ಅಭಿಮತ
ಡಾ.ಆರ್.ಜಿ.ಹೆಗಡೆ
ಬಂಧನಗಳಿಂದ ಮುಕ್ತಗೊಳಿಸಿ ‘ರೋಮ್ಯಾನ್ಟಿಕ್’ ಆದ ಮನಸ್ಸನ್ನು ಸೃಷ್ಟಿಸಿತು. ಇದೇ ಹಿನ್ನೆಲೆಯಲ್ಲಿಯೇ ಶೇಕ್ಸ್‌ಪಿಯರ್ ದೇವರುಗಳ, ಧರ್ಮಗಳ ಕುರಿತು ತಲೆಕೆಡಿಸಿಕೊಳ್ಳದೆ ಮನುಷ್ಯನ ಮನಸ್ಸಿನ ಆಳ ಅಗಲವನ್ನು, ವೈವಿಧ್ಯತೆಗಳನ್ನು ಹುಡುಕುತ್ತ ಹೋಗಿದ್ದು. ಕೆಲವು ಅಮರ ಕೃತಿಗಳನ್ನು ಗಮನಿಸಬೇಕು.
ಶೇಕ್ಸಪಿಯರ್ ಕುರಿತ ವಿಷಯಗಳಲ್ಲಿ ಮೊದಲನೆಯದು, ಸಾಹಿತ್ಯದ ಗಂಧಗಾಳಿಯೇ ಇರದವರೂ ಆತನ ಕುರಿತು ಒಂದು ಮಾತನಾಡಿಬಿಡುವ ತೆವಲು. ಲಿಬಿಯಾದ ಡಿಕ್ಟೇಟರ್ ಕರ್ನಲ್ ಗಡಾಫಿಯನ್ನು ಕೂಡ ಅದು ಬಿಡಲಿಲ್ಲ. ಆತ ಶೇಕ್ಸಪಿಯರ್‌ನನ್ನು ‘ನಮ್ಮವನು’ ಎಂದು ಹೇಳಿದ. ಶೇಕ್ಸ್ ಪಿಯರ್ ಕೃತಿಗಳಲ್ಲಿ ಅರೇಬಿಯನ್ ಪರ್ಫ್ಯೂಮ್‌ನ ಗಂಧ ತುಂಬಿದೆ.
ಅರೇಬಿಯನ್ ಪರಿಮಳದ ಕುರಿತು ಬರೆಯಲು ಹೊರಗಿನವರಿಗೆ ಸಾಧ್ಯವಿಲ್ಲ ಎಂದು ಆತ ಹೇಳಿದ. ಶೇಕ್ಸಪಿಯರ್‌ನ ಮೂಲ ಹೆಸರು ಶೇಕ್ ಜುಬೇರ್ ಎನ್ನುವುದಿತ್ತು ಎಂದು ತನ್ನದೇ ಆದ ಸಿದ್ಧಾಂತವೊಂದನ್ನು ಆತ ಮಂಡಿಸಿದ. ಅತಿರೇಕದ ವಾದಗಳಲ್ಲಿ ಇನ್ನೊಂದೆಂದರೆ ಶೇಕ್ಸಪಿಯರ್ ಹೆಸರಿನ ಬರಹಗಾರನೇ ಇರಲಿಲ್ಲ. ಆ ಕೃತಿಗಳನ್ನು ಬರೆದಿದ್ದು ರಾಣಿ ಎಲಿಝಬೆತ್ ಎನ್ನುವುದು ಬ್ರಿಟಿಷ್ ವಲಯಗಳಲ್ಲಿದೆ. ಅಲ್ಲಿ ಬರುವ ದಟ್ಟವಾದ ರಾಜಕೀಯ ಒಳನೋಟಗಳು ಸಾಮಾನ್ಯನಿಗೆ ಸಿಗುವುದು ಸಾಧ್ಯವೇ ಇಲ್ಲ ಎನ್ನುವುದು ಅವರ ವಾದ.
ಶೇಕ್ಸ್‌ಪಿಯರ್ ಕುರಿತು ಚಿತ್ರವಿಚಿತ್ರ ಮಾತುಗಳು ಬಂದಿವೆ. ರಾಬರ್ಟ ಗ್ರೀನ್ ಎನ್ನುವವ ಶೇಕ್ಸ್‌ಪಿಯರ್ ಕುರಿತು ಕೆಟ್ಟದಾಗಿ ಬರೆದ. ‘ಬಣ್ಣ ಬಣ್ಣಗಳಿಂದ ತುಂಬಿದ ನಮ್ಮ ರೆಕ್ಕೆಗಳಿಂದ ತನ್ನನ್ನು ಸಿಂಗರಿಸಿಕೊಂಡ ಕಾಗೆ ಶೇಕ್ ಪಿಯರ್’ ಎಂದು ಆತ ಹೇಳಿದ. ಆತನ ಕೃತಿಗಳು ನಮ್ಮ ಕೃತಿಗಳ ಕಾಪಿಗಳು ಎಂದು ಹೇಳಿದ. ಇಂತಹ ಪ್ರತಿಕ್ರಿಯೆ ಗಳು ಶೇಕ್ಸಪಿಯರ್‌ನಿಗೆ ಕಡಿಮೆಯೇ.
ಆತನನ್ನು ಹಾಡಿ ಹೊಗಳಿದವರೇ ಹೆಚ್ಚು. He was not of an age but of all times ಎಂದು ಸ್ಯಾಮ್ಯುಯೆಲ್ ಜಾನ್ಸನ್ ಹೇಳಿದ. ವಿಲಿಯಂ ಹ್ಯಾಝಲಿಟ್ ಎನ್ನುವ ವಿಮರ್ಶಕನಂತೂ ಶೇಕ್ಸ್‌ಪಿಯರ್ ನನ್ನು ಸ್ವರ್ಗಕ್ಕೆ ಕೊಂಡು ಹೋದ. ‘If we want to know the force of human genius, we should read shakespeare’ ಎಂದು ಹೇಳಿದ. ‘ಶೇಕ್ಸ್‌ಪಿಯರ್‌ನಲ್ಲಿ ಮೌನಗಳು’ಎನ್ನುವ ರಿಸರ್ಚ್ ಕೃತಿ ಕೂಡ ಪ್ರಕಟವಾಗಿದೆ. ಕುತೂಹಲ ಎಂದರೆ ಆತನ ಮೂಲ ಕೃತಿಗಳಿಗೆ ವಿಶ್ವವಿದ್ಯಾಲಯದ ಲೈಬ್ರರಿಯ ಒಂದು ಕಪಾಟು ಸಾಕಾದರೂ ರಿಸರ್ಚ್ ಪುಸ್ತಕಗಳಿಗೆ ಕನಿಷ್ಠ ಮೂರು ಮಾಳಿಗೆಗಳು ಬೇಕು. ಶೇಕ್ಸ್ ಪಿಯರ್ ಕುರಿತು ಇನ್ನೂ ಹಲವು ವಿಷಯಗಳಿವೆ.
ಮೂವತ್ತೇಳು ನಾಟಕಗಳನ್ನು, ನೂರಾಐವತ್ನಾಲ್ಕು ಸಾನೆಟ್‌ಗಳನ್ನು, ಎರಡು ನೀಳ್ಗವನಗಳನ್ನು ಬರೆದ ಆತ ತನ್ನ ಕುರಿತು ಹೇಳಿಕೊಳ್ಳಲೇ ಇಲ್ಲ. ಆತನ ಕುರಿತ ವಿಷಯಗಳು ಅಸ್ಪಷ್ಟವಾಗಿ, ಆಧಾರ ರಹಿತವಾಗಿಯೇ ಉಳಿದು ಬಂದಿವೆ. ನಂಬಲ್ಪಟ್ಟ ವಿಷಯಗಳೆಂದರೆ ಆತ ಇಂಗ್ಲೆಂಡಿನ ಸ್ಟ್ರಾಟ್ -ರ್ಡ್ ಆನ್ ಏವನ್ ಎನ್ನುವ ಸ್ಥಳದಲ್ಲಿ ಹುಟ್ಟಿದ. ಕಷ್ಟದಲ್ಲಿ ಬಾಲ್ಯ ಕಳೆದ. ನಾಟಕದ ಪರದೆ ಎಳೆಯುವ ಹುಡುಗನಾಗಿ ಕೆಲವು ಕಾಲ ಕಾರ್ಯ ನಿರ್ವಹಿಸಿದ.
ತನಗಿಂತ ಹಿರಿಯಳೊಬ್ಬಳನ್ನು ಮದುವೆಯಾದ. ಆತನ ಸಾನೆಟ್ಟುಗಳು ಸೂಚಿಸುವಂತೆ ಆತ ಓರ್ವ ಕಪ್ಪು ಸುಂದರಿಯ ಹುಚ್ಚಿನಲ್ಲಿದ್ದ. ವೈಯಕ್ತಿಕ ಬದುಕಿನಲ್ಲಿ ತೀವ್ರ ದುರಂತಗಳನ್ನು ಎದುರಿಸಿದ ಆತ ಒಂದು ಹಂತದಲ್ಲಿ ಕಪ್ಪು ಮನಸ್ಥಿತಿಯಲ್ಲಿದ್ದ.
ಆಗಲೇ ತನ್ನ ದುರಂತ ನಾಟಕಗಳನ್ನು ಬರೆದ. ತನ್ನ ಹುಟ್ಟಿನ ದಿನವಾದ ಎಪ್ರಿಲ್ ಇಪ್ಪತ್ತಮೂರರಂದು ತೀರಿಕೊಂಡ. ಇಷ್ಟೊಂದು ಬರೆದ ಶೇಕ್ಸ್‌ಪಿಯರ್‌ನಿಗೆ ಯಾವುದೇ ರೀತಿಯ -ರ್ಮಲ್ಲಾದ ಶಿಕ್ಷಣವಿರಲಿಲ್ಲ. ಅಂದಿನ ದಿನಗಳಲ್ಲಿ ವಿದ್ವಾಂಸ ಎಂದು ತೋರಿಸಿಕೊಳ್ಳಲು ಅಗತ್ಯವಾಗಿದ್ದ ಗ್ರೀಕ್ ಅಥವಾ ಲ್ಯಾಟಿನ್ ಭಾಷೆ ಬರುತ್ತಿರಲಿಲ್ಲ. ಇಂಗ್ಲಿಷ್ ವ್ಯಾಕರಣ ಅಥವಾ ಪದ ಬಳಕೆ ಕುರಿತಾದ ಶಾಸೀಯ ಜ್ಞಾನವೂ ಆತನಿಗೆ ಇರಲಿಲ್ಲ. ಭಾಷೆಯನ್ನು ತನಗೆ ಬೇಕಾದ ರೀತಿಯ ಸ್ವಾತಂತ್ರ್ಯದಲ್ಲಿ ಬರೆಯುತ್ತ ಹೋದ. ಇಂಗ್ಲಿಷ್ ಭಾಷೆಯನ್ನು ಹೆಚ್ಚು ಕಡಿಮೆ ಮರು ಸೃಷ್ಟಿಸಿದ. ಅನೇಕ ಹೊಸ ಶಬ್ದಗಳ
ನ್ನು ಇಂಗ್ಲಿಷಿನಲ್ಲಿ ಹುಟ್ಟುಹಾಕಿದ. ವ್ಯಾಕರಣವನ್ನು ಮರು ಬರೆದ.
ಶೇಕ್ಸ್‌ಪಿಯರ್‌ನಂತಹ ಜೀನಿಯಸ್ ಮನಸ್ಸು ಹೇಗೆ ಹುಟ್ಟಿಕೊಂಡಿತು ಮತ್ತು ತನ್ನ ಕೃತಿಗಳ ಮೂಲಕ ಆತ ಏನನ್ನು ಹೇಳಿದ ಎನ್ನುವುದು ನಿಜಕ್ಕೂ ಕುತೂಹಲ. ಸ್ಪಷ್ಟವಾದ ಕಾರಣ ಹದಿನಾಲ್ಕನೆಯ, ಹದಿನೈದನೆಯ ಶತಮಾನದ ರಿನೈಸನ್ಸ್. ಆತನ ಮನಸ್ಸು ರಿನೈಸನ್ಸ್‌ನ ಉತ್ಪನ್ನ. ರಿನೈಸೆನ್ಸ್ ಇಲ್ಲದಿದ್ದರೆ ಶೇಕ್ಸ್‌ಪಿಯರ್ ಇರುತ್ತಿರಲಿಲ್ಲ. ಅದು ಹುಟ್ಟಿಸಿದ ಆಶಯಗಳನ್ನು ಮಾನಸಿಕ ಜಗತ್ತಿಗೆ ಅನ್ವಯಿಸಿದವನು ಶೇಕ್ಸಪಿಯರ್. ರಿನೈಸೆನ್ಸ್‌ಗೆ ಪ್ರೇರಣೆಯಾದ ಘಟನೆ ಏಷಿಯಾ ಮತ್ತು ಯೂರೋಪಿನ ನಡುವಿನ ಲ್ಯಾಂಡ್‌ರೂಟ್ ರಾಜ ಕೀಯ ಕಾರಣಗಳಿಗಾಗಿ ಬಂದಾಗಿ ಹೋಗಿ ಬದಲಿ ಮಾರ್ಗ ಗಳನ್ನು ಶೋಧಿಸುವ ಅವಶ್ಯಕತೆ ಹುಟ್ಟಿಕೊಂಡಿತ್ತು. ಈ ಅವಶ್ಯಕತೆ ಶೋಧದ ಮನೋಭಾವ ಹೊಂದಿದ ಽರರನ್ನು ಹುಟ್ಟಿಸಿತು.
ವಾಸ್ಕೋಡಗಾಮ ಭಾರತಕ್ಕೆ ಬಂದ. ಕೊಲಂಬಸ್ ಅಮೆರಿಕಕ್ಕೆ ಹೋದ. ಮ್ಯಾಗಿಲಾನ್ ದಾರಿತಪ್ಪಿ ಇಡೀ ಜಗತ್ತಿನ ಪ್ರದಕ್ಷಿಣೆ ಮಾಡಿದ. ಇಂತಹ ಘಟನೆಗಳು ಮನುಷ್ಯನ ಮನಸ್ಸಿನಲ್ಲಿ ಹೊಸ ಅಲೆಗಳನ್ನು ಹುಟ್ಟಿಸಿದ್ದವು. ನಿಸರ್ಗದ ವಿರುದ್ಧದ ಸಮರದಲ್ಲಿ ಮಾನವನ ಆತ್ಮವಿಶ್ವಾಸ, ಸ್ವಂತ
ಬಲದ ಮೇಲಿನ ನಂಬುಗೆ ಹೆಚ್ಚುತ್ತಲೇ ಹೋಯಿತು. ಹಾಗೆಯೇ ಇಷ್ಟು ದಿನ ಮನಸ್ಸುಗಳನ್ನು ಹಿಡಿದಿಟ್ಟಿದ್ದ ದೈವೀ ಶಕ್ತಿಯಲ್ಲಿನ ವಿಶ್ವಾಸ ಕಡಿಮೆ ಯಾಗುತ್ತಲೇ ಹೋಯಿತು. ಕ್ರಮೇಣವಾಗಿ ‘ಮಾನವ ಕೇಂದ್ರಿತ’ ಜಗತ್ತು ಹುಟ್ಟಿ ಬಂತು. ಮನುಷ್ಯನ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತ ಬಂತು. ಹೊರ ಜಗತ್ತಿನ ಶೋಧದ ಜತೆಯೇ ಮನುಷ್ಯನ ಒಳ ಜಗತ್ತನ್ನು ಶೋಽಸುವ ಆಸೆ ಹುಟ್ಟಿಕೊಂಡಿದ್ದು ಹೀಗೆ.
ಈ ಮನಸ್ಥಿತಿಯನ್ನೇ ವಿದ್ವಾಂಸರು ಹ್ಯೂಮನಿಸಂ ಎಂದರು. -ಲವಾಗಿಯೇ, ಆ ಸಂದರ್ಭದಲ್ಲಿ ಬಂದ ಖ್ಯಾತ ವರ್ಣಚಿತ್ರಕಾರರು- ಲಿಯೋನಾರ್ಡೋ ಡಾ ವಿಂಚಿ, ರಫೆಲ್ ಮತ್ತಿತರರು ಸುಂದರ ಶರೀರದ ನಗ್ನ ವರ್ಣಚಿತ್ರಗಳನ್ನು ಬರೆದದ್ದು. ಅಂದರೆ ಮನುಷ್ಯನ ಒಳಜಗತ್ತಿನ ಚಿತ್ರಗಳನ್ನು ಜಗತ್ತಿನ ಮುಂದಿಡಲು ಪ್ರಯತ್ನಿಸಿದ್ದು. ಶೇಕ್ಸ್‌ಪಿಯರ್ ಮಾಡಿದ್ದೂ ಇದೇ.
ಹೀಗೆ ಸಿದ್ಧವಾದದ್ದು ಆತನ ಮನಸ್ಸು. ಇಂತಹ ಪ್ರವೃತ್ತಿ ಮನುಷ್ಯನೊಳಗಿನ ಅಪಾರ ಚೈತನ್ಯವನ್ನು ಹೊರತಂದಿಟ್ಟಿತು. ಬಂಧನಗಳಿಂದ ಮುಕ್ತಗೊಳಿಸಿ ‘ರೋಮ್ಯಾನ್ಟಿಕ್’ ಆದ ಮನಸ್ಸನ್ನು ಸೃಷ್ಟಿಸಿತು. ಇದೇ ಹಿನ್ನೆಲೆಯಲ್ಲಿಯೇ ಶೇಕ್ಸ್‌ಪಿಯರ್ ದೇವರುಗಳ, ಧರ್ಮಗಳ ಕುರಿತು ತಲೆಕೆಡಿಸಿಕೊಳ್ಳದೆ ಮನುಷ್ಯನ ಮನಸ್ಸಿನ ಆಳ ಅಗಲವನ್ನು, ವೈವಿಧ್ಯತೆಗಳನ್ನು ಹುಡುಕುತ್ತ ಹೋಗಿದ್ದು. ಕೆಲವು ಅಮರ ಕೃತಿಗಳನ್ನು ಗಮನಿಸಬೇಕು. ಆತನ ನಾಟಕ ಹ್ಯಾಮ್ಲೆಟ್-
ಸೂಕ್ಷ್ಮ ಮನಸ್ಸಿನ, ಸುಸಂಸ್ಕೃತ ರಾಜಕುವರನೊಬ್ಬನ ಕಣ್ಣುಗಳ ಮೂಲಕ ಕಾಣುವ ದುಷ್ಟ, ಕಠೋರ, ಕರಾಳ ಜಗತ್ತಿನ ಅನಾವರಣ. ಹ್ಯಾಮ್ಲೆಟ್‌ನಿಗೆ ಅಕಸ್ಮಾತ್ತಾಗಿ ತಿಳಿದು ಹೋಗುವುದೆಂದರೆ ಆತನ ತಂದೆಯ ಹತ್ಯೆ ಮಾಡಿದವನು ಆತನ ಚಿಕ್ಕಪ್ಪನೇ.
ತಾಯಿ ಇದನ್ನು ತಿಳಿದೂ ಅಂತಹ ಚಿಕ್ಕಪ್ಪನನ್ನು ಕಣ್ಣೀರು ಆರುವ ಮೊದಲೇ ಮದುವೆ ಯಾಗಿದ್ದಾಳೆ. ಆದರ್ಶಗಳ ಜಗತ್ತಿನಲ್ಲಿದ್ದ ಹ್ಯಾಮ್ಲೆಟ್ ಈಗ
ಬೆಚ್ಚಿಬೀಳುತ್ತಾನೆ. ಜಗತ್ತು ಯಾಕೆ ಹೀಗೆ- ಇಷ್ಟು ಕೆಟ್ಟದು ಮತ್ತು ಇಂತಹ ಜಗತ್ತನ್ನು ಸರಿಪಡಿಸುವುದು ಹೇಗೆ ಎನ್ನುವದು ಈಗ ಅವನ ಮುಂದಿರುವ ಬೃಹತ್ತಾದ ನೈತಿಕ ಪ್ರಶ್ನೆ. ಅವನಿಗೆ ಗೊತ್ತು. ಮರಳಿ ಕೊಲ್ಲುವುದು ಉತ್ತರವಲ್ಲ. ಹಾಗಾದರೆ ಪರಿಹಾರವಾದರೂ ಏನು? ಹೀಗೆ ತನ್ನ ಶಕ್ತಿಯನ್ನೇ ಮೀರಿ ದಂತಿರುವ ಸಮಸ್ಯೆಗಳ ಎದುರು ಉತ್ತರ ಕಾಣದೆ ನಿಂತುಬಿಡುವ ಹ್ಯಾಮ್ಲೆಟ್ ಗೊಂದಲಕ್ಕೀಡಾಗಿ ಕ್ರಿಯೆಯಲ್ಲಿ ತೊಡಗಿಕೊಳ್ಳಲು ವಿಫಲನಾಗಿ ಹೋಗುತ್ತಾನೆ. ದುರಂತ ಪಾತ್ರವಾಗಿ ಹೋಗುತ್ತಾನೆ.
ಒಂದು ಅರ್ಥದಲ್ಲಿ ನಾಟಕ- ಕ್ರಿಯಾವಿಹೀನ, ಚಿಂತನೆಯ ಜೀವನದ ದುರಂತವೂ ಹೌದು. ಇದಕ್ಕೆ ವಿರುದ್ಧವಾದ ನಾಟಕ ‘ಒಥೆಲ್ಲೋ’. ಹ್ಯಾಮ್ಲೆಟ್
ಕ್ರಿಯೆಯಲ್ಲಿ ತೊಡಗಲಾರ. ಆದರೆ ಸೈನ್ಯಾಧಿಕಾರಿ ಒಥೆಲ್ಲೋ ಯೋಚಿಸಲಾರ. ಆತ ಯೋಚಿಸುವುದು ಕ್ರಿಯೆ ಮುಗಿದ ನಂತರ ಮಾತ್ರ. ತನ್ನ ಹೃದಯವೇ ಆಗಿಹೋಗಿದ್ದ ಪ್ರಿಯತಮೆ ಡೆಸ್ಡೆಮೋನಾಳನ್ನು ಕೇವಲ ಅನುಮಾನದ ಆಧಾರದ ಮೇಲೆ ಕೊಂದ ನಂತರ ಮಾತ್ರ. ಮತ್ತೆ ಅವಳಿಲ್ಲದ ಜಗತ್ತು ಆತನಿಗೆ ಅರ್ಥಹೀನ. ಹೀಗಾಗಿ ಆತ ತನ್ನನ್ನೂ ತಾನು ಸಾಯಿಸಿಕೊಂಡುಬಿಡುತ್ತಾನೆ. ನಾಟಕ ತೀವ್ರ ಪ್ರೇಮ, ತೀವ್ರ ಕ್ರೌರ್ಯವಾಗಿ ಮಾರ್ಪಡುವ ಕಥೆ.
ಒಥೆಲ್ಲೋನಲ್ಲಿ ಬರುವ ಇಯಾಗೋನ ಪಾತ್ರ ಮಾನವ ದುಷ್ಟತೆಯ ಸಂಕೇತ. ಬೇರೆಯವರು ಸಂತೋಷವಾಗಿದ್ದನ್ನು ಕಂಡು ಆತ ಸುಖವಾಗಿ ಬದುಕ ಲಾರ. ನರಳಿದರೆ ಮಾತ್ರ ಸಂತೋಷಪಡಬಲ್ಲನಾತ. ಹೀಗಾಗಿಯೇ ಒಥೆಲ್ಲೋ ಮತ್ತು ಡೆಸ್ಡೆಮೋನಾಳ ಪ್ರೇಮದ ನಡುವೆ ಆತ ಹುಳಿ ಹಿಂಡುವುದು. ಸುಂದರ ಗೋಡೆಗಳ ಮೇಲೆ ಅಸಹ್ಯ ಚಿತ್ರ ಬರೆಯುವ ರೀತಿಯ ಮನಸ್ಥಿತಿಯವನು ಆತ. ಸುಂದರವಾಗಿದ್ದನ್ನು, ಸಂತೋಷವಾಗಿದ್ದನ್ನು ಸಹಿಸಲಾರ.
‘ಜೂಲಿಯಸ್ ಸೀಸರ್’ ರಾಜಕೀಯ ಅಽಕಾರದ ಹಾಗೂ ವೈಯಕ್ತಿಕ ಗೆಳೆತನದ ನಡುವಿನ ಸಂಘರ್ಷಗಳನ್ನು ಹೇಳುವ ದುರಂತ ಕಥೆ. ಕುತೂಹಲವೆಂದರೆ ನಾಟಕ ಎಂತಹ ವ್ಯಕ್ತಿಗಳು ಅಪಾಯಕಾರಿ ಎನ್ನುವುದನ್ನು ಹುಡುಕುತ್ತ ಹೋಗುತ್ತದೆ. ಯಾವ ರೀತಿಯ ವ್ಯಕ್ತಿ ಅಪಾಯಕಾರಿ ಎಂದು ಪಾತ್ರವೊಂದು ಹೇಳುತ್ತದೆ: If someone starts moving away from his regular company, starts walking alone and has sleepy eyes, think that he is in love. ‘ಮ್ಯಾಕ್ ಬೆತ್’ ನಾಟಕ ಕಠೋರ ಹೃದಯದ ಅಧಿಕಾರ ದಾಹದ ದುರಂತ ಕಥೆ.
ಲೇಡಿ ಮ್ಯಾಕ್‌ಬೆತ್ ಹೃದಯಹೀನ ಮಹಿಳೆ. ಅಽಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲವಳು. ಮಹತ್ವಾಕಾಂಕ್ಷೆಯ ದುರಂತದ ಕಥೆ ಅದು. ಶೇಕ್ಸ್‌ಪಿ ಯರ್ ಮಹಿಳೆಯರ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿದ. ಉದಾಹರಣೆಗೆ ಹ್ಯಾಮ್ಲೆಟ್‌ನ ತಾಯಿ ತನ್ನ ಗಂಡ ತೀರಿಕೊಂಡ ದುಃಖದ ಕಣ್ಣೀರು ಹರಳು ಗಟ್ಟುವ ಮೊದಲೇ ಸ್ಮಶಾನಕ್ಕೆ ಹಾಕಿಕೊಂಡ ಚಪ್ಪಲಿಗಳು ಸವೆಯುವ ಮೊದಲೇ ಬೇರೆಯವನನ್ನು, ಅದೂ ಗಂಡನನ್ನು ಕೊಂದ ಮೈದುನನನ್ನು ಮದುವೆಯಾಗುತ್ತಾಳೆ.ಅದನ್ನ ನೋಡಿ ಹ್ಯಾಮ್ಲೆಟ್ ಹೇಳುತ್ತಾನೆ.
Frailty thy name is woman! (ಚಂಚಲತೆಯೇ ಮಹಿಳೆಯ ಚಿತ್ತ). ಹಾಗೆಯೇ ಇನ್ನೊಂದು ಕಡೆ ಪಾತ್ರವೊಂದು ಹೇಳುತ್ತದೆ. Jealousy thy name is
woman! ಅಂದರೆ ಅಸೂಯೆಯೇ ಮಹಿಳೆಯ ಪ್ರಧಾನ ಗುಣ. ಶೇಕ್ಸ್‌ಪಿಯರ್ ವೈವಿಧ್ಯಮಯ ಪಾತ್ರಗಳನ್ನು ನಿಜ ಜೀವನದಲ್ಲಿ ಅವು ಹೇಗೆ ಬರುತ್ತವೆ ಯೋ ಹಾಗೆಯೇ ತೆರೆದಿಟ್ಟು ಹೋದ. ಕಳ್ಳರು, ಸುಳ್ಳರು, ಘನವಂತರು, ರಾಜರು ರಾಣಿಯರು, ಸೇವಕರು ವ್ಯಾಪಾರಿಗಳು ಎಲ್ಲರೂ ನಿಜ ಜೀವನದಲ್ಲಿ ಇರುವಂತೆಯೇ ಶೇಕ್ಸ್‌ಪಿಯರ್‌ನ ಕೃತಿಗಳಲ್ಲಿ ಮೂಡಿಬರುತ್ತಾರೆ.