ಅವಲೋಕನ
ಹನಮಂತ ಸಿಮಿಕೆರಿ
ಪ್ರವಾಹ, ಬರ, ಭೂಕಂಪ, ಚಂಡಮಾರುತಗಳು ಮತ್ತು ಭೂಕುಸಿತಗಳು ಸೇರಿದಂತೆ ನೈಸರ್ಗಿಕ ವಿಪತ್ತುಗಳಿಗೆ ಹೆಚ್ಚು ಒಳಗಾಗುವ ದೇಶಗಳಲ್ಲಿ ಭಾರತವೂ ಒಂದು.
ಚಂಡಮಾರುತಗಳು ಸಾಮಾನ್ಯವಾಗಿ ಮೇ – ಜೂನ್ ಮತ್ತು ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಸಂಭವಿಸುತ್ತವೆ. ಅದು ದೇಶದ ಇಡೀ ಕರಾವಳಿಯ ಮೇಲೆ ಪರಿಣಾಮ ಬೀರುತ್ತದೆಯಾದರೂ, ಪಶ್ಚಿಮ ಕರಾವಳಿಗೆ ಹೋಲಿಸಿದರೆ ಪೂರ್ವ ಕರಾವಳಿಯು ಹೆಚ್ಚು ಪೀಡಿತವಾಗಿದೆ. ಅರೇಬಿಯನ್ ಸಮುದ್ರಕ್ಕಿಂತ ಹೆಚ್ಚಿನ ಚಂಡಮಾರುತಗಳು ಬಂಗಾಳಕೊಲ್ಲಿಯಲ್ಲಿ ಸಂಭವಿಸಿವೆ.
ವಿಪರೀತ ಹವಾಮಾನ ವೈಪರೀತ್ಯ ಕುರಿತಾದ ಅಧ್ಯಯನದ ಪ್ರಕಾರ, 1970 – 2019ರ 50 ವರ್ಷಗಳ ಅವಧಿಯಲ್ಲಿ 117 ಚಂಡ ಮಾರುತಗಳು ಭಾರತವನ್ನು ಅಪ್ಪಳಿಸಿವೆ. ಇದರಲ್ಲಿ 10 ಚಂಡಮಾರುತಗಳು ಅತ್ಯಂತ ಅಪಾಯಕಾರಿ ಎಂದು ಸಾಬೀತಾ ಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕರಾವಳಿಯನ್ನು ಹೊಂದಿದ್ದು, 84 ಕರಾವಳಿ ಜಿಲ್ಲೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಬಹುತೇಕ, ಚಂಡಮಾರುತಗಳಿಂದ ತತ್ತರಿಸಿ ಹೋಗಿವೆ. ಅದರಲ್ಲಿ ಪ್ರಮುಖ ನಾಲ್ಕು ರಾಜ್ಯಗಳು – ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ – ಪೂರ್ವ ಕರಾವಳಿಯ ಪಾಂಡಿಚೆರಿ.
ಚಂಡಮಾರುತಗಳಿಗೆ ಹೆಸರು ಇಡಲಾಗುವ ಪ್ರಕ್ರಿಯೆಯಲ್ಲಿ, 8 ದೇಶಗಳುವಕೊಡುಗೆಯನ್ನು ನೀಡುತ್ತವೆ. ಭಾರತೀಯ ಹವಾ ಮಾನ ಇಲಾಖೆಯಲ್ಲದೆ, ವಿಶ್ವ ಹವಾಮಾನ ಸಂಸ್ಥೆಯ ಆಶ್ರಯದಲ್ಲಿ ಚಂಡಮಾರುತಗಳಿಗೆ ಹೆಸರನ್ನು ನೀಡಲಾಗುತ್ತದೆ. ಭವಿಷ್ಯ ದಲ್ಲಿ ಸಂಭವಿಸುವ ಚಂಡಮಾರುತಗಳಿಗೂ ಈಗಾಗಲೇ ಹೆಸರು ಇಡಲಾಗಿದೆ. ಹಲವು ದೇಶಗಳು ಭಾರತೀಯ ಹವಾಮಾನ ಇಲಾಖೆ ಮತ್ತು ವಿಶ್ವ ಹವಾಮಾನ ಇಲಾಖೆಗೆ ಹೆಸರನ್ನು ಸೂಚಿಸುತ್ತವೆ. ಅದರಲ್ಲಿ ಸೂಕ್ತವಾದ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಫಾನಿ ಚಂಡಮಾರುತವು 2019ರ ಮೇ ತಿಂಗಳಲ್ಲಿ ಒಡಿಶಾ ರಾಜ್ಯಕ್ಕೆ ಅಪ್ಪಳಿಸಿ ಫಾನಿ, 40ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಓಖಿ ಚಂಡಮಾರುತವು ಉತ್ತರ ಹಿಂದೂ ಮಹಾಸಾಗರದ ಚಂಡಮಾರುತದ ಋತುವಿನ ಅತ್ಯಂತ ತೀವ್ರವಾದ ಮತ್ತು ಪ್ರಬಲ ಉಷ್ಣವಲಯದ ಚಂಡಮಾರುತವಾಗಿದೆ. ಅರಬ್ಬೀ ಸಮುದ್ರದ ಮುಖಾಂತರ ಕೇರಳ, ತಮಿಳುನಾಡು ಮತ್ತು ಗುಜರಾತ್ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿ, ಒಟ್ಟು 245 ಜನರು ಸಾವಿಗೆ ಕಾರಣವಾಯಿತು. ವರ್ದಾ ಚಂಡಮಾರುತವು 2016ರ ಡಿಸೆಂಬರ್ ತಿಂಗಳಿನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸಿ, ಬಳಿಕ ಭಾರತದ ಪೂರ್ವ ಕರಾವಳಿಯನ್ನೂ ದಾಟಿ ೩೮ ಜನರನ್ನು ಬಲಿಪಡೆಯಿತು.
ಹುದುದ್ ಚಂಡಮಾರುತವು ಬಲವಾದ ಉಷ್ಣವಲಯದ ಚಂಡಮಾರುತವಾಗಿದ್ದು, ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಹಾನಿಯನ್ನುಂಟು ಮಾಡಿತ್ತು. ಭಾರೀ ಗಾಳಿ ಮತ್ತು ಭಾರಿ ಮಳೆಯಿಂದಾಗಿ 124 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಫೈಲಿನ್ ಚಂಡಮಾರುತ ಅಕ್ಟೋಬರ್ 4, 2013 ರಂದು ಥೈಲ್ಯಾಂಡ್‌ನ ಕೊಲ್ಲಿಯೊಳಗೆ, ಪ್ರವೇಶಿಸಿ, ನಂತರ ಅಕ್ಟೋಬರ್ 6 ರಂದು ಪಶ್ಚಿಮ ಪೆಸಿಫಿಕ್ ಜಲಾನಯನ ಪ್ರದೇಶದಿಂದ ಹೊರಬಂದಿತು.
ದೇಶದಲ್ಲಿ 45 ಜನರು ಪ್ರಾಣ ಕಳೆದುಕೊಂಡರು. ಹೆಲೆನ್ ಚಂಡಮಾರುತ ನವೆಂಬರ್ 18, 2013 ರಂದು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದ್ದು, ಕನಿಷ್ಠ 11 ಜನರ ಬಲಿಪಡೆದಿತ್ತು. ನಿಲಾಮ್ ಚಂಡಮಾರುತ 2012ರ ಅಕ್ಟೋಬರ್ 31ರಂದು ಮಹಾಬಲಿ ಪುರಂ ಬಳಿ ಭೂಕುಸಿತವನ್ನುಉಂಟುಮಾಡಿದ್ದು, ಮೃತಪಟ್ಟವರ ಸಂಖ್ಯೆ 75 ಎಂದು ದಾಖಲಾಗಿದೆ.
ಫಿಯಾನ್ ಚಂಡಮಾರುತ 2009ರ ನವೆಂಬರ್ 4ರಂದು ಶ್ರೀಲಂಕಾದ ಕೊಲಂಬೊದ ನೈಋತ್ಯ ದಿಕ್ಕಿನ ಮುಖಾಂತರ ಪ್ರವೇಶಿ ಸಿತ್ತು. ಒಡಿಶಾ ಚಂಡಮಾರುತವು 1999ರ ಅಕ್ಟೋಬರ್ 25ರಂದು ಅಂಡಮಾನ್ ಸಮುದ್ರದಲ್ಲಿ ಉಷ್ಣ ವಲಯದ ಖಿನ್ನತೆಗೆ ಕಾರಣ ಉಂಟುಮಾಡಿ ಪಶ್ಚಿಮ – ವಾಯುವ್ಯ ಮಾರ್ಗದ ಮುಖಾಂತರ ಅಕ್ಟೋಬರ್ 29ರಂದು ಒಡಿಶಾದಲ್ಲಿ ಭೂಕುಸಿತಕ್ಕೆ ಕಾರಣವಾಯಿತು.
ಸುಮಾರು 10000 ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ವರದಿಯಾಗಿದೆ. ಚಿರಾಲಾ ಚಂಡಮಾರುತವು 1977ರ ನವೆಂಬರ್ 9-20ರ ಅವಧಿಯಲ್ಲಿ ಬಂಗಾಳಕೊಲ್ಲಿಯಲ್ಲಿ ತೀವ್ರವಾದ ಉಷ್ಣವಲಯದ ಚಂಡಮಾರುತ. 10000 ಜನರು ಪ್ರಾಣ ಕಳೆದು ಕೊಂಡಿದ್ದಾರೆಂದು ವರದಿಯಾಗಿದೆ.