Wednesday, 11th December 2024

ಶರಿಯತ್ ಸವಾಲು ಮೀರಿದ ಕೋರ್ಟ್ ತೀರ್ಪು

ಅಭಿಮತ

ಡಾ.ಸುಧಾಕರ ಹೊಸಳ್ಳಿ

ಈಚೆಗೆ ಸರ್ವೋಚ್ಚ ನ್ಯಾಯಾಲಯವೂ ಮುಸ್ಲಿಂ ಮಹಿಳೆಯರಿಗೂ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಇದೆ ಎಂಬ ಮಹತ್ವದ ತೀರ್ಪು ನೀಡಿತು. ಈ ತೀರ್ಪು ಶರಿಯತ್ ಕಾನೂನಿನಿಂದ ಸಂವಿಧಾನಕ್ಕೆ ಇದ್ದ ಸವಾಲಿನ ಒಂದು ಭಾಗವನ್ನು ಹೊಡೆದು ಉರುಳಿಸಿದೆಯೇ ಎಂಬ ಚರ್ಚೆಯನ್ನು ಹುಟ್ಟು
ಹಾಕಿದೆ. ಒಟ್ಟು ಭಾರತ, ಸಂವಿಧಾನದ ಅಡಿಯಲ್ಲಿ ತಮ್ಮ ಅಸ್ತಿತ್ವವನ್ನು ಹಾಗೂ ಆಚರಣೆಯನ್ನು ಕಂಡುಕೊಂಡಿದ್ದರೆ, ಮುಸ್ಲಿಮರು ಮಾತ್ರ ನಮಗೆ ಸಂವಿಧಾನ ಕ್ಕಿಂತ ಶರಿಯತ್ ಕಾನೂನು ಪ್ರಧಾನವಾದದ್ದು ಎಂದು ಸಂವಿಧಾನಕ್ಕೆ ಸವಾಲು ಎಸೆಯುತ್ತಾ ಬಂದಿರುವುದು ಭಾರತದಲ್ಲಿ ನಡಾವಳಿಯಾಗಿ ಮಾರ್ಪಟ್ಟಿದೆ.

ಮೊನ್ನೆ ಪಶ್ಚಿಮ ಬಂಗಾಳದ ಮುಸ್ಲಿಂ ಮೇಯರ್ ಒಬ್ಬರು ಮುಸ್ಲಿಮರಲ್ಲದ ಎಲ್ಲರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಅವರು ಇಸ್ಲಾಂನಲ್ಲಿ ಹುಟ್ಟದೇ ಇರುವುದು ದುರಾದೃಷ್ಟ, ನೀವು ಧೈರ್ಯ ಮತ್ತು ನಿರ್ಭಿಡೆಯಿಂದ ಮತಾಂತರ ಕಾರ್ಯದಲ್ಲಿ ಮುನ್ನುಗ್ಗಿ ಎಂದು, ಸಂವಿಧಾನಬದ್ಧವಾಗಿ ಆಯ್ಕೆಯಾದ ಪ್ರತಿನಿಽಯೊಬ್ಬರು ಸಾರ್ವಜನಿಕವಾಗಿ ಸಂದೇಶ ಸಾರಿದ್ದಾರೆ, ಇಂತಹದ್ದು ಉದಹರಿಸಬಹುದಾದ ಒಂದು ಘಟನೆಯಷ್ಟೇ.

ಶರಿಯತ್ ಕಾನೂನಿನ ಅನ್ವಯ ಯಾವುದೇ ಮುಸ್ಲಿಂ ಮಹಿಳೆಗೆ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಅವಕಾಶವೇ ಇಲ್ಲವೆಂದು ಮುಸ್ಲಿಂ ಧರ್ಮ ಗುರುಗಳು ಪ್ರತಿಪಾದಿಸುತ್ತಲೇ ಬಂದಿzರೆ, ಈ ಸಂಬಂಧ ರಾಜೀವ್ ಗಾಂಧಿ ಅವರ ಕಾಲಘಟ್ಟದಲ್ಲಿ ದಂಡ ಸಂಹಿತೆ ೧೨೫ಕ್ಕೆ ತಿದ್ದುಪಡಿಯ ಮೂಲಕ ವಿನಾಯಿತಿ ಯನ್ನು ನೀಡಲಾಗಿತ್ತು. ಅದೇ ರೀತಿ ಮುಸ್ಲಿಂ ಮಹಿಳೆಯರಿಗೆ ವಿನಾಕಾರಣ ತಲಾಕ್ ನೀಡುವ ಹಾಗೂ ಅದರ ವಿರುದ್ಧ ಮುಸ್ಲಿಂ ಮಹಿಳೆಯರು ಯಾವುದೇ ಹಕ್ಕು ಚಲಾಯಿಸಿದಂತೆ ಶರಿಯತ್ ಕಾನೂನು ನಿಯಮ ಹೊಂದಿದ್ದು, ಸ್ವತಂತ್ರ ಭಾರತದಲ್ಲಿ, ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿ ಸಂವಿಧಾನಕ್ಕೆ ಎದುರಾಗಿದ್ದ ಬಹುದೊಡ್ಡ ಸವಾಲೇ ಆಗಿತ್ತು.

ಹಿಂದಿನ ಕೇಂದ್ರ ಸರಕಾರ ೨೦೧೯ ಜುಲೈ ೩೦ ರಂದು ತಲಾಕ್ ಆಚರಣೆಯನ್ನು ಪಾರ್ಲಿಮೆಂಟ್‌ನಲ್ಲಿ ಸಾಂವಿಧಾನಿಕ ಮಾರ್ಗದಲ್ಲಿ ರದ್ದು ಪಡಿಸಿತ್ತು, ಇಂತಹ ಆದೇಶದ ವಿರುದ್ಧವೂ ನ್ಯಾಯಾಲಯದ ಮೆಟ್ಟಿಲೇರಿದ್ದ ಕೆಲವರಿಗೆ, ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರದ ಆದೇಶವನ್ನು ಮಾನ್ಯ ಮಾಡುವ ಮೂಲಕ ಛೀಮಾರಿ ಹಾಕಿದ್ದು ಐತಿಹಾಸಿಕ ಘಟನೆ. ಇದೇ ಆದೇಶದ ಸಂದರ್ಭ ಯಾವುದೇ ವೈಯಕ್ತಿಕ ಕಾನೂನುಗಳು ಸಂವಿಧಾನದ ಮೂಲ ನಿಯಮಗಳಿಗೆ ವಿರುದ್ಧವಾಗಿರಲು ಸಾಧ್ಯವೇ ಇಲ್ಲ ಎಂಬ ಕಟಿಬದ್ಧ ಆದೇಶವನ್ನು ನೀಡಿತ್ತು.

ಮುಸ್ಲಿಮರು ಸಂವಿಧಾನಕ್ಕೆ ಎದುರು ನಿಲ್ಲಲು ಶರಿಯತ್ ಕಾನೂನು ಪ್ರತಿಪಾದಿಸುವ ಸಾಮಾಜಿಕ ಕೆಡುಕುಗಳೆ ಕಾರಣವೆಂದು ಸ್ವತಃ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಲಿಖಿತವಾಗಿ ಅಭಿಪ್ರಾಯ ದಾಖಲಿಸಿದ್ದರು. ಅವರ ಬದುಕು ಬರಹಗಳು ಮತ್ತು ಭಾಷಣಗಳು ಸಂಪುಟ ಆರರ ಪುಟ ಸಂಖ್ಯೆ ೫೮೭ ರಲ್ಲಿ ಕಾಣುವ ದಾಖಲು ಮುಸ್ಲಿಮರು ಹಿಂದುಗಳು ಒಳಗೊಂಡಿರುವ ಎಲ್ಲ ಸಾಮಾಜಿಕ ಕೆಡುಕುಗಳನ್ನು ಒಳಗೊಂಡಿರುವುದರ ಜತೆಗೆ ಮತ್ತಷ್ಟು ಸಾಮಾಜಿಕ ಕೆಡುಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ಅಂತವುಗಳಲ್ಲಿ ಒಂದು ಉದಾಹರಣೆ ಪರ್ದಾ ಪದ್ಧತಿ.

ಪರ್ದಾ ಪದ್ಧತಿಯ ಅನುಸಾರ ಮುಸ್ಲಿಂ ಮಹಿಳೆಯರು ಮನೆಯ ಮುಂದಣ ಕೊಠಡಿಗಳಿಗೆ, ಮೊಗಸಾಲೆಗಳಿಗೆ, ತೋಟಗಳಿಗೆ ತಲೆ ಹಾಕುವಂತಿಲ್ಲ, ಅವರ ಓಡಾಟ
ಏನಿದ್ದರೂ ಮನೆಯ ಹಿಂಭಾಗಕಷ್ಟೇ ಸೀಮಿತ, ದೊಡ್ಡವರಿಂದ ಚಿಕ್ಕವರಾಗಿದಿಯಾಗಿ ಮನೆ ಹೆಂಗಸರೆಲ್ಲ ಹಿಂಭಾಗದ ಒಂದೇ ಕೊಠಡಿಯಲ್ಲಿ ವಾಸಿಸಬೇಕು, ಇವರ
ಎದುರಿನಲ್ಲಿ ಪುರುಷ ವರ್ಗಕ್ಕೆ ಸೇರಿದ ಯಾವುದೇ ಸೇವಕ ಸುಳಿಯುವಂತಿಲ್ಲ, ತನ್ನ ಗಂಡು ಮಕ್ಕಳನ್ನು, ಅಣ್ಣ ತಮ್ಮಂದಿರನ್ನು, ತಂದೆ, ಚಿಕ್ಕಂಪ್ಪಂದಿರು ಹಾಗೂ ಗಂಡನನ್ನು ಮಾತ್ರ ನೋಡಲು ಮುಸ್ಲಿಂ ಮಹಿಳೆ ಅರ್ಹಳು, ಪ್ರಾರ್ಥನೆ ಮಾಡಲು ಮಹಿಳೆ ಮಸೀದಿಗೆ ಹೋಗುವಂತಿಲ್ಲ, ಮುಸ್ಲಿಂ ಮಹಿಳೆಯು ಬುರ್ಖಾ ಧರಿಸಿ ರಸ್ತೆಯಲ್ಲಿ ನಡೆಯುವುದನ್ನು ಯಾವುದೇ ವ್ಯಕ್ತಿ ಭಾರತದಲ್ಲಿ ನೋಡಬಹುದಾದ ಭೀಕರ ದೃಶ್ಯಗಳೊಂದು ಎಂದು ದಾಖಲಿಸುತ್ತಾರೆ.

ಇಂತಹ ಆಚರಣೆಯಿಂದ ಮುಸ್ಲಿಂ ಮಹಿಳೆ ಮಾನಸಿಕವಾಗಿ ಕೀಳಿರಿಮೆಯ ಭಾರದಿಂದ ಕುಬ್ಜವಾಗುತ್ತಾಳೆ, ಜ್ಞಾನದ ಕಿರಣ ಅವರ ಪಾಲಿಗೆ ಕತ್ತಲೆಯ ಕಹಿ, ಮನೆಯ ನಾಲ್ಕು ಗೋಡೆಗಳನ್ನು ದಾಟಿ ಹೋಗುವ ಯಾವುದೇ ವಿಷಯದಲ್ಲಿ ಆಶಕ್ತಿ ತೆಳೆಯದಂತೆ ಅವರಿಗೆ ಬೋಽಸಲಾಗುತ್ತದೆ, ಅದರಲ್ಲೂ ಪರ್ದಾಧಾರಿ ಮಹಿಳೆ ಜೀವನದ ಯಾವುದೇ ಹೋರಾಟವನ್ನು ಎದುರಿಸಲಾರದ ಅಸಹಾಯಕಳು, ಹೇಡಿ ಹಾಗೂ ಅಸಮರ್ಥೆ ಎಂಬುದಾಗಿ ತಮ್ಮ ಸಂಶೋಧನಾತ್ಮಕ
ದಾಖಲಾತಿಯನ್ನು ಮಂಡಿಸಿದ್ದಾರೆ.

ಅಂಬೇಡ್ಕರರು ತಮ್ಮ ತಳಮಟ್ಟದ ಸಂಶೋಧನೆಯಿಂದ ಆಧಾರ ಬದ್ಧವಾಗಿ ಹೇಗೆ ಶರಿಯತ್ ಕಾನೂನು ಮುಸ್ಲಿಮರನ್ನು ಸಾಮಾಜಿಕ ಸಮಾನತೆಯಿಂದ ಮತ್ತು ಸಂವಿಧಾನದ ನಿಯಮಗಳಿಂದ ದೂರ ಇಡುತ್ತದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಅದೇ ಸಂಪುಟದ ಪುಟ ಸಂಖ್ಯೆ ೫೯೧ರಲ್ಲಿ ರೆನಾನ್ ಸಂಶೋಧಕನ ಹೇಳಿಕೆಯನ್ನು ಉಖ ಮಾಡಿ, ‘ವಿeನ ತನ್ನ ವೈರಿ ಎಂಬ ಇಸ್ಲಾಂನ ಭಾವನೆ ಅಚಲವಾದದ್ದು, ಇದು ಹೀಗೆ ಅಚಲವಾಗಿ ಉಳಿದದ್ದು ಅಪಾಯಕರ, ಕೊನೆಯವರೆಗೂ ಇಸ್ಲಾಂ ತನ್ನ ಈ ಭಾವನೆಗೆ ಬದ್ಧವಾಗಿ ಉಳಿದಿದ್ದು ದುರಾದೃಷ್ಟಕರ, ಇದು ವಿಜ್ಞಾನಗಳನ್ನು ಘಾತಿಸಲು ಹೋಗಿ ತನ್ನನ್ನು ತಾನೇ ತಿಳಿದುಕೊಂಡಿದೆ, ಅಲ್ಲದೆ ವಿಶ್ವದಾದ್ಯಂತ ಸಂಪೂರ್ಣ ಕೀಳಿರಿಮೆಯ ಅವಹೇಳನಕ್ಕೆ ತುತ್ತಾಗಿದೆ.’ ಎಂದು ಆರೋಪಿಸಿದ್ದಾರೆ.

ಪುಟ ಸಂಖ್ಯೆ ೫೯೭ರಲ್ಲಿ ಅಂಬೇಡ್ಕರರು ದಾಖಲಿಸುವ ಮುಸ್ಲಿಂ ಮಹಿಳೆಯರ ಸಾಮಾಜಿಕ ಆಕ್ರಂದನ ವರ್ಣಿಸಲು ಅಸಾಧ್ಯವಾದದ್ದು, ಅವರದೇ ಮಾತುಗಳಲ್ಲಿ, ೧೯೩೯ರ ಮುಸ್ಲಿಂ ವಿವಾಹ ರದ್ದತಿ ಅಽನಿಯಮದ ಪ್ರಕಾರ ವಿವಾಹಿತ ಮುಸ್ಲಿಂ ಮಹಿಳೆಯ ದಾಂಪತ್ಯ ಅವಳು ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವು ದರಿಂದ ಕಡೆದು ಹೋಗುವುದಿಲ್ಲ, ಇದರಿಂದ ಅವಳಿಗೆ ದೊರೆಯಬಹುದಾದದ್ದು, ಕೇವಲ ವಿವಾಹ ವಿಚ್ಛೇದನ ಹಕ್ಕು ಮಾತ್ರ, ಕಲಂ ಎರಡರ ಮತಾಂತರ ಅಥವಾ ಧರ್ಮ ಪರಿತ್ಯಾಗವನ್ನು ವಿವಾಹ ವಿಚ್ಛೇದನಕ್ಕೆ ಕಾರಣವಾಗಿ ಪರಿಗಣಿಸದಿರುವುದೇ ಇದರ ಹಿಂದಿರುವ ಒಳಸಂಚಿನ ಮರ್ಮ, ಅಂದರೆ, ಈ ಕಾನೂನಿನ ಪ್ರಕಾರ ಒಬ್ಬ ವಿವಾಹಿತ ಮುಸ್ಲಿಂ ಮಹಿಳೆ ತನ್ನ ಗಂಡನ ಧಾರ್ಮಿಕ ನಂಬಿಕೆ, ಅವಳಿಗೆ ಎಷ್ಟೇ ಹೇಸಿಗೆ ಹುಟ್ಟಿಸಿದರೂ, ಅವನೊಡನೆಯೇ ಬದುಕಬೇಕು ಮತ್ತು ತನ್ನ ಮನಸಾಕ್ಷಿಯಂತೆ ನಡೆದುಕೊಳ್ಳುವ ಸ್ವಾತಂತ್ರ್ಯ ಅವಳಿಗೆ ಇರುವುದಿಲ್ಲ ಎಂಬಂತೆ ನೋವಿನ ನುಡಿಗಳಾಡಿರುತ್ತಾರೆ.

ಹೀಗೆ ಶರಿಯತ್ ಕಾನೂನು ಮುಸ್ಲಿಮರು ಸಂವಿಧಾನವನ್ನು ಮೀರುವಂತೆ ಪ್ರೇರೇಪಣೆ ನೀಡುವ ಅನೇಕ ಸಂಗತಿಗಳನ್ನು ತನ್ನೊಳಗೆ ಇಟ್ಟುಕೊಂಡಿದೆ ಎಂಬುದನ್ನು ಅಂಬೇಡ್ಕರರ ಸಂಶೋಧನೆಯಲ್ಲಿ ನೋಡಬಹುದಾಗಿದೆ, ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವ ಪ್ರತಿಯೊಬ್ಬರಿಗೂ ಅಂಬೇಡ್ಕರರ ಸಂಶೋಧನೆ ಭಗವದ್ಗೀತೆಯಾಗಿ ನಿಲ್ಲಬಹುದು, ಆದರೆ ಢಾಂಬಿಕ ಮಹಿಳಾ ಸಮಾನತೆಯ ಹೋರಾಟಗಾರರು, ಶುದ್ಧತೆ ಮತ್ತು ಆಚರಣೆಯ ಕಾರಣಕ್ಕಾಗಿ ಸ್ವತಃ ಹೆಣ್ಣು ಮಕ್ಕಳೇ ನಿರಾಕರಿಸಿರುವ (ಬಾಲ್ಯದಲ್ಲಿ ಹೆಣ್ಣು ಮಕ್ಕಳು  ಹೋಗಬಹುದು) ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಮಹಿಳಾ ಅಸಮಾನತೆಯ ಬಿರುದುಕೊಟ್ಟು ಹೋರಾಟಕ್ಕೆ
ಮುಂದಾಗುತ್ತಾರೆ.

ಹಿಂದೂ ಸಮಾಜದಲ್ಲಿ ಅತಿ ಹೆಚ್ಚು ಪೂಜಿಸಲ್ಪಡುವುದೇ ಹೆಣ್ಣು, ಭೂಮಿಯನ್ನು ತಾಯಿ ಎಂದು ಪೂಜಿಸಲ್ಪಡುವ ಏಕೈಕ ಸಮುದಾಯ ಅಥವಾ ಧರ್ಮ ಅದು ಹಿಂದೂ. ಬುದ್ಧಿಜೀವಿಗಳು ಮತ್ತು ಮಹಿಳಾ ಹೋರಾಟಗಾರರಿಗೆ (ಢಾಂಬಿಕ ಮಹಿಳಾ ಹೋರಾಟಗಾರರಿಗೆ ಮಾತ್ರ) ಅಂಬೇಡ್ಕರರು ಇಷ್ಟು ಕಠಿಣವಾಗಿ ಶರಿಯತ್ತನ್ನು ಮುಸ್ಲಿಂ ಮಹಿಳಾ ಅಸಮಾನತೆ ಯನ್ನು ವಿಮರ್ಶೆ ಮಾಡಿರುವ ಸಂಗತಿಗಳು ಆಧಾರವಾಗುವುದಿಲ್ಲ. ಅವುಗಳ ವಿರುದ್ಧ ಧ್ವನಿ ಎತ್ತಲು ಭಾರತ ಸಂವಿಧಾನ ಇವರಿಗೆ ನೀಡಿರುವ ಹಕ್ಕುಗಳನ್ನು ಮರೆತುಬಿಡುತ್ತಾರೆ.

ಯಾರು ಶರಿಯತ್ ಪರವಾಗಿ ನಿಂತರೂ, ಢಾಂಬಿಕ ಹೋರಾಟ ಮಾಡಿದರೂ, ಭಾರತ ಸಂವಿಧಾನ ತನ್ನ ವಿರುದ್ಧ ಸೆಟೆದು ನಿಲ್ಲಲು ಅವಕಾಶವನ್ನು ಕಲ್ಪಿಸಿಲ್ಲ, ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನನ್ನೇ ಪರಾಮರ್ಶೆ ಮಾಡುವ ಅಧಿಕಾರವನ್ನು ಕೊಟ್ಟು, ಇಂತಹ ಎಲ್ಲ ಸಾಮಾಜಿಕ ಕೆಡುಕುಗಳನ್ನು ಅಸಿಂಧು ಗೊಳಿಸುವ ದಕ್ಷತೆ ತುಂಬಿದೆ. ನ್ಯಾಯಮೂರ್ತಿ ಬಿ ವಿ ನಾಗರತ್ನ, ನ್ಯಾಯಮೂರ್ತಿ ಅಗಸ್ಟೀನ್ ಜಾರ್ಜ್ ದಂಡ ಸಂಹಿತೆ ೧೨೫ ಅಡಿಯಲ್ಲಿ ಭಾರತದ ಮುಸ್ಲಿಂ ಮಹಿಳೆಯು ಕೂಡ ವಿಚ್ಛೇದಿತ ಪತಿ ಯಿಂದ ಜೀವನಶಪಡಿಯಲು ಅರ್ಹಳು ಎಂಬ ಏಕರೂಪದ ತೀರ್ಪು ನೀಡಿ, ಶರಿಯತ್ ಕಾನೂನಿಂದ ಸಂವಿಧಾನಕ್ಕೆ ಇದ್ದ ಅಡೆತಡೆಯೊಂದನ್ನು ನಿವಾರಿಸುವುದರ ಜೊತೆಗೆ ಅಂಬೇಡ್ಕರರ ಆಶಯವನ್ನು ಸಮರ್ಥಿಸಿದೆ. ಇಂತಹ ತೀರ್ಪುಗಳು ಕಾಲಿಕವಾಗಿ ಸಂವಿಧಾನದ ಬೇರುಗಳನ್ನು ಗಟ್ಟಿಗೊಳಿಸುವುದರ
ಜೊತೆಗೆ ಪ್ರಜಾಪ್ರಭುತ್ವವನ್ನು ಸಮಾನತೆಯ ತತ್ವವನ್ನು ಗಟ್ಟಿಗೊಳಿಸುತ್ತವೆ.

(ಲೇಖಕರು: ಸಂವಿಧಾನ ತಜ್ಞ)