Friday, 13th December 2024

ಕಾಶ್ಮೀರ ದೇಗುಲ ಕಾಯುತ್ತಿರುವ ಯೋಧರು

ವೀಕೆಂಡ್ ವಿತ್ ಮೋಹನ್

ಮೋಹನ್ ವಿಶ್ವ

camohanbn@gmail.com

ಮಸೀದಿಗಳ ತಂಟೆಗೆ ಹೋಗಲು ಹಿಂದುಗಳೇ ಹೆದರುವ ಪರಿಸ್ಥಿತಿ ಬಹುಸಂಖ್ಯಾತ ಹಿಂದೂ ನಗರಗಳಲ್ಲಿವೆ, ಆದರೆ ಮುಸಲ್ಮಾನರ ಬಹುಪ್ರಾಬಲ್ಯವಿರುವ ಕಾಶ್ಮೀರದಲ್ಲಿನ ಹಿಂದೂ ದೇವಸ್ಥಾನಗಳಿಗೆ ಸ್ವತಃ ಭಾರತೀಯ ಸೈನ್ಯವೇ ರಕ್ಷಣೆ ಕೊಡುವ ಪರಿಸ್ಥಿತಿ ಎದುರಾಗಿದೆ.

ಭಾರತದಲ್ಲಿರಲು ನನ್ನ ಹೆಂಡತಿ ಭಯ ಪಡುತ್ತಿದ್ದಾಳೆ. ಇಡೀ ದೇಶದಲ್ಲಿ ಅಸಹಿಷ್ಣುತೆ ಕಾಡುತ್ತಿದೆಯೆಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದಾಗ,
ಲಗಾಮಿಲ್ಲದೆ ಎಂದರಲ್ಲಿ ಓಡುತ್ತಿದ್ದ ಕುದುರೆಗಳಿಗೆ ಲಗಾಮು ಹಾಕಿ ಕಟ್ಟಿ ಹಾಕಿದಾಗ ಕಾಡುವ ಅಸಹಿಷ್ಣುತೆಯ ನೆನಪಾಗಿತ್ತು. ಲಗಾಮಿಲ್ಲದ ಕುದುರೆಯಂತೆ ತಮಗಿಷ್ಟ ಬಂದಂತೆ ಬೇರೆಯದ್ದೇ ಸಂವಿಧಾನದಡಿಯಲ್ಲಿ ಏಳು ದಶಕಗಳ ಕಾಲ ಬದುಕುತ್ತಿದ್ದಂತಹ ಕೆಲವು ಕಾಶ್ಮೀರಿಗಳಿಗೆ ಸಂವಿಧಾನದ 370ನೇ ಪರಿಚ್ಛಯ ವನ್ನು ತೆಗೆದು ಹಾಕಿದ ಮೇಲೆ ಅಸಹಿಷ್ಣುತೆ ಕಾಡತೊಡಗಿದೆ ಯಂತೆ.

ಅಲ್ಲಿನವರಿಗೆ ಕಾಡುತ್ತಿದೆಯೇವೋ ಇಲ್ಲವೋ ತಿಳಿದಿಲ್ಲ. ಅವರನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಂತಹವರಿಗೆ ಅಸಹಿಷ್ಣುತೆ ಕಾಡತೊಡಗಿದೆ. ಪರಿಚ್ಛಯ 370 ರನ್ನು ರದ್ದುಗೊಳಿಸಿ ಎರಡು ವರ್ಷ ಗಳು ಕಳೆದಿದೆ. ಅಸಹಿಷ್ಣುತೆಯ ಬಗ್ಗೆ ಪುಂಗಿ ಊದುವವರು ಕಾಶ್ಮೀರದಲ್ಲಿನ ಹಿಂದೂ ದೇವಸ್ಥಾನಗಳ ಪರಿಸ್ಥಿತಿಯನ್ನೊಮ್ಮೆ ನೋಡಿ ಬರಬೇಕು. ಬಹುಸಂಖ್ಯಾತ ಹಿಂದೂ ಪ್ರಾಬಲ್ಯವುಳ್ಳ ನಗರಗಳಲ್ಲಿ ಮಸೀದಿಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ, ಮಸೀದಿಗಳಿಗೆ ಪೋಲೀಸರ ಅವಶ್ಯಕತೆ ಇಲ್ಲ. ರಸ್ತೆಗಳನ್ನು ಬಂದ್ ಮಾಡಿ ಮುಸಲ್ಮಾನರು ನಡೆಸುವ ‘ನಮಾಜಿ’ನ ಬಗ್ಗೆ ಹಿಂದೂಗಳು ತಮ್ಮ ಅಸಹಿಷ್ಣುತೆಯನ್ನು ತೋರಿಸುವು ದಿಲ್ಲ.

ಮಸೀದಿಗಳ ತಂಟೆಗೆ ಹೋಗಲು ಹಿಂದುಗಳೇ ಹೆದರುವ ಪರಿಸ್ಥಿತಿ ಬಹುಸಂಖ್ಯಾತ ಹಿಂದೂ ನಗರಗಳಲ್ಲಿವೆ, ಆದರೆ ಮುಸಲ್ಮಾನರ ಬಹುಪ್ರಾಬಲ್ಯವಿರುವ ಕಾಶ್ಮೀರದಲ್ಲಿನ ಹಿಂದೂ ದೇವಸ್ಥಾನಗಳಿಗೆ ಸ್ವತಃ ಭಾರತೀಯ ಸೈನ್ಯವೇ ರಕ್ಷಣೆ ಕೊಡುವ ಪರಿಸ್ಥಿತಿ ಎದುರಾಗಿದೆ. ಕಾಶ್ಮೀರದಲ್ಲಿನ ಹಿಂದೂ ದೇವಾಲಯಗಳ ಮುಂಬಾಗಿಲಿನಲ್ಲಿನ ರಕ್ಷಣಾ ವ್ಯವಸ್ಥೆಯನ್ನು ನೋಡಿದರೆ, ಹಿಂದೂ ದೇವಾಲಯಗಳು ಕಾಶ್ಮೀರದಲ್ಲಿ ಅದೆಷ್ಟು ಅಪಾಯದಲ್ಲಿವೆಯೆಂಬುದು ತಿಳಿಯುತ್ತದೆ. ಶ್ರೀನಗರ ಜಿಲ್ಲೆಯ ’ತುಲ್ ಮುಲ’ ಹಳ್ಳಿಯಲ್ಲಿರುವ ’ಖೀರ್ ಭವಾನಿ’ ದೇವ ಸ್ಥಾನ ಹಿಂದೂಗಳು ನೋಡಲೇ ಬೇಕಿರುವ ದೇವಸ್ಥಾನ. ರಾಮತೀರ್ಥ ಹಾಗು ಸ್ವಾಮಿ ವಿವೇಕಾ ನಂದರಂತಹ ಮಹಾನ್ ಸಂತರು ಭೇಟಿ ನೀಡಿ ಮಾತೆಯ ಅನುಗ್ರಹ ಪಡೆದಂತಹ ದೇವಸ್ಥಾನವಿದು.

ಈ ದೇವಸ್ಥಾನದಲ್ಲಿನ ನೀರಿನ ಬಣ್ಣವು ಕಾಶ್ಮೀರದಲ್ಲಿ ನಡೆಯುವ ವಿವಿಧ ಘಟನೆಗಳ ಮುನ್ಸೂಚಿಯಾಗಿದೆ. ಕಾಶ್ಮೀರದ ಶಕ್ತಿ ಕೇಂದ್ರವಾಗಿರುವ ಈ ದೇವಸ್ಥಾನಕ್ಕೆ ಸೈನ್ಯ ಎಲ್ಲಿಲ್ಲದ ಭದ್ರತೆಯನ್ನು ನೀಡಿದೆ, ದೇವಸ್ಥಾನದ ಹೊರಗೆ ಸುಮಾರು 20 ಸೈನಿಕರು ದಿನದ 24 ಘಂಟೆ ಗಸ್ತು ಇರುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ಮುಳ್ಳು ತಂತಿಗಳಿಂದ ಮಾಡಿದ ಬ್ಯಾರಿಕೇಡ್‌ಗಳು ನಮಗೆ ಸ್ವಾಗತ ಕೋರುತ್ತವೆ. ಪ್ರತಿಯೊಬ್ಬರನ್ನೂ ಸಂಪೂರ್ಣವಾಗಿ ಪರಿಶೀಲಿಸಿದ ಮೇಲಷ್ಟೇ ದೇವಿಯ ದರ್ಶನಕ್ಕೆ ಒಳಗೆ ಬಿಡಲಾಗುತ್ತದೆ. ಬಹುಸಂಖ್ಯಾತ ಹಿಂದೂ ನಗರಗಳಲ್ಲಿ ಅಲ್ಪಸಂಖ್ಯಾತರ ಮಸೀದಿಗಳಿಗೆ ಯಾವ ರೀತಿಯ ಭದ್ರತೆಯೂ ಬೇಕಿಲ್ಲ, ಆದರೆ ಬಹುಸಂಖ್ಯಾತ ಮುಸ್ಲಿಂ ರಾಜ್ಯದಲ್ಲಿ ಹಿಂದೂ ದೇವಸ್ಥಾನಕ್ಕೆ ಭಾರತೀಯ ಸೈನ್ಯವೇ ನಿಂತಿರುವುದು ಹಿಂದೂಗಳ ಸಹಿಷ್ಣುತೆಯನ್ನು ತೋರಿಸುತ್ತದೆ, ಕಾಶ್ಮೀರಕ್ಕೆ ಹೋದರೆ ತಪ್ಪದೆ ’ಖೀರ್ ಭವಾನಿ’ದೇವಿಯ ದರ್ಶನವನ್ನು ಮಾಡಿ ಬನ್ನಿ.

ಶ್ರೀನಗರದಿಂದ, ಪುಲ್ವಾಮಾ ಮಾರ್ಗವಾಗಿ ’ಅನಂತ್ ನಾಗ’ ಜಿಲ್ಲೆಯನ್ನು ತಲುಪಬೇಕು.’ಅನಂತ್ ನಾಗ’ ಜಿಲ್ಲೆಯಲ್ಲಿ ’ಮಾರ್ಥಂಡ ಸೂರ್ಯ’ನ ದೇವಸ್ಥಾನವಿದೆ.
ಎಂಟನೆಯ ಶತಮಾನದಲ್ಲಿ ರಾಜ ’ಲಲಿತಾದಿತ್ಯ ಮುಕ್ತಪಿಡ’ ನಿರ್ಮಿಸಿದ ದೇವಾಲಯವಿದು. ದುರದೃಷ್ಟವಶಾತ್ ಈ ದೇವಾಲಯವಿಂದು ಪೂಜೆ ಮಾಡುವ ಪರಿಸ್ಥಿತಿಯಲ್ಲಿಲ್ಲ,’ಸುಲ್ತಾನ್ ಸಿಕಂದರ್’ ಈ ದೇವಾಲಯನ್ನು ದ್ವಂಸಗೊಳಿಸಿದ್ದಾನೆ. ಈ ದೇವಸ್ಥಾನವನ್ನು ಕೆಡವಲು ಈತ ಸುಮಾರು ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದನೆಂದು ಹೇಳಲಾಗುತ್ತದೆ.

ದೇವಸ್ಥಾನದ ಅವಶೇಷಗಳಲ್ಲಿ ಬೃಹತ್ ಕಂಬಗಳು ಇಂದಿಗೂ ಕಾಣಿಸುತ್ತವೆ. ದೇವರ ಗರ್ಭಗುಡಿಯು ಸುಮಾರು ಇಪ್ಪತ್ತು ಅಡಿಯಷ್ಟು ಎತ್ತರವಿರಬುದು, ಬೃಹತ್ ಪ್ರಾಂಗಣವನ್ನು ಹೊಂದಿರುವ ಈ ದೇವಾಲಯದ ವಾಸ್ತುಶಿಲ್ಪವೇ ವಿಭಿನ್ನ. ಹಿಂದೂಗಳ ಇತಿಹಾಸದಲ್ಲಿ ಮಸೀದಿಗಳನ್ನು ಕೆಡವಿ ಮುಸಲ್ಮಾನರ ಧಾರ್ಮಿಕ
ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಯಾವೊಬ್ಬ ರಾಜನೂ ಮಾಡಿಲ್ಲ,ಬಾಬ್ರಿ ಮಸೀದಿಯನ್ನು ಹಿಂದೂಗಳು ದ್ವ೦ಸ ಮಾಡಿದರೆಂದು ಎಡಚರರು ಬಾಯಿ ಬಡೆದುಕೊಳ್ಳುತ್ತಾರೆ, ಆದರೆ ಅದು ರಾಮನ ಮಂದಿರವನ್ನು ದ್ವ೦ಸ ಮಾಡಿ ಬಾರ್ಬ ನಿರ್ಮಾಣ ಮಾಡಿದ್ದಂತಹ ಮಸೀದಿಯೇ ಹೊರತು ಬಾಬರ‍್ ನಿರ್ಮಾಣ ಮಾಡಿದ್ದಂತಹ ಮಸೀದಿಯಲ್ಲ.

’ಮಾರ್ಥಂಡ ಸೂರ್ಯ’ನ ದೇವಸ್ತಾನವೇನಾದರೂ ಇಂದು ಪೂಜೆ ಮಾಡುವ ಪರಿಸ್ಥಿತಿಯಲ್ಲಿದ್ದರೆ, ಬಹುಷ್ಯ ಕೊನಾರ್ಕಿನ ಸೂರ್ಯ ಮಂದಿರವನ್ನು ಹೋಲುತ್ತಿತ್ತು.
ಮೊದಲನೆಯದಾಗಿ ಈ ದೇವಸ್ಥಾನವನ್ನು ತೋರಿಸಲು ಹಿಂದೇಟು ಹಾಕುತ್ತಾರೆ ಅಥವಾ ಇಂತಹ ಸ್ಥಳವೊಂದಿದೆಯೆಂದು ಹೇಳುವುದಿಲ್ಲ ಬಿಜಾಪುರದ ‘ಗೋಲ್ ಗುಂಬಜ ’ನಂತಹ ಸ್ಥಳವನ್ನೇ ಕೊಂಚವೂ ಧಕ್ಕೆ ಬಾರದ ರೀತಿಯಲ್ಲಿ  ಪಾಡಿಕೊಂಡು ಪ್ರವಾಸಿತಾಣವನ್ನಾಗಿರಿಸುವುದು ಬಹುಸಂಖ್ಯಾತ ಹಿಂದೂ ರಾಜ್ಯ.

‘ತಾಜ್ ಮಹಲ’ನಂತಹ ಸಮಾಧಿಯನ್ನು ದಾಳಿಗೊಳಗಾಗದಂತೆ ಕಾಪಾಡುತ್ತಿರುವುದು ಹಿಂದೂ ಸಂತ, ಇಂತಹವರ ನಡುವೆ ನಮ್ಮ ಹಿಂದೂ ದೇವಾಲಯಗಳಿಗೆ ಈ ಮಟ್ಟದ ರಕ್ಷಣೆಯನ್ನೊದಗಿಸುವ ಕಾರ್ಯವನ್ನು ಸರಕಾರ ಮಾಡಬೇಕಿರುವುದು ಹಿಂದೂಗಳ ತಾಳ್ಮೆಯನ್ನು ತೋರಿಸುತ್ತದೆ. ಕಾಶ್ಮೀರಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ‘ಮಾರ್ಥಂಡ’ ದೇವಾಲಯನ್ನೊಮ್ಮೆ ನೋಡಿ ಬನ್ನಿ, ಕುಸಿದಿರುವ ದೇವಾಲಯದಿಂದ ಎರಡು ಕಿಲೋಮೀಟರು ದೂರದಲ್ಲಿ ಪೂಜೆ ಮಾಡುವ ಸ್ಥಿತಿಯಲ್ಲಿರುವ ಮತ್ತೊಂದು ಸೂರ್ಯನ ದೇವಾಲಯವಿದೆ, ಬಹಳಷ್ಟು ಬಾರಿ ಆ ದೇವಾಲಯವನ್ನು ತೋರಿಸಿ ದ್ವಂಸಗೊಳಿಸಿರುವ ದೇವಾಲಯವನ್ನು ತೋರಿ ಸುವುದಿಲ್ಲ.

ಕಾಶ್ಮೀರದಲ್ಲಿ ಭೇಟಿ ಮಾಡಲೇಬೇಕಿರುವ ಮತ್ತೊಂದು ಕ್ಷೇತ್ರವೆಂದರೆ ’ಶಂಕರಾಚಾರ್ಯ’ರು ತಪಸ್ಸು ಮಾಡಿದ್ದಂತಹ ಸ್ಥಳ. ಶ್ರೀನಗರದ ಪ್ರಮುಖ ಬಾಗದಲ್ಲಿರುವ ಈ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ರಕ್ಷಣೆಯನ್ನು ಭಾರತೀಯ ಸೈನ್ಯ ಒದಗಿಸಿದೆ. ಇಲ್ಲಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಎರಡೆರಡು ಬಾರಿ ತಪಾಸಣೆಗೊಳ ಪಡಿಸಿದ ನಂತರವಷ್ಟೇ ಪೀಠಕ್ಕೆ ತೆರಳಲು ಅನುಮತಿ ಸಿಗುತ್ತದೆ. ಭಾರತೀಯ ಸೈನಿಕರ ಒಂದು ತುಕಡಿ ದಿನದ 24 ಗಂಟೆ ಈ ಪೀಠದ ರಕ್ಷಣೆಯನ್ನು ಹೊತ್ತಿ ಕೊಂಡಿದೆ.

ಕೇರಳದ ಕಾಲಡಿಯಲ್ಲಿ ಹುಟ್ಟಿ ಸುಮಾರು 3000 ಸಾವಿರ ಕಿಲೋಮೀಟರು ದೂರದ ಶ್ರೀನಗರದಲ್ಲಿ ಶಂಕರರು ತಪಸ್ಸಿಗೆ ಕುಳಿತ್ತಿದ್ದರೆಂದರೆ, ಅಂದಿನ ಕಾಲದಲ್ಲಿ ಕಾಶ್ಮೀರ ಹೇಗಿದ್ದಿರಬಹುದೆಂದು ಊಹಿಸಿನೋಡಿ. ಸುಮಾರು ಮೂರನೇ ಶತಮಾನದಲ್ಲಿ ಕಟ್ಟಿರುವ ಶಿವನ ದೇವಸ್ಥಾನ ಈ ಪೀಠದ ಪ್ರಮುಖ ಶಕ್ತಿ ಕೇಂದ್ರ, ಅಲ್ಪ ಸ್ವಲ್ಪ ಹಾನಿಗೊಳಗಾಗಿರುವುದು ಬಿಟ್ಟರೆ ಈ ದೇವಸ್ಥಾನಕ್ಕೆ ಅಷ್ಟೊಂದು ಹಾನಿಯಾಗಿಲ್ಲ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಶಂಕರಾಚಾರ್ಯರು ಇಲ್ಲಿಗೆ ಬಂದು ತಪಸ್ಸು ಮಾಡಿದ್ದರು.

ಇಂದಿಗೂ ಶಂಕರರು ಮಾಡಿದ ತಪಸ್ಸಿನ ಜಾಗದೊಳಗೆ ಪೂಜೆಗಳು ನಡೆಯುತ್ತವೆ. ಶಿವ ದೇವಾಯಲದಲ್ಲಿ ಪ್ರತಿನಿತ್ಯ ಅಭಿಷೇಕ ಹಾಗು ಪೂಜೆಯನ್ನು ಪಂಡಿತರು ಮಾಡುತ್ತಾರೆ. ಸುಮಾರು 200 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದ ನಂತರ ದೇವಾಲಯ ಸಿಗುತ್ತದೆ,ಸಣ್ಣ ಪ್ರಖಾರವಿರುವ ದೇವಾಲಯದಲ್ಲಿ ಬೃಹತ್ ಶಿವಲಿಂಗವಿದೆ. ಹಿಂದೂಗಳ ಈ ಪವಿತ್ರ ದೇವಾಲಯದ ಬೆಟ್ಟದ ಮೇಲೆ 24 ಘಂಟೆ ಪಹರೆ ಕಾಯುವ ಸೈನ್ಯದ ತೂಕಡಿಯೊಂದಿದೆ, ದೇವಾಲಯದ ಸುತ್ತಲೂ ‘ಸಿಸಿಟಿವಿ’ ಅಳವಡಿಕೆ ಮಾಡಲಾಗಿದೆ.

ಬೆಟ್ಟ ಹತ್ತಲು ಶುರುಮಾಡುವ ಸ್ಥಳದಿಂದ ಬೆಟ್ಟದ ಮೇಲಿನವರೆಗೂ ಸೈನಿಕರನ್ನು ಕಾಣಬಹುದು. ಎರಡು ಸಾವಿರ ವರ್ಷಗಳ ಹಿಂದೆ ಶಂಕರರು ತಪಸ್ಸು ಮಾಡಿರುವ ಸ್ಥಳ ರಕ್ಷಣೆ ಮಾಡುವದು ನಮ್ಮೆಲ್ಲರ ಆಧ್ಯ ಕರ್ತವ್ಯ,ಆದರೆ ಭಾರತೀಯ ಸೈನ್ಯದ ಮೂಲಕ ಪ್ರತಿನಿತ್ಯ ರಕ್ಷಿಸುವಂತಹ ಪರಿಸ್ಥಿತಿಗೆ ತಂದದ್ದು
ಯಾವ ಧರ್ಮ ? ಬಹುಸಂಖ್ಯಾತರ ದೇಶದಲ್ಲಿ ದೇವಾಲಯ ರಕ್ಷಿಸಿ ಕೊಳ್ಳಲು ಈ ಮಟ್ಟದ ಭದ್ರತೆಯನ್ನು ನಿಯೋಜಿಸಲು ಕಾರಣರಾದವರನ್ನು ಹೇಗೆ ಕ್ಷಮಿಸ ಬೇಕು ? ಬೆಂಗಳೂರಿನ ಪಾದರಾಯನಪುರದ ಕತೆ ಏನಾಯಿತು ? ಕಾಡುಗೊಂಡನಹಳ್ಳಿಯ ಕತೆ ಏನಾಯಿತು ? ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜನ ಹೆಸರಿನ ’ಶಿವಾಜಿನಗರ’ದ ಕತೆ ಏನಾಯಿತು ? ಅಲ್ಲಿನ ಒಂದು ದೇವಸ್ಥಾನವನ್ನು ರಕ್ಷಿಸಿಕೊಳ್ಳಲು ಪೋಲೀಸರ ಸರ್ಪಗಾವಲು ಬೇಕೇ ಬೇಕು.

’ಜಮ್ಮು’ವಿನ ಹೃದಯಬಾಗದಲ್ಲಿರುವ ’ರಘುನಾಥ’ ಮಂದಿರದ ಮೇಲೆ 2002ರಲ್ಲಿ ಎರಡು ಬಾರಿ ಭಯೋತ್ಪಾದಕರ ದಾಳಿಯಾಗಿತ್ತು. ಇಲ್ಲಿಯೂ ಅಷ್ಟೇ ಮೊಬೈಲ್ ಹಾಗು ಕ್ಯಾಮೆರಾ ಬಳಕೆ ನಿಷಿದ್ಧ. 1860 ರಲ್ಲಿ ಮಹಾರಾಜ ‘ರಣ ವೀರ್ ಸಿಂಗ್’ ನಿರ್ಮಿಸಿದ ದೇವಾಲಯವಿದು, ಇಲ್ಲಿನ ವಿಶೇಷತೆಯೆಂದರೆ ಸಾಲಿ ಗ್ರಾಮಗಳು. ಸುಮಾರು 1250000 ಸಾಲಿಗ್ರಾಮಗಳನ್ನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಜಮ್ಮುವಿನಲ್ಲಿರುವ ಬಹುದೊಡ್ಡ ದೇವಾಲಯಗಳಲ್ಲಿ ಈ ದೇವಾಲಯವೂ ಒಂದು.

ಬಹುತೇಕ ಎಲ್ಲಾ ಹಿಂದೂ ದೇವರುಗಳ ಗರ್ಭಗುಡಿಯಿರುವ ದೇವಾಲಯವಿದು. ದೇವಸ್ಥಾನದ ಆರಂಭದಲ್ಲಿ ಬೃಹತ್ ಶಿವಲಿಂಗನ ದೇವಾಲಯವಿದೆ. ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಸಾವಿರಾರು ಸಾಲಿಗ್ರಾಮಗಳನ್ನು ಕಾಣಬಹುದು. ಒಟ್ಟಿನಲ್ಲಿ ಜಮ್ಮುವಿನ ರಘುನಾಥ ಮಂದಿರ ಹಿಂದೂಗಳ ಪಾಲಿನ ಪವಿತ್ರ ಸ್ಥಳ. ಇಂತಹ ದೇವಾಲಯಕ್ಕೂ ಸಹ ಭಾರತೀಯ ಸೈನ್ಯದ ರಕ್ಷಣೆಯ ಅವಶ್ಯಕತೆಯಿದೆ, 2002 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು
10 ಮಂದಿ ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದರು, ದೇವಸ್ಥಾನದ ನಾಲ್ಕೂ ದಿಕ್ಕುಗಳಲ್ಲಿ ಭಾರತೀಯ ಸೈನ್ಯದ ಯೋಧರು ದಿನದ 24 ಘಂಟೆ ಪಹರೆ ಕಾಯುತ್ತಿರು ತ್ತಾರೆ.

ಬಹುಸಂಖ್ಯಾತ ಹಿಂದೂಗಳು ವಾಸಿಸುವ ಬಡಾವಣೆಗಳಲ್ಲಿ ಮುಸಲ್ಮಾನರ ಧಾರ್ಮಿಕ ಸ್ಥಳಗಳಿಗೆ ಯಾವ ಧಕ್ಕೆಯೂ ಆಗದಂತೆ ಹಿಂದೂಗಳು ನೋಡಿಕೊಳ್ಳು ತ್ತಾರೆ, ಅದು ದಾಳಿಕೋರರ ಭಯದಿಂದಾಗಿರಬಹುದು ಅಥವಾ ಭಾವನೆಗಳಿಗೆ ನೀಡುವ ಮರ್ಯಾದೆಯಿಂದಾಗಿರಬಹುದು. ಭಾರತದಲ್ಲಿ ಅಲ್ಪಸಂಖ್ಯಾತರ ಆಚರಣೆಗಳು ಹಾಗು ದೇವತಾ ಸ್ಥಳಗಳು ಎಂದಿಗೂ ಸುರಕ್ಷಿತ, ಎಲ್ಲಿಯೂ ಭಾರತೀಯ ಸೈನ್ಯ ಈ ಮಟ್ಟದ ರಕ್ಷಣೆಯನ್ನು ಮುಸಲ್ಮಾನರ ಧಾರ್ಮಿಕ ಸ್ಥಳಗಳಿಗೆ
ನೀಡುವ ಅವಶ್ಯಕತೆ ಇಲ್ಲ. ಹಿಂದೂಗಳು ಎಂದೂ ಸಹ ಮುಸಲ್ಮಾನರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡುವ ಕೆಲಸವನ್ನು ಮಾಡಿಲ್ಲ.

ಮುಸಲ್ಮಾನರ ಧಾರ್ಮಿಕ ಕ್ಷೇತ್ರಗಳಿಗೆ ಧಕ್ಕೆ ಬರದಂತೆ ಹಿಂದುವೊಬ್ಬ ನೋಡಿಕೊಳ್ಳುತ್ತಾನೆ. ಮುಸಲ್ಮಾನರು ಅಲ್ಪಸಂಖ್ಯಾತರಾಗಿರುವ ಹಲವು ನಗರಗಳಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮುಸಲ್ಮಾನರು ಮಾಡಿದರೂ ಸಹ ಹಿಂದೂಗಳು ಸಹಿಸಿಕೊಂಡು ಹೋಗಿರುವ ಸಾವಿರಾರು ಉದಾಹರಣೆಗಳಿವೆ. ಇಂತಹ ಪವಿತ್ರ ನಾಡಿನಲ್ಲಿ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ರಕ್ಷಣೆಗೆ ಮುಸಲ್ಮಾನರೇ ನಿಲ್ಲಬೇಕಿತ್ತು. ಹಿಂದೂಗಳ ದೇವಸ್ಥಾನಗಳ ರಕ್ಷಣೆಗೆ ಭಾರತೀಯ ಸೈನ್ಯವನ್ನು ನೇಮಿಸುವಂತಹ ಪರಿಸ್ಥಿಯನ್ನು ತಂದೊಡ್ಡಿ ಅವರ ವಿರುದ್ಧವೇ ಮಾತನಾಡುವುದು ಹೀನ ಮನಸ್ಸಿನ ಅನಾವರಣ.

’ಖೀರ ಭವಾನಿ’ ದೇವಸ್ಥಾನಕ್ಕೆ ಬರುವ ಭಕ್ತರನ್ನು ಹೆದರಿಸಲು ಕಲ್ಲು ತೂರುವ ಹಾಗು ಜೋರಾಗಿ ಧ್ವನಿ ವರ್ಧಕಗಳನ್ನು ಹಾಕುವ ಪ್ರಸಂಗವೂ ನಡೆದಿದೆ, ಅಳಿದುಳಿರುವ ಹಿಂದೂ ದೇವಸ್ಥಾನಗಳನ್ನು ನಾಶಮಾಡಿ ಹಿಂದುಗಳನ್ನು ಸಂಪೂರ್ಣವಾಗಿ ಕಾಶ್ಮೀರದಿಂದ ಓಡಿಸಲು ಹುನ್ನಾರ ನಡೆಸುವವರ ಮನಸ್ಥಿತಿಯವ ರಿಂದ ಹಿಂದೂ ದೇವಾಲಯಗಳನ್ನು ರಕ್ಷಿಸಿಕೊಳ್ಳಲು ಭಾರತೀಯ ಸೈನ್ಯದ ಅವಶ್ಯಕತೆಯಂತೂ ಇದ್ದೇ ಇದೆ.