Saturday, 14th December 2024

ಮತಾಂಧತೆಯ ಉತ್ತುಂಗದಲ್ಲಿ ಉಗ್ರರು

ವೀಕೆಂಡ್ ವಿತ್ ಮೋಹನ್

camohanbn@gmail.com

‘ಇಳೆಯ’ ಸ್ವರ್ಗವನ್ನು ನಾಶಮಾಡಿ, ಕಾಣದ ‘ಸ್ವರ್ಗ’ ಹುಡುಕ ಹೊರಟವರು ಕಣ್ಣ ಮುಂದಿರುವ ನೂರಾರು ಸ್ವರ್ಗದಂತಹ ಪ್ರಕೃತಿ ತಾಣವನ್ನು ನೋಡದೆ, ಕಣ್ಣಿಗೆ ಕಾಣದ ಸ್ವರ್ಗವನ್ನು ಹುಡುಕಲು ಹೊರಟವರಿಗೆ ಏನನ್ನಬೇಕು? ಆಕಾಶದಲ್ಲಿರುವ ಸ್ವರ್ಗದ ಅನುಭವಿಸಲು ಸೊಂಟದ ಕೆಳಗೆ ಬಾಂಬ್ ಕಟ್ಟಿಕೊಂಡು ತಮ್ಮನ್ನು ತಾವು ಸೋಟಿಸಿಕೊಂಡು ಅಸ್ತಿಪಂಜರದೊಂದಿಗೆ ಹೋಗುತ್ತೇವೆನ್ನುವವರಿಗೆ ಏನೆನ್ನಬೇಕೋ ನಾನರಿಯೆ.

ಮತ್ತೊಂದು ಧರ್ಮವನ್ನು ಹಿಂಸಿಸಿ ತಮ್ಮ ಧರ್ಮವನ್ನು ರಕ್ಷಣೆಮಾಡಿಕೊಳ್ಳಬೇಕೆಂದು ಯಾವ ಧರ್ಮ ಹೇಳುತ್ತದೆ? ಮುಸಲ್ಮಾನರೆಲ್ಲರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲರೂ ಮುಸಲ್ಮಾನರೆಂಬುದು ಜಗತ್ತಿಗೆ ಗೊತ್ತಿರುವ ಸತ್ಯ. ಜಿಹಾದ್ ಹೆಸರಿನಲ್ಲಿ ಇಳೆಯ ಮೇಲಿನ ಪ್ರಾಕೃತಿಕ ಸೌಂದರ್ಯವನ್ನೆಲ್ಲ ನಾಶಮಾಡುತ್ತ ಬಂದಿರುವ ಭಯೋತ್ಪಾದಕರು ಆಕಾಶದಲ್ಲಿನ ಸ್ವರ್ಗಕ್ಕಾಗಿ ವೀಸಾ ಅರ್ಜಿ ಸಲ್ಲಿಸಿರುತ್ತಾರೆ.

ಸ್ವರ್ಗದಂತಹ ಕಾಶ್ಮೀರವನ್ನು ನರಕಸದೃಶ ಮಾಡಿದ ಇಸ್ಲಾಮಿಕ್ ಭಯೋತ್ಪಾದಕರು ದೇವೇಂದ್ರನ ಸ್ವರ್ಗಕ್ಕೆ ಅರ್ಜಿ ಹಾಕುವುದು ಹಾಸ್ಯಾಸ್ಪದವಲ್ಲದೆ ಮತ್ತೇನು? ೨೦೦೧ರಲ್ಲಿ ಅಮೆರಿಕದ ಅವಳಿ ಕಟ್ಟಡಗಳಿಗೆ ವಿಮಾನ ನುಗ್ಗಿಸಿ ವಿಕೃತಿ ಮೆರೆದಿದ್ದ ಒಸಾಮಾ ಬಿನ್ ಲಾಡೆನ್, ತನ್ನ ಶಿಷ್ಯಂದಿರಿಗೆ ಸ್ವರ್ಗದ ಅಸೆ ತೋರಿಸಿದ್ದ. ಇಡೀ ಜಗತ್ತು ಮುಂದುವರಿಯು ತ್ತಿದ್ದರೆ ಇವರು ಮಾತ್ರ ಶಿಲಾಯು ಗದೆಡೆಗೆ ಹೊರಟಿದ್ದಾರೆ.

ಧರ್ಮದ ಹೆಸರಿನಲ್ಲಿ ‘ಕಾಫಿರ’ರನ್ನು ಕೊಲ್ಲುವ ಭಯೋತ್ಪಾದಕರಿಗೆ, ಕಾಫಿರರ ಹಣಮಾತ್ರ ಬೇಕು. ಸುದೀರ್ಘ ಇತಿಹಾಸವಿರುವ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಭಯೋತ್ಪಾದಕರ ದಾಳಿಗಳಿಗೆ ತತ್ತರಿಸಿ ಹೋಗಿವೆ. ಫ್ರಾನ್ಸ್ ದೇಶದದಂತಹ ದಾಳಿಗಳು, ಲಂಡನ್ ಬಸ್ಸಿನಲ್ಲಿ ಸ್ಫೋಟಿಸಿದ ಬಾಂಬುಗಳು, ಸ್ಪೇನ್‌ನಲ್ಲಿ ನೂರಾರು ಜನರ ಮೇಲೆ ಟ್ರಕ್ ದಾಳಿ ನಡೆಸಿದ್ದು, ಇವರ ಕೃತ್ಯಗಳಿಗೆ ಕೊನೆಯಿಲ್ಲದಂತಾಗಿದೆ. ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರಾಗಬೇಕೆಂಬ ಒಂದೇ ಒಂದು ಉದ್ದೇಶದಿಂದ ತಾವುಗಳು ಕಾಲಿಟ್ಟ
ದೇಶಗಳೆಲ್ಲವನ್ನೂ ನಾಶಮಾಡಿಕೊಂಡು ಬಂದಿರುವ ಈ ಭಯೋತ್ಪಾದಕರಿಗೆ ಕರುಣೆಯೆಂಬುದಿಲ್ಲ.

ಜಗತ್ತಿನ ಬಹುತೇಕ ದೇಶಗಳು ಕಳೆದ ಕೆಲವು ವರ್ಷಗಳಿಂದ ಎಚ್ಚೆತ್ತುಕೊಂಡು ತಮ್ಮಲ್ಲಿ ಸಂಭವಿಸುತ್ತಿದ್ದಂತಹ ಭಯೋತ್ಪಾದಕ ಕೃತ್ಯಗಳನ್ನು ಒಂದು ಮಟ್ಟಕ್ಕೆ ನಿಯಂತ್ರಣಕ್ಕೆ ತಂದಿವೆ. ನಿಯಂತ್ರಣಕ್ಕೆ ಬಂಡ ನಂತರ ಉಗ್ರರ ಗುರಿ ವೈಯಕ್ತಿಕ ವ್ಯಕ್ತಿಗಳ ಕೊಲೆ ಯೆಡೆಗೆ ತಿರುಗಿದೆ.

ಭಾರತದಲ್ಲಿ ಕಳೆದ 8 ವರ್ಷಗಳಿಂದ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಬಿದ್ದಿರುವುದರಿಂದ ವೈಯಕ್ತಿಕ ದಾಳಿಗೆ ಮುಂದಾ ಗಿರುವ ಭಯೋತ್ಪಾದಕರು ದೇಶದಾದ್ಯಂತ ಹಲವರನ್ನು ಧರ್ಮದ ಹೆಸರಿನಲ್ಲಿ ಕೊಲ್ಲುತ್ತಿದ್ದಾರೆ. ಸಂವಿಧಾನದ ಪರಿಚ್ಚೇದ ೩೭೦ರ ರದ್ದತಿಯ ನಂತರ ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಉಗ್ರರು ವೈಯಕ್ತಿಕ ದಾಳಿಗಳನ್ನು ನಡೆಸಿದರು. ಬಿಹಾರ ದಿಂದ ಬಂದಿದ್ದಂತಹ ‘ಪಾನಿ ಪುರಿ’ ಮಾರುತ್ತಿದ್ದವನನ್ನು ಕೊಂದರು, ಕಟ್ಟಡ ಕೆಲಸಗಾರನನ್ನು ಕೊಂದರು, ಶಿಕ್ಷಕಿಯನ್ನು ಕೊಂದರು, ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಂತಹ ಪಂಡಿತನನ್ನು ಕೊಂದರು, ಇಸ್ಲಾಮಿನ ಬಗ್ಗೆ ಮಾತನಾಡಿದ ಕಮಲೇಶ್ ತಿವಾರಿಯನ್ನು ಕೊಂದರು, ಕರ್ನಾಟಕದಲ್ಲಿ ರಾಜು, ರುದ್ರೇಶ್, ಪ್ರಶಾಂತ್ ಪೂಜಾರಿ, ಹರ್ಷನನ್ನು ಕೊಂದರು.

ಈಗ ನೂಪುರ್ ಶರ್ಮ ಬೆಂಬಲಿಸಿದ್ದಕ್ಕಾಗಿ ಉದಯಪುರದಲ್ಲಿ ಕನ್ಹಯ್ಯಲಾಲನನ್ನು ಭೀಕರವಾಗಿ ಕೊಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇಸ್ಲಾಮಿನ ಆಚರಣೆಗಳ ಬಗ್ಗೆ ಸಮಾಜದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಸೈದ್ಧಾಂತಿಕವಾಗಿ ವಾದ ಮಾಡ ಲಾಗದೇ ಸೋತು ಸುಣ್ಣವಾಗಿರುವ ಇವರು ಕೊಲೆಗಳನ್ನು ಮಾಡುತ್ತಿದ್ದಾರೆ. ಹಿಜಾಬಿನ ವಿಚಾರದಲ್ಲಿ ಚರ್ಚೆಗಳು ನಡೆಯುವ ಸಮಯದಲ್ಲಿ ಮಂಡ್ಯದ ವಿದ್ಯಾರ್ಥಿನಿಯೊಬ್ಬಳು ‘ಅಹು ಅಕ್ಬರ್’ಎಂದು ಕೂಗಿದ್ದನ್ನು ಜಗತ್ತಿನ ಎಲ್ಲ ಇಸ್ಲಾಮಿಕ್ ಉಗ್ರ ಸಂಘಟನೆಗಳು ಸ್ವಾಗತಿಸಿದ್ದವು.

‘ಅಲ್ ಖೈದಾ’ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಜವಾಹಿರಿ, ಆಕೆಯನ್ನು ಕೊಂಡಾಡುತ್ತಾನೆ. ಉಗ್ರ ಸಂಘಟನೆಗಳು ಪರೋಕ್ಷವಾಗಿ ಈ ರೀತಿಯ ಮೌಖಿಕ ಸಂದೇಶಗಳನ್ನು ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಆದೇಶಿಸು ತ್ತಿರುತ್ತವೆ. ಯಾರೋ ಒಂದಷ್ಟು ಮುಸಲ್ಮಾನರು ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನೇ ದೂರುವುದು ಸರಿಯಲ್ಲವೆನ್ನು
ವವರಿಗೆ ಕಾಶ್ಮೀರಿ ಪಂಡಿತರ ವಿಷಯದದಂತಹ ಅನಾಹುತಗಳ ಬಗ್ಗೆ ಹೇಳಲೇಬೇಕು. ಹತ್ತಾರು ವರ್ಷಗಳಿಂದ ಅಕ್ಕಪಕ್ಕದ
ಮನೆಯಲ್ಲಿ ಜೀವನ ಸಾಗಿಸಿಕೊಂಡು ಬಂದಿದ್ದಂತಹ ಪಕ್ಕದ ಮುಸ್ಲಿಂ ಕುಟುಂಬಗಳೇ ಪಂಡಿತರನ್ನು ಯಾಕೆ ರಕ್ಷಿಸಲಾಗಲಿಲ್ಲ? ಒಳ್ಳೆಯ ಮುಸಲ್ಮಾನರೇಕೆ ಬೀದಿಗಿಳಿದು ಉಗ್ರರ ವಿರುದ್ಧ ಪ್ರತಿಭಟಿಸಲಿಲ್ಲ? ನೂಪುರ್ ಶರ್ಮ ವಿಚಾರದಲ್ಲಿ ಶುಕ್ರವಾರದಂದು ಬೀದಿಗಿಳಿದ ಮುಸ್ಲಿಂ ಸಂಘಟನೆಗಳು ಕನ್ಹಯ್ಯ ಲಾಲ ಕೊಲೆಯ ವಿಚಾರದಲ್ಲಿ ಯಾಕೆ ಬೀದಿಗಿಳಿದು ಉಗ್ರರಿಗೆ ತಕ್ಕ ಶಿಕ್ಷೆಯಾಗ ಬೇಕೆಂದು ಪ್ರತಿಭಟಿಸುತ್ತಿಲ್ಲ? ಲೊಡ್ಡೆಗಳು ಪ್ರತಿಭಟನೆಯ ಸಲುವಾಗಿ ಕೂರುವ ಟೌನ್ ಹಾಲಿನ ಮೆಟ್ಟಿಲುಗಳು ಕೇವಲ ಮುಸ್ಲಿಮರ ಮೇಲಿನ ದಾಳಿಗಾಗಿ ಮೀಸಲಾಗಿವೆಯೇ? ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬೀದಿಗಿಳಿದಿದ್ದಂತಹ ಲೊಡ್ಡೆಗಳು ಕನ್ಹಯ್ಯ ಲಾಲ ಹತ್ಯೆಯನ್ನು ಖಂಡಿಸಿಲ್ಲ.

ಕನಿಷ್ಠಪಕ್ಷ ಒಂದು ಟ್ವೀಟ್ ಮಾಡಿ ಆತನ ಹತ್ಯೆಯನ್ನು ಖಂಡಿಸುವ ಕೆಲಸ ಮಾಡಿಲ್ಲ. ಇಂತಹ ಪರೋಕ್ಷ ಬೆಂಬಲವೇ ಉಗ್ರರಿಗೆ ಮತ್ತಷ್ಟು ಕತ್ತು ಸೀಳಲು ನೀಡುವ ಪ್ರಚೋದನೆ, ತಮ್ಮ ಸಾವಿಗೆ ತಯಾರಿಮಾಡಿಕೊಂಡೇ ಕತ್ತು ಸೀಳಿರುವ ಉಗ್ರ ಮನಸ್ಥಿತಿಯನ್ನು ಸರಿ ಮಾಡುವವರು ಯಾರು? 2014ರಲ್ಲಿ ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆದು ಬಂದಿರುವ ಉಗ್ರರಿವರು, ಪಾಕಿಸ್ತಾನವನ್ನು ಸ್ವರ್ಗವೆಂದಿದ್ದ ಕಾಂಗ್ರೆಸಿನ ರಮ್ಯಾ ಉರ್ಫ್ ದಿವ್ಯ ಸ್ಪಂದನ ಈಗ ಯಾವ ಗುಹೆಯಲ್ಲಿ ಅಡಗಿ ಕುಳಿತಿದ್ದಾರೆ? ಗೋವು ಕಳ್ಳರ ಹತ್ಯೆಯ ಬಗ್ಗೆ ಮಾತನಾಡಿದ್ದಂತಹ ತಮಿಳು ನಟಿ ಸಾಯಿ ಪಲ್ಲವಿಯ ತುಟಿಗಳು ಬಂದಾಗಿವೆ, ‘ಮೊದಲು ಮಾನವನಾಗು’ ಎಂದು ಟ್ವೀಟ್ ಮಾಡಿದ್ದ ಕನ್ನಡದ ಖಳನಟ ಡಾಲಿ ಧನಂಜಯನ ಬಾಯಿಗೆ ಪಾರ್ಶ್ವವಾಯು ಬಂದಿರಬಹುದೇ? ಸದಾ ಲೊಡ್ಡೆಗಳ ಜೊತೆ ಕಾಣಿಸಿಕೊಳ್ಳುವ ತಮಿಳುನಟ ಪ್ರಕಾಶ್ ರಾಜನು ಕುಂಭಕರ್ಣ ನಿದ್ದೆಯಿಂದ ಎದ್ದಂತಿಲ್ಲ.

ಇಸ್ಲಾಮಿಕ್ ಭಯೋತ್ಪಾದಕರು ನಡೆಸುವ ಕೃತ್ಯಗಳ ಬಗ್ಗೆ ಮುಸ್ಲಿಂ ನಾಯಕರನ್ನು ಕೇಳಿದಾಗ ಇಂತಹವರಿಗೆ ಕಠಿಣ ಶಿಕ್ಷೆ
ಯಾಗಬೇಕೆಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ತಾನು ಸಾಯಲು ಸಿದ್ಧನಾಗಿ ಬರುವ ಭಯೋತ್ಪಾದಕರಿಗೆ ಯಾವ ರೀತಿಯ ಕಠಿಣ ಶಿಕ್ಷೆ ನೀಡಬೇಕು? ಸಮಾಜದಲ್ಲಿನ ಮುಸ್ಲಿಂ ನಾಯಕರು ಎಚ್ಚೆತ್ತುಕೊಳ್ಳಬೇಕಾದ ಕಾಲವಿದು. ಬಹಿರಂಗವಾಗಿ ‘ಫತ್ವಾ’ ಗಳನ್ನು ಹೊರಡಿಸುವ ಮೂಲಕ ಖಂಡಿಸಬೇಕು.

ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಕೊಡುವಾಗ ಇಸ್ಲಾಂ ಧರ್ಮದಲ್ಲಿನ ಸರಿ ತಪ್ಪುಗಳ ಕಲ್ಪನೆಯನ್ನು ಮುಸ್ಲಿಂ ಯುವಕರಿಗೆ ತಿಳಿ ಹೇಳಬೇಕು. ಕನ್ಹಯ್ಯಲಾಲನನ್ನು ಕೊಂದಂತಹ ಜಿಹಾದಿಗಳು, ಉದಯಪುರದ ಮಸೀದಿಯಲ್ಲಿ ಕೆಲಸ ಮಾಡಿಕೊಂಡಿದ್ದವರು, ಅವರಿಗೆ ಪ್ರೇರಣೆ ಕೊಟ್ಟವರು ಯಾರು? ಮೌಲ್ವಿಗಳು ಇಂತಹ ಅಡ್ಡದಾರಿ ಹಿಡಿದ ಯುವಕರನ್ನು ಗುರ್ತಿಸಿ ಸರಿದಾರಿಗೆ ತರಬೇಕು. ಇಲ್ಲವಾದರೆ ಸಮಾಜ ಮೌಲ್ವಿಗಳತ್ತ ತಮ್ಮ ಬೆರಳನ್ನು ತೋರಿಸುತ್ತದೆ.

ಕುರಾನ್ ಅಸಹಿಷ್ಣುತೆಯ ಪಾಠಮಾಡುತ್ತದೆಯೆಂದು ತಿಪ್ಪೆ ಸಾರಿಸುವ ಹೇಳಿಕೆಯನ್ನು ನೀಡಬಾರದು. ಧರ್ಮಗ್ರಂಥಗಳಲ್ಲಿನ ನಿಜ ವ್ಯಾಖ್ಯಾನಗಳ ಬಗ್ಗೆ ಮುಸ್ಲಿಂ ಯುವಕರಿಗೆ ತಿಳಿಹೇಳಬೇಕು. ಸಮಾಜದಲ್ಲಿ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ಮುಸ್ಲಿಮರ
ತಲೆ ಹಾಳು ಮಾಡುವವರ ಸಂಗದಿಂದ ದೂರವಿರುವಂತೆ ಬಹಿರಂಗವಾಗಿ ಹೇಳಬೇಕು. ವಿಪರ್ಯಾಸವೆಂದರೆ ೧೯೪೭ರ ಅಖಂಡ ಭಾರತ ವಿಭಜನೆಯ ನಂತರ ಭಾರತದಲ್ಲಿಯೇ ಉಳಿದುಕೊಂಡಂತಹ ಹಲವು ಮುಸಲ್ಮಾನರು ಮೊದಲು ‘ಇಸ್ಲಾಂ’, ನಂತರ ‘ಸಂವಿಧಾನ’ ವೆನ್ನುತ್ತಾರೆ, ಇಂತಹ ಮನಃ ಸ್ಥಿತಿ ತೊಲಗುವವರೆಗೂ ಇಸ್ಲಾಮಿಕ್ ಉಗ್ರರು ದೇಶವಿರೋಧಿ ಕೃತ್ಯಗಳನ್ನು ನಡೆಸು ತ್ತಲೇ ಇರುತ್ತಾರೆ.

ಮುಸ್ಲಿಂ ಸಮುದಾಯದ ದೊಡ್ಡ ದೊಡ್ಡ ನಾಯಕರು ಸಹ ಸಂವಿಧಾನಕ್ಕೆ ಮೊದಲ ಆದ್ಯತೆ ನೀಡುವ ಕಾರಣ ಉಗ್ರರಿಗೆ ಗಂಟೆ ಕಟ್ಟುವವರು ಯಾರು? ದಾಂದಲೆಗಳನ್ನು ನಡೆಸುವವರ ಪರವಾಗಿ ಕಾನೂನಾತ್ಮಕವಾಗಿ ಬೆಂಗಾವಲಾಗಿ ನಿಲ್ಲಲು ಮುಸ್ಲಿಂ ಪಂಗಡದ ಮತ್ತೊಂದು ಗುಂಪು ಸದಾ ತಯಾರಿರುತ್ತದೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ನಡೆದ ಗಲಭೆಕೋರರ ಪರವಾಗಿ ವಕಾಲತ್ತು ವಹಿಸಲು ೧೦ಮಂದಿಯ ತಂಡ ತಯಾರಾಗಿತ್ತು.

ಜೈಲಿನಲ್ಲಿರುವವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಲು ಹಣ ಸಹಾಯ ಮಾಡುವವರ ಮತ್ತೊಂದು ತಂಡ ತಯಾ ರಾಗಿತ್ತು. ರಾಜಾರೋಷವಾಗಿ ಮಾಧ್ಯಮಗಳ ಮುಂದೆ ನಿಂತು ಹೇಳಿಕೆ ಕೊಡುತ್ತಿದ್ದರು. ಹಿಜಾಬಿನ ವಿಷಯ ಸುಪ್ರೀಂ
ಕೋರ್ಟ್ ಮೆಟ್ಟಿಲೇರಲು ಬೇಕಾದಂತಹ ಹಣ ಸಹಾಯ ಮಾಡಿದವರು ಯಾರು? ಪದವಿ ಪೂರ್ವ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸರ್ವೋಚ್ಚ ನ್ಯಾಯಾಲಯದ ವಕೀಲರ ಶುಲ್ಕ ಪಾವತಿಸಲು ಲಕ್ಷಗಟ್ಟಲೆ ಹಣ ಎಲ್ಲಿಂದ ಬರಬೇಕು? ಪಾರ್ಲಿಮೆಂಟ್ ಮೇಲಿನ ದಾಳಿಯ ಆರೋಪಿ ಅಫ್ಜಲ್ ಗುರುವನ್ನು ನೇಣು ಕುಣಿಕೆಯಿಂದ ತಪ್ಪಿಸಲು ದೊಡ್ಡ ದೊಡ್ಡ ವಕೀಲರು ಪ್ರಯತ್ನಿಸಿದ್ದರು.

ಮುಂಬೈ ಭಯೋತ್ಪಾದಕ ಕೃತ್ಯದ ಹಿಂದಿದ್ದ ಅಜ್ಮಲ್ ಕಸಬನನ್ನು ನೇಣು ಕುಣಿಕೆಯಿಂದ ಪಾರುಮಾಡಲು ಯತ್ನಿಸಿದ ವಕೀಲರ ತಂಡವೊಂದಿತ್ತು. ದೆಹಲಿಯ ನಿರ್ಭಯಾ ಪ್ರಕರಣದ ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದ ವಕೀಲರುಗಳಿದ್ದರು. ಪುರಾವೆಗಳ ಕೊರತೆಗಳನ್ನೇ ಅಸ್ತ್ರ ಮಾಡಿಕೊಂಡು ನ್ಯಾಯಾಲಯದಲ್ಲಿ ವಾದಮಾಡುವವರಿಗೆ ಸಮಾಜದ ಬಗ್ಗೆ ಕನಿಷ್ಠ ಕಾಳಜಿ ಯಿಲ್ಲದಿರುವುದು ಅಪಾಯಕಾರಿ ಬೆಳವಣಿಗೆ. ಇಂತಹವರು ಸಿಗುತ್ತಾರೆಂಬ ಆತ್ಮವಿಶ್ವಾಸ ಉಗ್ರರಿಗೆ ಮತ್ತಷ್ಟು ಕೃತ್ಯ ಗಳನ್ನು ಮಾಡಲು ಪ್ರೇರಣೆಯಾಗುತ್ತದೆ.

ಹೆಣವೊಂದು ಕಂಡೊಡನೆ ರಣಹದ್ದು ಹಾರಿ ಬರುವಂತೆ ಉಗ್ರರ ಪರವಾಗಿ ಸದಾ ನಿಲ್ಲುವವರು ಮಾನವ ಹಕ್ಕುಗಳ ಹೋರಾಟ ಗಾರರು. ಉಗ್ರನಿಂದ ಕ್ರೂರವಾಗಿ ಹತ್ಯೆಯಾದಂತಹ ಕನ್ಹಯ್ಯಲಾಲನ ಜೀವಿಸುವ ಹಕ್ಕು ಹೋರಾಟಗಾರರಿಗೆ ಕಾಣಿಸುವುದಿಲ್ಲ. ಬದಲಾಗಿ ಉಗ್ರರಿಗೆ ಗಲ್ಲು ಶಿಕ್ಷೆಯಾದಾಗ ಉಗ್ರರ ಜೀವಿಸುವ ಹಕ್ಕು ಎದ್ದು ಕಾಣುತ್ತದೆ. ಮಾನವ ಹಕ್ಕುಗಳ ಹೋರಾಟಗಾರರ ನಿಲುವು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತ. ಬಹಿರಂಗವಾಗಿ ತಮ್ಮ ನಿಲುವಿನಲ್ಲಿ ಬೆತ್ತಲಾಗುತ್ತಾ ಜನರಿಂದ ಛೀಮಾರಿ ಹಾಕಿಸಿಕೊಂಡ ನಂತರವೂ ಸಹ ಪುನಃ ಅದೇ ಕೆಲಸವನ್ನು ಈ ಹೋರಾಟಗಾರರರು ಮಾಡುತ್ತಿರುತ್ತಾರೆ.

ಮತಾಂಧತೆಯ ಅಮಲಿನಲ್ಲಿ ತೇಲುತ್ತಿರುವ ಉಗ್ರರ ಮನಃಸ್ಥಿತಿಯನ್ನು ಬದಲಾಯಿಸುವ ಕೆಲಸವಾಗಬೇಕಿದೆ. ಸಾಯಲು ತಯಾ ರಿರುವವನಿಗೆ ಕಠಿಣ ಶಿಕ್ಷೆ ನೀಡುವುದರಿಂದ ಯಾವ ಪ್ರಯೋಜನವಾಗುವುದಿಲ್ಲ. ಇತಿಹಾಸದ ಪುಠಗಳಲ್ಲಿ ಔರಂಗಜೇಬ್ ನಡೆಸಿದ ಕೃತ್ಯದ ಬಗ್ಗೆ ಕೇಳಿದ್ದೆವು. ಟಿಪ್ಪು ಸುಲ್ತಾನ ನಡೆಸಿದ್ದಂತಹ ನರಮೇಧಗಳ ಬಗ್ಗೆ ಕೇಳಿದ್ದೆವು. ಆದರ ನೈಜತೆಯನ್ನು ಕನ್ಹಯ್ಯಲಾಲ ಹತ್ಯೆಯ ಮೂಲಕ ಕಣ್ಣಾರೆ ಕಂಡಿದ್ದೇವೆ. ಇವರ ಮನಃಸ್ಥಿತಿ ಶತಮಾನಗಳು ಕಳೆದರೂ ಬದಲಾಗಿಲ್ಲ.

ಬದಲಾವಣೆ ತನ್ನೊಳಗೆ ಆಗಬೇಕು. ಮುಸ್ಲಿಂ ಸಮುದಾಯದ ನಾಯಕರು ಕೃತ್ಯಗಳನ್ನು ಖಂಡಿಸುವುದರ ಜತೆಗೆ ತಮ್ಮ ಸಮುದಾ ಯದ ಯುವಕರು ಅಡ್ಡದಾರಿ ಹಿಡಿಯದಂತೆ ಒಪ್ಪು ತಪ್ಪುಗಳನ್ನು ತಿದ್ದಿ ಹೇಳಬೇಕು. ಮತ್ತೊಂದೆಡೆ ಹಿಂದುಗಳಿಗೆ ಸಮಸ್ಯೆ ತಮ್ಮ ಮನೆಯ ಅಂಗಳಕ್ಕೆ ಬರುವವರೆಗೂ ದೊಡ್ದದಾಗಿ ಕಾಣಿಸುವುದಿಲ್ಲ,ಇತರರ ಸಮಸ್ಯೆ ತನ್ನದಲ್ಲವೆಂಬ ಮನಃಸ್ಥಿತಿ ಯಿಂದ ಹಿಂದೂಗಳು ಹೊರಬರಲಿಲ್ಲವೆಂದರೆ ಮುಂದಿನ ದಿನಗಳು ಬಹಳ ಕಷ್ಟದಾಯಕವಾಗಿರುತ್ತವೆ.