Sunday, 3rd November 2024

ಇಂಥ ಮಾತನ್ನು ಸ್ವಾಮೀಜಿಗಳು ಹೇಳಿಸಿಕೊಳ್ಳಬೇಕೇ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಈಗಲಾದರೂ ನಮ್ಮ ಸ್ವಾಮೀಜಿಗಳು ‘ತಪೋಭಂಗ’ಗೊಂಡು ಎಚ್ಚೆತ್ತು ಯಡಿಯೂರಪ್ಪನವರ ಮಾತನ್ನು ಗಂಭೀರವಾಗಿ ಪರಿಗಣಿಸಿ ಎಸಿ ಕಾರು, ಓಸಿ ವೈಭವ, ಘಾಸಿ ಜಾತಿಯನ್ನು ತ್ಯಜಿಸಿ, ಧರ್ಮ ಕಂಟಕ ವಿಚಾರಗಳ ವಿರುದ್ಧ ಒಗ್ಗೂಡಬೇಕಿದೆ. ಕಾರ್ಯನಿರತ ಒಂದು ‘ಧರ್ಮಸಂಸತ್, ಸ್ಥಾಪಿಸಿ ಕಾವಿಯ ಮೌಲ್ಯ ಹೆಚ್ಚಿಸಿಕೊಳ್ಳಬೇಕಿದೆ.

ತುತ್ತು ಅನ್ನಕ್ಕೂ ದಟ್ಟದರಿದ್ರ ತಟ್ಟಿರುವ ಪಾಕಿಸ್ತಾನ, ೧೯೪೭ರಿಂದಲೂ ತನ್ನಲ್ಲಿರುವ ಹಿಂದೂ ಗಳನ್ನು, ದೇವಾಲಯಗಳನ್ನು ಉಳಿಸಿಕೊಂಡು ಬಂದಿದ್ದರೆ ಇಂದು ಅಂಥ ಮಠಮಂದಿರಗಳಿಂದ ಅನ್ನದಾಸೋಹದ ಮೂಲಕ ಒಪ್ಪತ್ತಿನ ಊಟವಾದರೂ ದೊರಕುತ್ತಿತ್ತೇನೋ. ಆದರೆ ಅಲ್ಲಿನ ಧರ್ಮಾಂಧರು ಹಿಂದೂಗಳ ಅಸ್ತಿತ್ವವನ್ನು ನಿರಂತರ ಸರ್ವನಾಶ ಮಾಡುತ್ತಲೇ ಬಂದರು. ಇನ್ನೊಂದು ಕಡೆ ದೇಶದ ಜನರಿಗೆ ಮೂಲಭೂತ ಅಗ್ಯತ ವಾದ ಕೃಷಿ, ತೋಟಗಾರಿಕೆ, ಹೈನು ಗಾರಿಕೆಗಿಂತ ಭಾರತದ ಮೇಲೆ ದಾಳಿಮಾಡಲೋಸಗವೇ ತನ್ನ ಸೇನೆಗೆ, ಭಯೋತ್ಪಾದನೆಗೇ ಹೆಚ್ಚು ಹಣವನ್ನು ವ್ಯಯಿಸಿ ಇಂದು ವಿಶ್ವದ ಮುಂದೆ ತಿರುಪೆ ಎತ್ತುವ ದುರ್ಗತಿಗೆ ಬಂದು ನಿಂತಿದೆ.

ಇದಕ್ಕೆ ನೇರ ಕಾರಣ ‘ಮಾಡಬಾರದ್ದು ಮಾಡಿದರೆ ಆಗ ಬಾರದು ಆಗುತ್ತದೆ’ ಎಂಬ ನೀತಿ ಮತ್ತು ಯುದ್ಧ ಮಾಡದೆಯೇ ಪಾಕಿಸ್ತಾನವನ್ನು ಭಿಕಾರಿಯಾಗಿಸಿದ ಪ್ರಧಾನಿ ಮೋದಿಯವರ ರಾಜ ತಾಂತ್ರಿಕತೆಯ ಫಲ. ಹೀಗಿದ್ದರೂ ನಮ್ಮಲ್ಲಿನ ದೇಶದ್ರೋಹಿಗಳಿಗೆ ಪಾಕಿಸ್ತಾನವೇ ಸ್ವರ್ಗ, ಪ್ರಧಾನಿ ಮೋದಿ ಹಿಟ್ಲರ್ ಮತ್ತು ಸಸ್ಯಹಾರ ತಿನ್ನುವವರೇ ಹೆಚ್ಚು ಕ್ರೂರಿಗಳು, ತುಪ್ಪ ತಿನ್ನುವವರಿಂದ ದೇಶ ಹಾಳು ಎಂಬ ಅಯೋಗ್ಯರ ವಾದಗಳು.

ಹಿಂದೂ ಧರ್ಮವನ್ನು ನಾಶಮಾಡುವುದಕ್ಕಾಗಿಯೇ ಮಿಷನರಿಗಳು ಮತ್ತು ಅದಕ್ಕೆ ತಲೆಹಿಡಿಯುವ ರಾಜಕಾರಣಿಗಳಿಂದ ಮತಾಂತರಕ್ಕಾಗಿನ ಆಮಿಷ ನಿರಂತರವಾಗಿದೆ. ಈ ಕುರಿತು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ವೈಚಾರಿಕತೆ
ಯನ್ನು ತಿರುಚಿ, ಅಪಪ್ರಚಾರಮಾಡಿ ಕೋಟ್ಯಂತರ ಹಿಂದೂಗಳನ್ನು ಮತಾಂತರಿಸಿ ವೋಟ್‌ಬ್ಯಾಂಕ್ ಗಳಾಗಿಸಿದ್ದಾರೆ. ಈಗ ಹಿಂದೂ ಮನೆಗಳಿಗೆ ತೆರಳಿ ದೇವರ ಪಟಗಳನ್ನು ತೆಗೆಸಿ ಬಿಸಾಡುವ ಮೂರ್ಖರ ಸಂತತಿಯೂ ಹುಟ್ಟಿಕೊಂಡಿದೆ. ಮಾಡಲು ಕೆಲಸವಿಲ್ಲದ ‘ಎ’ ಸರ್ಟಿಫಿಕೇಟ್ ಗಿರಾಕಿಗಳು ಆರ್ಯ- ದ್ರಾವಿಡ ಎಂಬ ಕಪೋಲಕಲ್ಪಿತ ರೋಗವನ್ನು ಹರಡುತ್ತಿದ್ದಾರೆ.

ಮತ್ತೊಂದೆಡೆ ಧರ್ಮ ರಕ್ಷಣೆಯೇ ಪರಮ ಕರ್ತವ್ಯವಾಗಿರುವ ಕಾವಿತೊಟ್ಟ ಸ್ವಾಮೀಜಿಗಳು ಎಲ್ಲ ಬಿಟ್ಟು ಜಾತಿಗಾಗಿ ಸಂವಿಧಾನದ ವಿರುದ್ಧ ಅವೈಜ್ಞಾನಿಕ ಮೀಸಲಿಗಾಗಿ ಬೀದಿಗಿಳಿಯುತ್ತಿದ್ದಾರೆ. ಇಂಥವರನ್ನೆಲ್ಲ ಒಟ್ಟು ಸೇರಿಸಿ ವಿಶೇಷ ಏರೋಪ್ಲೇನ್ ಹತ್ತಿಸಿ ಪಾಕಿಸ್ತಾನ, ಅಪ್ಘಾನಿಸ್ತಾನಕ್ಕೆ
ಒಂದು ಆರು ತಿಂಗಳು ‘ಜಾಲಿ ಟ್ರಿಪ್‌ಗೆ’ ಕಳಿಸಬೇಕು. ಆ ನಂತರವಾದರೂ ಈ ಬೇತಾಳಗಳಿಗೆ ಭಾರತದ ಬೆಲೆ, ಸನಾತನದ ನೆಲೆ ಏನೆಂಬ ಜ್ಞಾನೋದಯವಾಗುತ್ತದೆ. ಈ ಕುತಂತ್ರಿ ಕ್ರಿಶ್ಚಿಯನ್ ಮಿಷನರಿಗಳು ಏನೆಲ್ಲ ಆಮಿಷಗಳನ್ನೊಡ್ಡಿ ಹಿಂದೂಗಳನ್ನು ಮತಾಂತರ ಮಾಡಿದರೂ ದೇಶದಲ್ಲಿ ಹೊಟ್ಟೆ ಹಸಿದಾಗ ಕೂರಿಸಿ ಅನ್ನ ನೀಡುವುದು ಧರ್ಮಸ್ಥಳ, ಹೊರನಾಡು, ಸಿದ್ಧಗಂಗೆ, ಶಿರಡಿ, ಶೃಂಗೇರಿಯಂಥ ದೇಗುಲಗಳು ಮತ್ತು ಮಠಗಳೇ ಹೊರತು ಯಾವುದೇ ಮಸೀದಿ- ಚರ್ಚುಗಳಲ್ಲ. ಇಂಥ ಕ್ಷೇತ್ರಗಳಲ್ಲಿ ಅದ್ಯಾವ ಪಾಪಿಯೇ ಆಗಿರಲಿ, ಅದೇನು ಹೊಲಸು ತಿಂದು ಬಂದವನಾದರೂ ಅದ್ಯಾವುದನ್ನೂ ಲೆಕ್ಕಿಸದೇ ಹೊಟ್ಟೆ ತುಂಬ ಅನ್ನವನ್ನಿಕ್ಕುತ್ತವೆ.

ಅನೇಕ ಮಠಗಳು ಅನ್ನ-ಅಕ್ಷರ-ಆಶ್ರಯ-ವೈದ್ಯ ದಾಸೋಹವೆಂಬ ಸಾಮಾಜಿಕ ಕೆಲಸಗಳನ್ನು ಮಾಡುತ್ತಿವೆ. ಇದೆಲ್ಲವೂ ಸ್ತುತ್ಯರ್ಹ. ಆದರೆ, ಅದರಾಚೆಗೂ ಧರ್ಮ ರಕ್ಷಣೆಯೆಂಬ ಮೂಲಭೂತ ಕರ್ತವ್ಯವಿರುವುದನ್ನು ಬಹುತೇಕ ಮಠಗಳು ಮರೆತೇಬಿಟ್ಟಿವೆ. ಯಡಿಯೂರಪ್ಪ-ಸಿದ್ದರಾಮಯ್ಯ-ದೇವೇಗೌಡರ ಒಗ್ಗಟ್ಟನ್ನು ನೋಡಬಹುದೇನೋ. ಆದರೆ ಈ ಜಾತಿ ಮಠಗಳ ಸ್ವಾಮೀಜಿಗಳು ಒಗ್ಗೂಡುವುದನ್ನು ನೋಡುವುದು ಪೂರ್ಣಗ್ರಹಣ ಕಂಡಂತಾಗಿದೆ.

ಬ್ರಾಹ್ಮಣರ ಮಠಗಳ ಶೃಂಗೇರಿ, ಮಂತ್ರಾಲಯ, ಉಡುಪಿ, ರಾಮಚಂದ್ರಪುರ ಮಠದ ಶ್ರೀಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿರಲಿ, ಇವರಗಳ ಮಧ್ಯೆ ದೊಡ್ಡ ಗೋಡೆಯೇ ಬೆಳೆದು ನಿಂತಿದೆ ಎಂಬ ಭಾವ ಜನರಲ್ಲಿ ಸ್ಥಾಪಿತವಾಗಿಬಿಟ್ಟಿದೆ. ಹಿಂದೆ ನಮ್ಮ ಹಂಪಿಗೆ ಬರುತ್ತಿದ್ದ ಪೇಜಾವರ ಶ್ರೀಗಳು ಯಂತ್ರೋದ್ಧಾರಕ ಹನುಮನ ಗುಡಿಗೆ ತೆರಳಿ ಹೊರಡುತ್ತಿದ್ದರು. ವಿರೂಪಾಕ್ಷ ದೇಗುಲಕ್ಕೆ ಬರುವುದೇ ಇಲ್ಲವೆಂಬ ನಿರಾಸೆ ಸ್ಥಳೀಯರಲ್ಲಿತ್ತು. ಇನ್ನು ವೀರಶೈವ ಲಿಂಗಾ ಯತರ ಅನೇಕ ಮಠಗಳು, ಒಕ್ಕಲಿಗ, ಕುರುಬ, ದಲಿತ, ವಾಲ್ಮೀಕಿ ಜನಾಂಗದ ಮಠಗಳ ಸ್ವಾಮೀಜಿಗಳು ಹೀಗೆ ಒಬ್ಬಬ್ಬರದೂ ಒಂದೊಂದು ದ್ವೀಪ ರಾಷ್ಟ್ರಗಳಂತೆ ಆಗಿಬಿಟ್ಟಿವೆ.

ಇವರೆಲ್ಲ ಅನ್ಯ ಜಾತಿಯ ಮಠಕ್ಕೆ ತೆರಳುವುದೆಂದರೆ ಅಮೆರಿಕ ಅಧ್ಯಕ್ಷ ಭಾರತಕ್ಕೆ ‘ಐತಿಹಾಸಿಕ’ ಭೇಟಿಕೊಟ್ಟಂತೆ. ಅಷ್ಟಲ್ಲದೇ ಹಿಂದೂ ಧರ್ಮದ ಒಬ್ಬೊಬ್ಬ ಇತಿಹಾಸಪುರುಷರಿಗೂ ಒಂದೊಂದು ಜಾತಿಯ ಮುದ್ರೆ ಹೊಡೆದು ಬ್ರಾಂಡ್ ಅಂಬಾಸಿಡರ್ ಆಗಿಸಿ ತಮ್ಮ ಮಠದ ಮುಂದೆ ಕಟೌಟ್‌ಗಳಾಗಿ ನಿಲ್ಲಿಸಿಕೊಂಡಿದ್ದಾರೆ. ಹೀಗೆ ಒಂದೊಂದು ಮಠಗಳೂ ತಮ್ಮ ಮಠ-ಜಾತಿಯ ಉದ್ಧಾರದ ಧ್ಯಾನದ ಮುಳುಗಿ ಹೋದರೆ ಮೇಲೆ ಹೇಳಲಾದ ಹಿಂದೂ
ಧರ್ಮಗೇಡಿಗಳು ಮತ್ತು ಸ್ವಧರ್ಮ ಘಾತಕರಿಂದಾಗುತ್ತಿರುವ ಧರ್ಮಾಘಾತವನ್ನು ತಡೆಯುವವರು ಯಾರು? ಮೊದಲಾಗಿ ಧರ್ಮವನ್ನು ರಕ್ಷಿಸಬೇಕಾದ ಸ್ವಾಮೀಜಿಗಳೇ ಹೀಗೆ ‘ಸರ್ವಸಂಗ ಪರಿತ್ಯಾಗಿ’ಯಾಗಿ ಕೂತರೆ ಗೋಹತ್ಯೆ, ಮತಾಂತರ, ಲವ್‌ಜೀಹಾದ್, ಆರ್ಯ-ದ್ರಾವಿಡ
ಭೇದವನ್ನು ತೊಳೆಯುವವರು ಯಾರು? ಮೊನ್ನೆ ನೋಡಿ, ಮೈಸೂರಿನ ಮತಿಭ್ರಮಣೆಗೊಳಗಾದವನೊಬ್ಬ ಶ್ರೀರಾಮರನ್ನು ಮತ್ತೇ ಅವಹೇಳನ ಮಾಡಿದ್ದಾನೆ.

ಭಗವದ್ಗೀತೆಗೆ ಬೆಂಕಿ ಇಡುತ್ತಾರೆ, ಹಿಂದೂ ದೇವತೆಗಳನ್ನೇ ಅವಮಾನಿಸುತ್ತಾರೆ. ಇಂಥವುಗಳನ್ನು ಸಹಿಸಿಕೊಳ್ಳದ ಹಿಂದೂಗಳು ತಿರುಗಿಬಿದ್ದರೆ ‘ಕೋಮವಾದಿ, ಆರೆಸ್ಸೆಸ್, ಹಿಂದೂ ಭಯೋತ್ಪಾದನೆ’ಯೆಂದು ಎಗರಿಬೀಳುತ್ತಾರೆ. ಹೀಗಾಗಿ ಧರ್ಮಕ್ಕೆ ಅವಮಾನವಾದಾಗ ಸಹಜವಾಗಿ ಸಿಡಿ ದೇಳುವ ಮಂದಿ ಪೊಲೀಸ್ ಠಾಣೆ, ಕೋರ್ಟ್ ಎಂದೆಲ್ಲ ಅಲೆದು ಹೈರಾಣಾಗಿ ಹಿಂದೂ ‘ಅನಾಥನಾಗುತ್ತಿದ್ದಾನೆ’. ಲದ್ದಿಜೀವಿಗಳು, ದುರ್ವಿಚಾರ ವ್ಯಾಧಿಗಳೇನೋ ನಾಯಿಗಳಂತೆ ಬೊಗಳುತ್ತವೆ.

ನಾವು ಮಠಾಧೀಶರಾಗಿ ಅವರಿಗೇಕೆ ಸ್ಪಂದಿಸಬೇಕು ಎಂದು ಸುಮ್ಮನಿರುವ ಕಾಲ ಇದಲ್ಲ. ಇಂದು ಬೊಗಳುವ ಹುಚ್ಚು ನಾಯಿಗಳು ನಾಳೆ
ಕಚ್ಚೆಯನ್ನು ಕಚ್ಚಿ ಎಳೆಯುತ್ತವೆ, ಸುಮ್ಮನಿದ್ದರೆ ತೊಡೆಗೇ ಬಾಯಿ ಹಾಕುತ್ತವೆ. ಆದ್ದರಿಂದ ಅದಕ್ಕೆ ದೊಣ್ಣೆ ತೋರಿಸಿ ಗದರುವ ಕೆಲಸವನ್ನಾದರೂ
ನಮ್ಮ ಸ್ವಾಮೀಜಿಗಳು ಒಗ್ಗಟ್ಟಿನ ಮೂಲಕ ಮಾಡಲೇ ಬೇಕು. ಇಂಥ ಧರ್ಮ ಕಂಟಕವಾದಾಗ ಎಲ್ಲ ಜಾತಿಯ ಸ್ವಾಮೀಜಿಗಳು ಒಕ್ಕೊರಲಿನಿಂದ ಖಂಡಿಸಿ ಸಾತ್ವಿಕ ಎಚ್ಚರಿಕೆಯನ್ನು ನೀಡುವಂಥ ಕೆಲಸವನ್ನು ಏಕೆ ಮಾಡುವುದಿಲ್ಲ? ರಾಜ್ಯದ ಯಾವ ಸ್ಥಳಗಳನ್ನೂ ಬಿಡದೆ ‘ಹೋಲ್‌ಸೇಲ್’ ಆಗಿ ಹಿಂದೂಗಳನ್ನು ಮತಾಂತರಿಸಿ ಹಿಂದೂ ದ್ವೇಷಿಗಳನ್ನಾಗಿ ಪರಿವರ್ತಿಸುತ್ತಿವೆ ಮಿಷನರಿಗಳು.

ಸೇರಬೇಕಾದ ಕಸಾಯಿಖಾನೆಗಳಿಗೆ ಸೇರುವ ಸಾಕಷ್ಟು ಗೋವುಗಳು ಸಮಯಕ್ಕೆ ಸರಿಯಾಗಿ ಬಲಿಯಾಗುತ್ತಲೇ ಇವೆ. ಹಿಂದೂಗಳ ಜನಸಂಖ್ಯೆ ಯನ್ನೇ ನಾಶಪಡಿಸುವ ತಂತ್ರದಲ್ಲಿ ಹಿಂದೂ ಹೆಣ್ಣುಮಕ್ಕಳ ಬಾಳನ್ನು ಲವ್ ಜಿಹಾದ್ ಕಬಳಿಸುತ್ತಿದೆ. ಹಿಂದೂಗಳಲ್ಲಿ ಭಯ ಭೀತಿ ಹುಟ್ಟಿಸುವ ಉದ್ದೇಶದಿಂದಲೇ ಹಿಂದೂ ಹೋರಾಟಗಾರರ ಹತ್ಯೆ, ಕುಕ್ಕರ್ ಬಾಂಬರ್‌ಗಳು ಹೆಚ್ಚಾಗುತ್ತಿದ್ದಾರೆ. ಆದರೂ ಯಾವ ಮಠಗಳೂ ಯಾವ ಸ್ವಾಮೀಜಿ ಗಳೂ ಇಂಥವುಗಳನ್ನು ಖಂಡಿಸಿ ಒಂದು ಹೇಳಿಕೆ ನೀಡಿದ್ದಿಲ್ಲ. ಆದರೆ ರಾಜಕಾರಣಿಗಳು ಮಾಡಬೇಕಾದ್ದ ಸಂವಿಧಾನಿಕ ಮೀಸಲು ಬೇಡಿಕೆಗಳ ಕೆಲಸವನ್ನು ಸ್ವಾಮೀಜಿಗಳು ಮಾಡಲು ಶುರುವಿಟ್ಟುಕೊಂಡಿದ್ದಾರೆ.

ಅಸಲಿಗೆ ಇವರುಗಳು ಮೀಸಲಾತಿಯನ್ನು ದಕ್ಕಿಸಿಕೊಂಡರೂ ಮುಂದೊಂದು ದಿನ ಈ ಸ್ವಾಮೀಜಿಗಳ ಪಲ್ಲಕ್ಕಿ ಹೊರಲು ಪಾದಪೂಜೆ ಮಾಡಲು ಹಿಂದೂಗಳೇ ಇಲ್ಲದಂತಾಗುವುದು ಜಿಹಾದಿಗಳ ‘ಮಿಷನ್ ೨೦೪೭’ಆಣೆಗೂ ಸತ್ಯ. ಮಠಗಳ ದಾಸೋಹಗಳೆಲ್ಲವೂ ಸರಿಯೇ. ಆದರೆ ಧರ್ಮಕ್ಕೆ ಕಂಟಕ-ಕಳಂಕ ತಟ್ಟಿದಾಗಲೂ ‘ತಪೋನಿರತ’ರಾಗುವುದು ಕಾವಿಧಾರಿಗಳ ಲಕ್ಷಣಗಳಲ್ಲ. ಇಂಥ ಕಾವಿಯನ್ನು ತೊಟ್ಟ ವಿದ್ಯಾರರು ಹರಿಹರಬುಕ್ಕರನ್ನು ಪ್ರೇರೇಪಿಸಿದರು, ವ್ಯಾಸರಾ ಯರು ಶ್ರೀಕೃಷ್ಣದೇವರಾಯರ ಸಿಂಹಾಸನವೇರಿ ಕುಯೋಗ ಕಳೆದರು, ಸ್ವಾಮಿವಿವೇಕಾನಂದರು ತೋರಿದ ಧರ್ಮಸ್ಪಂದನೆಯನ್ನು ವಿಶ್ವವೇ ಸ್ಮರಿಸುತ್ತದೆ.

ಮೊನ್ನೆ ಮಧ್ಯಪ್ರದೇಶದ ಬಾಗೇಶ್ವರಧಾಮದ ಸಂತ ಪಂಡಿತ್ ಧೀರೇಂದ್ರ ಶಾಸ್ತೀಜೀ ಬರಿಯ ಇಪ್ಪತ್ತಾರು ವಯಸ್ಸಿನ ಸಂತರು ಮಾಡಲೇಬೇಕಾದ ಕೆಲಸವನ್ನು ಮಾಡಲು ಆರಂಭಿಸಿದ್ದಾರೆ. ಸಂವಿಧಾನ ವಿರೋಧಿಯಾದ ಧರ್ಮಾಕ್ರಮಣ ಕುತಂತ್ರ ಮತಾಂತರದ ವಿರುದ್ಧ ದೊಡ್ಡ ಮಟ್ಟದ ಕಹಳೆಯೂದಿದ್ದಾರೆ. ಮೋಸದ ಮತಾಂತರಕ್ಕೆ ಬಲಿಯಾಗಿದ್ದ ಸಾವಿರಾರು ಹಿಂದೂಗಳನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುತ್ತಿದ್ದಾರೆ. ಅವರಿಗೆಲ್ಲ ವೇದಿಕೆ ಕಲ್ಪಿಸಿ ಅವರಿಗಾದ ನೋವನ್ನು ಅನುಭವವನ್ನು ಹೇಳಿಕೊಳ್ಳುವಂಥ ಅವಕಾಶ ನೀಡಿದ್ದಾರೆ. ಆ ಮೂಲಕ ಮಿಷನರಿಗಳಿಗೆ ಮರ್ಮಾಘಾತ ನೀಡಿದ್ದಾರೆ.

ನಾವು ಬದುಕಿರುವವರೆಗೂ ಮೋಸದ ಮತಾಂತರವನ್ನು ತಡೆಯುತ್ತೇವೆ, ದೊಡ್ಡಮಟ್ಟದ ‘ಘರ್ ವಾಪಸಿ’ ಯಜ್ಞವನ್ನು ಮುಂದುವರಿಸುತ್ತೇವೆ, ನಾವು ಹಿಂದೂಗಳ ಒಗ್ಗಟ್ಟಿನತ್ತ ಗಮನ ಹರಿಸುತ್ತೇವೆ, ಸನಾತನ ಧರ್ಮದ ವಿರುದ್ಧ ಮಾತನಾಡುವವರನ್ನು ಬಹಿಷ್ಕರಿಸುತ್ತೇವೆ ಎಂದು ಸಿಡಿದೆದ್ದಿದ್ದಾರೆ. ಹೀಗಾಗಿ ಅವರ ಜೀವಕ್ಕೆ ಅಪಾಯವಿರುವುದನ್ನು ಅರಿತ ಸರಕಾರ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದೆ. ಆದರೆ ನಮ್ಮಲ್ಲಿನ ಸ್ವಾಮೀಜಿಗಳಿಗೆ ಧರ್ಮ ಉಳಿದರೆ ಮಾತ್ರ ಜಾತಿ ಉಳಿಯುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ. ಬಾಯಿ ಬಿಟ್ಟರೆ ಜಾತಿ, ಕಣ್ಣುಮುಚ್ಚಿದರೆ ಸರಕಾರವನ್ನು ನಮ್ಮ ಯಾವ ನಾಯಕ ಆಳಬೇಕೆಂಬ ಧ್ಯಾನ !

ಈ ನಿಟ್ಟಿನಲ್ಲಿ ಮೊನ್ನೆ ಯಡಿಯೂರಪ್ಪನವರು ಸುತ್ತೂರು ಮಠದಲ್ಲಿ ಸರಿಯಾಗಿ ಹೇಳಿದ್ದಾರೆ. ಮತಾಂತರ ನಿಷೇಧ ಕಾಯಿದೆಯಿಂದಲೇ ಎಲ್ಲವೂ ಸಾಧ್ಯವಿಲ್ಲ, ದಲಿತರು, ನಿರಾಶ್ರಿತರು, ಅಶಕ್ತರ ಬಳಿ ಸ್ವಾಮೀಜಿಗಳು ಕೂಡಲೇ ಧಾವಿಸಿ ನಮ್ಮ ಜನಗಳು ಮತಾಂತರ ಆಗುವುದಕ್ಕೆ ಅವಕಾಶ ನೀಡಬಾರರು, ಆಸೆ ಆಮಿಷಕ್ಕೆ ಬಲಿಯಾದ ಜನರಿಗೆ ಮಾರ್ಗ ದರ್ಶನ ನೀಡಬೇಕು, ಆ ಮೂಲಕ ಮತಾಂತರ ತಪ್ಪಿಸಿ, ಮತಾಂತರಗೊಂಡವರನ್ನು ಮತ್ತೇ ಹಿಂದೂ ಧರ್ಮಕ್ಕೆ ಕರೆತರುವ ಕೆಲಸವನ್ನು ಮಠಗಳು ನಿರ್ವಹಿಸಿಬೇಕು ಎಂದಿದ್ದಾರೆ.

ಇಂಥ ಮಾತುಗ ಳನ್ನು ಮಠಾಽಶರು ಹೇಳಿಸಿಕೊಳ್ಳಬೇಕೇ? ಈಗಲಾದರೂ ನಮ್ಮ ಸ್ವಾಮೀಜಿಗಳು ಗಂಭೀರವಾಗಿ ಪರಿಗಣಿಸಿ ‘ತಪೋಭಂಗ’ ಗೊಂಡು ಎಚ್ಚೆತ್ತು ಎಸಿ ಕಾರು, ಓಸಿ ವೈಭವ, ಘಾಸಿ ಜಾತಿಯನ್ನು ತ್ಯಜಿಸಿ ಬೀದಿಗೆ ಬಂದು ಧರ್ಮ ಕಂಟಕ ವಿಚಾರಗಳ ವಿರುದ್ಧ ಒಗ್ಗೂಡಬೇಕಿದೆ. ಕಾರ್ಯನಿರತವಾದ ಒಂದು ‘ಧರ್ಮಸಂಸತ್’ ಸ್ಥಾಪಿಸಿ ತಮ್ಮ ಕಾವಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಲೇ ಬೇಕಿದೆ. ವಾರಕ್ಕೊಂದು ಬಾರಿ ಎಲ್ಲ ಜಾತೀಯ ಸ್ವಾಮೀಜಿಗಳು ಪರಸ್ಪರ ಅನ್ಯ ಮಠಗಳಿಗೆ ಬೇಟಿಕೊಟ್ಟರೂ ಸಾಕು ಸಮಾಜಕ್ಕೆ ಬಲವಾದ ಸಂದೇಶ ತಲುಪುತ್ತದೆ. ಹೀಗಾದಲ್ಲಿ ಜಾತಿಗಳ ಮಧ್ಯೆ ಅನ್ಯೋನ್ಯತೆ ಹುಟ್ಟುತ್ತದೆ.

ಆದಿಶಂಕರಾ ಚಾರ್ಯರು, ಬಸವಣ್ಣನವರು, ಕನಕ-ಪುರಂ ದರರು, ಸರ್ವಜ್ಞಮೂರ್ತಿ ಇವರುಗಳೆಲ್ಲ ಕಾವಿ ಯನ್ನು ತೊಟ್ಟು ಮಠದಲ್ಲಿ ಕೂರಲಿಲ್ಲ.
ಬೀದಿಗಿ ಳಿದು ಧರ್ಮವನ್ನು ರಕ್ಷಿಸಿದ್ದರಿಂದಲೇ ಅವರನ್ನು ಇತಿಹಾಸ ಪುರುಷರನ್ನಾಗಿ ಕಾಣಲಾಗುತ್ತಿದೆ. ಆದರೆ ಇಂದಿನ ಬಹುತೇಕ ಕಾವಿಧಾರಿಗಳು
‘ಜಾತಿಪುರುಷರಾಗಿ, ಧರ್ಮ ವಿರಾಗಿ’ ಆಗಿ ಕುಳಿತುಕೊಂಡಿರುವುದು ದುರ್ದೈವ. ಸಮಾಜದಲ್ಲಿ ಚಮ್ಮಾರನಿಂದ ಹಿಡಿದು ಚಾಲಕರವರೆಗೂ
ಅವರವರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿzರೆ. ಆದರೆ ಈ ಕಾವಿಧಾರಿಗಳು ಮಾತ್ರ ತಮ್ಮ ಮೂಲಭೂತ ಕೆಲಸವನ್ನೇ ಮರೆತಿರುವುದು ಮಿಷನರಿಗಳ ಆಣೆಗೂ ಸತ್ಯ.