ಗುಣಗಳನ್ನು ಇಲ್ಲಿ ವರ್ಣಿಸಲಾಗಿದೆ.
ಕೆರೆಯಂ ಕಟ್ಟಿಸು, ಬಾವಿಯಂ ಸವೆಸು ಎಂದು ವರ್ಣಿಸೀದ್ದು ಭೂಮಿಗೆ ನೀರು ಮರುಪೂರಣೆಯ ಮಹತ್ವವನ್ನು ಅರಿಯಬಹು ದಾಗಿದೆ. ಇಂದು ಜಲ ಸಂರಕ್ಷಣೆ ಕಾರ್ಯದಲ್ಲಿ ಇಡೀ ಸಮಾಜವೇ ತೊಡಗಬೇಕಾಗಿದೆ.
ನೀರನ್ನು ಪೋಲು ಮಾಡದೆ ಸಂಪರ್ಕಿಸಿ: ಬದುಕಿನ ಜೀವನಾಡಿ ನೀರು. ಔಷಧಿಯ ಅಂಶಗಳನ್ನು ನೀರು ಹೊಂದಿದೆ. ಸುಮಾರು ೩೦೦ ಕೋಟಿ ವರ್ಷಗಳ ಹಿಂದೆ ಭೂಮಿಯ ಉಗಮದ ನಂತರ ನೀರು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಜೀವರಾಶಿಗಳ ಬದುಕಿಗೆ ಆಧಾರವಾಗಿದೆ. ಭೂಮಿಯ ನೀರಿನ ಲಭ್ಯತೆಯ ಪ್ರಮಾಣವು ಡೈನೋಸಾರ್ ಗಳ ಯುಗದಿಂದ ಈವರೆಗೆ
ಸ್ಥಿರವಾಗಿಯೇ ಇದೆ. ಆದರೆ 30 ವರ್ಷಗಳ ಹಿಂದೆ ನಾವು ಬಳಸುತ್ತಿದ್ದ ನೀರಿನ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದ್ದು ಇನ್ನೂ ಹೆಚ್ಚಾಗಲಿದೆ.
ಈ ಬಳಕೆ ಇದೇ ರೀತಿ ಮುಂದುವರೆದರೆ ನದಿಗಳ ನೀರಿನ ಪ್ರಮಾಣ ಕಡಿಮೆಗೊಂಡು, ಅಂತರ್ಜಲ ಕುಸಿದು ಜೀವರಾಶಿಗಳು
ನಾಶವಾಗಲೂ ಬಹುದು. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು. ಅಂತರ್ಜಲ ರಕ್ಷಣೆಗೆ ಅಟಲ್ ಭೂಜಲ ಯೋಜನೆ
ಯನ್ನು ಸಿದ್ಧಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು. ಗುಪ್ತಗಾಮಿನಿ ಎಂಬ ಮಾತಿದೆ.
ಕಣ್ಮರೆಯಾಗಿ ಹರಿಯುತ್ತಿದೆ ಎಂಬುದು ಇದರರ್ಥ. ನಾಶವಾಗೀಲ್ಲ. ಗುಪ್ತವಾಗಿದೆ. ಯತ್ನಿಸಿದರೆ ಮರಳಿ ಬತ್ಯಿದ ಹೊಳೆಯನ್ನು ಹರಿಸಬಹುದು. ಏಕಂದರೆ ನಾವು ಉಪಯೋಗಿಸುವ ನೀರು ನಮ್ಮ ಪ್ರತಿಬಿಂಬ. ನಾವು ಪೋಲು ಮಾಡುವ ಒಂದೊಂದು ಹನಿ
ನೀರಿನಿಂದ ಒಂದು ಜೀವ ಉಳಿಸಬಹುದು. ನೀರಿನ ಸಂರಕ್ಷಣೆ ಪಾರತಿಯೊಬ್ಬರ ಹೊಣೆ. ಸಕಲ ಜೀವಿಗಳ ಉಳಿವಿಗೆ ಒಂದೊಂದು ಹನಿ ಜೀವಜಲವೂ ಅತ್ಯಮೂಲ್ಯ.
ಯಾರೂ ಕೂಡಾ ತಮ್ಮ ಹಕ್ಕಿನ ನೀರನ್ನು ಪಡೆಯುವಲ್ಲಿ ವಂಚಿತರಾಗದಿರುವಂತೆ ನೋಡಿಕೊಳ್ಳೋಣ ! ಎಲ್ಲ ಜಲ ಮೂಲ ಗಳನ್ನು ರಕ್ಷಿಸೋಣ!! ಸಂರಕ್ಷಿಸೋಣ. ಉಳಿಸೋಣ. ಬೆಳೆಸೋಣ. ಅಭಿವೃದ್ಧಿಪಡಿಸೋಣ. ಅವುಗಳನ್ನು ಸುಸ್ಥಿರವಾಗಿಸೋಣ. ನೀರಿನ ಮಿತ ಬಳಕೆ ಮಾಡುವ ಸಂಕಲ್ಪ ಇಂದೇ ಮಾಡೋಣ. ಇದು ಇಂದಿನ ಅವಶ್ಯಕತೆಯೂ ಹೌದು.