ಬೇಟೆ
ಜಯವೀರ ವಿಕ್ರಮ್ ಸಂಪತ್ ಗೌಡ
ಉದ್ಯಮಿ ವಿಜಯ ಸಂಕೇಶ್ವರ ಅವರ ಬಗ್ಗೆ ಸಂಪಾದಕರಾದ ವಿಶ್ವೇಶ್ವರ ಭಟ್ ಆಗಾಗ ಅಭಿಮಾನದಿಂದ ಹೇಳುವುದನ್ನು ಕೇಳಿ ದ್ದೇನೆ. ನಾನು ಅವರನ್ನು ಭೇಟಿ ಮಾಡಿರದಿದ್ದರೂ, ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಈ ಅಂಕಣ ಬರೆಯುವುದಕ್ಕಿಂತ ಮುನ್ನ, ಭಟ್ ಸೇರಿದಂತೆ ಕೆಲವರೊಂದಿಗೆ ಮಾತಾಡಿ, ಕೆಲವು ಸಂಗತಿಗಳನ್ನು ಖಾತ್ರಿಪಡಿಸಿಕೊಂಡಿದ್ದೇನೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸಂಕೇಶ್ವರರು ಸುದ್ದಿಯಲ್ಲಿದ್ದಾದ್ದಾರೆ. ಕಾರಣ ಇಷ್ಟೇ, ಅವರು ಕರೋನಾಕ್ಕೆ ಒಂದು ಸರಳ ಉಪಾಯ ಸೂಚಿಸಿzರೆ. ಇದಕ್ಕಾಗಿ ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿಯೊಂದನ್ನು ಕರೆದು, ಕರೋನಾ ವೈರಸ್‌ಗೆ ತಮಗೆ ಪರಿಣಾಮಕಾರಿ ಎಂದು ಮನವರಿಕೆಯಾದ ಒಂದು ಚಿಕಿತ್ಸಾ ವಿಧಾನದ ಬಗ್ಗೆ ಹೇಳಿದ್ದಾರೆ. ಅದೇನೆಂದರೆ, ಲಿಂಬೆಹಣ್ಣಿನ ನಾಲ್ಕು ಹನಿಗಳನು ಮೂಗಿನೊಳಗೆ ಬಿಟ್ಟುಕೊಂಡರೆ, ಕ್ಷಣಾರ್ಧದಲ್ಲಿ ಮೂಗು ಮತ್ತು ಗಂಟಲಲ್ಲಿರುವ ಕಫ ಹೊರ ಬಂದು ಉಸಿರಾಟ
ಸರಾಗವಾಗುವುದಲ್ಲದೇ, ನೆಮ್ಮದಿ ಸಿಗುತ್ತದೆ.
ಕರೋನಾ ಲಕ್ಷಣಗಳಿಗೆ ಇದು ರಾಮಬಾಣವಾಗಲಿದೆ ಎಂದು ಹೇಳಿದ್ದಾರೆ. ಇದನ್ನು ಸ್ವತಃ ತಮ್ಮ ಮೇಲೆ ಪ್ರಯೋಗಿಸಿಕೊಂಡಿ ದ್ದಾಗಿ ಅವರು ಹೇಳಿದ್ದಾರೆ. ಇಷ್ಟಕ್ಕೇ ಈಗ ಕೆಲವರು ಸಂಕೇಶ್ವರರ ತೇಜೋವಧೆ, ನಿಂದನೆ ಮತ್ತು ಅಪಹಾಸ್ಯಕ್ಕೆ ಮುಂದಾಗಿದ್ದಾರೆ.
ಸಂಕೇಶ್ವರರು ವೈದ್ಯರಾ, ಅವರಿಗೇನು ಗೊತ್ತು ಅಬಕಡ, ಲಿಂಬೆಹಣ್ಣಿನ ಮೂಢನಂಬಿಕೆ ಸಾರುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ವೈದ್ಯರೇ ಕೈಚೆಲ್ಲಿರುವಾಗ ಯಾವ ಸಂಶೋಧನೆಯ ಆಧಾರವಿಲ್ಲದ, ಲಿಂಬೆಹಣ್ಣಿನಿಂದ ಕರೋನಾ ಗುಣಪಡಿಸ ಬಹುದು ಎಂಬ ಸಂಕೇಶ್ವರರ ಸಲಹೆಯನ್ನು ಒಪ್ಪಲು ಸಾಧ್ಯವಿಲ್ಲ, ಇದು ಮೂಢ ನಂಬಿಕೆಯ ಪರಾಕಾಷ್ಠೆ, ಈ ಲಿಂಬೆಹಣ್ಣಿನ ಚಿಕಿತ್ಸೆ ಮಾಡಿಕೊಂಡು ಯಾರಿಗಾದರೂ ಏನಾದರೂ ಆದರೆ, ಸಂಕೇಶ್ವರರು ಹೊಣೆಗಾರರಾಗುತ್ತಾರಾ ಎಂದೆಲ್ಲ ಕೆಲವು ಅವಿವೇಕಿ ಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಂಬನೆ ಮಾಡುತ್ತಿದ್ದಾರೆ.
ಇದು ಅವರ ಕರ್ಮ ಎಂದು ಸುಮ್ಮನೆ ಇರಬಹುದಿತ್ತು. ಇಷ್ಟೂ ಸಾಲದೆಂಬಂತೆ, ಕೆಲವರು ಅವರ ಚಾರಿತ್ರ್ಯಹರಣಕ್ಕೂ ಮುಂದಾ ಗಿದ್ದಾರೆ. ನನಗೆ ಅರ್ಥವಾಗದಿರುವುದೆಂದರೆ, ಸಂಕೇಶ್ವರರು ಈ ಔಷಧವನ್ನು ತೆಗೆದುಕೊಳ್ಳಲೇಬೇಕು ಎಂದೇನಾದರೂ ’ಫತ್ವಾ’ ಹೊರಡಿಸಿದ್ದಾರಾ ? ನಿಮಗೆ ಇಷ್ಟವಿಲ್ಲ, ನಂಬಿಕೆ ಇಲ್ಲ ಅಂದ್ರೆ ಬಿಟ್ಟುಬಿಡಿ, ಫುಲ್ ಸ್ಟಾಪ್.
ಅಷ್ಟಕ್ಕೇ ಬೇರೆಯವರನ್ನೇಕೆ ತೇಜೋವಧೆ ಮಾಡುತ್ತೀರಾ? ಆ ಹಕ್ಕನ್ನು ನಿಮಗೆ ಕೊಟ್ಟವರಾರು? ಅಷ್ಟಕ್ಕೂ ಸಂಕೇಶ್ವರರು ಆ ಪರಿಹಾರ ಸೂಚಿಸುವುದರ ಮೂಲಕ ಹಣ ಮಾಡಲು ಹೊರಟಿದ್ದಾರಾ? ಇಲ್ಲವಲ್ಲ. ಅದರಲ್ಲಿ ಅವರ ಸ್ವಾರ್ಥ ಅಡಗಿಲ್ಲವಲ್ಲ? ಹೀಗಿರುವಾಗ ನಿಮಗೇಕೆ ಉರಿ? ನೀವೇಕೆ ಕುಂಡೆ ಕಡಿಸಿಕೊಂಡವರಂತೆ ವರ್ತಿಸುತ್ತೀರಾ? ನಿಮಗೆ ಲಿಂಬೆಹಣ್ಣಿನ ಹನಿ ಚಿಕಿತ್ಸೆಯಲ್ಲಿ ವಿಶ್ವಾಸ ಇಲ್ಲದಿದ್ದರೆ ತೆಪ್ಪಗಿರಿ.
ಆದರೆ ಆ ಚಿಕಿತ್ಸೆಯಿಂದ ಅಸಂಖ್ಯ ಜನರಿಗೆ ಪ್ರಯೋಜನ ಆಗಿದೆಯಲ್ಲ? ಅದಲ್ಲದೇ, ಆ ಚಿಕಿತ್ಸೆಯಿಂದ ಯಾರ ಆರೋಗ್ಯಕ್ಕೂ ಹಾನಿಯಾಗಿಲ್ಲವಲ್ಲ? ನಕಾರಾತ್ಮಕ ಪರಿಣಾಮವುಂಟಾಗಿಲ್ಲವಲ್ಲ? ಹೀಗಿರುವಾಗ ನಿಮಗೆ ಬಂದಿರುವ ರೋಗವಾದರೂ ಏನು? ಸಂಕೇಶ್ವರರು ಸಾರ್ವಜನಿಕ ಹಿತದಿಂದ, ತಮಗೆ ಯಾರೋ ಹೇಳಿರುವ ಈ ಪರಿಹಾರ-ಉಪಾಯವನ್ನು ಹೇಳಿದ್ದಾರೆ. ಅದರಲ್ಲಿ ಅವರ ಯಾವ ಸ್ವಂತ ಲಾಭವಿಲ್ಲ. ಆ ಮೂಲಕ ಅವರ ಪತ್ರಿಕೆಯನ್ನು ಬೆಳೆಸುವ ಹುನ್ನಾರವೂ ಇಲ್ಲ.
ಅವರ ಸ್ವಾರ್ಥವೇನಾದರೂ ಇದ್ದರೆ ಅದು ಸಾರ್ವಜನಿಕ ಹಿತ. ಇಂಥದ್ದೊಂದು ಚಿಕಿತ್ಸಾ ವಿಧಾನವಿದೆ, ಅದನ್ನು ಮಾಡಿದರೆ ನಿಮಗೆ ರಿಲೀ- ಸಿಗುತ್ತದೆ, ಅದಕ್ಕೆ ಯಾವ ಹಣವೂ ಖರ್ಚಾಗುವುದಿಲ್ಲ, ಈ ದುರಿತ ಕಾಲದಲ್ಲಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ… ಹೀಗಿರುವಾಗ ಈ ಸರಳ ಚಿಕಿತ್ಸೆ ಮಾಡಿದರೆ, ನಿಮಗೆ ಪ್ರಯೋಜನ ಆಗಲಿದೆ ಎಂದಷ್ಟೇ ಹೇಳಿದ್ದಾರೆ. ಅದರಲ್ಲಿ ಅವರ ಯಾವ ತಪ್ಪಿದೆ? ಅಷ್ಟಕ್ಕೇ ಕೆಲವರು ಸಂಕೇಶ್ವರರನ್ನು ಗೇಲಿ ಮಾಡಲು ತೊಡಗಿದ್ದಾರೆ.
ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಸಂಕೇಶ್ವರರು ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇರುವವರು. ಆರೋಗ್ಯ ಸುಧಾರಣೆ, ಉತ್ತಮ ಸ್ವಾಸ್ಥ್ಯ, ನಿರೋಗ ಮುಂತಾದ ವಿಷಯಗಳ ಬಗ್ಗೆ ತಜ್ಞ ವೈದ್ಯರು ಉತ್ತಮ ಸಂಗತಿಗಳನ್ನು ಹೇಳಿದರೆ, ಸಂಕೇಶ್ವರರು ಅದನ್ನು ಕನಿಷ್ಠ ನೂರು ಮಂದಿಗೆ ಹೇಳಿ, ಅವರಿಗೂ ಅದರ ಪ್ರಯೋಜನ ಸಿಗಲಿ ಎಂದು ಬಯಸುವವರು. ಅಷ್ಟೇ ಅಲ್ಲ, ತಮ್ಮ ಸ್ವಂತ ಹಣದಲ್ಲಿ ಖರೀದಿಸಿ, ಅದನ್ನು ನೂರಾರು ಸ್ನೇಹಿತರು, ಹಿತೈಷಿಗಳಿಗೆ ಕಳಿಸಿ ಕೊಡುವವರು. ಅವರೊಂದಿಗೆ ಲೋಕಾಭಿರಾಮ
ಮಾತಾಡುವಾಗ, ಅವರು ತಮಗೆ ಗೊತ್ತಿರುವ, ಈಗಾಗಲೇ ಸಾಬೀತಾಗಿರುವ ಹೆಲ್ತ ಟಿಗಳನ್ನು ಕೊಡುತ್ತಾರೆ.
ಅದು ಅವರಿಗೆ ಪ್ರಯೋಜನ ಆಗಿದೆಯಾ ಎಂಬುದನ್ನು ಪದೇ ಪದೆ ಫೋನ್ ಮಾಡಿ ತಿಳಿದುಕೊಂಡು ಖಾತ್ರಿಪಡಿಸಿಕೊಳ್ಳುತ್ತಾರೆ.
ತಾವು ಕೊಟ್ಟ ಔಷಧ ಪರಿಣಾಮ ಬೀರಿದರೆ, ತಮ್ಮ ಹಣದಿಂದ ಇನ್ನೊಂದಿಷ್ಟು ಔಷಧ ಕಳಿಸಿಕೊಡುತ್ತಾರೆ. ಇದು ಅವರು ಸ್ನೇಹಕ್ಕೆ, ಸಾರ್ವಜನಿಕ ಹಿತಕ್ಕೆ, ಆರೋಗ್ಯಕ್ಕೆ ಕೊಡುವ ಬೆಲೆ. ಕೆಲವು ಚಿಕಿತ್ಸೆಗಳನ್ನು ಅವರು ತಮ್ಮ ಮೇಲೆ ಪ್ರಯೋಗಿಸಿಕೊಂಡು, ಅದರ ಸತ್ಪರಿಣಾಮ ಅನುಭವಿಸಿದ ನಂತರ, ತಮ್ಮ ಸ್ನೇಹಿತರಿಗೆ ಅದನ್ನು ಅನುಸರಿಸುವಂತೆ ಹೇಳುತ್ತಾರೆ.
ಮೊನ್ನೆ ಅವರು ಪತ್ರಿಕಾಗೋಷ್ಠಿ ಕರೆದು, ಲಿಂಬೆಹಣ್ಣಿನ ಹನಿ ಚಿಕಿತ್ಸೆ ಬಗ್ಗೆ ಹೇಳಿರುವುದರಲ್ಲಿ ಕೂಡ ಸಂಕೇಶ್ವರರ ಇದೇ ಕಾಳಜಿ ಮತ್ತು ಹಿತಾಸಕ್ತಿಯಿದೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಕೆಲಸವಿಲ್ಲದ ಕಮಂಗಿಗಳು, ಅ’ಮೀನ್’ ಮೆಂಟಾಲಿಟಿಯವರು ’ಸಂಕೇಶ್ವರ ಬ್ರಾಂಡ್ ಆಫ್ ಪತ್ರಿಕೋದ್ಯಮ’ವನ್ನು ಟೀಕಿಸಲು ಆರಂಭಿಸಿದ್ದಾರೆ.
ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದ ಕನ್ನಡ ಮಾಧ್ಯಮ ಕ್ಷೇತ್ರವನ್ನು ಪತ್ರಿಕಾ ಧರ್ಮವನ್ನೇ ಮರೆತ ಕೇವಲ ಲಾಭ-ನಷ್ಟದ ವ್ಯಾಪಾರವನ್ನಾಗಿ ಮಾಡಿದವರು ಸಂಕೇಶ್ವರ್ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಟೈಮ್ಸ ಆಫ್ ಇಂಡಿಯಾ ಪ್ರಾರಂಭಿಸಿದ್ದ ಬೆಲೆ ಸಮರದ ಅನಾರೋಗ್ಯ ಪೈಪೋಟಿಯ ವ್ಯಾಪಾರಿ ತಂತ್ರವನ್ನು ’ವಿಜಯ ಕರ್ನಾಟಕ’ದ ಮೂಲಕ ಕರ್ನಾಟಕಕ್ಕೆ ಪರಿಚಯಿಸಿದವರು ಸಂಕೇಶ್ವರ್, ಪತ್ರಿಕೆಗೆ ಓದುಗರನ್ನು ಸೆಳೆಯಲು ತನ್ನ ಜಾತಿಯನ್ನು ದುರ್ಬಳಕೆ ಮಾಡಿಕೊಂಡವರು ಸಂಕೇಶ್ವರ್, ಬ್ರಾಹ್ಮಣರು ಸಂಪಾದಕೀಯ ವಿಭಾಗದಲ್ಲಿ ಪಾರುಪತ್ಯ ನಡೆಸುತ್ತಿದ್ದರೂ ಜನಸಂಖ್ಯಾ ಬಲ ಇಲ್ಲದ ಬ್ರಾಹ್ಮಣ
ಸಂಪಾದಕರಿಗಾಗಲಿ, ಮಾಧ್ಯಮ ಮಾಲೀಕರಿಗಾಗಲಿ ತನ್ನ ಜಾತಿ ಬಲದ ಮೂಲಕ ಪ್ರಸಾರದ ಸಂಖ್ಯೆಯನ್ನು ಹೆಚ್ಚು ಮಾಡಲು ಸಾಧ್ಯವಾಗದಿದ್ದಾಗ, ಅಂತಹದ್ದೊಂದು ಕೆಟ್ಟ ಪರಂಪರೆಯನ್ನು ಆರಂಭಿಸಿದ ಸಂಕೇಶ್ವರ್, ಲಿಂಗಾಯತ ಸ್ವಾಮಿಗಳು,ಮಠಗಳು ಮತ್ತು ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಇದಕ್ಕಾಗಿ ಬಳಸಿಕೊಂಡರು ಎಂದೆ ಅವರ ವಿರುದ್ಧ ಆಪಾದನೆ ಮಾಡುತ್ತಿರುವುದು ನಗು ತರಿಸುತ್ತದೆ.
ಇವರಿಗೆ ಸಂಕೇಶ್ವರರ ಬಗ್ಗೆ ಒಳಗೊಳಗೇ ಇಷ್ಟು ವರ್ಷಗಳಿಂದ ಅದೆಂಥ ಮತ್ಸರ, ಹುಳಿ ತುಂಬಿಕೊಂಡಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಸಂಕೇಶ್ವರರು ಹಿಂಡಿದ ಲಿಂಬೆ ಹುಳಿಗೆ, ಕಫವಲ್ಲ, ಜಂತು ಹುಳುಗಳೇ ಬಿದ್ದಂತೆ ಈ ಕಮಂಗಿಗಳು ವರ್ತಿಸು ತ್ತಿದ್ದಾರೆ. ಅಸಲಿಗೆ ಇವರಿಗ್ಯಾರಿಗೂ ಸಂಕೇಶ್ವರರ ಹೆಸರನ್ನು ಹೇಳುವ ಯೋಗ್ಯತೆಯೂ ಇಲ್ಲ. ಅವರಿಗೆ ಸಂಕೇಶ್ವರರು ಕನ್ನಡ
ಪತ್ರಿಕೋದ್ಯಮಕ್ಕೆ ಮಾಡಿದ ಉಪಕಾರವೂ ಗೊತ್ತಿಲ್ಲ. ಗೊತ್ತಿದ್ದರೂ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.
ಸಂಕೇಶ್ವರರು ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ, ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ ಸೇರಿದಂತೆ ರಾಜ್ಯಮಟ್ಟದ ಎ ಪತ್ರಿಕೆಗಳ ಸರ್ಕ್ಯುಲೇಷನ್ ಸೇರಿಸಿದರೆ, ಮೂರೂವರೆ ಲಕ್ಷದಷ್ಟಿತ್ತು. ಕನ್ನಡದಲ್ಲಿ ಆವೃತ್ತಿ ಕಲ್ಪನೆಯೇ ಇರಲಿಲ್ಲ. ಎಲ್ಲಾ ಪತ್ರಿಕೆಗಳಿಗೂ ಒಂದೇ ಆವೃತ್ತಿ. ಬೆಂಗಳೂರಿನಲ್ಲಿ ಪ್ರಕಟ ವಾಗುವ ಪತ್ರಿಕೆ ಎರಡು ದಿನಗಳ ನಂತರ, ದೂರದ ಊರುಗಳನ್ನು ತಲುಪುತ್ತಿತ್ತು.
ಪತ್ರಿಕೆಯನ್ನು ಬೆಳೆಸಲು, ಓದುಗರ ಸಂಖ್ಯೆಯನ್ನು ಹೆಚ್ಚಿಸಲು, ಜನರಲ್ಲಿ ಓದಿನ ಅಭಿರುಚಿಯನ್ನು ಹೆಚ್ಚಿಸಲು ಯಾವ ಪತ್ರಿಕಾ ಮಾಲೀಕನೂ ಮುಂದಾಗಿರಲಿಲ್ಲ. ಇರುವ ಪತ್ರಿಕೆಗಳೆಲ್ಲ ’ಗೊಡ್ಡೆಮ್ಮೆ’ಯಂತಾಗಿದ್ದವು. ಇಂಥ ಸಂದರ್ಭದಲ್ಲಿ, ಪತ್ರಿಕೋದ್ಯಮದ ಅಬಕಡ ಗೊತ್ತಿಲ್ಲದ ಸಂಕೇಶ್ವರರು, ’ವಿಜಯ ಕರ್ನಾಟಕ’ ಆರಂಭಿಸಿದರು.
ಪತ್ರಿಕೆ ಆರಂಭಿಸಿದ ಮೂರು ವರ್ಷಗಳಲ್ಲಿ, ಐವತ್ತು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಪ್ರಮುಖ ಪತ್ರಿಕೆಗಳನ್ನು ’ಮಟ್ಟು’ ಹಾಕಿ, ನಂಬರ್ ಒನ್ ಪತ್ರಿಕೆಯಾಗಿ ಮಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಶಕೆ ಆರಂಭಿಸಿದವರು ಇದೇ ಸಂಕೇಶ್ವರರು ಮತ್ತು (ಬ್ರಾಹ್ಮಣ) ಸಂಪಾದಕರಾದ ವಿಶ್ವೇಶ್ವರ ಭಟ್ಟ ಜೋಡಿ. ಈ ಸಂಗತಿ ಇಂದಿಗೂ ಅನೇಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಸಂಕೇಶ್ವರರು ಲಿಂಬೆಹಣ್ಣು ಹಿಂಡಿ ಎಂದು ಹೇಳದಿದ್ದರೂ, ಅವರ ಹೊಟ್ಟೆಯಲ್ಲಿ ಆ ಹುಳಿ ಇವತ್ತಿಗೂ ಭೋರ್ಗರೆಯುತ್ತಲೇ ಇದೆ.
ಪತ್ರಿಕೆ ಅಂದ್ರೆ ಅದೊಂದೇ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರಿಗೆ, ಸಂಕೇಶ್ವರ ಮತ್ತು ಭಟ್ಟರು ಕೊಟ್ಟ ಹೊಡೆತ ಇಂದಿಗೂ ಉರಿಯುತ್ತಲೇ ಇದೆ. ಸಂಕೇಶ್ವರರು ಬಂದು ಎ ಪತ್ರಿಕೆಗಳನ್ನು ಸಾಯಿಸಿದರು ಎಂದು ಅನೇಕರು ಇಂದಿಗೂ ಅವಿವೇಕಿಗಳಂತೆ
ವಾದಿಸುತ್ತಾರೆ. ಅವರಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಸಂಕೇಶ್ವರರಿಂದಾಗಿ ಕನ್ನಡದ ಎಲ್ಲಾ ಪತ್ರಿಕೆಗಳ ಪ್ರಸಾರ ನಾಲ್ಕು ಪಟ್ಟು ಜಾಸ್ತಿಯಾಗಿವೆ, ಎಲ್ಲಾ ಪತ್ರಿಕೆಗಳು ಏಳೆಂಟು ಆವೃತ್ತಿಗಳನ್ನು ತೆರೆದಿವೆ, ಲಾಭದಲ್ಲಿ ನಾಲ್ಕು ಪಟ್ಟು ಜಾಸ್ತಿಯಾಗಿದೆ, ಪತ್ರಕರ್ತರ ಸಂಖ್ಯೆ (ಟಿವಿ ಬಿಟ್ಟು) ಐದು ಪಟ್ಟು ಜಾಸ್ತಿಯಾಗಿವೆ, ಕನ್ನಡ ಪತ್ರಿಕೋದ್ಯಮ ಹುಲುಸಾಗಿ ಬೆಳೆದಿದೆ, ಎಲ್ಲಾ ಪತ್ರಿಕೆಗಳ ಸರ್ಕ್ಯುಲೇ ಷನ್ ಸಂಖ್ಯೆ ಸೇರಿಸಿದರೆ ಅದು ಇಪ್ಪತ್ತು ಲಕ್ಷವನ್ನು ದಾಟಿದೆ, ಕನ್ನಡ ಪತ್ರಿಕೆಗಳು ಸಾಮಾನ್ಯ ವ್ಯಕ್ತಿಗೂ ಕೈಗೆಟಕು ವಂತಾಗಿದೆ ಎಂಬುದು.
ಒಟ್ಟಾರೆ ಇದರ ಪ್ರಯೋಜನ ಸಮಾಜಕ್ಕಾಗಿದೆ. ಒಂದು ಲಕ್ಷ ಪ್ರಸಾರವನ್ನಿಟ್ಟುಕೊಂಡು ಅದೇ ಸಾಧನೆ ಎಂಬಂತಿದ್ದ ಕನ್ನಡ ಪತ್ರಿಕೆಗಳು, ಇಂದು ಇಷ್ಟು ಅಗಾಧವಾಗಿ ಬೆಳೆದಿದ್ದರೆ ಅದಕ್ಕೆ ಸಂಕೇಶ್ವರರು ಪರೋಕ್ಷ ಕಾರಣ ಎಂಬುದನ್ನು ಅರಗಿಸಿಕೊಳ್ಳಲು ಇಂದಿಗೂ ಅನೇಕರಿಗೆ ಸಾಧ್ಯವಾಗಿಲ್ಲ. ಸಂಕೇಶ್ವರರು ಜಾತಿವಾದಿ ಎಂದು ಕೆಲವು ಅಪಾಪೋಲಿಗಳು ಆಗಾಗ ಹುಯಿಲೆಬ್ಬಿಸುತ್ತಾರೆ. ಲಿಂಗಾಯತ ಸ್ವಾಮಿಗಳು, ಮಠಗಳು ಮತ್ತು ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ತಮ್ಮ ಪತ್ರಿಕೆ ಪ್ರಸಾರ ಹೆಚ್ಚಳಕ್ಕೆ ಬಳಸಿಕೊಂಡರು ಎಂದು ಅವರ ಬಗ್ಗೆ ಆರೋಪಿಸುತ್ತಾರೆ.
ಇಂದು ಸಂಕೇಶ್ವರರು ಒಬ್ಬ ಉದ್ಯಮಿಯಾಗಿ, ಪತ್ರಿಕೋದ್ಯಮಿಯಾಗಿ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ, ಅವರು ಜಾತಿವಾದಿ
ಅಲ್ಲದಿರುವುದು. ವ್ಯಾಪಾರಕ್ಕೂ, ಜಾತಿಗೂ ಸಂಬಂಧವೇ ಇಲ್ಲ ಎಂದು ಸಾಬೀತು ಮಾಡಿದವರು ಅವರು. ಅಷ್ಟಾಗಿಯೂ ಅವರನ್ನು ಜಾತಿವಾದಿ ಎಂದು ಬೊಟ್ಟು ಮಾಡಿದರೆ, ಅವರು ಬುದ್ಧಿವಂತ, ಪ್ರಾಮಾಣಿಕ, ಕರ್ಮನಿಷ್ಠ ಜಾತಿಪ್ರೇಮಿ. ಈ ಗುಣಗಳುಳ್ಳವರು ಯಾವುದೇ ಜಾತಿಯವರಾಗಿದ್ದರೂ ಅವರು ಮಣೆ ಹಾಕುತ್ತಾರೆ. ಸಂಕೇಶ್ವರರು ವಿಜಯ ಕರ್ನಾಟಕ ಮತ್ತು ವಿಜಯವಾಣಿ ಪತ್ರಿಕೆಗಳನ್ನು ಆರಂಭಿಸಿದರೂ, ಮಹದೇವಪ್ಪ ಎಂಬುವವರನ್ನು ಬಿಟ್ಟರೆ, ಅವರ ಜಾತಿಗೆ ಸೇರಿದವರನ್ನು ಸಂಪಾದಕರನ್ನಾಗಿ ನೇಮಿಸಿಲ್ಲ. ’ವಿಜಯವಾಣಿ’ಯ ಈಗಿನ ಸಂಪಾದಕರು ಒಕ್ಕಲಿಗ ಸಮೂದಾಯದವರು.
ಮೂರು ಬಾರಿ ಚುನಾವಣೆಯಲ್ಲಿ ಸೆಣಸಿ, ಲೋಕಸಭಾ ಸದಸ್ಯರಾಗಿದ್ದರೂ ಅವರು ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ ಎಂಬುದನ್ನು ಅನೇಕ ಮಂದಿಯಿಂದ ಕೇಳಿ ಬ. ಸಂಕೇಶ್ವರರ ಬಗ್ಗೆ ಏನೂ ಹೇಳಲು ಸಿಗದಿದ್ದಾಗ, ಕೆಲವು ಮಾಜಿ ಪತ್ರಕರ್ತರು,
’ಅವರಿಗೆ ಪತ್ರಕರ್ತರ ಬಗ್ಗೆ ದ್ವೇಷ ಇಲ್ಲದೇ ಇರಬಹುದು, ಆದರೆ ವಿಶೇಷ ಗೌರವ ಖಂಡಿತ ಇಲ್ಲ’ ಎಂದಾದರೂ ಕೊಂಕು
ನುಡಿಯದೇ ಹೋಗುವುದಿಲ್ಲ.
ಸಂಕೇಶ್ವರರು ಪತ್ರಿಕೋದ್ಯಮಕ್ಕೆ ಬರುವುದಕ್ಕಿಂತ ಮುನ್ನ, ಕನ್ನಡ ಪತ್ರಕರ್ತರ ಸಂಬಳ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು
ನೋಡಿದರೆ ಉತ್ತರ ಸಿಗುತ್ತದೆ. ಕನ್ನಡದ ಪತ್ರಕರ್ತನೊಬ್ಬ, ಬಹುರಾಷ್ಟ್ರೀಯ ಕಂಪನಿಯ ಅಧಿಕಾರಿಯಂತೆ, ಲಕ್ಷ ರುಪಾಯಿ ಸಂಬಳ ಕಂಡಿದ್ದರೆ, ಅದು ಮೊದಲಿಗೆ ಸಂಕೇಶ್ವರ ಒಡೆತನದ ಪತ್ರಿಕೆಯಲ್ಲಿ ಎಂಬುದನ್ನು ಮರೆಯಬಾರದು. ಪತ್ರಿಕಾ ವಿತರಕ ಕೂಡ ಲಕ್ಷಗಟ್ಟಲೆ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟವರೂ ಸಂಕೇಶ್ವರರೇ.
ಯಾರೋ ನಾಲ್ಕು ಮಂದಿ ಲಘುವಾಗಿ ಮಾತಾಡಿದ ಮಾತ್ರಕ್ಕೆ ಸಂಕೇಶ್ವರರ ಘನತೆ ಕುಂದುವುದಿಲ್ಲ. ಆದರೆ ಹಾಗೆ ಮಾತಾಡಿದವರ ’ಮಟ್ಟ’ ಏನು ಎಂಬುದು ಗೊತ್ತಾಗುತ್ತದೆ. ಅದು ಗೊತ್ತಾಗಲಿ ಎಂದು ಇಷ್ಟೆ ಬರೆಯಬೇಕಾಯಿತು. ಅಂದ ಹಾಗೆ ಸಂಕೇಶ್ವರರು ಹೇಳಿದ ಚಿಕಿತ್ಸೆಯನ್ನು ನಾನೂ ಮಾಡಿದ್ದೇನೆ. ಅದು ನನ್ನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಮೂಗಿಗೆ ಬಿಟ್ಟುಕೊಳ್ಳ ಬೇಕಾದ ಹುಳಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡರೆ, ಯಾವ ಚಿಕಿತ್ಸೆಯಿಂದಲೂ ಗುಣಪಡಿಸಲು ಸಾಧ್ಯವಿಲ್ಲ