Saturday, 23rd November 2024

ಸ್ವಾತಂತ್ರ್ಯ ಪೂರ್ವ ಪಕ್ಷಕ್ಕೆ ಅಭ್ಯರ್ಥಿಗಳ ಹುಡು‘ಕಾಟ’

ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆೆಸ್‌ನಿಂದ ಒಂದು ಪ್ರಾಾಣಿ ನಿಂತರೂ ಗೆಲ್ಲುತ್ತದೆ ಎನ್ನುವ ಮಾತಿತ್ತು. ಅದಕ್ಕೆೆ ಬಲಿಷ್ಠ ನಾಯಕತ್ವವೇ ಕಾರಣ. ಆದರೆ, ಅಂತಹ ಪಕ್ಷದಲ್ಲೀಗ, ಹೈಕಮಾಂಡ್ ಯಾರು ಎಂದು ಹುಡುಕುವ ಪರಿಸ್ಥಿಿತಿ ನಿರ್ಮಾಣವಾಗಿದೆ.

ರಂಜಿತ್ ಎಚ್ ಅಶ್ವತ್ಥ

ರಾಜ್ಯದಲ್ಲಿ ಮತ್ತೊೊಂದು ಉಪಚುನಾವಣೆ ಬಂದಾಗಿದೆ. ಈ ಉಪಸಮರದಲ್ಲಿ ಗೆದ್ದು ಬೀಗಲು ಈಗಾಗಲೇ ಹುರಿಯಾಳುಗಳು ಸಜ್ಜಾಾಗಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯಮುಗಿಸಿ ಪ್ರಚಾರಕ್ಕೆೆ ಧುಮುಕ್ಕಲು ಮೂರು ಪಕ್ಷಗಳು ಸಿದ್ಧತೆ ನಡೆಸಿಕೊಂಡಿದೆ. ಆದರೆ, ಈ ಮಧ್ಯೆೆ ಕಾಂಗ್ರೆೆಸ್ ಅಭ್ಯರ್ಥಿಗಳನ್ನು ಆಯ್ಕೆೆ ಮಾಡಿದ ಪರಿಯನ್ನು ನೋಡಿದರೆ, ಎಲ್ಲೋೋ ಒಂದು ಅಭ್ಯರ್ಥಿ ಆಯ್ಕೆೆ ವಿಚಾರದಲ್ಲಿ ಎಡವಿದೆ ಎನ್ನುವ ಅನುಮಾನ ಶುರುವಾಗಿದೆ.

ಸ್ವಾಾತಂತ್ರ್ಯ ಪೂರ್ವ ಪಕ್ಷವೊಂದು ಉಪಚುನಾವಣೆವೊಂದಕ್ಕೆೆ ಹುಡುಕಾಡಿ, ತಡಕಾಡಿ ಅಭ್ಯರ್ಥಿಗಳನ್ನು ಆಯ್ಕೆೆ ಮಾಡುವುದು ಒಂದು ಭಾಗವಾದರೆ, ಇನ್ನೊೊಂದೆಡೆ ಅರ್ಧಕ್ಕಿಿಂತ ಹೆಚ್ಚು ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೇವೆ ಬಂದು ಬಿ.ಫಾರಂ ಪಡೆಯಿರಿ ಎಂದರೂ, ‘ಈ ಬಾರಿ ಟಿಕೆಟ್ ಬೇಡ’ ಎನ್ನುವ ಅಭ್ಯರ್ಥಿಗಳ ಉತ್ತರ ನೋಡಿದರೆ ಪಕ್ಷದಲ್ಲಿ ಏನಾಗುತ್ತಿಿದೆ ಎನ್ನುವುದನ್ನು ನಾಯಕರು ಗಂಭೀರ ಚಿಂತನೆ ನಡೆಸಬೇಕಾಗಿದೆ.

ಈ ರೀತಿ ಅಭ್ಯರ್ಥಿಗಳನ್ನು ಆಯ್ಕೆೆ ಮಾಡುವಲ್ಲಿ ತಲೆಕೆಡಿಸಿಕೊಂಡ ಪರಿಯನ್ನು ನೋಡಿದರೆ, ಒಂದು ಕಾಂಗ್ರೆೆಸ್‌ನಿಂದ ಬಿಜೆಪಿಗೆ ಪಲಾಯನ ಮಾಡಿದ ಅರ್ನಹ ಶಾಸಕರಿಗೆ ಬದಲಿ ವ್ಯವಸ್ಥೆೆಯನ್ನು ಮಾಡಿಕೊಂಡಿರಲಿಲ್ಲ. ಮೊದಲ ಬಾರಿಗೆ ಉಪಚುನಾವಣೆ ಎದುರಾಗಿ, ಸುಪ್ರಿಿಂ ಕೋರ್ಟ್ ರದ್ದುಪಡಿಸಿದಾಗಲಾದರೂ, ಬದಲಿ ವ್ಯವಸ್ಥೆೆ ಮಾಡಿಕೊಳ್ಳಬಹುದಾಗಿತ್ತು. ಆದರೆ, ರಾಜೀನಾಮೆ ನೀಡುವುದು ಖಚಿತವಾದ ದಿನದಿಂದಲೂ, ಅನೇಕ ಕ್ಷೇತ್ರದಲ್ಲಿ ಸ್ಥಳೀಯ ನಾಯಕರು ಅನರ್ಹ ಶಾಸಕರ ಬದಲಿಗೆ, ಉಪಚುನಾವಣೆ ಸ್ಪರ್ಧಿಸುವ ನಾಯಕರನ್ನು ಗುರುತಿಸಿ ಸಜ್ಜಾಾಗಿ ಎಂದು ಮನವಿ ಮಾಡಿದರೂ, ಬಹುತೇಕರು ಈ ಬಗ್ಗೆೆ ತಲೆಕೆಡಿಸಿಕೊಂಡಿರಲಿಲ್ಲ. ಇನ್ನು ಚುನಾವಣೆ ಘೋಷಣೆಯಾದ ಬಳಿಕವಾದರೂ ರಾಜ್ಯ ನಾಯಕರು, ಸ್ಥಳೀಯರೊಂದಿಗೆ ಕೂತು ಯಾರನ್ನು ನಿಲ್ಲಿಸಬೇಕು ಎನ್ನುವ ಬಗ್ಗೆೆ ಸಮಾಲೋಚನೆ ನಡೆಸಿದ್ದರೆ, ಕೊನೆ ಕ್ಷಣದಲ್ಲಿ ಉಂಟಾದ ಗೊಂದಲ ಇಷ್ಟು ದೊಡ್ಡಮಟ್ಟಿಿಗೆ ಆಗುತ್ತಿಿರಲಿಲ್ಲ. ಆದರೆ, ಇದ್ಯಾಾವುದನ್ನು ಮಾಡದೇ ಕಾದು ನೋಡುವ ತಂತ್ರಕ್ಕೆೆ ಮೊರೆ ಹೋಗಿದ್ದರಿಂದ, ಕೆಲ ಕ್ಷೇತ್ರದಲ್ಲಿ ಅಭ್ಯರ್ಥಿಗಳೇ ಇಲ್ಲದಿರುವ ಪರಿಸ್ಥಿಿತಿ ನಿರ್ಮಾಣವಾಗಿತ್ತು.

ಎಲ್ಲ ಕ್ಷೇತ್ರಗಳಿಗೂ ಕಾಂಗ್ರೆೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಸ್ಪರ್ಧಿಸುತ್ತಿಿರುವ ಅಭ್ಯರ್ಥಿಗಳಲ್ಲಿ ಎಷ್ಟು ಮಂದಿಗೆ ‘ಗೆಲ್ಲುವ ಸಾಮರ್ಥ್ಯವಿದೆ’ ಎನ್ನುವುದನ್ನು ಪರಾಮರ್ಶೆ ಮಾಡಬೇಕಾಗಿದೆ. ನಾಲ್ಕೈದು ಕ್ಷೇತ್ರದಲ್ಲಿ ಬಿಜೆಪಿಗೆ ನೇರ ಫೈಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಿದರೂ, ಅದು ಎಷ್ಟರ ಮಟ್ಟಿಿಗೆ ಸತ್ಯ ಎನ್ನುವುದನ್ನು ಇನ್ನೊೊಂದು ವಾರದಲ್ಲಿ ಸ್ಪಷ್ಟವಾಗಲಿದೆ.

ಇನ್ನು ಈ ಪರಿಸ್ಥಿಿತಿಗೆ ಕಾಂಗ್ರೆೆಸ್‌ನಲ್ಲಿರುವ ಬಹುತೇಕ ನಾಯಕರ ಮನಸ್ಥಿಿತಿಯೂ ಕಾರಣ. ‘ದೇಶ ಕಾಯುವ ಸೈನಿಕ ಪಕ್ಕದ ಮನೆಯಲ್ಲಿರಲ್ಲಿ, ಹೊರೆತು ನಮ್ಮ ಮನೆಯಲ್ಲಿ ಅಲ್ಲ’ ಎನ್ನುವ ರೀತಿ ವರ್ತಿಸುತ್ತಿಿದ್ದಾಾರೆ. ಕೆಲ ಕ್ಷೇತ್ರದಲ್ಲಿ ನಾಯಕರಿಗೆ ಸ್ಪರ್ಧಿಸುವಂತೆ ಆಫರ್ ನೀಡಿದರೂ ಅದನ್ನು ಒಪ್ಪುುವ ಸ್ಥಿಿತಿಯಲ್ಲಿ ನಾಯಕರಿಲ್ಲ. ಇದಕ್ಕೆೆ ಪೂರಕ ಎನ್ನುವ ರೀತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇತ್ತೀಚಿನ ಸುದ್ದಿಗೋಷ್ಠಿಿಯಲ್ಲಿ ಹೇಳಿಕೆ ನೀಡಿದ್ದಾಾರೆ. ಪತ್ರಕರ್ತರೊಬ್ಬರು ಗುಂಡೂರಾವ್ ಪತ್ನಿಿ ತಬು ಅವರು ಶಿವಾಜಿನಗರದಿಂದ ಸ್ಪರ್ಧಿಸುವ ಮಾತಿದೆ ಎಂದು ಪ್ರಶ್ನಿಿಸಿದಕ್ಕೆೆ, ಪಕ್ಷದ ರಾಜ್ಯಾಾಧ್ಯಕ್ಷರು, ‘ನನ್ನ ಪತ್ನಿಿಗೆ ಚುನಾವಣೆ ಸ್ಪರ್ಧಿಸುವ ಹಾಗೂ ರಾಜಕೀಯ ಮಾಡುವ ಜ್ಞಾಾನವಿದೆ. ಆದರೆ, ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಸಮಯವಿಲ್ಲ. ಆದ್ದರಿಂದ ಪತ್ನಿಿ ಸ್ಪರ್ಧಿಸುತ್ತಿಿಲ್ಲ.’ ಎನ್ನುವ ಉತ್ತರ ನೀಡುವ ಮೂಲಕ, ಪಕ್ಷ ಉಪಚುನಾವಣೆಗೆಂದು ಯಾವುದೇ ತಯಾರಿಯನ್ನು ಪಕ್ಷ ಮಾಡಿಕೊಂಡಿಲ್ಲ ಎನ್ನುವುದನ್ನು ಒಪ್ಪಿಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ, ತಮ್ಮ ಪತ್ನಿಿಯ ಸ್ಪರ್ಧೆ ವಿಚಾರದಲ್ಲಿ ಈ ರೀತಿ ಹೇಳಿಕೆ ನೀಡುತ್ತಾಾರೆ ಎಂದರೆ, ಇನ್ನು ಪಕ್ಷದ ಕಾರ್ಯಕರ್ತರು ಹಾಗೂ ಆಕಾಂಕ್ಷಿಿಗಳಲ್ಲಿ ಸ್ಪರ್ಧಿಸಿದರೆ ಗೆಲುವು ಸಾಧ್ಯವೇ ಎನ್ನುವ ಪ್ರಶ್ನೆೆ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಪ್ರಮುಖವಾಗಿ, ಅನರ್ಹ ಶಾಸಕರು ಕಾಂಗ್ರೆೆಸ್‌ನಿಂದ ಹೊರಬಂದು ಬಿಜೆಪಿಗೆ ಹೋಗುವುದಾಗಲಿ, ಉಪಚುನಾವಣೆ ಎದುರಿಸಬೇಕಾಗುತ್ತದೆ ಎನ್ನುವುದಾಗಲಿ ವಾರದ ಹಿಂದೆ ತಿಳಿದ ಅಂಶವೇನಲ್ಲ. ಸುಮಾರು ನಾಲ್ಕೈದು ತಿಂಗಳ ಹಿಂದೆಯೇ ಈ ಬಗ್ಗೆೆ ಪಕ್ಷಕ್ಕೆೆ ಸ್ಪಷ್ಟವಾಗಿತ್ತು. ಉಪಚುನಾವಣೆ ಎದುರಿಸುವುದು ಸ್ಪಷ್ಟವಾಗಿದ್ದರೂ, ಪಕ್ಷದ ನಾಯಕರು ಮಾತ್ರ, ಇದಕ್ಕೆೆ ಅಗತ್ಯವಿರುವ ತಯಾರಿ ಆರಂಭಿಸದೇ ಕಾಲ ಕಳೆಯುವ ಕೆಲಸದಲ್ಲಿಯೇ ನಿರತರಾದರು. ಕೆಪಿಸಿಸಿ ಕಚೇರಿಯಲ್ಲಿ ಸಾಲು ಸಾಲು ಸಭೆಗಳನ್ನು ನಡೆಸಿದರೂ, ಅಭ್ಯರ್ಥಿ ಆಯ್ಕೆೆಯ ಬಗ್ಗೆೆ ಚರ್ಚಿಸುವುದನ್ನು ಬಿಟ್ಟು, ‘ಮೂಲ-ವಲಸಿಗ ಕಾಂಗ್ರೆೆಸ್’ ಎನ್ನುವುದಲ್ಲಿಯೇ ಕಾಲ ಕಳೆದರು. ಈ ಎಲ್ಲದರ ಫಲವಾಗಿ ಸೋಮವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದರೂ, ಭಾನುವಾರ ರಾತ್ರಿಿಯವರೆಗೆ ಕೆಲ ಕ್ಷೇತ್ರದಲ್ಲಿ ಗೊಂದಲ ಉಂಟಾಗಿತ್ತು. ಬಾಕಿಯಿರುವ 17 ದಿನದಲ್ಲಿ ಚುನಾವಣೆ ಎದುರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆೆಯಲ್ಲಿಯೇ, ಬಹುತೇಕ ಆಕಾಂಕ್ಷಿಗಳು ಟಿಕೆಟ್ ಪಡೆಯುವ, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಉಸಾಬರಿ ಬೇಡವೆಂದು ಹಿಂದೆ ಸರಿದರು.

ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಿರುವ ಬಹುತೇಕ ಕ್ಷೇತ್ರದಲ್ಲಿ ಕಾಂಗ್ರೆೆಸ್ ಪ್ರಾಾಬಲ್ಯ ಹೆಚ್ಚಿಿದೆ. ಅದು ಈ ಹಿಂದೆ ಕಾಂಗ್ರೆೆಸ್‌ನಿಂದ ಸ್ಪರ್ಧಿಸಿದ ಅಭ್ಯರ್ಥಿಯ ವರ್ಚಸ್ಸಾಾದರೂ, ಅದರೊಂದಿಗೆ ಸಾಂಪ್ರದಾಯಿಕ ಮತ ವೋಟ್‌ಗಳಿದ್ದವು. ಆದರೆ, ಇದನ್ನು ಬಳಸಿಕೊಳ್ಳುವ ಅಥವಾ ಬಳಸಿಕೊಳ್ಳಲು ಅಭ್ಯರ್ಥಿಗಳಿಗೆ ತಿಳಿಸುವ ನಿಟ್ಟಿಿನಲ್ಲಿ ಯಾವೊಬ್ಬ ನಾಯಕರು ಪ್ರಯತ್ನಿಿಸದೇ ಇರುವುದೇ ಈ ಎಲ್ಲ ಸಮಸ್ಯೆೆ ಹಾಗೂ ಗೊಂದಲಗಳಿಗೆ ಕಾರಣ ಎನ್ನುವುದು ಕಾಂಗ್ರೆೆಸ್ ಅಂಗಳದಲ್ಲಿರುವ ಮಾತು.

ಭಾರತಕ್ಕೆೆ ಸ್ವಾಾತಂತ್ರ್ಯ ಬಂದ ಬಳಿಕ ದಶಕ ಕಾಲ ಆಡಳಿತ ನಡೆಸಿದ ನೆಹರು ನಂತರ ಕಾಂಗ್ರೆೆಸ್ ಚುಕ್ಕಾಾಣಿ ಹಿಡಿದ ಇಂದಿರಾ ಗಾಂಧಿ ಅವರು ಪಕ್ಷವನ್ನು ಬೆಳೆಸಿದ ಹಾಗೂ ಆಡಳಿತ ನಡೆಸಿದ ರೀತಿ ಎಲ್ಲರಿಗೂ ಗೊತ್ತಿಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಒಂದು ಮಾತಿತ್ತು. ‘ಹಸ್ತದ ಗುರುತಲ್ಲಿ ಚುನಾವಣೆಗೆ ಒಂದು ಪ್ರಾಾಣಿ ಸ್ಪರ್ಧಿಸಿದರೂ, ಗೆಲುವು ಖಚಿತ’ವೆಂದು. ಈ ಮಾತು ಅಕ್ಷರಕ್ಷ ಕೆಲ ದಶಕ ನಡೆದಿತ್ತು ಸಹ. ಅದಾದ ಅನೇಕ ವರ್ಷ, ಕಾಂಗ್ರೆೆಸ್ ಗುರುತಾಗಿರುವ ಹಸ್ತವನ್ನು ಇಂದಿರಾ ಗಾಂಧಿ ಅವರ ಹಸ್ತವೆಂದುಕೊಂಡು ಹಳ್ಳಿಿಗಳಲ್ಲಿ ಮತ ಹಾಕುತ್ತಿಿದ್ದರು ಎನ್ನುವ ಮಾತಿದೆ. ಆದರೀಗ, ಕಾಂಗ್ರೆೆಸ್‌ನಲ್ಲಿರುವ ನಾಯಕತ್ವದ ಸಮಸ್ಯೆೆಯಿಂದ, ಒಂದು ರಾಜ್ಯದ 15 ಕ್ಷೇತ್ರಕ್ಕೆೆ ನಡೆಯುತ್ತಿಿರುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಹಾಕುವುದಕ್ಕೆೆ ಆಕಾಶ ನೋಡುವ ಪರಿಸ್ಥಿಿತಿಯಲ್ಲಿದೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಅಳಿವು-ಉಳಿವಿನ ಪ್ರಶ್ನೆೆಯಾಗಿರುವ ಈ ಉಪಚುನಾವಣೆಯ ತಯಾರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೊರೆತುಪಡಿಸಿ ಇನ್ಯಾಾವುದೇ ನಾಯಕರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಿಲ್ಲ. ಸಿದ್ದರಾಮಯ್ಯ ಅವರು ಸಾಲು ಸಾಲು ಸಭೆಗಳನ್ನು ನಡೆಸಿ, ಅಭ್ಯರ್ಥಿ ಆಯ್ಕೆೆ ಬಗ್ಗೆೆ ಚರ್ಚಿಸಿದ್ದು, ಇವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆೆ ಜತೆಯಲ್ಲಿದ್ದಾಾರೆ. ಆದರೆ, ಇವರನ್ನು ಹೊರೆತು, ಪಕ್ಷದ ಯಾವುದೇ ನಾಯಕರು ಹೆಚ್ಚು ಕಾಣಿಸಿಕೊಂಡಿಲ್ಲ. ಪ್ರಮುಖವಾಗಿ ಕಾಂಗ್ರೆೆಸ್ ಹೈಕಮಾಂಡ್ ಬಳಿ ಉತ್ತಮ ಒಡನಾಟ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಹಾಗೂ ವಯಸ್ಸಿಿನ ಕಾರಣ ನೀಡಿ ಹಿಂದೆ ಸರಿದಿದ್ದರೆ, ಮುನಿಯಪ್ಪ, ಬಿ.ಕೆ ಹರಿಪ್ರಸಾದ್, ವೀರಪ್ಪ ಮೊಯ್ಲಿಿ ಅವರು ‘ತಮ್ಮ ಪಕ್ಷದಲ್ಲಿ ನಮ್ಮ ಮಾತಿಗೆ ಮನ್ನಣೆ’ ಸಿಗುತ್ತಿಿಲ್ಲ ಎಂದು ಹೇಳಿಕೊಂಡೇ ಓಡಾಡುತ್ತಿಿದ್ದಾಾರೆ. ಇವರನ್ನು ಹೊರತುಪಡಿಸಿ, ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಹಾಗೂ ಜಾರ್ಜ್ ಅವರಿಗೆ ಇಡಿ ಚಿಂತೆಯಾದರೆ, ಮಾಜಿ ಉಪಮುಖ್ಯಮಂತ್ರಿಿ ಪರಮೇಶ್ವರ್‌ಗೆ ಐಟಿ ಚಿಂತೆಯಾಗಿದೆ.

ಅಂದ ಮಾತ್ರಕ್ಕೆೆ ಉಪಚುನಾವಣೆಯ 15ಕ್ಕೆೆ 15 ಅಭ್ಯರ್ಥಿಗಳು ‘ಡಮ್ಮಿಿ ಕ್ಯಾಾಡಿಂಡೇಟ್’ಗಳಲ್ಲ. ಕೆಲವರು ಬಿಜೆಪಿ ಹಾಗೂ ಜೆಡಿಎಸ್‌ಗೆ ಟಫ್ ಫೈಟ್ ನೀಡುವುದರಲ್ಲಿ ಅನುಮಾನವಿಲ್ಲ. ಆದರೆ, ಕನಿಷ್ಠ ನಾಲ್ಕೈದು ಮಂದಿಯ ಹೆಸರನ್ನು ಅನೇಕರು ಕೇಳಿಯೇ ಇಲ್ಲ. ಕೊನೆ ಕ್ಷಣದಲ್ಲಿ ಘೋಷಣೆಯಾದ ಯಶವಂತಪುರ ಅಭ್ಯರ್ಥಿ ನಾಗರಾಜ್ ಪಾಳ್ಯ ಅವರ ಬಗ್ಗೆೆ ಅನೇಕರಿಗೆ ಗೊತ್ತಿಿರಲಿಲ್ಲ. ಅವರ ಫೋಟೋ ಬೇಕೆಂದು ಕಾಂಗ್ರೆೆಸ್ ವಕ್ತಾಾರರಿಗೆ ಹಾಗೂ ಮಾಧ್ಯಮ ನಿರ್ವಹಿಸುವವರಿಗೆ ಕೇಳಿದಾಗ, ಅವರ ಫೋಟೋ ನೀಡಲು ಸುಮಾರು ಒಂದು ತಾಸು ತಗೆದುಕೊಂಡಿದ್ದಾಾರೆ. ಮರುದಿನ ನಾಮಪತ್ರ ಸಲ್ಲಿಸು ವ್ಯಕ್ತಿಿಯ ಫೋಟೋ ಸ್ವತ ಪಕ್ಷದ ವಕ್ತಾಾರರಿಗೆ ಹುಡುಕಲು ತಾಸು ಸಮಯ ಬೇಕೆಂದರೆ, ಅವರ ಜನಪ್ರಿಿಯತೆ ಅಲ್ಲಿಯೇ ತಿಳಿಯುತ್ತದೆ.

ಅಷ್ಟಕ್ಕೂ, ಕಾಂಗ್ರೆೆಸ್ ಈ ಪರಿಸ್ಥಿಿತಿಗೆ ಬಂದಿದ್ದು, ಕಳೆದೊಂದು ದಶಕದಿಂದ. 2014ರ ಲೋಕಸಭಾ ಚುನಾವಣೆಯ ನೇತೃತ್ವದೊಂದಿಗೆ, ರಾಹುಲ್ ಗಾಂಧಿ ಅವರಿಗೆ ಭಾವಿ ಪ್ರಧಾನಿ ಎನ್ನುವ ಪಟ್ಟ ಕಟ್ಟಿಿದ ಬಳಿಕವೇ, ಕಾಂಗ್ರೆೆಸ್ ಹಿನ್ನಡೆಯ ಪರ್ವ ಶುರುವಾಗಿತ್ತು. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ರಾಹುಲ್ ಮಾಡಿದ ಕೆಲವೊಂದು ಎಡವಟ್ಟು ಭಾಷಣ, ಚುನಾವಣಾ ತಂತ್ರದಲ್ಲಿ ಹಿರಿಯ ಸಲಹೆ ಪಡೆಯದೇ ಯುವಕರ ತಂಡ ಕಟ್ಟಿಿಕೊಂಡು ತಗೆದುಕೊಂಡ ಕೆಲ ‘ಹುಂಬು ನಿರ್ಧಾರ’ ಹಾಗೂ ತಮ್ಮ ಮುಂದಿನ ಯೋಜನೆಗಳಿಗಿಂತ ಬಿಜೆಪಿಯವರನ್ನು ತೆಗಳುವ ಮಾತುಗಳಿಂದ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆೆಯಾದರು. ಬಳಿಕ ಐದು ವರ್ಷ ದೇಶದಲ್ಲಿ ನಡೆದ ಬಹುತೇಕ ಚುನಾವಣೆಯ ಜವಾಬ್ದಾಾರಿಯನ್ನು ರಾಹುಲ್ ಗಾಂಧಿ ಹೊತ್ತು ತಿರುಗಾಡಿದರೂ, ಪಂಜಾಬ್ ಹಾಗೂ ಮಧ್ಯಪ್ರದೇಶ ಹೊರೆತುಪಡಿಸಿ ಯಾವ ರಾಜ್ಯಗಳಲ್ಲಿಯೂ ನಿರೀಕ್ಷಿತ ಜಯ ಕಾಣಿಸಲಿಲ್ಲ. ಇದಾದ ಬಳಿಕ 2019ರ ಲೋಕಸಭಾ ಚುನಾವಣಾ ಜವಾಬ್ದಾಾರಿಯನ್ನು ಹೊತ್ತು ರಾಹುಲ್ ಇಡೀ ದೇಶ ಸುತ್ತು ಹಾಕಿದರು. ಆದರೆ, ರಾಗಾ ಸುತ್ತಿಿದ್ದ ಸಾವಿರಾರು ಕಿಮೀಗೆ ಯಾವುದೇ ಪ್ರಯೋಜನ ನೀಡಲಿಲ್ಲ.

ದಶಕದ ಕಾಲ ಪ್ರಯತ್ನಿಿಸಿದರೂ ಕಾಂಗ್ರೆೆಸ್‌ನ್ನು ಮೇಲೆತ್ತಲು ಹಾಗೂ ಪಕ್ಷ ಸಂಘಟನೆಯಲ್ಲಿ ವಿಫಲವಾಗಿದ್ದನ್ನು ನೋಡಿ, ಅಧ್ಯಕ್ಷ ಸ್ಥಾಾನಕ್ಕೆೆ ರಾಜೀನಾಮೆ ನೀಡಿದರು. ರಾಹುಲ್ ಬಳಿಕ ಸೋನಿಯಾ ಗಾಂಧಿ ಅವರು ಮತ್ತೆೆ ಪಕ್ಷದ ಅಧ್ಯಕ್ಷಗಾದಿ ಪಡೆದಿದ್ದರೂ ಎಲ್ಲವನ್ನು ಸರಿಪಡಿಸಲು ಸಾಧ್ಯವಾಗುತ್ತಿಿಲ್ಲ. ಈ ಎಲ್ಲದರ ಫಲವೇ, ಇದೀಗ ಕಾಂಗ್ರೆೆಸ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಹುಡುಕಿಕೊಂಡು ಬರಬೇಕಾದ ಪರಿಸ್ಥಿಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಾಗುವುದಿಲ್ಲ.