Friday, 13th December 2024

ಅಚ್ಚರಿ ಮೂಡಿಸಿದ ಭಾರತದ ದೃಢತೆ

ಅಭಿಪ್ರಾಯ

ವಿಜಯ್‌ ದರ್‌ಡ

ರಷ್ಯಾದಿಂದ ಅತ್ಯಾಧುನಿಕ ವಿನ್ಯಾಸದ ಎಸ್-400 ಶಸ್ತ್ರಗಳನ್ನು ಖರೀದಿಸಿರುವ ದೇಶ ತಾನು ಯಾರಿಗೂ ಬಾಗುವುದಿಲ್ಲ ಎಂಬ ದಿಟ್ಟ ಸಂದೇಶವನ್ನು ರವಾನಿಸಿದೆ. ಚೀನಾ ಪಾರಮ್ಯ ತಡೆಯಲು ಭಾರತದ ಸಹಕಾರ ಬೇಕೇಬೇಕು. ಹಾಗಾಗಿ ಭಾರತದೊಂದಿಗಿನ ಸ್ನೇಹ ಸಂಬಂಧ ಗಳನ್ನು ಸಡಿಲಗೊಳಿಸಿಕೊಳ್ಳಲು ಅಮೆರಿಕಕ್ಕೂ ಸಾಧ್ಯವಾಗದು.

ಚದುರಂಗದಾಟದಲ್ಲಿ ಎದುರಾಳಿಯ ಪ್ರತಿದಾಳಿಗೆ ಮುನ್ನವೇ ನಮ್ಮ ನಡೆಯನ್ನು ನಿರ್ಧರಿಸುವ ಕಲೆಗೂ ದೇಶ- ದೇಶಗಳ ನಡುವಣ ರಾಜತಾಂತ್ರಿಕ  ನೀತಿಗೂ ನಿಕಟವಾದ ಸಾಮ್ಯವಿದೆ. ಅನ್ಯಥಾ ನಮ್ಮ ನಡೆ ದುರ್ಬಲ ವಾಗಲೂಬಹುದು. ವಿಶ್ವ ಸಮುದಾಯದಲ್ಲಿ ಪ್ರತಿಧ್ವನಿತವಾದ ಭಾರತದ ದೃಢ ವಾದ ದೇಶಿ ನೀತಿ ವಿಶೇಷವಾದದ್ದು, ವಿಶ್ವವೇ ಅಚ್ಚರಿಗೊಳಗಾಗಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ಕೊಡುವುದಕ್ಕೆ 36 ಗಂಟೆಗಳ ಮನ್ನ ಉತ್ತರಾಖಂಡದಲ್ಲಿ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ವೇಳೆ ನಮ್ಮ ಪ್ರಧಾನಮಂತ್ರಿ ನರೇಂದ್ರಮೋದಿಯವರು ಮಾತನಾ ಡುತ್ತ, ನಾವು ಯಾವುದೇ ಒತ್ತಡಗಳಿಗೆ ತಲೆಬಾಗುವುದಿಲ್ಲ ಎಂದು ಗಟ್ಟಿದನಿಯಲ್ಲಿ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಡೆಹ್ರಾಡೂನ್‌ನಲ್ಲಿ ಪ್ರಧಾನಮಂತ್ರಿಗಳು ಸಭ್ಯತೆಯ ಎಲ್ಲೆ ಮೀರದೇ ಈ ಉದ್ಘೋಷವನ್ನು ಮಾಡಿದ್ದರು, ಅವರ ನೇರಗುರಿ ಅಮೆರಿಕ ಆಗಿತ್ತು ಎಂಬುದು ಸುಸ್ಪಷ್ಟ. ಈ ಹೇಳಿಕೆಯಿಂದ ಅಮೆರಿಕ ಕೂಡ ಪ್ರತಿಕ್ರಿಯಿಸಲಾಗದಷ್ಟು ದಿಗ್ಭ್ರಮೆಗೆ ಒಳಗಾಗಿದೆ.

ನಿಜ ಹೇಳಬೇಕೆಂದರೆ ಅಮೆರಿಕ, ಭಾರತ ಮತ್ತು ರಷ್ಯಾ ನಡುವೆ ರಕ್ಷಣಾ ವ್ಯವಸ್ಥೆಯ ವಿಚಾರದಲ್ಲಿ ಎಸ್-400 ಸಂಗತಿ ತಳಕುಹಾಕಿಕೊಂಡಿದೆ. ರಷ್ಯಾದಲ್ಲಿ ಸಿದ್ಧವಾಗಿರುವ ಈ ರಕ್ಷಣಾ ಉಪಕರಣ ಅಮೆರಿಕದ ಪ್ಯಾಟ್ರಿಯಾಟ್ ಮಿಸೈಲ್‌ನಷ್ಟೇ ಕ್ಷಮತೆಯನ್ನು ಹೊಂದಿದೆ. ಅದು ವಿಮಾನ, ಹಡಗು, ಬಾಲಿಸ್ಟಿಕ್ ಮಿಸೈಲ್ ಮತ್ತು ಹೈಪರ್‌ಸಾನಿಕ್ ಶಸ್ತ್ರಗಳನ್ನು ಕೂಡ ಪುಡಿ ಗಟ್ಟುವಷ್ಟು ಶಕ್ತಿಶಾಲಿಯಾಗಿದೆ.

ನೌಕಾಪಡೆಯ ಮಾಧ್ಯಮದ ಮೂಲಕವೂ ಇದನ್ನು ಉಡಾಯಿಸುವುದು ಸಾಧ್ಯವಿದೆ. ರಷ್ಯಾದಿಂದ ಈ ಯುದ್ಧೋಪಕರಣವನ್ನು ಚೀನಾ ಖರೀದಿಸಿದೆ. ಆದರೆ ಅದನ್ನು ರಷ್ಯಾ ಇನ್ನಾರಿಗೂ ಮಾರಾಟ ಮಾಡಕೂಡದು ಎಂಬ ಇರಾದೆ ಅಮೆರಿಕ ದೇಶದ್ದಾಗಿದೆ. ಅದಕ್ಕೆ ಬೇಕಾದ ಕಾನೂನುಗಳನ್ನು ಕೂಡ ಅಮೆರಿಕ ಮಾಡಿದೆ. ಇದೇ ಕಾನೂನಿನ ಅಡಿಯಲ್ಲಿ ಕಳೆದ ವರ್ಷ ಅಮೆರಿಕ ಟರ್ಕಿ ಮೇಲೆ ನಿರ್ಬಂಧಗಳನ್ನು ಹೇರಿತ್ತಲ್ಲದೇ 35 -ಟರ್ ಜೆಟ್‌ಗಳ ವ್ಯಾಪಾರ
ಒಪ್ಪಂದವನ್ನೇ ರದ್ದುಗೊಳಿಸಿತ್ತು. ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯ ನಿಕಟವಾಗಿರುವ ಕಾರಣದಿಂದ ಪುಟಿನ್ ಅವರ ಆರುಗಂಟೆಗಳ
ಭೇಟಿಯ ಸಂದರ್ಭದಲ್ಲಿ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು.

ಆದರೆ, ಪುಟಿನ್ ಭಾರತಕ್ಕೆ ಕಾಲಿಡುವ ಮುನ್ನವೇ ಭಾರತ ತನ್ನ ಸ್ಪಷ್ಟ ಮತ್ತು ದಿಟ್ಟ ಸಂದೇಶ ವ್ಯಕ್ತಪಡಿಸಿತ್ತು. ‘ನೀವು ನಮಗೆ ವಿಶ್ವಾಸಾರ್ಹ ಭಾಗೀ ದಾರರು ಹೌದು, ಆದರೆ ನಾವು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂಬ ಸಂದೇಶ ಅದಾಗಿತ್ತು. ಭಾರತಕ್ಕೆ ಎದುರಾದ ಪ್ರತಿಯೊಂದು ಬಿಕ್ಕಟ್ಟಿನ ಸಂದರ್ಭದಲ್ಲೂ ರಷ್ಯಾ ಬೆಂಗಾವಲಿಗೆ ನಿಂತಿತ್ತು. ಭಾರತಕ್ಕೆ ಆಮದಾಗುವ ಪ್ರತಿಶತ ೮೦ರಷ್ಟು ಯುದ್ಧೋಪಕರಣಗಳು ಬರುವುದು ರಷ್ಯಾ ದಿಂದಲೇ. ರಷ್ಯಾದ ಸಹಭಾಗಿತ್ವದಲ್ಲಿ ಭಾರತ ನೂತನ ವಿನ್ಯಾಸದ ಎಕೆ.203 ರೈಫಲ್ ತಯಾರಿಸುವ ಕಾರ್ಯವನ್ನು ಕೂಡ ದೇಶೀಯವಾಗಿ ಸದ್ಯದಲ್ಲೇ ಪ್ರಾರಂಭಿಸಲಿದೆ. ವಿದೇಶಾಂಗ ನೀತಿ ಎಂಬ ಚದುರಂಗದಾಟದಲ್ಲಿ ಭಾರತದ ಈ ನಡೆ ವಿಶ್ವ ಸಮುದಾಯದಲ್ಲಿ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ.

ಒಂದೆಡೆ ರಷ್ಯಾ ಖುಷಿಯಾಗಿದ್ದರೆ ಇನ್ನೊಂದೆಡೆ ಅಮೆರಿಕ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಒಂದೊಮ್ಮೆ ಟರ್ಕಿಗೆ ಮಾಡಿದಂತೆ ಭಾರತದ ಮೇಲೂ ನಿರ್ಬಂಧ ಹೇರುವುದಕ್ಕೆ ಅಮೆರಿಕ ಮುಂದಾದರೆ ಏನಾಗಬಹುದು? ಆದರೆ ಅಮೆರಿಕ ಹಾಗೆ ಮಾಡದು, ಏಕೆಂದರೆ ಚೀನಾ ವಿರುದ್ಧ ಗುರಾಣಿಯಾಗಿ ಅದು ಭಾರತವನ್ನು ಪ್ರತಿಹಂತದಲ್ಲೂ ಬಳಸಿಕೊಳ್ಳುತ್ತದೆ. ಚೀನಾ ಹೇಳಿದಂತೆ ಕುಣಿಯುವ ಪಾಕಿಸ್ತಾನದಿಂದ ಅಮೆರಿಕ ಏನನ್ನೂ ನಿರೀಕ್ಷಿಸುತ್ತಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಕಳೆದ ವಾರ ಅಮೆರಿಕ ಆಯೋಜಿಸಿದ್ದ ೧೧೦ ರಾಷ್ಟ್ರಗಳ ಪ್ರಜಾಸತ್ತಾತ್ಮಕ ಸಮ್ಮೇಳನದಲ್ಲಿ ಪಾಕಿಸ್ತಾನ ಭಾಗವಸಲಿಲ್ಲ.

ಏಕೆಂದರೆ ಅದು ಚೀನಾದ ಅಪ್ಪಣೆಗೆ ತಲೆಬಾಗುವ ಪರಿಸ್ಥಿತಿ ತಂದುಕೊಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಬಲಿಷ್ಠ ರಾಷ್ಟ್ರ ಎಂಬುದನ್ನು ಅಮೆರಿಕ
ಕಂಡುಕೊಂಡಿದೆ. ಹೆದ್ದಾರಿಗಳೂ ಸೇರಿದಂತೆ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಭಾರತದಲ್ಲಾಗುತ್ತಿರುವ ಅಭಿವೃದ್ಧಿಯ ವೇಗ ಚೆನ್ನಾಗಿದೆ. ಕರೋನಾ ಮಹಾಮಾರಿಯ ಕಾಲಘಟ್ಟದಲ್ಲಿ ಭಾರತ ತನ್ನ ಕ್ಷಮತೆ, ಆಡಳಿತಾತ್ಮಕ ನಿರ್ವಹಣಾ ಕೌಶಲದಿಂದ ವಿಶ್ವದ ಗಮನ ಸೆಳೆದಿದೆ. ಭಾರತದ ಯುವ ಸಮೂ ಹದ ಪ್ರಾಬಲ್ಯ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರಾಗಿರುವವರು ಭಾರತೀಯರೇ ಆಗಿದ್ದಾರೆ. ಭಾರತದ ಪ್ರತಿಭೆಗಳು ವಿಶ್ವದೆಲ್ಲೆಡೆ ಪಸರಿಸಿದ್ದಾರೆ.

ಹಿಂದೂಮಹಾಸಾಗರದಲ್ಲಿ ಚೀನಾದ ಪಾರಮ್ಯವನ್ನು ತಡೆಯಬೇಕಾಗಿರುವುದು ತುರ್ತಾಗಿ ಆಗಬೇಕಿರುವ ಮಹತ್ವದ ಕಾರ್ಯ. ಭಾರತದ ಸಹಕಾರ ವಿಲ್ಲದೇ ಇದು ಸಾಧ್ಯವಾಗದು. ಚೈನೀಸ್ ಡ್ರಾಗನ್‌ಗಳನ್ನು ಹತ್ತಿಕ್ಕುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ. ಹಾಗಾಗಿ ಭಾರತದೊಂದಿಗಿನ ಸ್ನೇಹ ಸಂಬಂಧ ಗಳನ್ನು ಸಡಿಲಗೊಳಿಸಿಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗದು. ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ನಡುವಣ ಸಹಭಾಗಿತ್ವದ ಪ್ರಮಾಣ ಕಳೆದ 15 ವರ್ಷಗಳಲ್ಲಿ ತುಂಬಾ ಹೆಚ್ಚಾಗಿದೆ. ಅಮೆರಿಕದ ಜತೆಗೂ ಭಾರತ ಅನೇಕ ಶಸಾಸ  ಒಪ್ಪಂದಗಳಿಗೆ ಸಹಿಹಾಕಿದೆ. ಈ ಎಲ್ಲ ಕಾರಣಗಳಿಂದಾಗಿ ಭಾರತ ಮತ್ತು ಅಮೆರಿಕ ಸಂಬಂಧಗಳು ನಿಕಟವಾಗಿದ್ದು, ಭಾರತ ಅಮೆರಿಕದೊಂದಿಗೆ ಅಷ್ಟೊಂದು ಬಾಂಧವ್ಯದಲ್ಲಿರುವುದನ್ನು ಕಂಡು ರಷ್ಯಾ ಗಾಬರಿಗೊಳಗಾಗಿತ್ತು.

ಚೀನಾದೊಂದಿಗಿನ ತನ್ನ  ಬಾಂಧವ್ಯವನ್ನು ಗಟ್ಟಿಗೊಳಿಸಿರುವ ರಷ್ಯಾ, ಯಾವ ಕಾರಣಕ್ಕಾಗಿ ಭಾರತ ದೇಶವು ಅಮೆರಿಕ-ಜಪಾನ್ -ಆಸ್ಟ್ರೆಲಿಯಾಗಳ ಕೂಟಕ್ಕೆ ಸೇರಿಕೊಂಡಿದೆ ಎಂಬ ದಿಗಿಲಿನಲ್ಲಿತ್ತು. ಇಂಡೋ-ಪೆಸಿಫಿಕ್ ಪ್ರಾಂತ್ಯದ ಪಾಶ್ಚಾತ್ಯ ದೇಶಗಳ ಪೈಕಿ ಚೀನಾ ವಿರುದ್ಧ ಭಾರತ ಒಂದು ದಾಳವಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ಹೇಳಿಕೆಯೊಂದರಲ್ಲಿ ಪ್ರತಿಕ್ರಿಯಿಸಿದ್ದರು.

ಭಾರತದ ರಾಷ್ಟೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ
ಸೃಂಗಾಲ ಜತೆಗೂ ಈ ವಿಚಾರವನ್ನು ರಷ್ಯನ್ ಅಧಿಕಾರಿಗಳು ಚರ್ಚಿಸಿದ್ದಾರೆ. ಆದರೆ ಭಾರತದ ಕಡೆಯಿಂದ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ. ಅಫ್ಘಾನಿಸ್ತಾನದ ಬಿಕ್ಕಟ್ಟು ಪರಿಹಾರದ ಕುರಿತಾದ ಪ್ರಾಥಮಿಕ ಸಭೆಗಳಿಗೆ ರಷ್ಯಾ ಭಾರತವನ್ನು ಆಹ್ವಾನಿಸಿಯೇ ಇರಲಿಲ್ಲ. ಆದರೆ ಭಾರತದ ಉಪಸ್ಥಿತಿ ಇಲ್ಲದೇ ಅಫ್ಘಾನಿಸ್ತಾನದ ಬಿಕ್ಕಟ್ಟು ಶಮನವಾಗುವುದು ಸಾಧ್ಯವೇ ಇಲ್ಲ ಎಂಬುದು ಭಾರತದ ನಡೆಯಿಂದ ಎಲ್ಲರ ಅರಿವಿಗೆ ಬಂದಿದೆ.

ವಿಶ್ವಮಟ್ಟದಲ್ಲಿ ಸ್ಥಾಪಿತವಾಗುವ ಯಾವುದೇ ಗುಂಪುಗಳಿಗೆ ಸೇರದಿರುವಂತೆ ನಿರ್ಧರಿಸಿರುವ ಭಾರತದ ನೀತಿ ನಿಚ್ಚಳವಾದದ್ದು. ಇದು ಜವಾಹರಲಾಲ್ ನೆಹರು ಕಾಲದಿಂದಲೂ ಚಾಲ್ತಿಯಲ್ಲಿರುವ ನೀತಿ. ಅಲಿಪ್ತ ನೀತಿಗೆ ತಳಪಾಯ ಹಾಕಿದವರೇ ಪಂಡಿತ್ ನೆಹರು. ರಾಜತಾಂತ್ರಿಕವಾಗಿ ರಷ್ಯಾ ಜತೆಗಿನ ಗೆಳೆ ತನ ಬೆಳೆಯಿತು. ಪಾಕಿಸ್ತಾನವನ್ನು ದಾಳವಾಗಿ ಬಳಸಿಕೊಂಡ ಅಮೆರಿಕ ದಶಕಗಳ ಕಾಲ ಅದಕ್ಕೆ ತನ್ನ ಬೆಂಬಲವನ್ನು ಕೊಟ್ಟಿತು. ಭಾರತದಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿದ ಪಕ್ಷಗಳು ಯಾವುದೇ ಇರಬಹುದು, ಯಾರೇ ಪ್ರಧಾನಮಂತ್ರಿಗಳಾಗಿರಬಹುದು, ಆದರೆ ದೇಶದ ರಕ್ಷಣೆಯ ವಿಚಾರಕ್ಕೆ ಬಂದಾಗ ಅವರ‍್ಯಾರೂ ರಾಜಿಮಾಡಿಕೊಳ್ಳಲಿಲ್ಲ.

ಪೂರ್ವ ಪ್ರಧಾನಮಂತ್ರಿ ಇಂದ್ರಕುಮಾರ್ ಗುಜ್ರಾಲ್ ನನಗೆ ಹೇಳಿದ್ದ ಒಂದು ಸಂಗತಿಯನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ. ಅದು ಗುಜ್ರಾಲ್ ಅವರು ಭಾರತದ ರಾಯಭಾರಿಯಾಗಿ ರಷ್ಯಾದಲ್ಲಿದ್ದ ಸಂದರ್ಭದ ಘಟನೆ. ಮೊರಾರ್ಜಿ ದೇಸಾಯಿಯವರು ದೇಶದ ಪ್ರಧಾನಮಂತ್ರಿಗಳಾದಾಗ, ಗುಜ್ರಾಲ್ ತಮ್ಮ
ರಾಯಭಾರಿ ಹುದ್ದೆಗೆ ರಾಜೀನಾಮೆ ನೀಡಿ ದೆಹಲಿಗೆ ವಾಪಸಾದರು. ಮೊರಾರ್ಜಿಯವರನ್ನು ಭೇಟಿಯಾಗಲು ಗುಜ್ರಾಲ್ ಹೋದಾಗ, ನೀವ್ಯಾಕೆ ರಾಜೀ ನಾಮೆ ಕೊಟ್ಟು ಬಂದಿರಿ ಎಂಬ ಪ್ರಶ್ನೆ ಎದುರಾಯಿತು.

ನಿಮ್ಮ ಅಮೆರಿಕ ಪರ ನಿಲುವುಗಳ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಿದೆ ಎಂದು ಗುಜ್ರಾಲರು ಮೊರಾರ್ಜಿ ದೇಸಾಯಿಯವರಿಗೆ ಮಾರುತ್ತರ ಕೊಟ್ಟರು. ನೀವು ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಮುಂದುವರಿಯಬೇಕೆಂದು ದೇಸಾಯಿ ಒತ್ತಾಯಿಸಿದರು. ಆ ನಂತರದಲ್ಲಿ ಭಾರತ-ರಷ್ಯಾ
ನಡುವೆ ಅನೇಕ ನಿರ್ಣಾಯಕ ಒಪ್ಪಂದಗಳು ಏರ್ಪಟ್ಟವು. ನಮ್ಮ ಸಂಕಷ್ಟದ ಸಮಯದಲ್ಲಿ ಅಮೆರಿಕ ಹಳಸಿದ ಗೋಧಿಯನ್ನು ಕೊಡುವ ಮೂಲಕ
ನಮಗೆಷ್ಟು ಅವಮಾನ ಮಾಡಿದೆ ಎಂಬುದು ಎಲ್ಲರಿಗೂ ನೆನಪಿರಬೇಕು.

ಅಂತಹ ಹಳಸಲು ಗೋಧಿಯನ್ನು ವಾಪಸು ಕಳಿಸುವುದಾಗಿ ಪತ್ರ ಬರೆದ ಆಗಿನ ಪ್ರಧಾನಿ ಇಂದಿರಾಗಾಂಧಿ, ನೀವು ಕಳುಹಿಸಿರುವ ಗೋಧಿಯನ್ನು ಇಲ್ಲಿ ಪ್ರಾಣಿಗಳೂ ತಿನ್ನಲಾರವು, ನಿಮ್ಮ ದೇಶದಲ್ಲಿ ಮನುಷ್ಯರು ಅದನ್ನೇ ತಿನ್ನುವುದಾದರೆ ಅವರಿಗೇ ತಿನ್ನಿಸಿ ಎಂಬ ದಿಟ್ಟ ಉತ್ತರವನ್ನು ಕೊಟ್ಟಿದ್ದರು.
ಭಾರತ ಎಂದಿಗೂ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ಸಂದರ್ಭಗಳಲ್ಲೂ ಅದು ತಲೆ ಎತ್ತಿ ನಿಂತಿದೆ. ಅದು ನಮ್ಮ ನೆಲದ ಸಂಪ್ರದಾಯ. ಈ ಸಂಪ್ರದಾಯವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಮುಂದುವರಿಸಿಕೊಂಡು ಮುನ್ನಡೆದಿದ್ದಾರೆ.

ಯಾರೂ ನಮ್ಮತ್ತ ಕೆಟ್ಟ ದೃಷ್ಟಿಯನ್ನು ಬೀರುವುದಾಗಲೀ, ಹುಬ್ಬೇರಿಸಿ ನೋಡುವುದಾಗಲೀ ಸಾಧ್ಯವಿಲ್ಲದ ಮಾತು. ನಮಗೆ ನಮ್ಮ ಶಕ್ತಿಯ ಅರಿವಿದೆ, ಯಾರೂ ನಮ್ಮನ್ನು ಬಾಗಿಸಲಾರರು. ‘ಸಾರೇ ಜಹಾ ಸೆ ಅಚ್ಚಾ , ಹಿಂದೂಸ್ತಾನ್ ಹಮಾರಾ’ ಎಂಬುದು ನಮಗೆಲ್ಲ ಖಂಡಿತವಾಗಿಯೂ ಗೊತ್ತಿದೆ.

(ಲೇಖಕರು ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಖ್ಯಾತ ಪತ್ರಕರ್ತರು)