Monday, 14th October 2024

ಈ ವೈಜ್ಞಾನಿಕ ಸಂಶೋಧನಾ ಕೇಂದ್ರ ಕನ್ನಡ ನೆಲದ ಪುಟ್ಟ ಜಗತ್ತು

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಮನುಷ್ಯ ಸಂಕುಲವನ್ನು ಕಾಡುವ ಎರಡು ಪ್ರಧಾನ ವಲಯಗಳು: ವಿಜ್ಞಾನ ಮತ್ತು ಅಧ್ಯಾತ್ಮ. ಒಂದು, ವಿಶ್ವಸತ್ಯವನ್ನು ಸತ್ಯ ಪ್ರಮಾಣವಾಗಿ ನಮ್ಮೆದುರು ಇಡುತ್ತದೆ.

ಇನ್ನೊಂದು, ಧ್ಯಾನ ಮತ್ತು ಚಿಂತನೆಗಳ ಮೂಲಕ ನಮ್ಮ ಗ್ರಹಣ ಶಕ್ತಿಗೆ ನಿಲುಕುವಂತೆ ಮಾಡುತ್ತದೆ. ಎರಡೂ ಜ್ಞಾನದ ಗಡಿ ಗಳನ್ನು ವಿಸ್ತರಿಸುತ್ತ ವಿಶ್ವದ ಅಸ್ಮಿತೆಯನ್ನು ಅನಾವರಣ ಗೊಳಿಸುತ್ತಲೇ ಇರುತ್ತದೆ. ವಿಜ್ಞಾನ ಮತ್ತು ಅಧ್ಯಾತ್ಮವನ್ನು ಬದುಕಿನಲ್ಲಿ ಅಂತರ್ಗತವಾಗಿಸಿಕೊಂಡ ನಮ್ಮ ಕಾಲದ ಬಹುದೊಡ್ಡ ಕನಸುಗಾರ ಎಂದರೆ ಉಡುಪಿಯ ಶ್ರೀ ಅದಮಾರು ಮಠದ ಶ್ರೀ
ವಿಬುಧೇಶ ತೀರ್ಥರು.

ಆನೆ ನಡೆದದ್ದೇ ದಾರಿಯೆಂಬಂತೆ ಹಲವು ಕನಸುಗಳನ್ನು ಸಾಕ್ಷಾತ್ಕರಿಸಿಕೊಂಡವರು. ಅಂಥದ್ದರಲ್ಲಿ ಒಂದು, ಬಹು ಅಪರೂಪ ವೆನ್ನುವಂಥ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಕೇಂದ್ರವೆಂಬ ಕನ್ನಡ ನೆಲದ ಪುಟ್ಟ ಜಗತ್ತು.

ಈವರೆಗೆ 14 ವಿದ್ಯಾರ್ಥಿಗಳು ಮಾಹೆ ವಿವಿಯಿಂದ ಪಿಎಚ್‌ಡಿ ಗಳಿಸಿದ್ದು, 9 ಥೀಸಿಸ್‌ಗಳು ಪ್ರೊ.ಸಿ.ಎನ್.ಆರ್.ರಾವ್‌ರಿಂದ ಮೆಚ್ಚುಗೆ ಪಡೆದದ್ದು, ಸುಮಾರು 300 ಸಂಶೋಧನಾ ಪ್ರಬಂಧಗಳು 10 ಪುಸ್ತಕಗಳು ಹಾಗೂ ಸಮೀಕ್ಷಾ ಲೇಖನಗಳು ಅಂತಾ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾದದ್ದು, ಇಬ್ಬರು ಸಂಶೋಧಕರು ಅಮೆರಿಕದ ಇಬ್ಬರು ಸಂಶೋಧಕರೊಂದಿಗೆ ಹಿಂದೂ ಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ಕೊಡಮಾಡುವ ಪೇಟೆಂಟಿಗೆ ಸಹಭಾಗಿತ್ವ ಹೊಂದಿದ್ದು,  Student inspire fellow ship, MSCD, VGST, IT, BT, STವಿಭಾಗ ಮತ್ತು ಕರ್ನಾಟಕ ಸರಕಾರ ಕೊಡುವ ಪ್ರಶಸ್ತಿಗಳನ್ನು ಮೂರು ವರ್ಷಗಳಿಂದ ಪಡೆದದ್ದು, VGST, GOK, GOI ಕೊಡುವ ಯುವವಿಜ್ಞಾನಿ ಪಡೆದದ್ದು, ಉತ್ತಮ ಪ್ರಬಂಧ ಮಂಡನಾ ಪ್ರಶಸ್ತಿಗಳನ್ನು ಅಂತಾರಾಷ್ಟ್ರೀಯ ಸಮಾವೇಶ ದಲ್ಲಿ ಪಡೆದದ್ದು, 8 ಸಂಶೋಧಕರಿಗೆ ಆರಂಭಿಕ ಸಂಶೋಧನಾ ಪ್ರಕಟಣೆ ಮತ್ತು ಹಿರಿಯ ಸಂಶೋಧನಾ ಫೆಲೋಶಿಪ್‌ಗಳನ್ನು CSIR ಭಾರತ ಸರಕಾರದಿಂದ ಪಡೆದದ್ದು, ಪ್ರೋಟೀನ್ ಡೇಟಾ ಬ್ಯಾಂಕಿಗೆ 25ಕ್ಕೂ ಹೆಚ್ಚು ಪ್ರೋಟೀನ್ ರಚನೆಗಳನ್ನು ನೀಡಿದ್ದು, Contribution to Gen Bank, ಫಿಸಿಯಾಲಜಿ ಮತ್ತು ಮೆಡಿಸಿನ್ ಪ್ರಕಟಣೆಗಳಲ್ಲಿ ನೊಬೆಲ್ ಅವಾರ್ಡಿ ಪ್ರೊ.ಜೇಮ್ಸ್ ಅಲಿಸ್ಸನ್ನ ರೊಂದಿಗೆ ಸಹಭಾಗಿತ್ವ, USAಯ ಐನ್ ಸ್ಟೆ ನ್ ಮೆಡಿಸಿನ್ ಕಾಲೇಜ್, NCTS ತೈವಾನ್, Karlsruhe ಟೆಕ್ನಾಲಜಿ ಜರ್ಮನಿ, RRI ಬೆಂಗಳೂರಿನಿಂದ ಗೌರವ ಸಮ್ಮಾನ, DST, BRNS, DBT, UGC&DAE, DRDD, VGST, GTC (USA), HP, PW(USA), Shell technology centre, Deepak Novecham technology nitrite ltd, Thermax industries, pune bristol myers sqibb, USA, 23  ಸರಕಾರಿ ಪ್ರಾಯೋಜಿತ ಪ್ರಾಜೆಕ್ಟ್‌ಗಳು, 16 ಕೈಗಾರಿಕಾ ಆಧಾರಿತ ಪ್ರಾಜೆಕ್ಟ್‌ಗಳನ್ನು ನಡೆಸಿದ್ದು, ಸದ್ಯ ಸರಕಾರದ ಹಲವು ಮತ್ತು ಕೈಗಾರಿಕಾ ಆಧಾರಿತ ಪ್ರಾಜೆಕ್ಟ್ ಗಳನ್ನು ನಡೆಸುತ್ತಿರುವುದು, Argonne national laboratory, Chicago, IIT Chennai, IKST, SIT, MSIRT, IISC, JNCASR, RRI, NIT, MIT, IIT Ropar Jodhpur, Kharagpur, Bose Institute Kolkata, JIIT Noida, VBU Hazaribag, CSIR NCL Pune ಇವುಗಳೊಂದಿಗೆ ಸಂಶೋಧನೆ ಮತ್ತು ಶಿಕ್ಷಣದಲ್ಲಿ ನಿರಂತರ ಸಂಪರ್ಕ ಸಹಯೋಗಿತ್ವ, ಜಗತ್ತಿನ ಪ್ರಸಿದ್ಧ ಸಂಸ್ಥೆಗಳಲ್ಲಿ ಆಹ್ವಾನಿತ ಭಾಷಣ, ವೈಜ್ಞಾನಿಕ ಮತ್ತು ಸಂಶೋಧನಾ ವಿಚಾರಗಳಿಗೆ ಸಂಬಂಧಿಸಿದಂತೆ USA, TAIWAN, PETRA, DESY, HAMBURG, ANSTO, ICEAN, ITALY, CHINA, VIETNAM, HONG KONG, ROMANIA ಮುಂತಾದ ಅಂತಾರಾಷ್ಟ್ರೀಯ ವಿವಿ, ಇಂಡಸ್ಟ್ರಿ, ಸಂಶೋಧನಾ ಕೇಂದ್ರಗಳಿಗೆ ಭೇಟಿ – ಇವೇ ಮುಂತಾದ ಗಣನೀಯ, ಗಮನಾರ್ಹ ಸಾಧನೆಗಳನ್ನು ಹೊಂದಿರುವ ಈ ಕೇಂದ್ರವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಬಿದಲೂರಿನಲ್ಲಿ 30 ಎಕರೆ ವಿಶಾಲವಾದ ಕ್ಯಾಂಪಸ್ಸಿನಲ್ಲಿ 2003ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಆರಂಭದಲ್ಲಿ ಭೌತವಿಜ್ಞಾನದಲ್ಲಿ ಸಂಶೋಧನೆ ಆರಂಭವಾಗಿ ಪಿಎಚ್ ಡಿ ಮುಗಿಸಿರುವ ಸಂಶೋಧಕರಿಗೆ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಸಂಶೋಧನೆಗೆ ಚಾಲನೆ ಕೊಟ್ಟವರು ಶ್ರೀ ವಿಬುಧೇಶ ತೀರ್ಥರು. ವಿಜ್ಞಾನಿಯಾಗಬೇಕೆಂಬ ಕನಸನ್ನು ಹೊಂದಿದ್ದ ವಿಬುಧೇಶ ತೀರ್ಥರಿಗೆ ವೈಜ್ಞಾನಿಕ ಸಂಶೋಧನಾ ಕೇಂದ್ರ ವನ್ನು ಕನ್ನಡ ನೆಲದ ಕಟ್ಟಲು ಕಾರಣವಿಷ್ಟೆ: ಕನ್ನಡದ ಪ್ರತಿಭೆಗಳು ವಿದೇಶಕ್ಕೆ ಪಲಾಯನವಾಗಬಾರದು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹೆಸರು ಗಳಿಸಬೇಕು. ತಮ್ಮ ಸಂಶೋಧನಾ ಕೇಂದ್ರಕ್ಕೆ ಜಗತ್ಪ್ರಸಿದ್ಧ ಭಾರತೀಯ ವಿಜ್ಞಾನಿಗಳನ್ನು ಗೌರವ ಸಲಹೆಗಾರರನ್ನಾಗಿ
ನೇಮಿಸಿಕೊಂಡರು.

ಕನ್ನಡದ ಪ್ರತಿಭೆ ಗಳು ಮಾತ್ರವಲ್ಲದೆ ದೇಶೀಯ ಪ್ರತಿಭೆಗಳು ಕೂಡ ಈ ಕೇಂದ್ರದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗ ಬೇಕೆಂಬುದು ಅವರ ಹಂಬಲವಾಗಿತ್ತು. ವಿಬುಧೇಶ ತೀರ್ಥರಿಗೆ ಈ ಕಾರ್ಯದ ಬಗ್ಗೆ ಸ್ಪಷ್ಟತೆ, ನಿಖರತೆ, ಗುರಿ ಉದ್ದೇಶಗಳಲ್ಲಿ ಬದ್ಧತೆಯಿತ್ತು. ಆದರೆ ಅವರು ಅಷ್ಟು ಪ್ರಮಾಣದಲ್ಲಿ ಹಣವನ್ನು ಸಂಗ್ರಹಿಸಲು ತುಂಬಾ ಶ್ರಮಪಡ ಬೇಕಾಯಿತು.

ಅಷ್ಟಕ್ಕೂ ಇಂಥ ದೊಡ್ಡ ಕಾರ್ಯಕ್ಕೆ ಹಣವೇನು ಕಡಿಮೆ ಬೇಕೇ? ಒಂದು ಸುಸಜ್ಜಿತವಾದ ಮೂಲಭೂತವಾದ  ಸೌಲಭ್ಯ ಗಳೊಂದಿಗೆ, ತಿಂಗಳಿಗೆ ಸ್ಕಾಲರ್‌ಷಿಪ್ಪನ್ನು ನೀಡಿ ಸಂಶೋಧನಾ ಕೇಂದ್ರವನ್ನು ನಿರ್ವಹಣೆ ಮಾಡುವುದು ಈ ಕಾಲಘಟ್ಟದಲ್ಲಿ
ಬಹುದೊಡ್ಡ ಸಾಧನೆಯೂ ಅಹುದು. ಸಾಹಸವೂ ಅಹುದು.

ಅನೇಕ ದಾನಿಗಳ ಸಹಾಯದಿಂದ ವಿಬುಧೇಶರು ಇಂಥ ಸಾಧನೆಯನ್ನು, ಸಾಹಸವನ್ನು ಮಾಡಿಯೇ ಮುಗಿಸಿದರು. ಆರಂಭ ದಲ್ಲಿ
ಪ್ರೊಪಿ. ರಾಮರಾವ್, ಪ್ರೊ.ರೊದ್ದಂ ನರಸಿಂಹ, ಪ್ರೊ.ಕೆ.ವಿಜಯ ರಾಘವನ್, ಪ್ರೊ. ಗೋವರ್ಧನ್ ಮೆಹತಾ, ಪ್ರೊ.ಜಿ.ಅನಂತ ಕೃಷ್ಣ, ಪ್ರೊ.ಗದಾ ಧರ್ಮಿಶ್ರ, ಪ್ರೊ.ಆರ್.ರಾವ್ – ಹೀಗೆ ಅನೇಕ ವಿಜ್ಞಾನಿಗಳು ಈ ಸಂಶೋಧನಾ ಕೇಂದ್ರಕ್ಕೆ ಸೇವೆಯನ್ನು ಸಲ್ಲಿಸಿ ದ್ದಾರೆ.

ಇವರೆಲ್ಲರ ಸಲಹೆ, ಮಾರ್ಗದರ್ಶನ, ಸಹಯೋಗಕ್ಕೆ ಸಾರಥ್ಯ ವಹಿಸಿದವರು ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರು.
ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಕೇಂದ್ರ (ಪೂರ್ಣಪ್ರಜ್ಞ ಇನ್ ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರೀಸರ್ಚ್ ಸೆಂಟರ್, PPISR) ಅನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಸಂಸ್ಥೆ ಯನ್ನಾಗಿ ಬೆಳೆಸಲು ಅಕೆಡಮಿಕ್ ಕೌನ್ಸಿಲ್ ಅನ್ನು ಸ್ಥಾಪಿಸಲಾಯಿತು.

2009ರಲ್ಲಿ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ವೃಂದಾವನಸ್ಥರಾದ ಮೇಲೆ ಅವರ ಶಿಷ್ಯರಾದ ಶ್ರೀ ವಿಶ್ವಪ್ರಿಯ ತೀರ್ಥರು ಇದರ
ಜವಾಬ್ದಾರಿಯನ್ನು ಹೊತ್ತಿzರೆ. ಗುರುಗಳ ಕನಸನ್ನು ನನಸಾಗಿಸಲು ನಾವೀನ್ಯ ರೂಪುರೇಷೆಗಳನ್ನು ಸಿದ್ಧಪಡಿಸಿ ದರು. ಈ ಸಂದರ್ಭದಲ್ಲಿ ಸಂಶೋಧನಾ ಕೇಂದ್ರಕ್ಕೆ ಪ್ರಖ್ಯಾತ ವಿಜ್ಞಾನಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವಾನುಭವ ಹೊಂದಿರುವ ಡಾ.ಆನಂದ ಹಲಗೇರಿಯವರು ನಿರ್ದೇಶಕರಾಗಿ ನೇಮಕಗೊಳ್ಳುತ್ತಾರೆ.

ಪ್ರೊ.ಕೆ.ಜೆ.ರಾವ್ ಹಾಗೂ ಅನೇಕ ಹಿತೈಷಿ ಮತ್ತು ಸಮಾನ ಮನಸ್ಕರ ಬೆಂಬಲದೊಂದಿಗೆ ಮೆಟೀರಿಯಲ್ ಸೈನ್ಸ್‌ಗೂ ಜೀವ
ವಿಜ್ಞಾನ ಸಂಶೋಧನಾ ವಿಭಾಗಗಳನ್ನು ಆರಂಭಿಸಿದರು. ವಿಬುಧೇಶ ತೀರ್ಥರಿಗೆ ಮೂಲ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನದಲ್ಲಿ ಆಸಕ್ತಿ ಅಪರಿಮಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ಈ ಕೇಂದ್ರ ಗುರುತರವಾದ ಸಾಧನೆಯನ್ನು ಮಾಡಿದೆ.

ಅಂದರೆ ಉತ್ಕೃಷ್ಟ  ಗುಣಮಟ್ಟದ ಚಟುವಟಿಕೆಗಳು ನಡೆದಿವೆ. ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸಲು ಹೊಸಬಗೆಯ ಸಾಮಗ್ರಿಗಳನ್ನು ಕಂಡುಹಿಡಿಯುವುದು, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ವಿವಿಧ ಕಾಯಿಲೆ ಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಹೊಸ ಔಷಧಿಗಳನ್ನು ಅನ್ವೇಷಿಸುವುದು, ಪರಿಸರ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸುಧಾರಿತ ಸೌರ ತಂತ್ರಜ್ಞಾನವನ್ನು ಬಳಕೆ ಮಾಡುವುದು, ಗುಪ್ತ ಮಾಹಿತಿ ರವಾನೆ ಹಾಗೂ ಸೂಪರ್‌ ಕಂಪ್ಯೂಟರ್ ಬೆಳವಣಿಗೆಯಲ್ಲಿ ಕ್ವಾಂಟಂ ತಂತ್ರಜ್ಞಾನದ ಬಳಕೆ, ವಸ್ತುಗಳ ಮೂಲಭೂತ ಸಂರಚನೆಗೆ ನೆರವಾಗುವ ಸೈದ್ಧಾಂತಿಕ ಭೌತವಿಜ್ಞಾನ – ಹೀಗೆ ಹಲವು ವಿಷಯ ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನೆಗಳು ಈ ಕೇಂದ್ರದಲ್ಲಿ ನಡೆಯುತ್ತಿವೆ.

ವಿಶ್ವದ ಅತ್ಯುತ್ತಮ ವಿಜ್ಞಾನ ನಿಯತಕಾಲಿಕೆಗಳಲ್ಲಿ ಈ ಸಂಶೋಧನಾ ಕೇಂದ್ರದಲ್ಲಿ ನಡೆದ ಸಂಶೋಧನೆಗಳು ಪ್ರಕಟವಾಗಿವೆ. ಮುಖ್ಯವಾಗಿ, ಈ ಕೇಂದ್ರದಲ್ಲಿ ಸಂಶೋಧನೆ ನಡೆಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅನುದಾನ ಸಂಸ್ಥೆಗಳು ಸಹಕಾರ ಹಾಗೂ ಸಹಯೋಗವನ್ನು ನೀಡಿ ವಿಶೇಷವಾಗಿ ಗುರುತಿಸಿವೆ. ಅಷ್ಟಲ್ಲದೆ ಈಗೀಗ ಕೈಗಾರಿಕಾ ಮೂಲದ ಕಂಪನಿಗಳಿಂದಲೂ ಪ್ರಾಯೋಜಿತ ಸಂಶೋಧನಾ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.

ಈವರೆಗೆ ಸುಮಾರು 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಈ ಕೇಂದ್ರದ ಹೆಸರಿನಲ್ಲಿ ಪ್ರಕಟವಾಗಿವೆ. ಹಾಗೂ ಅವುಗಳಿಗೆ
ಅಮೆರಿಕನ್ ಪೇಟೆಂಟ್‌ಗಳು ಅನುಮೋದಿತವಾಗಿವೆ. ಜತೆಯಲ್ಲಿ, ಈ ಕೇಂದ್ರ ಹಲವು ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾರ್ಗದರ್ಶನ
ನೀಡುತ್ತಿದೆ. 16 ವಿದ್ಯಾರ್ಥಿಗಳು ಪಿಎಚ್ ಡಿ ಪದವಿಯನ್ನು ಪಡೆದಿದ್ದಾರೆ. 15 ವಿದ್ಯಾರ್ಥಿಗಳು ಪಿಎಚ್ ಡಿ ಅಧ್ಯಯನದಲ್ಲಿ
ತೊಡಗಿದ್ದಾರೆ. ಈ ಕೇಂದ್ರದ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಬಹುಮಾನ ಮತ್ತು ಪಾರಿತೋಷಕಗಳನ್ನು ಪಡೆದಿದ್ದಾರೆ.

ಪ್ರಮುಖ ವಾದ ವಿಚಾರವೇನೆಂದರೆ, ಈ ಕೇಂದ್ರವು ಭಾರತ ಸರಕಾರದ DSIR, ನವದೆಹಲಿಯಿಂದ ಗುರುತಿಸಲ್ಪಟ್ಟಿದೆ. ಇಲ್ಲಿಯ ವಿದ್ಯಾರ್ಥಿ ಗಳಿಗೆ  ಕರ್ನಾಟಕದ MAHE ಯುನಿವರ್ಸಿಟಿಯಿಂದ ಪಿಎಚ್ ಡಿ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಈ ಕೇಂದ್ರಕ್ಕೆ ಅದಮಾರು ಮಠ ಶೈಕ್ಷಣಿಕ ಸಂಸ್ಥೆ (AMEF) ಯಿಂದ ನಿರಂತರವಾಗಿ ಶೈಕ್ಷಣಿಕ ಅಗತ್ಯಗಳನ್ನು, ಮೂಲಸೌಕರ್ಯ ಗಳನ್ನು ಒದಗಿಸುತ್ತಾ ಬಂದಿದೆ. ಅತ್ಯಾಧುನಿಕ ಸಲಕರಣೆಗಳು ಹಾಗೂ ಉಪಕರಣಗಳಿಂದ ಮೆಟೀರಿಯಲ್ ಸೈನ್ಸ್‌ನ ಪ್ರಯೋಗಶಾಲೆಯನ್ನು ನಿರ್ಮಿಸಲಾಗಿದೆ.

ಈ ಮೆಟೀರಿಯಲ್ ಸೈನ್ಸ್ ವಿಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಭಾರತರತ್ನ ಪ್ರೊ. ಸಿ.ಎನ್. ಆರ್. ರಾವ್ ಅವರು ಶ್ಲಾಘಿಸಿದ್ದಷ್ಟೇ ಅಲ್ಲದೆ ಸಿಎನ್‌ಆರ್ ರಾವ್ ಮೆಟೀರಿಯಲ್ಸ ಸೈನ್ಸ್ ಲ್ಯಾಬನ್ನು ನಿರ್ಮಿಸಲು ಉನ್ನತ ಸಹಕಾರವನ್ನು ನೀಡಿದ್ದು ಈ
ಕೇಂದ್ರದ ಏರುಗತಿಯ ವಿಕಸನಕ್ಕೆ ವಿಜ್ಞಾನಿಯೊಬ್ಬ ಪ್ರೋತ್ಸಾಹಿಸಿದ ರೀತಿ ಮಾದರಿಯಾಗಿ ನಿಲ್ಲುತ್ತದೆ. ಇಂಥ ಸಹಕಾರಗಳು ಈ ಕೇಂದ್ರಕ್ಕೆ ಸಮುದಾಯದಿಂದ ಅಗಬೇಕಿದೆಯೆಂದು ಪರಿಭಾವಿಸಲು ಕಾರಣ ವೇನೆಂದರೆ, ನಮ್ಮ ದೇಶೀಯ ಪ್ರತಿಭೆಗಳನ್ನು ಮೂಲ ವಿಜ್ಞಾನದಲ್ಲಿ ಸಂಶೋಧನೆಗೆ ತೊಡಗಿಸಿಕೊಳ್ಳುವಂತೆ ಮಾಡಿಕೊಳ್ಳಬೇಕಾದ ತುರ್ತು ಯಾವತ್ತೂ ಇದೆಯಾದ್ದರಿಂದ. ಪ್ರಧಾನಿಯವರ ಆತ್ಮನಿರ್ಭರ ಭಾರತಕ್ಕೆ ಇಂಥ ಬೆಳವಣಿಗೆಗಳು ಅತೀ ಹೆಚ್ಚು ಪ್ರಮಾಣದಲ್ಲಿ ಇಂಥ ಸಂಶೋಧನಾ ಕೇಂದ್ರಗಳಿಗೆ ಆಗಬೇಕಿದೆ.

ಸಮುದಾಯ ಇಂಥವುಗಳನ್ನು ಗುರುತಿಸುವಲ್ಲಿ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಯಾಕೆಂದರೆ, ಈ ಕೇಂದ್ರದ ಬೆಳವಣಿಗೆಯ ಪ್ರತಿಫಲ ಸಮುದಾಯಕ್ಕೇ ಸಿಗುವುದಾದ್ದರಿಂದ. ಈ ಕೇಂದ್ರ ಇಂದು ನಾಡಿಗೆ, ದೇಶಕ್ಕೆ ಇದು ದೊಡ್ಡ ಕೊಡುಗೆ
ಯಾಗಿದೆಯೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವೈಜ್ಞಾನಿಕ ದೃಷ್ಡಿಕೋನವನ್ನು ಚಿಗುರಿಸಿ
ಬೆಳೆಯಿಸುವ ವಿಬುಧೇಶ ತೀರ್ಥರ ಪ್ರಯತ್ನದಲ್ಲಿ ವಿದ್ಯಾರ್ಥಿಗಳೇ ಪ್ರಧಾನವಾಗಿದ್ದರೆಂಬುದು ಸರ್ವವಿದಿತ. ಈ ಕೇಂದ್ರವು ಹಲವು
ಬಗೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಪ್ರಮುಖವಾಗಿ, ಇದು ಸಮಾಜ ಮುಖಿಯಾದ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.

ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋ ಭಾವನೆಯನ್ನು ಉದ್ದೀಪಿಸುವ ನಿಟ್ಟಿನಲ್ಲಿ ಹಾಗೂ ಶಿಕ್ಷಕರಿಗೆ ವಿಜ್ಞಾನ ವಿಷಯದ ಬೋಧನೆಯಲ್ಲಿ ಪರಿಣತಿಯನ್ನು ಉನ್ನತೀಕರಿಸುವ ಉದ್ದೇಶದಲ್ಲಿ ಅನೇಕ ತರಬೇತಿ ಮತ್ತು ಕಾರ್ಯಾಗಾರಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದೆ. ಹತ್ತಿರದ ಹಳ್ಳಿಗಳಲ್ಲಿರುವ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರಲ್ಲಿ ವಿಜ್ಞಾನ ಬೋಧನೆಗೆ ಸಂಬಂಧಿಸಿದ ವಿಚಾರಗಳಲ್ಲಿ ಜ್ಞಾನ ವಿನಿಯೋಗದ ಮತ್ತು ಸೌಹಾರ್ದ ನೆಲೆಯಲ್ಲಿ ಉತ್ತಮ ಬಾಂಧವ್ಯವನ್ನು ಗಳಿಸಿದೆ.

ಈ ಕೇಂದ್ರವು ಬದ್ಧತೆಯನ್ನು ಸೇವಾ ಮನೋಭಾವವನ್ನು ಕಾರ್ಯಗತಿ ಯಲ್ಲಿ ಹೊಂದಿರುವುದು ಅದರ ಔನ್ನತ್ಯ ಮತ್ತು ಜನಪ್ರೀತಿಗೆ ಕಾರಣ ವಾಗಿದೆ. ಈ ಕಾರಣದಿಂದಾಗಿ ಈ ಕೇಂದ್ರವು ಸಂಚಲನೆಯಲ್ಲಿ ಜೀವಂತಿಕೆಯನ್ನು ಸದಾ ಉಳಿಸಿ ಕೊಂಡಿದೆ. ಈ ಉಳಿಸಿ ಬಾಳಿಸಿ ಕೊಳ್ಳುವ ನಿರಂತರತೆಯಲ್ಲಿ ಈ ಕೇಂದ್ರದ ಭವಿಷ್ಯದ ಯೋಜನೆಗಳು ಪ್ರಧಾನವಾಗಿರುತ್ತದೆ.

1.ಸಂಶೋಧನೆಗಳಲ್ಲಿ ಇದು ಅಂತರ್ ಶಿಸ್ತೀಯ ವಿಧಾನವನ್ನು ಮೈಗೂಡಿಸಿಕೊಳ್ಳುತ್ತಲೇ ಅಂತಾರಾಷ್ಟ್ರೀಯ ವಿವಿಗಳ ಸಹಯೋಗ ದಲ್ಲಿ ಇನ್ನಷ್ಟು ಗುರುತರವಾದ ಸಂಶೋಧನೆಗಳಲ್ಲಿ ತೊಡಗಿಸಿ ಕೊಳ್ಳುವುದು.

2. ಪರಿಸರ ಸಂರಕ್ಷಣೆ, ಅರೋಗ್ಯ, ಇಂಧನ ಹಾಗೂ ಸಾಮಗ್ರಿ ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಆರ್ಥಿಕತೆಯ ಬೆಳವಣಿಗೆಗೆ
ಪೂರಕವಾದ ಸಂಶೋಧನಾ ಚಟುವಟಿಕೆ ಗಳನ್ನು ಆಯೋಜಿಸುವುದು.

3.ಕ್ವಾಂಟಂ ತಂತ್ರಜ್ಞಾನ, ಸೂಪರ್ ಕಂಪ್ಯೂಟರ್ ರಚನೆ, ಕೃತಕ ಬುದ್ಧಿಮತ್ತೆ, ಮಾಹಿತಿಗಳ ಗುಪ್ತ ಸಂವಹನೆಗೆ ಸಹಕಾರಿ ಯಾಗುವ ತಂತ್ರಜ್ಞಾನ ಬೆಳವಣಿಗೆಯಲ್ಲಿ ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಸಂಶೋಧನೆಗಳನ್ನು ಕೈಗೊಂಡು ದೇಶರಕ್ಷಣೆ ಮತ್ತು ಇತರ ಕ್ಷೇತ್ರಗಳಿಗೆ ಬಹುಮುಖ್ಯ ಕಾಣ್ಕೆಗಳನ್ನು ಈ ಕೇಂದ್ರವು ನೀಡುತ್ತಿರುವುದು ಬೆರಳಣಿಕೆಯಷ್ಟು ಸಂಶೋಧನಾ ಕೇಂದ್ರಗಳು ಇಂಥ ಕಾರ್ಯವನ್ನು ಮಾಡುತ್ತಿವೆಯೆಂಬುದೂ ಗಮನಾರ್ಹ. ಈ ಪ್ರಾಯೋಗಿಕ ಶಕ್ತಿ ಸಾಮರ್ಥ್ಯವನ್ನು ಇನ್ನಷ್ಟು ಎತ್ತರಿಸುವ ದೂರದೃಷ್ಟಿ.

4. ಸೌರಶಕ್ತಿಯನ್ನು ಹೀರುವಂಥ ಸಾಮಗ್ರಿಗಳಿಂದ ನೈಸರ್ಗಿಕವಾಗಿ ನಡೆಯುವ ದ್ಯುತಿ ಸಂಶ್ಲೇಷಣೆ ಕ್ರಿಯೆಯನ್ನು ಹಾಗೆಯೇ ನಡೆಸಿ ನೀರಿನಿಂದ ಜಲಜನಕವನ್ನು ತಯಾರಿಸಿ ಅದನ್ನೊಂದು ಶಕ್ತಿಯ ಮೂಲವಾಗಿ, ಇಂಧನವಾಗಿ ಬಳಸುವ ಪ್ರಯತ್ನವನ್ನು ಅಗತ್ಯವಾದ ಸಲಕರಣೆಗಳು ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸುತ್ತ ಪರಿಣಾಮಕಾರಿ ಪ್ರಯೋಗಗಳನ್ನು ನಡೆಸುವುದು.

5. ನವೀನ ಕ್ಯಾಟಲಿಸ್ಟ್ ಸಾಮಗ್ರಿಗಳ ವಿನ್ಯಾಸ, ರಚನೆ, ಗುಣಲಕ್ಷಣಗಳನ್ನು ಅರ್ಥೈಸುವುದು, ಪರಿಣಾಮಕಾರಿಯಾಗಿ ರಾಸಾಯನಿಕ ಪ್ರಕ್ರಿಯೆಗಳ ವೇಗವನ್ನು ಹೆಚ್ಚಿಸುವ ಸಂಶೋಧನೆಗಳನ್ನು ನಡೆಸಿ ಅನೇಕ ಕೆಮಿಕಲ್ ಕಂಪನಿಗಳಿಗೆ ಅತ್ಯಮೂಲ್ಯ ಮಾಹಿತಿಯನ್ನು ನೀಡುವಲ್ಲಿ ಸಹಕರಿಸುವುದು.

6. ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ಇಂಗಾಲದ ಆಮ್ಲದ ಜತೆಗೆ ಬೇರೆಬೇರೆ ಸಂಯುಕ್ತ ಪದಾರ್ಥಗಳನ್ನು ಸೇರಿಸಿ ಅತಿಕಡಿಮೆ ಖರ್ಚಿನಲ್ಲಿ ಮೌಲ್ಯವರ್ಧಿತ ರಾಸಾಯನಿಕಗಳನ್ನು ತಯಾರಿಸುವುದು. ನೈಸರ್ಗಿಕವಾಗಿ ದೊರೆಯುವ ಬಯೋಮಾಸ್
ಗಳನ್ನು ಬಳಸಿ ರಾಸಾಯನಿಕ ಸಂಯುಕ್ತ ಪದಾರ್ಥಗಳು, ಎಲ್‌ಪಿಜಿ ಇಂಧನ ತಯಾರಿಸಲು ಅಗತ್ಯವಾದ ಸಂಶೋಧನಾ ಸೌಲಭ್ಯಗಳನ್ನು ನಿರ್ಮಿಸುವುದು.

7. ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ಕಿಣ್ವಗಳ ರಚನೆ, ಅವುಗಳ ಕಾರ್ಯ ವಿಧಾನ, ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ನೀಡಿ
ಗುಣಪಡಿಸಲು ಬಳಸಬಹುದಾದ ವಿಧಾನಗಳ ವಿಸ್ತೃತ ಅಧ್ಯಯನಕ್ಕೆ ಈ ಕೇಂದ್ರವು ಈಗಾಗಲೇ ಸಂಶೋಧನೆಯಲ್ಲಿ ತೊಡಗಿ ಕೊಂಡಿದ್ದು, ಇದಕ್ಕೆ ಅಗತ್ಯವಾದ ಸೌಲಭ್ಯವೂ ಆಧುನಿಕ ವಾಗುತ್ತಲೇ ಅಡ್ವಾನ್ಸ್ಡ್ ಆಗಿ ಬೆಳೆಯುತ್ತಿವೆ. ಇದು ಈ ಕೇಂದ್ರದ ಮಹತ್ವದ ಹೆಜ್ಜೆ.

8. ಭವಿಷ್ಯದಲ್ಲಿ  ಇನ್ನೂ ವಿವರವಾದ ಮತ್ತು ಜೀವಕೋಶ ಆಧಾರಿತ ಸಮಗ್ರ ವಿಶ್ಲೇಷಣೆಗೆ ಅನುವಾಗು ವಂತೆ ಮತ್ತು ಮಾದರಿ ಪ್ರಾಣಿಗಳಲ್ಲಿ ಪರೀಕ್ಷೆ ಗಳನ್ನು ಮಾಡಲು ಸೌಲಭ್ಯ ಗಳನ್ನು ರಚಿಸುವ ಪ್ರಯತ್ನಗಳು ಆರಂಭ ವಾಗಬೇಕಿದೆ. ಈಗಾಗಲೇ ಉತ್ತಮ ವಾಗಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳು ಇನ್ನೂ ಪರಿಣಾಮಕಾರಿಯಾಗಿ ಯಶಸ್ಸನ್ನು ಕಾಣಲು ಪ್ರೇರಣೆ ಯಾಗುತ್ತದೆ.

9. ಅನನ್ಯ ಗುಣಲಕ್ಷಣಗಳಿರುವ ಮಿಸೋಪೋರ ಸ್ಟಾಲಿಮರ್‌ಗಳನ್ನು ಬಳಸಿ ಅನೇಕ ರಾಸಾಯನಿಕ ಪ್ರಕ್ರಿಯೆಗಳ ವೇಗ ವನ್ನು ಹೆಚ್ಚಿಸುವುದು, ರಾಸಾಯನಿಕ ಸಾಮಗ್ರಿ ಗಳ ಮೌಲ್ಯವರ್ಧನೆ ಹಾಗೂ ನೀರಿನಲ್ಲಿ ಬೆರೆತ ಕಲುಷಿತ ಸಾಮಗ್ರಿ ಗಳನ್ನು ಪರಿಣಾಮ ಕಾರಿಯಾಗಿ ಹೀರಿ ಪರ್ಯಾವರಣ ರಕ್ಷಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ಉಪಯೋಗಿಸಲಾಗಿದೆ. ಈ ರೀತಿಯ ಪಾಲಿಮರ್ ಸಾಮಗ್ರಿಗಳ ರಚನೆ, ಲಕ್ಷಣಗಳು ಹಾಗೂ ತಯಾರಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ.

10. ನವೀನ ವೇಗವರ್ಧಕ ಸಾಮಗ್ರಿಗಳನ್ನು ಬಳಸಿ ಮಿಥೇನನ್ನು ಸಕ್ರಿಯ ಗೊಳಿಸುವ ಮತ್ತು ಬಯೋ ಇಥೆನಾಲನ್ನು ತಯಾರಿಸುವ ವಿಷಯ ಗಳಲ್ಲಿ ಉನ್ನತ ಸಂಶೋಧನೆಯನ್ನು ನಡೆಸುವ ಉದ್ದೇಶದಿಂದ ಹೆಚ್ಚಿನ ಸೌಲಭ್ಯಗಳನ್ನು ವಿಸ್ತರಿಸುವ ಪ್ರಯತ್ನ ನಡೆಯಬೇಕಿದೆ. ಇದು ದೇಶದ ಇಂಧನ ಕ್ಷೇತ್ರದಲ್ಲಿ ಗಮನಾರ್ಹವಾದ ಕೊಡುಗೆಯನ್ನು ನೀಡುವ ಸಾಧ್ಯತೆ ಗಳಿವೆ.

11. ಶಿಲೀಂಧ್ರಗಳಿಂದ ಉತ್ಪತ್ತಿಯಾಗುವ ಲ್ಯಾಖೇಸ್ಕಿಣ್ವಗಳ (enzyme) ಉತ್ಕೃಷ್ಟ ಉತ್ಪಾದನೆ ಮತ್ತು ಮಧುಮೇಹಕ್ಕೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಅಪಾಯಕಾರಿ ರಾಸಾಯನಿಕಗಳ ಬದಲು ನೈಸರ್ಗಿಕ ಮೂಲಗಳಿಂದ ದೊರಕುವ ರಾಸಾಯನಿಕ ಪದಾರ್ಥಗಳನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶ ಹೊಂದಿದೆ.

ಈ ಹಿನ್ನೆಲೆಯಲ್ಲಿ ಹೊಸ ಔಷಧಿಗಳನ್ನು ಅನ್ವೇಷಿಸುವುದು, ಅದರ ಗುಣಲಕ್ಷಣಗಳನ್ನು ಹೆಚ್ಚಿಸುವುದು, ಹೊಸ ರಾಸಾಯನಿಕ ಸಾಮಗ್ರಿಗಳನ್ನು ಕಂಡು ಹಿಡಿಯುವುದು – ಹಲವು ಬಗೆಯಲ್ಲಿ ಸಂಶೋಧನಾ ಚಟುವಟಿಕೆಗಳು ಇಲ್ಲಿ ನಡೆಯಬೇಕಿದೆ.

12. ಈ ಸಂಶೋಧನೆ ಯಶಸ್ವಿಯಾದರೆ ಜಗತ್ತನ್ನು ಕಾಡುತ್ತಿರುವ ಮಧುಮೇಹ ರೋಗಕ್ಕೆ ಪರಿಣಾಮಕಾರಿ ಔಷಧಿಯನ್ನು ಈ ಕೇಂದ್ರ ಅಭಿವೃದ್ಧಿ ಪಡಿಸುತ್ತದೆಂಬುದರಲ್ಲಿ ಸಂದೇಹವಿಲ್ಲ. ಇಂಥ ಹಲವು ಸಂಶೋಧನೆಯ ಕನಸುಗಳನ್ನು ಹೊತ್ತು ಈ ಕೇಂದ್ರ ಎತ್ತರಕ್ಕೆ ಸಾಗುತ್ತಿದೆ. ಕನ್ನಡ ನೆಲದ ಪ್ರಜ್ಞೆ ಈ ಕೇಂದ್ರವನ್ನು ಜತನವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿದೆ.