Friday, 13th December 2024

ಶಿಶುವಿನ ರೀತಿಯಲ್ಲೇ ಸಸಿಗಳನ್ನು ಪೋಷಿಸೋಣ

ಅಭಿಮತ

ಮರಿಲಿಂಗಗೌಡ ಮಾಲಿಪಾಟೀಲ್

ಉತ್ತರ ಭಾರತದಲ್ಲಿ ಪ್ರಕೃತಿ ಎಚ್ಚರಿಕೆಯ ಘಂಟೆ ಬಾರಿಸಿದೆ. ಕೇಳಿಸಿಕೊಂಡು ಎಚ್ಚೆತ್ತುಕೊಳ್ಳುವ, ತಿದ್ದಿಕೊಂಡು ನಡೆಯುವ ಬುದ್ಧಿ ಮನುಷ್ಯರಿಗೆ
ಇರಬೇಕಷ್ಟೇ.

ಕಾದ ಕಾವಲಿಯಂತಾದ ಉತ್ತರ ಭಾರತದಲ್ಲಿ ಬಿಸಿಲಿನ ಬೇಗೆಗೆ ಜನರು ಕಂಗೆಟ್ಟಿzರೆ. ಮಾರ್ಚ್ ೧ರಿಂದ ಜೂನ್ ೧೮ರ ನಡುವೆ ಬಿಸಿಲಿನ ಆಘಾತಕ್ಕೆ ೧೧೪ ಜನರು ಮೃತಪಟ್ಟಿ zರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿಗಳು ಹೇಳುತ್ತಿವೆ. ತೀವ್ರ ತಾಪಮಾನ ಏರಿಕೆಯಿಂದ ೪೦,೦೦೦ಕ್ಕೂ ಅಽಕ ಜನರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿzರೆ ಎಂಬ ಮಾಹಿತಿಯನ್ನೂ ಈ ವರದಿಗಳು ಹೊರಹಾಕಿವೆ. ಕರ್ನಾಟಕ ಉತ್ತರ ಭಾಗದಲ್ಲಿಯೂ ಬಿಸಿಲ ಝಳಕ್ಕೆ ಜನರು ಬಸವಳಿದಿರುವುದು ವಾಸ್ತವದ ಚಿತ್ರಣವನ್ನು ಎದುರಿಗಿಟ್ಟಿದೆ. ಪರಿಸ್ಥಿತಿಗೆ ತಕ್ಕಂತೆ ಅನಿವಾರ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ.

ವನಮಹೋತ್ಸವದ ಪ್ರಸ್ತುತತೆ
ಜುಲೈ ಮೊದಲ ವಾರದಲ್ಲಿ ಭಾರತದಲ್ಲಿ ವನಮಹೋತ್ಸವ ಅಂದರೆ ಮರಗಳ ಹಬ್ಬವನ್ನು ಆಚರಿಸಲಾಗುತ್ತದೆ. PಔಅಘೆS ಅ Sಉಉ Suಈಅ ಊu ಆಉSSಉ SuIuuU ಎನ್ನುವ ಸ್ಲೋಗನ್ ಜತೆಗೆ ಆಚರಿಸಲಾಗುವ ವನಮಹೋತ್ಸವ ಮರಗಳ ಮತ್ತು ಅರಣ್ಯದ ಸಂರಕ್ಷಣೆಯ ಮಹತ್ವದ ಅರಿವನ್ನು
ಜನರಿಗೆ ಮೂಡಿಸುತ್ತದೆ. ಇಂದು ನೆಡುವ ಒಂದು ಸಸಿ ಒಳ್ಳೆಯ ಭವಿಷ್ಯವನ್ನು ನಮಗಾಗಿ ನಿರ್ಮಿಸುತ್ತದೆ ಎನ್ನುವ ಸತ್ಯವನ್ನು ವನಮಹೋತ್ಸವ ತೆರೆದಿಡುತ್ತದೆ.

ಮರಗಳಿಲ್ಲದೆ ಮನುಷ್ಯನಿಲ್ಲ. ಭೂಮಿಯ ಮೇಲಿನ ಕಾರ್ಬನ್‌ನ ಪ್ರಮಾಣವನ್ನು ತಗ್ಗಿಸುವ ಶಕ್ತಿ ಮರಗಳಿಗಿದೆ. ಕಳೆದ ೩ ವರ್ಷಗಳಲ್ಲಿ ವಿಶ್ವದ ತಾಪಮಾನ ೧.೫ ಡಿಗ್ರಿ ಸೆಂಟಿಗ್ರೇಡ್ ಅಧಿಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಗಾಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಜೀವವೈವಿಧ್ಯತೆ ಹಾಳಾಗುತ್ತಿದೆ.
ಇದೆಲ್ಲದಕ್ಕೂ ಪರಿಹಾರವೆಂದರೆ ಅರಣ್ಯ ಸಂರಕ್ಷಣೆ ಒಂದೇ ಆಗಿದೆ.

ಸಾಧಾರಣವಾಗಿ ಶಿಕ್ಷಕರು ಪ್ರಾಥಮಿಕ ಶಾಲಾ ಮಟ್ಟ ದಲ್ಲಿಯೇ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ತಿಳಿಸುತ್ತಾರೆ. ಅರಣ್ಯ ಇಲಾಖೆಯ ಸಹಯೋಗ ದೊಂದಿಗೆ ಪ್ರಾಥಮಿಕ ಶಾಲೆಗಳಲ್ಲಿ ವನಮಹೋತ್ಸವ ಆಚರಿಸಲಾಗುತ್ತದೆ. ಒಂದಷ್ಟು ಗುಂಡಿಗಳನ್ನು ತೋಡಿ, ಗಿಡಗಳನ್ನು ನೆಟ್ಟು ಅದನ್ನು
ಪೋಷಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತದೆ. ಬಾಲ್ಯದಲ್ಲಿಯೇ ಅರಣ್ಯದ ಮಹತ್ವವನ್ನು ತಿಳಿಸುವ ವಿಧಾನ ಸ್ವಾಗತಾರ್ಹ. ಜತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಮಂತ್ರಿ ಮಹೋದಯರು ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸುತ್ತಾರೆ. ಬಿಸಿಲಿನ ಹೊಡೆತಕ್ಕೆ ಜನರು
ತತ್ತರಿಸುವ ಹಿನ್ನೆಲೆಯಲ್ಲಿ ಇದೆಲ್ಲ ಅಪೇಕ್ಷಣೀಯ!

ಆರಂಭಿಕ ಶೂರತ್ವ!
ಆದರೆ ಹೀಗೆ ನೆಟ್ಟ ಗಿಡಗಳು ಏನಾಗುತ್ತಿವೆ? ಗಿಡಗಳು ಬೆಳೆದಿವೆ ಎಂದು ಯಾರಾದರೂ ಖಚಿತಪಡಿಸಿಕೊಳ್ಳುತ್ತಾರಾ? ವಿದ್ಯಾರ್ಥಿಗಳು ಮುಂದೆ ತಮ್ಮ ಪಠ್ಯ ಚಟುವಟಿಕೆಗಳಲ್ಲಿ ಮುಳುಗಿ ಹೋಗುತ್ತಾರೆ. ಮಂತ್ರಿ ಮಹೋದಯರು ಮುಂದಿನ ವನಮಹೋತ್ಸವದ ಸಂದರ್ಭದಲ್ಲಿ ಕಳೆದ ವರ್ಷ ನೆಟ್ಟ ಗುಂಡಿ ಯಲ್ಲಿಯೇ ಈ ವರ್ಷವೂ ಇನ್ನೊಂದು ಸಸಿ ನೆಡುತ್ತಾರೆ ಎನ್ನುವುದು ಕಟುವಾದರೂ ಸತ್ಯ. ಹೀಗಾಗಿ ವನಮಹೋತ್ಸವ ಎನ್ನುವುದು ಆಚರಣೆಯಲ್ಲಿ ಇದೆಯೇ ಹೊರತು ಅನುಸರಣೆಯಲ್ಲಿ ಇಲ್ಲ ಎಂಬ ಮಾತನ್ನು ತೀವ್ರ ವಿಷಾದದಿಂದ ಹೇಳಬೇಕಾಗುತ್ತದೆ. ಗಿಡವನ್ನು ನೆಡುವುದು ಕೇವಲ ಆಡಂಬರ ಕ್ಕಷ್ಟೇ ಹೊರತು ಗಿಡಗಳ ಮಹತ್ವ ಅಂತರಂಗಕ್ಕೆ ಅರಿವಾಗದೇ ಇzಗ ಇಂಥಹದೆಲ್ಲ ಘಟಿಸುತ್ತವೆ ಎನ್ನುವುದು ವಿಪರ್ಯಾಸದ ಸಂಗತಿ.

ವಾತಾವರಣದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅರಣ್ಯಗಳು ತೀವ್ರಗತಿಯಲ್ಲಿ ನಾಶವಾಗುತ್ತಿವೆ ಎನ್ನುವುದು ಗಾಬರಿ ಹುಟ್ಟಿಸುವ ಸತ್ಯ. ಕಳೆದ ಒಂದು ದಶಕದಲ್ಲಿ ಶೇ.೧೬ರಷ್ಟು ಅರಣ್ಯ ನಾಶ ಭಾರತದಲ್ಲಿ ಆಗಿದೆ ಎನ್ನುವುದು ಕಳವಳ ಹುಟ್ಟಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಗಣಿಗಾರಿಕೆಯ ನೆಪದಲ್ಲಿ ಅವ್ಯಾಹತವಾಗಿ ಅರಣ್ಯಭಕ್ಷಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಮತೋಲವನ್ನು ಕಾಪಾಡಲು, ಅರಣ್ಯರಕ್ಷಣೆ ಅನಿವಾರ್ಯವಾಗಿದೆ. ಹೀಗಾಗಿ ವನಮಹೋತ್ಸವವನ್ನು ಪ್ರಾಮಾಣಿಕವಾಗಿ ಆಚರಿಸುವುದು ಕಾಲದ ಅಗತ್ಯವಾಗಿದೆ.

ಇರುವುದೊಂದೇ ಭೂಮಿ!
ಸದ್ಯಕ್ಕಂತೂ ನಮಗೆ ಇರುವುದು ಒಂದೇ ಭೂಮಿ. ಈ ಭೂಮಿಯ ಮೇಲಿನ ತಾಪಮಾನ ಏರಿಕೆ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಗಳನ್ನು ಕರಗಿಸುತ್ತದೆ. ಆ ಮೂಲಕ ಸಮುದ್ರದ ನೀರಿನ ಮಟ್ಟ ಏರಲಿದೆ ಎನ್ನುವುದು ವಿಜ್ಞಾನಿಗಳು ನೀಡಿರುವ ಎಚ್ಚರಿಕೆ. ಈ ಭೂಮಿಯನ್ನು ಉಳಿಸಿಕೊಳ್ಳಬೇಕಿದ್ದರೆ  ತಾಪಮಾನವನ್ನು ನಿಯಂತ್ರಿಸುವುದು ಅನಿವಾರ್ಯ. ಅದಕ್ಕಾಗಿ ಮರಗಳನ್ನು ಉಳಿಸಿ, ಅರಣ್ಯಗಳನ್ನು ಬೆಳೆಸುವುದು ಮಾನವನ ಜವಾಬ್ದಾರಿಯೇ ಆಗಿದೆ.

ಅರಣ್ಯಗಳು ನಮಗೆ ಯಾಕೆ ಬೇಕು? ಎನ್ನುವ ಪ್ರಶ್ನೆಗೆ ಒಂದು ನಿಮಿಷ ಯೋಚಿಸಿದರೂ ಉತ್ತರ ಹೊಳೆಯುತ್ತದೆ. ಕೆಲವು ದಶಕಗಳಷ್ಟು ಹಿಂದಕ್ಕೆ ಹೋದರೆ ನಾವು ಪಠ್ಯದಲ್ಲಿ ಓದುವ ವಾತಾವರಣದ ವಿಷಯಕ್ಕೂ ವಾಸ್ತವಕ್ಕೂ ಹೊಂದಾಣಿಕೆ ಆಗುತ್ತಿತ್ತು. ಮಳೆ, ಚಳಿ ಮತ್ತು ಬೇಸಿಗೆ ಕಾಲಗಳು ನಾಲ್ಕು ತಿಂಗಳುಗಳಂತೆ ವರ್ಷದಲ್ಲಿ ಹಂಚಿಕೆ ಆಗುತ್ತಿತ್ತು. ಈಗ ಹಾಗೆ ಇದೆಯಾ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ವರ್ಷದ ೧೦ ತಿಂಗಳಲ್ಲಿ ಮಳೆ ಬರುತ್ತದೆ. ಮಳೆಗಾಲ ಯಾವುದೆಂದೇ ಗೊತ್ತಾಗುವುದಿಲ್ಲ ಎಂದು ಜನರು ಆಡಿಕೊಳ್ಳುವುದು ಸಾಮಾನ್ಯವಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳು ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ.

ಕಾಲ ಕೆಟ್ಟಿದೆ ಎಂದು ಜನರು ಹೇಳುತ್ತಿದ್ದಾರಾದರೂ ಮನುಜನ ಸ್ವಯಂಕೃತ ಅಪರಾಧಕ್ಕೆ ಪ್ರಕೃತಿ ಕೊಡುತ್ತಿರುವ ಶಿಕ್ಷೆ ಇದು ಎಂದು ತಿಳಿಯಲು ಹೆಚ್ಚಿನ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ಎಷ್ಟೇ ಮಳೆ ಬಂದರೂ ಅರಣ್ಯ ಪ್ರದೇಶಗಳು ನೀರನ್ನು ಹಿಡಿದಿಟ್ಟುಕೊಳ್ಳುತ್ತಿದ್ದುದರಿಂದ ಪ್ರವಾಹದ ದೃಶ್ಯಗಳು ಕಡಿಮೆ ಇರುತ್ತಿತ್ತು. ಈಗ ಅರಣ್ಯಗಳೇ ಕಡಿಮೆಯಾಗಿವೆ. ಬಾನಿನಿಂದ ನೀರಿನ ಮಳೆ ನೇರವಾಗಿ ಹರಿಯತೊಡಗುತ್ತದೆ. ನದಿ ಪಾತ್ರಗಳಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ ವಸತಿ ಪ್ರದೇಶಕ್ಕೆ ನೀರು ಪ್ರವಾಹಸದೃಶವಾಗಿ ನುಗ್ಗುತ್ತದೆ. ಇದರಲ್ಲಿ ಯಾರದು ತಪ್ಪು? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಮನುಷ್ಯ-ಪ್ರಾಣಿ ಸಂಘರ್ಷಅರಣ್ಯದ ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ನುಗ್ಗುವುದು ಸರ್ವೇ ಸಾಮಾನ್ಯವಾಗಿದೆ. ‘ನಾವು ನಿಮ್ಮ ಪ್ರದೇಶಕ್ಕೆ ನುಗ್ಗುತ್ತಿಲ್ಲ.

ನೀವೇ ನಮ್ಮ ಪ್ರದೇಶವನ್ನು ಅತಿಕ್ರಮಿಸುತ್ತಿದ್ದೀರಿ’ ಎಂದು ಪ್ರಾಣಿಗಳು ಆರೋಪಿಸುವಂಥ ಪೋಸ್ಟ್‌ಗಳು ಫೇಸ್ ಬುಕ್‌ನಲ್ಲಿ ಕಾಣಿಸಿಕೊಂಡಾಗಲಾದರೂ ಮನುಷ್ಯರು ಚಿಂತಿಸಲು ಆರಂಭಿಸಬೇಕು. ನಮ್ಮ ಅಗತ್ಯಗಳಿಗೆ ಅರಣ್ಯಗಳನ್ನು ಕತ್ತರಿಸುವಾಗ ಕಾಡಿನಲ್ಲಿ ಜೀವಿಗಳಿವೆ, ಆ ಜೀವಿಗಳಿಗೆ ಅರಣ್ಯವೇ ಆಶ್ರಯ. ಅಲ್ಲಿ ನಾವು ಹಸ್ತಕ್ಷೇಪ ಮಾಡಿದರೆ ವನ್ಯಜೀವಿಗಳು ಏನು ಮಾಡಬೇಕು ಎಂದು ಪ್ರಶ್ನಿಸಿಕೊಳ್ಳದಿರುವಷ್ಟೂ ಮನುಷ್ಯ ತನ್ನ ಸಂವೇದನೆಯನ್ನು ಕಳೆದುಕೊಂಡಿದ್ದಾನೆ.

ಪರಿಣಾಮವಾಗಿ ಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ನುಗ್ಗುವ ವಿದ್ಯಮಾನಗಳು ದಿನನಿತ್ಯ ವರಿಯಾಗುತ್ತಿವೆ. ನಮ್ಮ ಹಕ್ಕುಗಳನ್ನು ಇತರರು ಅತಿಕ್ರಮಿಸಿ ದಾಗ ಮನುಷ್ಯರು ಪ್ರತಿ ಭಟಿಸಬಹುದು. ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಪಡೆಯಬಹುದು. ಆದರೆ ಮೂಕಜೀವಿಗಳು ಏನು ಮಾಡ
ಬೇಕು? ಎಲ್ಲಕ್ಕಿಂತ ಹೆಚ್ಚಾಗಿ ವನ್ಯಮೃಗಗಳಿಗೆ ಸಮಸ್ಯೆ ಉಂಟಾದರೂ ಅದು ಅಂತಿಮವಾಗಿ ಮನುಷ್ಯ ತಾನೇ ಎದುರಿಸಬೇಕಾದ ಸಮಸ್ಯೆ ಎನ್ನುವುದನ್ನು ಮೊದಲು ಅರಿಯಬೇಕು. ನಿಸರ್ಗ ಎನ್ನುವುದು ಒಂದು ಸರಪಳಿ. ಒಂದು ಕೊಂಡಿ ಕಿತ್ತುಬಂದರೂ ಸರಪಳಿ ಉಳಿಯಲಾರದು. ನಿಸರ್ಗವನ್ನು ಅದು ಇರಬೇಕಾದಂತೆ ಕಾಪಾಡುವುದು ನಮ್ಮದೇ ಜವಾಬ್ದಾರಿ. ಇಷ್ಟಕ್ಕೂ ಈ ಭೂಮಿಯ ಮೇಲಿದ್ದ ಅರಣ್ಯಗಳಲ್ಲಿ ಮರಗಳನ್ನು ಮೊದಲಿಗೆ ನೆಟ್ಟವರು ಯಾರು? ಮನುಷ್ಯ ಎನ್ನುವ ಜೀವಿ ಉಗಮವಾಗುವುದಕ್ಕೂ ಮೊದಲೇ ಭೂಮಿಯ ಮೇಲೆ ಅರಣ್ಯವಿತ್ತು.

ಭೂಮಿಯ ಮೇಲಿನ ಅರಣ್ಯಗಳು ಮನುಷ್ಯನ ಹಿತಕ್ಕಾಗಿಯೇ ಉದ್ಭವವಾಗಿದ್ದವು. ಅವುಗಳ ನಿಮಾರ್ಣದಲ್ಲಿ ಮನುಷ್ಯನ ಪಾತ್ರ ಏನೂ ಇಲ್ಲ. ಆದರೆ ನಮ್ಮ ಹಿತಕ್ಕಾಗಿಯೇ ಇರುವುದನ್ನು ನಾಶ ಮಾಡುವುದರಲ್ಲಿ ಮಾತ್ರ ಮನುಷ್ಯನಿಗೆ ಸರಿಸಾಟಿ ಯಾರೂ ಇಲ್ಲ.

ಜವಾಬ್ದಾರಿ ಅರಿಯೋಣ 
ತಡವಾಗಿಯಾದರೂ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ಪ್ರಕೃತಿ ಮನುಷ್ಯನಿಗೆ ಪಾಠ ಕಲಿಸುತ್ತಿದೆ. ಆದರೆ ಕಲಿಯುವ ಅಗತ್ಯ, ಜವಾಬ್ದಾರಿ ಎರಡೂ ನಮ್ಮದೇ. ಹೆಚ್ಚುತ್ತಿರುವ ಬಿಸಿಗಾಳಿಯಾಗಲಿ ಭೀಕರ ಮಳೆಯಾಗಲಿ ಹವಾಮಾನ ವೈಪರೀತ್ಯವಾಗಲಿ ನಮ್ಮದೇ ಅವಿವೇಕದ ಫಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಪರಿಸ್ಥಿತಿಯನ್ನು ಸುಧಾರಿಸುವ ಅವಕಾಶ ನಮ್ಮ ಕೈಯಲ್ಲಿಯೇ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು.
ನಾವು ನೆಟ್ಟು ಬೆಳೆಸುವ ಒಂದೊಂದು ಮರವೂ ಮನುಷ್ಯನ ಬದುಕಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ನೆಟ್ಟ ಸಸಿ ಒಂದೆರಡು ವರ್ಷ ಜೀವದಿಂದ ಇರುವಂತೆ ನೋಡಿಕೊಂಡರೆ ಸಾಕು, ಆಮೇಲೆ ಆ ಸಸಿ ಮರವಾಗಿ ಬೆಳೆದು ನೂರಾರು ವರ್ಷಗಳ ಕಾಲ ಮನುಜನ ಬದುಕಿಗೆ ಆಸರೆಯಾಗಿ
ನಿಲ್ಲುತ್ತದೆ. ಹೂ, ಹಣ್ಣುಗಳನ್ನು ನೀಡುತ್ತದೆ. ಪ್ರಾಣಿ ಪಕ್ಷಿಗಳಿಗೆ ಬದುಕಿಗೆ ಆಶ್ರಯ ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಸರ್ಗದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಬೆಂಗಳೂರಿನಲ್ಲಿಯೇ ಪರಿಶೀಲಿಸಿದರೂ ಮರಗಳನ್ನು ಸಂರಕ್ಷಿಸುವಂತ ಐಐಎಸ್ಸಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈ) ಜಾಲಹಳ್ಳಿಯಂಥ ಪ್ರದೇಶ ಗಳನ್ನು ಪ್ರವೇಶಿಸುತ್ತಿದ್ದಂತೆಯೇ ತಂಪಿನ ಅರಿವಾಗುತ್ತದೆ. ಮಳೆ ಬೀಳುತ್ತಿರುವಾಗ ಮರಗಳ ಅಡಿಯಲ್ಲಿ ನಡೆದು ಹೋಗುವುದು ಎಂಥ ಅನಿರ್ವಚನೀಯ ವಾದ ಆನಂದವನ್ನು ನೀಡುತ್ತವೆ ಎನ್ನುವುದು ಅನುಭವಿಸಿದವರಿಗೇ ವೇದ್ಯ. ಅಭಿವೃದ್ಧಿಗೆ ಕಾಂಕ್ರೀಟ್ ಕಟ್ಟಡಗಳು, ರಸ್ತೆಗಳು ಅಗತ್ಯವಾಗಿರ ಬಹುದು. ಆದರೆ ಮನುಷ್ಯರು ನೆಮ್ಮದಿಯಿಂದ ಬದುಕಬೇಕಿದ್ದರೆ ವೃಕ್ಷಗಳು ಅನಿವಾರ್ಯ.

ವನಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ನಮ್ಮ ಜವಾಬ್ದಾರಿಯನ್ನು ನೆನಪಿಸಿಕೊಳ್ಳೋಣ. ಜಾಗ ಮತ್ತು ಅವಕಾಶ ಇರುವವರು ಒಂದು ಸಸಿಯನ್ನು ನೆಟ್ಟು ಪೋಷಿಸುವುದನ್ನು ಕರ್ತವ್ಯ ಎಂದುಕೊಳ್ಳಬೇಕು ಶಿಶುವೊಂದನ್ನು ಪೋಷಿಸಿದಷ್ಟೇ ಜತನದಿಂದ ಸಸಿಯೊಂದನ್ನೂ ಪೋಷಿಸಬೇಕು. ವನಮಹೋತ್ಸವ ಆಚರಣೆಗಷ್ಟೇ ಸೀಮಿತವಾಗದಿರಲಿ, ಕಾಲದ ಅಗತ್ಯಕ್ಕೆ ಮನುಷ್ಯನ ಪ್ರತಿಸ್ಪಂದನೆಯಾಗಲಿ.

(ಲೇಖಕರು: ಹವ್ಯಾಸಿ ಬರಹಗಾರರು)